Oppanna.com

ತೋಟಕಾಷ್ಟಕಮ್

ಬರದೋರು :   ಬಟ್ಟಮಾವ°    on   30/06/2011    17 ಒಪ್ಪಂಗೊ

ಬಟ್ಟಮಾವ°

ಆದಿಗುರು ಶಂಕರಾಚಾರ್ಯರ ಅನೇಕ ಶಿಷ್ಯರ ಪೈಕಿ ಆನಂದಗಿರಿ ಹೇಳಿ ಒಬ್ಬ ಇತ್ತಿದ್ದನಾಡ. ಕಲಿಯುವಿಕೆಲಿ ಅಷ್ಟಾಗಿ ಚುರುಕ್ಕಿಲ್ಲದ್ದವಂಗೆ ಶಂಕರಾಚಾರ್ಯರೇ ನೇರವಾಗಿ ಜ್ಞಾನವರ್ಗಾವಣೆ ಮಾಡಿದ್ದಡ.
ಮುಂದೆ ಆ ಶಿಷ್ಯ ಮಹಾಜ್ಞಾನಿಯಾಗಿ ಶಿಷ್ಯೋತ್ತಮರಾದವಡ. ಅವ್ವೇ ’ತೋಟಕಾಚಾರ್ಯ’ರು.
ಇವು ಶಂಕರಾಚಾರ್ಯರನ್ನೂ, ಶಂಕರನಾದ ಶಿವನನ್ನೂ ಒಟ್ಟಿಂಗೆ ಹಾಡಿಹೊಗಳುಲೆ ರಚನೆ ಮಾಡಿದ ಈ ಎಂಟು ಶ್ಲೋಕದ ಕಾವ್ಯವೇ ತೋಟಕಾಷ್ಟಕ ಹೇಳಿ ಪ್ರಸಿದ್ಧಿ ಆತು.
ವಿಶೇಷವಾದ ರಾಗಲ್ಲಿಪ್ಪ ಇದರ ಛಂದಸ್ಸಿಂಗೆ “ತೋಟಕವೃತ್ತ” ಹೇಳ್ತವು. (ಸುಪ್ರಭಾತದ ರಾಗ)
ಬೈಲಿನ ಎಲ್ಲೋರುದೇ ಇದರ ಕಲ್ತು ಸದುಪಯೋಗ ಮಾಡಿಗೊಳೇಕು ಹೇಳ್ತದು ಕೋರಿಕೆ.

ತೋಟಕಾಷ್ಟಕಮ್:

ವಿದಿತಾಖಿಲ ಶಾಸ್ತ್ರಸುಧಾ ಜಲಧೇ
ಮಹಿತೋಪನಿಷತ್ ಕಥಿತಾರ್ಥ ನಿಧೇ |
ಹೃದಯೇ ಕಲಯೇ ವಿಮಲಂ ಚರಣಂ
ಭವ ಶಂಕರ ದೇಶಿಕ ಮೇ ಶರಣಮ್ || 1 ||

ಕರುಣಾ ವರುಣಾಲಯ ಪಾಲಯ ಮಾಂ
ಭವಸಾಗರ ದುಃಖ ವಿದೂನ ಹೃದಮ್ |
ರಚಿತಾಖಿಲ ದರ್ಶನ ತತ್ವಮಿದಂ
ಭವ ಶಂಕರ ದೇಶಿಕ ಮೇ ಶರಣಮ್ || 2 ||

ಭವತಾ ಜನತಾ ಸುಹಿತಾ ಭವಿತಾ
ನಿಜಬೋಧ ವಿಚಾರಣ ಚಾರುಮತೇ |
ಕಲಯೇಶ್ವರ ಜೀವ ವಿವೇಕಮಿದಂ
ಭವ ಶಂಕರ ದೇಶಿಕ ಮೇ ಶರಣಮ್ || 3 ||

ಭವ ಏವ ಭವಾನಿತಿ ಮೇ ನಿತರಾಂ
ಸಮಜಾಯತ ಚೇತಸಿ ಕೌತುಕಿತಾ |
ಮಮವಾರಯ ಮೋಹಮಹಾಜಲಧಿಂ
ಭವ ಶಂಕರ ದೇಶಿಕ ಮೇ ಶರಣಮ್ || 4 ||

ಸುಕೃತೇ‌ಧಿಕೃತೇ ಬಹುಧಾ ಭವತೋ
ಭವಿತಾ ಸಮದರ್ಶನ ಲಾಲಸತಾ |
ಅತಿ ದೀನಮಿಮಂ ಪರಿಪಾಲಯ ಮಾಂ
ಭವ ಶಂಕರ ದೇಶಿಕ ಮೇ ಶರಣಮ್ || 5 ||

ಜಗತೀಮವಿತುಂ ಕಲಿತಾಕೃತಯೋ
ವಿಚರಂತಿ ಮಹಾಮಹ ಸಶ್ಚಲತಃ |
ಅಹಿಮಾಂಶುರಿವಾತ್ರ ವಿಭಾಸಿ ಗುರೋ
ಭವ ಶಂಕರ ದೇಶಿಕ ಮೇ ಶರಣಮ್ || 6 ||

ಗುರುಪುಂಗವ ಪುಂಗವಕೇತನ ತೇ
ಸಮತಾಮಯತಾಂ ನ ಹಿ ಕೋಪಿ ಸುಧೀಃ |
ಶರಣಾಗತ ವತ್ಸಲ ತತ್ತ್ವನಿಧೇ
ಭವ ಶಂಕರ ದೇಶಿಕ ಮೇ ಶರಣಮ್ || 7 ||

ವಿದಿತಾ ನ ಮಯಾ ವಿಶದೈಕ ಕಲಾ
ನ ಚ ಕಿಂಚನ ಕಾಂಚನಮಸ್ತಿ ಗುರೋ |
ದೃತಮೇವ ವಿಧೇಹಿ ಕೃಪಾಂ ಸಹಜಾಂ
ಭವ ಶಂಕರ ದೇಶಿಕ ಮೇ ಶರಣಮ್ || 8 ||

~*~*~*~

ಸೂ:

  • ತೋಟಕವೃತ್ತದ ಒಂದುಶ್ಲೋಕದ ಒಂದು ಗೆರೆಗೆ ಹನ್ನೆರಡಕ್ಷರ – ಹದಿನಾರು ಮಾತ್ರೆಗೊ. (ಒಂದು ಗೆರೆಗೆ ನಾಲ್ಕು “ಸ”ಗಣದ ಗುಂಪುಗೊ).
  • ಚಿತ್ರಕೃಪೆ: ಅಂತರ್ಜಾಲ

ತೋಟಕಾಷ್ಟಕಮ್ ಕೇಳೆಕಾರೆ ಇಲ್ಲಿದ್ದು:

17 thoughts on “ತೋಟಕಾಷ್ಟಕಮ್

  1. ಎ೦ಗಳ ಊರಿಲ್ಲಿ ಎಡನ್ನೀರು ಮಠ ಇದ್ದು.ಅವ್ವು ತೋಟಕಾಚಾರ್ಯರ ಪರ೦ಪರೆಯವು ಹೇಳ್ತವು.ಶಿವಳ್ಳಿಯವರ ಪೈಕಿ ಬಹುಶಃ ಶ೦ಕರಾಚಾರ್ಯರ ಶಿಷ್ಯವರ್ಗಕ್ಕೆ ಸೇರಿದವು ಇವ್ವು ಮಾ೦ತ್ರ..ಇದರ ಬಗ್ಯೆ ಹೆಚು ವಿವರುಸುತ್ತಷ್ಟು ಎನಗೆ ಗೊ೦ತಿಲ್ಲೆ.ಭಟ್ಟ ಮಾವ೦ನೇ ಹೇಳೇಕಷ್ಟೆ.ಒಪ್ಪ೦ಗಳೊಟ್ಟಿ೦ಗೆ.

  2. ಹರೇರಾಮ ಬಟ್ಟಮಾವ°,

    ನಿಂಗೋ ತುಂಬಾ ಪುರುಸೋತ್ತಿಲಿ ಇದ್ದಿ ಹೇಳಿ ಮನ್ನೆ ಒಪ್ಪಣ್ಣ ಹೇಳಿತ್ತಿದ್ದ°. ಆದರೂ ಅಂಬೇರ್ಪಿಲಿ ಇದ್ದಿರೋ ಹೇಳಿ ತೋರ್ತು!!!

    ಶ್ರೀ ಶಂಕರಾಚಾರ್ಯರ ಯೋಗ್ಯ ಶಿಷ್ಯ ಶ್ರೀ ತೋಟಕಾಚಾರ್ಯರ ಬಗ್ಗೆ ಒಂದು ಚೆಂದದ ಕತೆ ಎನಗೆ ಕಳುದ ಸರ್ತಿ ಸಿಕ್ಕಿಪ್ಪಗ ಹೇಳಿದ್ದಿ. ಇದರಲ್ಲಿ ಬರವಲೆ ಅಪ್ಪಗ ಪುರುಸೋತ್ತಾಗದ್ದ ಹಾಂಗೆ ಕಾಣ್ತು!!! 🙁

    ಆದರೂ ಬೈಲಿಂಗೆ ಒಂದು ಅಮೂಲ್ಯ ಸ್ತೋತ್ರ ಕೊಟ್ಟದಕ್ಕೆ ಮನಸಾ ಧನ್ಯವಾದಂಗೋ.
    ಶ್ರೀ ತೋಟಕಾಚಾರ್ಯರ ಮೇರು ವ್ಯಕ್ತಿತ್ವ, ಗುರು ಭಕ್ತಿ ಎಲ್ಲೋರಿಂಗೂ ಮಾದರಿ ಆಗಲಿ..

    ಧನ್ಯವಾದ.
    ಹರೇ ರಾಮ.

  3. ತುಂಬಾ ಧನ್ಯವಾದಂಗೊ..

  4. ಬಟ್ಟಮಾವಂಗೆ ಧನ್ಯವಾದಂಗೊ.

    ಎರಡನೇ ಶ್ಲೋಕದ ‘ತತ್ತ್ವಮಿದಂ’ ಮತ್ತೆ ಮೂರನೇ ಶ್ಲೋಕದ ‘ವಿವೇಕಮಿದಂ’ ಈ ಎರಡು ಶಬ್ದಂಗೊ ‘ತತ್ತ್ವವಿದಂ’ ‘ವಿವೇಕವಿದಂ’ ಹೇಳಿ ಅಲ್ಲದೊ ಆಯೆಕ್ಕಾದ್ದದು? ಅಥವಾ ಎರಡು ಪ್ರಯೋಗಂಗಳೂ ಸರಿಯೋ?

    1. ಒಂದು ಅಪರೂಪದ ಶ್ಲೋಕ ಸಂಗ್ರಹ ಭಟ್ಟ ಮಾವನ ಸಂಗ್ರಹಂದ ಸಿಕ್ಕಿತ್ತು. ಹಾಂಗೇ ಅದರ ಆಡಿಯೋ ಕೊಟ್ಟದು ಕೇಳುವಾಗ ತುಂಬಾ ಕೊಶೀ ಆವುತ್ತು.
      ತತ್ತ್ವಮಿದಂ= ತತ್+ತ್ತ್ವಂ+ ಇದಂ, ವಿವೇಕಮಿದಂ= ವಿವೇಕಂ+ ಇದಂ ಹೇಳಿ ತೆಕ್ಕೊಂಡರೆ ಸರಿ ಆವ್ತಲ್ಲದಾ

      1. ಶರ್ಮಪ್ಪಚ್ಚೀ, ನಿಂಗೊ ಹೇಳಿದಾಂಗೆ ಪದವಿಭಜನೆ ಮಾಡ್ಲೆ ಎಡಿತ್ತು ನಿಜ. ಆದರೆ ಇಲ್ಲಿ ಆ ರೀತಿ ತೆಕ್ಕೊಂಡ್ರೆ ಸಮಂಜಸ ಆವ್ತಿಲ್ಲೆ. ಆ ಶಬ್ದಂಗೊ ಶ್ರೀ ಶಂಕರ ಭಗವತ್ಪಾದರ ಗುಣವಿಶೇಷಂಗಳ ಉದ್ದೇಶಿಸಿ ಬರದ್ದದು ಹೇಳಿ ಎನ್ನ ಅಭಿಮತ. ಹಾಂಗಾಗಿ ಇಲ್ಲಿ ‘ವಿದಂ’ ಹೇಳುದು ತಿಳುದವ/ಹೊಂದಿದವ/ಜ್ಞಾನಿ ಹೇಳ್ತ ಅರ್ಥಲ್ಲಿ ಬಯಿಂದು. ವಿವೇಕವಿದಂ=ವಿವೇಕ ಹೊಂದಿದವ, ತತ್ತ್ವವಿದಂ=ತತ್ತ್ವ ತಿಳುದವ (ಮೂಲ ಧಾತು ‘ವಿದ್’. ‘ವೇದ’ ಶಬ್ದಕ್ಕೂ ಇದೇ ಮೂಲ)
        ಸಾಲದ್ದಕ್ಕೆ ಸುಬ್ಬಮ್ಮಜ್ಜಿಯೂ ಹಾಡುವಗ ಸ್ಪಷ್ಟವಾಗಿ ತತ್ತ್ವ’ವಿದಂ’/ವಿವೇಕ’ವಿದಂ’ ಹೇಳಿಯೇ ಹಾಡಿದ್ದು..!!

        ಅದೆಲ್ಲ ಅಪ್ಪೂ… ಈ ಬಟ್ಟಮಾವ ಏಕೆ ಮಾತೇ ಆಡ್ತವಿಲ್ಲೆ..?? ಚಂದ್ರಶೇಖರಾಷ್ಟಕದ ಬಗ್ಗೆಯೂ ಎನ್ನ ಜಿಜ್ಞಾಸೆ ಇತ್ತು. ಅದಕ್ಕೂ ಬಟ್ಟಮಾವ ಉತ್ತರ ಕೊಟ್ಟಿದವಿಲ್ಲೆ. 🙁

  5. ಸುಬ್ರಹ್ಮಣ್ಯದ ವೇದ ಪಾಠಶಾಲೆಲಿ ಕಲಿತ್ತಾ ಇಪ್ಪಗ ಇದರ ಕಲುತ್ತ ನೆಂಪು..
    ಅವಗ ಗಣೇಶ ಗುರುಗೊ ಇದನ್ನೇ ಕೇಳಿತ್ತಿದ್ದವು ಪರೀಕ್ಷೆಲಿ.. ಗೊಂತಿದ್ದದೂ ಇದೊಂದೇ;)

    1. [ಕಲಿತ್ತಾ ಇಪ್ಪಗ ಇದರ ಕಲುತ್ತ ನೆಂಪು..] – ನಿಂಗೊ ಹೀಂಗೆ ಹೇಳಿಯಪ್ಪಗ ಈಗ ಇದು ನೆಂಪಿದ್ದೋ ಮರದ್ದೋ ಹೇಳಿ ಡೌಟು ಬತ್ತನ್ನೇ ಮಂಗ್ಳೂರ ಭಾವ!!

  6. ನಮ್ಮ ಸಂಗ್ರಹಕ್ಕೆ ಭಟ್ಟಮಾವನ ಉತ್ತಮ ಇನ್ನೊಂದು ಕೊಡುಗೆ ಇದು. ಧನ್ಯವಾದಂಗಳು.

  7. {ವಿಚರಂತಿ ಮಹಾಮಾಹ ಸಶ್ಚಲತಃ } – ಈ ಗೆರೆಲಿ ಏನೋ ತಪ್ಪಿದ್ದಾ..? ಹಾಡುವಾಗ ಸರಿ ಬತ್ತಿಲೆ.

    1. ಕುಮಾರಣ್ಣಂಗೆ ಸಂದೇಹ ಬಂದದು ಸಹಜ. ಏಕೆ ಹೇಳಿರೆ ನಾವೆಲ್ಲ ಮಾಮೂಲಿಯಾಗಿ ವಿಸರ್ಗ ಉಚ್ಚಾರಣೆ ಮಾಡುವಗ ‘ಹ’ ಹೇಳಿ ಪೂರ್ಣಾಕ್ಷರವ ಉಪಯೋಗಿಸುತ್ತು. ಆದರೆ ಶಾಸ್ತ್ರೀಯವಾಗಿ ಅದರ ‘ಹ್’ ಹೇಳಿ ಅಲ್ಲದೋ ಉಚ್ಚಾರ ಮಾಡೆಕ್ಕಾದ್ದದು? ಇದರಲ್ಲಿ ಕೃತಿ ರಚನೆಕಾರರದ್ದು ಎಂತದೂ ದೋಷ ಇಲ್ಲೆ.
      ಇಲ್ಲಿ ಕುಮಾರಣ್ಣಂಗೆ ಹಾಡುವಗ ಅಡಚಣೆ ಬಪ್ಪಲೂ ಅದೇ ಕಾರಣ. ಅದರ ‘ಸಶ್ಚಲತಹ’ ಹೇಳಿ ಅಲ್ಲ; ‘ಸಶ್ಚಲತಹ್’ ಹೇಳಿ ಬದಲುಸಿ ನೋಡಿ- ಹಾಡುವಾಗ ಸರೀ ಬತ್ತು.

      1. ಶುರುವಿಲಿ “ಮಹಾಮಾಹ” ಇದ್ದದರ ಪ್ರದೀಪಣ್ಣ ಸರಿಮಾಡಿದ್ದವು – “ಮಹಾಮಹ”. ಈಗ ಸರಿ ಬತ್ತು.
        ಧನ್ಯವಾದ ಇಬ್ರಿಂಗೂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×