ಬೈಲ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ – ವರದಿ

ಅಗೋಸ್ತು 25, 2012ರಂದು ಗಿರಿನಗರದ “ರಾಮಾಶ್ರಮ”ಲ್ಲಿ ಬೈಲಿನೋರು ಸೇರಿದ ಕಾರ್ಯಕ್ರಮದ ಸಂಕ್ಷಿಪ್ತ ವರದಿ, ಪಟಂಗೊ.

ಆಗೋಸ್ತು ಇಪ್ಪತ್ತೈದು, ನಂದನ ಸಂವತ್ಸರದ ಈ ದಿನ ನಮ್ಮ ಬೈಲ ಬಾಂಧವರಿಂಗೆ ಸುದಿನ.
ನೆರೆಕರೆಯ ಒಪ್ಪಣ್ಣ – ಒಪ್ಪಕ್ಕಂಗೊಕ್ಕೆ ಅವಿಸ್ಮರಣೀಯವಾದ ದಿನ. ದೊಡ್ಡಜ್ಜಂದ ಹಿಡುದು ದೊಡ್ಡಳಿಯ ಸಹಿತ ಬೈಲ ಹೆರಿ -ಕಿರಿಯೋರೆಲ್ಲ ಒಟ್ಟು ಸೇರಿದ ಮಂಗಲ ದಿನ.
ಈ ಶುಭ ದಿನಲ್ಲಿ, ಗಿರಿನಗರದ ರಾಮಾಶ್ರಮಲ್ಲಿ ನಮ್ಮ ಗುರುಗೊ ಪರಮ ಪೂಜ್ಯರಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ‘ಒಪ್ಪಣ್ಣ.ಕೋಮ್’ನ  ಹರಸಿ ಆಶೀರ್ವಚಿಸಿಯಪ್ಪದ್ದೆ  ಬೈಲ ಸಾರಡಿ ತೋಡು ತುಂಬಿ ಹರದತ್ತು. ನೆರೆಕರೆಯೋರ ಮನಸ್ಸೂ ಮಹದಾನಂದಲ್ಲಿ ತುಂಬಿ ತುಳುಕಿತ್ತು.!

ನೆರೆಕರೆಯೊರೆಲ್ಲ ಸೇರಿ ಗುರಿಕ್ಕಾರ್ರ ಅನುಮೋದನೆಯ ಹಾಂಗೆ – ಮದಲೇ ನಿಘಂಟು ಮಾಡಿದ ಹಾಂಗೆ, ಬೈಲಿನ ಮಿಲನ, ಗುರು ಭೇಟಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಂಗೊ ಗಿರಿನಗರದ ನಮ್ಮ ಮಠಲ್ಲಿ ತುಂಬ ಚೆಂದಕ್ಕೆ  ಕಳುದತ್ತು.
ಉದಿಯಪ್ಪಗ ಬೈಲಿನ ಲೆಕ್ಕಲ್ಲಿಯೂ, ಓ ಮನ್ನೆ ದಾಂಪತ್ಯ ಜೀವನಕ್ಕೆ ಕಾಲು ಮಡಗಿದ ನಮ್ಮ ಗಣೇಶ ಮಾವನ ಲೆಕ್ಕಲ್ಲಿಯೂ ‘ಪಾದಪೂಜೆ’ ನೆರೆವೇರಿತ್ತು.
ಬೈಲ ಲೆಕ್ಕಲ್ಲಿ ಗುರಿಕ್ಕಾರು ಪಾದಪೂಜೆ ನೆರವೇರಿಸಿ, ನೆರೆಕರೆಯ ಹತ್ತು ಸಮಸ್ತರುಗೊ ಗಂಗಾಭಿಷೇಕ ಮಾಡಿದ ಘಳಿಗೆಲಿ ಬಂದ ಮಳೆ ಶುಭಸೂಚಕವಾಗಿದ್ದತ್ತು.!

ಮಧ್ಯಾಹ್ನದ ಪ್ರಸಾದ ಭೋಜನ ಕಳುದು ಗುರುಗಳ ಸಭಾಕಾರ್ಯಕ್ರಮಲ್ಲಿ, ಚೆನ್ನೈಯ ‘ರಾಧಾ – ಗೋಧಾ’ ಸಹೋದರಿಯರ ಸಂಗೀತ ಕಾರ್ಯಕ್ರಮ ಸೇರಿದ ಸಭಿಕರ ಮನಸೂರೆ ಮಾಡಿತ್ತು.
ಪೂಜಾ – ಪೃಥ್ವಿ ಹೆಸರಿನ ಪುಟ್ಟು ಕೂಸುಗೊ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಹೇಳಿ ರಾಮ ನಾಮವ ಹಾಡಿದ್ದು ಎಲ್ಲೋರ ಹೃದಯವ ತಟ್ಟಿತ್ತು.
ಯಥಾಪ್ರಕಾರ ಮಂಡಲ- ವಲಯದ ವರದಿ ನೆರವೇರಿತ್ತು.

ಅದಾದ ಮತ್ತೆ ನಮ್ಮ ಬೈಲಿನ ಸಮ್ಮಂದಪಟ್ಟ ಕಾರ್ಯಕ್ರಮಂಗೊ ನೆಡದತ್ತು.
ಶುರುವಿಂಗೆ, ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ ಗುರುಗಳ ಕೈಂದ ಲೋಗೋ (ಬೈಲಮುದ್ರೆ) ಅನಾವರಣ ಮಾಡ್ಸಿದವು.  (ಬೈಲಮುದ್ರೆಯ ವಿವರ ಸದ್ಯಲ್ಲೇ ನಿರೀಕ್ಷಿಸಿ)
ಗುರಿಕ್ಕಾರು, ‘ಒಪ್ಪಣ್ಣ.ಕೋಮ್’ ಬಗ್ಗೆ ಕಿರುಪರಿಚಯ ಕೊಟ್ಟು ಪ್ರತಿಷ್ಠಾನದ ಹೆಸರಿಲಿ ಪ್ರಕಟ ಮಾಡಿದ ಎರಡು ಪುಸ್ತಕಂಗಳ ಬಗ್ಗೆ ವಿವರಿಸಿದವು.
ಗಣ್ಯರಾದ ಸಿಎಚ್ಚೆಸ್ ಮಾವ, ಕೇಜಿ ಅಜ್ಜ°, ಭಾರತಿ ಪ್ರಕಾಶನದ ಶಾರದತ್ತೆ, ಎಡಪ್ಪಾಡಿ ಭಾವ, ಮಾಷ್ಟ್ರು ಮಾವ – ಇವರ ಉಪಸ್ಥಿತಿಲಿ, ಸೇರಿದ ಸಮಸ್ತ ಬಂಧುಗಳ ಸಮ್ಮುಖಲ್ಲಿ, ಶ್ರೀ ಗುರುಗೊ ‘ಒಪ್ಪಣ್ಣನ ಒಪ್ಪಂಗೊ – ಒಂದೆಲಗ‘ ಹಾಂಗೆ ‘ಹದಿನಾರು ಸಂಸ್ಕಾರಂಗೊ’ ಪುಸ್ತಕಂಗಳ ಲೋಕಾರ್ಪಣೆ ಮಾಡಿ ಹರಸಿದವು.
ಗುರುಗಳ ಅಶೀರ್ವಚನಲ್ಲಿ ಶಕ್ತಿ ಯುಕ್ತಿ ಭಕ್ತಿಯ ಬಗ್ಗೆ ಪ್ರವಚನ ಕೊಟ್ಟು ಹರಸಿದವು.
ಸಭಾಂಗಣದ ಕರೇಲಿ ಮಡಗಿದ “ಪುಸ್ತಕ ಮಳಿಗೆ”ಲಿ ಆಸಕ್ತ ಓದುಗ ವೃಂದ ಪುಸ್ತಕವ ಖರೀದಿ ಮಾಡಿಗೊಂಡು ಪ್ರೋತ್ಸಾಹಮಾಡಿಗೊಂಡು ಇತ್ತಿದ್ದವು.

ಸೇರಿದ ಎಲ್ಲೋರಿಂಗೂ ವ್ಯಾಸಮಂತ್ರಾಕ್ಷತೆ ಕೊಟ್ಟಮತ್ತೆ, ನೆರೆಕರೆಯೋರ ಖಾಸಗಿಯಾಗಿ ಭೇಟಿ – ಮಾತುಕತೆಗೆ ಬಪ್ಪಗ ಹೊತ್ತೋಪಗಾಣ ಹೊತ್ತು ಏಳು ಕಳುದಿತ್ತು.
ಉದೆಗಾಲಂದ ಬಿಡುವಿಲ್ಲದ್ದೆ ವಿವಿಧ ಕಾರ್ಯಕ್ರಮಂಗಳಲ್ಲಿ ತೊಡಗಿಸಿಗೊಂಡರೂ, ನೆರೆಕರೆಯೋರ ಒಬ್ಬೊಬ್ಬನನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತಾಡ್ಸಿದವು.
ಇಪ್ಪ ಹೆಸರು-ಒಪ್ಪ ಹೆಸರುಗಳ ವಿಚಾರ್ಸಿಗೊಂಡು,  ಬೈಲಿಲಿ ಬರವ ಶುದ್ದಿಗಳ ಬಗ್ಗೆ ತಿಳ್ಕೊಂಡವು.
ಬೈಲಿಲಿ ಬಂದ ಶುದ್ದಿಗಳ, ವಿಶೇಷವಾಗಿ ‘ಸಮಸ್ಯಾಪೂರಣ’ ದ ಬಗ್ಗೆ ಕಾಳಜಿ ವಹಿಸಿ ಅರ್ತುಗೊಂಡವು.
ನಿಘಂಟು ಮಾಡಿತ್ತಿದ್ದ ಒಂದು ಘಂಟೆ ಸಮಯ ಮೀರಿ ಸುಮಾರು ಎರಡು ಘಂಟೆ ಹೊತ್ತು ನಮ್ಮೊಟ್ಟಿಂಗೆ ಇದ್ದುಗೊಂಡು ಕೊಶಿಪಟ್ಟವು.
ದೂರಂದಲೇ ಆಶೀರ್ವಾದ ಬೇಡಿಂಡು, ಬಪ್ಪಲಾಗದ್ದ ನೆರೆಕರೆಯೋರ ನೆಂಪು ಮಾಡಿಗೊಂಡವು ಸೇರಿದ ನೆಂಟ್ರುಗೊ.

ನೆರೆಕರೆಯೋರ ಒಗ್ಗಟ್ಟು ಹೀಂಗೆ ಸದಾ ಮುಂದುವರಿಯೆಕ್ಕು ಹೇಳಿ ಆಶೀರ್ವದಿಸಿದವು.
ಇನ್ನು ಮುಂದೆಯೂ ಗುರು ಭೇಟಿ ಆಯೆಕ್ಕು, ಅದು ಒಂದೆರಡು ಘಂಟೆಗೆ ಸೀಮಿತ ಮಾಡದ್ದೆ ಇಡೀ ದಿನಾಣ ಕಾರ್ಯಕ್ರಮ ಆಗಿರೆಕ್ಕು ಹೇಳ್ತ ಆಶಯ – ಆದೇಶವ ಗುರುಗೊ ಕೊಟ್ಟದು ಬೈಲ ನೆರೆಕರೆಯೋರ ದೊಡ್ಡ ಭಾಗ್ಯವೇ ಸರಿ.
ಸೇರಿದ ಸುಮಾರು ಮೂವತ್ತಕ್ಕೂ ಹೆಚ್ಚು ಬೈಲ ಬಾಂಧವರಿಂಗೆ ಭೇಟಿಯ ಸ್ಮರಣಿಕೆ ಲೆಕ್ಕಲ್ಲಿ ಶ್ರೀ ಗುರುಗೊ “ಸುಪ್ರಿಯ ಸುಭಾಷಿತಾನಿ” ಹೊತ್ತಗೆಯ ಕೊಟ್ಟು ಆಶೀರ್ವದಿಸಿದವು.

 ಇರುಳಾಣ ಊಟವ ಮಠಲ್ಲೇ ಉಂಡಿಕ್ಕಿ, ಬೈಲಿನ ನೆರೆಕರೆಯ ನೆಂಟ್ರುಗೊ ಸವಿನೆಂಪಿನ ಒಟ್ಟಿಂಗೆ ಗೂಡು ಸೇರಿದವು.

ನೆರೆಕರೆಯ ಕೆಮರದಣ್ಣಂದ್ರು ತೆಗದ ಕೆಲವು ಪಟಂಗೊ ಇಲ್ಲಿದ್ದು:
(ಇನ್ನಷ್ಟು ಪಟಂಗೊ ಸದ್ಯಲ್ಲೇ ನಿರೀಕ್ಷಿಸಿ / ನಿಂಗಳ ಹತ್ತರೆಯೂ ಪಟಂಗೊ ಇದ್ದರೆ ಬೈಲಿಂಗೆ ತೋರುಸಿ)

ತೆಕ್ಕುಂಜ ಕುಮಾರ ಮಾವ°

   

You may also like...

36 Responses

 1. ಎಮ್ ಎಸ್ ಕೆ. says:

  ಹಾ೦ಗೆ , ಅದರ ಮೊದಲು ,ಕೇಳಿಬ೦ದ, ಕೊಳಲ ನಾದದ, ಹೊಳೆಯು ನಾವು ನೆನಪಿಡಕ್ಕಾದ್ದೇ.ಎಲ್ಲಾ ಒ೦ದೇ ಸಮಯಲಿ ನಡೆದ ಬಗೆ,ಇದು ಭಾಗ್ಯ ,ಇದು ಭಾಗ್ಯವಯ್ಯಾ, ಹೇಳಿದರೆ ತಪ್ಪಾಗ ಅಲ್ಲದ?.ಸೇರಿದ್ದ ದೊಡ್ದ ಬೈಲ್ ಪೂರಾ,ಮಳೆ ಯೊಟ್ತಿ೦ಗೆ, ನಾದಮಯ-ವೇದಮಯ-ರಾಮಮಯ.

 2. ಚುಬ್ಬಣ್ಣ says:

  ಹರೇ ರಾಮ,
  ನಮ್ಮ ಬಯಲಿನ ಒ೦ದು ಮಹತ್ತರ ಮೈಲಿಗಲ್ಲುಗಳಲ್ಲಿ ಇದೂ ಒ೦ದು.

  ಒಪ್ಪಣ್ಣ೦ಗೂ – ಚೆನ್ನೈ ಭಾವ೦ಗು ಶುಭಾಶಯ, ಮತ್ತು ಧನ್ಯವಾದ.
  ಬಯಲಿನ ಲೆಕ್ಕಲ್ಲಿ ಇನ್ನು ಇನ್ನೂ ಪುಸ್ತಕ ಬರಲಿ ಹೇಳುದೇ ಆಶೆ. ಹವ್ಯಕ ಭಾಷೆ ಒಳುಶಿ -ಬೆಳಶಿ -ಎಲ್ಲಾ ಕಡೆಯೂ ಹರಡುವಾ೦ಗೆ ಮಾಡಿದ oppanna.com ಇ೦ಗೆ ಧನ್ಯವಾದ.
  ನಮ್ಮ ನೆರೆಕರೆಯ ಎಲ್ಲಾರ ಪ್ರೋತ್ಸಹ, ಪ್ರೀತಿ ಇರಳಿ.

 3. ಬಾಲಣ್ಣ (ಬಾಲಮಧುರಕಾನನ) says:

  ಎಲ್ಲೋರಿಂಗು ನಮಸ್ಕಾರ, ಅನಿವಾರ್ಯ ಕಾರಣಂದ ಎನಗೂ ಬಪ್ಪಲಾತಿಲ್ಲೆ ಕುಮಾರ ಮಾವ ಚೆಂದಕ್ಕೆ ವರದಿ ಕೊಟ್ಟಿದವು .ಕೆಲವು

  ಪಟಂಗಳೂ ಕಂಡತ್ತು.ಕೊಶಿ ಆತು.ಬೈಲಿನೋರನ್ನು ಗುರುಗಳನ್ನೂ ಭೇಟಿ ಅಪ್ಪ ಅವಕಾಶ ತಪ್ಪಿತ್ತು ಹೇಳಿ ಬೇಜಾರಿದ್ದು. ಬೈಲಿನೋರ

  ಕೆಲಸಂಗಳ ಗುರುಗೊ ಹರಸಿದ್ದದೂ ಗೊಂತಾಗಿ ತುಂಬಾ ಸಂತೋಷ ಆತು. ಕಾರ್ಯಕ್ರಮ ಚೆಂದಕ್ಕೆ ಕಳುದ್ದದು” ಸವಿ ನೆಂಪಾ”ಗಿ ರಲಿ.

 4. ಶುಭಾಶಯಂಗೊ 🙂
  ಈ ಪುಸ್ತಕದ ಮುಂದಿನ ಭಾಗ ಸದ್ಯಲ್ಲೇ ಬರಲಿ ಹೇಳಿ ಹಾರೈಸುತ್ತೆ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *