Oppanna.com

ಅಭಿವೃದ್ಧಿಯ ದ್ಯೋತಕ, ಈ “ಸೂತಕ”

ಬರದೋರು :   ಒಪ್ಪಣ್ಣ    on   18/10/2013    10 ಒಪ್ಪಂಗೊ

ಹೇಳಿತ್ತಿದ್ದೆ ಅಲ್ಲದೋ – ವಿದ್ವಾನಣ್ಣ ಓ ಮೊನ್ನೆ ಮಠಲ್ಲಿ ಸಿಕ್ಕಿತ್ತಿದ್ದವು.
ರಾಮಕಥೆಯ ಮೀಟಿಂಗು ಮುಗುಶಿದ ವಿದ್ವಾನಣ್ಣ ಕೆಲವು ಕುಂಞಿ ವಿದ್ವಾನಣ್ಣಂಗಳ ಒಟ್ಟಿಂಗೆ ಕೂದು ಮಾತಾಡಿಗೊಂಡಿತ್ತಿದ್ದವು.
ಇನ್ನಾಣ ಧರ್ಮಭಾರತಿಯ ಲೇಖನದ ಬಗ್ಗೆ ದೊಡ್ಡೇರಿ ಭಾವಯ್ಯನ ಹತ್ತರೆ ಎಂತದೋ ವಿಮರ್ಶೆ ಮಾಡಿಗೊಂಡಿತ್ತಿದ್ದವು.
ಒಂದು ಮಟ್ಟಿನ ಮಾತುಕತೆಗೊ ಮುಗುದ ಮತ್ತೆ ಒಪ್ಪಣ್ಣನ ಕೈಲಿಯೂ ಮಾತಾಡ್ತವು.

ಎಂತಾರು ಶುದ್ದಿ ಸಿಕ್ಕುತ್ತರೆ ಸಿಕ್ಕಲಿ – ಹೇದು ನಾವೂ ಕರೆಲಿ ಕೂದುಗೊಂಡತ್ತು.
ಅವು ಸಿಕ್ಕುದು ಎಷ್ಟೇ ಕಮ್ಮಿ ಹೊತ್ತಿಂಗೇ ಆಗಲಿ, ತುಂಬ ಹೊತ್ತಿಂಗೇ ಆಗಲಿ – ಅವು ಸಿಕ್ಕಿಪ್ಪದ್ದೇ, ಬೈಲಿಂಗೆ ಶುದ್ದಿ ಸಿಕ್ಕುತ್ತರಲ್ಲಿ ಸಂಶಯ ಇಲ್ಲೆ.
ಇದರಿಂದ ಮದಲೂ ಹಾಂಗೇ ಆಯಿದು. ಮುಂದೆಯೂ ಹಾಂಗೇ ಆವುತ್ತು. ಆ ದಿನವೂ – ಹಾಂಗೇ ಆತು!

~

ವಿದ್ವಾನಣ್ಣಂಗೆ ಒಪ್ಪಣ್ಣನ ಮೋರೆ ಕಂಡಪ್ಪದ್ದೇ ಅದೆಂತಕೋ ಅಜ್ಜಕಾನ ಮಾಣಿಯ ನೆಂಪಾತು ಕಾಣ್ತು.
“ಅಭಾವ ಎಲ್ಲಿದ್ದ, ಬಂದಿದನಿಲ್ಲೆಯಾ?”- ಕೇಳಿದವು.
ಇಲ್ಲೆ – ಅವಂಗೆ ಸೂತಕ – ಹೇಳಿದೆ.  “ಹ್ಮ್” ಹೇಳಿಕ್ಕಿ ಮಾತು ಮುಂದುವರುಸಿದವು.
ಸೂತಕ ಎಂತ ಲೆಕ್ಕಲ್ಲಿ, ಕ್ಷಯವೋ, ವೃದ್ಧಿಯೋ? – ಹತ್ತರೆ ಕೂದ ದೊಡ್ಡೇರಿ ಭಾವಯ್ಯ ಕೇಳಿದ..

~

ಸೂತಕ ಹೇದರೆ ಎಂತ್ಸರ? ಆ ಶಬ್ದ ಮೂಲ ಎಂತದು? ಅದರ ಆಚರಣೆ ಹೇಂಗೆ?
ಸವಿವರ ತಾತ್ಪರ್ಯ ಬೇಕಾರೆ ನಾವು ವಿದ್ವಾನಣ್ಣನ ಹತ್ತರೆಯೇ ಕೇಳೇಕಟ್ಟೆ.
ಅವು ಎದುರೇ ಸಿಕ್ಕಿಪ್ಪಗ ಕೇಳದ್ದೆ ಮತ್ತೆ “ಛೇ, ಕೇಳೇಕಾತು” ಹೇದರೆ ಅರ್ಥ ಇದ್ದೋ? ಅಂಬಗ ಕೇಳಿರೆಂತ!? ಕೇಳಿಯೇ ಬಿಟ್ಟತ್ತು.
ಕೇಳಿಯಪ್ಪದ್ದೇ, ಪಟಪಟನೆ ಹೇಳಿದವು; ಕೆಲವೆಲ್ಲ ಅರ್ಥ ಆತು. ಅದರ್ಲಿ ಕೆಲವೆಲ್ಲ ನೆಂಪೊಳುದ್ದು!
ಒಟ್ಟಿಂಗೆ ಚೆನ್ನೈಬಾವಂದೇ ಇದ್ದ ಕಾರಣ, ಅವಕ್ಕೆ ನಮ್ಮಂದ ಹೆಚ್ಚಿಗೆ ಅರ್ಥ ಆಗಿಕ್ಕು.
ನವಗೆ ಬಿಟ್ಟು ಹೋದ್ಸಿದ್ದರೆ ಅವರತ್ತರೆ ಕೇಳಿಗೊಳ್ಳಿ. ಆತೋ?
~

ಸೂತಕ ಹೇಳಿರೆಂತ?
ಮಠದೊಳ ಕೂದುಗೊಂಡು ಬೌಶ್ಷ ಹೀಂಗಿರ್ಸ ಪ್ರಶ್ನೆ ಕೇಳೇಕಾರೆ ಬೈಲಿನೋರೇ ಆಗಿರೇಕಷ್ಟೆ – ಹೇಳಿಗೊಂಡವು ನೆಗೆಮೋರೆಲಿ.
ಚೆನ್ನೈಭಾವಂಗೆ ಸಂಸ್ಕೃತ ಅರಡಿಗು; ವಿದ್ವಾನಣ್ಣಂಗೆ ಸಂಸ್ಕೃತವ ಅರದು ಕುಡುದು ಅರಡಿಗು.
ಅವಿಬ್ರು ಮಾತಾಡುವಾಗ ನವಗೆಂತರ ಕೆಲಸ?
ಸೂತಕ ಶಬ್ದದ ಹಿಂದೆ ಇಪ್ಪ ಸಮಗ್ರ ಸಂಗತಿಗಳ ಎಳೆ ಎಳೆಯಾಗಿ ವಿವರ್ಸಿಗೊಂಡು ಹೋದವು ವಿದ್ವಾನಣ್ಣ.

ಚೆನ್ನೈಭಾವ ತಲೆಆಡುಸುವಾಗ ನವಗೆ ಅರ್ಥ ಆದಷ್ಟರ ನೆಂಪು ಮಡಗಿದ್ದು.

ಮತ್ತೆ ಚೆನ್ನೈಬಾವನ ಹತ್ತರೆ ಕೇಳಿ ಸರೀ ಬರಕ್ಕೊಂಡೆ, ತಪ್ಪಿದ್ದರೆ ಸರಿ ಮಾಡಿ ಹೇಳುಗು, ಏ..!

~

ವಿದ್ವಾನಣ್ಣ ಹೇಳಿದವು..

ಪ್ರಾಣಿಪ್ರಸವಗರ್ಭವಿಮೋಚನೆಯ ಧಾತು – “ಸೂ” ಹೇದು;
ಭಾವೇ “ಕ್ತ”ಪ್ರತ್ಯಯ – ಸೂತ;
ಸ್ವಾರ್ಥೇ ಕಞ್ ಪ್ರತ್ಯಯ – ಸೂತಕ

ಜನ್ಮಕಾರಣತ್ವೇನಾಸ್ತಿ ಅಸ್ಯ ಅಚ್ ಪ್ರತ್ಯಯ – “ಸೂತಕ”

ಯ್ಯೋ..ಪ, ಇದು ಸರೀ ಅರ್ಥ ಆಯೇಕಾರೆ ಸೂತಕದ ದಶರಾತ್ರಿ ಕಳಿಗು; ಅಪ್ಪೋ!!

ಒಟ್ಟಿಲಿ ಹೇಳ್ತರೆ, ಸೂತಕ ಹೇಳಿರೆ ಪ್ರಾಣಿ ಪ್ರಸವ – ಗರ್ಭ ವಿಮೋಚನೆಯ ಭಾವ ಅಡ.
~

ಹೂಂಕುಟ್ಟಿದ ಚೆನ್ನೈಭಾವನ ನೋಡಿಗೊಂಡು ಮುಂದುವರುಸಿದವು:
ಗರ್ಭ ವಿಮೋಚನೆಯ ಸನ್ನಿವೇಶದ ವಿಶೇಷ ಎಂತ್ಸರ ಹೇದರೆ –  ಶಿಶು ಬಪ್ಪದು ಕೊಶಿಯೇ ಆದರೂ, ಅದರ ಹಿಂದೆ ರಕ್ತಸಿಕ್ತ ಅಗಾಧ ಬೇನೆ ಇದ್ದು.

ಆ ಬೇನೆಯ ಶಮನಕ್ಕಾಗಿ ದೈಹಿಕ, ಮಾನಸಿಕ ವಿಶ್ರಾಂತಿ ಅಗತ್ಯ.
ದೈಹಿಕ ವಿಶ್ರಾಂತಿ ಇರೆಕ್ಕಾರೆ ಎಂತ ಮಾಡೇಕು – ದೇಹ ಅತ್ತಿತ್ತೆ ಜಾಸ್ತಿ ಹಂದಲಾಗ.
ಮಾನಸಿಕ ವಿಶ್ರಾಂತಿ ಬೇಕಾರೆ ಎಂತ ಮಾಡೇಕು – ಹೆಚ್ಚು ಚಿಂತನೆಯ ಕಾರ್ಯಂಗಳಲ್ಲಿ ತೊಡಗುಸಿಗೊಂಬಲಾಗ.
ಅತ್ಯಂತ ಅವಶ್ಯ ಕಾರ್ಯ ಬಿಟ್ಟು ಒಳುದ್ಸರ ಮಾಡ್ಳೆ ಹೋಪಲಾಗ.

ಅದಕ್ಕಾಗಿ “ಅಶೌಚ” ಆಚರಣೆ ಹೇಳಿ ಮಾಡ್ಳೆ ಸುರು ಆತು.
ಶುಚಿ ಅಲ್ಲದ್ದದೇ ಅಶೌಚ. ನಿತ್ಯಜೀವನಲ್ಲಿ ನಾವು ಯೇವತ್ತೂ ಶುದ್ಧ / ಶುಚಿಯಾಗಿರ್ತು.
ಇಂತಾ ಸನ್ನಿವೇಶಂಗಳಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ಅಶುಚಿ ಇರ್ತು – ಹೇದು ಅಶೌಚ ಆಚರಣೆ ಮಾಡುದು.

~

ಜನನ ಹೇದರೆ ಅಮ್ಮಂಗೆ ಎಷ್ಟು ಬೇನೆಯ ಸಂಗತಿಯೋ, ಮಗುವಿಂಗೂ ಬೇನೆ ಕೊಟ್ಟಿರ್ತು.
ಗರ್ಭಸ್ಥ ಶಿಶುವಿಂಗೆ ಗರ್ಭದ ಒಳಾಣ ಜನ್ಮ ಮುಗುದು, ಹೆರಾಣ ನಿಜಜೀವನಕ್ಕೆ ಇಳಿವ ಸನ್ನಿವೇಶ ಇದಾ!
ಹಾಂಗಾಗಿ ಅದೊಂದು ಮರುಹುಟ್ಟು.
ಹಾಂಗಾಗಿ, ಅಶುಚಿ ಇದ್ದ ದಿನಂಗಳಲ್ಲಿ ಹಿಳ್ಳೆ-ಬಾಳಂತಿ ಇಬ್ರುದೇ ದೈಹಿಕ ವಿಶ್ರಾಂತಿಲಿ ಇರ್ತವು.
ಹೆಚ್ಚಿನ ಓಡಾಟ ಎಲ್ಲ ನಿಷಿದ್ಧ.
ತನ್ನ ಕೆಲಸಂಗಳನ್ನೂ ಇನ್ನೊಬ್ಬ ಮಾಡಿ ಕೊಡೇಕಾದ ಸಂದರ್ಭಂಗೊ!
ಅದನ್ನೇ ತೂಷ್ಣಿಲಿ ಬಾಳಂತನ – ಹೇಳುಸ್ಸು.
ಮದಲಿಂಗೆ ತರವಾಡುಮನೆಯ ಕಾಂಬುಅಜ್ಜಿ ಬಾಳಂತನಲ್ಲಿ ಎತ್ತಿದ ಕೈ!
ಹಾಂಗಿರ್ಸ ಸುಮಾರು ಅಜ್ಜಿಯಕ್ಕೊ ಇತ್ತಿದ್ದವು ಬೈಲಿನೊಳ.

~

ದೈಹಿಕ ಅಶೌಚ ಮನಸ್ಸಿಂಗೂ ಪ್ರತಿಫಲನ ಆವುತ್ತು.
ಹಾಂಗಾಗಿ, ಶಿಶು ಹುಟ್ಟಿ ಹತ್ತಿರುಳುಗಳ ಕಾಲ ಯೇವದೇ ದೇವತಾರಾಧನೆ ಕಾರ್ಯಂಗಳಲ್ಲಿ ತೊಡಗುಸಿಗೊಂಬಲೆ ಇಲ್ಲೆ – ಹೇದು ಮಾಡಿದ್ದವು ಹಳಬ್ಬರು.
ಹತ್ತಿರುಳು ಕಳುದರೆ ತೀವ್ರತರದ ಅಶೌಚ ಎಲ್ಲ ಸರಿಹೋವುತ್ತು – ಹೇದು ನಂಬಿಕೆ.
ಇದು ಹಿಳ್ಳೆ-ಬಾಳಂತಿಗೆ ಮಾಂತ್ರ ಅಲ್ಲದ್ದೆ, ಒಟ್ಟಿಂಗೆ ಆ ಮನೆಯೋರಿಂಗೆಲ್ಲ ಅನ್ವಯ ಆವುತ್ತು.
ಹಾಂಗಾಗಿ, ಆ ಮನೆಯೋರು ಯೇವದೇ ದೇವತಾರಾಧನೆ ಕಾರ್ಯಂಗಳಲ್ಲಿ ತೊಡಗುಸಿಗೊಂಬಲಿಲ್ಲೆ – ಸೂತಕದ ಸಮೆಯಲ್ಲಿ!

~

ಮನೆಯೋರು ಹೇದರೆ ಆರೆಲ್ಲ?
ಕುಟುಂಬ ಬೆಳದ ಹಾಂಗೆ ಮನೆಯೋರ ಸಂಖ್ಯೆಯೂ ಬೆಳೆತ್ತವು.
ಹಾಂಗೆ ನೋಡಿರೆ ಗೋತ್ರ ಸೃಷ್ಟಿಕರ್ತನಿಂದ ಇಲ್ಲಿಯ ಒರೆಂಗೆ ಎಲ್ಲೋರುದೇ ಮನೆಯೋರೇ!
ಎಲ್ಲೋರುದೇ ಸೂತಕ ಆಚರಣೆ ಮಾಡೇಕೋ? ಹಾಂಗಾರೆ ಯೇವತ್ತೂ ಸೂತಕವೇ ಇಕ್ಕು, ಒಂದಲ್ಲ ಒಂದು ಮನೆದು!
ಅದಕ್ಕೆಂತ ಮದ್ದು? ಅದನ್ನೂ ಆಲೋಚನೆ ಮಾಡಿದ್ದವು ಅಜ್ಜಂದ್ರು.

ಹುಟ್ಟಿದ ಶಿಶುವಿಂದ ಏಳು ತಲೆಮಾರಿನ ಒಳ ಕವಲು ಒಡದು ಬೇರೆ ಮನೆಗಳಲ್ಲಿಪ್ಪ ಮನೆಯೋರಿಂಗೆಲ್ಲ ದಶರಾತ್ರಿ ಸೂತಕ – ಹತ್ತಿರುಳು – ಹನ್ನೊಂದು ದಿನ.
ಅದರಿಂದ ಮದಲಾಣೋರಿಂಗೆ ತ್ರಿರಾತ್ರಿ ಸೂತಕ – ಹೇದರೆ ಮೂರು ಇರುಳು ಆಚರಣೆ ಮಾಡಿರಾತು.
ಇಪ್ಪತ್ತೊಂದು ತಲೆಮಾರಿಂದ ಮದಲು ಕವಲು ಒಡದೋರಿಂಗೆ ಸೂತಕವೇ ಇಲ್ಲೆ, “ಸಗೋತ್ರಿ”ಗೊ ಹೇದು ಗುರುತಿಸಿಗೊಂಡ್ರಾತು!

~

ಇಷ್ಟು ಮಾತಾಡುವಾಗ ವಿದ್ವಾನಣ್ಣನ ಕಾಂಬಲೆ ಹತ್ತು ಜೆನ ಬಂದಿತ್ತಿದ್ದವು.
ಅವರ ಎಲ್ಲ ಮಾತಾಡಿ ಕಳುಗಿದ ಮತ್ತೆ ಮಾತುಕತೆ ಮುಂದುವರುದತ್ತು.
ಎಲ್ಲಿಒರೆಂಗೆ ಆಗಿತ್ತು ಹೇಳ್ಸರ ಚೆನ್ನೈಭಾವ ಎತ್ತಿಕೊಟ್ಟವು ಇದಾ..

ಹಾಂಗೆ ಮುಂದುವರುದು..
ಸೂತಕ ಶಬ್ದದ ವ್ಯಾಕರಣದ ಅರ್ಥಕ್ಕೂ, ರೂಢಿಲಿ ಬಳಕ್ಕೆಲಿ ಬಂದ ಅರ್ಥಕ್ಕೂ ವಿತ್ಯಾಸ ಬಯಿಂದಾಡ.
ಹಲವೂ ಶೆಬ್ದಂಗೊ ಈ ನಮುನೆ ಆಯಿದು – ಹೇದು ಕೆಲವು ಪಟ್ಟಿ ಕೋಟ್ಟವು, ನವಗೆ ನೆಂಪಿಲ್ಲೆ ಈಗ! ಅದಿರಳಿ.

ಗ್ರಾಮ್ಯ ಬಳಕೆಲಿ ಸೂತಕ ಹೇದರೆ ಹುಟ್ಟಿದ್ದಕ್ಕೆ ಮಾಂತ್ರ ಅಲ್ಲದ್ದೆ ತೀರಿಗೊಂಡದಕ್ಕೂ ಉಪಯೋಗುಸುತ್ತವಾಡ.
ಪ್ರತ್ಯೇಕ ಗೊಂತಪ್ಪಲೆ ಬೇಕಾಗಿ “ಕ್ಷಯ ಸೂತಕ”, “ವೃದ್ಧಿ ಸೂತಕ” ಹೇಳ್ತವಾಡ.

ಕ್ಷಯ ಹೇದರೆ ಕುಟುಂಬಲ್ಲಿ ಆರಾರು ಹೋದರೆ, ಕುಟುಂಬದೋರ ಸಂಖ್ಯೆ ಕಮ್ಮಿ ಆದ ಲೆಕ್ಕಲ್ಲಿ ಕ್ಷಯ ಸೂತಕ ಹೇಳುಸ್ಸು.
ಕುಟುಂಬದ ಹತ್ತರಾಣೋರು ತೀರಿಗೊಂಡಪ್ಪಗಳೂ ಹಾಂಗೇ, ದೈಹಿಕ-ಮಾನಸಿಕ ಅಶೌಚ ಇರ್ತು.
ದಹನ ಇತ್ಯಾದಿ ಕರ್ಮಂಗೊ ಮಾಡಿ ಅಪ್ಪಗ ಮೈಲಿ ಮೈಲಿಗೆಗೊ ಒಳುದಿರ್ತು – ಹೇಳ್ತ ಲೆಕ್ಕಲ್ಲಿ ದೈಹಿಕ ಅಶೌಚವೂ,
ಹತ್ತರಾಣೋರು ಹೋದ ಲೆಕ್ಕಲ್ಲಿ ಮನಸ್ಸಿಂಗೆ ಬೇಜಾರಂದಾಗಿ ಮಾನಸಿಕ ಅಶೌಚವೂ – ಇರ್ತು.
ವೃದ್ಧಿ ಸೂತಕದ ಸೂತಕದ ಹಾಂಗೇ, ಅದನ್ನೂ ದಶರಾತ್ರಿಯೇ ಆಚರಣೆ ಮಾಡುಸ್ಸು. ಅದಿರಳಿ.

~

ಅಜ್ಜಕಾನ ಬಾವ ಆ ದಿನ ಬಾರದ್ದದು ಹೀಂಗೇ ಒಂದು ಸೂತಕಂದಾಗಿ.
ಕುಟುಂಬಲ್ಲಿ ಆರಾರು ಹುಟ್ಟಿರೆ, ತೀರಿಗೊಂಡ್ರೆ ಆ ಘಟನೆಯ ನೆಂಪಿಲಿ ಹತ್ತಿರುಳು ಅಶೌಚ ಆಚರಣೆ ಮಾಡ್ತದು ನಮ್ಮ ಸಂಪ್ರದಾಯ.
ವೈಜ್ಞಾನಿಕವಾಗಿ ನೋಡಿರೆ “ಎಂತದೂ ಇಲ್ಲೆ” ಹೇದು ಕಾಂಗು; ಆದರೆ, ಆ ಆಚರಣೆಗಳ ಹಿಂದೆ ಇಪ್ಪ ಭಾವನೆಗಳ ಅರ್ತ ಮಾಡಿಗೊಳೇಕು.
ಸೂತಕ ಹೇಳಿದ ಕೂಡ್ಳೇ ಅಮಂಗಲ ಹೇದು ತಿಳ್ಕೊಂಬಲಾಗ; ಬಂಧ – ಸಂಬಂಧ, ರಕ್ತ ಸಂಬಂಧಂಗಳ ಎತ್ತಿ ತೋರ್ಸಲೆ ಇಪ್ಪದು ಈ ಸೂತಕಂಗೊ..

ವೃಕ್ಷ ಬೆಳವಣಿಗೆಲಿ ಹಳೆ ಬೇರು, ಹೊಸ ಚಿಗುರುಗಳ ವೃತ್ತ ಪ್ರಕೃತಿನಿಯಮ.
ಹೊಸ ಬೇರು ಬಪ್ಪಗ ಹಳೆಬೇರು ಹೋವುತ್ತು; ಹೊಸ ಚಿಗುರು ಬಪ್ಪಗ ಹಳೆ ಎಲೆಗೊ ಬೀಳುತ್ತು.
ಒಟ್ಟಿಲಿ ಹೇಳ್ತರೆ, ಸೂತಕ ಹೇದರೆ ಕುಟುಂಬ ಅಭಿವೃದ್ಧಿಯ ದ್ಯೋತಕ – ಹೇಳಿದವು.

~

ಅದಾಗಿ, ಅಶೌಚ ಆಚರಣೆಯ ಬಗ್ಗೆ ವಿವರವಾಗಿ ರಜ ಕಳುದು ಹೇಳಿದವು.
ನಾವುದೇ ಅದರ ರಜ ಕಳುದು ಮಾತಾಡುವೊ, ಈಗ ಒಂದರಿ ಸೂರಂಬೈಲಿಂಗೆ ಹೋಗಿ ಬತ್ತೆ. ಆತೋ?

~

ಒಂದೊಪ್ಪ: ಸೂತಕ ಆಚರುಸದ್ರೆ ಅದುವೇ ಪಾತಕ ಅಡ.

10 thoughts on “ಅಭಿವೃದ್ಧಿಯ ದ್ಯೋತಕ, ಈ “ಸೂತಕ”

  1. ಒಪ್ಪಣ್ಣ ಬರದ “ಸೂತಕ” ಶುದ್ದಿಯ ಶುದ್ದ ಕಳುದು ಹನ್ನೊಂದನೆಯ ದಿನ ಓದುತ್ತಾ ಇದ್ದೆ. ಏಳು ತಲೆಮಾರಿನವಕ್ಕೆ ಎಷ್ಟು ದಿನ, ಇಪ್ಪತ್ತೊಂದು ತಲೆಮಾರಿನವಕ್ಕೆ ಎಷ್ಟು ದಿನ ಹೇಳುವ ಹೊಸಾ ವಿಷಯ ಗೊಂತಾತು. ಉಡುಪುಮೂಲೆ ಅಪ್ಪಚ್ಚಿ ಇನ್ನಷ್ಟು ವಿಷಯಂಗಳ ಹೇಳಿದವು. ಕರ್ಣಂಗೆ “ಸೂತಪುತ್ರ” ಹೇಳಿ ಹೇಳ್ತವಾನೆ, ಇದಕ್ಕೂ ಎಂತಾರು ಈ ವಿಷಯಲ್ಲಿ ಸಂಬಂಧ ಇಕ್ಕೋ ಹೇಳಿ.

  2. ಒಪ್ಪಣ್ಣ , ಬೈಲಿ೦ಗೆ ಬಪ್ಪಲೆ ಆನು ರಿಜಿಸ್ತ್ರು ಮಾಡಿದ್ದೆ.. ಗುಟ್ಟು ಶಬ್ಧ ಸಿಕ್ಕಿದಿಲ್ಲೆ.. ಶೋಭಕ್ಕ..ನಾವು ಮಣಿ ಮಠಲ್ಲಿ ಮಾತಾಡಿದ್ದು..ಪರಿಅಯ ಆದ್ದು ನೆ೦ಪಿಕ್ಕಲ್ಲದಾ?
    ಒಪ್ಪಣ್ಣ ಬರದ ಲೇಖನ೦ಗೊ ಎಲ್ಲ ಒಪ್ಪ ಇದ್ದು ಆತೋ.. ಹವ್ಯಕ ಭಾಷೆ ಬಗ್ಗೆ ಹೆಮ್ಮೆ ಅನಿಸುತ್ತು..

  3. ಒಪ್ಪಣ್ಣ , ಬೈಲಿ೦ಗೆ ಬಪ್ಪಲೆ ಆನು ರಿಜಿಸ್ತ್ರು ಮಾಡಿದ್ದೆ.. ಗುಟ್ಟು ಶಬ್ಧ ಸಿಕ್ಕಿದಿಲ್ಲೆ.. ಶೋಭಕ್ಕ

  4. {ಮಠದೊಳ ಕೂದುಗೊಂಡು ಬೌಶ್ಷ ಹೀಂಗಿರ್ಸ ಪ್ರಶ್ನೆ ಕೇಳೇಕಾರೆ ಬೈಲಿನೋರೇ ಆಗಿರೇಕಷ್ಟೆ – ಹೇಳಿಗೊಂಡವು ನೆಗೆಮೋರೆಲಿ.}- ಹೆ ಹೆ ಹೆ 😀 😀 😀

    { ಶಿಶುವಿಂದ ಏಳು ತಲೆಮಾರಿನ ಒಳ ಕವಲು ಒಡದು ಬೇರೆ ಮನೆಗಳಲ್ಲಿಪ್ಪ ಮನೆಯೋರಿಂಗೆಲ್ಲ ದಶರಾತ್ರಿ ಸೂತಕ} – ಪರಿಚಯವೇ ಇಲ್ಲದ್ದಷ್ಟು ದೂರಲ್ಲಿಪ್ಪವಕ್ಕೂ ಸೂತಕ ಇದ್ದೋ ಒಪ್ಪಣ್ಣಾ?

  5. ಹೆತ್ತ ಸೂತಕಕ್ಕೆ ‘ಅಮೆ’ಸತ್ತ ಸೂತಕಕ್ಕೆ’ಹೊಲೆ’ಹೇದೂ ಹೇಳ್ತವು.ಅದಿರಳಿ.ಈ ಅಶೌಚಶಬ್ದ ಸರಿಯಾದ್ದದೋ ಹೇದು ಸಂಶಯ ಇದ್ದು.
    ಆಶೌಚ ಆಯೆಕ್ಕು ಹೇದು ತೋರುತ್ತನ್ನೆ?

    1. ಹರೇ ರಾಮ.“ಸೂಲಗಿತ್ತಿ”ಹೇಳುವ ಶಬ್ದ ಒ೦ದಿದದ್ದನ್ನೆ.ಅದು ಹೆರಿಗೆ ಮಾಡ್ಸುವ ಹೆಣ್ಣಿ೦ಗೆ ಇಪ್ಪ ಅರ್ಥ ಹೇದು ಕನ್ನಡಲ್ಲಿ ಪ್ರಯೋಗ ಇದ್ದು.“ಸೂತಕ” ಪದಕ್ಕೆ ಹೆರಿಗೆ ಸ ೦ಬ೦ಧವಾಗಿ ಆಚರುಸುವ ಅಶೌಚ ಹೇಳುವ ಅರ್ಥ ಆವುತ್ತು.“ಅಮೆ”ಹೇಳುವ ಶಬ್ದ ತುಳು (ಶಿವಳ್ಳಿ)ಯ ಕೊಡುಗೆ.ಹೆರಿಗೆ ಕೋಣಗೆ “ ಸೂತಿಕಾ ಗೃಹ ”ಹೇದು ಹೆಸರು.ಕ್ಷಯ೦ದ(ಸಾವಿ೦ದ)ಬಪ್ಪ ಅಶೌಚಕ್ಕೆ ನಮ್ಮ ಹವ್ಯಕ ಭಾಷೆಲಿ (ಕು೦ಬಳೆ ಸೀಮೆಲಿ)ಹಳಬರು ಬೇರೊ೦ದು ಶಬ್ದ ಬಳಸಿಗೊ೦ಡಿತ್ತಿದ್ದವು.ಈಗ ಅದರ ಬಳಸದ್ದೆ ಇಪ್ಪ ಕಾರಣ೦ದಾಗಿ ಎನಗೆ ಮರದು ಹೋಯಿದು.ಎ೦ಗಳ ಅಜ್ಜ-ಅಜ್ಜಿಯ೦ದಿರು ಹೇಳುತ್ತಿದ್ದ ಶಬ್ದ ಬೇರೆಯೇ ಇತ್ತು. ಈಗ ನೆ೦ಪಾವುತ್ತಿಲ್ಲೆ.ನಮ್ಮಲ್ಲಿಯ ಹಳಬರ ವಿಚಾರ್ಸಿರೆ ಗೊ೦ತಪ್ಪಲೂ ಸಾಕು.ಪ್ರಯತ್ನ ಮಾಡುವೊ.ಹೀ೦ಗಿರ್ತ ಹಳೆಯ ಪದ೦ಗಳ ಒಳ್ಶೆಕಾದ್ದು ನಮ್ಮ ಕರ್ತವ್ಯವೂ ಅಪ್ಪನ್ನೆ.ಈ ವಿಷಯಲ್ಲಿ ಸಕಾಲಿಕ ವಿಚಾರವ ಬರದ ನಮ್ಮ ಒಪ್ಪಣ್ಣ೦ಗೆ ಅದೆಷ್ಟು ಧನ್ಯವಾದ ಹೇಳಿರೂ ಕಡಮ್ಮೆಯೆ.

  6. ‘ಹುಟ್ಟಿದ್ದಕ್ಕೆ ಸೂತಕ’ ಕ್ಕೆ ತುಮಕೂರು ಹೊಡೆಲಿ (ಬೆ೦ಗಳೂರು ಹೊಡೆಲಿಯೂ ಇದೇ ಪದವ ಉಪಯೋಗಿಸುಲೂ ಸಾಕು) ‘ಪುರುಡು’ ಹೇಳುದರ ಆನು ಕೇಳಿದ್ದೆ.

    kanaja.in ಲಿ ‘ಪುರುಡು’ ಪದಕ್ಕೆ ಈ ಕೆಳಣ ಅರ್ಥ ಕೊಟ್ಟಿದವು.
    (ದೇ) ೧ ಸ್ಪರ್ಧೆ, ಪೈಪೋಟಿ ೨ ಹೊಟ್ಟೆಕಿಚ್ಚು, ಮತ್ಸರ ೩ ಹಟ, ಛಲ ೪ ಮಗುವಿನ ಜನನ ಸಂಬಂಧವಾದ ಮೈಲಿಗೆ, ವೃದ್ಧಿ, ಜಾತಾಶೌಚ

  7. “ಸತ್ತದಕ್ಕೆ ಸೂತಕ “ಹೇಳಿಯೂ “ಹುಟ್ಟಿದ್ದಕ್ಕೆ ಅಮೆ” ಹೇಳಿಯೂ ವೆತ್ಯಾಸ ಎಂತಾರು ಇದ್ದೋ ತಿಳಿಸಿ. ಬೆಂಗಳೂರಿಲ್ಲಿ ” ಹುಟ್ಟಿದ್ದಕ್ಕೆ ಸೂತಕ ಹೇಳಿರೆ” ವಿಚಿತ್ರವಾಗಿ ನೋಡ್ತವು.ಪದ ಬಳಕೆಲಿ ವತ್ಯಾಸ ತಿಳಿಸಿ. ಹರೇ ರಾಮ.

  8. ಹರೇರಾಮ,ಬಂಧ-ಸಂಬಂಧಗಳ ಎತ್ತಿ ತೋರ್ಸುಲಿಪ್ಪ ಸೂತಕದ ಆಚರಣೆ! ಎಷ್ಟು ಅರ್ಥವತ್ತಾಗಿದ್ದು ! ಸುಮಾರು ವಿಷಯ ಗೊಂತಾತಿದ ಒಪ್ಪಣ್ಣ. ಇಪ್ಪತ್ತೈದು ತಲೆಮಾರು ಕಳುದಮತ್ತೆ ಸಗೋತ್ರಿಗೊ! ಮತ್ತೂರಕ್ತಸಂಬಂಧ ಒಳಿತ್ತಲ್ಲೊಒಪ್ಪಣ್ಣ? ಸಗೋತ್ರಲ್ಲಿ ಮದುವೆ ಮಾಡ್ಲಾಗ ಹೇಳ್ತವಿದ. ಹೀಂಗಿದ್ದ ಧಾರ್ಮಿಕ ವಿಚಾರ ಲೇಖನ ಇನ್ನೂಬರಲಿ ಒಪ್ಪಣ್ಣನ ಒಪ್ಪ ಕೈಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×