ದೀರ್ಘ ಇತಿಹಾಸದ ಯೋಗವ ದೀರ್ಘ ಹಗಲಿನ ದಿನ ಮಾಡುವೊ°.. !

ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ಒಂದೊಂದು ದಿನಂಗೊ – ಹೇದು ಮೊನ್ನೆ ರಂಗಮಾವ° ಪರಂಚಿದ್ದಷ್ಟೆ.
ಅಮ್ಮನ ದಿನ, ಅಪ್ಪನ ದಿನ, ಕ್ರಾಂತಿ ದಿನ, ಶೆಂಕ್ರಾಂತಿ ದಿನ, ಪೇಂಟು ಹಾಕುತ್ತ ದಿನ – ಇತ್ಯಾದಿ.
ಮುಕ್ಕಾಲ್ವಾಶಿಯೂ ಅಸಂಬದ್ಧವೇ.
ಆದರೆ, ಎಡಕ್ಕೆಡಕ್ಕಿಲಿ ಒಳ್ಳೆ ಉದ್ದೇಶಂದ ಮಾಡಿದ ಏರ್ಪಾಡುಗಳೂ ಇದ್ದು. ಅದರ್ಲಿ ಒಂದು – ವಿಶ್ವ ಯೋಗ ದಿನ.
~
ಈ ದಿನಾಚರಣೆ ಹುಟ್ಟಿ ಒಂದೇ ಒರಿಶ ಆದ್ಸು. ಈ ಸರ್ತಿ ದ್ವಿತೀಯ ವರ್ಶ.
ಆಚೊರಿಶ ಚಳಿಗಾಲಲ್ಲಿ – ಮೋದಿಯಜ್ಜ° ಭಾರತದ ಪ್ರಧಾನಿ ಆದ ಹೊಸತ್ತರಲ್ಲಿ ವಿಶ್ವಸಂಸ್ಥೆಗೆ ಹೋಗಿತ್ತಿದ್ದವು ಅಲ್ಲದೋ – ಅಲ್ಲಿ ಮಾಡಿದ ಒಂದು ಅಮೋಘ ಭಾಶಣಲ್ಲಿ ವಿಶ್ವ ಯೋಗ ದಿನ ಮಾಡೇಕು – ಹೇದು ಸಲಹೆ ಕೊಟ್ಟಿದವಾಡ.
ಅದಕ್ಕೆ ಸುಮಾರು ದೇಶಂಗೊ ಮೇಜು ಕುಟ್ಟಿ ಸಮ್ಮತಿ ತೋರ್ಸಿದ್ದವಡ.
ಆ ಪ್ರಕಾರ ಎಲ್ಲೋರ ಒಪ್ಪಿಗೆ ಪ್ರಕಾರ ಒಂದಿನ ಯೋಗ ದಿನ ಮಾಡುಸ್ಸು – ಹೇದು ನಿಘಂಟಾತು.
ಯೇವ ದಿನ ಅಕ್ಕು? ಆ ಆಯ್ಕೆಯೂ ಒಂದು ಸ್ವಾರಸ್ಯ.
~
ಯೋಗ – ಹೇದರೆ ಯುಜ್ – ಜೋಡಣೆ ಹೇದು ಅರ್ಥ ಆಡ.
ಎಲ್ಲವೂ ಒಂದು ಯೋಗಲ್ಲೇ ಇಪ್ಪದು ಅಲ್ದಾ?
ಭೂಮಿ – ಸೂರ್ಯನ ಒಟ್ಟಿಂಗೆ ಜೋಡಣೆಲಿ ಇಪ್ಪದು.
ಭೂಮಿಯೊಳ ಪಂಚಭೂತಂಗೊ ಜೋಡಣೆಲಿ ಇಪ್ಪದು.
ಜೀವಾತ್ಮ ಪರಮಾತ್ಮ ಜೋಡಣೆಲಿ ಜೀವನ ಇಪ್ಪದು.
ದೇಹವೂ – ಮನಸ್ಸೂ ಜೋಡಣೆಲಿ ನಾವೆಲ್ಲರೂ ಇಪ್ಪದು.
ಯೋಗ ಇಪ್ಪದೇ ಜೋಡಣೆಲಿ. ಜೋಡಣೆಗೆ.

ಯೋಗಲ್ಲಿ ಹಲವಾರು ಆಸನಂಗೊ ಇದ್ದರೂ – ಅದೆಲ್ಲದರ ಸಾರವ ಸೂರ್ಯನಮಸ್ಕಾರಲ್ಲಿ ಕಾಂಬಲಕ್ಕಡ.
ಯೋಗ ಮಾಡ್ಳೆ ಪುರುಸೊತ್ತು ಇಲ್ಲದ್ರೆ ಸೂರ್ಯನಮಸ್ಕಾರ ಆದರೂ ಮಾಡಿಕ್ಕಿ – ಹೇದು ಕೆಲವು ಜೆನಂಗೊ ಹೇಳ್ಸು ಕೇಳ್ತು.
ಹಾಂಗೆ ಸೂರ್ಯನಮಸ್ಕಾರ ಹೇದರೆ ಯೋಗಾಸನದ ಪ್ರಾರೂಪ.
ಸೂರ್ಯನಮಸ್ಕಾರ ಹೇದರೆ ಯೋಗದ ಪ್ರವೇಶ.
ನಮ್ಮ ಸೂರ್ಯನೊಟ್ಟಿಂಗೆ ಜೋಡುಸುವ ಒಂದು ಪ್ರಕ್ರಿಯೆ.

ಯೋಗ ನಿತ್ಯವೂ ಮಾಡೆಕ್ಕಾದರೂ – ಅದರ ಬಗ್ಗೆ ಇಡೀ ವಿಶ್ವಕ್ಕೇ ಗೊಂತಾಗುಸುಲೆ, ಒಂದು ನಿರ್ದಿಷ್ಟ ದಿನ ಆರಂಭ ಮಾಡ್ಳೆ – ಯೇವ ದಿನ ಅಕ್ಕು?
ಯೋಗದ ಪ್ರವೇಶ ಮಾಡ್ಳೆ ಯೇವ ದಿನ ಅಕ್ಕು?
ಸೂರ್ಯನಮಸ್ಕಾರ ಮಾಡ್ಳೆ ಸೂರ್ಯನ ದಿನವೇ ಸೂಕ್ತ!
ಸೂರ್ಯನ ದಿನ?
ಅಪ್ಪು, ಭೂ ಕಕ್ಷೆಯ ಪರಿಭ್ರಮಣೆಲಿ ದಿನಾಮಾನ ಹೆಚ್ಚು-ಕಮ್ಮಿ ಆವುತ್ತಿದಾ.
ಹಗಲು ರಾತ್ರಿ ಸಮಯ ವಿತ್ಯಾಸ ಆವುತ್ತಾ ಹೋವುತ್ತು.
ಪ್ರತಿ ಒರಿಶ, ಅಂದಾಜು ಜೂನ್ ಇಪ್ಪತ್ತೊಂದನೇ ತಾರೀಕಿಂಗೆ ಸೂರ್ಯನ ಬೆಣಚ್ಚು ಜಾಸ್ತಿ ಆಡ.
ಉತ್ತರ ಧೃವಪ್ರದೇಶಲ್ಲಿ ಅಂತೂ – ಇರುಳೇ ಇಲ್ಲದ್ದ ಹಗಲು!
ಇದರಿಂದಾಗಿಯೇ – ಈ ದಿನ ವಿಶೇಷವಾಗಿ ಸೌರ ಪರ್ವದಿನ.
~

ವೇದಂಗಳಲ್ಲಿ ಉಲ್ಲೇಖಗೊಂಡ, ಋಶಿ ಪತಂಜಲಿಂದ ಯೋಗಸೂತ್ರವಾಗಿ ಸಂಪಾದಿತಗೊಂಡ ಯೋಗಾಸನಂಗೊ ನಮ್ಮ ಔನ್ನತ್ಯಕ್ಕೆ ಸಾಧನ. ನಮ್ಮ ಹಿರಿಯರು ಹೀಂಗಿಪ್ಪ ಎಷ್ಟೋ ಸಾಧನಂಗಳ ಮಾಡಿ ಕೊಟ್ಟಿದವು. ನಾವು ಅದರ ಸರಿಯಾಗಿ ವಿನಿಯೋಗಿಸಿಗೊಳದ್ದರೆ ನವಗೇ ನಷ್ಟ.
ದೈಹಿಕ, ಮಾನಸಿಕ ಉನ್ನತಿಗೆ ಯೋಗ ಸಹಕಾರಿ.
ಪ್ರತಿಯೊಬ್ಬನೂ ಇದರ ಆರಂಭಿಸುವೊ°, ಆ ಮೂಲಕ ಲೋಕದ ಆರೋಗ್ಯವಂತರ ಸಂಖ್ಯೆ ವೃದ್ಧಿಸುವೊ°.
~
ಒಂದೊಪ್ಪ: ಯೋಗ ದಿನಲ್ಲಿ ಎಲ್ಲರೂ ಒಂದಪ್ಪ ಯೋಗ ಒದಗಿ ಬರಲಿ.

ಒಪ್ಪಣ್ಣ

   

You may also like...

2 Responses

  1. ಹರೇರಾಮ,ಒಳ್ಳೆಶುದ್ದಿ . ಒಂದೊಳ್ಳೆ ಯೋಗ ಕೂಡಿಬಯಿಂದು ನವಗೆ. ಒಪ್ಪಣ್ಣನ ಈ ಶುದ್ದಿಯ ಓದಲೂ ಈಗ ಯೋಗ ಕೂಡಿ ಬಂತಷ್ಟೆ ಎನಗೆ!.

  2. ಗೋಪಾಲ ಬೊಳುಂಬು says:

    ಭಾರೀ ಚೆಂದಕೆ ನಿನ್ನೆ ವಿಶ್ವಯೋಗ ದಿನದ ಆಚರಣೆ ವಿಶ್ವಾದ್ಯಂತ ನೆಡದತ್ತು. ಒಪ್ಪ ಸಮಯಕ್ಕೆ ಒಪ್ಪ ಶುದ್ದಿ. ಪ್ರತಿದಿನವುದೆ ಯೋಗಾಭ್ಯಾಸ ನೆಡೆತ್ತಾ ಇರಳಿ. ಎಂಗಳ ಬ್ಯಾಂಕಿಲ್ಲಿಯುದೆ ನಿನ್ನೆ ಉದಿಯಪ್ಪಗ ೮ ಗಂಟೆಂದ ಒಂದು ಗಂಟೆ ಯೋಗ ಕಾರ್ಯಕ್ರಮ ನೆಡದತ್ತು. ಎಂಗಳೊಟ್ಟಿಂಗೆ ಅಧ್ಯಕ್ಷರುದೆ ಇದರಲ್ಲಿ ಭಾಗವಹಿಸಿದವು ಹೇಳಲೆ ಸಂತೋಷ ಪಡ್ತಾ ಇದ್ದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *