ಶೇಡಿಗುಮ್ಮೆ ಗೋಪಾಲಣ್ಣಂಗೆ ಬೈಲಿಂಗೆ ಸ್ವಾಗತ

December 15, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: http://oppanna.com/nammooru/shedigumme-gopalakrishna-bhat )

ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!

ಶೇಡಿಗುಮ್ಮೆ ಗೋಪಾಲಣ್ಣ, ಶುದ್ದಿ ಹೇಳುವ ಮೊದಲು ಗಂಭೀರ ಇಪ್ಪದು!

ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!

ಇದಾ, ಗೋಪಾಲಣ್ಣನ ಶುದ್ದಿಗೊ ಇನ್ನು ಬಪ್ಪಲೆ ಸುರು ಆವುತ್ತು.
ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಗೋಪಾಲಣ್ಣಾ, ನಿಂಗೊಗೆ ಬೈಲಿಂಗೆ ಸ್ವಾಗತ!
~
ಒಪ್ಪಣ್ಣ

ಶ್ರೀ ಶೇಡಿಗುಮ್ಮೆ ಗೋಪಾಲಕೃಷ್ಣಭಟ್, ನಮ್ಮೆಲ್ಲರ ಗೋಪಾಲಣ್ಣ ಆಗಿ ನವಗೆ ಶುದ್ದಿ ಹೇಳ್ತವು.
ಅವರ ಮೋರೆಪುಟದ ಸಂಕೊಲೆ ಇಲ್ಲಿದ್ದು: http://www.facebook.com/profile.php?id=100001634774668
ಅವರ ಶುದ್ದಿಗೊ ಸದ್ಯಲ್ಲೇ ಸುರು ಆವುತ್ತು, ಕಾದೊಂಡಿರಿ!
~
ಗುರಿಕ್ಕಾರ°

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಮೋಹನಣ್ಣ

  ಎನ್ನ ಬ೦ದುವೂ ಆತ್ಮೀಯ ಗೆಳೆಯನೂ ಆದ ಗೋಪಾಲಣ್ಣ೦ಗೆ ಆತ್ಮೀಯ ಸ್ವಾಗತ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)
 2. ಡೈಮಂಡು ಭಾವ

  gopalannange bailinge swagatha…..

  [Reply]

  VA:F [1.9.22_1171]
  Rating: 0 (from 0 votes)
 3. ಡೈಮಂಡು ಭಾವ

  Gopalannange bailinge swagatha..oLLe leKananga barali..

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಗೋಪಾಲಂಗೆ ಆತ್ಮೀಯ ಸ್ವಾಗತ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  raghumuliya

  ಗೋಪಾಲಣ್ಣ,ಆತ್ಮೀಯ ಸ್ವಾಗತ.ಬನ್ನಿ ಬರೆಯಿ.ನಿಂಗಳ ಬರಹ ಬೈಲಿನ ಹೊಸ ಎತ್ತರಕ್ಕೆ ಏರುಸಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಮಾವ°

  ಗೋಪಾಲಣ್ಣಾ ಬೈಲಿಂಗೆ ಸ್ವಾಗತ.ನಿಂಗಳ ಶುದ್ಧಿಗೊಕ್ಕೆ ಕಾದುಗೊಂಡಿರ್ತೆಯ!!!

  [Reply]

  VN:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಎಲ್ಲರ ಹಾರೈಕೆಗೆ ಎನ್ನ ಧನ್ಯವಾದ.
  ಆನು ಇಷ್ಟು ವರ್ಷ ನಮ್ಮ ಭಾಷೇಲಿ ಬರದ್ದಿಲ್ಲೇ.ನಮ್ಮ ಭಾಷೇಲಿ ಬರವದು ಕಷ್ಟ ಹೇಳಿ ಎನ್ನ ವಿಚಾರ ಇತ್ತು.ಇದುಸುಲಭ ಹೇಳಿ ಎನಗೆ ಈ ಬ್ಲಾಗ್ ನೋಡಿದ ಮೇಲೆ ,ಶರ್ಮಣ್ಣನ ಮೂಲಕ ಗೊಂತಾತು.
  ಬರೆವ ಪ್ರಯತ್ನ ಖಂಡಿತ ಮಾಡ್ತೆ .ನಿಂಗಳ ನಿರೀಕ್ಷೆಗೆ ತಕ್ಕಂತೆ ಬರೆವ ಶಕ್ತಿ ದೇವರು ಕೊಡಲಿ.ಹೇಳಿ ಎನ್ನ ಪ್ರಾರ್ಥನೆ.

  [Reply]

  VA:F [1.9.22_1171]
  Rating: 0 (from 0 votes)
 8. ಗೋಪಾಲಣ್ಣಂಗೆ ಬೈಲಿಂಗೆ ಸ್ವಾಗತ…….ಎಂಗೊ ಸಣ್ಣಾದಿಪ್ಪಗ ಆಕಾಶ ತೋರ್ಸಿಗೊಂಡು ನಕ್ಶತ್ರಂಗಳ ಗುರ್ತ ಹೇಳುಗು ಈ ಗೋಪಾಲಣ್ಣ……….ಆ ಸುದ್ದಿ ಎಲ್ಲಾ ಬಕ್ಕು ಹೇಳಿ ಗ್ರೇಶುತ್ತೆ…………

  [Reply]

  VA:F [1.9.22_1171]
  Rating: 0 (from 0 votes)
 9. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ ಹೇಳಿದ ಹಾಂಗೆ ಬಂದದರ ಸ್ವಾಭಾವಿಕ ಹೇಳುವ ಹಾಂಗೆ ಸ್ವೀಕರಿಸಿ, ಸ್ವಂತವಾಗಿಯೇ ಉದ್ಯೋಗ ಪಡದು, ಸಾಹಿತ್ಯಲ್ಲಿಯೂ ಬೆಳದು, ಇನ್ನೊಬ್ಬಂಗೆ ಪ್ರೇರಣೆ ಅಪ್ಪ ಹಾಂಗೆ ಸಾಧನೆ ಮಾಡಿ ತೋರ್ಸಿದ ಗೋಪಾಲಣ್ಣ ನಿಂಗೊಗೆ ಬೈಲಿಂಗೆ ಸ್ವಾಗತ. ಶರ್ಮಪ್ಪಚ್ಚಿ ನಿಂಗಳ ಬಗ್ಗೆ ಈಗಾಗಲೇ ಹೇಳಿದ ಕಾರಣ ನಿಂಗ ಬೈಲಿಂಗೆ ಬಪ್ಪದರಲ್ಲಿ ಸಂತೋಷ ಇದ್ದು. ಒಳ್ಳೆ ಲೇಖನಂಗ ಬರಲಿ ನಿಂಗಳಿಂದ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಜಯಗೌರಿ ಅಕ್ಕ°ವೆಂಕಟ್ ಕೋಟೂರುದೇವಸ್ಯ ಮಾಣಿಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವದೀಪಿಕಾಶೇಡಿಗುಮ್ಮೆ ಪುಳ್ಳಿವಿಜಯತ್ತೆಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಒಪ್ಪಕ್ಕಮಾಷ್ಟ್ರುಮಾವ°ಅಕ್ಷರದಣ್ಣಮಾಲಕ್ಕ°ಚುಬ್ಬಣ್ಣಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಬೋಸ ಬಾವಡೈಮಂಡು ಭಾವಶಾ...ರೀಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ