ತಂತ್ರಿಗಳ ಮನೆಯೊಳ ಶುದ್ಧಾಚಾರ…ಸಂಗತಿ ಎರಡು!

ಕಳುದ ವಾರ ಎಂತರ ಮಾತಾಡಿದ್ದು – ಕೇಳಿರೆ, ಕಣ್ಣಿಪ್ಪಾರೆ ತಂತ್ರಿಗಳ ಮನೆಯ ಬಗ್ಗೆ.
ಅಜ್ಜಂದ್ರ ಕಾಲಂದಲೇ ಹೆಸರು ಹೋದ ದೊಡಾ ಮನೆ. ನಾರಾಯಣ ತಂತ್ರಿಗಳ ವರೆಗೂ ಆಗರ್ಭ ಶ್ರೀಮಂತ, ಆಚರಣೆ ಶ್ರೀಮಂತ.
ಅವರ ಮಗ° ಸುಬ್ರಾಯ ತಂತ್ರಿಗೊ ಅವರ ಅಪ್ಪನಷ್ಟಿಲ್ಲದ್ದರೂ – ಮನೆಯೊಳಾಣ ಶುದ್ಧಾಚಾರಕ್ಕೆ ತೊಂದರೆ ಆಗದ್ದ ಹಾಂಗೆ ನೋಡಿಗೊಂಡಿದವು.
ಅವರ ಮೂರು ಜೆನ ಮಕ್ಕೊ ಆಧುನಿಕಲ್ಲಿ ಹೋಗಿ, ಮನೆಲಿ ನಿತ್ಯಾಚಾರಕ್ಕೆ ಕೆಣುದ್ದು! ಈಗ ಹೇಂಗಿದ್ದು?

~

ವಿಷಯ ಹೇಳ್ಳೆ ಹೆರಟ್ರೆ “ಹುಳಿ ಹಾಕಿ ತೊಳೆಸ್ಸು” ಹೇಳುಗು ಎಮ್ಮೆಸ್ ಮಾವ! ಆದರೆಂತ ಮಾಡುದು, ಇಪ್ಪದರ ಇಪ್ಪಾಂಗೇ ಹೇಳದ್ದೆ ಒಪ್ಪಣ್ಣಂಗೆ ಕಳಿಯ ಇದಾ!
ಹಾಂಗಾತು ನಮ್ಮ ಕಣ್ಣಿಪ್ಪಾರೆ ತಂತ್ರಿಗಳ ಮನೆಯ ಶುದ್ದಿ..
ದೊಡ್ಡ ಮಗ° ಮಾಷ್ಟ್ರೂ, ಎರಡ್ಣೇ ಮಗ° ಗೋರ್ಮೆಂಟು ಉದ್ಯೋಗಿಯೂ ಆಗಿಪ್ಪ ಕಾರಣ ಮನೆ ಮಟ್ಟಿಂಗೆ ತಲೆ ಹಾಕಲೆ ಅವಕ್ಕೆ ಅವಕಾಶ ಆವುತ್ತಿಲ್ಲೆ.
ಹಾಂಗಾಗಿ ಮನೆ ವ್ಯವಹಾರಂಗೊ ಅನಿವಾರ್ಯವಾಗಿ ಕಿರಿಮಗನ ತಲಗೆ ಬಿದ್ದತ್ತು.

ರಾಜೇಶ° ಹೇದರೆ ಕಿರಿಮಗನ ಹೆಸರು. ಅವಕ್ಕೆ ಇಪ್ಪದು ಕಾಸ್ರೋಡಿಲಿ ಒಯಿವಾಟಿನ ಅಂಗುಡಿ.
ಎಂತರ ಒಯಿವಾಟು? ಶೇರಿನ ಒಯಿವಾಟು.
ದೊಡ್ಡದೊಡ್ಡ ಪೈಶೆಕ್ಕಾರಂಗಳ ಕೈಲಿ ಪೈಶೆ ಮಡಗುಸಿ, ಅವರ ಲಕ್ಷಕ್ಕೆ ಸಾವಿರ ಸೇರ್ಸಿ; ಅವರ ಸಾವಿರಂದ ನೂರು ಕಳದು ಜೀವನ ಮಾಡುಸ್ಸು.
ಮನೆಲಿ ಧಾರಾಳ ಇದ್ದರೂ – ಇದೊಂದು ಸಂಪಾದನೆ.
ಶೋಕಿ ಜೀವನಂದಾಗಿ ಸಂಪಾದನೆಯೂ ಸಾಕಾವುತ್ತಿಲ್ಲೆ, ಅದು ಬೇರೆ. ಹಾಂಗೆ, ಮನೆಂದ ತಂದು ಒಯಿವಾಟಿಂಗೆ ಹಾಕಿಂಡು ವೆವಸ್ತೆ ಆಗಿಂಡಿದ್ದತ್ತು.
ಮನೆಂದ ಎಷ್ಟೂಳಿ ತೆಗವಲಕ್ಕು? ಮನೆಯ ಪತ್ತಾಯಕ್ಕೂ ಒಂದು ಮಿತಿ ಇಲ್ಲೆಯೋ?
ತುಂಬುಸುತ್ತವ ಇಲ್ಲದ್ದೆ ಪತ್ತಾಯ ತುಂಬುಗೋ? ಒರತ್ತೆ ತುಂಬದ್ದೆ ಕಟ್ಟ ಎರ್ಕುಗೋ? ತೆಗದೂ ತೆಗದೂ ಈಗ ರಜಾ ತೊಂದರೆಗೆ ಮುಟ್ಟಿದ್ದು
ಅಜ್ಜಂದ್ರ ಕಾಲಲ್ಲಿ  ಆದರೆ, ಪತ್ತಾಯಂದ  ಒಂದು  ಮುಷ್ಟಿ  ತೆಗದರೆ ಇರುವಾರ ಪತ್ತಾಯಕ್ಕೆ ಒಂದು ಹೆಡಗೆ ಅಪ್ಪಷ್ಟು ತುಂಬುಸುಗು. ಅಪ್ಪನ ಕಾಲಲ್ಲಿ ಪತ್ತಾಯಂದ ಒಂದು ಹೆಡಗೆ ಅಪ್ಪಷ್ಟು ತೆಗದರೆ ಅರೆವಾಶಿ ಆದರೂ ತುಂಬುಸುಗು.
ಈಗ? ತೆಗೆಸ್ಸು ಮಾಂತ್ರ!

ಆಚೊರಿಶ ಒಂದರಿ ಪೂರ್ತಿ ಲೋಸು ಆಗಿ, ಊರೋರ, ನೆಂಟ್ರ ಒಳ ಸಾಲ ಕೇಳಿ ಕಂಗಾಲಾಯಿದವು.
ಈಗ ಒಯಿವಾಟು ಹದಾಕೆ, ಮನೆ ಅನುಕ್ಕೂಲವೂ ಹದಾಕೆ.
ಹೆರಿಯೋರು ಒಳಿಶಿ-ಬೆಳೆಶಿದ್ದದರ ಪೂರಾ ಮುಗಿಶಿ ಮನೆಯ ಪೂಜೆ-ಪುನಸ್ಕಾರಂಗಳ ಮಾಡಿಂಡು, ತೋಟವೂ ನೋಡಿಂಡು, ಸಣ್ಣಮಟ್ಟಿನ ಒಯಿವಾಟೂ ಮಾಡಿಗೊಂಡು – ಊರೊಳವೇ ಇರ್ತವು.
ಮನೆಯ ಶುದ್ಧಾಚಾರಂಗೊ?

ನಾರಾಯಣ ತಂತ್ರಿಗಳ ಕಾಲದ ಹಾಂಗೆ ಬಿಡಿ, ಸುಬ್ರಾಯಜ್ಜನ ಕಾಲದ ಹಾಂಗೂ ಇಲ್ಲೆ.

ಒಯಿವಾಟಿನ ಚೆಂಙಾಯಿಗೊ ಬಂದರೆ ಮನೆ ಹೆರಾಣ ಜೆಗಿಲಿಲಿ ಕೂರ್ಸಿ ಮಾತಾಡ್ಸುತ್ತ ಕ್ರಮ ಇದ್ದೋ?
ಸೀತ ಮನೆ ಒಳಂಗೇ ಕರಕ್ಕೊಂಡು ಹೋಪದು. ಅಟ್ಟುಂಬೊಳಾಣ ಹೆರಾಣ ಕೋಣೆಲಿ ಊಟದ ಮೇಜು, ಅದರ ಕರೇಲಿ ಕೈ ತೊಳೆತ್ತ ಪಡಿಗೆನಳ್ಳಿ, ದೂರಲ್ಲಿದ್ದ ಪಾಯ್ಕಾನೆ ಆಯದ ಒಳವೇ ಎತ್ತಿತ್ತು, ಎಣ್ಣೆದೀಪದ ಕಸ್ತಲೆಗೆ ಕರೆಂಟು – ಎಲ್ಲವೂ ಬಂತು.
ಆ ಮನೆಯೇ ಆಧುನಿಕ ಆತು.
ಆದರೂ ತಂತ್ರಿಗಳ ಮನೆ ಹೇದರೆ ತಂತ್ರಿಗಳ ಮನೆಯೇ ಅಲ್ಲದೋ?
ಪೂಜೆ ಒಂದು ನಿತ್ಯವೂ ಮಾಡಿಗೊಂಡಿತ್ತಿದ್ದವು, ಹೆರಿಯೋರ ನೆಂಪಿಂಗೆಯೊ ಅಭ್ಯಾಸಂದ ಬಂದ ಹಾಂಗೆಯೊ.

~

ರಾಜೇಶ ತಂತ್ರಿಗೊಕ್ಕೆ ಮೂರು ಜೆನ ಮಕ್ಕೊ. ಇಬ್ರು ಕೂಸುಗಳ ಕೊಟ್ಟಾಯಿದು.
ಇನ್ನೊಬ್ಬ° ಮಾಣಿ ಇಪ್ಪದು. ಕಣ್ಣೂರಿಲಿ ಡಿಗ್ರಿ ಕಲಿತ್ತದು.
ಹುಟ್ಟಿದ್ದು ಇದೇ ಮನೆಲೇ ಆದರೂ, ಬೆಳದ್ದು ಪೂರಾ ಹೋಷ್ಟೆಲಿಲಿ ಇದಾ. ಹಾಂಗಾಗಿ ಮನೆಯ ಹತ್ತುಬಳಕ್ಕೆ ಹದಾಕೆ ಅರಡಿಗಷ್ಟೆ.
ಆ ಪ್ರಕಾರಲ್ಲಿ ಮನೆಯ ಶುದ್ಧಾಚಾರವೂ ಜಾಸ್ತಿ ಮಟ್ಟಿಂಗೆ ಅರಡಿಯ. ಅಂದರೂ ಶೋಕಿ ಜೀವನಕ್ಕೆ ಏನೂ ಕೊರತ್ತೆ ಇಲ್ಲೆ. ಕೋಲೇಜಿಲಿ ಕಲಿವಗಳೇ ಕಾರುದೇ ಇದ್ದು.
ಹೆರಿಯೋರ ಕ್ರಮಂಗ ಎಲ್ಲ ಬೆಳ್ಳಕ್ಕೆ ಹೋಗಿ ಕಡಲಿಂಗೆ ಎತ್ತಿದ್ದೋ ತೋರ್ತು.
ನಿತ್ಯದ ಕ್ರಮಂಗ ಸುಬ್ರಾಯಜ್ಜನ ಕಾಲಕ್ಕೇ ಮುಗುದ ಹಾಂಗೆ ಇತ್ತು.

ಇದರೆಡೇಲಿ ಕಳುದೊರಿಶ ಯೇವದೋ ಜೆಂಬ್ರದ್ದಿನ ಬಂದಿತ್ತಿದ್ದನಾಡ ಮನೆಗೆ.
ಕಾರಿಲಿ ಸೀತ ಬಂದು ಪಂಚಾಂಗದ ಬುಡಲ್ಲಿ ನಿಲ್ಲುಸಿದನಾಡ, ಕಾಲಿಂಗೆ ಸಿಕ್ಕುಸಿದ ಬೂಟ್ಸಿನ ತೆಗದ°.
ಅದರ ಒಳ ಇದ್ದಿದ್ದ ಕಾಲುಚೀಲವ ತೆಗದ್ದನೇ ಇಲ್ಲೆ. ಸೀತ ಹಾಂಗೇ ಮನೆಯ ಒಳ ಹೋದನಾಡ.
ಇದೆಂತ ಹೀಂಗೇ- ಸೋಕ್ಸು ತೆಗವಲಾಗದೋ? – ಹೇದು ಹತ್ತರಾಣೋರು ಕೇಳಿದ್ದಕ್ಕೆ “ಕಾಲು ಹಾಳಾಗದ್ದ ಹಾಂಗೆ ಸೋಕ್ಸು ಇಪ್ಪದಲ್ಲದೋ?” ಹೇದು ಪೆರಟ್ಟು ಕೇಳಿದನಾಡ.
ಅಂಬಗ ಸೋಕ್ಸು ಇಪ್ಪದು ಬೂಟ್ಸು ಹಾಳಾಗದ್ದ ಹಾಂಗೆಯೋ, ಕಾಲು ಹಾಳಾಗದ್ದ ಹಾಂಗೆಯೋ – ಬೋಚಬಾವಂಗೆ ಸಂಶಯ ಬಂತು.
ತಂತ್ರಿಗೊ ಶುದ್ಧಲ್ಲಿ ಓಡಾಡಿಗೊಂಡಿದ್ದ ಮನೆಲಿ ಈ ಮಾಣಿಯ ಕಾಲಿಂಗೆ ಕ್ಲೀನು ಸಾಕಾಗದ್ದದೋ? ಉಮ್ಮಪ್ಪ!

~

ತಂತ್ರಿಗಳ ಮನೆ ಹೀಂಗೆ ಚಿತ್ರಕ್ಕೆ ಎತ್ತುಗೋ?

ತಂತ್ರಿಗಳ ಮನೆ ಹೀಂಗೆ ಚಿತ್ರಕ್ಕೆ ಎತ್ತುಗೋ?

ವಂಶದ ಘನತೆ, ಮನೆತನದ ಗೌರವದ ಬಗ್ಗೆ ಮಾಣಿಗೆ ಹೆಚ್ಚಿಗೆ ಏನೂ ಅರಡಿಯದ್ದರೂ ಮನೆಲಿ ಎಂತೆಲ್ಲ ಇದ್ದು ಹೇದು ಅರಡಿಗು. ಮನೆಲಿ ಮಾತಾಡುದು ಕೇಳಿ ಮನೆಯ ಅಟ್ಟಲ್ಲಿಪ್ಪ ಸಂಗತಿಗ ಅರಡಿಗು. ಅವರ ಮನೆಯ ಅಟ್ಟಲ್ಲಿರ್ತ ಓಲೆಗರಿ ಗ್ರಂಥಂಗಳ ಬಗ್ಗೆ ಆ ಮಾಣಿ ಕೋಲೇಜಿಲಿ ಹೇಳಿತ್ತಿದ್ದನಾಡ. ಹಾಂಗಾಗಿ, ಕೋಲೇಜಿಂದ ಮಾಷ್ಟ್ರಕ್ಕೊ, ಟೀಚರಕ್ಕೊ ಪೂರಾ ಮೊನ್ನೆ ಮನೆ ಒಳದಿಕ್ಕೆ ಬಂದು ದೇವರೊಳ ಅಟ್ಟಕ್ಕೆ ಇಣ್ಕಿ, ಕೈಹಾಕಿ ಒಂದೊಂದೇ ಪುಸ್ತಕವ, ತಾಳೆಗರಿಗಳ ತೆಗದು ಬಿಡುಸಿ ನೋಡಿ, ಅದರ ಮೇಗೆ ಎಂತದೋ ನಂಬ್ರ ಗುರ್ತ ಹಾಕಿ ಹೋಯಿದವಾಡ. ಮದಲಿಂಗೆ ತಂತ್ರಿಗಳೇ ಆ ಪುಸ್ತಕಂಗಳ ಮುಟ್ಟೇಕಾರೆ ಪೂಜೆ ಆದ ಮತ್ತೆ ಶುದ್ಧಲ್ಲಿ ಮುಟ್ಟುಗಷ್ಟೆ ಇದಾ! ಇನ್ನೆಷ್ಟು  ಸರ್ತಿ  ಬಂದಿಕ್ಕಿ ಹೋಪಲಿದ್ದಾ ಏನ! ಮನೆಯೊರಗೆ ಬಂದು ನೋಡಿದ್ದದರ ಅಟ್ಟಲ್ಲಿಯೇ ಮಡುಗುತ್ತವೋ ಅಲ್ಲ ಅಲ್ಲಿಂದ ಬೇಕಾದೋರು ತೆಕ್ಕೊಂಡು ಹೋವುತ್ತವೋ ಕಾಲವೇ ಹೇಳೆಕ್ಕಟ್ಟೆ.

~

ಕಾಲ ಹೋದ ಹಾಂಗೆ ಎಲ್ಲವೂ ಬದಲುತ್ತು. ತಂತ್ರಿಗಳ ಮನೆಯೂ ಬದಲಿದ್ದು.

ಮದಲಿಂಗೆ ದಾರಿಮೈಲಿಗೆ ಕಳದು ಮನೆಒಳ ಹೊಕ್ಕೇಕಾದ ಸಂದರ್ಭ – ಈಗ ಮನೆಯ ಒಳಾಂಗೇ ಮೆಟ್ಟಿನಜೋಡೋ, ಸೋಕ್ಸೋ ಎಲ್ಲ ಎತ್ತುವ ಸಂದರ್ಭ.
ಮದಲಿಂಗೆ ಮಡಿಮೈಲಿಗೆ, ಶುದ್ಧ, ಕೊಳೆ ಇತ್ಯಾದಿಗಳ ಆಚರಣೆಯ ಸಂದರ್ಭ – ಊಟದ ಮೇಜಿನ ಮೇಗೆ ಎಲ್ಲವನ್ನೂ ಹರಗಿ ಮಡಗಿ ತಿಂತ ಸಂದರ್ಭ.
ಮದಲಿಂಗೆ ಮನೆಂದ ಓ ಅಷ್ಟು ದೂರಲ್ಲಿ ಶೌಚಗೃಹ ಬಾತ್ರೂಮು ಹೇತ್ರೂಮು ಇತ್ಯಾದಿ – ಈಗ ಮನೆ ಒಳವೇ; ಮನುಗುತ್ತ ಕೋಣೆ ಒಳವೇ ಎತ್ತಿತ್ತು.
ಮನೆ ಎದುರಾಣ ಕೆರೆಲಿ ಹಾಮಾಸು ಮಲಂಪು ತುಂಬಿ ಬಳಕೆಯೇ ಇಲ್ಲೆ – ಈಗ ಪೂರಾ ಬೋರಿನ ನೀರಲ್ಲದೋ!
ಮದಲಿಂಗೆ ಶುದ್ಧಾಚಾರ – ಈಗ ಕಾಟಾಚಾರ.
ಮದಲಿಂಗೆ ಮನೆ ತುಂಬ ನೆಂಟ್ರುಗ, ಬಂಧುಗ- ಈಗ ಮನೆ ತುಂಬ ಜೆನಂಗ ಆದರೆ ಹೆರಾಣೋರು.
ಮದಲಿಂಗೆ ದೇವಸ್ಥಾನ – ಈಗ ಪ್ರವಾಸೀ ಗೃಹ!

~

ಅಂತೂ ಎರಡು ತಲೆಮಾರಿನ ಅಂತರಲ್ಲಿ ಆ ಮನೆಯ ಸಂಪೂರ್ಣ ಚಿತ್ರಣವೇ ಬದಲಿದ್ದು. ಸುತ್ತುಮುತ್ತಲಿನ ರಾಜಕೀಯ ಚಿತ್ರಣವೂ ಬದಲಿದ್ದದು ಅದಕ್ಕೆ ಒಂದು ಕಾರಣ ಆಗಿಕ್ಕು. ಈಗ ಮದಲಾಣ ಹಾಂಗೆ ಒಕ್ಕಲು – ಧಣಿ ಹೇದು ಎಂತೂ ಇಲ್ಲೆ. ಅವರವರ ತಲೆ ಅಡಿಯಂಗೆ ಅವರವರ ಕೈ. ಹಾಂಗಾಗಿ, ದೊಡ್ಡ ತೋಟದ ಆರೈಕೆಗೆ ಬೇಕಾದ ಕೂಲಿ ಜೆನಂಗಳೂ ಸಿಕ್ಕುತ್ತವಿಲ್ಲೆ. ಸಿಕ್ಕಿರೂ ತಲೆಂದ ಮೇಗೆ ಸಂಬಳ. ಸಂಬಳ ಕೊಟ್ಟು ಮಾಡುಸುತ್ತರೆ ಒಳಿಯಲೆ ಎಂತೂ ಇಲ್ಲೆ!

ಹಾಂಗೆಲ್ಲ ಆಗಿ, ಮನೆಯ ಪರಿಸ್ಥಿತಿ ತುಂಬಾ ವಿತ್ಯಾಸ. ತಂತ್ರಿಗಳ ಮನೆ, ಜಾಗೆಯೂ ಮುಂದಂಗೆ ಒಳಿಗೊ ಹೇಳ್ತದೇ ಒಂದು ನಮ್ಮ ಮುಂದೆ ಇಪ್ಪ ಪ್ರಶ್ನೆ.

ಒಂದು ಕಾಲದ ಆ ಊರಿನ “ಕೇಂದ್ರ ಸ್ಥಾನ” ಈಗ ಎಂತದೂ ಅಲ್ಲದ್ದೆ ಆಗಿ ಹೋತು.
ಅಂದ್ರಾಣ ತಂತ್ರಿಗೊ ಈಗ ಮತ್ತೆ ಹುಟ್ಟಿ ಬಂದಿದ್ದರೆ ಅವರ ಮನೆಯೇ ಗುರ್ತ ಸಿಕ್ಕದೋ ಏನೋ!
~

ಒಂದೊಪ್ಪ: ಬೆಳವ ಕಾಲ ಮನಸ್ಸಿನ ಬದಲ್ಸುತ್ತು. ಮನಸ್ಸು ಬದಲಿದರೆ ಮನೆಯೂ ಬದಲುತ್ತು. ಅಲ್ಲದೋ?

ಒಪ್ಪಣ್ಣ

   

You may also like...

9 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಕಾಲ ಎಲ್ಲವನೂ ಬದಲಿಸುತ್ತು….
  ಇಂದು ಚೆನ್ನೈ ಭಾವ ಎಲ್ಲಿ ಹೋದವು? ಈ ಕಂತಿನ ಓದಿದ್ದವಿಲ್ಲೆಯೋ?

 2. ಕೆ. ವೆಂಕಟರಮಣ ಭಟ್ಟ says:

  ಹರೇ ರಾಮ.

 3. ವಿಜಯತ್ತೆ says:

  ಹರೇರಾಮ, ಸಂಸ್ಕೃತಿ-ಸಂಸ್ಕಾರ ಎಲ್ಲಾ ಹಾಳಾವುತ್ತಾ ಇದ್ದು. ‘ಇದು ಹೀಗೇ ಇರದು’ ಶ್ರೀಗುರುಗೊ ಹೇಳಿದ ಮಾತು ನೆಂಪಾವುತ್ತು. ಖಂಡಿತ ಈ ಕಾಲ ಹೀಂಗೇ ಇರ.ಸದ್ಬ್ಳಳವಣಿಗೆ ಬೇಗ ಆದರೆ ಒಳ್ಲೆದಿತ್ತು.ಎಲ್ಲಾವಿಷಯಂಗಳಲ್ಲಿಯೂ.

 4. ಬೊಳುಂಬು ಗೋಪಾಲ says:

  ಚೆ ಚೆ ಚೆ ಎಂತಾ ಸಂಗತಿ ಆತು. ರಾಜೇಶ ತಂತ್ರಿಗಳ ಕಾಲಲ್ಲೇ ಹಾಂಗಾತು. ಇನ್ನು ಮುಂದೆ ??
  ಹಿಂದಾಣ ಹಾಂಗೂ ಇಂದ್ರಾಣ ಕಾಲದ ಸಂಗತಿಗಳ ಹೋಲುಸಿದ್ದದು ಲಾಯಕಾಗಿತ್ತು, ಗ್ರೇಶಿ ಬೇಜಾರುದೆ ಆತು. ಹೊಸತ್ತಕ್ಕೆ ಹೊಂದ್ಯೊಳೆಕು ನಿಜ, ಆದರೆ, ಇಷ್ಟೊಂದು ಬದಲಾವಣೆ ಅಪ್ಪಲಾಗಪ್ಪ.

  • ಬೊಳುಂಬು ಗೋಪಾಲ says:

   ಹೇಳಿದ ಹಾಂಗೆ ತಂತ್ರಿಗಳ ಮನೆ ಚಿತ್ರ ಚೆಂದಕೆ ಬಯಿಂದು, ಅದು ಆರ ಕೈಲಿ ಹುಟ್ಟಿ ಬಂದದೊ ? ಚಿತ್ರ ಬರದವನ/ಳ ಹೆಸರೇ ಇಲ್ಲೇನೆ. ಗೊಂತಾದರೆ ಅಭಿನಂದಿಸುವೊ.

 5. ಗ್ರೇಶುಲೆ ಎಡಿಯದ್ದ ವಿಷಯ ಆದರೆ ವಾಸ್ತವ…ಚೇ

  • ಉಡುಪುಮೂಲೆ ಅಪ್ಪಚ್ಚಿ says:

   “ತುಂಬುಸುತ್ತವ ಇಲ್ಲದ್ದೆ ಪತ್ತಾಯ ತುಂಬುಗೋ? ಒರತ್ತೆ ತುಂಬದ್ದೆ ಕಟ್ಟ ಎರ್ಕುಗೋ?” -ಅಪ್ಪಪ್ಪು;ಸಮ,ಸಮ ಬಾರಿ ಲಾಯಕಿನ ನುಡಿಗಟ್ಟು! ಈ ಸಾಲುಗೊ ಇಡೀ ಕಥೆಯ ಚಿತ್ರಣವ ಕಣ್ಣಿ೦ಗೆ ಕಟ್ಟುವ ಹಾ೦ಗೆ ಚಿತ್ರುಸ್ಸುತ್ತು.ಇ೦ದ್ರಾಣ ಜಗತ್ತಿಲ್ಲಿ ಮನೆ ಮನೆಯ ಸ್ಥಿತಿಯೂ ಹೀ೦ಗೇ ಆಯಿದು.ಸಕಾಲಿಕ ಲೇಖನ.ಅಭಿನ೦ದನಗೊ.

 6. ಯಮ್.ಕೆ says:

  ಒಪ್ಪ ಆಯಿದು .ಒಪ್ಪಕ್ಕಾದ್ದೇ.
  ಎಡೆಸೆಸಿ ಇನ್ನು ಹಾಕದ್ದ ತೋಟ, ಗಾಡಿಉರುವೆಲು ಕ೦ಡು ,ಸತ್ಯಣ್ಣನ ಪಾಟೆ೦ದ ಚಾಯ ಕುಡಿದಶ್ಟೇ ಮನಸ್ಸಿ೦ಗೆ ಹಿತ ಆತು.

 7. ಬೆಟ್ಟುಕಜೆ ಮಾಣಿ says:

  ವಾಸ್ತವದ ಚಿತ್ರನ ಲಾಯ್ಕ ಆಯಿದು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *