ಹೊಸನಗರಕ್ಕೆ… ಹೊಸಮಠ

ಹೊಸನಗರಲ್ಲಿಪ್ಪ ನಮ್ಮ ಪ್ರಧಾನ ಮಠ ಹೊಸತ್ತಾಯೇಕ್ಕು ಹೇಳಿ ಗುರುಗಳ ಕನಸು..ಅದಕ್ಕೊಪ್ಪಿದ ಶಿಷ್ಯರ ಮನಸು..

ಈ ಸಂಗತಿಯ ಕಳುದ ವರುಷವೇ ಒಪ್ಪಣ್ಣ ಬೈಲಿಂಗೆ ಹೇಳಿದ್ದ. ನಿಂಗೊಗೆ ನೆನಪ್ಪಿದ್ದರೆ ಅದು ದೊಡ್ದ ಗುರುಗಳ ಆರಾಧನೆಯ ಸಮಯ ಆಗಿತ್ತು. ಮತ್ತು ಅದಕ್ಕಾಗಿ ಬೈಲಿಂಗೆ ಗುರುಗಳ ಮಂತ್ರಾಕ್ಷತೆಯೂ ಸಿಕ್ಕಿದ್ದತ್ತು

ಆ ನಂತರ ಹೊಸ ಮಠ ನಿರ್ಮಾಣದ ಬಗ್ಗೆ ಒಂದು ಸಮಿತಿ ರಚನೆ ಆಗಿ ಅದಕ್ಕೆ ‘ಪುನರ್ನವ – ಪ್ರಧಾನಮಠ’ ಹೇಳುವ ಹೆಸರಿನ ಶ್ರೀ ಗುರುಗಳೇ ನಾಮಕರಣ ಮಾಡಿದವು. ಹೊಸನಗರ ಮಠದ ಸಮಗ್ರ ವಿಕಾಸ ಆಯೆಕ್ಕು ಹೇಳಿ ಚಿಂತನೆ.

ನಂತರದ ದಿನಂಗಳಲ್ಲಿ ಈ ಸಮಿತಿಯೋರು ಅನೇಕ ವಿಚಾರ ವಿಮರ್ಶೆಗಳ ಮಾಡಿ ಹಲವಾರು ಚಿಂತನೆ, ಧಾರ್ಮಿಕ ವಿಧಿಗಳ ಎಲ್ಲ ನಡೆಸಿ ಈಗ ‘ಭೂ ಪರಿಗ್ರಹ’ ಹೇಳುವ ಕಾರ್ಯಕ್ರಮ ನಡೆಸುವಲ್ಲಿವರೇಗೆ ಎತ್ತಿದವು.
‘ಭೂಪರಿಗ್ರಹ’ ಹೇಳಿರೆ ಆ ಭೂಮಿಯ ಮಠ ನಿರ್ಮಾಣಕ್ಕೆ ಯೋಗ್ಯವಾಗುಸುದು ಮತ್ತು ಪಂಚಭೂತಂಗಳತ್ರೆ ಅನುಮತಿ ತೆಕ್ಕೊಂಬದು. ಈ ಬಗ್ಗೆ ಧರ್ಮ ಶಾಸ್ತ್ರ ತಿಳುದೋರು ಇನ್ನೂ ಹೆಚ್ಚು ಹೇಳುಗು.ಭೂಪರಿಗ್ರಹ ಕಾರ್ಯಕ್ರಮ ವಿವರ ಭೂಪರಿಗ್ರಹ ಆಮಂತ್ರಣ

ಭೂಪರಿಗ್ರಹದ ನಂತರ ಬಹುಶಃ ಜನವರಿಲ್ಲಿ ಶಿಲಾನ್ಯಾಸ ಅಪ್ಪಲಿದ್ದು. ಮಠ ನಿರ್ಮಾಣ ಕೆಲಸ ಆರಂಭ ಆವುತ್ತು. ಈಗಾಗಲೇ ಎಲ್ಲ ಪೂರ್ವಭಾವಿ ಕೆಲಸಂಗೊ ವ್ಯವಸ್ಥಿತವಾಗಿ ಚೆಂದಕೆ ಶ್ರೀ ಗುರುಗಳ ಮಾರ್ಗದರ್ಶನಲ್ಲಿ ನಡೆತ್ತಾ ಇದ್ದು.

ನಾಳ್ತು ಆದಿತ್ಯವಾರ ಜೂನ್ ಇಪ್ಪತ್ತೊಂಭತ್ತರಂದು ಉದಿಯಪ್ಪಗ … ಶ್ರೀಮಠ ಆವ್ತ ಜಾಗೆಲಿ ಶ್ರೀ ಗುರುಗಳ ಅನುಗ್ರಹ ಮಂತ್ರಾಕ್ಷತೆ ಪೂರ್ವಕ ಧಾರ್ಮಿಕ ಕಾರ್ಯಕ್ರಮಂಗೊ ನಡೆತ್ತು. ಅಮೇಲೆ ಮಧ್ಯಾಹ್ನ ಎರಡೂವರೆ ಘಂಟೆಂದ ಶ್ರೀ ಗುರುಕುಲದ ಅಮೃತಮಯೀ ಸಭಾಭಾವನಲ್ಲಿ ಸಭಾ ಕಾರ್ಯಕ್ರಮ ನಡವಲಿದ್ದು. ಸಭೆಲಿ ಹೊಸನಗರ ಮಠದ ಸಮಗ್ರ ವಿಕಾಸ ಯೋಜನೆಯ ಬಗ್ಗೆ ಮಾಹಿತಿ ಕೊಡ್ತವು.
ಇದೇ ಸಂದರ್ಭ ಶ್ರೀ ಭಾರತೀ ಗುರುಕುಲದ ‘ಘಟಿಕೋತ್ಸವ’ ಮತ್ತೆ ‘ದೀಕ್ಷಾಂತೋಪದೇಶ’ ಅಪ್ಪಲಿದ್ದು ಆ ನಂತರ ಶ್ರೀಗುರುಗಳ ಆಶೀರ್ವಚನ.

ಈ ಮಧ್ಯಲ್ಲಿ ಒಂದು ವಿಶೇಷ ಕಾರ್ಯಕ್ರಮ… ”ಬೊಗಸೆ ನಾಣ್ಯ ಸಮರ್ಪಣೆ”

ಈ ಮಠದ ನಿರ್ಮಾಣಲ್ಲಿ ಭಾವನಾತ್ಮಕವಾಗಿ ನಾವೆಲ್ಲರೂ ಭಾಗವಹಿಸೆಕ್ಕು ಹೇಳುವ ದೃಷ್ಟಿಲಿ ರೂಪುಗೊಂಡ ಕಾರ್ಯಕ್ರಮವೇ ”ಬೊಗಸೆ ನಾಣ್ಯ ಸಮರ್ಪಣೆ”
ಪ್ರತಿಯೊಂದು ಮನೆಂದಲೂ ಒಬ್ಬ ಅಥವಾ ಎಲ್ಲೋರು ಒಂದರಿ ಅಥವಾ ವರ್ಷಕ್ಕೊಂದರಿ ಅಥವಾ ಮನಸಿಂಗೆ ತೋರಿದಷ್ಟು ಸರ್ತಿ ‘ಒಂದು ಬೊಗಸೆ ನಾಣ್ಯ’ ವ ನಮ್ಮ  ಮಠದ ನಿರ್ಮಾಣಕ್ಕೋಸ್ಕರ ಅರ್ಪಣೆ ಮಾಡುವ ವ್ಯವಸ್ಥೆಯೇ ‘ಬೊಗಸೆ ನಾಣ್ಯ ಸಮರ್ಪಣೆ’. ಈ ಕಾರ್ಯಕ್ರಮಕ್ಕೆ ಅಂದೇ ಶ್ರೀಗುರುಗೊ ಚಾಲನೆ ಕೊಟ್ಟು ಹರಸುತ್ತವು.
ನಾಳ್ತು ಆದಿತ್ಯವಾರ ಜೂನ್ ಇಪ್ಪತ್ತೊಂಭತ್ತರಂದು ನಾವೆಲ್ಲಾ ಹೊಸನಗರಲ್ಲಿ ಕಾಂಬ ಆಗದೋ..

ಹ್ಞಾ.. ಕೊಡೆ ಹಿಡ್ಕೊಳ್ಳಿ. ಮಳೆ ಸೊಯಿಂಪಿ ಚೆಂಡಿ ಆದೆರೆ ಶೀತ ಆಗಿ ಹೋಕು.

~~~***~~

ಶ್ರೀಪ್ರಕಾಶ ಕುಕ್ಕಿಲ

   

You may also like...

1 Response

  1. ಚೆನ್ನೈ ಭಾವ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *