ಕಂಬಿ ಬಡಿವಲೆ ಇನ್ನಿಲ್ಲೆ

ಒಂದು ಕಾಲಲ್ಲಿ ಗ್ರಾಹ್ಯವೂ ಕ್ರಾಂತಿಕಾರಕವೂ ಆದ ವಿಷಯ ಮತ್ತೊಂದು ಕಾಲಲ್ಲಿ ತಿರಸ್ಕರಿಸಲ್ಪಡುತ್ತ ಸಂಭವವೂ ಇದ್ದು.
ಕಂಬಿ ಇದಕ್ಕೆ ಉದಾಹರಣೆ.
ಕಂಬಿ ಹೇಳಿರೆ ವೈರ್-ಟೆಲಿಗ್ರಾಫ್ ಹೇಳಿ ಇದಕ್ಕೆ ಹೆಸರು.
ಭಾರತಲ್ಲಿ ೧೮೫೦ ರಲ್ಲಿ ಸುರುವಾದ ಈ ಸೇವೆಗೆ ಈಗ ವಿದಾಯ ಹೇಳುವ ಸಮಯ ಬಂತು. ಬಿ.ಎಸ್.ಎನ್.ಎಲ್. ನಾಳೆಂದ ಟೆಲಿಗ್ರಾಮ್ ಸೇವೆಯ ನಿಲ್ಲಿಸುತ್ತು.ಎಲ್ಲಾ ಪತ್ರಿಕೆಲೂ ಅದೇ ಸುದ್ದಿ.
ಕಟ್ಟ ಕಡಗಟ್ಟ…ಹೇಳಿ ಮೋರ್ಸ್ ಕೋಡಿಲಿ ಕಂಬಿ ಬಡಿದು ದೂರದೂರಿಂಗೆ ಸುದ್ದಿ ಮುಟ್ಟಿಸುದು ಆ ಕಾಲಲ್ಲಿ ಎಂತಾ ಅದ್ಭುತ ಎನಿಸಿಕ್ಕು ರಜಾ ವಿಚಾರ ಮಾಡಿ!
ಆ ಕಾಲಲ್ಲಿ ಫೋನ್ ಇಲ್ಲೆ;ಹೆಚ್ಚು ಪತ್ರಿಕೆಗೊ ಇಲ್ಲೆ;ಟಪ್ಪಾಲು ಇತ್ತು ಆದರೆ ಅದರ ಬಳಕೆ ಶೈಶವ ಅವಸ್ಥೆಲಿ ಇತ್ತಷ್ಟೆ.
ಅಂತ ಸಮಯಲ್ಲಿ ಕೆಲವೇ ಗಂಟೆಯೊಳ ಸುದ್ದಿ ಮುಟ್ಟುಸಲೆ ಕಂಬಿ ಬಡಿಯೆಕ್ಕು! ಸುಮಾರು ಇಪ್ಪತ್ತೈದು ವರ್ಷ ಮೊದಲೂ ಕೂಡ ನಮ್ಮ ಹಳ್ಳಿಗಳಲ್ಲಿ ಕಂಬಿಗೆ ಮಹತ್ತ್ವ ಇತ್ತು. ೧೯೮೮ರಲ್ಲಿ ಎನ್ನ ಮಾವ= ಸೋದರತ್ತೆಯ ಯಜಮಾನರು ಉದಿಯಪ್ಪಗ ತೀರಿಹೋದ ಸಂಗತಿ ಎಂಗೊಗೆ ೧೧ ಗಂಟೆಗೆ ತಿಳಿದು ಬಂದದು -ಈ ಕಂಬಿಯ ಮೂಲಕವೇ!ಅಂದೆಲ್ಲಾ ಕಂಬಿ ಬಂದರೆ ಗಾಬರಿ;ಎಂತ ವಿಷಯ ಇದ್ದಪ್ಪಾ ಹೇಳಿ.ತಕ್ಕ ಮಟ್ಟಿಂಗೆ ಅಕ್ಷರ ಗೊಂತಿಪ್ಪ ನಮ್ಮವಕ್ಕೇ ಇಷ್ಟು ಗಾಬರಿ ಆವ್ತ ಪರಿಸ್ಥಿತಿ ಇಪ್ಪಾಗ ಬಾಕಿದ್ದವರ ಅವಸ್ಥೆ ಎಂಥದು ಹೇಳಿ ಯೋಚನೆ ಮಾಡಿ.
ಮೊದಲಾಣ ಕಾಲಲ್ಲಿ ಟೆಲಿಗ್ರಾಮಿಂಗೆ ಕಾನೂನಿನ ಬೆಂಬಲವೂ ಇತ್ತು. ಈಗಲೂ ಹೇಳದ್ದೆ ಕೇಳದ್ದೆ ರಜೆ ಹೋದ ನೌಕರರು,ಅನಿವಾರ್ಯವಾಗಿ ಮನೆಲೇ ಒಳಿಯೆಕಾಗಿ ಬಂದವರು ಕಂಬಿ ಬಡುದೇ ರಜೆಯ ವಿಷಯ ತಿಳಿಸುತ್ತಾ ಇದ್ದಿದ್ದವು. ಇನ್ನು ಅವಕ್ಕೆ ಕಷ್ಟ.
ನಮ್ಮ ದೇಶವ ಬ್ರಿಟಿಷರ ಆಳ್ವಿಕೆಲಿ ತಪ್ಪಲೆ ಸಹಾಯ ಮಾಡಿದ ಒಂದು ಸಾಧನ,ನಮಗೆ ಸ್ವಾತಂತ್ರ್ಯ ಸಮರಕ್ಕೂ ಸಹಾಯ ಮಾಡಿದ್ದು.ನಮ್ಮ ದುಃಖದ ಸುದ್ದಿಯ ನೆಂಟರಿಂಗೆ ತಲ್ಪಿಸಿ,ಎಷ್ಟೋ ಜನ ಅವರ ಪ್ರೀತಿಪಾತ್ರರ ಅಂತಿಮ ದರ್ಶನ ಪಡೆವಲೆ ಸಹಾಯ ಮಾಡಿದ್ದು. ದೂರ ಕೆಲಸಲ್ಲಿ ಇಪ್ಪವಕ್ಕೆ ಊರಿನ ಸುದ್ದಿ,ಶಿಶುಜನನದ ಸಂತೋಷದ ವರ್ತಮಾನ ತಿಳಿಸಿದ ಮಾಧ್ಯಮ-ಇದು.ಮದುವೆಗೆ ಟೆಲಿಗ್ರಾಮ್ ಮೂಲಕ ಶುಭಾಶಯ ಬಂದೊಂಡಿತ್ತು.
ಕೆಲಸಕ್ಕೆ ಸೇರಲೆ,ಕಾಲೇಜಿಂಗೆ ಸೇರಲೆ-ತಾರು ಮೂಲಕ ಸುದ್ದಿ ಬಂದು ಹೋಗಿ ಸೇರಿದವು ಎಷ್ಟು ಜನವೊ! ನ್ಯಾಯಸ್ಥಾನವೂ ಕೂಡ ಕಂಬಿ ಸಂದೇಶವ ಪರಿಗಣಿಸಿದ್ದು ಇದ್ದು!
ಆದರೆ ಎಂತಾ ಮಾಡುದು?
ದೀರ್ಘಕಾಲ ನಮಗೆ ಉಪಯೋಗ ಆದ ಒನಕೆ,ಎಣ್ಣೆ ಗಾಣ,ಏತ,ಲಾಟಾನು-ಇದರ ಸಾಲಿಂಗೆ ಟೆಲಿಗ್ರಾಮೂ ಸೇರಿತ್ತು.ಅದರ ಬಳಕೆ ಕಮ್ಮಿ ಆತು .ಸರಕಾರ ಅದರ ಮರಣಶಾಸನ ಬರೆದತ್ತು. ಹಲವು ಜನರ ಅಂತ್ಯಕಾಲವ ನೆಂಟರಿಂಗೆ ತಿಳಿಸಿದ ಮಾಧ್ಯಮಕ್ಕೆ ಈಗ ಚರಮಗೀತೆ ಹಾಡೆಕಾಗಿ ಬಯಿಂದು.
ಆದರೆ ಚರಿತ್ರೆಲಿ ಅದರ ಸ್ಥಾನ ಅಮರ. ಎಂತದ್ದೂ ಅನುಕೂಲತೆ ಇಲ್ಲದ್ದ ಕಾಲಲ್ಲಿ ಅದರಷ್ಟು ಉಪಯೋಗಿಯಾದ,ಜನಸ್ನೇಹಿಯಾದ,ಸರಳವಾದ ಮಾಧ್ಯಮ ಇನ್ನೊಂದಿಲ್ಲೆ. ‘ಆಪತ್ತಿಗೆ ಆದವನೇ ನೆಂಟ’ ಹೇಳಿ ಹೇಳುವ ಗಾದೆ ಸತ್ಯ ಆದರೆ, ನಮ್ಮ ದೇಶದವು ಒಬ್ಬ ನೆಂಟನನ್ನೇ ಕಳಕ್ಕೊಂಡ ಹಾಂಗೆ ಆತು ಹೇಳಿ ಹೇಳೆಕ್ಕು. ಅದೇ ಟೆಲಿಗ್ರಾಮಿಂಗೆ ಯೋಗ್ಯವಾದ ಶ್ರದ್ಧಾಂಜಲಿ.

ಗೋಪಾಲಣ್ಣ

   

You may also like...

9 Responses

 1. ಚೆನ್ನೈ ಭಾವ° says:

  ಹರೇ ರಾಮ

 2. ರಘುಮುಳಿಯ says:

  ಕಾಲಪ್ರವಾಹಲ್ಲಿ ಕೊಚ್ಚಿಹೋಪದು ಹೇಳಿರೆ ಹೀ೦ಗೆ.ಜೀವನದ ವೇಗಲ್ಲಿ ಸ೦ಪರ್ಕಕ್ಕೆ ಬೇರೆಬೇರೆ ಹೊಸದಾರಿಗೊ ಸಿಕ್ಕಿದವು,ಹಳೆದಾರಿಲಿ ಬಲ್ಲೆ ಬೆಳಾತು.
  1988 ರಲ್ಲಿ ಉದ್ಯೋಗಕ್ಕೆ ಸೇರಿ ಒ೦ದು ವರುಷದ ಕಳುದ ಮೇಲೆ ಆ೦ಧ್ರಪ್ರದೇಶಲ್ಲಿ ಹಗಲಿರುಳು ಕೆಲಸ ಮಾಡಿ ಎ೦ಗೊ ಕಟ್ಟಿದ ಒ೦ದು ಫಾಕ್ಟರಿಲಿ ಗುಣಮಟ್ಟದ ಉತ್ಪನ್ನ ತಯಾರಾಗಿಯಪ್ಪಗ ಎನ್ನ ಗುರುಗೊ,ಧನಿ, ಸರ್ವಸ್ವವೂ ಆದ ಶ್ರೀ ಎಮ್.ಕೆ.ಜನಾರ್ಧನರು ಬೊ೦ಬಾಯಿ೦ದ ಕಳುಸಿದ ಟೆಲಿಗ್ರಾ೦ ನ ಜೋಪಾನವಾಗಿ ಕವಾಟಿಲಿ ತೆಗದು ಮಡಗಿದ್ದೆ. ಎನಗೆ ಈಗಳೂ ಸ್ಪೂತಿ ಕೊಡುವ ಸಾಲುಗೊ ಅದು.
  ಸಕಾಲಿಕ ಬರಹಕ್ಕೆ ಧನ್ಯವಾದ ಗೋಪಾಲಣ್ಣ.

  • ಎಮ.ಎಸ್. says:

   ನಿ೦ಗಳ ಬರಹ ಓದಿ ಅಪ್ಪಗ,

   ಕಾಲ(ನ)ಪ್ರವಾಹಲ್ಲಿ ಉತ್ತರಖ೦ಡಾ,ತು.

   ಹೊಸದಾರಿ ಸಿಕ್ಕಿದರೂ,ಹಳೆದಾರಿ ಹುಡುಕಿ ಹೆರಟ, ನೆರೆಕೆರೆಯ ಬೈಲಿಲಿ ಒಬ್ಬನ ಪ್ರಯತನವ ವಿಶಯ ನೆ೦ಪಾತಿದ.

   • ರಘುಮುಳಿಯ says:

    ಎನಗೆ ಒಗಟಾತು ಭಾವ ನಿ೦ಗಳ ಮಾತು.
    ಆರ ವಿಷಯ ನೆ೦ಪಾದ್ದು,ಹೇಳುವಿರೊ?

    • ಎಮ.ಎಸ್. says:

     ಓ ಅದ………………, ಹಳೆ ದಾರಿಲಿ ಬಲ್ಲೆ ,ಬೆಳೆದ್ದರ ಕ೦ಡು.ಮೂಲ ಹುಡುಕ್ಕೆ ಹೊರಟವನ ಬಗ್ಗೆ ,
     ನೆರೆಕೆರೆಯ ಬೈಲಿನ ಶುದ್ದಿಯ ,
     ೩ನೆ ಒಪ್ಪದ ಕುರಿತು,ನೆ೦ಪಾದ್ದು.

     ನಾವೀಗ ಬತ್ತು.ಕಾ೦ಬ.

 3. ಬೊಳುಂಬು ಗೋಪಾಲ says:

  ಕಟ್ಟ ಕಡ ಕಟ್ಟ ಹೇಳಿ ಕಟ್ಟಕಡೆಯ ಟೆಲಿಗ್ರಾಮು ಕಳುಸುವ ಹೆಳೆಲಿ ನಿನ್ನೆ ಟೆಲಿಫೋನ್ ವಿಭಾಗಲ್ಲಿ ವಿಪರೀತ ರಶ್ಶು ಇತ್ತಾಡ. ಹೈಸ್ಕೂಲಿಲ್ಲಿ ಇಪ್ಪಗ ರೀಪಿನ ಆಣಿಗೆ ವಯರು ಸುಂದಿ, ಅದಕ್ಕೆ ಬೆಟ್ರಿ ಮಡಗಿ ಟೆಲಿಗ್ರಾಫಿನ ಮೋಡೆಲು ಮಾಡಿ ಕಟ್ಟಕಡ ಹೇಳಿ ಡಬ್ಬಿ ತಗಡಿನ ಒತ್ತಿ ಕ್ಲಾಸಿಲ್ಲಿ ತೋರುಸಿದ್ದು ನೆಂಪಾತು.

  ಕಂಬಿಯ ಬಗ್ಗೆ ಕಂಬನಿಗರೆದ ಸಕಾಲಿಕ ಬರಹಕ್ಕೆ ಗೋಪಾಲಣ್ಣಂಗೆ ಧನ್ಯವಾದಂಗೊ.

 4. ತೆಕ್ಕುಂಜ ಕುಮಾರ ಮಾವ° says:

  ಬೊಂಬಾಯಿಲಿ ಯೇವುದೋ ಸಣ್ಣಪುಟ್ಟ ಕೆಲಸ ಮಾಡಿಗೊಂಡಿತ್ತಿದ್ದ ಸಮಯ. ಎನಗೆ ಅರಶಿನ ಜ್ವರ ಬಂದು ಪಥ್ಯ ಮಾಡ್ಲೆ ಊರಿಂಗೆ ಬಂದು ಇತ್ತಿದ್ದ ಕಾಲ. ೧೯೯೦ ರ ಎಪ್ರಿಲ್. “ಪ್ರೀಮಿಯರ್ ಅಟೊಮೊಬಾಯಿಲ್ಸ್ ಕಂಪೆನಿಲಿ ಸಂದರ್ಶನಕ್ಕೆ ದೆನಿಗೇಳಿದ್ದವು ಬಾ”. ಹೇಳಿ ಟೆಲಿಗ್ರಾಮ್ ಬಂದಿತ್ತು.ಎನ್ನ ರೂಮ್ ಮೇಟ್ ಆಗಿತ್ತಿದ್ದ ರಘು ಕಳ್ಸಿದ ಆ ಟೆಲಿಗ್ರಾಮ್ ಓ ಮನ್ನೆ ವರೆಗೊ ಇತ್ತು. ನಿನ್ನೆ ಇಡೀ ಮನೆ ಹುಡ್ಕಿರೋ ಸಿಕ್ಕಿದ್ದಿಲೆ.ಛೆ.
  ಅದೇ ಎನಗೆ ಬಂದ ಕಟ್ಟ ಕಡೆಯ ತಾರು.

 5. Venugopal Kambaru says:

  ಸಕಾಲಿಕ ಬರಹಕ್ಕೆ ಧನ್ಯವಾದ

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಟೆಲಿಗ್ರಾಮ್ ಉಪಯೊಗದ ಬಗ್ಗೆ ಒಬ್ಬೊಬ್ಬರು ತಮ್ಮ ಅನುಭವ ಬರೆದರೆ ಬೈಲಿಲಿ ಒಂದು ಲೇಖನ ಮಾಲೆಯೇ ಅಕ್ಕು ಗುರಿಕಾರರೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *