ಸೋಣೆ ತಿಂಗಳ ಮಳೆಗಾಲಲ್ಲಿ ನೀರಿಂಗಿ’ಸೋಣ’..!

ನೋಡುನೋಡುವಗಳೇ ಆಟಿ ಕಳಾತು!
ಮೊನ್ನೆ ಸೊತಂತ್ರದ ಮರದಿನ ಸೋಣೆ!

ಬೆಶ್ಚಂಗೆ ಕಂಬುಳಿಹೊದ್ದೊಂಡು ಮನೆ ಒಳ ಕೂದ ಅಣ್ಣಂದ್ರು, ಅಪ್ಪಚ್ಚಿಯಕ್ಕೊ ಎಲ್ಲ ಈಗ ಕಂಬುಳಿ ಮಡುಸಿ ಮಡಗಿ ತೋಟಕ್ಕೆ ಇಳುದ್ದವು.
ಇನ್ನುಅಲ್ಲಿ ತ್ರಿಕಾಲ ಪೂಜೆ, ಇಲ್ಲಿ ದುರ್ಗಾಪೂಜೆ, ಮದ್ದುಬಿಡ್ಳೆ ಕುಂಞ ಬಂತು, ಬಾಬು ಬತ್ತೆ ಹೇಳಿ ಬಯಿಂದಿಲ್ಲೆ – ಎಲ್ಲ ಕಾರಣಂಗಳ ಹೇಳಿಗೊಂಡು ಮನೆಹೆರಡುದೇ ಕೆಲಸ.ಆಟಿಲಿ ಆದರೆ ಮಳೆ ಇಳಿಯೇಕು ಹೇಳಿ ಒಂದು ನೆವ! ಅಷ್ಟೆ!!
ಆಟಿ ಕಳುದರೆ ಮಳೆ ಇದ್ದರೂ ಲೆಕ್ಕ ಇಲ್ಲೆ. ಹೇಳಿಕೆ ಹೇಳಿದ ಜೆಂಬ್ರಂಗೊಕ್ಕೆ ಹೋಯೇಕು, ಮನೆಗೆಲಸ ಇತ್ಯಾದಿ ಇದ್ದರೆ ಮಾಡೆಕು, ಎಂತಾರು ಕೃಷಿ ಇತ್ಯಾದಿ ಪರಿವಾಡಿ ಇದ್ದರೆ ನೋಡಿಗೊಳೆಕ್ಕು – ಎಲ್ಲದಕ್ಕೂ ಇದೇ ಸುಸಮಯ.

ಇದರೆಡಕ್ಕಿಲಿ ಮರದ ಎಡೇಡೇಲಿ ಹಲಸಿನ ಹಣ್ಣು ಇದ್ದರೆ ಅದನ್ನೂ ತಿಂದುಗೊಳೆಕು! ಪಕ್ಕನೆ ಬಿಟ್ಟಿಕ್ಕಲೆ ಗೊಂತಿಲ್ಲೆ.
ಯೇವದೇ ಆಗಲಿ – ಮುಗಿವಲಪ್ಪಗ ಅದರ ರುಚಿ ಗೊಂತಕ್ಕಿದ, ಹೇಳಿದ ದೊಡ್ಡಬಾವ°.
ಅವನ ಈ ಸರ್ತಿ ಬೈವಲಿಲ್ಲೆ ಹೇಳಿ ಮಾಡಿದ್ದೆಯೊ ಎಂಗೊ ಪುಳ್ಳರುಗೊ – ಎಂತ್ಸಕೇ ಹೇಳಿತ್ತುಕಂಡ್ರೆ, ಒಂದು ತಲೆಂಬಾಡಿ (ಜೇನಬರಿಕ್ಕನ ಹಾಂಗಿರ್ತದು) ಹಲಸಿನಹಣ್ಣಿನ ತುಂಡುಸಿ, ಪಾತ್ರಲ್ಲಿ ಹಾಕಿಂಡು, ಒಂದು ಕುಪ್ಪಿ ಜೇನವನ್ನುದೇ ಕೈಲಿ ಹಿಡ್ಕೊಂಡು ಬೈಲಿಂಗೆ ತಯಿಂದ ಓ ಮೊನ್ನೆ.
ಕೂದಂಡು ಲೊಟ್ಟೆಪಂಚಾತಿಗೆ ಹಾಕುವಗ ತಿಂದದು ಆ ದಿನ. ಬೈಲಿನ ಎಲ್ಲೋರಿಂಗೂ ಭಾರೀ ಕೊಶಿ ಆಯಿದು.
ಹಲಸಿನಹಣ್ಣು ಊರಿಲಿಲ್ಲದ್ದ ಕಾಲಲ್ಲಿ ಅದು ಸಿಕ್ಕಿದ್ದು ಭಾರೀ ಕೊಶಿ ಆತು. ಅಷ್ಟಲ್ಲದ್ದೆ ಆ ಹಲಸಿನಹಣ್ಣುದೇ ಭಾರೀ ರುಚಿ ಇತ್ತು!!
ಅವರ ಮನೆಲಿ ಇಪ್ಪ ವಿಶೇಷದ ಹಲಸಡ ಅದು. ಈ ಮಳೆಗಾಲ ಎರಡು ಬೇಳೆತಂದು ಅಗಳಕರೆಲಿ ಹಾಕೆಕ್ಕು ಹೇಳಿ ಇದ್ದು ನವಗೆ!
~

ಆ ದಿನ ದೊಡ್ಡಬಾವ° ರಜ ಅಂಬೆರ್ಪಿಲಿ ಇತ್ತಿದ್ದ°.
ಹೊತ್ತೋಪಗ ಅಂಬೆರ್ಪು ಜೋರಪ್ಪದಿದಾ – ಇರುಳು ಬೆಂಗ್ಳೂರು ಬಸ್ಸಿಂಗೆ ಹೋಪಲಿದ್ದರೆ.
ಅಪ್ಪಡ, ಅವ° ಬೆಂಗುಳೂರಿಂಗೆ ಹೋಪದಡ ಆ ದಿನ. ಅಪ್ಪಚ್ಚಿ ಮನೆಲಿ ಪೂಜೆ ಅಡ, ಹಾಂಗೆ ಪಾಚ ಉಂಬಲೆ.
ಪೆರ್ಲದಣ್ಣ ಸಿಕ್ಕುತ್ತನೋ ಏನೋ! ಉಮ್ಮ, ಇಬ್ರದ್ದೂ ಪುರುಸೊತ್ತು ನೋಡೆಕ್ಕಟ್ಟೆ. ಬೆಂಗುಳೂರು ಹೇಳಿರೆ ನಮ್ಮ ನೀರ್ಚಾಲಿನಷ್ಟಕೆ ಇಪ್ಪದಲ್ಲನ್ನೆ, ಊರಿಂಗೆ ಊರೇ ಅಲ್ಲಿದ್ದು!
ಅಂತೂ ಆ ದಿನ ಅಂಬೆರ್ಪಿಲೇ ಕಟ್ಟೆಪುರಾಣಲ್ಲಿ ದೊಡ್ಡಬಾವ° ಸೇರಿಗೊಂಡು, ಸುಮಾರು ಅಪುರೂಪದ ಸಕಾಲಿಕ ವಿಶಯಂಗಳ ಮಾತಾಡಿಗೊಂಡೆಯೊ°.

ಒಂದು ಬೆಳೀ ಬಣ್ಣದ ಬನಿಯಾನಂಗಿ ಹಾಕಿ ಹೆರಟಿತ್ತಿದ್ದ° ದೊಡ್ಡಬಾವ°.
ಈ ಮಳೆಗಾಲ ಬೆಳಿ ಬನಿಯಾನಂಗಿ ಹಾಕಿ ಹೆರಟದು ಸಾಕು, ಚೋರು ರಟ್ಟಲೆ!- ಅದಕ್ಕೇ ಹೇಳುದು, ಮನೆಂದ ಹೆರಡ್ಳಪ್ಪಗ ಹೆಂಡತ್ತಿ ಮನೆಲಿ ಇಲ್ಲದ್ರೆ ಹೀಂಗೆಲ್ಲ ಅಪ್ಪದೇ – ಹೇಳಿಗೊಂಡು..! ಅದಿರಳಿ,
ಅದರ್ಲಿ ಗಿಸೆ ಇತ್ತಿಲ್ಲೆ, ಗಿಸೆ ಇಪ್ಪ ಜಾಗೆಲಿ ನೀರು ಉಳಿಸಿ – ಹೇಳಿ ಎಂತದೋ ಹಸಿರುಬಣ್ಣಲ್ಲಿ ಬರಕ್ಕೊಂಡು ಇತ್ತಿದ್ದು.
~

ಮತ್ತೆಂತರ ಶುದ್ದಿ? ಆಟಿಲಿ ಪುರುಸೋತಿಲಿ ಮಾತಾಡಿಗೊಂಡು ಇತ್ತು ನಾವು. ಎಲ್ಲೋರಿಂಗೂ ಪುರುಸೊತ್ತಲ್ಲದ, ಹಾಂಗೆ.
ಈಗ ಎಂತರ ಪುರುಸೊತ್ತು – ಕೆಲಸಂಗೊ ಸುರು ಆತು.
ಅಗಳುತೆಗೆತ್ತ ಮುಂಡಂದೇ ಅದರ ನಾಕು ಜೆನ ಕೆಲಸದೋರುದೇ ತರವಾಡುಮನೆಗೆ ಬತ್ತವಡ ಇಂದು – ಹೇಳಿದ ದೊಡ್ಡಬಾವ°.
ಎಂತಪ್ಪ? ಇನ್ನೆಲ್ಲಿ ಅಗಳು ತೆಗವದು ಅಲ್ಲಿಗೆ? ಮಾರ್ಗಕ್ಕೇ ತೆಗೆತ್ತವೋ – ಕೇಳಿದ ಅಜ್ಜಕಾನ ಬಾವ°. ದೊಡ್ಡವು ಮಾತಾಡುವಗ ಪೆರಟ್ಟೇ ಮಾತಾಡುದು ಬಿಂಗಿ ಮಕ್ಕೊ!!
ಅಲ್ಲ, ನಂಬುಲೆಡಿಯ – ಈ ವಿದ್ಯಕ್ಕನ ಮಾತು ಕೇಳಿ ಶಾಂಬಾವ° ಹಾಂಗೆ ಮಾಡ್ಳೂ ಸಾಕು!
~

ಹಾಂಗೆನೋಡಿರೆ, ಮದಲಿಂಗೇ ಸೋಣೆತಿಂಗಳು ಹೇಳಿತ್ತುಕಂಡ್ರೆ ಮಣ್ಣುಗರ್ಪುತ್ತದಕ್ಕೆ ಸಕಾಲ. ದೈಬಾರೆತ ಬೇಲೆ ಸೋಣೊಟು – ಹೇಳಿ ಬಟ್ಯನ ಗಾದೆ ಒಂದಿದ್ದು. (ದೈ=ಅಡಕ್ಕೆ ಸೆಸಿ, ಬಾರೆ=ಬಾಳೆ)
ಎಂತ್ಸಾರು ಸೆಸಿಮಡಗುಲೋ, ಎಡೆಸೆಸಿಹಾಕಲೋ, ತೆಂಗಿನಗೆಡು ಮಡಗಲೋ ಮತ್ತೊ ಇದ್ದರೆ ಸೋಣ(ಸಿಂಹಮಾಸ)ಲ್ಲಿ ಗುಂಡಿತೆಗದು ಕನ್ನೆ(ಕನ್ಯಾ ಮಾಸ)ಯ ಒಳ ನೆಟ್ಟಕ್ಕು ಮದಲಿಂಗೆ.
ಈಗ ಮಳೆಯೇ ನಾವು ಹೇಳಿದ ಹಾಂಗೆ ಇಲ್ಲೆ, ಇನ್ನು ಯೇವ ಸೋಣ, ಯೇವ ಕನ್ನೆ. ಜೇಸೀಬಿಯುದೇ, ಸ್ಪ್ರಿಂಕ್ಲರುದೇ ಇದ್ದರೆ ಯೇವ ನೆಡುಬೇಸಗೆಲಿದೇ ಸೆಸಿಮಡಗಲೆಡಿಗು.
ಅದಿರಳಿ, ತರವಾಡುಮನೆಲಿ ಎಡೆಸೆಸಿ ಮಡಗುತ್ತವೋ ಅಂಬಗ – ಕೇಳಿದೆ. ಇಲ್ಲೆ ಹೇಳಿ ದೊಡ್ಡಬಾವ° ತಲೆ ಅಡ್ಡಡ್ಡ ಆಡುಸಿದ°.
ಅಷ್ಟಪ್ಪಗ ಗೊಂತಾತು, ಇದು ಎಂಗೊ ಗ್ರೇಶಿದ್ದು ಯೇವದೂ ಅಲ್ಲ, ಸಂಪೂರ್ಣ ಹೊಸದಾದ ಒಂದು ಕಾರ್ಯ ಹೇಳಿಗೊಂಡು.
ಎಂತರ ಅದು? ಅದುವೇ ಇಂಗುಗುಂಡಿ!!
~

ನಮ್ಮ ಭೂಮಿಲಿ ಪೃಥಿವ್ಯಾಪ್ ವಾಯುತೇಜೋರಾಕಾಶಃ – ಹೇಳ್ತ ಪಂಚಭೂತಂಗೊ ಇದ್ದಡ.
ಅದರ್ಲಿ ಆಪ್-ಹೇಳಿರೆ ನೀರು.
ಭೂಮಿಲಿ ನೀರು ಇಪ್ಪದು ಭೂಮಿ ಒಳದಿಕೆ, ಮಣ್ಣ ಎಡೆಲಿ. ಜೇನ ಎರಿಲಿ ಜೇನ ಇದ್ದ ಹಾಂಗೆ!
ಹಲಸಿನಹಣ್ಣು ಭಾರೀ ಸೀವಿದ್ದು, ಜೇನ ಇಲ್ಲದ್ದರೂ ತಿಂಬಲೆಡಿಗು! ಅಜ್ಜಕಾನಬಾವ ಬೇಗಬೇಗ ತಿಂತಾ ಇದ್ದ, ಕಳ್ಳ°!!
ಅದಿರಳಿ.. ಮಣ್ಣಿನ ಎಡೆಲಿ ನೀರಿಪ್ಪದು ಅದು ಮೇಗಂದ ಹೋದ ನೀರೇ!

ಸೂರ್ಯನ ಬೆಶಿಲಿಂಗೆ ಕುಂಬ್ಳೆಕಡಲು ಕಾಯಿತ್ತು ಅಲ್ಲದೋ – ಹಾಂಗೆ ಕಾದು ಆವಿ ಮೇಗೆ ಹೋಗಿ ಮೋಡ ಆವುತ್ತು.
ಮೋಡ ಮಳೆಯಾಗಿ ಇಳುದು ಭೂಮಿ ಚೆಂಡಿ ಆವುತ್ತು, ಒಣಗಲೆಮಡಗಿದ ಬಂಡಾಡಿಅಜ್ಜಿಯ ಹಪ್ಪಳವುದೇ..
ಮೋಹನಬಂಟನ ಗಂಡಿಲಿ ನೀರು ಎರ್ಕುತ್ತು, ಪಾಡಿಗೆದ್ದೆ ಸಮಲುತ್ತು, ಸಾರಡಿತೋಡು ಹರುದು ಹೋವುತ್ತು!! ಮತ್ತೆ ಆ ನೀರು ಕುಂಬ್ಳೆ ಕಡಲಿಂಗೆ ಸೇರುತ್ತು!
– ಇದು ನೀರಿನ ಚಕ್ರ.
ಹೀಂಗೆ ಹರುದು ಹೋಪಗ ರಜರಜ ನಮ್ಮ ಭೂಮಿ ಅಡಿಂಗುದೇ ಇಳಿತ್ತು. ಮಳಗೆ ಬಂಡಾಡಿಪುಳ್ಳಿಯ ಚೂಡಿದಾರು ಚೆಂಡಿ ಆದ ಹಾಂಗೆ.
ಹ್ಮ್, ಭೂಮಿಯ ಮೇಲಾಣ ಹೊಡೆ ನೆನದು ನೆನದು – ಅಡಿಯ ಒರೆಂಗೆ ಇಳಿತ್ತು.
ಭೂಮಿಯ ಅಂತರಾಳಲ್ಲಿಪ್ಪ ಈ ನೀರೇ ಅಂತರ್ಜಲ.
ಅಂತರ್ಜಲ ಹೆಚ್ಚಿದ್ದಷ್ಟೂ ನಮ್ಮ ಎಲ್ಲಾ ಕೃಷಿ ಕಾರ್ಯ ಅಬಿವುರ್ದಿ ಆವುತ್ತಡ.
~

ಭೂಮಿಯ ಒಳದಿಕೆ ಇಪ್ಪ ಕಾರಣ ಆ ನೀರಿಂಗೆ ಅಂತರ್ಜಲ ಹೇಳಿ ಹೇಳುತ್ಸು.
ಮೇಗಂತಾಗಿ ಹೊಳೆ, ನದಿಗೊ ಎಲ್ಲ ಹರಿವ ಹಾಂಗೆಯೇ, ಒಳಾಣ ಅಂತರ್ಜಲವುದೇ ಹರುಕ್ಕೊಂಡು ಹೋವುತ್ತಡ.
ಅದು ರಜ್ಜ ಮೇಗೆ ಇದ್ದರೆ ಒರತ್ತೆಯ ರೂಪಲ್ಲಿ ಹೆರ ಬತ್ತದ. ಅದು ಅಂತರ್ಜಲವೇ ಆದರೂ ನಮ್ಮ ಆಡುಭಾಷೆಲಿ ಒರತ್ತೆ ಹೇಳಿ ಹೇಳ್ತವು.

ಹೆರಾಣ ಮಣ್ಣಿನ ರಜ್ಜ ಗುಂಡಿಗೆ ಗರ್ಪಿರೆ ಒರತ್ತೆ ನೀರು ಸಿಕ್ಕುತ್ತು. ಆ ಮಣ್ಣಿನ ಒಂದು ಪದರು ಕಳುದರೆ ಗಟ್ಟಿ ಕಲ್ಲು ಸಿಕ್ಕುತ್ತಡ.
ಆ ಗಟ್ಟಿ ಕಲ್ಲು ಮತ್ತೆ ಎಷ್ಟೋ ಅಡಿಯಂಗೆ ಒರೆಗೆ ಇದ್ದಡ – ತಲೆಯ ಓಡಿನ ನಮುನೆಲಿ!

– ಅದು ಕಳುದು ಇರುವಾರ (ಪುನಾ) ನೀರು ಇದ್ದಡ!

ಬಾವಿಲಿ ಸಿಕ್ಕುತ್ತದು ಒರತ್ತೆ ನೀರು, ಆದರೆ ಬೋರುವೆಲ್ಲಿಂಗೆ ಸಿಕ್ಕುತ್ತದು ಈ ಕಲ್ಲಿನ ಅಡಿಯಾಣ ನೀರಡ.
ಮೇಗೆ ಇಪ್ಪ ನೀರಿಲಿ – ಮಣ್ಣಿಲಿಪ್ಪ ಸುಣ್ಣದಂಶ, ಕಬ್ಬಿಣದಂಶ (ಖನಿಜ, ಲವಣಂಗೊ) ಎಲ್ಲ ಕರಗಿರ್ತಡ ರಜರಜ. ಆದರೆ ಕಲ್ಲಿನ ಅಡಿಯಾಣ ನೀರಿಂಗೆ ಹಾಂಗಿರ್ತದು ಕಮ್ಮಿ ಅಡ!

ಅದಕ್ಕೇ ಬಾವಿನೀರು ಸೀವು, ಬೋರುವೆಲ್ಲು ನೀರು ಚಪ್ಪೆಡ – ಮಾಷ್ಟ್ರುಮಾವ° ಹೇಳಿದ ನೆಂಪು.
~ಕೊಳಕ್ಕೆಗೆದ್ದೆಗಳಲ್ಲಿ ನೀರು ಮೇಲೆ ಇರ್ತು. ಬರೇ ಒಂದೆರಡು ಕೋಲು ತೆಗದರೆ ಸಾಕು, ನೀರು ಸಿಕ್ಕುಗು.
ಅದೇ ಜಾಗೆಗಳಲ್ಲಿ ಬೋರುವೆಲ್ಲು ತೆಗದರಂತೂ ಅಂತರ್ಜಲ ಸಮಲುಗು.
ಬಂಡಾಡಿ ಅಜ್ಜಿಯಲ್ಲಿ ಸುರೂ ತೆಗದ ಬೋರುವೆಲ್ಲಿಲಿ ಹೆಜ್ಜೆ ಅಳಗೆಂದ ತೆಳಿ ಸಮಲಿದ ನಮುನೆಲಿ ಸಮಲಿಗೊಂಡು ಇತ್ತಡ ನೀರು.
ಕೆಲವು ಪಾತ್ರಂಗಳಲ್ಲಿ ಎಲ್ಲ ತುಂಬುಸಿ ಮಡಗಿತ್ತಡ ಅಜ್ಜಿ! ಮತ್ತೆ ಅದು ಬಂದುಗೊಂಡೇ ಇರ್ತು – ಹೇಳಿ ಗೊಂತಾದ ಮತ್ತೆ ಬೊಡುದು ನಿಲ್ಲುಸಿತ್ತಡ! (ಶ್ಶ್.. ಕೇಳಿಕ್ಕೆಡಿ ಇನ್ನು, ಆತೋ? ) 😉
ಅದಕ್ಕೆ ಹೆಸರು ಓವರುಪ್ಲೋ – ಹೇಳಿಗೊಂಡು ಅಡ!
ಮದಾಲಿಂಗೆ ತೆಗದ ಬೋರುವೆಲ್ಲುಗಳಲ್ಲಿ ಅದು ಆಗಿಯೊಂಡು ಇತ್ತಡ, ಈಗಾಣ ಯೇವ ಬೋರುವೆಲ್ಲುಗಳಲ್ಲೂ ಅದು ನೆಡೆತ್ತಿಲ್ಲೆ.
ಕಾರಣ?
~
ಕಾರಣ ಭೂಮಿಲಿ ನೀರು ಅಡಿಂಗೆ ಹೋಯಿದು. ಅಡಿಂಗೆ ಹೋದ್ದಲ್ಲ, ನಾವು ಎಳದು ಎಳದು ಮುಗುಶಿದ್ದು.
ಬೋರು ಕೊರದು, ಕರೆಂಟು ಪಂಪಿಲಿ ನೀರು ಎಳದು, ಅಡಕ್ಕೆ ತೋಟಕ್ಕೆ ಬಿಟ್ಟು, ಅಡಕ್ಕೆ ಕೊಬಳು ಕಪ್ಪುನಮುನೆ ಪಚ್ಚೆ ಅಪ್ಪಗಳೇ ನವಗೆ ಸಮಾದಾನ.
ಸುರುಸುರೂವಿಂಗೆ ಎಂತ್ಸೂ ತೊಂದರೆ ಅರ್ತ ಆಯಿದಿಲ್ಲೆ.
ಬೈಲಿಲಿ ಒಬ್ಬ° ಒಂದು ಬೋರು ಕೊರದ° ಹೇಳಿ ಆದರೆ, ಅದರ ನೋಡಿ ಆಚವಂದೇ ಕೊರದ.
ನೋಡುನೋಡುವಗಳೇ ಎಲ್ಲೊರಿಂಗೂ ಬೋರು ಆತು.
~

ಅಂತರ್ಜಲ ಹೇಳಿತ್ತುಕಂಡ್ರೆ ಒಂದು ದೊಡಾ ಟೇಂಕಿಯ ನಮುನೆ ಎರ್ಕಿ ನಿಂದ ನೀರಡ.
ಭೂಮಿಯ ಹೆರಮೈಲಿ ಇಪ್ಪ ಸಪೂರ ನರಂಗಳ ಹಾಂಗಿರ್ತ ಮಾಟೆಲೆ ಆಗಿ ನೀರು ಕೆಳ ಇಳುದು ರಜರಜವೇ ಎರ್ಕಿ ಸಾವಿರ ಸಾವಿರ ಒರಿಶದ ಸಂಗ್ರಹದ ನೀರಡ ಆ ಅಂತರ್ಜಲ.

ಮದಲಿಂಗೆ ಮಳೆನೀರಿನ ಐದನೇ ಒಂದಂಶ ನೀರು ಇಂಗಿಗೊಂಡು ಇದ್ದತ್ತಡ.
ಈಗ ರೂಪತ್ತೆಯ ಹಾಂಗಿಪ್ಪವು ಜಾಲಿಂಗೆಲ್ಲ ಕೋಂಗ್ರೇಟು ಹಾಕುತ್ತವಿದಾ – ಕಾರಿಂಗೆ, ಕಾಲಿಂಗೆ ಕೆಸರಪ್ಪಲಾಗ ಹೇಳಿಗೊಂಡು.
ಪ್ಲೇಷ್ಟಿಕುಗೊ, ಡಾಮರು ಮಾರ್ಗ ಇತ್ಯಾದಿಗಳುದೇ ಇದಕ್ಕೆ ಕಾರಣ ಆವುತ್ತಡ.
ಅದರಿಂದಾಗಿ ಆ ಒಂದಂಶ ನೀರುದೇ ಇಂಗುತ್ತಿಲ್ಲೆಡ ಈಗ!

ಕರ್ನಾಟಕ ಹೊಡೆಲಿ ಸುಮಾರು ದಿಕ್ಕೆ ಡಾಮರು ಮಾರ್ಗಲ್ಲೇ ಬೇಕಾದಷ್ಟು ಗುಂಡಿಗೊ ಇರ್ತು – ಅದು ಬೇರೆ.
ಅದರಲ್ಲಿ ನೀರು ಮಾಂತ್ರ ಅಲ್ಲ ನಾವುದೇ ಇಂಗುಗು ಜಾಗ್ರತೆ ತಪ್ಪಿರೆ! 😉 🙁
ಅದಿರಳಿ,
ಮದಲಾಣ ಕಾಲಲ್ಲಿ ಇಂಗಿದ್ದರ ಎಳದು ಎಳದು ಮುಗುಶಿದ್ದು ನಾವು, ಬೋರುವೆಲ್ಲು ಹೇಳಿಗೊಂಡು.

ಸಾವಿರಾರು ಒರಿಶಂದ ಸಂಗ್ರಹ ಆಗಿದ್ದ ನೀರು ಒಂದು ಶತಮಾನಲ್ಲಿ ಆಶ್ಚರ್ಯ ಅಪ್ಪಷ್ಟು ಕಾಲಿ ಆತಡ.
ಕೆಲವು ದಿಕ್ಕೆ ಬೋರುಗೊ ಬೋರು ಅಪ್ಪಷ್ಟೂ ಕಾಲಿ ಆತಡ.
ಹೆಮ್ಮಕ್ಕೊ ಮನೆಹಿಂದೆ ಪಾತ್ರ ತೊಳಕ್ಕೊಂಡು ಇದ್ದ ಹಾಂಗೇ ಸೊರಂಗಂದ ಬತ್ತ ನೀರು ನಿಂದತ್ತು!
ಬಟ್ಟಮಾವ ಮಿಂದುಗೊಂಡು ಇಪ್ಪಗಳೇ ದಂಬೆನೀರು ಕಾಣೆ ಆತು!
ಎಲ್ಲೊರೂ ಎಳದವು. ಎಡಿಗಾದಷ್ಟು ಎಳದವು. ಆದರೆ ಕ್ರಮೇಣ ಎಂತಾತು ಹೇಳಿರೆ – ಎಳದು ಎಳದು ಇಡೀ ಅಂತರ್ಜಲವೇ ಕೆಳ ಇಳುದತ್ತು.
~

ಗೆದ್ದೆಕರೆಯ ಉಜಿರುಕಣಿ. ಇದು ಸೀತ ಹೋಗಿ ತೋಡಿಂಗೆ ಸೇರುದು.

ಎಂತ ಹೀಂಗಾತು?

ಅಡಿಲಿ ತುಂಬಿದ ನೀರಿನ ಎಲ್ಲೊರೂ ಮುಗುಶಲೇ ನೋಡಿದವಷ್ಟೇ ವಿನಃ, ಅದರ ಪುನಾ ತುಂಬುಸಲೆ ಆರಿಂಗೂ ನೆಂಪಾಯಿದಿಲ್ಲೆಡ.

ತುಂಬುಸುದು ಆರು?
ಮದಲಿಂಗೆ ತುಂಬುಸೆಂಡು ಇದ್ದದಾರು?
– ಇದೇ ಪಳ್ಳಂಗೊ,ಗೆದ್ದೆಗೊ,ಕೆರೆಗೊ, ತೋಡುಗೊ, ಮರಂಗೊ ಇತ್ಯಾದಿ!
ಈಗ ಇದರಲ್ಲಿ ಯೇವದಿದ್ದು ಭಾವಾ?
~
ಪಳ್ಳಂಗೊ – ಹೇಳಿರೆ ಎಂತರ? ಶುಬತ್ತೆ ಮಗಂಗೆ ನೋಡಿಯೂ ಗೊಂತಿರ.
ಬೈಲಿನ ಎಡಕ್ಕಿಲೆ ಎಲ್ಯಾರು ಇಪ್ಪ ಸ್ವಾಭಾವಿಕ ತಗ್ಗುಪ್ರದೇಶಲ್ಲಿ ನೀರು ನಿಂಗು. ಅದಕ್ಕೆ ಪಳ್ಳ ಹೇಳ್ತದು.
ತರವಾಡುಮನೆ ಗೋಣಂಗೊ ಮೂರೊತ್ತುದೇ ಓ ಆ ಬೈಲಕರೆ ಪಳ್ಳಲ್ಲಿ ಬಿದ್ದುಗೊಂಡು ಇತ್ತಿದ್ದವು ಮೊನ್ನೆ ಮೊನ್ನೆ ಒರೆಂಗುದೇ, ಕಾಸ್ರೋಡು ಬಷ್ಟೇಂಡಿಲಿ ಬೆಳಿಟೊಪ್ಪಿಗೊ ಬಿದ್ದೊಂಡು ಇದ್ದ ನಮುನೆ.
ಬೇಸಗೆಲಿ ಅಂತೇ ಬಲ್ಲೆ ಬೆಳಕ್ಕೊಂಡು ಇದ್ದರೂ, ಮಳೆಗಾಲ ಸುರು ಅಪ್ಪಗಳೇ ಅದು ನೀರು ಹಿಡ್ಕೊಂಗು. ಚಳಿಗಾಲ ಬಪ್ಪನ್ನಾರವೂ ಅದರ್ಲಿ ನೀರು ನಿಂಗು.
ಈಗ ಪಳ್ಳಂಗಳೇ ಇಲ್ಲೆ. ಸುಮ್ಮನೆ ಜಾಗೆ ಹಾಳು ಮಾಡುದೆಂತಕೆ – ಹೇಳಿಗೊಂಡು ಅದರ ನಿಗುದು ನಾಕು ಅಡಕ್ಕೆಸೆಸಿ ಮಡಗಿದವು, ಅಡಕ್ಕೆಭಾವಯ್ಯಂದ್ರು!
~
ಗೆದ್ದೆಗೊ – ಭತ್ತದ ಗೆದ್ದೆಗೊ.
ಏಣಿಲು, ಸುಗ್ಗಿ, ಕೊಳಕ್ಕೆ – ಹೇಳಿ ಮೂರು ನಮುನೆ ಬೆಳೆ ಬೆಳಗು ಮದಲಿಂಗೆ.
ಒಂದೊಂದು ಬೆಳೆಯೂ ತೊಂಬತ್ತು ದಿನ.
ಅದರ್ಲಿ ಕನಿಷ್ಟ ಎಪ್ಪತ್ತು ದಿನ ನೀರು ಇಕ್ಕು ಗೆದ್ದೆಲಿ.
ನೋಡಿನಿಂಗೊ – ಎಪ್ಪತ್ತು ಎಪ್ಪತ್ತು ದಿನದ ಹಾಂಗೆ ಮೂರು ಸರ್ತಿ ಒರಿಶಲ್ಲಿ ನೀರು ನಿಂದುಗೊಂಡು ಇಪ್ಪಗ ಯೋಚನೆ ಮಾಡಿ, ಅದೆಷ್ಟು ನೀರು ಭೂಮಿಗೆ ಇಳುಕ್ಕೊಂಡಿದ್ದಿಕ್ಕು! ಅಲ್ಲದೋ?
~

ಕೆರೆಗೊ –

ಬೈಲಕರೆಲಿ ಇರ್ತ ಕೆರೆಲಿ ನೀರಿಪ್ಪದರ ನೋಡುದು.

ಗೆದ್ದೆ ಕರೆಲಿ ಒಂದಾರುದೇ ಕೆರೆ ಇಕ್ಕು. ಜೊಟ್ಟೆ ಮೊಗಚ್ಚಲೆ.
ಒಂದು ಎಂಟತ್ತು ಕೋಲು ಗುಂಡಿಯ ಒಂದು ಕೆರೆಯ ರಚನೆಲಿ ನೀರು ಇಕ್ಕು, ಒರಿಶಪೂರ್ತಿ.

ಮಳೆಗಾಲದ ಆಸುಪಾಸಿಲಿ ನೀರಿನ ಸೆಲೆಯೇ ಇದ್ದರೂ, ಬೇಸಗೆಲಿ ಅದಕ್ಕೆ ಒರತ್ತೆ ಬಂದು ಸೇರುಗು – ಅದುದೇ ಅಂತರ್ಜಲವೇ.
ಕೊಳಕ್ಕೆಗೆದ್ದಗೆ ನೀರೇ ಬೇಡ. ಆದರೆ ಬೆಟ್ಟುಗೆದ್ದೆ, ಮಜಲುಗೆದ್ದೆಗೊಕ್ಕೆ ಬೇಕಾದ ನೀರು ಈ ಕೆರೆಂದಲೇ ಹೋಕು.
ಮತ್ತೆ ಮಾಡ್ತ ಉದ್ದು-ಕುಡು- ಹೀಂಗಿರ್ತ ಬೆಳೆಗೊಕ್ಕುದೇ ಇದೇ ಕೆರೆ ಆಯೆಕ್ಕಟ್ಟೆ.
ಬಟ್ಟಮಾವ ಮಿಂದಿಕ್ಕಿ ಶುದ್ದಲ್ಲಿ ನೀರುತೆಕ್ಕೊಂಡೋಗಿ ಅರ್ಘ್ಯಬಿಡೆಕ್ಕಾರೆ ಇದೇ ಕೆರೆನೀರು ಆಯೆಕ್ಕಟ್ಟೆ.
ಒರಿಶಪೂರ್ತಿ ನೀರು ಹಿಡ್ಕೊಂಡು ನಿಂದ ಆ ಕೆರೆಯ ಕಾರ್ಯವ ನಾವು ಮೆಚ್ಚುಲೇ ಬೇಕು. ಎಷ್ಟು ನೀರಿನ ಅದು ಭೂಮಿಯ ಅಡಿಂಗೆ ಕಳುಸಿಗೊಂಡು ಇದ್ದಿಕ್ಕು, ಅಲ್ಲದೋ?
~
ತೋಡುಗೊ –
ಸಾರಡಿತೋಡಿನ ಹಾಂಗಿರ್ತ ಅಗಾಧ ಸಂಕೆಯ ತೋಡುಗೊ ನಮ್ಮಲ್ಲಿ ಇದ್ದು.
ಈಗ ಒರಿಶದ ಹೆಚ್ಚು ಕಾಲವೂ ಅದು ಕಾಲಿಯೇ ಇದ್ದರೂ, ಮದಲಿಂಗೆ ಶಿವರಾತ್ರಿ ಒರೆಂಗುದೇ ಅದರ್ಲಿ ಹರಿಪ್ಪು ಇದ್ದುಗೊಂಡು ಇತ್ತು.
ಹರಿಪ್ಪು ಇಪ್ಪಷ್ಟು ಕಾಲವೂ ಶುದ್ದ ನೀರು ಇದ್ದೇ ಇದ್ದೊಂಡಿತ್ತು.

ಎಷ್ಟೋ ಜೆನರ ಒಸ್ತ್ರ ಒಗವಲೋ, ಮೋರೆ ತೊಳವಲೋ, ಈಜುಲೋ, ದನಕ್ಕೆ ಹುಲ್ಲು ತೊಳವಲೋ, ಗೋಣಂಗಳ ಮೀಶುಲೋ, ಬಟ್ಯಂಗೆ ಗಾಳ ಹಾಕಲೋ, ಎಂತಕೆಲ್ಲ ಉಪಕಾರ ಆಯ್ಕೊಂಡಿತ್ತು.

ತೋಡಿನ ಉದ್ದಕೂ ಅದರ ಪಾತ್ರಲ್ಲಿ ಅದೆಷ್ಟು ನೀರು ಭೂಮಿಯ ಒಳ ಇಳ್ಕೊಂಡಿದ್ದಿಕ್ಕೋ ಏನೋ.
ಚೆ, ಈಗಾಣ ತೋಡುಗೊ ಮಳೆ ಬಿಟ್ಟಕೂಡ್ಳೇ ಕಾಲಿ ಆವುತ್ತು.
~
ಮರಂಗೊ..?!
ಮದಲಿಂಗೆ ಮರಂಗೊ ದಾರಾಳಡ.
ದೊಡ್ಡದೊಡ್ಡ ಮರಂಗೊ ಪತ್ತಕ್ಕೆ ಸಿಕ್ಕದ್ದ ನಮುನೆದು ನಮ್ಮ ಬೈಲಿಲಿ ಇತ್ತಡ. ಒಂದೊಂದು ಮರ ಒಂದೊಂದು ಮನೆ ಕಟ್ಟುಲೆ ಸಾಕಪ್ಪ ನಮುನೆ ಇತ್ತಡ. ಎಷ್ಟೋ ಉದ್ದಕೆ – ಹತ್ತು ಹದಿನೈದು ಕೋಲು ಉದ್ದಕೆ ನೂಲು ಹಿಡುದ ನಮುನೆಲಿ ಸರೂತಕೆ ಇತ್ತಡ. ಸಾರಡಿತೋಡಿನ ಕರೆಲಿ ಉದ್ದಕೂ ಬೆಣಚ್ಚೇ ಬೀಳದ್ದ ನಮುನೆ ಇತ್ತಡ!!
ಈಗ ಕಣ್ಣಿಂಗೆ ಕಾಂಬಲೂ ಸಿಕ್ಕ, ಅದೆಲ್ಲ ಎಲ್ಲಿ ಹೋತು ಹೇಳಿ ದೊಡ್ಡಮಾರ್ಗದಕರೆ ಮಿಲ್ಲಿನ ಇಬ್ರಾಯಿಯತ್ರೆ ಕೇಳೆಕ್ಕಷ್ಟೆ.ಹ್ಮ್, ಮರಂಗೊ ಇಪ್ಪಗ ಅದುವೇ ಈ ಅಂತರ್ಜಲವ ತುಂಬುವ ಹಾಂಗೆ ನೋಡಿಗೊಂಡು ಇತ್ತಡ.
ಮರಕ್ಕೆ ನಾಕು ಹನಿ ನೀರು ಬಿದ್ದರೆ ಅದರ ಬುಡಕ್ಕೆ ಹಾಕುತ್ತು. ಬರಾನೆ ಹರುದು ಹೋಪ ನೀರಿನ ಒಂದರಿ ರಜಾ ಹೊತ್ತು ನಿಂಬ ನಮುನೆ ಮಾಡಿ, ಅಲ್ಲೇ ಇಂಗುಸಿ ಬಿಡ್ತು. ಹಾಂಗಾಗಿ, ಒಂದು ಮರ ಇದ್ದರೆ ಸುಮಾರು ನೀರು ಇಂಗಿಯೇ ಹೋವುತ್ತಡ.

ಈಗ ಎಲ್ಲದಕ್ಕೂ ಮರವೇ ಆಯೆಕು. ಕೂಬಲೆ, ನಿಂಬಲೆ, ಮನುಗುಲೆ, ನೇಲುಲೆ – ಎಲ್ಲದಕ್ಕೂ ಮರವೇ.
ಮರಂಗೊ ನಾಶ ಆದ ಹಾಂಗೇ ಅಂತರ್ಜಲದ ಪ್ರಮಾಣ ಕೆಳ ಇಳುದತ್ತಡ..
~
ಅಂತರ್ಜಲವ ಪುನಾ ಜಾಸ್ತಿ ಮಾಡ್ಲೆ ಇಪ್ಪ ಚಳುವಳಿಯೇ ಈ ನೀರಿಂಗಿಸೋಣ..!!
ಅದು ಹೇಂಗೆ?
ಹಳೆಯ ನೀರಿನ ಆಶ್ರಯಂಗೊಕ್ಕೆ ಪುನಃ ಜೀವಕೊಡುವ ಮೂಲಕ,
ಹಳೆ ಕೆರೆಗಳ ತುಂಬುಸುವ ಮೂಲಕ,
ಹಳೆ ಕಟ್ಟಂಗಳ ಪುನಾ ಕಟ್ಟುವ ಮೂಲಕ,
ಹಳೇ ಗೆದ್ದೆಗಳ ಬೆಳೆಶುವ ಮೂಲಕ..
ದೊಡ್ಡಜಾತಿ ಮರದ ಸೆಸಿಗಳ ನೆಡುವ ಮೂಲಕ..
ಅದಲ್ಲದ್ದೇ, ಕೃತಕವಾಗಿ ಮಾಡಿದ ಇಂಗುಗುಂಡಿಗಳ ಮೂಲಕ!
~
ಇಂಗುಗುಂಡಿ:

ಕೆಂಪುನೀರು ಬಂದು ಗುಂಡಿಗೆ ಬಿದ್ದು ಎರ್ಕಿ ಭೂಮಿಗಿಳಿವ "ಇಂಗುಗುಂಡಿ"!

ಪಳ್ಳಂಗೊ,ಗೆದ್ದೆಗೊ,ಕೆರೆಗೊ, ತೋಡುಗೊ, ಮರಂಗೊ ಇತ್ಯಾದಿ ಎಲ್ಲವೂ ಕಮ್ಮಿ ಆದ ಕಾಲಲ್ಲಿ ಅಂತರ್ಜಲವ ತುಂಬುಸಲೆ ಹೊಸತ್ತೊಂದು ಆಶಾಕಿರಣ ಇದ್ದಡ – ಅದುವೇ ನಮ್ಮ “ಇಂಗುಗುಂಡಿ”.
ಪೋಡಿಗೆ ಇಂಗು ರಜಾ ಹಾಕಿರೆ ಲಾಯಿಕಪ್ಪದು – ಹೇಳಿದ ಅಜ್ಜಕಾನಬಾವ°.
ಹಲಸಿನಹಣ್ಣು ತಿಂದು ಮುಗಾತು… ಇನ್ನು ಪುನಾ ಪೆರಟ್ಟುಮಾತಾಡುದಕ್ಕೆ ತೊಂದರಿಲ್ಲೆ ಅವಂಗೆ!
~

ಹ್ಮ್, ಇಂಗುಗುಂಡಿ ಹೇಳಿರೆ – ಇದೇ ಮೊದಲಾಣ ಪಳ್ಳಂಗಳೋ – ತೋಡುಗಳೋ – ಮರಂಗಳೋ – ಮಾಡ್ತ ಕೆಲಸವ ಮಾಡ್ಲೆ ಇಪ್ಪ ಸಾದಾರಣ ಗುಂಡಿ.
ಇಷ್ಟೇ ದೊಡ್ಡ ಇರೆಕ್ಕು, ಇಂತಾ ಜಾಗೆಲೇ ಇರೆಕ್ಕು ಹೇಳಿ ಏನೂ ಇಲ್ಲೆಡ.
ಒಟ್ಟು ಭೂಮಿಗೆ ಬಿದ್ದ ನೀರು ಅಂತೇ ಹರ್ಕೊಂಡು ಸೀತ ಹೋಗಿ ಪುನಾ ಕಡಲು ಸೇರುವ ಮೊದಲು ಆ ನೀರಿನ ಭೂಮಿಗೆ ಇಂಗುಸೇಕು, ಎಡಿಗಾದಷ್ಟು ನೀರಿನ ತಗ್ಗುಸೇಕು ಹೇಳಿಗೊಂಡು ಇಪ್ಪ ಯೋಚನೆಯೇ ಈ ಇಂಗುಗುಂಡಿ.

ನೀರಿನ ಇಂಗುಸಿ ಇಂಗುಸಿ ಅಂತರ್ಜಲವ ದೊಡ್ಡಮಾಡುದರ್ಲಿ ಇದಲ್ಲದ್ದೆ ಸುಮಾರು ವಿಧಂಗೊ ಇದ್ದಡ.
ಈ ಎಲ್ಲ ವಿಷಯಂಗಳ ಬಗ್ಗೆ ಭಡ್ತಿರಾಧಣ್ಣ ಅಂದಿಂದಲೇ ಪೇಪರಿಲಿ ಬರೆತ್ತಾ ಇದ್ದವಡ. ‘ನೀರು-ನೆರಳು‘ ಹೇಳ್ತ ಹೆಸರಿಲಿ ಬತ್ತಡ ಅವರ ಈ ಶುದ್ದಿಗೊ. ಕೆಲವು ಶುದ್ದಿಗೊ ಪುಸ್ತಕವೂ ಆಯಿದಡ. ಸುಮಾರು ಜೆನ ತೆಗದು ಓದುತ್ತವಡ ಅದರ – ದೊಡ್ಡಭಾವ° ಹೇಳಿಗೋಂಡು ಹೋದ°…
~

ನಮ್ಮ ತರವಾಡುಮನೆ ರಂಗಮಾವಂಗೆ ಮೊನ್ನೆ ಬದಿಯಡ್ಕಲ್ಲಿ ಪಡ್ರೆಮಾವ° ಸಿಕ್ಕಿದ್ದವಡ.
ಹೀಂಗೇ ಮಾತಾಡುವಗ ಈ ವಿಚಾರಂಗೊ ಎಲ್ಲ ಗೊಂತಾಗಿ, ರಂಗಮಾವಂಗೆ ಕೊಶಿ ಕಂಡತ್ತಡ.

ಓಡಿಗೊಂಡು ಹೋಪ ನೀರಿನ ನೆಡಕ್ಕೊಂಡು ಹೋಗುಸಿ..
ನೆಡಕ್ಕೊಂಡು ಹೋವುತ್ತ ನೀರಿನ ನಿಂದುನಿಂದು ಹೋಗುಸಿ..
ನಿಂದುಗೊಂಡ ನೀರಿನ ಅಲ್ಲಿಗೇ ತಗ್ಗುಸಿ – ಹೇಳಿಕೊಟ್ಟವಡ ಪಡ್ರೆಮಾವ°.

ಅದಕ್ಕೆ ಸೀತ ಹೋಗಿ ಮುಂಡನತ್ರೆ ಗುಡ್ಡೆಲಿ, ತೋಟದ ಕರೆಲಿ ಅಲ್ಲಲ್ಲಿ ಕೆಲವು ಗುಂಡಿಗಳ ತೋಡ್ಳೆ ಹೇಳಿಕ್ಕಿ ಬಂದವಡ.

ಮಳೆಗಾಲ ಇದಾ, ಅವಕ್ಕೂ ಬೇರೆ ಕೆಲಸ ಇಲ್ಲೆ – ಹಾಂಗೆ ಕೂಡ್ಳೆ ಬಂದವಡ.
ಇಂದಿಂದ ತರವಾಡುಮನೆ ಜಾಗೆಲಿ ಅಲ್ಲಲ್ಲಿ ಇಂಗುಗುಂಡಿ ಕಾರ್ಯ ಸುರು ಆವುತ್ತಡ.
ಅಡಕ್ಕೆ ಕಳ್ಳುಲೆ ಬಂದ ಸಂಕಪ್ಪು ಯೇವದಾರು ಒಂದು ಗುಂಡಿಗೆ ಬೀಳ್ತದರ್ಲಿ ಸಂಶಯ ಇಲ್ಲೆ!ಪಡ್ರೆಮಾವನ ಒಟ್ಟಿಂಗೆ ನಮ್ಮ ದೊಡ್ಡಬಾವಂದೆ ಸುಮಾರು ದಿಕ್ಕಂಗೆ ಹೋಯಿದವಡ.
ಅವಿಬ್ರೂ ಅದೆಂತದೋ ಪೇಪರಿನ ಕೆಲಸಲ್ಲಿ ಎಲ್ಲ ಒಟ್ಟೀಂಗೆ ಇದ್ದಿದ್ದವಡ.
ನೀರಿನ ಒಳಿಶಿ ಬೆಳೆಶುವ ವಿಶಯಲ್ಲಿ ಸುಮಾರು ಚಿಂತನೆ ಮಾಡಿದ್ದವಡ. ಸುಮಾರು ತೋಡು, ಕಟ್ಟ, ಬಾವಿ, ಹೊಳೆ, ಅಣೆಕಟ್ಟು, ಗೋಣಿಕಟ್ಟುಗಳ ಮಾಡ್ತದರ ಪ್ರಾತ್ಯಕ್ಷಿಕೆ ಮಾಡಿದ್ದವಡ.
ಕಾನಾವು ಕೆರೆಯನ್ನೂ ಒಂದರಿ ನೋಡಿಕ್ಕಿಬಂದು, ಆ ಕೆರೆನೀರಿಲಿ ಮಾಡಿದ ಒಂದು ಗ್ಳಾಸು ಕಶಾಯ ಕುಡ್ಕೊಂಡು ಬಯಿಂದವಡ!
ಅದೇ ಸಮೆಯದ ಬನಿಯಾನಂಗಿ ಅಡ ಅವು ಹಾಕಿಂಡದು – ನೀರು ಉಳಿಸಿ ಹೇಳಿ ಬರಕ್ಕೊಂಡು ಇದ್ದದು ಅದನ್ನೇ ಅಡ!!
– ಹೆರಡ್ಳಪ್ಪಗ ದೊಡ್ಡಕ್ಕ ಎದುರಿಲ್ಲದ್ದು ಒಳ್ಳೆದಾತು. ಈ ಬನಿಯಾನಂಗಿ ಕಾಣದ್ದರೆ ಈ ಶುದ್ದಿಯೇ ಬತ್ತಿತಿಲ್ಲೆ! 😉
~
ಆಗಲಿ, ಊರಿಲಿ ರಜ ನೀರಿನ ವಿಚಾರಲ್ಲಿ ಪ್ರಗತಿ ಆವುತ್ತಾ ಇದ್ದು.
ಈಗಾಗಳೇ ಸುಮಾರು ಮಳೆ ಬಂದು ಬಿಟ್ಟತ್ತು. ಇನ್ನೂ ಬಪ್ಪದಿದ್ದು. ತಡವಾಯಿದಿಲ್ಲೆ.
ನವಗೆ ಆರಿಂಗೆಲ್ಲ ಅವಕಾಶ ಇದ್ದೋ – ಅವೆಲ್ಲೊರುದೇ ಒಂದೊಂದಾರೂ ಇಂಗುಗುಂಡಿ ತೆಗವ°,
ಎಡಿಗಾದಷ್ಟು ನೀರಿನ ಇಂಗುಸಿ, ನಮ್ಮಂದ ಮುಂದಾಣೋರಿಂಗೂ ಅಂತರ್ಜಲ ಒಳಿತ್ತ ಹಾಂಗೆ ನೋಡಿಗೊಂಬ° – ಹೇಳಿ ಮಾತಾಡಿಗೊಂಡು ಹಲಸಿನಹಣ್ಣು ತಂದದಕ್ಕೆ ಒಂದು ಕೊಶಿಯ ಕೊಟ್ಟಿಕ್ಕಿ ಅಲ್ಲಿಂದ ಹೆರಟೆಯೊ°…
~
ನಮ್ಮ ಅಜ್ಜಂದ್ರ ಕಾಲಲ್ಲಿ ಪ್ರಾಕೃತಿಕ ಇಂಗುಗುಂಡಿಗೊ ಬೇಕಾದಷ್ಟು ಇತ್ತು.
ಅದರ ಮುಚ್ಚಿ ಅಭಿವುರ್ದಿ ಮಾಡುಲೆ ಹೆರಟು ಈಗ ನಾವೇ ಗುಂಡಿ ಮಾಡೆಕ್ಕಾಯಿದು.
ಮೊದಲು ಇದ್ದದರ ಒಳುಶಿಗೊಂಡಿದ್ದರೆ ಈ ಬರಗಾಲ ಬತ್ತಿತೋ?

ಕೆರೆ, ಪಳ್ಳ ಎಲ್ಲ ಮುಚ್ಚಿ ತೋಟ ಮಡುಗಿದ್ದು ಸಾಕು. ಬರೇ ತೋಟವನ್ನೇ ಮಾಡಿರೆ ಅದಕ್ಕೆ ನೀರೆಲ್ಲಿಂದ ಭಾವ?
ಈಗಳೇ ನಾಕೈದು ಬೋರು ತೆಗದರೂ ನೀರು ಸಿಕ್ಕದ್ದಂತಾ ಪರಿಸ್ಥಿತಿ ಬಯಿಂದು. ಮುಂದೆ ಹೇಂಗಕ್ಕು?!
ಪೊಟ್ಟುಬೋರು ಇದ್ದರೆ ಅದಕ್ಕೆ ಅಟ್ಟಿನಳಗೆ ಮುಚ್ಚುವ ಬದಲು ಮಳೆನೀರು ತುಂಬುಸುವೊ°. ಡಾಗುಟ್ರಕ್ಕನ ಇಂಜೆಕ್ಷನಿನ ಹಾಂಗೆ ಸೀತ ನೆಲಕ್ಕದ ಅಡಿಯಂಗೆ ನೀರು ಹೋಗಲಿ.
ಒಳುದ ಕೆರೆಗಳ, ಪಳ್ಳಂಗಳ ಎಲ್ಲ ಹಾಂಗೇ ಬಿಡುವ° – ಭೂಮಿಯೊಳದಿಕೆ ನೀರು ಹೋಪಷ್ಟು ಹೋಗಲಿ.

ತೋಟ ಇಪ್ಪವರ ಹತ್ತರೆ ಸಾಮಾನ್ಯ ಆದರೂ ಗುಡ್ಡೆ ಇದ್ದೇ ಇಕ್ಕು. ಅಲ್ಲಿ ಇಂಗುಗುಂಡಿ ತೆಗವ° ಒಟ್ಟಿಂಗೆ ಮರಂಗಳನ್ನುದೇ ಬೆಳೆಶುವ.
ಮರದ ಇಬ್ರಾಯಿಯ ಕಿಸೆ ತುಂಬುಸಿ ಗುಡ್ಡೆ ಬೋಳುಸುದರ ಇನ್ನಾದರೂ ನಿಲ್ಲುಸಿರೆ ಒಳ್ಳೆದು! ಅಲ್ಲದೋ? ಏ°?

ಈ ಸೋಣೆಯ ಕಾಲಲ್ಲಿ ಒಂದು ಒಳ್ಳೆ ಕಾರ್ಯದ ಚಿಂತನೆ ಅಪ್ಪ ಹಾಂಗೆ ನೋಡಿಗೊಂಡ್ರೆ ಬೈಲು ಹಸಿರಾಗಿ ಇಕ್ಕು.
ಎಂತ ಹೇಳ್ತಿ?

ಒಂದೊಪ್ಪ: ಭೂಮಿಲಿ ನೀರು ಒಳುದರೆ, ನಾವು ಭೂಮಿಲಿ ಒಳಿಗು!

ಸೂ: ಚಿತ್ರಂಗೊ-ಪಟಂಗೊ ಇಂಟರುನೆಟ್ಟಿಂದ ಸಿಕ್ಕಿದ್ದಡ, ಪೆರ್ಲದಣ್ಣ ಹೇಳಿದ°.

ಒಪ್ಪಣ್ಣ

   

You may also like...

52 Responses

 1. amma says:

  sooper aidu..gurugala aashhervaadavu sikkittu mattu kushi aatu.
  ondoppa laikaidu.neeru ingusuva oppanna sesi neduva.
  abbe tampagiddare naavu aarogya nemmadili badukkule edigu.
  danavannu bhoomiyannu chendakke noduva.
  avara runa ellastadaru teerusekku naavu manujaraada kaarana chendakke poshane maaduva.
  matte ellavu ondonde kelasa odaguttu.naavu santhoshavagi badukkuva.
  aagada oppanno.good luck.

  • { danavannu bhoomiyannu chendakke noduva.}
   ಅಪ್ಪು ಅಮ್ಮ..
   ದನವೂ, ಭೂಮಿಯೂ ಒಂದಕ್ಕೊಂದು ಅಂತಃಸಂಬಂಧಿ.
   ಎರಡುದೇ ಚೆಂದಕೆ ಇದ್ದರೆ ಮಾಂತ್ರ ನಾವು ಮರಿಯಾದಿಲಿ ಬದುಕ್ಕುಲೆಡಿಗು.
   ಅಲ್ಲದೋ?

 2. ಶ್ರೀದೇವಿ ವಿಶ್ವನಾಥ್ says:

  ಒಪ್ಪಣ್ಣನ ಈ ವಾರದ ಶುದ್ದಿಯೂ ಸಕಾಲಿಕವೇ!! ಯಾವತ್ರಾಣ ಹಾಂಗೆ ಒಪ್ಪ ಒಪ್ಪವೇ!!!
  ನವಗೆ ಸಾಕ್ಷರತೆ ಇದ್ದು ಹೇಳಿ ಗ್ರೇಶಿದರೆ ಸಾಲ, ಯಾವುದರಲ್ಲೆಲ್ಲಾ ಸಾಕ್ಷರತೆ ಇದ್ದು ಹೇಳಿ ನೋಡಿಗೊಳ್ಳೆಕ್ಕು ಅಲ್ಲದಾ? ಅದರಲ್ಲಿ ಒಂದು ಜಲಸಾಕ್ಷರತೆದೆ.. ಈ ಶಿಕ್ಷಣವ ಯಾವುದೇ ಯುನಿವರ್ಸಿಟಿ ಕೊಡ್ತಿಲ್ಲೆ, ನಾವೇ ಅನುಭವಲ್ಲಿ ಪಡವಂಥದ್ದು ಆದರೆ ಇನ್ನೊಬ್ಬಂಗೂ ಹೇಳಿ ಕೊಡುವಂಥದ್ದು. ಅದರಲ್ಲೂ ನಮ್ಮ ಮಕ್ಕೊಗೆ ಅಗತ್ಯಲ್ಲಿ, ನೀರಿನ ಎಲ್ಲಾ ಮೂಲಂಗಳ ಬಗ್ಗೆಯುದೆ, ಅದರ ಉಪಯೋಗಿಸುವ ರೀತಿಯುದೆ, ಅದರ ಒಳಿಶುವ ಬಗೆಯುದೆ ಖಂಡಿತವಾಗಿ ಹೇಳೆಕ್ಕು. ನಾವು ಇಂದು ಉಪಯೋಗಿಸಿ ಪೂರಾ ಖಾಲಿ ಮಾಡಿದರೆ ನಾಳೆ ನಮ್ಮ ನಂತರದ ತಲೆಮಾರುಗೊಕ್ಕೆ ನೀರೆಲ್ಲಿಂದ? ಅವು ಜೀವನ ಮಾಡುದು ಹೇಂಗೆ?
  ಈಗ ಸರ್ಕಾರದ ಆದೇಶಲ್ಲಿ ಶಾಲೆಗಳಲ್ಲಿಯೂ ಮಳೆನೀರು ಕೊಯ್ಲು ಮಾಡೆಕ್ಕು ಹೇಳಿ ‘ಸುವರ್ಣ ಜಲ ಯೋಜನೆ’ ಮಾಡಿದ್ದವು. ಪಂಚಾಯತಿಂದ ಬಂದ ಜೆನಂಗ ಮಾಡಿಂಗೆ ಪೈಪು ಮಡುಗಿ, ಟಾಂಕಿ ಕಟ್ಟಿಕ್ಕಿ ಬಿಲ್ಲು ಮಾಡ್ಸಿಗೊಂಡು ಹೋವುತ್ತವು. ಮಳೆ ಬಪ್ಪಗ ಆ ನೀರು ಟಾಂಕಿಗೆ ಬೀಳುತ್ತಾ ಇಲ್ಲೆಯಾ, ಅದರ ಮಕ್ಕ ಉಪಯೋಗಿಸುತ್ತವಾ ಇಲ್ಲೆಯಾ ಹೇಳಿ ನೋಡ್ಲೆ ಆರೂ ಬತ್ತವಿಲ್ಲೆ. ಹೀಂಗಿಪ್ಪಲ್ಲಿ ನಾವು ಜವಾಬ್ದಾರಿ ಮಕ್ಕೊಗೆ ಹೇಳಿ ಕೊಡದ್ದರೆ ಮಕ್ಕೊಗೆ ಆ ಕಾಳಜಿ ಬೆಳೆಯ. ಮುಂದೆ ಅವು ಆ ಜಾಗ್ರತೆಯ ಅವರ ನಂತರದವಕ್ಕೆ ಹೇಳೆಕ್ಕಪ್ಪದು ಅಲ್ಲದಾ?
  ಎನ್ನ ಮಾವನೋರ ದೂರದೃಷ್ಟಿಲಿ ಕಟ್ಟಿದ ಕಾನಾವಿನ ಕೆರೆಂದಾಗಿ ಸುಮಾರು ಜೆನಕ್ಕೆ ಪ್ರಯೋಜನ ಆಯಿದು. ಅವು ಅಂದು ಹಾಕಿದ ಜಲನಿಧಿಯ ಮಾದರಿಂದಾಗಿ ಇಂದು ಎಂಗೊಗೆದೆ ಮುಂದಾಣವಕ್ಕೆ ನೀರು ಒಳಿಶೆಕ್ಕು ಹೇಳುವ ಸಂದೇಶ ಸಿಕ್ಕಿದ್ದು. ಎಂಗೊ ಇಪ್ಪಲ್ಲಿ ಎಂಗೊಗೆ ಎಡಿಗಾದಷ್ಟು ಮಾಡ್ತಾ ಇದ್ದೆಯಾ°. ಇದಕ್ಕೆ ಅಂತ್ಯ ಇಲ್ಲೆನ್ನೆ. ನಮ್ಮ ಮುಂದಾಣ ಪೀಳಿಗೆಗೆ ಪ್ರಾಕೃತಿಕ ಸಂಪತ್ತನ್ನೂ ಕಟ್ಟಿ ಮಡುಗುವ° ಅಲ್ಲದಾ?

  • { ಎನ್ನ ಮಾವನೋರ ದೂರದೃಷ್ಟಿಲಿ ಕಟ್ಟಿದ ಕಾನಾವಿನ ಕೆರೆಂದಾಗಿ }
   – ನಿಜವಾಗಿಯೂ ಬೈಲಿನೋರೆಲ್ಲ ನೋಡೆಕ್ಕಾದ ಅದ್ಭುತ ಸೃಷ್ಟಿ ಅದು.

   ಅಕ್ಕಾ°, ಎಂಗಳ ಎಲ್ಲೋರ ಒಂದರಿ ಅಲ್ಲಿಗೆ ಕರಕ್ಕೊಂಡು ಹೋವುತ್ತಿರೋ? ಬಪ್ಪ ಉರಿಬೇಸಗೆಲಿ?
   ಮನಸ್ಸುತುಂಬ ಈಜಲೆ!

   • ಶ್ರೀದೇವಿ ವಿಶ್ವನಾಥ್ says:

    ಖಂಡಿತ ಅಕ್ಕು ಒಪ್ಪಣ್ಣ. ಅಕ್ಕಂಗೆ ಇದು ಕೊಶಿಯ ವಿಷಯವೇ!!!
    ಎಲ್ಲೋರು ಯಾವಾಗ ಬತ್ತಿ ಹೇಳಿದರೆ ಆತು.. ಹೋಪೋ°

   • ಡಾ.ಸೌಮ್ಯ ಪ್ರಶಾಂತ says:

    ಅಪ್ಪು ಒಪ್ಪಣ್ಣ ಎಲ್ಲರೂ ಒಂದರಿ ನೋಡೆಕ್ಕಪ್ಪ ಕೆರೆ.. ಅದ್ಭುತ ಇದ್ದು.. 🙂

 3. ಬೈಲಿಂದ ಅಶೋಕೆ ಹೋತ್ಸು ನಾವು.. ಇತ್ತ ಸರಿ ಬಪ್ಪಲೆ ಆಯಿದಿಲ್ಲೆ.. ಬಂದರು ಒಪ್ಪ ಓದುವಷ್ಟು ಪುರುಸೋತ್ತು ಇತ್ತಿಲ್ಲ್ಲೆ.. ನೆಗೆ ಬಾವನ ಮಾತಾಡ್ಸಿ ಹೋಪಷ್ಟೆ ಇದ್ದದು.
  ನೀರಿಂಗಿಸುದು ಮಾಡದ್ರೆ ನೀರಿಲ್ಲೆ ಹೇಳ್ತ ಕಾಲ ಬಪ್ಪಾಂಗೆ ಕಾಣ್ತು ಬಾವ.. ಖಂಡಿತ ನೀರೊಳುದರೆ ಮಾಂತ್ರ ನಾವು ಒಳಿಗು..
  ಆ ಕಾರ್ಯವ ಎಲ್ಲೊರು ಸೇರಿ ಮಾಡುವಾ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *