ದೇಶದ ಮನಸ್ಸು ಸ್ವಚ್ಛ ಆದರೆ ದೇಶವೇ ಸ್ವಚ್ಛ ಅಕ್ಕು…

ಮಾರ್ಣೆಮಿಗೆ ಹೊನ್ನಪ್ಪು ಕೊರಗ್ಗನ ವೇಷ ಹಾಕಿ ದೈವಸೇವೆ ಮಾಡ್ತರ ಬಗ್ಗೆ ನಾವು ಮಾತಾಡಿದ್ದು.
ನವರಾತ್ರಿಯ ದಿನಲ್ಲಿ ದೇವಸ್ಥಾನಲ್ಲಿ ಕೊರಗ್ಗನ ವೇಷಕೊಣಿಯಲೆ ಆರಂಭಮಾಡಿ, ದಿನಇಡೀ ಊರಿನ ಮನೆಮನೆಗಳಲ್ಲಿ ತಿರುಗಿ, ಹೊತ್ತೋಪಗ ಪುನಾ ದೇವಸ್ಥಾನಲ್ಲಿ ಬಿರಿತ್ತ ಸಂಗತಿ ಅದು.
ಈಗ ಹೊನ್ನಪ್ಪುವೂ ಇಲ್ಲೆ, ಕೊರಗ್ಗನ ವೇಷವೂ ಇಲ್ಲೆ; ಬಿಡಿ.
ಅಂತೂ, ಅದು ಅದರದ್ದೇ ಆದರೀತಿಲಿ ದೇವರ ನೆಂಪುಮಾಡಿ ಗೊಂಡು ಇದ್ದತ್ತು ಹೇಳ್ತವು ನಿಜವೇ.
ಅದಿರಳಿ.
~
ಮೊನ್ನೆ ಈ ತಿಂಗಳ ಎರಡ್ಣೇ ತಾರೀಕಿಂಗೆ ಒಂದು ಗವುಜಿ ಇದ್ದತ್ತು.
ಎಂತರ ಗವುಜಿ? ಹುಟ್ಟಿದ ದಿನದ ಗವುಜಿ.
ಆರು ಹುಟ್ಟಿದದಿನ? ಆ ದಿನ ಮಹಾತ್ಮಾ ಗಾಂಧೀ ಹುಟ್ಟಿದ ದಿನ ಆಡ.
ಹುಟ್ಟಿದ ದಿನ ಆಚರಣೆ ಮಾಡ್ಳಾಗ – ಹೇಳ್ತದು ಕೆಲವು ಜೆನರ ವಾದ ಆದರೂ; ಕೊಶಿಯ ಕಾರ್ಯಕ್ರಮಂಗೊ, ಸಂಸ್ಕೃತಿ ನೆಂಪುಮಾಡುವ ಕಾರ್ಯಕ್ರಮಂಗೊ ಏವ ಊರಿಂದಾದರೂ ಮಾಡ್ಳಕ್ಕು – ಹೇಳ್ತದು ಕೆಲವು ಜೆನರ ತಿಳಿವಳಿಕೆ.
ಹಾಂಗಾಗಿ ಗಾಂಧೀಜಿ ಆಗಲಿ, ಕುಂಞಿಮಾಣಿ ಆಗಿರಳಿ, ಹುಟ್ಟಿದ ಗವುಜಿ ಗವುಜಿಯೇ! 😉
ಗವುಜಿಯ ಆಚರಣೆ ಮಾಡ್ತ ರೀತಿಯೇವದು ಹೇಳ್ತದು ಇಪ್ಪದು ಅಷ್ಟೆ.
ಪೂರ್ತಿ ಪಾಶ್ಚಾತ್ಯ ರೀತಿಲಿ ಮಾಡುವ ಸಂಗತಿ ಬಿಟ್ಟು, ನಮ್ಮ ಭಾರತೀಯತೆಯನ್ನುದೇ ಅಳವಡುಸಿ ಗೊಂಡರೆ – ಮುಂದಕ್ಕೊಳ್ಳೆದು ಅಲ್ದೋ?
ಹಾಂಗಾಗಿಯೇ, ಮೋದಿ ಅಜ್ಜ ಈ ಸರ್ತಿ ಗಾಂಧಿ ಅಜ್ಜನ ಬರ್ತುಡೇಯ ವಿಶೇಷ ರೀತಿಲಿ ಆಚರಣೆಮಾಡಿದ್ಸು.
ಅದು ಹೇಂಗೆ?
ಅದುವೇ “ಸ್ಚಚ್ಛಭಾರತ” ಅಭಿಯಾನ.

~

ಸ್ವಚ್ಛ ಭಾರತ ಹೇದರೆ ಎಂತರ? ಪೂರ ತೊಳದು ಕೌಂಚಿ ಹೆಟ್ಟೇಕೋ – ಕೇಳಿದೆ ಕುಶಾಲಿಲಿ, ಕಂಪದ ಭಾವಯ್ಯನ ಹತ್ತರೆ.
ಅವು ಮೊನ್ನೆ ಊರಿಂಗೆ ಬಂದೋರು ಒಂದುಗಳಿಗೆ ಕಾಂಬಲೆ ಸಿಕ್ಕಿತ್ತಿದ್ದವು, ಸುಳ್ಯ ಧರ್ಮಾರಣ್ಯಲ್ಲಿ.
ಹೀಂಗೇ ಮಾತಾಡುವಾಗ ಈ ಅಭಿಯಾನದ ಸಂಗತಿ ಬಂದ ಕಾರಣ ಕೇಳಿದೆ.
ಅದಕ್ಕೆ ಅವು ಹೇಳಿದವು, ಭಾರತ ಸ್ವಾಭಾವಿಕವಾಗಿ ಇದ್ದಲ್ಲಿ ಸ್ವಚ್ಛವಾಗಿಯೇ ಇದ್ದು. ಎಲ್ಲಿ ಆಧುನಿಕಜೀವನ ಸುರು ಆಯಿದೋ, ಅಲ್ಲಿ ಸ್ವಚ್ಛಮಾಡೇಕಾದ್ಸು – ಹೇದು.
~
ಕಂಪದ ಕನ್ನಡ್ಕಬಾವಯ್ಯ ಹೇದರೆ ಒಪ್ಪಣ್ಣ ಸಣ್ಣಇಪ್ಪಾಗಳೇ ಅಮೇರಿಕಕ್ಕೆ ಹೋಗಿ ಬಂದೋನು. ವಿಮಾನಲ್ಲಿ ಹೋದ್ಸಡಾ. ಅಂಬಗ ಅದು ಕೇಳುಲೇ ದೊಡ್ಡ ವಿಷಯ ಇದಾ. ಹೋಪಲೆ ಒಂದೇಸರ್ತಿ ವಿಮಾನಕ್ಕೆ ಹಾರ್ಲೆ ಬಚ್ಚುದಕ್ಕೆ ಎಡಕ್ಕಿಲಿ ನಿಂದುಇಳುದು ಹೋದ್ಸಾಡ. ಮರದಿನ ಅಲ್ಲ, ಮತ್ತಾಣದಿನ ಮಧ್ಯಾಹ್ನ ಅಲ್ಲಿಗೆತ್ತಿದ್ದಾಡ. ಅಲ್ಯಾಣ ಮಧ್ಯಾನ್ನ ಹೇದರೆ ಇಲ್ಯಾಣ ನೆಡುಇರುಳಾಡ.
ಅಲ್ಲಿ ಇರುಳು ಆಗಿದ್ದ ಇಲ್ಯಾಣಹಗಲು ಪೋನುಮಾಡಿಗೊಂಡು ಇದ್ದದಾಡ.
ಇದೆಲ್ಲ ಹಳೇಕಾಲಲ್ಲಿ ಕೇಳಿದ ಶುದ್ದಿಗೊ.
ಅದಾದಮತ್ತೆ ಬೈಲಿಂದ ಸಾವಿರಾರು ಜೆನಅತ್ಲಾಗಿ ಹೋಗಿ ಬಂದರೂ ಕಂಪಭಾವಯ್ಯ ಹೋದಕತೆ ಇನ್ನೂ ಸರೀನೆಂಪಿದ್ದು.
ಹೋದ್ಸು ಮಾಂತ್ರ ಅಲ್ಲ, ಹೋಗಿ ಬಂದಿಕ್ಕಿ ಹೇಳಿದ ಹಲವುಶುದ್ದಿಗಳೂ ನೆಂಪಿದ್ದು.
ಅದರ್ಲಿ ಒಂದು, ಸರೀ ನೆಂಪಿದ್ದು.

ಕಂಪಭಾವನ ಮನೆ ಇರ್ಸು ಕಣ್ಯಾರು ಕಾಡಿನ ಕರೆಯ ಊರಿಲಿ ಆದ ಕಾರಣ, ಕಾಡಿಂದ ಇಳುದು ಬತ್ತ ಹಲವಾರುಸಂಗತಿಗೊ ಇವರ ಜಾಗೆದಾಂಟಿಯೇ ನಾಡಿಂಗೆಎತ್ತುದು.
ಬಳ್ಳಿ, ಗೆಡು, ಕಾಟು ಸೆಸಿಗೊ ಮಾಂತ್ರಅಲ್ಲ, ಹಾವು, ಜೆಂತುಗೊ, ನೀರಒರತ್ತೆ – ಎಲ್ಲವುದೇ ಇವರ ತೋಟದಕರೆಲಿ ಕಾಂಬಲೆ ಸಿಕ್ಕುಗು. ಕಾಡಿಂದ ಹೆರ ಸಮಲುತ್ತ ಬಗೆದು.
ದಾರಿ ನೆಡವೋರಿಂಗೆ ನೀರಿಂಗೆ ಮಾರ್ಗದ ಕರೆತೋಡು ಇದ್ದನ್ನೇ. ಬಚ್ಚುತ್ತರೆ ಕಾಲು ನೀಡಿ ಕೂದುಗೊಂಬಲೆ ತೋಡಿನ ಕರೆ ಮಾರ್ಗ ಇದ್ದನ್ನೇ.
ಮಳೆಗಾಲಲ್ಲಿ ಅಂತೂ, ಇವರ ಮನೆಗೆ ಹೋವುತ್ತ ಮಾರ್ಗಕ್ಕೆ ತೋಡುಸಮಲಿ, ನೀರುತುಂಬಿ, ಇಡೀ ಊರೇ ಒಂದು ದ್ವೀಪದ ಹಾಂಗಪ್ಪದಿದ್ದು.
ಮಾರ್ಗ ಇದ್ದು, ಗಂಡಿ ಗುಂಡಿದು. ನೆಡದು ಹೋವುತ್ತರೂ, ಸೈಕ್ಕಾಲುಮೆಟ್ಟುತ್ತರೂ, ವಾಹನಹೋವುತ್ತರೋ – ಅದರ್ಲೇಆಯೇಕಟ್ಟೆ.
ವಾರಗಟ್ಳೆ ಮಳೆಇದ್ದರೆ ಮತ್ತೆ ಕೇಳುದೇಬೇಡ, ಶಂಕರಣ್ಣನ ಜೀಪುಮಾಂತ್ರ ಹೋಕಷ್ಟೆ.
ಮಳೆ ಬಿಟ್ಟಮತ್ತೆ ಬೆಳ್ಳಂದ ತುಂಬಿದ ಕಸವುಕೋಲುಗೊ ಇಡೀಊರಿಲಿ ಹನಿಯಾ ಸಮಯ ಇಕ್ಕದು.
~

ಅಮೇರಿಕಲ್ಲಿಪ್ಪಾಗಳೂ – ಈ ಭಾವಯ್ಯನ ಮನೆ ಇದ್ದದು ಒಂದು ಕಾಡಕರೆಲಿಆಡ.
ಆದರೆ, ಕಂಪಲ್ಲಿ ಇದ್ದ ಪರಿಸ್ಥಿತಿ ಅಲ್ಲಿ ಇತ್ತಿಲ್ಲೆ.
ಸರಿಯಾದ ನಾಜೂಕಿನ ಮಾರ್ಗ, ಕಾರು-ಲೋರಿ ಹೋವುತ್ತ ನಮುನೆದು.
ಮಾರ್ಗದ ಕರೆಲಿ ನೆಡದು ಹೋವುತ್ತೋರಿಂಗೆ ಪ್ರತ್ಯೇಕ ದಾರಿ.
ಅದರಿಂದ ಕರೆಲಿ ಸೈಕ್ಕಾಲು ಮೆಟ್ಟುತ್ತೋರಿಂಗೆ ದಾರಿ. ಈ ಮಾರ್ಗ-ದಾರಿಗೊ ಹಸೆಹಾಕಿ ಮನುಗುತ್ತಷ್ಟು ನೊಂಪು.
ಮಳೆ ಬಂದರೆ ಅದರ ನೀರು ಹೋಪಲೆ ಪ್ರತ್ಯೇಕ ದಾರಿ. ಕುಡಿತ್ತ ನೀರು ಬಪ್ಪಲೆ ಪ್ರತ್ಯೇಕ ದಾರಿಗೊ. ಬಚ್ಚಿ ಅಪ್ಪಗ ಕೂಪಲೆ ಕಲ್ಲಿನಬೆಂಚು ಪ್ರತ್ಯೇಕ.
ಕೂದಿಪ್ಪಾಗ ಆಸರಿಂಗೆ ಕುಡಿಯಲೆ ಶುದ್ಧನೀರು ಬೇಕಾರೆ ಅದು ಪ್ರತ್ಯೇಕ ವೆವಸ್ಥೆ.
ಉದಾಸ್ನ ಅಪ್ಪಗ ತಿಂದತಿಂಡಿಗಳ ಶೇಷ ಇಡ್ಕಲೆ ಅದರದ್ದೇ ಆದಕಸವಿನ ಪೆಟ್ಟಿಗೆಗೊ.
ಅದಕ್ಕೆ ಸರಿಯಾಗಿ ಮುಚ್ಚಿಪ್ಪ ವೆವಸ್ಥೆ.
ಕಸವಿನಪೆಟ್ಟಿಗೆಗೊ ಅಂಬಗಂಬಗ ಶುದ್ಧಮಾಡ್ಳೆ ಪ್ರತ್ಯೇಕ ಜೆನಂಗೊ.
ದಾರಿಕರೆಲಿ ಹೂಗಿನ ಗೆಡುಗೊ; ಆದರೆ ಕೊಯಿದು ಸೂಡ್ಳೆ ಇಲ್ಲೆ – ಹಾಂ!
ಅಲ್ಲಿ ಹಾಂಗಿದ್ದು ಹೇಳಿರೆ ಸಾಲ, ಅಲ್ಲಿ ಹಾಂಗೇ ಬದ್ಕೇಕು – ಹೇಳಿಯೂ ಲೆಕ್ಕವೇ ಇದಾ!
ಅಲ್ಲಿ ವಾಸ ಇಪ್ಪೋರುದೇ ಅದೇ ನಮುನೆಲಿ ಬದ್ಕೇಕಾವುತ್ತು.

ಅದೊಂದು ಜೀವನಶೈಲಿ.
ಆ ಜೀವನಶೈಲಿಂದಾಗಿ ಆ ಊರು ಹಾಂಗಾತು, ಅಷ್ಟು ಮನಾರಕ್ಕೆ ಬೆಳದತ್ತು – ಹೇಳ್ತದು ಕಂಪ ಭಾವನ ಅಭಿಪ್ರಾಯ.

ಸ್ವಚ್ಛ ಭಾರತದ ಮುದ್ರೆ!!

ಸ್ವಚ್ಛ ಭಾರತದ ಮುದ್ರೆ!!

~
ಈಗ ಕಂಪಭಾವ ಬೆಂಗ್ಳೂರಿಲಿ ಇರ್ಸು, ಹಲವೊರಿಷಆತು.
ಅವರ ಬೆಂಗ್ಳೂರು ಮನೆಕರೆಲಿ ಒಂದು ಕೆರೆ ಇದ್ದಾಡ – ದೊಡಾ ಸರೋವರದ ನಮುನೆದು.
ಅದರ ಕರೆಲಿ ಸಣ್ಣಕಾಡು.
ಕಾಡಿನ ಎಡಕ್ಕೆಡಕ್ಕಿಲಿ ಸಿಮೆಂಟಿಲಿ ಮಾಡಿದ ದಾರಿಗೊ. ಅದರ್ಲಿ ಅಲ್ಲಲ್ಲಿ ಸಿಮೆಂಟಿನ ಬೆಂಚುಗೊ.
ಬೆಂಗ್ಳೂರಿಲಿ ಹೀಂಗಿರ್ಸಕ್ಕೆ ಪಾರ್ಕು ಹೇಳುದಿದಾ.
ಉದೆಕಾಲಕ್ಕೆ ಓಡ್ಳೆ ಬತ್ತಜೆನಂಗೊ, ಹೊತ್ತೋಪಗ ಗಾಳಿತಿಂಬಲೆ ಬತ್ತಜೆನಂಗೊ, ಅವರನಾಯಿಗೊ – ಎಲ್ಲೋರುದೇ ಸೇರಿ ಒಟ್ಟು ಗೌಜಿಗದ್ದಲ ಆವುತ್ತಾಡ.
ಇರಳಿ ಸಾರಇಲ್ಲೆ. ಆದರೆ, ಆ ಗೌಜಿ ಬಿರಿವಾಗ ಒಂದಷ್ಟು ಕುರೆಕಸವಿನ ಬಿಟ್ಟಿಕ್ಕಿ ನೆಡೆತ್ತವಾಡ ಆ ಕಾಡಿಲಿ.
ವಾರಕ್ಕೊಂದರಿ ಹೋಪ ಕಂಪಭಾವಂಗೆ ಆ ಕಸವು ನೋಡಿ ಬೇಜಾರಾವುತ್ತಾಡ.
ಚೇ, ಅಮೇರಿಕದ ಕಾಡಿನಕರೆಲಿ ಇರ್ಸಹಾಂಗೆ ಏಕೆ ನಮ್ಮ ಊರುದೇ ಅಪ್ಪಲಾಗ – ಹೇದು ಯೇವತ್ತೂ ಅನುಸಿಗೊಂಡು ಇತ್ತಾಡ.
~

ಅಪುರೂಪಕ್ಕೆ ಒಂದೊಂದರಿ ಅವು ಊರಿಂಗೆ ಬಪ್ಪದಿದ್ದು.
ಕಾಡಕರೆಯ ಕಂಪ ಅವರ ಬಾಲ್ಯಲ್ಲಿ ಹೇಂಗಿದ್ದತ್ತೋ,ಈಗಳೂ ಹಾಂಗೇ ಇಕ್ಕು ಅವು.
ಕಿರಿಂಚಿಮಾರ್ಗಲ್ಲಿ ನೆಡಕ್ಕೊಂಡು ಹೋಗಿ, ತೋಟದಕರೆಲಿ ಬೆಲ್ಲಂತೊಟ್ಟು, ಕಿಸ್ಕಾರ ಹೂಗುಕೊಯಿದು ತಿಂದುಗೊಂಡು ಇಪ್ಪಾಗ ಅಮೇರಿಕದ ಕೃತಕ ಜೀವನಂಗೊ ನೆಂಪುಮಾಡಿ ಹೋವುತ್ತಾಡ.
ಅಮೇರಿಕಲ್ಲಿ ಎಲ್ಲ ಸಿಮೆಂಟು ಹಾಕಿ ಕೃತಕತೆ ತುಂಬುಸಿದ್ದವು. ಇನ್ನು ಅದರ ಚೆಂದಲ್ಲಿ ಒಳಿಶಿಗೊಂಡು ಬರೆಕ್ಕಾರೆ ಅದರ ಮನಾರಮಾಡದ್ದೆ ನಿಮುರ್ತಿ ಇಲ್ಲೆ!
ಇಲ್ಲಿ ಹಾಂಗಲ್ಲ, ಎಲ್ಲವೂ ಸಹಜ, ಸಂಪೂರ್ಣ ಸ್ವಾಭಾವಿಕ. ಪ್ರಕೃತಿಯ ಇದ್ದ ಹಾಂಗೇ ಬಿಟ್ರೆ ಅದೇ ಚೆಂದ.
ಅಲ್ಲಿಗೆ ಅದೇಚೆಂದ, ಇಲ್ಲಿಗೆ ಇದೇ ಚೆಂದ – ಹೇದು ಉದ್ದ ಉಸುಲುಬಿಡ್ತವು ಒಂದೊಂದರಿ.
~
ಎಲ್ಲ ಊರುಗಳೂ ಹಾಂಗೇ ಇದ್ದವೋ? ಇಲ್ಲೆ. ಈಗ ಎಲ್ಲಾ ದಿಕ್ಕೆ ಪೇಟೆ ಕಾಲು ಮಡಗಿದ್ದು ಹೇದು ಕಂಪ ಭಾವಂಗೆ ಅನುಸುಲೆ ಇದ್ದು.
ಮದಲಾಣ ಹಸಿರಿನ ಕಾಡು-ಬೈಲುಗಳ ಜಾಗೆಲಿ ಈಗ ಮನೆಗಳೂ-ಅಂಗುಡಿಗಳೂ ತುಂಬಿದ್ದು.
ಒಟ್ಟಿಂಗೆ ಜನಂಗಳೂ-ಪ್ಲೇಷ್ಟಿಕ್ಕೂ, ಕಸವುಗಳೂ ಹಾಂಗೇ ತುಂಬಿದ್ದು.
ಆರು ತುಂಬುಸಿದ್ದು? ನಾವೇ!
ಎಲ್ಲ ದಿಕ್ಕೆ ತುಂಬಿದ ಕಸವಿನ ನಾವು ಈಗ ಬಾಚುಲೆ ಸುರು ಮಾಡದ್ರೆ ನಮ್ಮ ಮಕ್ಕೊಗೆ ನಾವೆಂತರ ಕೊಡುದು? ರೋಗವನ್ನೋ ಹೇಳಿ ಕಂಪ ಭಾವ ಕೇಳುದು.
ಅಪ್ಪಾದ್ದೇ! ಈಗ ಆದರೂ ನಮ್ಮ ಆಸುಪಾಸಿನ ನಾವು ಶುದ್ಧ ಮಾಡ್ಲೆ ಹೆರಡೆಕ್ಕಾದ್ದದು.
ಒಬ್ಬನ ಒಟ್ಟಿಂಗೆ ಒಬ್ಬ ಸೇರಿ ಅಪ್ಪಗ ಒಂದೊಂದೇ ಜಾಗೆ ಸ್ವಚ್ಛ ಆಗಿ ಇಡೀ ಭಾರತ ಸ್ವಚ್ಛ ಅಕ್ಕು.
ಅಂಬಗ ಇಡೀ ದೇಶ ಚೆಂದ ಅಕ್ಕು.

~
ಅಮೇರಿಕದ ಕಾಡು ಅಮೇರಿಕಕ್ಕೆ ಚೆಂದ.
ಕಂಪದ ಕಾಡು ಊರೊಳ ಚೆಂದ.
ಆದರೆ, ಪೇಟೆಗಳ ಪಾರ್ಕಿಲಿ ಕುರೆಇಡ್ಕಿರೆ ಚೆಂದವೋ? ಅಲ್ಲ.
ಅದು ಬದಲಾವಣೆ ಆಯೇಕಾದ್ಸು – ಅದರ ಸ್ವಚ್ಛಮಾಡೇಕಾದ್ಸು – ಹೇಳಿದವು ಕಂಪಭಾವ.
ಸ್ವಾಭಾವಿಕವಾಗಿ ಇಪ್ಪ ಹಳ್ಳಿಗೊ, ಅದರ ಹಸುರು ಚೆಂದಂಗೊ – ಅದು ಹೀಂಗೇ ಇರೆಕ್ಕು.
ಆದರೆ, ಎಲ್ಲಿ ಆಧುನಿಕ ಆಯಿದೋ, ಎಲ್ಲಿ ಪೇಟೆತನ ಬಯಿಂದೋ – ಅಲ್ಲಿ ಶುದ್ಧೀಕರಣ ಆಯೇಕು.
ಅದು ಇಂದಿಂದ ನಾಳಂಗೆ ಸ್ವಚ್ಛ ಅಪ್ಪದು ಅಲ್ಲಾಡ. ಅದಕ್ಕೆ ಒಂದು ತಲೆಮಾರೇ ಬೇಕಕ್ಕಾಡ.
ಪುಟ್ಟುಮಕ್ಕೊಗೆ ಕಲಿಶುದರಿಂದ ಸುರುಆಯೇಕಾಡ ಸ್ವಚ್ಛತೆಯ ಬುದ್ಧಿ.
ಅಲ್ಲಿಂದ ಅವುಬೆಳದು ಶಾಲಗೆ ಹೋಪಗ ಅದು ಪುಷ್ಠಿ ಆಯೇಕಡ.
ಮುಂದೆ ಅವು ಜೀವನಕ್ಕೆ ಇಳಿವಾಗ ಅದು ಅನುಷ್ಠಾನ ಆಯೇಕಡ.
ಅವರಿಂದ ಮುಂದೆ ಅವರ ಮಕ್ಕೊಗೂ ಆ ವಿಷಯ ಮುಂದುವರಿಯೇಕಾಡ.
ದೇಶ ಶುದ್ಧ ಮಾಡುವ ಮೊದಲ ಹೆಜ್ಜೆ – ದೇಶೀಯರ ಮನಸ್ಸಿಲಿ ಶುದ್ಧದ ಮಾನಸಿಕತೆಯ ತುಂಬುಸೇಕಡ – ಹೇಯಿದವು ಕಂಪಭಾವ.
ಶುದ್ಧಚಾರಿತ್ರ್ಯದ ಗಾಂಧಿಯ ಹುಟ್ಟಿದ ದಿನ ಆಚರಣೆಗೆ ಶುದ್ಧಭಾರತ ಸಂಕಲ್ಪ ಮಾಡಿದ್ದು ಅತ್ಯಂತ ಒಳ್ಳೆಕಾರ್ಯ – ಹೇದು ಕಂಪಭಾವ ಅಭಿಮಾನಲ್ಲಿ ಮಾತಾಡಿಗೊಂಡವು.
~

ಒಂದೊಪ್ಪ: ನಮ್ಮ ಮನಸ್ಸು ಶುದ್ಧ ಇದ್ದರೆ ನಾವ ಮಾಡುವ ಕೃತಿಗಳೂ ಸ್ವಚ್ಛ ಆಗಿರ್ತು.

ಒಪ್ಪಣ್ಣ

   

You may also like...

1 Response

  1. GOPALANNA says:

    ಸ್ವಚ್ಛ ಭಾರತ ಕಷ್ಟ ಇಲ್ಲೇ. ಎಲ್ಲರೂ ಸೇರಿದರೆ ಸಾಧ್ಯ. ಯಾವುದನ್ನೂ ಬಲವಾಗಿ ಹೇರದ್ದರೆ ಭಾರತೀಯರು ಮಾಡವು. ಏಕೆ ಆನು ಹೀಂಗೆ ಹೇಳುವುದು ಹೇಳಿದರೆ-ಬೇರೆ ದೇಶಕ್ಕೆ ಹೋದ ನಮ್ಮ ದೇಶದವು ಅಲ್ಲಿಯಾಣ ನಿರ್ಮಲ ಕ್ರಮ ಪಾಲಿಸುತ್ತವು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *