ಚೂರಿಬೈಲು ದೀಪಕ್ಕನ ಗುರ್ತ ಹೇಳ್ತರೆ ಅಟ್ಟುಂಬೊಳಂದಲೇ ಸುರು ಮಾಡೆಕ್ಕಷ್ಟೆ.
ದೊಡ್ಡಮಾಣಿ ದೊಡ್ಡಕ್ಕನ ಓ ಮೊನ್ನೆ ಗುರ್ತ ಮಾಡುವಗ ಕೆಲಾವು ಜೆನ ಕೇಳಿದವು, ಚೂರಿಬೈಲು ದೀಪಕ್ಕ ಹೇಳಿರೆ ಇದೇ ಹೆಮ್ಮಕ್ಕಳೋ?
ಹೇಳಿಗೊಂಡು. ಅಲ್ಲ, ದೊಡ್ಡಕ್ಕ ದೊಡ್ಡಮಾಣಿಯವು, ದೀಪಕ್ಕ ಚೂರಿಬೈಲಿನವು - ಇಬ್ರಿಂಗೂ ಇಪ್ಪ ಒಂದೇ ಒಂದು ಸಾಮ್ಯತೆ - ಲಟ್ಟಣಿಗೆ!
ಚೂರಿಬೈಲು ಡಾಗುಟ್ರು ಇದ್ದವಲ್ದ, ಅವರ ಎಜಮಾಂತಿ ಈ ದೀಪಕ್ಕ.
ಡಾಕುಟ್ರು ಊರವಕ್ಕೆ ಇಡೀ ಮದ್ದು ಕೊಟ್ಟು ಕೊಟ್ಟು, ಹೊತ್ತಪ್ಪಗ ಮನಗೆ ಬಚ್ಚಿ ಬತ್ತವು!
ಅವಕ್ಕೆ ರುಚಿರುಚಿಯಾದ ಊಟದ ‘ಮದ್ದು’ ಈ ದೀಪಕ್ಕ ಕೊಡುದು!!
ಡಾಗುಟ್ರಿಂಗೆ ಶೀತವೋ - ಗೆಣಮೆಣಸು ಎರಾಡು ಗುದ್ದಿ, ಒಂದು ಚೊಕ್ಕಕೆ ಪಾನಕ ಮಾಡಿ ತಕ್ಕು.
ಡಾಗುಟ್ರಿಂಗೆ ಸೆಮ್ಮವೋ - ಶುಂಟಿ ಗುದ್ದಿ ಒಂದು ಕಷಾಯ ಮಾಡುಗು!
ಒಟ್ಟಿಲಿ ಈ ದೀಪಕ್ಕನ ಡಾಗುಟ್ರ-ಡಾಗುಟ್ರು ಹೇಳಿರೂ ತಪ್ಪಲ್ಲ!
ಅಡಿಗೆಲಿ ಎತ್ತಿದ ಕೈ! ಕಣಿಲೆ ಉಪ್ಪಿನಕಾಯಿಂದ ಹಿಡುದು, ನೀರುಳ್ಳಿ ಪಾಯಿಸದ ಒರೆಂಗೆ ಸಾಮಾನ್ಯ ವಿಶೇಷ, ವಿಚಿತ್ರದ್ದು ಎಲ್ಲವುದೇ ಅರಡಿಗು.
ಯೇವದಾರು ಅನುಪ್ಪತ್ಯಕ್ಕೆ ಅಡಿಗೆಬಟ್ರು ಇವರ ಮನಗೆ ಬಂದರೆ, ಎಂತಾರು ಹೊಸಾ ತಿಂಡಿ ಕಲ್ತುಗೊಂಡು ಹೋಪದು ನಿಘಂಟು.
ಒಪ್ಪಣ್ಣ ದೊಡ್ಡಕ್ಕನಲ್ಲಿಗೆ ಮದ್ಯಾನ್ನಕ್ಕೆ ಹೋದರೆ, ಹೊತ್ತಪ್ಪಗಾಣ ಚಾಯಕ್ಕೆ ದೀಪಕ್ಕನಲ್ಲಿಗೆ ಬಪ್ಪದು ಒಂದೋಂದರಿ!
ಆ ದಿನ ಒಳ್ಳೆತ ಮೈಲೇಜು!!
ಡಾಗುಟ್ರುಬಾವ ಮಣಿಪುರಕ್ಕೆ ಹೋದರೆ, ನಾಲ್ಕೇ ದಿನಲ್ಲಿ ಒಪಾಸು ಬತ್ತವು, ಮನೆ ಅಡಿಗೆ ಉಣ್ಣದ್ದೆ ನಾಲಗೆ ರುಚಿ ಹೋದ್ದಡ!
ಗಣೇಶಮಾವ ಅವರಲ್ಲಿಗೆ ಹೋದರೆ ಸೀತ ಹೋಗಿ ಉಣ್ತಮೇಜಿಂಗೆ ಹತ್ತಿ ಕೂಪದಡ, ಹೋಮದಬುಡಲ್ಲಿ ಬಟ್ಟಮಾವ ಕೂದ ಹಾಂಗೆ!
ಓ ಮೊನ್ನೆ ಅಮೇರಿಕಂದ ಬಂದಿತ್ತಿದ್ದವಂಗೆ, ದೀಪಕ್ಕನಲ್ಯಾಣ ಬಗೆಬಗೆ ತಿಂಡಿಗಳ ಕಂಡು ‘ಆನು ಅಮೇರಿಕಕ್ಕೆ ಒಪಾಸು ಹೋವುತ್ತಿಲ್ಲೇ’ ಹೇಳಿ ಹಟಮಾಡಿದನಡ!
ಅಷ್ಟುದೇ ಡಿಮಾಂಡು, ದೀಪಕ್ಕನ ಅಡಿಗೆಗೆ! ಅಡಿಗೆ ಮಾಂತ್ರ ಅಲ್ಲ, ಈ ದೀಪಕ್ಕಂಗೆ ಎಂತ ಕಂಡ್ರುದೇ ಅದರ್ಲಿ ಹೂಗು ಮಾಡುಗು.
ಡಾಗುಟ್ರುಬಾವಂಗೆ ಪಿಸುರು ಬಪ್ಪದು ಇದಕ್ಕೇ ಇದಾ!
ಮೊನ್ನೆ ಸಂಜೀವಶೆಟ್ಟಿಯಲ್ಲಿಂದ ತಂದ ಟುವ್ವಲು ಪೂರ ಮುಗುತ್ತಡ.
ಮುಗುದ್ದು ಹೇಂಗೆ - ಎಲ್ಲದಕ್ಕುದೇ ಒಂದೊಂದು ರಬ್ಬರುಬೇಂಡು ಸುರುಟಿ, ಎಂತದೋ ಪ್ಲೇಷ್ಟಿಕು ತುಂಡು ಸಿಕ್ಕುಸಿ, ಒಂದು ಹಾಳೆಕಡೆಗೆ ಬಣ್ಣಕೊಟ್ಟದಕ್ಕೆ ಕಟ್ಟಿ - ಹೂದಾನಿಯ ಹಾಂಗೆ ಮಾಡಿ..
- ಡಾಗುಟ್ರಿಂಗೆ ಬೆಗರಿ ಮೋರೆಉದ್ದಲಪ್ಪಗ ಟುವ್ವಲು ಕಾಲಿ!!
ಅದೇನೇ ಇರಳಿ,
ಓ ಮೊನ್ನೆ ದೀಪಕ್ಕ ಮಾಷ್ಟ್ರುಮಾವನಲ್ಲಿಗೆ ಬಂದಿಪ್ಪಗ ಮಾತಾಡ್ಳೆ ಸಿಕ್ಕಿತ್ತು.
‘ಚೂರಿಬೈಲುದೀಪಕ್ಕಾ, ಬೈಲಿಂಗೆ ಬಂದು ಅಡಿಗೆ ಶುದ್ದಿ ಹೇಳು, ವೆಬ್ಸೈಟಿಲಿ ಹಾಕಲೆ!’ ಹೇಳಿದೆ. ಕುಶೀಲಿ ಒಪ್ಪಿ ಕೇಳಿತ್ತು,
"ವೆಬ್ಸೌಟಿಂಗೆ ಹಾಕಿರೆ ಎಂತರ ಗುಣ ಇದ್ದು?" ಹೇಳಿ.
ಸೈಟು ಹೇಳ್ತದರ ಸೌಟು ಹೇಳಿಯೇ ಹೇಳಿದ್ದು ಅದು, ಅಷ್ಟುದೇ ಅಡಿಗೆ ಬಗ್ಗೆ ಆಸಕ್ತಿ!!
ಬನ್ನಿ, ಒಳ್ಳೊಳ್ಳೆ ಅಡಿಗೆ ಹೇಂಗೆ ಮಾಡುದು ಹೇಳುಗು..
ಟುವ್ವಲು ಹೂದಾನಿ ಮಾಡುದು ಹೇಳಿಕೊಡ್ತೋ ಏನೋ, ಹೇಳ್ತರೆ ಕೇಳುವೊ.!
ಅಡಿಗೆ ಮೊದಾಲು ಕಲ್ತುಗೊಂಬ..
ರುಚಿ ಆತೋ - ತಿಂದು ನೋಡಿಕ್ಕಿ ಹೇಳುವೊ..
ಹೇಂಗೂ ಹೆಚ್ಚುಕಮ್ಮಿ ಆದರೆ ಚೂರಿಬೈಲುಡಾಗುಟ್ರು ಇದ್ದವನ್ನೆ!!!
ಮುಂಡಿ ಕೆಸವು ತೊರುಸುತ್ತು.
ನಮ್ಮ ಊರಿಲಿ ಇದರಿಂದಲೂ ಜಾಸ್ತಿ ತೊರುಸುವ ಸುಮಾರು ’ಪಿಳ್ಳೆ’ಗೊ ಇದ್ದವು.
ಅವರ ಎಲ್ಲೋರನ್ನೂ ಒತ್ತಿ ಹಪ್ಪಳ ಮಾಡಿದ್ದರೆ ಗುಣಾಜೆಕುಂಞಿಗೆ ಕೊಶೀ ಆವುತಿತು…… 🙂
ಒಪ್ಪ ಬರೆದ ಎಲ್ಲರಿ೦ಗು ಧನ್ಯವಾದ.
ಪಿಳ್ಳೆ ಹೇಳಿರೆ ಗೆ೦ಡೆಯೇ ಅಲ್ಲದೋ ದೀಪಕ್ಕ?ಮಾಹಿತಿಗೆ ಧನ್ಯವಾದ.
“ಎಲೆಯು ಪತ್ರಡೆಗಾದೆ ಸೆಲೆಯು ಹಪ್ಪಳಕಾದೆ
ನೀನಾರಿಗಾದೆಯೋ ಎಲೆ ಮಾವಾ? ”
ಹೇಳುಗೋ ಕೆಸವಿನ ಸೆಸಿ?
@ನೀನಾರಿಗಾದೆಯೋ ಎಲೆ ಮಾವಾ? .. – ರಘು ಭಾವಾ.. ಎಲ್ಲ ಸರಿ.. ಈ ಎಲೆ ಮಾವ° ಅರು ಹೇಳಿ ಗೊ೦ತಾಯಿದಿಲ್ಲೆನ್ನೆ!! 😉
ಹ,ಹ್ಹಾ..ಎನ್ನನ್ನೆಯೋ?ಅಲ್ಲ ಚೆನ್ನೈಭಾವನನ್ನೋ?
ಕೆಸವಿನ ಗಡ್ಡೆ ಹಪ್ಪಳ-ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಲಿ ಯಶವಂತರ ಅಮ್ಮ ಮಾಡುತ್ತ ಬಗ್ಗೆ ಉಲ್ಲೇಖ ಇದ್ದು. ಆನು ಕಂಡಿದಿಲ್ಲೆ.
ದೀಪಕ್ಕ,ಕೆಸವಿನ ಪಿಳ್ಳೆ ಹೇಳಿದರೆ ಮುಂಡಿ ಗೆಂಡೆಯೋ?ಅಲ್ಲಾ ಕೆಸವು ಸೆಸಿಯ ಗೆಂಡೆಯೋ? ವಿವರಿಸುತ್ತಿರಾ?
ದೀಪಕ್ಕ, ಕೆಸವಿನ ಪಿಳ್ಳೆಯ ಹಪ್ಪ ಮಾಡ್ತ ಬಗೆ ತಿಳುಶಿದ್ದು ಲಾಯಕೆ ಆಯಿದು.. ಮಾಡಿನೋಡೆ ಕಷ್ಟೆ.. 😉
ನಮ್ಮ ಮಡಿಕೇರಿಲ್ಲಿ ಕೆಸವು ಜಾಸ್ತಿ.. ಎನ್ನ ಅಮ್ಮನತ್ರೆ ಹೇಳಿ ನೋಡೆಕ್ಕು ಇದರ ಮಾಡ್ಲೆ…
ತಿಳಿಸಿದ್ದಕ್ಕೆ ಧನ್ಯವಾದ ಅಕ್ಕ..
ಬೆಶಿಲು ಬ೦ದಪ್ಪಗ ಮಡಗಿದರತು.
ಬೋಸ ಭಾವಂಗೆ ಮಜ್ಜಿಗೆಲಿ ತೊಳೆಯದ್ದರು ತೊರುಸ.
ಮೃದು ಅಪ್ಪಲೆ ಒ೦ದು ಹಿಡಿ ಅವಲಕ್ಕಿ ಹಾಯೆಕ್ಕು.
ಊಟಂದ ಮದಲೆಯೋ ಅಥವ ಊಟದ ನಂತ್ರವೋ ಹೇಳಿ ನಿ೦ಗೊಗೆ ಪುರುಸೊತ್ತು ಇಪ್ಪ ಹಾ೦ಗೆ.
ಚೆನ್ನೈ ಭಾವಂಗೆ ಇನ್ನೂ ಒಂದು ಸಂಶಯ ಇದ್ದಡ ದೀಪಕ್ಕ.. ಪುನಃ ಪುನಃ ಪ್ರಶ್ನೆ ಕೇಳಿಯಪ್ಪಗ ನಿಂಗೊ ಬೈಯುವಿ ಹೇಳಿ ಗ್ರೇಶಿ ಅದರ ಕೇಳ್ಳೆ ಎನ್ನತ್ರೆ ಹೇಳಿದ್ದವು.
ಅವರ ಪ್ರಶ್ನೆ- “ಕೆಸವಿನ ಪಿಳ್ಳೆ ಭಾಗಂಗಳ ಕಡದಿಕ್ಕಿ ಬೇಯಿಶುದು ಎಂತಕೆ? ಬೇಯಿಶಿಕ್ಕಿ ಕಡದರೆ ಏಕೆ ಆಗ? ಅದು ಸುಲಬ ಅಲ್ಲದೊ?” ಹೇಳಿ. ಇದಕ್ಕೆ ಉತ್ತರ ನಿಂಗಳೇ ಹೇಳೆಕ್ಕಷ್ಟೆ 😉
ಈ ಶುದ್ದಿಯ ಹಕ್ಕು ಮಾಂತ್ರ ನಿಂಗಳ ಕೈಲಿ ಇಪ್ಪದೊ ಅಲ್ಲ ಹಪ್ಪಳ ತಿಂಬ ಹಕ್ಕೂ ನಿಂಗೊಗೇ ಇಪ್ಪದೋ ಹೇಳಿ ಅಧ್ವೈತ ಕೀಟಣ್ಣ ಒಂದರಿ ತಿಳಿಸಿದರೆ ತಿಂದು ನೋಡ್ಳಕ್ಕು.( ಅಲ್ಲದ್ದರೆ ಚೆನ್ನೈ ಭಾವ ಸುಮ್ಮನೆ ಬಿಡವು..!)
ಹೊಸ ರುಚಿ ಒಂದರ ಎಂಗೊಗೆ ತಿಳಿಸಿದ್ದಕ್ಕೆ ಧನ್ಯವಾದ ಅಕ್ಕ.
[ ಹಾಕಿ ಬೆಶಿಲಿಲ್ಲಿ ಒಣಗುಸುವದು.(ಮೂರು ದಿನ) ] – ಎರಡನೇ ದಿನ ಮಳೆ ಬಂದರೆ ಹೇಳಿ ಒಬ್ಬಂಗೆ ಸಂಶಯಡ .!
-ಇದಕ್ಕೆ ಕೂಡ್ಳೆ ..?!
-ಬೋಸ ಭಾವಂಗೆ ಬೇಡಡಾ – ತೊರುಸುಗಡ!!
-ಮೃದು ಅಪ್ಪಲೆ ಎಂತ ಹಾಕೆಕು ಗೊಂತಾಯ್ದಿಲ್ಲೆ ದೀಪಕ್ಕ.!!!
-ಇದು ಊಟಂದ ಮದಲೆಯೋ ಊಟದ ನಂತ್ರವೋ ಹೇಳಿ ತೆಕ್ಕುಂಜ ಕುಮಾರಣ್ಣನ್ಗೆ ಒರಕ್ಕೇ ಬಯಿಂದಿಲ್ಲೆಡ .!
-ಮಾಡಿ ಕೊಟ್ರೆ ತಿಂದಿಕ್ಕಿ ಹೇಳ್ಳಕ್ಕು ಹೇಳಿ ಅಜ್ಜಕಾನ ಭಾವ.!!
– ಅಂತೂ ನಿಂಗೊ ಮಾಡಿದ್ದು ಪಟಲ್ಲಿ ಒಪ್ಪ ಆಯ್ದು ಹೇಳಿ ನಮ್ಮಲ್ಲಿಂದ ಒಪ್ಪ.