ಈ ಪವನಜಮಾವ ಸ್ವಲ್ಪ ಅಪರೂಪದ ಜನ. ಅವು ಹುಟ್ಟಿದ್ದು ಸುಳ್ಯಂದ ೮ ಮೈಲು ದೂರಲ್ಲಿಪ್ಪ ಕಾಸರಗೋಡು ಜಿಲ್ಲೆಗೆ ಸೇರಿದ ಬೆಳ್ಳಿಪ್ಪಾಡಿಲಿ. ಓದಿದ್ದು ಪಂಜಿಕಲ್ಲು, ಸುಳ್ಯ, ಪುತ್ತೂರು, ಮೈಸೂರು. ಈ ಜನ ಮಾಡಿದ್ದು ಕೆಮಿಸ್ಟ್ರಿಲಿ ಎಂಎಸ್ಸಿ. ನಂತರ ಹೋಗಿ ಸೇರಿಕೊಂಡದ್ದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರಲ್ಲಿ ವಿಜ್ಞಾನ ಆಗಿ. ಅಲ್ಲಿಯೇ ಪಿಎಚ್ಡಿಮಾಡಿ ನಂತ್ರ ತೈವಾನಿಲಿಯೂ ಹೆಚ್ಚಿನ ಸಂಶೋಧನೆ ಮಾಡಿದವು. ಮುಂಬಯಿಲಿ ಇಪ್ಪಗಳೇ ಕನ್ನಡ ಕಂಪ್ಯೂಟರಿಲಿ ಸುಮಾರು ಕೆಲಸ ಮಾಡಿದ ಜನ. ೧೯೯೩ರಲ್ಲಿಯೇ ಕನ್ನಡ ಕಲಿ ಹೇಳೂವ ಒಂದು ಪ್ರೋಗ್ರಾಮ್ ಮಾಡಿತ್ತಿದ್ದವು. ಬಿಎಆರ್ಸಿ ಮುಂಬಯಿಯ ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಕನ್ನಡ ವಿಜ್ಞಾನ ಪತ್ರಿಕೆ "ಬೆಳಗು"ವಿನ ಸಂಪಾದಕ ಆಗಿ, ಅದರ ಕಂಪ್ಯೂಟರಿಲಿ ಡಿಟಿಪಿ ಮಾಡಿ, ಕನ್ನಡಲ್ಲಿ ವಿಜ್ಞಾನ ವಿಚಾರ ಸಂಕಿರಣ ಎಲ್ಲ ಮಾಡಿದ ಜನ.೧೯೯೬ರ ಕಾಲಲ್ಲಿಯೇ, ಅದೂ ದೂರದ ಮುಂಬಯಿಲಿ ಕೂತುಕೊಂಡು, ಅಂತರಜಾಲಲ್ಲಿ ಕನ್ನಡವ ಇಡೀ ಪ್ರಪಂಚಲ್ಲೇ ಪ್ರಪ್ರಥಮ ಸರ್ತಿ ಸೇರಿಸಿ ವಿಶ್ವಕನ್ನಡ ಹೇಳುವ ಆನ್ಲೈನ್ ಪತ್ರಿಕೆ ಮಾಡಿತ್ತಿದ್ದವು.
೧೯೯೭ರಲ್ಲಿ ಬಿಎಆರ್ಸಿಯ ಬಿಟ್ಟು ಬೆಂಗಳೂರಿಗೆ ಬಂದವು. ಬಂದು ಸೇರಿದ್ದು ಸಾಫ್ಟ್ವೇರ್ ಕ್ಷೇತ್ರಲ್ಲಿ. ಇಲ್ಲಿಯೂ ಸುಮ್ಮನೆ ಇದ್ದ ಜನ ಅಲ್ಲ. ಕರ್ನಾಟಕ ಸರಕಾರಕ್ಕೆ ಕಂಪ್ಯೂಟರ್ ಕನ್ನಡ ಸಲಹಾ ಸಮಿತಿಲಿ ಕೆಲಸ ಮಾಡಿದ್ದವು, ಅದೂ ಎರಡು ಸರ್ತಿ. "ನುಡಿ" ಹೆಸರಿನ ಕನ್ನಡ ಸಾಫ್ಟ್ವೇರ್ ಬಪ್ಪಲೆ ಇವ್ವೇ ಕಾರಣ. ಅದರ ವಿನ್ಯಾಸ, ಸಲಹೆ, ಮಾರ್ಗದರ್ಶನ ಎಲ್ಲ ಇವರದ್ದೇ. ಯುನಿಕೋಡ್ ಕನ್ಸೋರ್ಶಿಯಂಗೆ ಕನ್ನಡದ ಬಗ್ಗೆ ಆಗಾಗ ಇವು ಕೊಟ್ಟ ಸಲಹೆಂದಾಗಿ ಯುನಿಕೋಡ್ಲಿ ಕನ್ನಡ ಸರಿ ಇದ್ದು. ಸುಮಾರು ವರ್ಷ ಇವು ಮೈಕ್ರೋಸಾಫ್ಟ್ ಕಂಪೆನಿಗೆ ಭಾರತೀಯ ಭಾಷೆಗಳ ಹಾಂಗೂ ಕನ್ನಡ ಭಾಷೆಯ ಸಲಹೆಗಾರ ಆಗಿ ಕೆಲಸ ಮಾಡಿದ್ದವು. ಮಕ್ಕೊಗೆ ಕಂಪ್ಯೂಟರಿಲಿ ಕನ್ನಡ ಭಾಷೆಲಿಯೇ ಪ್ರೋಗ್ರಾಮ್ ಮಾಡ್ಲೆ ಎಡಿಗಪ್ಪಂತೆ ಮಾಡುವ ಕನ್ನಡಲೋಗೋ ಹೇಳುವ ಸಾಫ್ಟ್ವೇರ್ ಮಾಡಿ ಅದಕ್ಕೆ ಮಂಥನ ಪ್ರಶಸ್ತಿ ಪಡ್ಕೊಂಡಿದವು. ಇವಕ್ಕೆ ಮೈಕ್ರೋಸಾಫ್ಟ್ ಕಂಪೆನಿ ಮೋಸ್ಟ್ ವಾಲ್ಯೂಏಬಲ್ ಪ್ರೊಫೆಶನಲ್ ಹೇಳುವ ಬಿರುದು ಕೊಟ್ಟಿತ್ತಿದ್ದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ, ಅದ್ರಲ್ಲೂ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಇವು ಸುಮಾರು ಲೇಖನ ಬರದ್ದವು, ಭಾಷಣ ಕೊಟ್ಟಿದವು. ಕನ್ನಡ ಪ್ರಭ ಪತ್ರಿಕೆಲಿ ಈಗ ಪ್ರತಿ ಸೋಮವಾರ ಇವರ ಗಣಕಿಂಡಿ ಹೇಳುವ ಅಂಕಣ ಇದ್ದು ಅದು ನೂರು ಸಂಚಿಕೆ ದಾಟಿದ್ದು. ಬೆಳಗಾವಿಲಿ ಆದ ಎರಡನೆ ವಿಶ್ವ ಕನ್ನಡ ಸಮ್ಮೇಳನಲ್ಲಿ ಇವರ ಭಾಷಣ ಇತ್ತು.
ನಮ್ಮ ಗುರುಗಳ ದೊಡ್ಡ ಭಕ್ತ. ಗುರುಗಳ ಆಶಯಂದಾಗಿ ಸುರುವಾದ IT4Cow, ಅವಲಂಬನ ಸಂಸ್ಥೆಗಳಲ್ಲಿ ಇವು ಕೆಲಸ ಮಾಡ್ತವು. ಗೋವಿಶ್ವ ಹೇಳುವ e-ಪತ್ರಿಕೆ ನೆಡೆಶುತ್ತವು.
ಇದಾ, ಸರಿಯಾದ ಉತ್ತರ ಇನ್ನೊಂದು ಇಲ್ಲಿದ್ದು-
ಹೋರಿ – ದನ
ಲಾಯಕ್ಕಿದ್ದು
ದನ ಹೇಳಿರೆ ಹಸು ಅಥವಾ ಎತ್ತು/ಹೋರಿ ಎರಡೂ ಅರ್ಥ ಇದ್ದು ಹೇಳಿ ಕಾಣ್ತು…..
ಪವನಜ,
ನಮಸ್ತೇ. ಬಹಳ ಹಿ೦ದೆ ಒ೦ದು ಸರ್ತಿ ಪ್ರೈಮರಿ ಶಾಲೆಯ ಮೂರನೆಯ ಕ್ಲಾಸಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಲಿ ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಕೊಡಿ ಹೇದು “ ಗ೦ಡ—?;ತಾಯಿ—–?ಹೇಳಿ ಕೇಳಿದ್ದದು ನೆ೦ಪಾತು ನಿ೦ಗಳ ಈ ಚರ್ಚೆಯ ಓದಿಯಪ್ಪಗ !
ಎನ್ನ ಉತ್ತರ: ಲುಂಗಿ – ಲಂಗ 🙂
ಅಂಗಿ – ಲಂಗ…?
ತುಂಬ ಹತ್ರ ಇದ್ದು
ಅಂದಾಜಿಗೆ ಇದಾ ಒಂದು ಗುಂಡು-
‘ಮಾಲಿ’ ಪುಲ್ಲಿಂಗ ‘ಮಾಲ’ ಸ್ತ್ರೀಲಿಂಗ.
ಗುಂಡು ತಾಗಿತ್ತೋ? (ಮಾಲಿಗೂ ಮಾಲಂಗು ಎಂತ ಸಂಬಂಧ ಕೇಳಿಕ್ಕೆಡಿ.. ಅದೆಲ್ಲ ಎನಗೊಂತಿಲ್ಲೆ)
ಉತ್ತರ ಸರಿ ಅಲ್ಲದ್ರೆ ಏನಾರು ಕುಳು ಕೊಡಿ, ಟ್ರೈ ಮಾಡುವೆ
ತಪ್ಪು
ಹಾಂಗೆ ಈ ಚರ್ಚೆಯ ಮುಂದುವರಿಸುತ್ತಾ… ಈಗ ಒಂದು ಸಮಸ್ಯೆ. ಯಾರು ಬೇಗ ಉತ್ತರ ಹೇಳ್ತವೋ ಅವಕ್ಕೆ ವಿಶೇಷ ಬಹುಮಾನ-
ಪ್ರಶ್ನೆ: ಕನ್ನಡ ಹಾಂಗೂ ನಮ್ಮ ಭಾಷೆಲಿ ಪುಲ್ಲಿಂಗ ಶಬ್ದಂಗ “ಅ”ಕಾರಾಂತ, ಸ್ತ್ರೀಲಿಂಗ ಶಬ್ದಂಗ “ಇ”ಕಾರಾಂತ. ಉದಾ – ಹುಡುಗ -ಹುಡುಗಿ, ದೇವ -ದೇವಿ. ಇದಕ್ಕೆ ವಿರುದ್ಧವಾದ ಪದಜೋಡಿ ಯಾವುದು? ಅಂದರೆ ಸ್ತ್ರೀಲಿಂಗಲ್ಲಿ “ಅ”ಕಾರಾಂತ, ಪುಲ್ಲಿಂಗಲ್ಲಿ “ಇ”ಕಾರಾಂತ.
ಅಪ್ಪಚ್ಚಿ – ಚಿಕ್ಕಮ್ಮ…ನೋ??
ಅಡ್ಡಿ ಇಲ್ಲೆ. ಎನ್ನ ಉತ್ತರ ಬೇರೆ ಇದ್ದು
ದೊಡ್ಡಾಟ/ಮೂಡಲಪಾಯ ಹೀಂಗಿಪ್ಪ ಏವದೋ ಒಂದರಲ್ಲಿ ಕೇಳಿದ ಡೈಲಾಗು..
ಹೆಂಡತಿ ಗೆಂಡನ ದೆನಿಗೇಳುದು- “ಅಯ್ಯಾ ಪತಿದೇವಾ..”
ಅದಕ್ಕೆ ಗೆಂಡ ಓಕೊಂಬದು- ” ಏನೇ ‘ಪತಿದೇವೀ’…?”
ಅಯ್ಯಾ ಮಹಾನುಭಾವಾ… ಇದಕ್ಕೆ ನೀವೇನು ಹೇಳುತ್ತೀರೋ ಹೇಳುವಂಥವರಾಗಿ..!! 😉
# ಇದು ಸರಿಯಾ? 🙂
ಗೋಣಿ ಗೋಣನ ಗೋಣ ಹೇಳಿ ಬೈದ್ದದಕ್ಕೆ ಗೋಣ ಗೋಣಿಯ ಗೋಣಿ ಹೇಳಿ ಬೈವಲೆ ಆವುತಿತ್ತಿಲ್ಲೆ. ಇದು ತಪ್ಪು.
ಕುದುರೆ (ಸ್ತ್ರೀಲಿಂಗ) ಕುದುರ (ಪುಲ್ಲಿಂಗ)
ಮಂಗ, ಮಂಗಿ ?
ಇದು ಸರಿಯಾ ?
ಹಾಂಗೆ ಕೋಳಿ – ಕೋಳ ?
ಪವನಜಣ್ಣ,
ಒ೦ದು ಸ೦ಶಯ, ಅಣ್ಣನ ತ೦ಗೆ ಗೋಣ ಹೇಳಿ ಬೈದ್ದದೋ ಅಲ್ಲ ದೆನಿಗೇಳಿದ್ದದೋ?
ಬೈದದ್ದು 🙂
ರಘು, ನಿನ್ನ ಪ್ರಶ್ನೆಯ ಉದ್ದೇಶ ಎನಿಗೆ ಅರ್ಥ ಆಯಿದಿಲ್ಲೇಳಿ ಗ್ರಹಿಸಿದೆಯಾ? 🙂
ಏ ಪವನಜಣ್ಣ,
ನಿ೦ಗೊಗೆ ಅರ್ಥ ಆಗದ್ದೆ ಇಕ್ಕೊ? ಇಕ್ಕು ಹೇಳಿ ಗ್ರಹಿಸಿದವ° ಗೋಣನೆ !!
ನಮ್ಮ ಭಾಷೆಲಿ ಹಿಂದಿ ಭಾಷೆಯ ಹಾಂಗೆ ಪ್ರತಿಯೊಂದಕ್ಕೂ ಲಿಂಗ ಸೇರುಸುವ ಕ್ರಮ ಇಲ್ಲೆ
ಪವನಜ, ಜೀನ್ಸ್, ಟೀ ಶರ್ಟು ಯೇವ ಲಿಂಗ ..?
😀
ಹ್ಹ..
ನಾಳಂಗೆ ಅದು ಅವನ ಅಂಡೆ ಹೇಳಿರೆ, ಅವ, ಅಂಡಿ ಹೇಳಿ ಹೇಳುಗಾಯ್ಕು ಇದರ.!
ಕೆಲವೆಲ್ಲ ಲೆಕ್ಕ ಹಾಕಿ ನೋಡಿಯಪ್ಪಗ ನಿಂಗಳ ಗೋಣಿ ‘ಸ್ತ್ರೀಲಿಂಗ’ ಹೇಳಿ ತೆಕ್ಕೊಳ್ಳೆಕ್ಕಾವ್ತು. ಆದರೆ ‘ಮಾಣಿ’ ಹೇಳ್ವದು ಸ್ತ್ರೀಲಿಂಗ ಅಲ್ಲದ್ದ ಕಾರಣವೂ ನಿಂಗಳ ಆ ಮಾಣಿ ಅದರ ಸ್ತ್ರೀಲಿಂಗಲ್ಲೇ ‘ಗೋಣಿ’ ಹೇಳಿರೆ ಅದರ ಬೆಶಿ ಖಾರ ನಾಟ – ಸಾಕಾಗ ನೋಡಿ . ಆದಕ್ಕಾರಣ ನಿಂಗೊ ತೆಗದು ಮಡುಗಿದ ‘ಗೋಣಿ’ ನಪುಂಸಕ ಹೇಳಿರಷ್ಟೇ ಸಮ ಹೇಳಿ ಇಲ್ಲಿಂದ ಒಪ್ಪ ಪವನಜ ಮಾವ..
ಜಗಳ ಮಾಡುವಾಗ ವ್ಯಾಕರಣದ ಅಗತ್ಯ ಇಲ್ಲೆ. ವ್ಯಾಕರಣ ಸರಿ ಇಲ್ಲದ್ದ ಕಾರಣ, ಕನ್ನಡ ಸರಿಯಾಗಿ ಒದಿದಮೇಲೆ ಜಗಳ ಮಾಡಲೆ ಹೇಳಿ