ಭಗವದ್ಗೀತೆಯ ಅಭಿಯಾನ

ಕಳೆದ ಐದು ವರ್ಷಂದ ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮೊನ್ನೆ ಬೆಂಗಳೂರಿಲಿ ಪರಿಸಮಾಪ್ತಿ ಆತು.
ಇದರ ಬಗ್ಗೆ ಪತ್ರಿಕೆಗಳ ವರದಿ ತುಂಬಾ ಬಯಿಂದು.ವಿವರ ಅದರಲ್ಲಿ ನೋಡುಲಕ್ಕು.
ಭಗವದ್ಗೀತೆಯ ಬಗ್ಗೆ ಸಣ್ಣ ಉಪನ್ಯಾಸಂಗಳ ಆ ಸ್ವಾಮೀಜಿ ತುಂಬಾ ಲಾಯ್ಕಲ್ಲಿ ಜನಸಾಮಾನ್ಯರಿಂಗೆ ಅರ್ಥ ಅಪ್ಪ ಹಾಂಗೆ ಕೊಟ್ಟಿದವು.ಸಮಾಜದ ಎಲ್ಲಾ ಸಮುದಾಯಂಗಳ ಸಂಘಸಂಸ್ಥೆಗಳ ಸಹಕಾರಂದ ದೊಡ್ಡ ಗೀತಾ ತತ್ತ್ವ ಪ್ರಚಾರ ಕಾರ್ಯಕ್ರಮಂಗಳ ಮಾಡಿದ್ದವು.ಗೀತಾ ಪ್ರೆಸ್ ನ ಕನ್ನಡ ಭಗವದ್ಗೀತೆಯ ಸುಲಭ ಬೆಲೆಯ ಆವೃತ್ತಿಯ ನೂರಾರು ಹಂಚಿದ್ದವು.ಕುಳಾಯಿ ಮತ್ತೆ ಕಣ್ಯಾರ[ಕುಂಬಳೆ]ಲಿ ಆದ ಅವರ ಕಾರ್ಯಕ್ರಮಂಗಳ ಆನು ನೋಡಿದ್ದೆ.ತುಂಬಾ ಲಾಯ್ಕ ಇತ್ತು.ಅವರ ಬದ್ಧತೆ ಪ್ರಶಂಸಾರ್ಹ.
ಸಮಾಜಲ್ಲಿ ಗುಪ್ತಗಾಮಿನಿಯಾಗಿ ಈ ಅಭಿಯಾನದ ಪ್ರಭಾವ ಇಲ್ಲದ್ದೆ ಇರ.

ಗೋಪಾಲಣ್ಣ

   

You may also like...

9 Responses

 1. ಚೆನ್ನೈ ಭಾವ says:

  ಹರೇ ರಾಮ. ಒಳ್ಳೆ ಶುದ್ದಿ.

 2. 🙂
  ಒಳ್ಳೆ ಶುದ್ದಿ ಮಾವಾ..
  ಆನುದೇ ಪೇಪರಿಲ್ಲಿ ಓದಿದ್ದೆ..
  ಅವ್ವು ಮಾಡಿದ ಉಪನ್ಯಾಸಂಗೊ ಎಲ್ಲಿಯಾರೂ ಸಿಕ್ಕುಗೋ?

  • ಉಂಡೆಮನೆ ಕುಮಾರ° says:

   “ಜ್ಜ್ನಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ”
   ಸ್ವರ್ಣವಲ್ಲೀ ಗುರುಗೊ ಕಳೆದ ಒಂದು ದಶಕಂದ ಶಿರಸಿಯ ಯೊಗ ಮಂದಿರಲ್ಲಿ ಶ್ರೀಮದ್ ಭಗವದ್ಗೀತಾ ಸಪ್ತಾಹ ನೆಡಶುತ್ತಾ ಬಯಿಂದವು. ೨೦೦೪ರಲ್ಲಿ ಅಭಿಯಾನ ನೆಡಶುವ ಸುಯೋಗ ಎಂಗೊಗೆ ಕೈಗಾಲ್ಲಿಯೂ ಬಯಿಂದು. ಈ ಅಭಿಯಾನಲ್ಲಿ ಗೀತೆಯ ಐವತ್ತು ಲಕ್ಷ ಪ್ರತಿ ಜನರ ಕೈ ಸೇರಿದ್ದಡ. ಅದಲ್ಲದ್ದೆ ಇಲೆಕ್ತ್ರಾನಿಕ್ ಮೀಡಿಯದ ಮೂಲಕವೂ ಹಲವರ ತಲುಪಿಕ್ಕು. ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ) ಅವರ ಪ್ರವಚನ ಮಾಲೆ ನಿತ್ಯ ಸಂಯುಕ್ತ ಕರ್ನಾಟಕ, ಹುಬ್ಬಲ್ಲಿ ಆವೃತ್ತಿಲಿ ಬತ್ತು.
   ಅವರ ‘ಶ್ರೀಮದ್ಭಗವದ್ಗೀತಾ ಅಧ್ಯಾತ್ಮ ವಿದ್ಯೆ’ , ‘ಶ್ರೀಮದ್ಭಗವದ್ಗೀತಾ ಭಕ್ತಿಯೋಗ’ & ‘ಶ್ರೀಮದ್ಭಗವದ್ಗೀತಾ ಕರ್ಮಯೋಗ’ ಹೇಳುವ ಮೂರು ಪ್ರವಚನ ಸಂಪುಟ ಪ್ರಿಂಟು ಆಯಿದು.
   ಸಂಪರ್ಕಕ್ಕೆಃ
   ಶ್ರೀ ಭಗವತ್ಪಾದ ಪ್ರಕಾಶನ
   ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
   ಅಂಚೆಃ ಮಠದೇವಳ-೫೮೧ ೩೩೬
   08384-279359, 279311, 279477

   • ಉಂಡೆಮನೆ ಕುಮಾರ° says:

    ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ). ಇದು ಮೊದಲನೆ ಆರು ಅಧ್ಯಾಯಂಗಳ ವ್ಯಾಖ್ಯಾನದ್ದು, ಇನ್ನೂ ಎರಡು ಸಂಪುಟಲ್ಲಿ ಪ್ರಕಟ ಆವುತ್ತಡ (ಮಾಹಿತಿ–ದಶಂಬರದ-೧೧ ಸ್ವರ್ಣವಲ್ಲೀ ಪ್ರಭಾ ಸಂಚಿಕೆಂದ)

    • ಕುಮಾರಣ್ಣಾ.. ತುಂಬಾ ಧನ್ಯವಾದಂಗೊ..

    • ಶರ್ಮಪ್ಪಚ್ಚಿ says:

     ಗೀತೆ ಹೇಳಿರೆ ಉರುದು ಬೀಳುವ ಜೆನಂಗೊ ಇಪ್ಪ ಈ ಕಾಲಲ್ಲಿ ಸ್ವರ್ಣವಲ್ಲೀ ಶ್ರೀ ಗಳ ಅಭಿಯಾನ ಅಭಿನಂದನಾರ್ಹ.
     @ ಕುಮಾರಣ್ಣ, ಒಳ್ಳೆ ಮಾಹಿತಿಗೊ.

 3. ತೆಕ್ಕುಂಜ ಕುಮಾರ ಮಾವ° says:

  ಕಳುದ ತಿಂಗಳು ಆದ ಅಭಿಯಾನಲ್ಲಿ ಭಾಗವಹಿಸುವ ಭಾಗ್ಯಎನಗೂ ಸಿಕ್ಕಿತ್ತು.
  ಹರೆರಾಮ.

 4. jayashree.neeramoole says:

  ಗೀತೆಯ ಬಿಟ್ಟು ನಮ್ಮ ಜೀವನವೇ ಇಲ್ಲೇ… ‘ಭಗವದ್ಗೀತಾ ಅಭಿಯಾನ’ ನಡೆಸಿದ ಸ್ವರ್ಣವಲ್ಲಿ ಶ್ರೀಗಳಿಂಗೆ ಶಿರಸಾ ನಮನಗಳು…

 5. ರಘು ಮುಳಿಯ says:

  ನಮ್ಮ ದೇಶಲ್ಲಿ ಹಗಲು ಬಣಚ್ಚು ಹಾಕಿ ದಾರಿ ತೋರ್ಸೆಕ್ಕಾದ ಗೆತಿ ಆತು ಹೇಳ್ತದಕ್ಕೆ ಇದೊ೦ದು ಉದಾಹರಣೆ.
  ಕಳುದ ವರುಷ ಮುಗುದ ದಿನ, ಗುರುಗಳ ಉಪನ್ಯಾಸವ ಕೇಳ್ತ ಯೋಗ ಎನಗೂ ಸಿಕ್ಕಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *