ಸಮಾಜದ ಕ್ಷೇಮ ಕಾವ ಪುರೋಹಿತರಿಂಗೆ ಕ್ಷೇಮನಿಧಿ..!

May 13, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಬಟ್ಟಮಾವ ಒಂದರಿ ಮಗುಮಾವನಲ್ಲಿ ಉದೆಗಾಲಕ್ಕೆ ಬೇಗ ಗೆಣವತಿಹೋಮ ಮುಗುಶಿ ಒಪಾಸು ಬೈಲಕರೆಂಗೆ ಹೆರಟವು.
ಯೇವತ್ರಾಣಂತೆ ನೆಡಕ್ಕೋಂಡೇ ಹೆರಟದು.
ಬೇಗ ಎದ್ದು, ಬೇಗ ಹೋಮ ಮುಗುಶಿ, ಅಲ್ಲಿಂದ ಬೇಗ ಹೆರಟು ಬೇಗ ಬೇಗವೇ ನೆಡಕ್ಕೊಂಡು ಹೋದ ಕಾರಣವೋ ಏನೋ – ನೆಡವಗ ರಜ ಅಂಬೆರ್ಪು ಆತು ಕಾಣ್ತು;
ತರವಾಡುಮನೆ ಎದುರೆ ಸಾರಡಿ ತೋಡು ದಾಂಟುವಾಗ – ನೆಲಕ್ಕೆ ಊರಿದ ಕಾಲು ಹೊಂಡಕ್ಕೆ ಇಳುದತ್ತು!
ಪಕ್ಕನೆ ಆಯತಪ್ಪಿ -ಅತ್ಲಾಗಿ ಬಿದ್ದದೂ ಅಲ್ಲ, ಇತ್ಲಾಗಿ ಕಾಲು ಊರಿದ್ದೂ ಅಲ್ಲ – ಹಾಂಗಾತು ಬಟ್ಟಮಾವಂಗೆ.
ದೇಹ ಮಾಲಿತ್ತು, ಆಧರುಸಿಗೊಂಬಲೆ ಎಡಿಯದ್ದೆ ಪಕ್ಕನೆ ಬಜಕ್ಕನೆ ಬಿದ್ದ ಹಾಂಗಾತು, ಪಾಪ.
ಇಡೀ ಅವರ ದೇಹದ ಭಾರ + ಮಗುಮಾವನಲ್ಲಿ ಸಿಕ್ಕಿದ ಸ್ವಸ್ತಿಕದ ಅಕ್ಕಿ ಕಾಯಿಯ ಭಾರ ಎಲ್ಲವೂ ಒಟ್ಟಾಗಿ ಅವರ ಒಂದು ಕಾಲಿಂಗೆ ಒಂದರಿಯೇ ಬಿದ್ದ ಹಾಂಗಾಗಿ, ಕಾಲು ತಿರ್ಪಿದ ಹಾಂಗಾಗಿ, ಕೂಚಪ್ಪ ಆದವು.

“ನಾರಾಯಣಾ…” – ಹೇಯಿದವು ಬಿದ್ದಪ್ಪದ್ದೇ.
ಆ ಸ್ವರ ಕೇಳುವಗಳೇ, ಆ ಧಾಟಿಯ ನಾರಾಯಣ ನಾಮ ಸ್ಮರಣೆ ಕೇಳುವಗಳೇ, ಬಿದ್ದ ಶಬ್ದ ಕೇಳುವಗಳೇ – ಅಲ್ಲೇ ಕೆಳಾಣತಟ್ಟು ತೋಟಲ್ಲಿ ಉದೆಕಾಲದ ಕೂಂಬಾಳೆ ಹೆರ್ಕಿಗೊಂಡಿದ್ದ ರಂಗಮಾವಂಗೆ ಕೇಳಿತ್ತು.
ಬಟ್ಟಮಾವಂಗೆ ಹಾಂಗೊಂದು ಕ್ರಮ ಇದ್ದು – ಪಕ್ಕನೆ ತಾಗಿರೆ ನಾರಾಯಣ ನಾಮಸ್ಮರಣೆ; ನಾರಾಯಣ ಹೇದರೂ ರಂಗನೇ ಅಲ್ದೋ – ರಂಗಮಾವ ಎತ್ತಿದವು.

ರಂಗಮಾವಂಗೆ ಗೊಂತಾತು – ಕೂಡ್ಳೇ ಹೋದವು ತೋಡಕರೆಂಗೆ, ಸ್ವರ ಕೇಳ್ತಲ್ಲಿಗೆ.
ನೋಡಿರೆ ಬಟ್ಟಮಾವ ಬಿದ್ದಿದವು. ಬಿದ್ದ ಗುಂಡಿಂದ ಹೇಂಗಾರು ಮಾಡಿ ಎದ್ದಿತ್ತಿದ್ದವು, ಜಾರಿಗೊಂಡು ದಾರಿ ಕರೆಂಗೆ ಬಯಿಂದವು.
ಮೋರೆಲಿ ಅಸಾಧ್ಯ ಬೇನೆ ಕಾಣ್ತು; ಬಾಯಿಲಿ ನಾರಾಯಣ ನಾಮಸ್ಮರಣೆ ಕೇಳ್ತು, ಕಟ್ಟಿ ಹಿಡ್ಕೊಂಡ ಅಕ್ಕಿ ಕಾಯಿ ಎಲ್ಲ ಚೆಲ್ಲಿದ್ದು, ನೆಡವ ದಾರಿ ಕರೆಯ ಹುಲ್ಲಿನ ಮೇಗೆ ಕಾಲುನೀಡಿ ಕೂಯಿದವು.
ಕೂಡ್ಳೇ ಪೆರ್ಡಾನ ಜೀಪು ಬರುಸಿ ಕೊಡೆಯಾಲಕ್ಕೆ ಮಾಡುಸಿದವು, ರಂಗಮಾವ°.
~

ಅಲ್ಲಿ ಕೂದ ಬಟ್ಟಮಾವ° ಮತ್ತೆ ಎರಡು ತಿಂಗಳು ಕೂದುಗೊಂಡೇ ಇರ್ತವು ಹೇದು ಗ್ರೇಶಿಯೇ ಇತ್ತಿದ್ದವಿಲ್ಲೆ.
ಅಪ್ಪು, ಅವರ ಕಾಲಿಲಿ – ಕೋಲು ಕಾಲಿಂಗೆ ಪಾದ ಸೇರ್ತಲ್ಲಿ ಸ್ವಸ್ತಿಕದಷ್ಟು ದೊಡ್ಡಕೆ ಬೇಂಡೇಜು ಇದ್ದತ್ತು.
ನರಂಬಿಂಗೆ ಪೆಟ್ಟಾದ್ಸು – ಹೇಳುಗು ಬಟ್ಟಮಾವ ಕೇಳಿದವರ ಹತ್ರೆ.
ಲಿಗಮೆಂಟು ಡೇಮೇಜು – ಹೇದು ಡಾಗುಟ್ರು ಹೇಳುಗು.
ಶುಕ್ರಾರ್ಕ ಸಂಧಿ ದೋಷ – ಹೇದು ಜೋಯಿಶಪ್ಪಚ್ಚಿ ಹೇಳುಗು,
ದೂಜಸೋಜ° ಹಳೆಅಗಳು ಮುಚ್ಚದ್ದು ಕಾರಣ – ಹೇದು ರಂಗಮಾವ ಹೇಳುಗು.

ಒಟ್ಟಿಲಿ ಬಟ್ಟಮಾವಂಗೆ ನೆಡವಲೆ ಗೊಂತಿಲ್ಲೆ, ನೆಡವಲಾಗ ಹೇಯಿದ್ದವಾಡ ಕೊಡೆಯಾಲದ ಗೋಪಿನಾತ ಡಾಗುಟ್ರು.
ಪ್ರತಿ ಎರಡು ವಾರಕ್ಕೊಂದರಿ ಜೀಪು ಮಾಡಿಗೊಂಡು ಕೊಡೆಯಾಲಕ್ಕೆ ಹೋವುಸ್ಸು, ಡಾಗುಟ್ರು ಒಂದರಿ ಬೇಂಡೇಜು ಬಿಡುಸಿ – ಕೂಡಿತ್ತೋ ನೋಡಿ – ಒಪಾಸು ಕಟ್ಟುದು.
(ಬೋಚಬಾವ ಕಶಿಕಟ್ಟಿದ್ದು ಕೂಡಿತ್ತೋ ನೋಡ್ಳೆ ಬಿಡುಸಿದ ನಮುನೆ ಅಲ್ಲ ಆತೋ – ಓಯಿ. ಅದಿರಳಿ.)

ಅಂತೂ ಇಂತೂ – ಎರಡು ತಿಂಗಳಿನ ಪೂರ್ತಿ ವಿಶ್ರಾಂತಿ ಅಪ್ಪಾಗ ಬೇನೆ ಗುಣ ಆತು.
ನೆಡವಲೆ ಎಡಿವ ಹಾಂಗಾತು.
ಹದಾಕೆ ದಂಟು ಕುಟ್ಟಿಗೊಂಡು ಜಾಲಿಲಿ ನೆಡದವು, ಮತ್ತೆ ಓ ಅಲ್ಲಿ ಮಾರ್ಗಲ್ಲಿ ನೆಡದವು.
ದಿನಾಗುಳೂ ಒಂದರ್ದ ಮೈಲು ನೆಡವ ಹಾಂಗಾತು.
~
ಈಗ ಶಿಷ್ಯವರ್ಗದೋರು ಮನೆಗೆ ಬಂದು ವಾಹನ ತಪ್ಪದು.
ಬಟ್ಟಮಾವ ಹತ್ತಿ ಕೂಪದು.
ಜೆಂಬ್ರ ಕಳುಶಿ ಒಪಾಸು ತಂದು ಬಿಡುದು,
ಇವು ಮನೆಗೆ ಬಪ್ಪದು – ಹೀಂಗಾತು ಕತೆ!

ಈಗಳೂ ಒಂದೊಂದರಿ ಅಂದು ನೆಡವ ದಾರಿ ಬಿದ್ದ ಸಂಗತಿ ನೆಂಪಾದರೆ ಅವಕ್ಕೆ ಹೆದರಿ ಹೋವುತ್ತು.
‘ಆ ದಿನ ರಂಗ° ಬಂದ ಕಾರಣ ಆತು, ಅವ ಕೂಡ್ಳೆ ಕೂಡ್ಳೆ ದಾಕುದಾರನ ಹತ್ರೆ ತೋರ್ಸಿದ ಕಾರಣ ಆತು’ – ಹೇದು ಹೆಮ್ಮೆಲಿ ಹೇಳ್ತವು.
ಆ ದಿನದ ಮದ್ದಿನ ಕರ್ಚನ್ನೂ ರಂಗಮಾವನೇ ನೋಡಿಗೊಂಡ ಬಗ್ಗೆ ತುಂಬಾ ಹೆಮ್ಮೆ ಇದ್ದು ಬಟ್ಟಮಾವಂಗೆ.
~
ಅಪ್ಪೂ, ಅಲ್ಲದ್ರೂ – ಬಟ್ಟಮಾವಂಗೆ ದಣಿಯ ಉತ್ಪತ್ತಿ ಹೇದು ಎಂತೂ ಇಲ್ಲೆ.
ದೊಡಾ ಹಳೆಕಾಲದ ಮನೆ, ದೇವರುಗೊ, ಆಚರಣೆಗೊ, ಆದರೆ ಆ ಮನೆಯ ಅನುರೂಪದ ಜಾಗೆ-ಉತ್ಪತ್ತಿ ಇಲ್ಲೆ.
ಶಿಷ್ಯವರ್ಗ ಕೊಟ್ಟಾಯೆಕ್ಕಷ್ಟೆ.
ಆದರೆ ಆರತ್ರೂ ಕೇಳುಲೆ ಹೋಗವು, ಮಹಾ ಸ್ವಾಭಿಮಾನಿ ಅವು; ಅದು ಎಲ್ಲೋರಿಂಗೂ ಗೊಂತಿಪ್ಪ ಸಂಗತಿ.
ಮೊನ್ನೆ ಮದ್ದಿಂಗೂ ಹಾಂಗೇ – ಅವ್ವಾಗಿ ಕೇಳದ್ರೂ, ವಿಶಯ ಅರಡಿವ ರಂಗಮಾವನೇ ಕೊಟ್ಟದು.

ಅಂತೂ ಈಗ ಆರೋಗ್ಯಲ್ಲಿ ಇದ್ದವು.
~
ನಮ್ಮ ಬಟ್ಟಮಾವನ ಆಪತ್ತಿಂಗೆ ರಂಗಮಾವ ಸಿಕ್ಕಿದವು.
ಎಲ್ಲ ಬಟ್ಟಮಾವಂದ್ರಿಂಗೂ – ರಂಗಮಾವ ಸಿಕ್ಕುಗೋ?
ಹಾಂಗಾರೆ ಬಟ್ಟಮಾವಂದ್ರ ಆಪತ್ತಿಂಗೆ – ಎಂತಾರು ಒಂದು ರಕ್ಷಣೆ ಆಗೆಡದೋ?
ಇಡೀ ಸಮಾಜದ ಕ್ಷೇಮವ ಬಟ್ಟಕ್ಕೊ ಹರಸುತ್ತವು, ಅವರ ಕ್ಷೇಮವ ನೋಡೆಡದೋ?
ನೋಡೆಕ್ಕು.
ಈ ಸಂಗತಿಗಾಗಿಯೇ – ನಮ್ಮ ಗುರುಗೊ ಮೊನ್ನೆ ಮಾಣಿಮಠಲ್ಲಿ *”ವೈದಿಕರ ಕ್ಷೇಮ ನಿಧಿ”* – ಹೇದು ಆರಂಭ ಮಾಡಿದ್ದು.
ಇನ್ನು ಯಾವದೇ ವೈದಿಕರಿಂಗೂ, ಪುರೋಹಿತರಿಂಗೂ – ಒಂದು ಅಭಯ ಹಸ್ತ.

ಸನಾತನ ಧರ್ಮಲ್ಲೇ ಬದ್ಕಿದ ಬಟ್ಟಮಾವಂದ್ರಿಂಗೆ – ಆಪತ್ತಿನ ಕಾಲಲ್ಲಿ ನಮ್ಮ ಗುರುಪೀಠ ಇದ್ದು, ನಮ್ಮ ಮಠ ಇದ್ದು.
ಭಟ್ಟಮಾವಂದ್ರು ಅಂತಾ ಸಂದರ್ಭಲ್ಲಿ ಮಠಂದ ನೆಡವ “ವೈದಿಕ ಕ್ಷೇಮ ನಿಧಿ”ಯ ಉಪಕಾರ ಪಡಕ್ಕೊಂಬಲಕ್ಕು – ಹೇದು ಮೊನ್ನೆ ಮಾಣಿಮಠಲ್ಲಿ ಗುರುಗೊ ಹೇಳಿದವಾಡ.

ವೈದಿಕರು ಒಟ್ಟಾಯೆಕ್ಕು.
ಸಮಾಜ ಕ್ಷೇಮಲ್ಲಿ ಇರೆಕ್ಕಾರೆ ವೈದಿಕರು ಕ್ಷೇಮಲ್ಲಿ ಇರೆಕ್ಕು.
ಅದಕ್ಕಾಗಿ ನಮ್ಮ ಗುರುಗೊ ಆರಂಭಿಸಿದ ಈ ಕ್ಷೇಮನಿಧಿ ಎಲ್ಲ ವೈದಿಕರ ರಕ್ಷಣೆ ಮಾಡಲಿ.
ವೇದವ್ಯಾಸ, ನಾರಾಯಣ, ಗುರುಪೀಠ ಎಲ್ಲರನ್ನೂ ಹರಸಲಿ.

ಶಿಷ್ಯವರ್ಗದೋರು ಶೆಗ್ತಿಮೀರಿ ವೈದಿಕ ಕ್ಷೇಮನಿಧಿ ಯ ವೃದ್ಧಿಸುವೊ°.
ಅಲ್ದೋ?

ಒಂದೊಪ್ಪ : ವೈದಿಕರ ಕ್ಷೇಮವೇ ಸಮಾಜಕ್ಕೆ ನಿಧಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಹರೇರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆಯದು.ಭಟ್ಟಕ್ಕೊಗೆ ಜೀವವಿಮೆ ,ಅಪಘಾತ ವಿಮೆ ಮಾಡಿಸೆಕ್ಕು.ಈ ಬಗ್ಗೆ ಸಮಾಜ ಅವಕ್ಕೆ ವಿಮಾಕಂತು ಕಟ್ಟುಲೆ ಸಹಾಯ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಮಾಷ್ಟ್ರುಮಾವ°ಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಸಂಪಾದಕ°ರಾಜಣ್ಣವಾಣಿ ಚಿಕ್ಕಮ್ಮಶಾಂತತ್ತೆಎರುಂಬು ಅಪ್ಪಚ್ಚಿನೀರ್ಕಜೆ ಮಹೇಶಮಾಲಕ್ಕ°ಪವನಜಮಾವಚೆನ್ನಬೆಟ್ಟಣ್ಣಪುತ್ತೂರುಬಾವದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುವಿಜಯತ್ತೆಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಪ್ರಕಾಶಪ್ಪಚ್ಚಿಪೆರ್ಲದಣ್ಣಶ್ರೀಅಕ್ಕ°ಸುಭಗತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ