14-ಜೂನ್-2015: ಕನ್ಯಾನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಂಗಳ ಕೊಡುಗೆ

ಕನ್ಯಾನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಂಗಳ ಕೊಡುಗೆ

 

ಕನ್ಯಾನ: 14  ಜೂನ್ 2015:
“ಕಲಿಯುವಿಕೆ ಹೇಳುದು ಏಕಕಾಲಲ್ಲಿ ಸಾಧ್ಯವಾದ್ದು ಅಲ್ಲ; ಅದು ನಿರಂತರವಾಗಿ ನೆಡೇಕಾದ ತಪಸ್ಸು. ಎಲ್ಲ ವಿದ್ಯಾರ್ಥಿಗಳೂ ಹಂತಹಂತವಾಗಿ ಮೆಟ್ಳುಗಳ ಏರಿ ಉತ್ತಮ ಭವಿಷ್ಯವ ಕಂಡು ಯಶಸ್ವಿಯಾಯೇಕು. ಇದಕ್ಕೆ ಬೇಕಾದ ಸಾಮಾಗ್ರಿ ಸಲಕರಣೆಗಳ ಹೆರಿಯೋರು ಏರ್ಪಾಡು ಮಾಡಿ ವಿದ್ಯಾರ್ಥಿಗೊಕ್ಕೆ ಕಲಿಕೆ ಸುಗಮ ಅಪ್ಪ ಹಾಂಗೆ ನೋಡಿಗೊಳ್ಳೆಕ್ಕು. ವಿದ್ಯಾರ್ಥಿಗೊ ಬೆಳಗಿ ಪ್ರಗತಿ ಪಡದು ಬೆಳೆಶಿದ ಸಂಘ ಸಂಸ್ಥೆಗೆ ಕೀರ್ತಿ ತರೇಕು” – ಹೇಳಿ ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ರು ಹೇಳಿದವು. ಇಂದು ಕನ್ಯಾನದ ಭಾರತ ಸೇವಾಶ್ರಮಲ್ಲಿ ನಮ್ಮ ಬೈಲಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿಗೊಕ್ಕೆ ಕಲಿಕೋಪಕರಣ ಪ್ರದಾನ ಕಾರ್ಯಕ್ರಮಲ್ಲಿ ಉಪಸ್ಥಿತಿವಹಿಸಿ ಮಾತನಾಡಿದವು.

ಆರ್ತರಿಂಗೆ ಮಾಡು ಕೊಡುವ, ಜೀವನಕ್ಕೆ ಆಸರೆ ಕೊಡುವ ಕನ್ಯಾನ ಸೇವಾಶ್ರಮ ನಿಜವಾದ ಬದ್ಕಿನ ಪಾಠ ಹೇಳಿಕೊಡ್ತು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಲಿ ಸೇವಾಶ್ರಮದ ಕಾರ್ಯಚಟುವಟಿಕೆಗೊ ಸಹಕಾರಿ ಆವುತ್ತು. ಇಲ್ಲಿಂದ ಭವಿಷ್ಯ ಕಂಡ ಹಲವು ಜೆನಂಗೊ ನಾಡಿನ ಎಲ್ಲ ದಿಕ್ಕೆ ಬೆಳಗುತ್ತಾ ಇದ್ದವು – ಹೇಳಿ ಮುಖ್ಯ ಅತಿಥಿಗಳಾಗಿದ್ದ ಜತ್ತಿ ಸುಬ್ರಾಯಭಟ್ ಅಭಿಪ್ರಾಯ ಪಟ್ಟವು.
ಬೈಲಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ – ಶ್ರೀಕೃಷ್ಣ ಶರ್ಮ ಹಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿತ್ತಿದ್ದವು. ಕೋಶಾಧಿಕಾರಿ ಸುಭಗಣ್ಣ – ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಸದಸ್ಯರಾದ ಯೇನಂಕೂಡ್ಳಣ್ಣ- ಕಿಶೋರ್ ಯೇನಂಕೂಡ್ಳು, ದೊಡ್ಡಭಾವ – ರವಿಶಂಕರ ದೊಡ್ಡಮಾಣಿ, ಕನ್ಯಾನ ಬೆನಕ ಸ್ಟುಡಿಯೋದ ಮಾಲಕರಾದ ಕುಮಾರಸ್ವಾಮಿ, ನಮ್ಮ ಪ್ರೀತಿಯ ಕುಮಾರಣ್ಣ ಉಪಸ್ಥಿತರಿತ್ತಿದ್ದವು. ಸೇವಾಶ್ರಮದ ಈಶ್ವರ ಭಟ್ ಸ್ವಾಗತ ಮಾಡಿ ಪ್ರಾಸ್ತಾವಿಕ ಮಾತಾಡಿದವು.

 

ಫೋಟೋ: ಯೇನಂಕೂಡ್ಳು ಅಣ್ಣ
ವರದಿ: ದೊಡ್ಡಭಾವ

 

ಶುದ್ದಿಕ್ಕಾರ°

   

You may also like...

5 Responses

 1. ಚೆನ್ನೈ ಭಾವ° says:

  ಒಪ್ಪ ಕೆಲಸ. ಬೈಲ ನಾಕು ಸಮಸ್ತರು ಪ್ರೀತಿಂದ ಕೈಜೋಡುಸುವದರಿಂದ ಇದು ನವಗೆ ಮಾಡಿಗೊಂಬಲೆ ಸಾಧ್ಯ. ಮುಂದೆಯೂ ಇನ್ನಷ್ಟು ಸಕಾಯ ಬೈಲ ಮೂಲಕ ಜೆನಂಗೊಕ್ಕೆ ಸಿಕ್ಕುವಾಂಗೆ ಆಗಲಿ, ಬೈಲ ನೆಂಟ್ರುಗೊ ಏವತ್ತೂ ನಮ್ಮೊಟ್ಟಿಂಗೆ ಪ್ರೋತ್ಸಾಹಿಸಿಗೊಂಡು ಕೈಜೋಡಿಸಿಗೊಂಡು ಬೈಲ ಅಭಿವೃದ್ಧಿಗೆ ಹೆಗಲುಕೊಡೆಕು ಹೇದು ಪ್ರಾರ್ಥನೆ.

 2. S.K.Gopalakrishna Bhat says:

  ಅಭಿನಂದನೆಗೊ

 3. upskumar says:

  ಕಾರ್ಯಕ್ರಮ ನೆದಶಿಕೊಟ್ಟ ಎಲ್ಲೋರಿಮ್ಗೂ ಕೃತಜ್ಞತೆ

 4. ತೆಕ್ಕುಂಜ ಕುಮಾರ ಮಾವ° says:

  ಅಭಿನಂದನೆಗೊ.

 5. ಬಾಲಣ್ಣ (ಬಾಲಮಧುರಕಾನನ) says:

  ಅತ್ಯುತ್ತಮ ಕಾರ್ಯ .ಮಕ್ಕೊಗೆ ಕಲಿವಲೆ ಯಾವ ರೀತಿಯ ಪ್ರೋತ್ಸಾಹ ಕೊಟ್ತರುದೆ ಅದು ಸ್ತುತ್ಯರ್ಹವೇ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *