Oppanna.com

ಮೂಲವ ಕಟ್ಟಿದ ಮೂಲಾಪುರ – ಪರಮಾನುಗ್ರಹದ ಪರಮೇಶ್ವರ.. !

ಬರದೋರು :   ಒಪ್ಪಣ್ಣ    on   25/03/2016    3 ಒಪ್ಪಂಗೊ

ಶಿವರಾತ್ರಿ ಕಳುದ ಮತ್ತೆ ಸೆಕೆಗಾಲ ಸುರು ಆತು ಹೇದೊಂದು ಮಾತು ಇದ್ದು.
ಅಡಕ್ಕೆ ಗೆಡುಗೊಕ್ಕೆ ನೀರು ಬಿಡ್ತರ ಎಡಕ್ಕಿಲಿ ಬೇರೆಂತೂ ಸಂಗತಿಗೊ ಮಾಡಿಗೊಂಬಲೆ ಎಡಿತ್ತಿಲ್ಲೆ ಈಗೀಗ.
ಅದರೆಡಕ್ಕಿಲಿಯೂ, ಬೈಲಿಲಿಡೀ ಒಂದೇ ಶುದ್ದಿ – ಮೂಳೂರಿಂಗೆ ಹೋದಿರೋ? ಹೇದು.
~
ಮೂಳೂರು.
ಓಳು ಈ ಊರು? – ಕೇಳುಗು ಬಟ್ಯ. ಅದಕ್ಕೆ ಹೆಸರು ಕೇಳಿಯೇ ಗೊಂತಿರ.
ಅಪ್ಪು, ಮೊನ್ನೆ ಮೊನ್ನೆ ವರೆಗೂ ಗುರ್ತ ಇಲ್ಲದ್ದ ಊರು, ಇಂದು ಒಂದರಿಯೇ ಪ್ರಸಿದ್ಧ ಆತು ಅಪ್ಪೋ.

ಇಂದಲ್ಲ, ನಾಲ್ಕೊರಿಶ ಮದಲೇ ಆ ಊರಿನ ಶುದ್ದಿ ಕೇಳಿದ್ದತ್ತು. ಈಗ ಪುನಾ ಕೇಳಿತ್ತು!
ಎಂತ ಸಂಗತಿ – ಹೇದರೆ, ಅದೇ ದೊಡ್ಡ ಶುದ್ದಿ.
~

ಬಂಟ್ವಾಳ ತಾಲೂಕಿನ ಬಾಳೆಪುಣಿ ಹೇದರೆ ಒಂದು ಗ್ರಾಮ. ಆ ಗ್ರಾಮಲ್ಲಿ ಹಲವೂ ಊರುಗೊ ಇದ್ದು, ಅದರ್ಲಿ ಮೂಳೂರುದೇ ಒಂದು.
ಅಲ್ಲಿ ಒಂದು ಶಿವ ದೇವಸ್ಥಾನ ಇದ್ದತ್ತು – ಪರಮೇಶ್ವರ ನ ಸನ್ನಿಧಿ, ಇತಿಹಾಸದ ಕಾಲಂದಲೇ.
ಕೋಳ್ಯೂರು ಸೀಮೆಯ ಆ ಭಾಗವ ಕಿಲ್ಲೆ ವಂಶ ಆಳಿಗೊಂಡಿದ್ದ ಕಾಲಲ್ಲಿ – ಆ ದೇವಸ್ಥಾನ ಇದ್ದು ಹೇಳ್ತ ಪ್ರತೀತಿ ಕಂಡು ಬಯಿಂದಡ.
ಅಲ್ಲಿಂದ ಮತ್ತೆ ಜೈನರ ಕಾಲಾವಧಿಯ ವರೆಗೂ ಆ ಕ್ಷೇತ್ರ ನೆಡಕ್ಕೊಂಡು ಬಯಿಂದು.
ಮತ್ತೆ, ಕ್ರಮೇಣ ಕಾರಣಾಂತರಲ್ಲಿ ಜೀರ್ಣಾವಸ್ಥೆಗೆ ಹೋತು ಆ ದೇವಸ್ಥಾನ.
ಮೂಳೂರು – ಹಾಳೂರು ಆಗಿದ್ದತ್ತು.
~
ಮೂಳೂರು ಗಣಪತಿ ಭಟ್ – ಹೇಳುವ ಮಹನೀಯರು ಸ್ವಾತಂತ್ರ ಬಂದ ಸಮಯಲ್ಲಿ – ೧೯೫೩ರ ಆಸುಪಾಸಿಲಿ ಒಂದರಿ ಜೀರ್ಣೋದ್ಧಾರ ಮಾಡಿತ್ತಿದ್ದವಡ.
ಸ್ವರೂಪ ಇಲ್ಲದ್ದ ಆಲಯಕ್ಕೆ ದೇವಾಲಯದ ಸ್ವರೂಪ ಕೊಟ್ಟು, ಪರಮೇಶ್ವರಂಗೆ ನೆಲೆ ಕೊಟ್ಟು, ಅವರ ಒಟ್ಟಿಂಗೇ ಮಹಾಗಣಪತಿ, ವೈದ್ಯನಾಥ – ಇತ್ಯಾದಿ ಗುಡಿಗಳ ಗಟ್ಟಿ ದೇವಕಾರ್ಯ ನೆಡೆಶಿಕೊಟ್ಟಿದವಾಡ.
ಅಂಬಗಂದ ಮತ್ತೆ ಮೂಳೂರು ಮನೆತನ – ಊರ ನೆರೆಕರೆಯೋರ ಸಹಕಾರಲ್ಲಿ ನೆಡೆಶಿಗೊಂಡು ಬಂದುಗೊಂಡು ಇದ್ದತ್ತು.

ಇದೊಂದು ಸಮಾಜದ ಸೊತ್ತು, ಹಾಂಗಾಗಿ ಮನೆಯೋರೇ ನೋಡಿಗೊಂಡು ಬಂದರೆ ಆತಿಲ್ಲೆ – ಹೇದು ಆ ಕುಟುಂಬಕ್ಕೆ ಕಂಡು, ಸಮಾಜಕ್ಕೆ ಸಿಕ್ಕಲಿ ಹೇಳ್ತ ಉದ್ದೇಶಂದ ಈ ದೇವಾಲಯವ ೨೦೦೮ರಲ್ಲಿ ನಮ್ಮ ಗುರುಗಳಿಂಗೆ ಒಪ್ಪುಸಿದವಾಡ. ಆ ಪ್ರಕಾರ ಆ ದೇವಸ್ಥಾನ ಮಠದ ಆಡಳ್ತೆಗೆ ಬಂತು.

ಆಡಳ್ತೆಗೆ ಬಂತು ಹೇದ ಕೂಡ್ಳೇ – ಒಳ್ಳೆ ಚೊರಿ ಹೇದು ಗ್ರೇಶುಗು ಗೋಕರ್ಣ ಮನಸ್ಕರು.
ಆದರೆ ಇಲ್ಲಿ ಹಾಂಗಿಲ್ಲೆ, ಊರಿನ ಒಳ, ಒಂದು ಗ್ರಾಮದ ಹಳ್ಳಿಯ ಒಳದಿಕೆ, ತೋಟದ ನೆಡುಕೆ ಇರ್ತ ಆ ದೇವಸ್ಥಾನಲ್ಲಿ ವ್ಯವಸ್ಥೆ ಆಯೇಕಾರೆ ಮಹಾನ್ ಏರ್ಪಾಡು ಇದ್ದು. ಆ ದಿನಂದ ಸುರು ಆತು ಬದಲಾವಣೆ ದೇವಸ್ಥಾನಲ್ಲಿ.
~
ಪೂಚಕ್ಕಾಡು ಜೋಯಿಶರು ಬಂದು ಅಷ್ಟಮಂಗಳ ಮಡುಗಿದವು. ಸ್ಥಳ ಪ್ರಶ್ನೆಲಿ ಹಲವೂ ವಿಚಾರಂಗೊ ಕಂಡು ಬಂತು.
ಆ ಪ್ರಕಾರ ಒಂದೊಂದೇ ಕೆಲಸಂಗೊ, ಕಾರ್ಯಂಗೊ ನೆಡಕ್ಕೊಂಡು ಬಂತು.
ಹೊಸ ದೇವಾಲಯ ಕಟ್ಟುವ ಯೋಗ ಆ ಶಿವಂಗೆ ಇದ್ದು ಹೇಳಿಯೂ ಕಂಡು ಬಂತು. ಅವಂಗೆ ಹೊಸ ದೇವಸ್ಥಾನ ಆಯೆಕ್ಕು ಹೇಳಿ ಕಂಡ್ರೆ – ನಾವೆಲ್ಲ ನೆಪ ಮಾಂತ್ರ.
~

ಅಂತೂ – ಕಾರ್ಯಾರಂಭ ಆತು.
ಬಾಲಾಲಯ ಕಟ್ಟಿ ದೇವರ ತತ್ಕಾಲದ ಏರ್ಪಾಡು ಆತು.
ಹೊಸ ದೇವಸ್ಥಾನ ಕಟ್ಟುವ ಲೆಕ್ಕಲ್ಲಿ ಹಳೆ ದೇವಸ್ಥಾನ ಗರ್ಪಿ ಆತು.
ಹೊಸತ್ತರ ಕಟ್ಟುವ ಆರಂಭವೂ ಆತು.
ಒಂದು ಹೊಡೆಲಿ ಕಾಷ್ಟ ಶಿಲ್ಪಿಗೊ, ಒಂದು ಹೊಡೆಲಿ ಕಲ್ಲಿನ ಶಿಲ್ಪಿಗೊ, ಒಂದು ಹೊಟೆಲಿ ಮಣ್ಣು ಹೊರುವವು, ಮತ್ತೊಂದು ದಿಕ್ಕೆ ಸಾರಣೆಯೋರು, ಇನ್ನೊಂದು ಹೊಡೆಲಿ ಆಚಾರಿಗೊ – ಎಲ್ಲ ಕೆಲಸಂಗೊ ಮೇಗಂದ ಮೇಗೆ ಸುರು ಆತು.
ನೋಡಿಗೊಂಡು ಇದ್ದ ಹಾಂಗೇ – ಅಡಿಪಾಯ ಬಿದ್ದತ್ತು, ಮೇಲೆ ಎದ್ದತ್ತು, ಗರ್ಭ ಗುಡಿ ಆತು, ಗೆಣವತಿ ಗುಡಿ ಆತು, ನಂದಿ ಗುಡಿ ಆತು, ನಾಗಬಿಂಬ, ಮಹಾಬಲಿಕಲ್ಲು, ಅಂಗಣದ ಗೋಡೆ, ಅಗ್ರಸಾಲೆ, ಮಾಡು, ಗೋಪುರ, ಭೋಜನ ಶಾಲೆ, ಸ್ನಾನ ಗೃಹ, ಅರ್ಚಕರ ಮನೆ, ವಸಂತ ಕಟ್ಟೆ, ಇನ್ನೂ ಏನೇನೋ! – ಎಲ್ಲವೂ ಬುಡಂದ ಆಯೆಕ್ಕಿದಾ.

ಆತು, ಎಲ್ಲವೂ ಆತು. ಹೇಂಗೆ ನೆಡೆದತ್ತು ಹೇದು ಅರಡಿಯ – ಹೇದು ಕೈರಂಗಳ ಅಣ್ಣ ಹೇಳಿದ°.
~
ಇದೆಲ್ಲ ನೆಡವಲೆ ಮುಖ್ಯ ಕಾರಣ – ಶ್ರಮದಾನ – ಹೇದು ಆ ಊರಿನವರ ನಂಬಿಕೆ.
ಊರು ಪರವೂರ ಸಮಸ್ತರು ಹೊತ್ತೋಪಗ ಅವರವರ ಕೆಲಸ ಮುಗುಶಿ ಬಂದು – ದೇವಸ್ಥಾನದ ಆವರಣಲ್ಲಿ ಸೇರಿಗೊಂಡು ಕೆಲಸ ಸುರು ಮಾಡಿದ್ವಡ.
ಒಂದೊಂದೇ ವಲಯ, ಒಂದೊಂದೇ ಘಟಕ ಹೇದು ಪ್ರತಿ ಮನೆಂದಲೂ ಬಂದು, ದೇವಸ್ಥಾನವ ಒಪ್ಪ ಮಾಡ್ತ ಕಾರ್ಯ ಮಾಡಿದವಾಡ.
ಬಂದೋರಿಂಗೆ ಹೊಟ್ಟೆ ತುಂಬ ಊಟದ ಏರ್ಪಾಡೀನ ನೋಡಿಗೊಂಡವಾಡ.
ಒಂದೆರಡೋ – ಅಲ್ಲ!
ಬರೋಬ್ಬರಿ, ನೂರು-ನೂರೈದು ದಿನ ಶ್ರಮದಾನ. ಒಟ್ಟು ಐದು-ಐದೂವರೆ ಸಾವಿರ ಕೆಲಸ!

ನಿಂಗೊ ಲೆಕ್ಕ ಹಾಕಿ – ಒಂದು ಜೆನರ ಕೆಲಸಕ್ಕೆ ಇಂತಿಷ್ಟು ಹೇದು ಆರಾರು ಕ್ರಯ ಹಿಡುದರೆ, ಒಟ್ಟು ಏವ ಲಕ್ಷಕ್ಕೆ ಎತ್ತುಗು!?
ಅಲ್ಲ, ಇದಕ್ಕೆ ಕೋಟಿ ಲೆಕ್ಕ ಹಿಡುದರೂ ಕಡಮ್ಮೆಯೇ – ಹೇದು ಕೈರಂಗಳಣ್ಣ ಹೇಳುಲಿದ್ದು.
ಆ ಒಂದು ಒಗ್ಗಟ್ಟು, ಆ ಒಂದು ಪ್ರೇರಣ, ಆ ಒಂದು ಒರ್ಮೈಕೆ – ಎಲ್ಲವುದೇ ಅಲ್ಲಿ ಇದ್ದತ್ತು.

ಪ್ರತಿಯೊಬ್ಬರುದೇ ಅದು ಮನೆದೇವರು, ತಮ್ಮದೇ ದೇವಸ್ಥಾನ – ಹೇಳ್ತ ನಂಬಿಕೆಲಿ ಶ್ರಮವಹಿಸಿ ಕೆಲಸ ಮಾಡಿದ್ದವು.
ಹಾಂಗಾಗಿ, ಗುರುಗೊ ಗ್ರೇಶಿದಂತೆ ಮಾರ್ಚ್ ಕೊನೆಯ ವಾರ ೨೩ ರಿಂದ ೨೫ರ ವರೆಗೆ ಬ್ರಹ್ಮಕಲಶ – ಹೇದು ನಿಗಂಟು ಮಾಡಿದವು.
ಹಾಂಗೆ ನೆಡದ್ದುದೇ.

ಮೊನ್ನೆಂದ – ದೇವಸ್ಥಾನಲ್ಲಿ ಬ್ರಹ್ಮಕಲಶ ನೆಡೆತ್ತಾ ಇದ್ದು.
ನೀಲೇಶ್ವರ ತಂತ್ರಿಗಳ ನೇತೃತ್ವಲ್ಲಿ ಬ್ರಹ್ಮಕಲಶ.
ಇಷ್ಟು ದಿನ ಸೇರಿ ಶ್ರಮದಾನ ನೆಡೆಶಿದೋರಿಂಗೆ – ಸಂತೃಪ್ತಿ ಕೊಡುವ ದಿನ.
ಕೆಲಸದ ಹಂತಲ್ಲಿ ದಿನಾ ನೋಡಿಗೊಂಡು ಇದ್ದವಕ್ಕೆ – ಪೂರ್ಣ ಅಲಂಕೃತವಾಗಿ ಆ ದೇವಸ್ಥಾನವ ನೋಡುವ ದಿನ.
ಅದಕ್ಕಾಗಿ ಎಷ್ಟೋ ಹಗಲಿರುಳು ಶ್ರಮವಹಿಸಿ ದುಡುದವಕ್ಕೆ – ಪರಮೇಶ್ವರ ದೇವರ ಕಾಂಬ ದಿನ.
~

ಪರಮೇಶ್ವರಂಗೆ ಹೊಸ ಮನೆ ತಯಾರಾತು.
ಈ ತಯಾರಿಗೆ – ಅರ್ಧ ಆ ಪರಮೇಶ್ವರನೇ ಕಾರಣ. ಇನ್ನರ್ಧ?
ನಮ್ಮ ಗುರುಗಳೇ!
ಸಾವಿರಾರು ಜೆನಂಗೊ ಆ ಕೆಲಸಕ್ಕೆ ಸೇರಿದವು.
ಅಷ್ಟೂ ಜೆನ ಬಂದು ಅಷ್ಟು ಚೆಂದಕೆ ಸೇರಿ ಕೆಲಸ ನೆಡೆಶಲೆ ಮೂಲ ಪ್ರೇರೇಪಣೆ – ನಮ್ಮ ಗುರುಗೊ ಕೊಟ್ಟ ಒಂದು ಕರೆ!
ಬನ್ನಿ, ಈ ದೇವಸ್ಥಾನವ ಉದ್ಧರಿಸುವ° – ಹೇಳುವ ಒಂದು ಮಾತು ಎಲ್ಲೋರಿಂಗೂ ಈಶ್ವರ ಶಕ್ತಿ ಪ್ರಚೋದಿಸಿ, ಈ ಹಂತಕ್ಕೆ ತಂದು ನಿಲ್ಲುಸಿತ್ತು.

~
ಮೂಳೂರು ದೇವಸ್ಥಾನಕ್ಕೆ ಬನ್ನಿ.
ಪರಮೇಶ್ವರನ ಅನುಗ್ರಹ ತೆಕ್ಕೊಳಿ.
ಒಂದು ಸಂಘಟನೆ ಮನಸ್ಸು ಮಾಡಿರೆ ಎಷ್ಟು ವೇಗಲ್ಲಿ, ಅಷ್ಟೇ ಚೆಂದಲ್ಲಿ ಹೇಂಗೆ ಒಂದು ಕೆಲಸವ ಕೊಡಿ ಮುಟ್ಟುಸುಲೆ ಎಡಿಗು – ಹೇಳ್ತ ಸಂಗತಿಯ ಪ್ರತ್ಯಕ್ಷ ಕಾಂಬಲೆ ಈ ದೇವಸ್ಥಾನ ಉದಾಹರಣೆಯಾಗಿ ಇರಲಿ.

ಎಲ್ಲೋರುದೇ ಬನ್ನಿ, ಮೂಲಾಪುರ ಬ್ರಹ್ಮಕಲಶಕ್ಕೆ.
~

ಒಂದೊಪ್ಪ: ಮೂಳೂರು ಮೂಲಾಪುರ ಆಯೆಕ್ಕಾರೆ ಪರಮೇಶ್ವರ ಮೂಲಲ್ಲಿ ಕೂದು ಇರೆಕ್ಕು!

3 thoughts on “ಮೂಲವ ಕಟ್ಟಿದ ಮೂಲಾಪುರ – ಪರಮಾನುಗ್ರಹದ ಪರಮೇಶ್ವರ.. !

  1. ಒಳ್ಳೆ ಶುದ್ದಿ. ಓದಿ ಕೊಶಿಯಾತು.

  2. ನಮ್ಮೊಳ ಒರ್ಮೆ ಇದ್ದರೆ ಏವ ಕೆಲಸ ಅಗದ್ದದು ಹೇಳಿ .ಇದರ ಮೂಲಕ್ಕೆ ಮನಸ್ಸೇ ಬೇಕಾದ್ದು. ಅದಕ್ಕೇ ಹೇಳ್ತವಲ್ಲೊ ‘ಒಗ್ಗಟ್ಟಿನಲ್ಲಿ ಬಲವಿದೆ’ ಹೇಳಿ . ಒಳ್ಳೆಸುದ್ದಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×