ಅಂತರ್ಜಾಲಲ್ಲಿ ‘ಸಂಗೀತಾ’ –

ದಕ್ಷಿಣ ಭಾರತಲ್ಲೇ ಪ್ರಪ್ರಥಮ ಬಾರಿಗೆ ಅಧಿಕೃತವಾಗಿ ಧ್ವನಿಮುದ್ರಿತ ಕೇಸುಟ್ಟುಗಳ ತಯಾರಿಸಿ ಬಿಡುಗಡೆಮಾಡಿ ಬಹುಜನರ ಮೆಚ್ಚುಗೆಗೆ ಪಾತ್ರವಾಗಿ ಪ್ರಸಿದ್ಧಿ ಪಡದ್ದು ನಮ್ಮವರದ್ದೇ ಆದ ‘ಸಂಗೀತಾ’ ಸಂಸ್ಥೆ.  ಹೇಮರ್ಸಲೆ ಯೋಗ್ಯವಾದ ಅನೇಕ ಉತ್ತಮ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಶರೀಫರ ಹಾಡುಗೊ, ಸುಪ್ರಭಾತಂಗೊ, ಸುಗಮಸಂಗೀತ, ಶಾಸ್ತ್ರೀಯಸಂಗೀತ, ಹರಿಕಥೆ, ಯಕ್ಷಗಾನ, ವಾದ್ಯಸಂಗೀತ, ಚಲನಚಿತ್ರಗೀತೆಗೊ ಹೇಳಿ ಅನೇಕ ಕಾರ್ಯಕ್ರಮಂಗಳ  ಉತ್ತಮ ಗುಣಮಟ್ಟದ ಧ್ವನಿಮುದ್ರಿಕೆಗಳ ಮಾಡಿ ಖ್ಯಾತಿಗೆ ಪಾತ್ರ ಆಯ್ದು ‘ಸಂಗೀತಾ’. ಡಾ. ಬಾಲಮುರಳೀಕೃಷ್ಣ, ಶ್ರೀ ವಿದ್ಯಾಭೂಷಣ, ಡಾ.ರಾಜ್ ಕುಮಾರ್, ಎಸ್.ಪಿ.ಬಿ, ಎಸ್.ಜಾನಕಿ, ಬಿ.ಕೆ ಸುಮಿತ್ರ, ಸಿ. ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಲಿಪ, ಪದ್ಯಾಣ, ಹೊಳ್ಳ ಮುಂತಾದ ಪ್ರಸಿದ್ಧ ಕಲಾವಿದರ ಧ್ವನಿಮುದ್ರಿಕೆಗಳ ಭಂಡಾರ ‘ಸಂಗೀತಾ’ ಸಂಸ್ಥೆಲಿ ಇದ್ದು.

ಇದೀಗ ಸಂಗೀತಪ್ರೇಮಿಗೊಕ್ಕೆ ಅವಕ್ಕವಕ್ಕೆ ಇಷ್ಟವಾದ ಹಾಡುಗಳ ಅಂತರ್ಜಾಲಂದಲೇ ನೇರ ಇಳಿಸಿಗೊಂಬಲೆ ಅನುಕೂಲ ಅಪ್ಪಲೆ ಸೌಕರ್ಯ ಒದಗಿಸಿದ್ದವು. ಸಂಸ್ಥೆಯ ಅಧಿಕೃತ ವೆಬ್ ತಾಣ www.sangeethamusic.om    ಇಲ್ಲಿಂದ ಇಳುಸಿಗೊಂಬಲಕ್ಕು (ಡೌನ್ಲೋಡ್). ಅದಲ್ಲದ್ದೆ, ಒಪ್ಪಂದ ತಾಣ www.muzigles.com ಮತ್ತು  www.flipkart.com   ಇಲ್ಲಿಂದಲೂಇಳುಸಿಗೊಂಬಲಕ್ಕು ಹೇಳಿ ಸಂಸ್ಥೆಯ ಯಜಮಾನ ನಮ್ಮವೇ ಆದ ಶ್ರೀ ಎಚ್. ಎಂ. ಮಹೇಶ್ ಬೈಲಿಂಗೆ ಶುದ್ದಿ ತಿಳಿಸಿದ್ದವು.

ಸಂಗೀತಾ ಸಂಸ್ಥೆ ಇನ್ನಷ್ಟು ಉಜ್ವಲವಾಗಿ ಕೀರ್ತಿಗಳುಸಲಿ, ಶ್ರೀ ಗುರುದೇವತಾನುಗ್ರಹ ಅವಕ್ಕೆ ಇರಲಿ ಹೇಳಿ ಬೈಲು ಶುಭ ಹಾರೈಸುತ್ತು.

ಶುದ್ದಿಕ್ಕಾರ°

   

You may also like...

7 Responses

 1. ತೆಕ್ಕುಂಜ ಕುಮಾರ ಮಾವ° says:

  ಒಳ್ಳೆದಾತು, ಸಂತೋಷ.

 2. Soumya says:

  Thanks for the links 🙂

 3. ದೀಪಿಕಾ says:

  http://www.sangeethamusic.com ಇದು ಭಾರಿ ಲಾಯ್ಕಿದ್ದು.ತು೦ಬಾ ಉಪಯೋಗ ಅಕ್ಕು.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಸಂಗೀತಾ ಸಂಸ್ಥೆಯವಕ್ಕೆ ಧನ್ಯವಾದ.

 5. ರಘು ಮುಳಿಯ says:

  ಸ೦ತೋಷದ ವಿಷಯ.ಇದರ ಉಪಯೋಗ ಪಡೆಯೆಕ್ಕಾದ್ದೇ.

 6. ಒಳ್ಳೆ ಮಾಹಿತಿ. ಸಂಗೀತದ ಧ್ವನಿ ಮುದ್ರಿಕೆಗೋ ನಿಜವಾಗಿಯೂ ಕರ್ಣಾನಂದಕರ

 7. ಕೆ.ಜಿ.ಭಟ್ says:

  ಅಕೇರಿಗೆ .ಕೊಮ್ ಆಯೆಕ್ಕದಲ್ಲಿ ಒಮ್ ಆಯಿದು-ಸಂಗೀತ ಎಡ್ಡ್ರೆಸ್ಸಿಲ್ಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *