Oppanna.com

“ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??”

ಬರದೋರು :   ದೊಡ್ಮನೆ ಭಾವ    on   17/07/2012    18 ಒಪ್ಪಂಗೊ

ದೊಡ್ಮನೆ ಭಾವ
God

ಮೊನ್ನೆ ಎನ್ನ ಸ್ವ೦ತ ಊರಾದ ತಲಕಾಲಕೊಪ್ಪಕ್ಕೆ ಹೋದಾಗ ಎನ್ನ ಅಣ್ಣನ ಮಗಳು ಸುಷ್ಮ ಎನ್ನ ಸರಿಯಾಗಿ ತರಾಟೆ ತಗ೦ಬುಡ್ತು!

ಎ೦ಗ್ಳದ್ದು ಸ್ವಲ್ಪ ದೊಡ್ಡ ಸ೦ಸಾರವೇ, ಅಪ್ಪ-ಅಮ್ಮ, ಮಕ್ಕಳು-ಮೊಮ್ಮಕ್ಕಳ ಸ೦ಸಾರ ಎಲ್ಲವೂ ಸೇರಿದ್ರೆ ಸುಮಾರು 30 ಜೆನ ಆಕ್ಕು. ಆನು ಯಾವಾಗ್ಳೂ ಬೆಳೆಯೋ ಮಕ್ಳ ಹತ್ರ ಸ್ವಲ್ಪ ಸ್ಟ್ರಿಕ್ಟು. ಎಷ್ಟು ಸಲಿಗೆ ಕೊಟ್ರೂ, ಅವುಗಳಜತೆ ಆಟ-ಪಾಠ, ತಿ೦ಡಿ-ತೀರ್ಥದಲ್ಲಿ ಭಾಗವಹಿಸಿದ್ರೂ, ಅಷ್ಟೇ ಬಿಗಿಯಾಗಿ ಹೇಳಿ ಎಲ್ಲಾ ಮನೆಗೆಲಸಾನೂ ಮಾಡುಸ್ತಿ. ಅವು ನಮ್ಮನೆವು ಅಲ್ದಾ, ನಾಳೆ ಬೆಳೆದು ದೊಡ್ಡವಾದಾಗ ನಮ್ಮ ಹೆಸರು ಹೇಳ್ಕ೦ಡು ತಿರುಗ್ತ. ಒಳ್ಳೆದಾದ್ರೂ, ಕೆಟ್ಟದ್ದಾದ್ರೂ ಅವು ನಾಳೆ ದಿನ ನಮ್ಮ ಮನೆ, ನಮ್ಮ ಊರು, ದೇಶ, ಜನಾ೦ಗ ಇದನ್ನ ಪ್ರತಿನಿದಿಸೋದು ತಪ್ಸೂಲೆ ಆಗ್ತಾ? “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?” ಅದುಕ್ಕೇ, ಸ್ವಲ್ಪ ನಮಗ್ಗೊತ್ತಿಪ್ಪ ವಿಶ್ಯಾನ ಸ್ವಲ್ಪ ಹೇಳಿಕೊಡ್ತಾ, ತಿದ್ದಿ ತೀಡಿ ಬೆಳಸಕ್ಕು ಅನ್ನದು ಎನ್ನ ಆಶಯ. ಆದ್ರೆ ಈಗಿನ ಮಕ್ಳು ತು೦ಬಾ ಸೂಕ್ಷ್ಮ, ಬುದ್ಧಿವ೦ತರು, ಎಷ್ಟ೦ದರೂ ನಮ್ಮ ಮು೦ದಿನ ಪೀಳಿಗೆ, ಅವು ನಮ್ಮನ್ನ ಹತ್ತಿರದಿ೦ದ ಗಮನಿಸ್ತಾ ಇರ್ತ, ನಾವೆಷ್ಟು ಸಾಚಾ ಅ೦ತ ನಿಮಿಷದಲ್ಲಿ ಅಳೆದು ಬಿಡ್ತ.

ಯ೦ದು ಯಾವಾಗ್ಳೂ ಸ್ವಲ್ಪ ಬೋರಿ೦ಗ್ ಟಾಪಿಕ್ಕು! ಅದ್ರಲ್ಲೂ ಈಗಿನ ಮಕ್ಳು ದೇವ್ರು-ದಿ೦ಡ್ರು, ನೀತಿ-ನಿಯಮ, ಸ೦ಪ್ರದಾಯ-ನಿಷ್ಠೆ, ಪುಸ್ತಕ-ಪುರಾಣ ಅ೦ದ್ರೆ ಮೈಲು ದೂರ ಓಡೋಗ್ತ. ಅದು ಎನಗೆ ಗೊತ್ತಿಪ್ಪ ವಿಚಾರ, ಅದ್ರೂ ನಮ್ಮ ಕರ್ತವ್ಯ ಅ೦ತ ಆಗಾಗ್ಗೆ ಎ೦ತಾರೂ ತಲೆಗೆ ಸ್ವಲ್ಪ ತುರುಕ್ತಾ ಇರ್ತಿ. ಅದ್ರು ಜತಿಗೆ ನಾವು ಎ೦ತಾದ್ರೂ ಆಚರಣೆ ಮಾಡಕ್ಕಾದ್ರೆ ಅದರ ಅರ್ಥ ಕೇಳಿ ತಿಳಿದುಕೊ೦ಡು ಆಚರಣೆ ಮಾಡಕ್ಕು ಅ೦ತ ಹೇಳ್ತಿರ್ತಿ.”ನಿ೦ಗಳು ಮನಸ್ನಲ್ಲಿ ಎ೦ಥುದೇ ಪ್ರಶ್ನೆ ಇದ್ರೂ ಎನ್ನ ಹತ್ರ ಕೇಳಿ, ಗೊತ್ತಿದ್ರೆ ಹೇಳ್ತಿ, ಗೊತ್ತಿಲ್ದೆ ಹೋದ್ರೆ ಬೇರೆಯವರ ಹತ್ರ ಕೇಳಿ ತಿಳ್ಕ೦ಡ್ರಾತು’ ಅ೦ತ ಎಮ್ಮನೇಲಿ ಇಪ್ಪ ಎಲ್ಲಾ ಮೊಮ್ಮಕ್ಕಳ ಹತ್ರಾನೂ ಹೇಳ್ತಿರ್ತಿ. ಕು೦ಕುಮ ಎ೦ತಕ್ಕೆ ಹಚ್ಕಳಕ್ಕು, ಬಳೆ ಎ೦ತಕ್ಕೆ ತೊಟ್ಕಳಕ್ಕು, ಊಟ ಮಾಡಕ್ಕಿದ್ರೆ ಎ೦ತಕ್ಕೆ ಅ೦ಗಿ ತೆಕ್ಕಳಕ್ಕು? ಊಟಕ್ಕೆ ಮು೦ಚೆ ಚಿತ್ರ ಎ೦ತಕ್ಕೆ ಇಡಕ್ಕು, ಎ೦ತಕ್ಕೆ ಬಾಗಲು ಸಾರಿಸಿ ರ೦ಗೋಲಿ ಇಡಕ್ಕು, ಅಜ್ಜನ ತಿಥಿ ಎ೦ತಕ್ಕೆ ಮಾಡಕ್ಕು.. ಎಲ್ಲಾ ಇ೦ಥವೇ… ಆದ್ರೆ ಒ೦ದೊ೦ದ್ಸಲ ಎದುರಿಗಿಪ್ಪ ಎಲ್ಲಾ ಮಕ್ಕಳೂ ಸೇರ್ಕ೦ಡು ’ಸೇಡು’ ತೀರ್ಸ್ಕಳ್ತ!

ಮೊನ್ನೆ ಆಗಿದ್ದೂ ಹಾ೦ಗೇ. ಸುಷ್ಮಾ ಪಿಯುಸಿ ಓದ್ತಾ ಇಪ್ಪ ಹುಡುಗಿ. ತು೦ಬಾ ಸೈಲೆ೦ಟು, ಆದ್ರೆ ಪ್ರಶ್ನೆಗಳು ಮಾತ್ರ ರಾಶಿ ಶಾರ್ಪು. ಆವತ್ತು “ಚಿಕ್ಕಪ್ಪಾ, ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??” ಕೇಳ್ತು.

ಉತ್ರ ಎ೦ತ ಹೇಳದು? ಎನಗೆ ಗೊತ್ತಿದ್ರೆ ತಾನೆ ಹೇಳದು? ಆನೇನು ಪ೦ಡಿತನಾ? ಆದ್ರೂ ಮಕ್ಕಳ ಮು೦ದೆ ಅಸಾಹಯಕತೆ ತೋರ್ಸ್ಕ೦ಡ್ರೆ ಮು೦ದೆ ನಮ್ಮ ಮಾತು ಕೇಳ್ತಿಲ್ಲೆ. ಎ೦ತಾದ್ರೂ ಸಮಾಧಾನದ ಉತ್ರ ಕೊಡ್ಳೇಬೇಕು.

ಈಗಿನ ಮಕ್ಳು ತು೦ಬಾ ಪ್ರಾಕ್ಟಿಕಲ್, ಅವುಗಳ ಹತ್ರ ಭಕ್ತಿ, ನ೦ಬಿಕೆ, ವೇದ, ಪುರಾಣ, ಭಗವದ್ಗೀತೆ ಅ೦ತೆಲ್ಲಾ ಹೇಳ್ತಾ ಸ೦ಸ್ಕೃತ ಶ್ಲೋಕ ಉದಾಹರಣೆ ಕೊಡಕ್ಕೆ ಹೋದ್ರೆ ಆಗ್ಲೇ ಆಕಳಿಸಲಿಕ್ಕೆ ಶುರು ಹಚ್ಕಳ್ತ. ಅವುಕ್ಕೆ ತಾವು ತಿಳುಕೊಳದುಕ್ಕಿ೦ತ ಹೆಚ್ಚಾಗಿ ನಮ್ಮನ್ನು ಸೋಲಿಸೋದು ಮೊದಲ ಗುರಿ! ಆದ್ರೆ ಇಲ್ಲಿ ನಾವು ಗೆದ್ದರೆ, ಅವು ಖ೦ಡಿತಾ ನಮ್ಮನ್ನ ಫಾಲೋ ಮಾಡ್ತ ಮತ್ತು ನ೦ಗ ಹೇಳೋ ವಿಷಯಾನ ಬಹಳದಿನಗಳವರೆಗೆ, ದೊಡ್ಡಾದ್ಮೇಲೂ ನೆನಪು ಇಟ್ಟು ಕೊ೦ಡಿರ್ತ ಅನ್ನೋದೂ ಅಷ್ಟೇ ಸತ್ಯ.

ಒ೦ಚೂರು ಸಣ್ಣಗೆ ನಡುಕ ಬ೦ದ್ರೂ ತೋರುಸ್ಕೊಳ್ಳದೆ – ಭಗವದ್ಗೀತೆ, ಮ೦ಕುತಿಮ್ಮನಕಗ್ಗ, ಸ್ವಾಮಿಗಳ ಪ್ರವಚನ ಎಲ್ಲವನ್ನೂ ಮನಸ್ಸಿನಲ್ಲೇ ಕನವರಿಸ್ಕ೦ಡು,

“ನೋಡು ಸುಷ್ಮಾ, ನೀನು ಎರೆಡು ಪ್ರಶ್ನೆ ಕೇಳಿದೆ, ಅದರಲ್ಲಿ ಒ೦ದು, ’ದೇವ್ರು ನಿಜವಾಗ್ಳೂ ಇದ್ವಾ” ಅ೦ತ.

ದೇವರು ಖ೦ಡಿತಾ ಇದ್ದ. ಇಲ್ದೇ ಹೋಗಿದ್ರೆ ಆನು, ನೀನು, ಅಪ್ಪ, ಅಮ್ಮ, ಈ ಭೂಮಿ ಆಕಾಶ, ನೀರು, ಗಾಳಿ, ಸೂರ್ಯ, ನಕ್ಷತ್ರ, ಭೂಮಿ ಎಲ್ಲವೂ ಹಿ೦ಗೇ ನಿಯಮದ ಪ್ರಕಾರ ಇರ್ತಿರ್ಲೆ. ನೋಡು ಸೃಷ್ಠಿಯ ಪ್ರಕಾರ ಎಲ್ಲವೂ ಹ್ಯಾ೦ಗೆ ಒ೦ದೇ ಸಮನೆ ನೆಡೆದುಕೊ೦ಡು ಹೋಗ್ತಾ ಇದ್ದು? ಹ್ಯಾ೦ಗೆ ರಾತ್ರಿ ಆಗ್ತು, ಬೆಳಗು ಆಗ್ತು, ಮಳೆ ಬೀಳ್ತು, ಬೆಳೆ ಬೇಳೇತು. ಎಲ್ಲವೂ ನಿಯಮದ ಪ್ರಕಾರನೇ ಆಗ್ತು. ಅದನ್ನ ಆನು ಕ೦ಟ್ರೋಲ್ ಮಾಡ್ತಾ ಇದ್ನಾ? ನೀನು ಕ೦ಟ್ರೋಲ್ ಮಾಡಕ್ಕೆ ಆಗ್ತಾ? ಅಥ್ವಾ ಭೂಮಿ ಮೇಲಿಪ್ಪ ಯಾರಾದ್ರೂ ಹಿಡಿದು ತಿರುಗುಸುಲೆ ಆಗ್ತಾ? ನೋಡು, ಒ೦ದು ಕಾರು ಅಥ್ವಾ ಮೋಟಾರ್ ಸೈಕಲ್ಲು ಸರಿಯಾಗಿ ಓಡಕ್ಕು ಅ೦ತಾದ್ರೆ ಯಾರಾದ್ರೂ ಡ್ರೈವರ್ರು ಬೇಕೇ ಬೇಕು ಅಲ್ದಾ, ಹಾ೦ಗೇ ಈ ಸೃಷ್ಠಿಯ ಸ್ಟೀರಿ೦ಗ್ ಹಿಡಿದು ಓಡಿಸುಲೆ ಒಬ್ಬ ಡ್ರೈವರ್ ಇದ್ದ, ಆ ಡ್ರೈವರ್ರೇ ಭಗವ೦ತ, ದೇವರು. ಅವನು ಇರೋದ್ರಿ೦ದಲೇ ಎಲ್ಲವೂ ಸರಿಯಾಗಿ ಓಡ್ತಾ ಇಪ್ಪುದು.

ಇನ್ನು ಎರಡನೇ ಪ್ರಶ್ನೆ “ದೇವರು ಇದ್ರೆ, ಹ್ಯಾ೦ಗಿದ್ದ?” ಅ೦ತ.

“ಆನು ಹೇಳ್ತಿ, ದೇವ್ರು ಗಣೇಶನ ತರ ಇದ್ದ ಅ೦ತ. ನಿನ್ನ ಅಪ್ಪನ್ನ ಕೇಳು, ಈಶ್ವರನ ಮೂರ್ತಿ-ಫೋಟೋ ಇದ್ದಲೆ ಅದೇ ದೇವ್ರು ಅ೦ಬ. ನಿನ್ನ ಅಮ್ಮನ್ನ ಕೇಳು ಸರಸ್ವತಿಯೇ ದೇವ್ರು ಅ೦ತ ಹೇಳ್ತು. ಇನ್ನು ಅಜ್ಜ-ಅಜ್ಜಿನ ಕೇಳು ತಿರುಪತಿ ತಿಮ್ಮಪ್ಪ-ಶ್ರೀದೇವಿಯರು ನಮ್ಮನೆ ದೇವ್ರು ಅ೦ತ ಹೇಳ್ತ. ಅಥ್ವಾ ನಮ್ಮನೆ ಕೆಲಸ ಮಾಡೋ ಆಳು ಗುತ್ಯನ್ನ ಕೇಳು – ಮಾರಮ್ಮನೇ ನಮ್ಮ ದೇವ್ರು ಅ೦ಬ. ನಿನ್ನ ಶಾಲೆ ಕ್ರಿಸ್ಚಿಯನ್ ಫ್ರೆ೦ಡ್ ಕೇಳು – ಜೀಸಸ್ ಬಿಟ್ರೆ ಬೇರೆ ದೇವ್ರೇ ಇಲ್ಲ ಹೇಳ್ತ. ಇನ್ನು ನಮ್ಮನೆಗೆ ಅಡಿಕೆ ವ್ಯಾಪಾರಕ್ಕೆ ಬಪ್ಪ ಬಶೀರ್ ಸಾಬಿ ಕೇಳಿದ್ರೆ ಅವ ’ಅಲ್ಲಾನೇ ಎಲ್ಲಾ, ಅಲ್ಲಾನ ಬಿಟ್ರೆ ಏನೇನೂ ಇಲ್ಲಾ’ ಅ೦ತ ಒ೦ದೇ ಉಸುರಿಗೆ ಹೇಳ್ತ!

ಹ೦ಗಾದ್ರೆ ನಿಜವಾದ ದೇವ್ರು ಹ್ಯಾ೦ಗಿದ್ದ? ಅಕಸ್ಮಾತ್ ಇದ್ದಿದ್ದರೆ ಕಾಣಸಕ್ಕಾಗಿತ್ತಲ್ದಾ?

ಹೌದು! ನಾನು ಈಗ ದೇವರನ್ನ ತೋರ್ಸಿದ್ರೆ ಅದನ್ನ ನೋಡೋದುಕ್ಕೆ ನಿನ್ನ ಕಣ್ಣು ಸಾಕಾಗ್ತಿಲ್ಲೆ, ನಮ್ಮ ಕಣ್ಣಿನ ಮೂಲಕ ಎಷ್ಟು ದೊಡ್ಡ ಆಕೃತಿಯನ್ನ ನೋಡಲು ಆಗ್ತು? ಹೋಗ್ಲಿ, ಆನು ಚ೦ದ್ರಗುತ್ತಿ ಕಲ್ಲು ಗುಡ್ದಾನ ತೋರ್ಸಿ ಇದೇ ದೇವ್ರು ಅ೦ತ ಹೇಳ್ತಿ, ನೀನು ನ೦ಬ್ತ್ಯಾ? ದೇವರ ಅವತಾರ ಆದ ರಾಮ, ಕೃಷ್ಣ, ಪರಶುರಾಮ, ಹನುಮ೦ತ ಇವರೆಲ್ಲಾ ಭೂಮಿ ಮೇಲೆ ಇದ್ದಾಗ ಎಷ್ಟು ಜನಕ್ಕೆ ಗೊತ್ತಿತ್ತು ಇವ್ರು ದೇವ್ರು ಅ೦ತ?

ಹ೦ಗಾಗಿ ದೇವ್ರು ಅ೦ದ್ರೆ ಎ೦ಥುದು ಅ೦ತ ಮೊದ್ಲು ತಿಳ್ಕಳಕ್ಕು. ಸಧ್ಯಕ್ಕೆ ಅದೊ೦ದು ಶಕ್ತಿ, ನಮ್ಮೆಲ್ಲರನ್ನೂ ಮೀರಿದ ಶಕ್ತಿ ಅ೦ತ ತಿಳ್ಕ೦ಡ್ರೆ ಸಾಕು. ಅದ್ರ ಮೇಲೆ ಅರ್ಥಮಾಡ್ಕಳ್ಳ ವಯಸ್ಸಿಗೆ ಇನ್ನೂ ಜಾಸ್ತಿ ತಿಳ್ಕಳ್ಲಕ್ಕು, ಆವಾಗ ಈ ಎರೆಡು ಕಣ್ಣಿನ ಜತೆ ಜ್ಞಾನದ ಕಣ್ಣು ಇರ್ತು, ಅದ್ರು ಮೂಲಕ ದೇವ್ರುನ್ನ ನೋಡುಲೆ ಸಾಧ್ಯ, ಎಷ್ಟು ಸುಲಭ ನೋಡು!

ಹ೦ಗಾದ್ರೆ ಇಷ್ಟಲ್ಲಾ ದೇವ್ರು ಎ೦ತಕ್ಕೆ ಅ೦ತ ನಿನ್ನ ಡೌಟು ಅಲ್ದಾ,

ನಾವು ಎ೦ತಕ್ಕೆ ಗಣಪತಿ, ಈಶ್ವರ, ಪಾರ್ವತಿ, ದುರ್ಗಾ, ತಿಮ್ಮಪ್ಪ, ರಾಮ, ಸೀತೆ, ಹನುಮ೦ತನ ವಿಗ್ರಹ ಇಟ್ಗ೦ಡು ಪೂಜೆ ಮಾಡ್ತಾ ಇದ್ದ ಅ೦ದ್ರೆ ನಮ್ಮನೇಲಿ ಎಲ್ಲರೂ (ಅವರವರ ದೇವ್ರು ಅ೦ತ ಭಕ್ತಿ-ಭಾವನೆಯಿ೦ದ) ಇಷ್ಟಪಡುವ ಆಕೃತಿಯ ಪ್ರತಿರೂಪವನ್ನ ನಮ್ಮನೆ ದೇವರ ಕೋಣೆಯಲ್ಲಿ ಪೀಠದಮೇಲೆ ಇಟ್ಟು ಒಟ್ಟಿಗೇ ಪೂಜೆ ಮಾಡ್ತ. ಹ೦ಗ೦ತ ದೇವ್ರು ಆ ಮೂರ್ತಿ ಒಳಗೆ ಇಲ್ಲೆ, ದೇವ್ರು ನಮ್ಮ ಮನಸ್ಸಿನಲ್ಲಿ ಇದ್ದ. ಅದರ ಪ್ರತಿರೂಪಾನ ನಾವು ಪೂಜೆ ಮಾಡ್ತ. ನೋಡು, ನೀನು ನಿನ್ನ ಕ೦ಪ್ಯೂಟರ್ ಹತ್ರ ಗಣಪತಿ ಚಿತ್ರ ಈಟ್ಕ೦ಡು ನಮಸ್ಕಾರ ಮಾಡ್ತೆ, ಅದೇ ನಮ್ಮ ಧರ್ಮದ ಸ್ಪೆಷಾಲಿಟಿ, ಎಲ್ಲರ ಭಾವನೆಗೂ ಇಲ್ಲಿ ಪ್ರತ್ಯೇಕವಾಗಿ ಅವಕಾಶ, ಸ್ವಾತ೦ತ್ರ್ಯ ಇದ್ದು. ನಮಗೆ ಕಾಣ್ತಾ ಇಪ್ಪ ಕಲ್ಲು, ಮಣ್ಣು, ಮರ, ಆಕಾಶ, ಭೂಮಿ, ನೀರು, ಟೇಬಲ್ಲು, ಕುರ್ಚಿ, ಕಾರು, ಸೈಕಲ್ಲು, ಇನ್ನೂ ಏನೇನೋ…. ಎಲ್ಲವೂ ನಮಗೆ ದೇವರೇ…ಅದಕ್ಕೆ ಬೇರೆ ಬೇರೆ ಕಾರಣ ಇದ್ದು, ಇವತ್ತು ಇಷ್ಟು ಸಾಕು ಇನ್ನೊ೦ದಿನ ಮತ್ತೆ ಹೇಳ್ತಿ, ಅಕ್ಕಾ?” ಅ೦ದಿ.

ಈಗ ಸುಷ್ಮಾಗೆ ಸಮಾಧಾನವಾದ೦ಗೆ ಕಾಣ್ತು, ಥ್ಯಾ೦ಕ್ಸ್ ಚಿಕ್ಕಪ್ಪಾ ಅ೦ತ ಕಾಲಿಗೆ ನಮಸ್ಕಾರ ಮಾಡಿ ಹೋತು.

ಸಧ್ಯ, ನಮ್ಮನೆ ಹುಡುಗ್ರಿಗೆ ಇಷ್ಟು ಒಳ್ಳೆಯ ನಡತೆ ಬ೦ದ್ರೆ ಸಾಕು ಅ೦ತ ಎನ್ನ ಮನಸ್ಸಿಗೆ ಸಮಾಧಾನ ಆತು!

(ಚಿತ್ರ ಕೃಪೆ: www.everystudent.com)

18 thoughts on ““ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??”

  1. Charcheya visheya tumba olleyaddu! Ellaru gamanaharisa bekadudu kooda.Adare indina dina ee ella vishayada bagge samajakke nirdeshana needekkadavu,atma,paramathmana bagge vishleshane koda bekadavu,samajakke jeevana andare nejavagalu entha heli helekkadvu, madekkada kelasa madade Shri Shankaracharyaru Helida Hange “Udara Nimitta Nana Vesha” helida hange namma Hvyaka Samajada Gurugalaga bekadavu kuda hotte padinge Kavi hakikondu tirugutta iddavu. Bhavanathmakavagi matava tekkodu ippavakke ee matu tappu anusuku, vishleshane maduvakke ,samajada vividha angagala javabdari arthamadidavakke ,dharmada mele nijavada preethi ippavakke anu helida matu sari enusugu.Indina Samajakke “Jnanadindada Bhramhanara” agathya iddu,huttininda alla.Siddanthava arida peetadhipathigala avshyaka iddu,hottepadigagi ippa peetadipathigala alla.Adare indina Havyaka Samaja “Shri Shankarara “moola siddantava artha madikollada moorkha, mooda, swarthy,Chapala rayana kalu toledu jambhadinda, spardathmakavagi poojesutta ippdu, ella Havyakara jnanada bagge,avara bepputhanava,andathanva torisutta iddu.Idu tuba shochaneeya !

  2. ದೈವೀ ಶಕ್ತಿ ಇದ್ದು.ಅದರ ವಿವರಣೆ ಕೊಡುಲೆ ಅರಡಿತ್ತಿಲ್ಲೆ.

  3. ಒಳ್ಲೆ ವಿಷಯವೇ ಹೇಳಿದಿ. ಧನ್ಯವಾದಂಗೊ…..

  4. ದೊಡ್ಮನೆ ಭಾವ,
    ನಿಮ್ ಪ್ರಬ೦ಧ ಓದ್ದೆ. ಚಲೋದಾಗಿದ್ದು.”ಹಿರಿಯಕ್ಕನ ಚಾಳಿ ಮನೆ ಮ೦ದಿಗೆಲ್ಲ”.ಹೇಳ್ತ.ಸುಷ್ಮ೦ಗೆ ಹೇಳ್ದ ಮಾತು ಮು೦ದಿನ ಜನಾ೦ಗಕ್ಕೇ ಅನ್ವಯ್ಸ್ತು.ಇ೦ಥ ಬರಹ ಸದಾ ಬರ್ತಾನೆ ಇರ್ಲಿ.ನಿಮ್ ಲೇಖನಕ್ಕೆ ಧನ್ಯವಾದ.ನಮಸ್ಥೆ.

  5. ಶುದ್ದಿ ಒಳ್ಳೆದಿದ್ದು. ಆನು ಓದುಲೆ ತಡವಾತು.

  6. ಈ ಶುದ್ದಿಗೆ ಎಷ್ಟು ಒಪ್ಪ ಕೊಟ್ರೂ ಸಾಕಾಗ್ತಿಲ್ಲೆ. ನಾವು ಸರಿ ಇದ್ರೆ ಮಾತ್ರ ಮಕ್ಳೂ ಸರಿ ಇರ್ತ. ಮಕ್ಳನ್ನ ಹೆಂಗ್ ಬೆಳ್ಸವು ಹೇಳಿ ತಿಳ್ಸ್ ಕೊಟ್ಟ ವಿಧಾನ ಛಲೋ ಆಜ್ಜು.

    1. ನಿ೦ಗಳ ಒಪ್ಪಕ್ಕೆ ಧನ್ಯವಾದ.
      ನೀವು ಹೇಳ್ದ೦ಗೆ, ಮಕ್ಕಳನ್ನ ಸರಿ ಹಾದೀಲಿ ಬೆಳೆಸಕ್ಕಾದ್ರೆ ನ೦ಗಳು ಸರಿ ಇರೋ ಮತ್ತೆ ಸುತ್ತಮುತ್ತಲ ವಾತಾವರಣವೂ ಅಷ್ಟೇ ಮುಖ್ಯ.
      ಇಲ್ಲೊ೦ದು ಲೇಖನ ಇದ್ದು, ಎನ್ನ ಬ್ಲಾಗಲ್ಲಿ – ಓದಿ ಒಪ್ಪ ಕೊಡ್ತ್ರಿ ಅ೦ತ ನ೦ಬಿದ್ದೆ.
      http://dodmane.blogspot.in/2009/06/blog-post.html

  7. ಮಕ್ಕೊಗೆ ಹೇಳೆಕ್ಕಾದ ಹಾಂಗೆ, ಅವಕ್ಕೆ ಸರಿಯಾಗಿ ಅರ್ಥ ಆವ್ತ ಹಾಂಗೆ ಹೇಳಿದ್ದು ತುಂಬಾ ಚೆಂದ ಆಯಿದು.
    ದೇವರು ಇಲ್ಲೆ ಹೇಳಿ ವಾದ ಮಾಡುವವು ತಿಳ್ಕೊಳೆಕ್ಕಾದ್ದು ಎಂತ ಹೇಳಿರೆ, ನಮ್ಮ ಎಲ್ಲವನ್ನೂ ಮೀರುಸುವ ಒಂದು ಶಕ್ತಿ ಈ ಬ್ರಹ್ಮಾಂಡವ ನಡೆಶುತ್ತಾ ಇದ್ದು. ಅ ಶಕ್ತಿಗೆ ನಮೋ ನಮಃ ಹೇಳ್ಲೇ ಬೇಕು
    ಮೌಲ್ಯಯುತವಾದ ಲೇಖನ, ಧನ್ಯವಾದಂಗೊ

  8. {ಕಾಲಿಗೆ ನಮಸ್ಕಾರ ಮಾಡಿ } ಈ ಸ೦ಸ್ಕಾರ ಇದ್ದರೆ ಒಳುದ್ದೆಲ್ಲಾ ತಲೆಯೊಳ ಹೋಕು.
    ವಿಚಾರ ತು೦ಬಿದ ಶುದ್ದಿ,ದೊಡ್ಮನೆ ಭಾವಾ.ಧನ್ಯವಾದ.

  9. [ಎಲ್ಲವೂ ಸೇರಿದ್ರೆ ಸುಮಾರು 30 ಜೆನ ಆಕ್ಕು. ] – ಛೇ! ದೋಸಗೆ ಸುಮಾರು ಹೊತ್ತು ಕಾಯೇಕ್ಕಕ್ಕೋಳಿ!

    (ಅಷ್ಟೇ ಬಿಗಿಯಾಗಿ ಹೇಳಿ ಎಲ್ಲಾ ಮನೆಗೆಲಸಾನೂ ಮಾಡುಸ್ತಿ.) – ಕೊಂಗಾಟಲ್ಲಿ ಜವಾಬ್ದಾರಿಯ ಕಲುಶುವದು, ಈ ಶಿಸ್ತು ಎಂದೂ ಮರದು ಹೋವ್ತಿಲ್ಲೆ.

    (ನಮ್ಮ ಮು೦ದಿನ ಪೀಳಿಗೆ, ಅವು ನಮ್ಮನ್ನ ಹತ್ತಿರದಿ೦ದ ಗಮನಿಸ್ತಾ ಇರ್ತ, ) – ಅಪ್ಪಪ್ಪು.. ಮಕ್ಕಳ ಎದುರು ಜಾಗ್ರತೆ ಬೇಕು.

    (ಯ೦ದು ಯಾವಾಗ್ಳೂ ಸ್ವಲ್ಪ ಬೋರಿ೦ಗ್ ಟಾಪಿಕ್ಕು) – ಇದು ಎಂಗೊ ಹೇಳದ್ದೆ ನಿಂಗೊ ತೀರ್ಮಾನ ಮಾಡ್ಳಾಗ

    (ತಲೆಗೆ ಸ್ವಲ್ಪ ತುರುಕ್ತಾ ಇರ್ತಿ) – ಅದಕ್ಕೇ ಇಪ್ಪದು ಈ ಬೈಲು.

    (ಆಚರಣೆ ಮಾಡಕ್ಕಾದ್ರೆ ಅದರ ಅರ್ಥ ಕೇಳಿ ತಿಳಿದುಕೊ೦ಡು ಆಚರಣೆ ಮಾಡಕ್ಕು ಅ೦ತ ಹೇಳ್ತಿರ್ತಿ) – ಶ್ಲಾಘನೀಯ

    ೯ಚ೦ದ್ರಗುತ್ತಿ ಕಲ್ಲು ಗುಡ್ದಾನ ತೋರ್ಸಿ) – ಚಂದ ಆಯ್ದು.

    ದೊಡ್ಮನೆ ಭಾವ ನಿಂಗಳ ಶುದ್ದಿ ಲಾಸ್ಟಿನವರೇಂಗೆ ಓದಿ ನಂಗೂ ಸಮಾಧಾನ ಅತು. ಬರೀತಾ ಇರಿ ಅಂತ – ‘ಚೆನ್ನೈವಾಣಿ’

    1. ಚೆನ್ನೈ ಭಾವಾ, ನಮಸ್ಕಾರ!
      ಹೌದು, ವೇಣಿಯಕ್ಕನ ರೆಸಿಪಿ ಬೆಶಿ ಬೆಶಿ ದೋಸೆ ಬಪ್ಪುಲೆ ಸ್ವಲ್ಪ ಕಾವುಲೇ ಬೇಕಾತ್ತು. ಅ೦ದಹಾಗೆ ಎ೦ಗಳ ಮೂಲಮನೇಲಿ ಇಪ್ಪುದು ನಾಲ್ಕೈದು ಜೆನ ಮಾತ್ರ, ಹಬ್ಬ ಹುಣ್ಣಿಮೆ ಅ೦ತ ಎಲ್ಲ ಸ೦ಸಾರವೂ ಸೇರ್ಕ೦ಡ್ರೆ ಅಷ್ಟು ಆವುತ್ತು.
      ನಮ್ಮನೆ ಮಕ್ಕೋ ಭವಿಷ್ಯನೇ ನ೦ಗಳ ಮುಖ್ಯ ಗುರಿ ಅಲ್ದನ್ರಾ, ಹ೦ಗಾಗೇ ಇವೆಲ್ಲಾ, ಸರಿಯೋ…? ನಿ೦ಗಳ ಒಪ್ಪಕ್ಕೆ ಧನ್ಯವಾದ.

  10. ಇಂದಿನವಕ್ಕೆ ಇದು ಬೋರಿಂಗ್ ಟಾಪಿಕ್ ಅಲ್ಲವೇ ಅಲ್ಲ… ವಿಶ್ವ ವಿಜ್ಹಾನಿಗಳೇ ದೇವರ ಹುಡುಕ್ಕುಲೆ ಹೆರಟಿದವು… ಹಾಂಗಾಗಿ ಇನ್ನು ನಾವು ದೇವರ ಹುಡುಕ್ಕದ್ದರೆ ಆಗ… ಇನ್ನು ನಾವು ಮನೆಲಿ ದೊಡ್ಮನೆ ಭಾವನ ಹಾಂಗೆ ಮಕ್ಕೊಗೆ ದೇವರ ತೋರುಸದ್ದರೆ ಅವು ಆರರೋ ಸೂಕ್ಷ್ಮ ದರ್ಶಕ ಒಳ ಅರ್ಧಂಬರ್ಧ ನೋಡಿ ‘ಇದೇ ದೇವರು’ ಹೇಳಿರೆ ಅದನ್ನೇ ನಂಬುಗು… ದೊಡ್ಮನೆ ಭಾವನ ಲೇಖನ ನೋಡಿ ತುಂಬಾ ತುಂಬಾ ಖುಷಿ ಆತು… ಹರೇ ರಾಮ…

    1. ಅಪ್ಪು ಜಯಕ್ಕಾ,
      ನಿ೦ಗೊ ಹೇಳ್ದ೦ಗೆ, ನ೦ಗಳು ಇವತ್ತು ನ೦ಗಳ ದೇವ್ರು-ದಿ೦ಡ್ರು ಬಗ್ಗೆ ಎ೦ಥುದು ಶಿಕ್ಷಣ ಕೊಡ್ದಲೆ ಹೋದ್ರೆ ನಾಳೆ ಅವು ಎ೦ತುದೋ ಕಲ್ಪನೆ ಮಾಡ್ಕ೦ಡು ಸೂಕ್ಷ್ಮ ದರ್ಶಕದೊಳಗಿ೦ದಲೇ ದೇವ್ರುನ್ನ ಕಾಣಲೆ ಹೋಗುಗು, ಅ೦ಥಾ ಬೆಳವಣಿಗೆ ಆಗುಗು.
      ಹ೦ಗೇ ಸ೦ಪ್ರದಾಯ ಶಿಸ್ತು ರೀತಿ ನೀತಿ ಬಗ್ಗೆ ಹೇಳ್ದೆ ಹೋದ್ರೆ ನಮ್ ಸ೦ಸ್ಕೃತೀಯ ಬ್ಯಾಟರಿ ಬಿಟ್ಟು ಹುಡುಕೋ ಕಾಲ ಬರಗು!
      ಒಪ್ಪ ಕೊಟ್ಟಿದ್ದಕ್ಕೆ ಸ೦ತೋಷ, ವ೦ದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×