ತೋಡ ನೀರು ಎರಡು ದಿನ ಕುಡಿವಲಾಗ ಅಡ…!!

ನಿನ್ನೆಲ್ಲ ಮೊನ್ನೆ ಹೊತ್ತೋಪಗ ತರವಾಡುಮನೆಗೆ ಒಂದು ಖಾಸಗೀ ಭೇಟಿ ಕೊಟ್ಟೆ. ಎಲ್ಲ ಭೇಟಿಗಳೂ ಖಾಸಗಿ, ಅದರ್ಲೂ ಖಾಸಗಿ ಭೇಟಿ ಹೇದರೆ ಎಂತ್ಸು – ಹೇದು ಕೇಳುವಿ ನಿಂಗೊ. ಒಂದೊಂದರಿ ಒತ್ತೆಪೋಕನ ಹಾಂಗೆ ಸರ್ಕೀಟು ಬಿಟ್ಟೆ – ಹೇಳುದರ ಒಳ್ಳೆ ಭಾಶೆಲಿ ಖಾಸಗೀ ಭೇಟಿ – ಹೇಳುದು ಅಷ್ಟೆ.
ಹಾಂಗೆ ಒಬ್ಬನೇ ಹೋಗಿಪ್ಪಾಗ, ತರವಾಡುಮನೆಲಿ ಶಾಂಬಾವ° ಕಾಲುನೀಡಿ ಇಸಿಚಯರಿಲಿ ಕೂದುಗೊಂಡು ಕೈಲಿ ಇಷ್ಟುದ್ದದ ಮೊಬೈಲಿನ ಹಿಡ್ಕೊಂಡು ಹೆಬ್ಬಟೆ ಬೆರಳಿಲಿ ಸುಣ್ಣ ಉದ್ದಿದ ಹಾಂಗೆ ಗೀಸಿಗೊಂಡು ಇತ್ತಿದ್ದ°.
ಅವ° ಆಪೀಸಿಂದ ಬೇಗ ಬಂದ ದಿನ ಅದೇ ಕತೆ. ಮೊನ್ನೆ ಮೊಬೈಲು ಗೀಸುತ್ತ ಬೆಶಿಲಿ ಒಪ್ಪಣ್ಣ ಬಂದು ನಿಂದದೂ ಗೊಂತಾಗ. ವಾಟೆಸೊಪ್ಪು ಕಟ್ಟ ಬಿಡುಸಿ ನೋಡಿಗೊಂಡು ಕೂದರೆ ಊರು ಅಡಿಮೊಗಚ್ಚಿರೂ ಗೊಂತಾಗ – ಹೇದು ರಂಗಮಾವನ ಪರೆಂಚಾಣ ಒಂದೊಂದರಿ.  ಒಂದರಿಯಾಣ ಮೊಬೈಲು ಪೂರ ನೋಡಿ ಆದ ಮತ್ತೆ ಒಂದರಿಯೇ ಶಾಂಬಾವ° ಹೇಳಿದ°- ಊರು ಅಡಿಮೊಗಚ್ಚಿದ್ದು ಅಲ್ಲಾಡ, ಟೇಂಕರು ಅಡಿಮೊಗಚ್ಚಿದ್ದಾಡ – ಓ ಅಲ್ಲಿ, ಉಪ್ರಂಗಡಿ ಹತ್ತರೆ – ಹೇದು.
~
ಅಪ್ಪಡ, ಶಾಂಬಾವಂಗೆ ಅಂಬಗಳೇ ಗೊಂತಾದ ಸುದ್ದಿ, ಟೀವಿಗಳಲ್ಲಿ ರಜ ಹೊತ್ತು ಕಳುದ ಮತ್ತೆ ಬಪ್ಪಲೆ ಸುರು ಆತು. ಉಪ್ರಂಗಡಿ ಹತ್ತಿರ ಟೇಂಕರು ಲೋರಿ ತೋಡಿಂಗೆ ಬಿದ್ದಿದಾಡ – ಹೇದು.
ಅಪ್ಪನ್ನೇ – ದೊಡಾ ಲೋರಿಯ ಮುಸುಡಿಂಗೆ ಸಿಕ್ಕುಸಿದ ಈ..ಷ್ಟುದ್ದದ ಕೇಪ್ಸೂಲು ಮಾತ್ರೆಯ ನಮುನೆಯ ತುಂಡು ಒಂದು – ಮಾರ್ಗಲ್ಲಿರ್ತ ಸಂಕ ತಿರುಗುವಾಗ ಅಡಿತಪ್ಪಿ ಬಿದ್ದಿದಾಡ. ಸಂಕ ಇಪ್ಪದು ದೊಡಾ ತೋಡಿನ ಮೇಗೆ ಇದಾ. ಟೇಂಕರು ಬಿದ್ದದು ಆ ತೋಡಿಂಗೇ.
ಪುಣ್ಯ, ಲೋರಿ ಪೂರ ಉದುರಿದ್ದಿಲ್ಲೆ, ಮನುಷ್ಯರು ಕೂರ್ತ ಜಾಗೆ ಮಾರ್ಗಲ್ಲೇ ಒಳುದು, ಅದರ ಹಿಂದೆ ಗೇಸು ತುಂಬುಸುತ್ತ ಮಾತ್ರೆ ಮಾಂತ್ರ ಉದುರಿದ್ದು. ಅದೂ –  ತೋಡಿಂಗೆ ಉದುರಿದ ಕಾರಣ ಆರಿಂಗೂ ಪೆಟ್ಟಾಯಿದಿಲ್ಲೆ – ಹೇಳಿದಿರೋ?
~
ಶಾಂಬಾವಂಗೆ ಬೇಜಾರಾದ ಸಂಗತಿ ಬೇರೆಯೇ ಇದ್ದು. ಅದೆಂತರ ಹೇದರೆ –
ಆರಿಂಗೂ ಪೆಟ್ಟಾಯಿದಿಲ್ಲೆ – ಹೇದು ನಾವು ಕುಶೀಲಿ ಇದ್ದು, ಆದರೆ ನಿಜವಾಗಿ ಅದು ಹಾಂಗೆಯೋ?
ಟೇಂಕರಿಲಿ ಗೇಸಿನ ನೀರು ಮಾಡಿ ತುಂಬುಸುವಾಗ ಅದಕ್ಕೆ ಸಮಾ ವಿಷವೂ ಸೇರ್ಸುತ್ತವು. ಆ ವಿಶ ಪೂರ್ತ ತೋಡಿಂಗೇ ಸೇರ್ತಿಲ್ಲೆಯೋ?
ಉಪ್ರಂಗಡಿಂದ ಮೇಗೆ ಚೆಲ್ಲಿದ ಈ ವಿಶ ನೀರಿಂಗೆ ಸೇರಿ ಇಡೀ ಕೆಳ ಹಬ್ಬಿಗೊಂಡು ಹೋವುತ್ತಿಲ್ಲೆಯೋ?
ಅದು ಇಡೀ ಊರನ್ನೇ ಹಾಳು ಮಾಡಿಗೊಂಡು ಹೋವುತ್ತಿಲ್ಲೆಯೋ?
ಉಪ್ಪಿನಂಗಡಿಯ ಪವಿತ್ರ ಸಂಗಮ ನೀರು ದೇವಸ್ಥಾನಕ್ಕೂ ಹೋವುತ್ತಿಲ್ಲೆಯೋ?
ಅಲ್ಲಿಂದ ಮತ್ತೆ ಪುತ್ತೂರು ಪೇಟಗೂ ಹೋವುತ್ತಿಲ್ಲೆಯೋ?
ಅಲ್ಲಿಂದ ಮುಂದೆ ನೇತ್ರಾವತಿಯ ತುಂಬಿದ ತುಂಬೆ ನೀರು ಕೊಡೆಯಾಲಕ್ಕೂ ಹೋವುತ್ತಿಲ್ಲೆಯೋ?
ಸಮುದ್ರಲ್ಲಿ ಮೀನುಗೊ ಆ ನೀರು ಕುಡುದು, ಇಬ್ರಾಯಿ ಆ ಮೀನು ಹಿಡುದು, ಅದ್ರಾಮ ಅದರ ಮಾರಿರೆ – ಪುನಾ ನಮ್ಮ ಊರಿಂಗೇ ಬಪ್ಪದಲ್ಲದೋ?
ಎಷ್ಟು ಜೆನ ಆ ವಿಶವ ಕುಡಿಯೆಕ್ಕು!?

ಒಂದು ವೇಳೆ ನಾವು ವಿಷ ಕುಡಿವಲೆ ಆಗ ಹೇಳಿಯೇ ತೀರ್ಮಾನ ಮಾಡಿತ್ತು ಮಡಿಕ್ಕೊಂಬೊ° – ಎರಡು ದಿನ ನೀರು ಎತ್ತುಲಾಗ ಹೇದು ನಿಘಂಟು ಮಾಡಿದವಾಡ. ಮನುಷ್ಯರು ನೀರು ಕುಡಿಯದ್ದೆ ಬದ್ಕಲೂ ಸಾಕು, ಅಥವಾ ಬೋರು ನೀರು ಕುಡಿಯಲೂ ಸಾಕು; ಆದರೆ ಆ ನೀರಿಲಿ ಇಪ್ಪಲಕ್ಷಾಂತರ ಮೀನುಗೊ? ಕೆಪ್ಪೆಗೊ? ಹಾವುಗೊ? ಹಕ್ಕಿಗೊ? ಇತರೆ ಜೀವಿ ಜಲಚರಂಗೊ?
ಅವಕ್ಕೂ ಹೇಳುಲೆ ಎಡಿಗೋ? ಎಡಿಯ, ಏಕೇದರೆ ಅವಕ್ಕೆ ನೀರು ಬರೇ ಕುಡಿವಲೆ ಮಾಂತ್ರ ಅಲ್ಲ, ಜೀವಿಸಲೂ ಬೇಕು!
ಹಾಂಗಾರೆ – ನಾವು ಮಾಡಿದ ಹಾನಿ ಎಷ್ಟು ದೊಡ್ಡದು ಹೇದು ಆಲೋಚನೆ ಮಾಡೇಕು ಅಪ್ಪೋ.
~
ನಮ್ಮ ಅನುಕೂಲತೆಗೆ ನಾವು ಪ್ರಕೃತಿಯ ಬೇಕುಬೇಕಾದ ಹಾಂಗೆ ಬಳಸಿ, ಅದರ್ಲಿ ಏನಾರು ಸಮಸ್ಯೆ ಬಂದ ತಕ್ಷಣ ಸ್ವಾರ್ಥಿಗಳ ಹಾಂಗೆ ನವಗೆ ತಕ್ಕ ಬೇಕಾದ ಏರ್ಪಾಡುಗೊ ಮಾಡಿರೆ, ಇಡೀ ಪ್ರಕೃತಿ ಸಂಕೊಲೆಯ ಹಾಳು ಮಾಡಿದ ಹಾಂಗೆ ಆವುತ್ತಿಲ್ಲೆಯೋ?
ಇಡೀ ಊರಿನ ಕೆಪ್ಪೆಯ ಕೊಂದು, ನುಸಿ ಹೆಚ್ಚಾಗಿ ನವಗೆ ಡೆಂಗ್ಯೂ ರೋಗ ಹೆಚ್ಚಾದ ಸಂಗತಿಯ ಕಳುದ ವಾರ ಮಾತಾಡಿದ್ದಷ್ಟೇ. ಅದರ ಎಡಕ್ಕಿಲಿ ಹೀಂಗಿರ್ತ ಒಂದು ಶುದ್ದಿ ಕೇಳೇಕಾಗಿ ಬಂದದು ತರವಾಡುಮನೆ ಶಾಂಬಾವಂಗೆ ತುಂಬ ಬೇಜಾರಾಯಿದು. ಒಪ್ಪಣ್ಣಂಗೂ.
ನಿಂಗೊಗೆ?
~
ಒಂದೊಪ್ಪ: ಮನುಷ್ಯ ಸೌಕರ್ಯಕ್ಕೆ ಟೇಂಕರು ಮಾಡಿದ°, ವಿಷವನ್ನೂ ಮಾಡಿದ°. ಅದರ ಬಳಸಿ ಪ್ರಕೃತಿಯ ಹಾಳು ಮಾಡಿರೆ ನವಗೇ ನಷ್ಟ.

ಒಪ್ಪಣ್ಣ

   

You may also like...

4 Responses

 1. sheelalakshmi says:

  ಮಾಡಿದ್ದುಣ್ಣೋ ಮಹಾರಾಯ ಹೇಳ್ತ ಕಥೆ ಅಷ್ಟೇ .

 2. ಬೊಳುಂಬು ಗೋಪಾಲ says:

  ಶುದ್ದಿ ಲಾಯಕಾಯಿದು. ಒಟ್ರಾಸಿ ತಿಂಬಲೂ ಎಡಿಯ ತುಪ್ಪಲೂ ಎಡಿಯ ಹೇಳುವ ಪರಿಸ್ಥಿತಿ. ಜನರಿಂಗೆ ಸೌಕರ್ಯಂಗೊತುಂಬಾ ತುಂಬಾ ಜಾಸ್ತಿ ಅಪ್ಪಲಾಗ ಹೇಳುವುದಂತೂ ಸತ್ಯ.
  ಟ್ಯಾಂಕರಿಂಗೆ ಕಾಪ್ಸೂಲಿನ ಹೋಲಿಕೆ ಸೂಪರ್ ಆಯಿದು ಒಪ್ಪಣ್ಣಾ.

 3. ಸವಿತಾ ಅಡ್ವಾಯಿ. says:

  ಕ್ಯಾಪ್ಸೂಲು ಲೀಕಾಗಿ ಕೈಕ್ಕಿದ್ದು ಸತ್ಯ ಸಂಗತಿ.

 4. ಒಪ್ಪಣ್ಣಾ, “ಕಾಡಸೊಪ್ಪು ತೋಡನೀರು, ಆರೋಗ್ಯಕ್ಕೊಳ್ಳೆದು” ಹೇಳುಸ್ಸು ಕೇಳಿದ್ದು ನಾವು. ಆದರೆ…, ಕಾಡು ಕಡುದು ನಾಶ ಆತು. ತೋಡನೀರು ಹೀಂಗೆ ಹಾಳಾತು!. ಮತ್ತೆ ಆರೋಗ್ಯ ಕಾಪಾಡುತ್ತೇಂಗೆ!!?.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *