2013: ಕಲ್ಪನೆಯ ಬೈಲಿಂಗೆ ನಾಕನೇ ಒರಿಶ

ಹರೇರಾಮ, ಎಲ್ಲೋರಿಂಗೂ ನಮಸ್ಕಾರ.
ಕೆಲೆಂಡರು ಲೆಕ್ಕದ ಹೊಸ ಒರಿಶ ಬಂದ ಕೂಡ್ಳೇ ಬೈಲಿಂಗೂ ಒಂದು ಕೊಶಿ. ಎಂತಗೆ?
ಬೈಲು ಸುರುಆಗಿ ಮತ್ತೊಂದೊರಿಶ ಆತು ಹೇಳ್ತ ಸಂತೋಷ.

ನಾಕೊರಿಶ!

ನಾಕೊರಿಶ!

2009ರ ಜೆನವರಿಗೆ ಅಂತರ್ಜಾಲಲ್ಲಿ ಪ್ರಕಟಗೊಂಡ ಈ ಬೈಲು ನಿರಂತರವಾಗಿ ಇಂದಿನಒರೆಂಗೆ ನೆರೆಕರೆಯ ಅಕ್ಕ-ತಂಗೆ-ಅಣ್ಣ-ಭಾವಯ್ಯಂದ್ರ ಸಹಕಾರಲ್ಲಿ ನೆಡೆತ್ತಾ ಇದ್ದು.
ಒಟ್ಟು 1859 ಶುದ್ದಿಗಳನ್ನೂ, 28, 215 ಒಪ್ಪಂಗಳನ್ನೂ, ಲಕ್ಷಾಂತರ “ಪುಟನೋಟಂಗಳನ್ನೂ” ಹೊಂದಿಗೊಂಡು, ಹವ್ಯಕ ಸಾರಸ್ವತ ಲೋಕಲ್ಲಿ ಏಕಮೇವಾದ್ವಿತೀಯವಾಗಿ ಬೆಳೆತ್ತಾ ಇದ್ದು.

ನಿಂಗ ಎಲ್ಲೋರ ಪ್ರೋತ್ಸಾಹ ಇಲ್ಲದ್ದರೆ ಇದು ಈ ನಮುನೆಲಿ ಬೆಳೆತ್ತಿತಿಲ್ಲೆ.
ಎಲ್ಲೋರ ಸಹಕಾರಕ್ಕೆ ಬೈಲು ಚಿರಋಣಿ.
ಮುಂದೆಯೂ ಇದೇ ನಮುನೆಲಿ ಪ್ರೀತಿ – ವಾತ್ಸಲ್ಯ ಇರಳಿ.
ಬೈಲಿಂಗೆ ಇನ್ನೂ ಹೆಚ್ಚು ಜೆನ ಬರಳಿ, ಶುದ್ದಿ ಹೇಳುಲೆ ಸುರುಮಾಡಲಿ.
ಬೈಲು ಬೆಳೆಯಲಿ, ಜ್ಞಾನಾರ್ಜನೆ ನಿರಂತರವಾಗಿರಳಿ.

ಗುರು-ಹಿರಿಯರ ಮಾರ್ಗದರ್ಶನ, ದೇವರ ಆಶೀರ್ವಾದ ನಮ್ಮ ಬೈಲಿಂಗೆ ಸದಾ ಇರಳಿ.
~

ಬೈಲಿನ ನಾಕನೇ ಒರಿಶದ ಬಾಬ್ತು ಎಲ್ಲೋರಿಂಗೂ ಶುಭಾಶಯಂಗೊ.

~
ಬೈಲಿನ ಪರವಾಗಿ

Admin | ಗುರಿಕ್ಕಾರ°

   

You may also like...

12 Responses

  1. ಬಾಲಣ್ಣ (ಬಾಲಮಧುರಕಾನನ) says:

    ಬೈಲಿನ ಗುರಿಕ್ಕಾರಿಂಗೆ ನಮಸ್ಕಾರಂಗೊ.ಬೈಲಿಂದ ಹೊಸ ಕವಿಗೊ, ಸಾಹಿತಿಗೊ,ಬೆಳದವು ಬರದವು ಭಾಶೆಯ ಬೆಳಸಿದವು ಹೇಳುತ್ತದು ತುಂಬಾ ಸಂತೋಷದ ವಿಷಯ .ನಮ್ಮ ಈ ಭಾಷೆ ಇನ್ನುದೇ ಬೆಳಗಲಿ ಬೆಳೆಯಲಿ .ಹೊಸ ಹೊಸ ಸಾಹಿತ್ಯ ಸೃಷ್ತಿಯಾಗಲಿ ಎಂಬುದು ಆಶಯ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *