ಪೇಟೆಂದ-ಹಳ್ಳಿಯೆಡೆಗೆ : ಸಜಂಕಬೆಟ್ಟು ರವಿಯಣ್ಣನ ಅನುಭವ ಲೇಖನ

January 14, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೋಟ್ಳಜ್ಜನ ಕಥೆ ಓದಿಯಪ್ಪಗ ಬೆಂಗಳೂರಿಲ್ಲಿ ಹೊಟ್ಟೆ ತುಂಬುಸಿಕ್ಕಿ ಊರಿಂಗೆ ಬಂದು ಬೇಲಿ ಹಾಕಿ ದನ ಹಾಂಗೂ ಸಸಿಗಳ ನೆಟ್ಟ ರವಿ ಭಾವನ ಕಥೆ ನೆನಪಾತು.
ರವಿ ಭಾವ ಎಲ್ & ಟೀ ಕಂಪನಿಲಿ ಸಾಫ್ಟ್ ವೇರ್ ಉದ್ಯೋಗಿ ಆಗಿ ಇತ್ತಿದ್ದವು. ಬೆಂಗಳೂರಿಲ್ಲಿ ಎಲ್ಲ ಅನುಕೂಲತೆಗಳೊಂದಿಗೆ ಹೆಂಡತಿ ಲತಾ, ಮಗ ವಿಕಾಸ್ ಜೊತೆಗೆ ಸುಖ ಜೀವನ ನಡೆಸಿಗೊಂಡು ಇತ್ತಿದ್ದವು.
ಕಲುಷಿತವಾದ ವಾತಾವರಣಲ್ಲಿ ಒತ್ತಡದ ಜೀವನ ನಡೆಸುವುದರಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯಕ್ಕೆ ತೊಂದರೆ ಹೇಳುವ ಸತ್ಯವ ಮನಗಂಡು ಊರಿಂಗೆ ಮರಳಿ ಹಸುವಿನ ಸೇವೆಯೊಂದಿಗೆ ಭೂಮಿಯ ಹಸುರಾಗಿಸುವ ಕೆಲಸಲ್ಲಿ ತೊಡಗಿದ್ದವು.
ಅವು ತೆಕ್ಕೊಂಡ ನಿರ್ಧಾರ ನಮಗೆಲ್ಲ ಒಳ್ಳೆ ಆದರ್ಶ ಅಲ್ಲದ? ಅವರತ್ರೆ ನಿಂಗಳ ಅನುಭವವ ಒಪ್ಪಣ್ಣನ ಬೈಲಿಲ್ಲಿ ಹಂಚಿಗೊಳ್ಳುತ್ತಿರಾ ಕೇಳಿದೆ.
ಸಂತೋಷಂದ ಒಪ್ಪಿಗೊಂಡವು..

ಒತ್ತಡ, ಜಂಜಾಟಂದ – ಆರೋಗ್ಯಕರ, ನೆಮ್ಮದಿಯ ಜೀವನದತ್ತ :

ಎನಗೆ ಮೊದಲಿಂದಲೂ ಹಳ್ಳಿ ಹೇಳಿದರೆ ಇಷ್ಟ.

ಶಾಲೆಗೆ ರಜೆ ಸಿಕ್ಕಿದ ಕೂಡಲೇ ಊರಿಂಗೆ ಬಂದರೆ(ಮುಂಬಯಿಲ್ಲಿ   ಬೆಳದದ್ದು) ವಾಪಾಸ್ ಶಾಲೆ ಶುರು ಅಪ್ಪಗಳೇ ಪೇಟೆಗೆ ಹೋಪದು.
ಕೆಲಸಕ್ಕೆ ಸೇರಿದ್ದು ಬೆಂಗಳೂರಿಲ್ಲಿ. ಅದುವೋ ಕಾಂಕ್ರೀಟ್ ಜಂಗಲ್. ಅಂಬಗಳೆ ಮನಸ್ಸಿಲ್ಲಿ ಗ್ರಹಿಸಿತ್ತಿದ್ದೆ -“ಕೈಲಿ ರಜ ಪೈಸೆ ಅಪ್ಪಗ ಹಳ್ಳಿಗೆ ಹೋಪದು” ಹೇಳಿ.
ಅಲ್ಲಿ ಜಾಗ ತೆಕ್ಕೊಂಡು ಕೃಷಿ ಮಾಡಿಗೊಂಡು ಇಪ್ಪದು ಹೇಳಿ.  ಎನ್ನ ಕನಸು ನನಸಾದ್ದದು 2010 ಮಾರ್ಚ್ 31. ಅದು ಎನ್ನ ಕೆಲಸದ ಕಡೆಯ ದಿನ.
ಆ ದಿನ ಆಫೀಸಿಲಿ ಪಾರ್ಟಿ ಮುಗಿಸಿ ಮನೆಗೆ ಬಂದವ ಮರುದಿನ ಉದಿಯಪ್ಪಗ ಲಾರಿಲಿ ಸಾಮಾನು ಹಾಕಿಸಿ ಊರಿಂಗೆ ಹೆರಟೆ.

ರವಿ ಸಜಂಕಬೆಟ್ಟು: ಸುಖೀ ಸಂಸಾರ - ರೈತಸಂಸಾರ

ಎನ್ನ ಹೆಂಡತಿ ಮತ್ತು ಮಗ ಇಬ್ಬರಿಂಗುದೆ ಹಳ್ಳಿಲಿ ಜೀವನ ಕಳವಲೆ ಎಡಿಗು ಹೇಳುವ ನಂಬಿಕೆ ಇದ್ದ ಕಾರಣ ಆನು ಧೈರ್ಯಲ್ಲಿ ಸಾಫ್ಟ್ ವೇರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹಳ್ಳಿಲಿ ಜಾಗೆ ತೆಗೆದು ಅಲ್ಲಿ ಎನ್ನ ಅಪ್ಪನ ಸಹಾಯಂದ ಅಡಕೆ,ತೆಂಗು,ಬಾಳೆ ಎಲ್ಲವನ್ನೂ ಹಾಕಿಸಿದೆ.

ಈಗ ಹಳ್ಳಿಗೆ ಬಂದು ಒಂದು ವರ್ಷ ಆತು. ಹಳ್ಳಿಯ ಜೀವನಕ್ಕೆ ಹೊಂದಿಕೆ ಆವುತ್ತ ಇದ್ದೆ.
ಬೆಂಗಳೂರಿಂದ ಎಂತಕೆ ಬಂದೆ ಹೇಳಿ ಆವುತ್ತಿಲ್ಲೇ. ಇಲ್ಲಿ ದನಗಳೊಟ್ಟಿoಗೆ, ನಾಯಿ,ಪುಚ್ಹೆಗಳೊಟ್ಟಿoಗೆಸಮಯ ಹೋದ್ದೆ ಗೊಂತಾವುತ್ತಿಲ್ಲೇ.
ಹೆಂಡತಿ ಮಗನೂ ತುಂಬಾ ಖುಷಿಲಿ ಇದ್ದವು. ಬೆಂಗಳೂರಿನ ಜಂಜಾಟದ ಜೀವನ ನೆನೆಸುವಗ ಆನು ತೆಕ್ಕೊಂಡ ನಿರ್ಧಾರ ಸರಿಯಾದ್ದು ಹೇಳಿ ಎನಗೆ ಅನ್ನಿಸುತ್ತು.
ಇಲ್ಲಿಯೂ ಹಲವಾರು ಸಮಸ್ಯೆಗ ಇದ್ದು. ಆದರೆ ಯಾವುದಕ್ಕೂ ಅರ್ಜೆಂಟು,ಒತ್ತಡ  ಹೇಳಿ ಇಲ್ಲೇ. ಆರಾಮಲ್ಲಿ ಮಾಡಿದರೆ ಸಾಕಾವ್ತು. ನಮ್ಮ ಕೆಲಸ ನಾವು ಮಾಡಿಗೊಂಡರೆ ಯಾವ ತೊಂದರೆಯೂ ಇಲ್ಲೇ.
ಆರೋಗ್ಯದ ದೃಷ್ಟಿಲಿ ಹಳ್ಳಿ ತುಂಬಾ ಒಳ್ಳೇದು.

ಈ ನಿರ್ಧಾರವ ತೆಕ್ಕೊಂಬಲೆ ಎನಗೆ ಎನ್ನ ಅಪ್ಪ ಅಮ್ಮನೇ ಆದರ್ಶ.
ಮುಂಬಯಿ ರೈಲ್ವೆ ಲಿ ಉತ್ತಮ ಹುದ್ದೆಲಿ ಇತ್ತಿದ್ದ ಎನ್ನ ಅಪ್ಪ  ಸ್ವನಿವೃತ್ತಿ(V R S) ತೆಕ್ಕೊಂಡು ಊರಿಂಗೆ ಬಂದು ಕೃಷಿ ಮಾಡಿ ಯಶಸ್ಸು ಸಾಧಿಸಿದ್ದವು.

ಎಂಗಳ ವಿಳಾಸ:
ವೆಂಕಟರವಿ ಸಜಂಕಬೆಟ್ಟು,
‘ನೇಸರ’ – ಕೊರಗಟ್ಟೆ,
ಅಂಚೆ : ವಾಮದಪದವು,
ಬಂಟ್ವಾಳ –  574324

ದೂರವಾಣಿ: 08255 – 282320
ಮೊ : 9448044525

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಒಂದು ಅನುಭವ ಕಥನ, ಆತ್ಮವಿಶ್ವಾಸ, ಅಭಿಮಾನದ ಶುದ್ದಿ ಓದಿ ಮನಸ್ಸು ತುಂಬಿತ್ತು. ಪೇಟೆ ಉದ್ಯೋಗವೇ ಜೀವನಾಧಾರ ಆಗಿಪ್ಪವಕ್ಕೆ ಇದು ಕಷ್ಟಸಾಧ್ಯ. ‘ದೂರದ ಬೆಟ್ಟ ನುಣ್ಣಗೆ’ ಹೇಳ್ತಾಂಗೆ., ಪೇಟೆಲಿಪ್ಪವಕ್ಕೆ ಹಳ್ಳಿಯೇ ಉತ್ತಮ, ಹಳ್ಳಿಲಿಪ್ಪವಕ್ಕೆ ಪೇಟೆಯೇ ಸೌಖ್ಯ ಕಾಂಬದು. ಆದರೆ ಎರಡರಲ್ಲಿಯೂ ಅದರದ್ದೇ ಆದ ಗುಣಾವಗುಣ ವಾಸ್ತವಿಕ ಸತ್ಯ. ಸಮಸ್ಯೆಯ ಅರ್ಥಮಾಡಿಗೊಂಡು ಯೋಗ್ಯವಾಗಿ ಪರಿಹರಿಸಿ, ಸಮಾಜಲ್ಲಿ ನವಗೆ ಯಾವುದು ಬೇಕು ಹೇಳಿ ನಿರ್ಧಾರ ತೆಕ್ಕೊಂಡು ನಾಕು ಜನರೊಟ್ಟಿಂಗೆ ಪ್ರೀತಿ ಸೌಹಾರ್ದಲ್ಲಿ ಜೀವಿಸುವುದೇ ಜೀವನ. ಅಂದರೂ ನಮ್ಮತನ ಉಳಿಸಿ ಬೆಳೆಸಿ ಸಂತೋಷ ಸಿಕ್ಕೆಕ್ಕಾರೆ ಹಳ್ಳಿಜೀವನವೇ ಸೂಕ್ತ. ಬದಲಾವ್ತಾ ಇಪ್ಪ ಕಾಲಚಕ್ರಲ್ಲಿ ಮನುಷ್ಯ ಪ್ರಕೃತಿ ಪರಿಸರ ಎಲ್ಲವೂ ಬದಲಾವ್ತಾ ಇದ್ದು. ಸೌಕರ್ಯಂಗಳೂ ಕೂಡ. ಹಳ್ಳಿ ಇಂದು ಮದಲಾಣ ಕತೆ ಪುಸ್ತಕಲ್ಲಿ ಬಪ್ಪ ಹಳ್ಳಿಯಾಗಿಯೇ ಇಲ್ಲೆ. ಆಲ್ಲಿಯೂ ಅಭಿವೃದ್ಧಿ ಕಾಣುತ್ತು.

  ರವಿಭಾವನ ಕುಟುಂಬಕ್ಕೆ ಶ್ರೀಗುರುದೇವತಾನುಗ್ರಹ ಸದಾ ಇರಲಿ. ಆಯುರಾರೋಗ್ಯಶಾಂತಿ ನೆಮ್ಮದಿ ತೃಪ್ತಿ ಸದಾ ಇಪ್ಪಂತಾಗಲಿ ಹೇಳಿ ಬೈಲು ಹಾರೈಸುತ್ತು.

  ಜಯಕ್ಕನ ಶುದ್ದಿಗೊಂದು ಒಪ್ಪ ಹೇಳಿತ್ತು – ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: +2 (from 2 votes)
 2. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಜಯಕ್ಕನ ಶುದ್ದಿಗೆ ನಮ್ಮದೂ ಒಂದು ಒಪ್ಪ ,
  (ಬೆಂಗಳೂರಿಲ್ಲಿ ಎಲ್ಲ ಅನುಕೂಲತೆಗಳೊಂದಿಗೆ ಹೆಂಡತಿ ಲತಾ, ಮಗ ವಿಕಾಸ್ ಜೊತೆಗೆ ಸುಖ ಜೀವನ ನಡೆಸಿಗೊಂಡು ಇತ್ತಿದ್ದವು.) ಇದು ಬರೇ ನೋಡುವವರ ಕಲ್ಪನೆ ಅಲ್ಲದೋ , ಒಂದುವೇಳೆ ಅವಕ್ಕೆ ಅದೇ ಸುಖ ಹೇಳಿ ಕಂಡಿತ್ತಿದ್ದರೆ ಅವು ಊರಿಂಗೆ ಬಂದು ಹಳ್ಳಿಲಿ ಇಪ್ಪಲಿತ್ತೋ…?
  ಈಗಾಣ ಕಾಲಲ್ಲಿ ಹೀಂಗಿರ್ತ ಒಂದು ನಿರ್ಧಾರ ತೆಕ್ಕೊಂಡಿದವು ಹೇಳೀರೆ ನಿಜವಾಗಿಯೂ ಅವರ ಧೈರ್ಯ್ರ ಮೆಚ್ಚೆಕ್ಕಾದ್ದೇ, ಅವರ ಆಶೆಗೊ ಎಲ್ಲಾ ಈಡೇರಲಿ,ಹೇಳ್ತ ಹಾರೈಕೆ ನಮ್ಮದುದೇ…..

  [Reply]

  VN:F [1.9.22_1171]
  Rating: 0 (from 0 votes)
 3. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಇದುವೇ ನಿಜವಾದ ಜೀವನ. .

  [Reply]

  VN:F [1.9.22_1171]
  Rating: 0 (from 0 votes)
 4. ಶ್ರೀ ಶ್ಯಾಮ್

  ಹರೇ ರಾಮ ಜಯಶ್ರೀ ಅತ್ತಿಗೆ.,

  ಲೇಖನ ಲಾಯಿಕಾಯ್ದು .. ಇದರ ಮುಖಾಂತರ ಸುಖಿ ಜೀವನದ ಗುಟ್ಟು ಗೊಂತಾವ್ತು..

  – ಶ್ರೀ ಶ್ಯಾಮ್

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಎಲ್ಲ ಕಡೆಯೂ ಕೇಳುತ್ತದರಿಂದ ಭಿನ್ನವಾದ ಒಂದು ಸುದ್ದಿ.
  ರವಿಯಣ್ಣಂಗೆ ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ರವಿಯಣ್ಣನ ಈ ಪ್ರಯತ್ನ ಯಶಸ್ವಿಯಾಗಲಿ,ಈ ನಡೆ ಒಳುದ ಜವ್ವನಿಗರಿ೦ಗೂ ಆದರ್ಶವಾಗಲಿ. ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ರವಿಯಣ್ಣನ ಅನುಭವ ಬೈಲಿಲಿ ಹಂಚಿದ್ದು ಒಳ್ಳೆದಾತು.
  ವಿಶ್ರಾಂತ ಜೀವನ ಪೇಟೆಲಿ ಆಗ ಹೇಳಿ ನಂಬಿಗೊಂಡಿಪ್ಪವಕ್ಕೆ ಇವರ ಅನುಭವ ಸ್ಪೂರ್ತಿ ಅಕ್ಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಡಾಮಹೇಶಣ್ಣಪಟಿಕಲ್ಲಪ್ಪಚ್ಚಿಚುಬ್ಬಣ್ಣತೆಕ್ಕುಂಜ ಕುಮಾರ ಮಾವ°ಅನಿತಾ ನರೇಶ್, ಮಂಚಿಪುಣಚ ಡಾಕ್ಟ್ರುಗೋಪಾಲಣ್ಣವೇಣಿಯಕ್ಕ°ವಾಣಿ ಚಿಕ್ಕಮ್ಮಪುತ್ತೂರುಬಾವಅನುಶ್ರೀ ಬಂಡಾಡಿvreddhiಪೆಂಗಣ್ಣ°ಅಜ್ಜಕಾನ ಭಾವಚೆನ್ನಬೆಟ್ಟಣ್ಣದೊಡ್ಡಮಾವ°ಬೋಸ ಬಾವವಿದ್ವಾನಣ್ಣಅಡ್ಕತ್ತಿಮಾರುಮಾವ°ಪ್ರಕಾಶಪ್ಪಚ್ಚಿದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ