ಜೀವನಕ್ಕೊಂದು ನಿತ್ಯಪಾಠ, ವರ್ಷಕ್ಕೊಂದು ಹೊಸ ಪಾಠ..!

May 5, 2017 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಧರ್ಮಸಂಸ್ಥಾಪನೆಗೆ ಲೋಕ ಸುತ್ತಿ, ಊರೂರಿಲಿ ಧರ್ಮಪ್ರಸಾರ ಮಾಡಿ, ಸನಾತನತೆಂದ ವಿಮುಖರಾಗಿದ್ದ ಅಸಂಖ್ಯ ಜನರ ಪುನಃ ಭಾರತರನ್ನಾಗುಸಿದ ಮಹಾ ದಾರ್ಶನಿಕರು ನಮ್ಮ ಆದಿಗುರು ಶಂಕರಾಚಾರ್ಯರು.
ಆದಿ ಶಂಕರಾಚಾರ್ಯರ ಜಯಂತಿ ಆಚರಣೆ ಮೊನ್ನೆ ಕಳಾತು.  ಇಡೀ ಊರಿಲೇ ಗವುಜಿ ಇತ್ತು, ಇನ್ನು ನಮ್ಮ ಮಠಲ್ಲಿ ಗವುಜಿ ಇರದ್ದೇ ಇಕ್ಕೋ! ಇದ್ದತ್ತು.

~

ಪ್ರತಿ ಒರಿಶ ಶಂಕರ ಜಯಂತಿಗೆ ಭಾಂಕುಳಿಲಿಪ್ಪ ನಮ್ಮ ಮಠಲ್ಲಿ ಆಚರಣೆ ಇರ್ಸು ಗೊಂತಿದ್ದನ್ನೇ. ಪ್ರತಿ ಒರಿಶದ ಹಾಂಗೆ ಈ ಒರಿಶವೂ ಇದ್ದತ್ತು. ತುಂಬ ಗವುಜಿಲಿ ಇದ್ದತ್ತು.
ಶಂಕರಾಚಾರ್ಯರ ಬಗ್ಗೆ, ರಾಮಚಂದ್ರಾಪುರ ಮಠದ ಉಗಮದ ಬಗ್ಗೆ, ನಮ್ಮ ಮಠದ ಅದ್ವೈತ ತತ್ವದ ಬಗ್ಗೆ ಅಲ್ಲಿ ನೆಂಪುಮಾಡಿಗೊಳ್ತು. ಇವೆಲ್ಲದರ ಒಡಗೂಡುಸಿ ಗುರುಗೊ ಚೆಂದದ ಆಶೀರ್ವಚನವನ್ನೂ ಮಾಡ್ತವು.
ಆ ದಿನ ಅಖೇರಿಗೆ, ಒಂದು ವಿಶೇಷದ ಗುರಿಯನ್ನೂ ಕೊಡ್ತವು.
ಅದೆಂತರ? ಅದೇ ಪಠಣದ ಗುರಿ.
~
ಅಪ್ಪು, ಈಗ ಕೆಲವೊರಿಶಂದ ನಮ್ಮ ಸಮಾಜ ನಿತ್ಯಪಾಠ ಮಾಡ್ತು ನಿಂಗೊಗೆ ಗೊಂತಿದ್ದು.

ಹನುಮಾನ್ ಚಾಲೀಸಾ:
ರಾಮನ ಬಂಟ ಹನುಮ ಅಪ್ರತಿಮ ಸೇನಾನಿ. ರಾಮ ಹೇಳಿದ್ದರ ಎಲ್ಲವನ್ನೂ ಮಾಡಿ ತಕ್ಕು. ಈ ಹನುಮಂತನ ಕುರಿತಾಗಿ ತುಳಸೀದಾಸರು ಬರದ ನಲುವತ್ತು ಪದ್ಯದ ಗುಚ್ಛ “ಹನುಮಾನ್ ಚಾಲೀಸಾ” ಆಗಿ ಪ್ರಸಿದ್ಧಿ ಆಯಿದು. ಉತ್ತರದ ಹೊಡೆಲಿ ಇಂದಿಂಗೂ ಇದರ ತುಂಬಾ ಶ್ರದ್ಧಾ ಭಕ್ತಿಲಿ ಪಠನ ಮಾಡ್ತವು. ರಾಮನ ಮಠವೇ ಆದ ನಮ್ಮ ಮಠಲ್ಲಿ,ರಾಮಸೇವಕರೇ ತುಂಬಿಪ್ಪ ಮಠಲ್ಲಿ ಹನುಮನ ಚಾಲೀಸವ ಪಠನ ಮಾಡುವ ಬಗ್ಗೆ ಗುರುಗೊ ಒಂದು ಶಂಕರಪಂಚಮಿಲಿ ಆದೇಶ ಕೊಟ್ಟವು. ಅಂಬಗಾಣ ಸಾಮಾಜಿಕ ಸ್ಥಿತಿಗತಿಲಿ ಎಲ್ಲೋರುದೇ ನಿಷ್ಠ ರಾಮಸೇವಕ ಆಯೇಕಾದ ಅನಿವಾರ್ಯತೆ ಇದ್ದತ್ತು. ಹಾಂಗೆ ಹನುಮಾನ್ ಚಾಲೀಸಾ ಆದೇಶ ಕೊಟ್ಟದು ಹೇದು ಮಾತಾಡಿಗೊಂಡವು.  ಅದಿರಳಿ, ಆ ಪ್ರಕಾರ ಊರು ಊರುಗಳಲ್ಲಿ ಹನುಮಾನ್ ಚಾಲೀಸಾ ಪಠನ ಆತು.

 ನಮ್ಮ ಪರಿಚಿತ ಭಾಷೆ ಅಲ್ಲ ಅದು. ಅವಧೀ ಹೇಳುವ, ಹಿಂದಿಗೆ ಹತ್ತರಾಣ ಭಾಷೆ. ಸುರುಸುರುವಿಂಗೆ ಸುಲಭ ಆಯಿದಿಲ್ಲೆ, ಕೂದು ಉರು ಹೊಡದರೆ ಮಾಂತ್ರ ನಾಲಗೆಗೆ ಬಕ್ಕಷ್ಟೆ. ಮನೆ ಮನೆಯ ಮಕ್ಕೊ-ಹೆಮ್ಮಕ್ಕೊ ಬಿಡುವಿನ ಸಮಯ ಕೂದು ಕಲ್ತವು, ಕಲ್ತು ಪಠನ ಸುರು ಮಾಡಿದವು. ಅಷ್ಟೇ ಅಲ್ಲ, ಲೆಕ್ಕವೂ ಮಡುಗಿದವು.
 ನೋಡುನೋಡಿಗೊಂಡು ಇಪ್ಪ ಹಾಂಗೇ ನಮ್ಮ ಊರಿಲಿ ಧಾರ್ಮಿಕ ಸಂಚಯನ ಆತು. ಜೆನಂಗೊ ಹನುಮಾನ್ ಚಾಲೀಸಾ ಕಲ್ತವು, ಪಠನ ಮಾಡ್ಳೂ ಶಕ್ತರಾದವು.

ಅಂತೇ ಕೂದು ಸಮಯ ಕಳವ ಪಂಚಾತಿಗೆ ಕಡಮ್ಮೆ ಆತು. ರಜ್ಜ ಪುರುಸೊತ್ತು ಇದ್ದು ಹೇಳಿ ಆದರೆ ಹನುಮಾನ್ ಚಾಲೀಸ ಒಂದೆರಡು ಆವೃತ್ತಿ ಹೇಳಿಕ್ಕುತ್ತೆ – ಹೇದು ಜೆನಂಗೊ ಆಲೋಚನೆ ಮಾಡಿದವು. ಮತ್ತಾಣ ಶಂಕರ ಜಯಂತಿಯ ಸಮಯಲ್ಲಿ ಲೆಕ್ಕ ಕೊಟ್ಟವು – ಎಷ್ಟೋ ಹಲವು ಲಕ್ಷ ಆಯಿದು ಹೇದು.

ಆದಿತ್ಯ ಹೃದಯ:
ರಾಮಾಯಣಲ್ಲಿ ರಾಮ-ರಾವಣರ ಯುದ್ಧ ಆಯಿದು. ರಾವಣ ಸೋತಿದ°, ಆದರೆ ಸಾಯ್ತಾ ಇಲ್ಲೆ. ರಾಮನ ಬಾಣಲ್ಲಿ ರಾವಣಂಗೆ ತಾಗುತ್ತಷ್ಟೇ ಹೊರತು, ರಾವಣ ಸಾಯ್ತನಿಲ್ಲೆ. ಶತ್ರುಸಂಹಾರ ಸಂಪೂರ್ಣ ಆಯೇಕಾರೆ ಶತ್ರು ನಾಶ ಆಯೇಕು. ಅದು ರಾಮಂಗೆ ಚಿಂತೆಗೆ ಎಡೆ ಮಾಡ್ತು. ಹೇಂಗಪ್ಪಾ ರಾವಣನ ನಾಶ ಮಾಡುಸ್ಸು- ಹೇದು ಚಿಂತೆಲಿ ಇರ್ತ°.
ಇದೇ ಸಂದರ್ಭಲ್ಲಿ ಅಗಸ್ತ್ಯ ಮಹರ್ಷಿಗೊ ಬಂದು ಒಂದು ಉಪಾಯವ ಉಪದೇಶಮಾಡ್ತವು. ಅದುವೇ “ಆದಿತ್ಯ ಹೃದಯ”.

ಸಮಸ್ತ ಲೋಕಕ್ಕೆ ಬೆಣಚ್ಚು, ಶಕ್ತಿ ಕೊಡ್ತ ಆದಿತ್ಯನ ಧ್ಯಾನ ಮಾಡಿಕ್ಕಿ ರಾಮಬಾಣ ಬಿಡು, ರಾವಣ ಸಾಯ್ತ° – ಹೇದು ಅಗಸ್ತ್ಯ ರಾಮಂಗೆ ಹೇಳ್ತವು. ಆ ಪ್ರಕಾರಲ್ಲಿ ಬಾನಲ್ಲಿಪ್ಪ ಆದಿತ್ಯದೇವರ ನೋಡಿಗೊಂಡು ಪ್ರಾರ್ಥನೆ ಮಾಡ್ತ° ರಾಮ. ಆದಿತ್ಯನ ಹೃದಯಲ್ಲಿ ಮಡಗಿ ಮಾಡಿದ ಪ್ರಾರ್ಥನೆ ಅದು. ಆ ಸಂದರ್ಭಲ್ಲಿ ಹೇಳಿದ ಶ್ಲೋಕಗುಚ್ಛವೇ – ಆದಿತ್ಯ ಹೃದಯ.
ಆದಿತ್ಯ ಹೃದಯ ಹೇಳಿಕ್ಕಿ ಮಾಡಿದ ಬಾಣಪ್ರಯೋಗಲ್ಲಿ ರಾವಣ ಸಂಪೂರ್ಣ ನಿರ್ನಾಮ ಆವುತ್ತ°. ಲಂಕೆಯ ಕೊಳೆ ಸಂಪೂರ್ಣ ತೊಳದು ಹೋವುತ್ತು.

ಕಳುದ ಸರ್ತ್ಯಾಣ ಶಂಕರ ಜಯಂತಿಲಿ ಗುರುಗೊ ಹೇಳಿದವು – ಸಮಾಜಲ್ಲಿಪ್ಪ ರಾವಣಂಗೊ ಸೋತಿದವು, ಆದರೆ ನಾಶ ಆಯಿದಿಲ್ಲೆ. ಅದಕ್ಕಾಗಿ ಶಿಷ್ಯಸ್ತೋಮ ಆದಿತ್ಯಹೃದಯ ಪಠನ ಮಾಡೇಕು – ಹೇದು. ಆ ಪ್ರಕಾರ ಜೆನಂಗೊ ಸುರು ಮಾಡಿದವು ಆದಿತ್ಯಹೃದಯ ಪಠನ.
ಶುದ್ಧ ಸಂಸ್ಕೃತಲ್ಲೇ ಇದ್ದಿದ್ದ ರಾಮಾಯಣದ ಶ್ಲೋಕ ಆದ ಕಾರಣ ಇದು ಜಾಸ್ತಿ ಕಷ್ಟ ಆಯಿದಿಲ್ಲೆ ನಮ್ಮೋರಿಂಗೆ. ಬೇಗನೇ ಕಲ್ತವು.
ಒಂದು ಒರಿಶಲ್ಲಿ ಗುರುಗೊ ಕೊಟ್ಟ ಎಷ್ಟೋ ಲಕ್ಷದ ಗುರಿಯ ಮುಟ್ಟಿ ನಿರಾತಂಕವಾಗಿ ಗುರುಗೊಕ್ಕೆ ಎತ್ತುಸಿದವು ಶಿಷ್ಯವರ್ಗ. ಮೊನ್ನೇಣ ಶಂಕರಜಯಂತಿಲಿ ಈ ಕೆಲಸ ಆತು.

ಹಾಂಗಾರೆ ಈ ಒರಿಶ ಎಂತರ? – ಹೇದು ಎಲ್ಲೋರಿಂಗೂ ಕುತೂಹಲ ಇತ್ತು.
ಮೊನ್ನೆ ಶಂಕರ ಜಯಂತಿಲಿ ಗುರುಗೊ ಈ ಒರಿಶದ ಗುರಿಯನ್ನೂ ಕೊಟ್ಟವು. ಅದುವೇ –ಶಿವಪಂಚಾಕ್ಷರ ಶ್ಲೋಕ.

~
ಶಿವಪಂಚಾಕ್ಷರ ಶ್ಲೋಕ:
ಶಂಕರಾಚಾರ್ಯರು ವೇದ-ಶಾಸ್ತ್ರಂಗಳ ಸರಳವಾಗಿ ಅರ್ಥ ಆಗಿ ನೆಂಪೊಳಿವಲೆ ತುಂಬಾ ಶ್ಲೋಕಂಗಳ ರಚನೆ ಮಾಡಿದ್ದವು. ಚೆಂದ ಚೆಂದದ ಛಂದೋಬದ್ಧವಾದ ಹಲವೂ ರಚನೆಗೊ ಇದ್ದು. ಅವುಗಳಲ್ಲಿ ಒಂದು “ಶಿವಪಂಚಾಕ್ಷರೀ ಶ್ಲೋಕ”.
ಶಿವನ ಪಂಚಾಕ್ಷರೀ ಗೊಂತಿದ್ದನ್ನೆ – ನಮಃ ಶಿವಾಯ ಮಂತ್ರ. ಈ ಮಂತ್ರದ ಐದು ಅಕ್ಷರದ ಮಹಿಮೆಯ ಸಾರುವ ಐದು ಶ್ಲೋಕಂಗಳ ಗುಚ್ಛಕ್ಕೆ “ಶಿವ ಪಂಚಾಕ್ಷರಿ ಶ್ಲೋಕ” – ಹೇಳ್ತವು.

, , ಶಿ, , ಯ – ಈ ಐದು ಅಕ್ಷರಂಗಳಿಂದ ಸುರು ಅಪ್ಪ ಶ್ಲೋಕಂಗೊ. ಪ್ರತಿ ಶ್ಲೋಕಲ್ಲಿಯೂ ಕೊನೆಯ ಪಾದ “ತಸ್ಮೈ __ ಕಾರಾಯ ನಮಃ ಶಿವಾಯ” – ಹೇದು ಬತ್ತು. ಪ್ರತಿ ಬೀಜಾಕ್ಷರಲ್ಲಿ ಒಂದೊಂದು ನಮಸ್ಕಾರ ಮಾಡ್ತ ಹಾಂಗೆ.

ಈ ಒರಿಶ ಮೂವತ್ತಾರು ಲಕ್ಷದ ಗುರಿಯ ಗುರುಗೊ ಕೊಟ್ಟಿದವು. ನಾವೆಲ್ಲ ಇದರ ಸುರು ಮಾಡೆಕ್ಕು. ಬೇಗ ಸುರು ಮಾಡೆಕ್ಕು. ಬೇಗ ಆ ಗುರಿಯ ಮುಗಿಶೆಕ್ಕು – ಹೇಳ್ತದು ನಮ್ಮ ಎಲ್ಲೋರ ಮನಸ್ಸು.
ಶಂಕರಾಚಾರ್ಯರಿಂದ ಶಿವನೊಲುಮೆಗಾಗಿ ರಚಿತವಾದ ಶಿವಪಂಚಾಕ್ಷರೀ ಶ್ಲೋಕವ ಪಠನ ಮಾಡುವೊ°. ಶಿವನ, ಶಂಕರಾಚಾರ್ಯರ, ಗುರುಗಳ, ರಾಮನ ಒಲುಮೆಯ ಪಡಕ್ಕೊಂಬ°.
~

ಪಠನ ಯೇವದೇ ಆದರೂ, ಕಾರಣ ಯೇವದೇ ಆದರೂ – ನಿತ್ಯ ಪಾಠದ ಹವ್ಯಾಸ ತುಂಬಾ ಒಳ್ಳೆದು. ಮೊದಲಿಂಗೆ ಕಾಂಬು ಅಜ್ಜಿಯ ಕಾಲಲ್ಲಿ ನಿತ್ಯಪಾಠ ಇದ್ದತ್ತು. ಆದರೆ ಕ್ರಮೇಣ ಆ ಅಭ್ಯಾಸವೇ ಬಿಟ್ಟು ಹೋಗಿತ್ತು. ಈಗ ಗುರುಗಳ ಈ ಯೋಜನೆಂದಾಗಿ, ಅಂತೇ ಹೊತ್ತು ಕಳವ ಅಭ್ಯಾಸ ಬಿಟ್ಟು ಒಂದೊಳ್ಳೆ ಕಾರ್ಯಕ್ಕೆ ಸಮಯ ಸದುಪಯೋಗ ಆವುತ್ತು. ಆ ಯೋಜನೆಯೇ, ಆ ಯೋಚನೆಯೇ – ಈ ಜಪದ ಉದ್ದೇಶ.

ಅಜ್ಜಂದ್ರು ಮಾಡಿಗೊಂಡಿದ್ದ ನಿತ್ಯಪಾಠದ ಉದ್ದೇಶವೂ ಸಮಯ ಸದುಪಯೋಗ, ಭಗವಚ್ಚಿಂತನೆ.

~
ಒಂದೊಪ್ಪ:  ನಮ್ಮ ಜೀವನಲ್ಲಿ ನಿತ್ಯವೂ ಪಾಠ ಇರ್ತು. ಅದರೊಟ್ಟಿಂಗೆ ನಿತ್ಯಪಾಠವೂ ಇರಲಿ.

ಸೂ: ಶಿವಪಂಚಾಕ್ಷರೀ ಸ್ತೋತ್ರ ಇಲ್ಲಿದ್ದು:  http://oppanna.com/?p=7995

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶ್ರೀ ಗುರುಗಳ ಮಾರ್ಗದರ್ಶನ ಹೇಳಿರೆ ಹಾಂಗೆಯೇ. ಯಾವಾಗ ಎಂತ ಬೇಕು ಹೇಳಿ ಸೂಚನೆ ಕೊಟ್ಟು ಆತ್ಮೋದ್ಧಾರಕ್ಕೆ ದಾರಿ ತೋರ್ಸುತ್ತವು.
  ೪೫ ಲಕ್ಷದ ಗುರಿ ಸಾಧುಸಲೆ ಏನೇನೂ ಅಡ್ಡಿ ಆತಂಕಂಗೊ ಬಾರ

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಒಳ್ಳೆ ಶುದ್ದಿ ಒಪ್ಪಣ್ಣ, ಶ್ರೀ ಗುರುಗಳ ಮಾರ್ಗದರ್ಶನಲ್ಲಿ ಪಠಣ ಮಾಡಿದ ಹನುಮಾನ್ ಚಾಲೀಸಾಗಲೀ ಆದಿತ್ಯಹೃದಯವಾಗಲೀ ಲೋಕಕ್ಕೆ ಒಳ್ಳೆದಾವುತ್ತರೊಟ್ಟಿಂಗೆ ಸ್ವಂತಕ್ಕೂ ಒಳ್ಳೆ ಪರಿಣಾಮ ಆವುತ್ತು, ಅದರೆ ಅರ್ತುಗೊಂಬ ಮನೋಭಾವ ನವಗೆ ಬಿಟ್ಟದು.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಗೋಪಾಲ

  ಹರೇರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಮಂಗ್ಳೂರ ಮಾಣಿಶ್ರೀಅಕ್ಕ°ಒಪ್ಪಕ್ಕಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿನೆಗೆಗಾರ°ಪುಟ್ಟಬಾವ°ರಾಜಣ್ಣವಿಜಯತ್ತೆದೊಡ್ಡಮಾವ°ಕಾವಿನಮೂಲೆ ಮಾಣಿಗಣೇಶ ಮಾವ°ಸಂಪಾದಕ°ಶ್ಯಾಮಣ್ಣದೊಡ್ಡಭಾವಉಡುಪುಮೂಲೆ ಅಪ್ಪಚ್ಚಿದೊಡ್ಮನೆ ಭಾವಡೈಮಂಡು ಭಾವಪೆಂಗಣ್ಣ°ಪೆರ್ಲದಣ್ಣವೆಂಕಟ್ ಕೋಟೂರುಕಳಾಯಿ ಗೀತತ್ತೆಮುಳಿಯ ಭಾವಬೋಸ ಬಾವಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ