ಆದಿಯೂ ಇಲ್ಲದ್ದ, ಅಂತ್ಯವೂ ಇಲ್ಲದ್ದ ಜಗತ್ತಿಂಗೆ ಯುಗಾದಿಯ ಗೌಜಿ…!

April 8, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿತ್ಯವೂ ಸೂರ್ಯೋದಯ ಆವುಸ್ಸು ಸತ್ಯ.
ಇಂದು ಪಡು ಕಡಲಿಲಿ ಕಂತಿದ ಸೂರ್ಯ ನಾಳೆ ಮೂಡ ಕಡಲಿಂದ ಎದ್ದು ಬಪ್ಪದು ವಿಧಿ ನಿಯಮ.
ಸೂರ್ಯ ಭೂಮಿಗೆ ಸುತ್ತ ಬಪ್ಪದೋ, ಭೂಮಿ ಸೂರ್ಯನ ಸುತ್ತುದೋ – ಎರಡ್ರಲ್ಲಿ ಯೇವದೋ ಒಂದು ಸುತ್ತುತ್ತು.
ಒಪ್ಪಣ್ಣಂಗರಡಿಯ.

ಬಟ್ಯ ಒಂದು ನಮುನೆ ಹೇಳುಗು, ಆರ್ಯಭಟ ಒಂದು ನಮುನೆ ಹೇಳುಗು.
ಅಂತೂ ಸುತ್ತುದೇ ಜೀವನ ಚಕ್ರ.
ಅದಿರಳಿ.

~

ವೃತ್ತ ಹೇದ ಮತ್ತೆ ಮೇಗೆಯೂ ಇಲ್ಲೆ, ಕೆಳವೂ ಇಲ್ಲೆ. ಆದಿಯೂ ಇಲ್ಲೆ, ಅಂತ್ಯವೂ ಇಲ್ಲೆ.
ಬೆಲ್ಲಲ್ಲಿ ಕಡೆಕೊಡಿ ಇಲ್ಲೆ ಹೇಳಿದ ಹಾಂಗೆ, ಚಕ್ರಲ್ಲಿ ಆರಂಭ-ಅಂತ್ಯ ಇಲ್ಲೆ.
ಒಂದರಿ ಸುರು ಆತು ಹೇದು ಕಂಡ್ರೂ, ಅದರಿಂದ ಹಿಂದೆ ಎಂತದೋ ಇರ್ತು, ಅದು ಮುಂದುವರುದು ಇಪ್ಪದಷ್ಟೇ.
ನಮ್ಮ ಕಣ್ಣಿಂಗೆ ಆರಂಭದ ಹಾಂಗೆ ಕಾಂಬದು, ಅದೊಂದು ಮಿಥ್ಯ.

~

ಚಕ್ರ ಎಷ್ಟೇ ಒಂದೇ ನಮುನೆ ಹೇದರೂ ನವಗೆ ಗುರ್ತಕ್ಕೆ ಅದರ್ಲಿ ಗುರ್ತ ಮಾಡಿಗೊಳ್ತು ಅಪ್ಪೋ.
ಸೈಕ್ಕಾಲು ಚಕ್ರಲ್ಲಿ ಕಡ್ಡಿಗೊ ಗುರ್ತಕ್ಕೆ ಇಪ್ಪ ಹಾಂಗೆ,
ರಾಶಿ ಚಕ್ರಲ್ಲಿ ರಾಶಿಗೊ ಇರ್ತ ಹಾಂಗೆ,
ಪ್ರತಿ ಚಕ್ರಲ್ಲಿಯೂ ಗುರ್ತಕ್ಕೆ ಒಂದು ಮಡಿಕ್ಕೊಳ್ತು.
ಹಾಂಗೇ – ಭೂಮಿಯ ಪರಿಭ್ರಮಣೆಲಿ ಬಪ್ಪ ಸಂವತ್ಸರದ ಚಕ್ರಲ್ಲಿಯೂ – ನಾವು ಒಂದು ನಿರ್ದಿಷ್ಟ ನಿರ್ದಿಷ್ಟ ದಿನವ ಗುರ್ತ ಹಿಡಿತ್ತು.

ಯೇವ ರೀತಿ ಇಂಗ್ಳೀಶರ ಕೆಲೆಂಡರಿಲಿ ಜೆನವರಿ ಇದ್ದೋ, ಹಾಂಗೇ ನಮ್ಮ ಜೋಯಿಶಪ್ಪಚ್ಚಿ ಪಂಚಾಂಗಲ್ಲಿ ಯುಗಾದಿ ಲೆಕ್ಕ ಇದ್ದು.
~
ನಮ್ಮ ಚಾಂದ್ರಮಾನ ಲೆಕ್ಕಾಚಾರಲ್ಲಿ ಒರಿಶಾರಂಭದ ದಿನವೇ ಯುಗಾದಿ.
ಚಾಂದ್ರಮಾನದ ಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮಿ ತಿಥಿಯ ದಿನಕ್ಕೆ ಯುಗಾದಿ ಹೇಳ್ತವು.
ಅಲ್ಲಿಂದ ಮತ್ತೆ ಹೊಸ ಸಂವತ್ಸರ ಸುರು.
ಸಂವತ್ಸರದ ಲೆಕ್ಕ ಹಿಡಿತ್ತೋರಿಂಗೆ – ನಿನ್ನೆ ಒರೆಂಗೆ ಮನ್ಮಥ ಸಂವತ್ಸರ, ನಾಳೆಂದ ದುರ್ಮುಖಿ.
ನಮ್ಮಲ್ಲಿ ಪಂಚಾಂಗಲ್ಲಿ ಮಾಂತ್ರ ಹೊಸತ್ತು, ಒರಿಶ ಹೊಸತ್ತು ಅಪ್ಪದು ವಿಷುವಿಂಗೇ ಇದಾ!
ವಿಷು ಹೇದರೆ – ಸೌರಮಾನ ಯುಗಾದಿ. ಸೂರ್ಯ ಪುನಾ ಮೇಶ ರಾಶಿಗೆ ಬಂದು ಅಲ್ಲಿಂದ ಒಂದನೇ ಹೊದ್ದು ಸುರು ಮಾಡ್ತ°.
~
ಹೊಸ ಒರಿಶವ ನಾವು ಮಾಂತ್ರ ಆರಂಭ ಮಾಡುದಲ್ಲ, ಒಟ್ಟಿಂಗೆ ಪಶು ಪಕ್ಷಿ, ಕಾಡು ಮರಂಗಳೂ ಮಾಡ್ತವು.
ಮರಂಗೊ ಈ ಸಮಯಲ್ಲಿ ಚಿಗುರು ಬಿಟ್ಟು ಹೊಸ ಎಲೆಯ ಜೀವನ ಆರಂಭ ಮಾಡ್ತವು.
ಹಣ್ಣು ಹಂಪಲುಗೊ ಕೊಡ್ತ ಮರಂಗೊ ಅವರ ಹೊಸ ಫಲವ ಎದುರು ನೋಡ್ತಾ ಇರ್ತವು.
ಅಲಫಲಂಗೊ ಧಾರಾಳವಾಗಿ ಜೀವರಾಶಿಗೆ ಸಿಕ್ಕುವ ಹಾಂಗಾವುತ್ತು.
ಇದೆಲ್ಲವೂ ಹೊಸ ಒರಿಶದ ಸಂಕೇತವೇ ಅಲ್ಲದೋ?
~
ಹೊಸ ಒರಿಶದ ದಿನ ಗಟ್ಟದ ಮೇಗೆ “ಬೇವು ಬೆಲ್ಲ” – ಹೇದು ಗೌಜಿ ಮಾಡ್ತ ಕ್ರಮ ಇದ್ದು.
ಕಹಿಬೇವಿನ ಪಚ್ಚೆಯೂ, ಬೆಲ್ಲದ ಉಂಡೆಯೂ – ಒಟ್ಟಿಂಗೇ ತಿನ್ನೇಕಡ.
ಇದು ಆರೋಗ್ಯಕ್ಕೆ ಒಳ್ಳೆದು ಹೇದು ಬಳ್ಳಮೂಲೆ ಮಾವ° ಹೇಳುಗು; ಇದು “ನೋವು-ನಲಿವಿನ” ಸಂಕೇತ ಹೇಳುಗು ಚಂಪಕಣ್ಣ.
ಸೂಕ್ತ-ಸಂಕೇತ ಏನೇ ಇರಲಿ, ಜೀವನಲ್ಲಿ ಕೈಕ್ಕೆಯೂ ಇರ್ತು, ಚೀಪೆಯೂ ಇರ್ತು – ಹೇದು ಸುರುವಾಣ ದಿನ ನೆಂಪು ಮಾಡುದು ಒಳ್ಳೆ ಕ್ರಮವೇ.
~

ಆಗಲೇ ಹೇಯಿದ ಹಾಂಗೆ, ವೃತ್ತಲ್ಲಿ ಆದಿಯೂ ಇಲ್ಲೆ, ಅಂತ್ಯವೂ ಇಲ್ಲೆ.
ಆದರೂ ಯುಗ ಆದಿ ಆತು – ಒರಿಶ ಆರಂಭ ಆತು ಹೇದು ನಾವು ಆಚರಣೆ ಮಾಡ್ತು.
ಆ ದಿನ ಇಂದು ಬಂತು.

ಹೊಸ ಯುಗ ನಮ್ಮದಾಗಲಿ. ಬೈಲಿನ ಎಲ್ಲೋರಿಂಗೂ ಒಳ್ಳೆದಾಗಲಿ.
ಗುರು ದೇವರ ಅನುಗ್ರಹ ನವಗೆ ಎಲ್ಲೋರಿಂಗೂ ಇರಲಿ.

~

ಒಂದೊಪ್ಪ: ಮನ್ಮಥ ಸಂವತ್ಸರಲ್ಲಿ ಉಪದ್ರ ಮಾಡಿದ ದುರ್ಮುಖಿಗೊ, ದುರ್ಮುಖಿಲಿ ನಿರ್ನಾಮ ಆಗಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೇದು

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇ ರಾಮ, ಎಲ್ಲೋರಿಂಗೂ ಆ ಶ್ರೀ ರಾಮ ದೇವರು ಒಳ್ಳೆಬುದ್ಧಿ ಕೊಡಲಿ. ಶ್ರೀ ಗುರು ಕಾರುಣ್ಯ ಲಭಿಸಿ ಹವ್ಯಕ ಮಹಾಮಂಡಲದ ಸರ್ವತೋಮುಖ ಅಭ್ಯುದಯವಾಗಲಿ.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಎಲ್ಲೋರಿಂಗೂ ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣದೊಡ್ಡಭಾವಶರ್ಮಪ್ಪಚ್ಚಿಪಟಿಕಲ್ಲಪ್ಪಚ್ಚಿಕೇಜಿಮಾವ°ಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಪೆಂಗಣ್ಣ°ಡೈಮಂಡು ಭಾವಶೇಡಿಗುಮ್ಮೆ ಪುಳ್ಳಿರಾಜಣ್ಣಪೆರ್ಲದಣ್ಣಸುವರ್ಣಿನೀ ಕೊಣಲೆವಿಜಯತ್ತೆಅಜ್ಜಕಾನ ಭಾವಡಾಮಹೇಶಣ್ಣಮಾಷ್ಟ್ರುಮಾವ°ಕಳಾಯಿ ಗೀತತ್ತೆಒಪ್ಪಕ್ಕಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವಬೋಸ ಬಾವಅನು ಉಡುಪುಮೂಲೆಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ