ಪುತ್ತೂರಿಲಿ ರಾಮಕಥಾ ಕಿರಣ – ಮಹಾತಪಸ್ವಿನಿ ವೇದವತಿ!

March 19, 2012 ರ 11:32 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ..!

ದೊಡ್ಡ ಮೈದಾನ. ಮೈದಾನಲ್ಲಿ ಎಲ್ಲಿ ನೋಡಿರೂ ಜನಂಗಳೇ ಜನಂಗ. ತೆಂಕಿಲ ಶಾಲೆಯ ಗೆದ್ದೆಲಿ ಕಾರು ಬೈಕುಗಳದ್ದೇ ಕಾರು ಬಾರು.
ವಿಷಯ ಎಂತ ಹೇಳಿರೆ, ಪುತ್ತೂರಿನ ಬೈಪಾಸು ಮಾರ್ಗಲ್ಲಿ ಇಪ್ಪ ವಿವೇಕಾನಂದ ಶಾಲೆಯ ಗೆದ್ದೆಲಿ, ರಾಮ ಕಥಾ ಪ್ರವಚನ ಇದ್ದು, ನಮ್ಮ ಗುರುಗ ಬತ್ತವು, ಭಾರಿ ಗೌಜಿ ಇದ್ದು ಹೇಳುದು.
ಮುಳಿಯ ಚಿನ್ನದ ಅಂಗಡಿ
ಗೆ ಹಿಂದಾಣ ದಿನವೇ ಬಂದಿತ್ತ ಗುರುಗೊ, ಭಿಕ್ಷಾ ಕಾರ್ಯಕ್ರಮ ಮುಗಶಿಕ್ಕಿ, ಮತ್ತೆ ಹೊತ್ತೋಪಗ ಶಾಲೆಯ ಮೈದಾನಕ್ಕೆ ಬಂದವು.

ಈ ಸರ್ತಿ ‘ಮಹಾತಪಸ್ವಿನಿ ವೇದವತಿ’ ಹೇಳ್ತ ಕಥೆ. ರಾಮಾಯಣ, ರಾವಣ ಸಂಹಾರ ಅಪ್ಪಲೆ ನಿಜಕ್ಕೂ ಕಾರಣ ಆದ ವೇದವತಿಯ ಕಥೆ, ಕಥೆ ಶುರು ಮಾಡುವಾಗಲೇ ಗುರುಗೋ ಗುರುವಿನ ಮಹತ್ವ ಎಂತರಾ ಹೇಳಿ ಹೇಳಿದವು.
ಅಲ್ಲದ್ದೇ ’ಗುರುವಿನ ಆಶೀರ್ವಾದ’ ಇಲ್ಲದ್ದೇ ಏನೂ ಮಾಡ್ಲೆ ಎಡಿಯ ಹೇಳಿ ಹೇಳಿದವು. ಕುಶಧ್ವಜನ ಮಗಳು ವೇದವತಿ, ವೇದವೇ ವೇದವತಿ, ರೂಪವತಿ ಹೀಂಗೆ ಅನೇಕ ಶಬ್ಧಲ್ಲಿ, ಎಲ್ಲರಿಂಗೂ ವೇದವತಿ ಇಷ್ಟ ಅಡ ಹೇಳಿ ಗುರುಗೊ ಪ್ರಾಸಬಧ್ದವಾಗಿ ’ವೇದವತಿ ಎಷ್ಟು ಚೆಂದ ಇತ್ತು?’ ಹೇಳುದರ ವಿವರ್ಸಿದವು.
ಗುರುಗೊ ಬಪ್ಪಗ ರಜ ತಡವಾದರೂ ಎಲ್ಲರಿಂಗೂ ಕಥೆ ಕೇಳುವ ತವಕ. ಪ್ರವಚನ ಶುರುವಾದ ಕೂಡ್ಲೆ ಸಭೆಲಿ ಅಂಬಗಂಬಗ ’ಶ್ ಶ್’ ಹೇಳಿ ’ಮಕ್ಕಳ, ಅವರ ಅಬ್ಬೆ ಅಪ್ಪ್ಪ ಸುಮ್ಮನೆ ಕೂರ‍್ಸುತ್ತದು ಒಳ್ಳೆ ತಮಾಶೆ ಕಂಡುಗೊಂಡಿತ್ತು.

ಆನು ಕ್ಯಾಮರಾ ತೆಕ್ಕೊಂಡ ಮತ್ತೆ ಗುರುಗಳ ಪಟ ತೆಗವ ಅವಕಾಶ ಎನಗೆ ಸಿಕ್ಕಿದ್ದು ಮೊನ್ನೆಯೇ! ಕಥೆಯ ಪೂರ್ತಿ ಕೇಳಿದ ಹಾಂಗೂ ಆತು, ಒಟ್ಟಿಂಗೆ ಪಟ ತೆಗದ ಹಾಂಗೆ ಆತು ಹೇಳ್ತದು ಎನ್ನ ಅಲೋಚನೆ ಆಗಿತ್ತು. ಗುರುಗೊ ನೆಗೆ ಮಾಡ್ಲೆ ಕಾದು ಕೂದು, ಕೊನೆಗೂ ಒಂದೆರಡು ಪಟ ಲಾಯ್ಕ ಸಿಕ್ಕಿತ್ತು ಹೇಳ್ತದು ಎನಗೆ ತುಂಬಾ ಖುಷಿ.
ಆನು ಈ ಪಟ ತೆಗೆತ್ತ ಕೆಲಸಲ್ಲಿ ಇಪ್ಪಾಗ ಗುರುಗೊ ವೇದವತಿಯ ಮದುವೆ ಅಪ್ಪ ವಿಷಯಕ್ಕೆ ಎತ್ತಿತ್ತವು. ವೇದವತಿಯ ಮದುವೆ ಅಪ್ಪಲೆ ಶಂಭು ಬಂದ. ಆದರೆ ಕುಶಧ್ವಜ ಒಪ್ಪಿದ್ದಾಯಿಲ್ಲೆಡ. ಕೊಟ್ಟರೆ ವಿಷ್ಣುವಿಂಗೆ ಮಾತ್ರ, ’ಬೇರೆ ಆರಿಂಗೂ ಕೊಡೆ’ ಹೇಳಿ ಅವಮಾನ ಮಾಡಿ ಕಳಿಸಿದ, ಹೇಳಿ ಗುರುಗೊ ಕಥೆ ಮುಂದುವರಿಸಿದವು.

ಈ ಕುಶಧ್ವಜ ಅವನ ಮಗಳ ಕೊಡದ್ದ ಕಾರಣ, ಅವನ ಮೇಲೆ ಶಂಭುವಿಂಗೆ ಕ್ರೋಧ ಬಂತು, ಕುಶಧ್ವಜನ ಕೊಂದೇ ಹಾಕಿದ, ಅದುದೇ ಇರುಳಪ್ಪಗ ಎಲ್ಲರೂ ವರಗಿಪ್ಪಾಗ!! ವೇದಿಕೆಲಿ ಗುರುಗಳ ವರ್ಣನೆ ಆವ್ತಾ ಇಪ್ಪಾಗ,  ಈಚೊಡೆಲಿ ಸಭೆಲಿದ್ದ ಸಣ್ಣ ಕೂಸೊಂದು ಕುರ್ಶಿಯ ಕೊಡೀಲಿ ಕೂದು ಗುರುಗಳನ್ನೇ ನೋಡಿಗೊಂಡಿತ್ತು.
ಕಣ್ಣಿಲಿ ಆಸಕ್ತಿ!
ಅಚ್ಚಿರಿ!
ಕಥೆ ಕೇಳ್ತ ಚೆಂದ ನೋಡೆಕಾತು!
ಅದರ ಮೋರೆ ನೋಡಿದ ಆನು ರಪಕ್ಕನೆ ಅದರದ್ದೊಂದು ಪಟ ತೆಗದೆ.! ಸಣ್ಣ ಮಕ್ಕೊಗುದೇ ಅರ್ಥ ಅಪ್ಪ ಹಾಂಗೆ ಗುರುಗೊ ಕಥೆ ಹೇಳಿದವು. ಅದರಲ್ಲಿಯೂ ’ವೇದವತಿಗೆ ಇನ್ನಾರಿದ್ದವು?’ ಹೇಳಿ ಗುರುಗ ಕೇಳಿದಪ್ಪಗ ಇಡೀ ಸಭೆಗೆ ಸಭೆಯೇ ಮೂಕವಿಸ್ಮಿತ!

ಇಷ್ಟು ಲಾಯ್ಕ ಕಥೆ ಹೇಳುವಾಗ ಎನ್ನ ಹಾಂಗಿಪ್ಪ ಕೆಲವು ಕಾಲೇಜು ಮಕ್ಕ ಅವರ ಕರ್ಣಪಿಶಾಚಿ(ಸಂಚಾರಿವಾಣಿ)ಲಿ ಮ್ಯಾಸೇಜ್ ಮಾಡುದು ಬಿಟ್ಟಿದವೇ ಇಲ್ಲೆ! ಕೆಲವರಿಂಗಂತೂ ಅವು ಎಲ್ಲಿದ್ದವು ಹೇಳುದೇ ಗೊಂತಾಗಿಗೊಂಡು ಇತ್ತಿಲ್ಲೆ ಕಾಣ್ತು! ಎಂತ ಮಾಡ್ಸು, ಸಹವಾಸ ದೋಷ ಆಯಿಕ್ಕು! ಆನು ಬೈಲಿನ ಮಾಣಿ, ಹಾಂಗೆಲ್ಲ ಮಾಡೆ! :)
ರಾಮಾಯಣ ಹೇಳಿ ಅಪ್ಪಗ ರಾಮ, ಸೀತೆ, ಮತ್ತೆ ಲಕ್ಷಣ ಕಾಡಿಂಗೆ ಹೋಪದು, ಸೀತೆ ಅಪಹರಣ ಅಪ್ಪದು, ರಾವಣನ ಸಂಹಾರ ಅಪ್ಪದು ಈ ಕಥೆಯನ್ನೇ ಕೇಳಿದ ಎನಗೆ ವಾಲ್ಮೀಕಿ ರಾಮಾಯಣಲ್ಲಿ  ವೇದವತಿಯ ಕಥೆಗೊಂತ್ತಾದ್ದು ಗುರುಗೊ ಮೊನ್ನೆ ಹೇಳಿ ಅಪ್ಪಗಳೇ!!

ಇಡೀ ಸಭೆಯೇ ಮಾತಾಡದ್ದೆ ಕಥೆ ಕೇಳಿಕೊಂಡಿತ್ತು. ಸಭೀಕರಿಂಗೆ ಸುಲಭ ಅಪ್ಪಲೆ 4 ಪ್ರಾಜೆಕ್ಟರುಗಳ ವ್ಯವಸ್ಥೆ ಸಂಸ್ಥಾನದ ಹೊಡೆಂದಲೇ ಮಾಡಿತ್ತವು. ಒಟ್ಟಿಂಗೆ ನಾಲ್ಕು ವಿಡಿಯೋ ಕ್ಯಾಮರಾಕ್ಕೆ ಮಠದ ಕಾರ‍್ಯಕರ್ತರೇ ಕ್ಯಾಮರಾಮ್ಯಾನುಗ! ಲೈವ್ ಎಡಿಟ್ ಮಾಡಿಕೊಡುವ ವ್ಯವಸ್ಥೆ!  ಹೊಸ ತಂತ್ರಜ್ಙಾನ ಮಠಕ್ಕೂ ಬೈಂದು ಹೇಳುದು ಸ್ಪಷ್ಟ ಆತು.
ವೇದವತಿ ಶ್ರೀಪತಿಗೆ ಬೇಕಾಗಿ ಆಶ್ರಮಲ್ಲಿ ತಪಸ್ಸು
ಮಾಡ್ಲೆ ಶುರು ಮಾಡಿತ್ತು ಹೇಳಿ ಅಪ್ಪಗ, ವೇದಿಕೆಲಿ ಇದ್ದ ಪ್ರೇಮಲತಾ ದಿವಾಕರ್ ಕಥೆಯ ಪದ್ಯವಾಗಿ ಹೇಳ್ಳೆ ಶುರು ಮಾಡಿದವು.
ಇದರೊಟ್ಟಿಂಗೆ ಕೊಳಲು ಮತ್ತೆ ತಬಲ, ಸಭೆಲಿಪ್ಪವರ ತಲೆ ಆಡ್ಸುವ ಹಾಂಗೆ ಮಾಡಿತ್ತು. ಒಬ್ಬನೇ ಇಪ್ಪ ವೇದವತಿಯ ಸ್ಥಿತಿಯ ಗುರುಗೊ ಭಾರಿ ಚೆಂದಕ್ಕೆ ವಿವರಿಸಿದವು. ಪದ್ಯವಾಗಿ ಹೇಳಿದ್ದದರ, ಗುರುಗೊ ಒದೊಂದು ಪದವನ್ನೂ ಬಿಡದ್ದೆ ಕಣ್ಣಮುಂದೆಯೇ ವೇದವತಿ ಕಥೆ ನಡೆತ್ತಾ ಇದ್ದೋ ಏನೋ ಹೇಳಿ ಅನ್ಸುವಷ್ಟು ನೈಜವಾಗಿ ಹೇಳಿದವು.

ಇಷ್ಟಾದಪ್ಪಗ ಮುಂದಾಣ ಕಥೆ ರೂಪಕಲ್ಲಿ ಮೂಡಿಬಂತು. ರಾವಣ ವೇದವತಿಯ ಕಂಡು ಅದರ ಮೇಲೆ ಆಶೆ ಪಟ್ಟು, ಅದರ ಉಪದ್ರಕ್ಕೆ ಹೋದ. ಅದರ ಮುಡಿಗೇ ಕೈ ಹಾಕಿದ. ವೇದವತಿಯ ತಾಳ್ಮೆ ತಪ್ಪಿತ್ತು, ಅವ ಮುಟ್ಟಿದ ಜೆಡೆಯೇ ಬೇಡ ಹೇಳಿ, ಕೈಯನ್ನೇ ಖಡ್ಗವಾಗಿಸಿ ತನ್ನ ಜೆಡೆಯ ಕತ್ತರಿಸಿಬಿಟ್ಟತ್ತು!. ಮತ್ತೆ ಅವಮಾನ ತಡೆಯದ್ದೆ ವೇದವತಿ ಅಗ್ನಿ ಪ್ರವೇಶ ಮಾಡುವ ಹಾಂಗೆ ಮಾಡಿದ ರಾವಣ. ಆ ದಿನ ರಾವಣ ಎಲ್ಲರಿಂಗೂ ಉಪದ್ರ ಮಾಡಿಗೊಂಡೇ ಬಂದಿತ್ತ ಅಡ! ಕುಬೇರನತ್ರೆ ಲಡಾಯಿ ಮಾಡಿ ಅವನ ಪುಷ್ಪಕ ವಿಮಾನ ತೆಕ್ಕೊಂಡು, ಕೈಲಾಸಕ್ಕೆ ಹೋಗಿ ಅಲ್ಲಿ ’ನಂದಿ’ ಹತ್ರಂದ ಶಾಪ ತೆಕ್ಕೊಂಡು, ಸೀದಾ ವೇದವತಿಯ ಆಶ್ರಮಕ್ಕೆ ಬಂದು ಅದಕ್ಕೆ ಉಪದ್ರ ಮಾಡಿದ ಹೇಳಿ ಗುರುಗ ಹೇಳಿ ಅಪ್ಪಗ ಸಭೆಲಿದ್ದವಕ್ಕೆ ಮುಂದೆ ಕಥೆ ಎಂತಾವ್ತು ಹೇಳ್ತ ಕುತೂಹಲ ಹೆಚ್ಚಾತು!

ವೇದಿಕೆಲಿ ಒಂದು ಅಗ್ನಿಕುಂಡದ ಹಾಂಗೆ ಮಾಡಿತ್ತವು. ವೇದವತಿ ಕುಂಡಕ್ಕೆ ಹಾರಿದ ಕೂಡ್ಲೆ ವೇದಿಕೆ ಅಡಿಯಂಗೆ ಎತ್ತುವ ಹಾಂಗೆ ವ್ಯವಸ್ಥೆ ಇತ್ತು. ’ರಾವಣನ ಸಂಹಾರಕ್ಕೆ ಆನೇ ಕಾರಣ ಆವ್ತೆ’ ಹೇಳಿ ವೇದವತಿ ಅಗ್ನಿಕುಂಡಕ್ಕೆ ಹಾರಿ ಪ್ರಾಣ ಬಿಟ್ಟಪ್ಪಗ ಸಬೆಲಿದ್ದ ಕೆಲವರು ಅವರ ಕರವಸ್ತ್ರ ತೆಗದವು, ಕಣ್ಣೀರು ಉದ್ದಿಗೊಂಡವು.. ಕೆಲವರು ಎದ್ದುನಿಂದು ವೇದವತಿ ಪಾತ್ರ ಮಾಡಿದ ಕೂಸು ಎಲ್ಲಿ ಹೋತು ಹೇಳಿ ಹುಡುಕ್ಕಿದವು!
ಅಲ್ಲದ್ದೆ ವೇದಿಕೆ ಗುರುಗಳ ಪೀಠ ರಜ ಎತ್ತರಲ್ಲಿ ಇತ್ತು. ಪೀಠದ ಆತ್ಲಾಗಿ ಇತ್ಲಾಗಿ ದೀಪ ಹೊತ್ತಿಸಿ ಮಡಿಗಿತ್ತವು. ರೂಪಕ ಶುರು ಅಪ್ಪ ಮೊದಲು ಒಂದರಿ ವೇದಿಕೆಲಿ ಇಪ್ಪ ವಿದ್ಯತ್ ದೀಪಂಗಳ ಎಲ್ಲಾ ನಂದಿಸಿದವು.
ಅಂಬಗ ಗುರುಗೊ,  ಸುತ್ತಲೂ ಇಪ್ಪ ನಂದಾದೀಪಂಗಳ ಸಾಲು ತುಂಬಾ ಚೆಂದ ಕಂಡತ್ತು. ವಿವರ‍್ಸುಲೆ ಕಷ್ಟ. ಶಬ್ದಕ್ಕೆ ಸಿಕ್ಕ!  ಅನೂ, ಬಲ್ನಾಡುಮಾಣಿಯೂ ಸಭೆಲಿ ಕಡೆಯಣ ಸಾಲಿಲಿ ಸಣ್ಣಕ್ಕೆ ಮಾತಾಡಿಗೊಂಡಿದ್ದವು, ಒಂದರಿಯೇ ಎದುರಂಗೆ ಓಡಿದೆಯ.  ದೀಪದ ಪಟ ತೆಗವಲೆ!

ಮುಂದೆ ರಾವಣ ಸೀತೆಯ ಹೊತ್ತುಗೊಂಡು ಹೋಪಗ ಅಲ್ಲಿ ವೇದವತಿಯೇ ಸೀತೆ ಆವ್ತು, ಅದರಿಂದಾಗಿ ರಾವಣನ ಸಂಹಾರ ಆವ್ತು, ಮುಂದೆ ರಾಮ ಅಗ್ನಿಪರೀಕ್ಷೆ ಅಪ್ಪಗ ಸೀತೆಯ ಪುನಃ ಪಡಕ್ಕೊಂಡ ಹೇಳುವಲ್ಲಿಗೆ ಕಥೆ ಮುಗುದತ್ತು.
ಇದರಿಂದ ಗೊಂತಪ್ಪ ವಿಷಯ ಎಂತ ಹೇಳಿರೆ ಯಾವತ್ತೂ ಸ್ತ್ರೀಯರ ಗೌರವಂದ ಕಾಣೆಕ್ಕು, ಅಬಲೆಯ ಕಣ್ಣೀರು ಖಂಡಿತಾ ಮನುಷ್ಯನ ಸುಡ್ತು ಹೇಳುದರ ಗುರುಗೊ ವಿವರ‍್ಸಿದವು. ಇದರೊಟ್ಟಿಂಗೆ ವೇದವತಿಯ ವೇದನೆ ಹೇಂಗಿತ್ತು ಹೇಳಿ ರೂಪಕಲ್ಲಿ ಕಂಡತ್ತು!

ಕಡೆಂಗೆ ಈ ಕಾರ್ಯಕ್ರಮಕ್ಕೆ ಅಧ್ಭುತ ಕೊನೆ ಹೇಳುವ ಸಮಯ ಬಂತು..  ರಾಮನ ಪದ್ಯ ಹೇಳಿಗೊಂಡು, ಸಭಿಕರು, ಕಾರ್ಯಕರ್ತರು, ಎಲ್ಲರೂ ಕೊಣುದ್ದೇ ಕೊಣುದ್ದು! ಒಟ್ಟಿಂಗೆ ಹೂಗಿನ ಮಳೆ.. ಗುರುಗ ಅಂತೂ ಸಂತೋಷಲ್ಲಿ ಎರಡೂ ಕೈ ನೆಗ್ಗಿ ’ಕುಣಿರಿ ಕುಣಿರಿ’ ಹೇಳಿ ಕೈಭಾಷೆ ಮಾಡಿಗೊಂಡಿದ್ದು ಮರೆಯಲಾಗದ್ದ ಕ್ಷಣ! ಆ ಕ್ಷಣ ಕ್ಯಾಮರಾ ಕಣ್ಣಿಲಿಯೂ ಸೆರೆ ಆತು.. ಈ ಸಂತೋಷಲ್ಲಿ ಕೊಣಿವದು ಬಿಟ್ಟು ನೋಡಿಗೊಂಡು ನಿಂದದು ಕೈಲಿ ಕ್ಯಾಮರಾ ಹಿಡ್ಕೊಂಡವು ಮಾತ್ರ!

ಈ ಪರಿಸ್ಥಿತಿಲಿ ವಿಡಿಯೋ ಕ್ಯಾಮರಾ ಹಿಡ್ಕೊಂಡು ಇದ್ದ ಕಾರ‍್ಯಕರ್ತರ ಅವಸ್ಥೆ ಹೇಳಿ ಪ್ರಯೋಜನ ಇಲ್ಲೆ! ಒಟ್ಟೂ ಗಡಿಬಿಡಿ ಅವಕ್ಕೆ ಪಾಪ! ಎಲ್ಲರೂ ರಾಮಕಥಾ, ಜೈ ಶ್ರೀ ರಾಮಕಥಾ ಹೇಳಿ ಕೊಣಿವಲೆ ಶುರುಮಾಡಿದವು. ’ಅಜ್ಜಂದ್ರುದೆ ಎಂಗಳುದೆ ಎಂತ ಕಮ್ಮಿ ಇಲ್ಲೆ’ ಹೇಳಿ ತೋರಿಸಿ ಕೊಟ್ಟವು! ಆದರೆ ಅಜ್ಜಿಯಕ್ಕಳ ಅಷ್ಟಾಗಿ ಕಂಡತ್ತಿಲ್ಲೆ, ಕಸ್ತಲಾಯ್ದಿದಾ, ಹಾಂಗಾಗಿಯೋ ಏನೋ! ಮುಂದಾಣ ದಿನಂಗಳಲ್ಲಿ ಅಜ್ಜಿಯಂದ್ರೂ, ಮಕ್ಕ, ಅಬ್ಬೆ-ಅಪ್ಪ ಎಲ್ಲರೂ ಸೇರಿಗೊಳ್ಳಲ್ಲಿ  ಹೇಳಿ ಕೇಳಿಗೊಂಬದು..!!

ಹರೇರಾಮ..
~
ದೇವಸ್ಯಮಾಣಿ

ಕೆಲವು ಪಟಂಗಳ ಇಲ್ಲೆ ನೇಲ್ಸಿದ್ದೆ! ನೋಡಿಕ್ಕಿ!

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶಪೆರ್ವ

  ಒಳ್ಳೇ ನಿರೂಪಣೆ, ಧನ್ಯವಾದ೦ಗೊ

  [Reply]

  VA:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ದೇವಸ್ಯಮಾಣಿಯ ಸವಿವರ ಶುದ್ದಿ ಕಂಡು ಕೊಶಿ ಆತು.
  ಬೈಲಿಲಿ ರಾಮಕಥೆ ವಿವರ ಆರೇ ಹೇಳಿರೂ, ಅದೊಂದು ವೈವಿಧ್ಯಮಯವಾಗಿರ್ತು.
  ಇದುದೇ ಹಾಂಗೇ. ಒಳ್ಳೆ ವಿವರಂಗೊ.
  ವೇದವತಿ ಕುಂಡಕ್ಕೆ ಹಾರಿದ್ದು ಕಣ್ಣಿಂಗೆ ಕಟ್ಟುತ್ತು.

  ಅದರ್ಲಿಯೂ, ವಿಶೇಷವಾಗಿ ಗಮನಕ್ಕೆ ಬಪ್ಪದು ನೀ ತೆಗದ ಪಟಂಗೊ.
  ಎಲ್ಲವೂ ಚೆಂ..ದದ ಪಟಂಗೊ.
  ತುಂಬಾ ಒಳ್ಳೆ ಚಾಕಚಕ್ಯತೆ ಇದ್ದು ನಿನಗೆ. ಈ ಕಲೆ ಮುಂದುವರಿಯಲಿ. ಬೈಲಿನ ಪ್ರೋತ್ಸಾಹ ನಿನ್ನ ಒಟ್ಟಿಂಗೇ ಇದ್ದು.
  ಆತೋ? :-)

  [Reply]

  ದೇವಸ್ಯ ಮಾಣಿ

  ದೇವಸ್ಯ ಮಾಣಿ Reply:

  ಧನ್ಯವಾದಂಗೊ ಒಪ್ಪಣ್ಣಣ್ಣೋ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ವೆಂಕಟ್ ಕೋಟೂರುಪುಣಚ ಡಾಕ್ಟ್ರುಅಕ್ಷರ°ಒಪ್ಪಕ್ಕದೊಡ್ಮನೆ ಭಾವಶ್ಯಾಮಣ್ಣಕೊಳಚ್ಚಿಪ್ಪು ಬಾವವಿದ್ವಾನಣ್ಣದೀಪಿಕಾಬೋಸ ಬಾವಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಅನು ಉಡುಪುಮೂಲೆಚೆನ್ನೈ ಬಾವ°ಚುಬ್ಬಣ್ಣಶರ್ಮಪ್ಪಚ್ಚಿಶಾ...ರೀವೇಣೂರಣ್ಣಸುಭಗಪುತ್ತೂರಿನ ಪುಟ್ಟಕ್ಕಮಾಲಕ್ಕ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ