Oppanna.com

ಕುದುರೆಮುಖ – ಧರೆಗಿಳುದ ಸ್ವರ್ಗ

ಬರದೋರು :   ದೀಪಿಕಾ    on   16/07/2011    64 ಒಪ್ಪಂಗೊ

ದೀಪಿಕಾ

ಕಾಯರ್ಪಾಡಿ ಅತ್ತೆ, ತಲೆಂಗಳ ವಿನಯತ್ತೆಯ ಬಗ್ಗೆ ಬೈಲಿಲಿ ಅಂಬಗಂಬಗ ಶುದ್ದಿ ಬಯಿಂದು.
ಆದರೆ ಈ ದೀಪಿ ಅಕ್ಕನ ಬಗ್ಗೆ ಮಾತಾಡಿದ್ದೋ – ರಜ ಕಮ್ಮಿಯೇ.
ಮಾತಾಡುದಾದರೂ ಹೇಂಗೆ? – ಒರಿಶ ಪೂರ್ತಿ ಇವು ಅಂಬೆರ್ಪು. ಅಮ್ಮನ ಬಗ್ಗೆ ಪದ್ಯ ಬರದ ಕೂಚಕ್ಕ ಇಲ್ಲೆಯೋ – ಚೈತು ತಂಗೆ, ಅವರ ದೊಡ್ಡಮ್ಮನ ಮಗಳು ಅಕ್ಕ, ಈ ದೀಪಿಅಕ್ಕ.
ಕ್ಲಾಸು ಇಪ್ಪ ಸಮೆಯಲ್ಲಿ ಇಂಜಿನಿಯರು ಕಲಿತ್ತವು, ಕ್ಲಾಸು ಬಿಟ್ಟಕೂಡ್ಳೆ ಭರತನಾಟ್ಯ ಕಲಿತ್ತವು.
ಇಂಜಿನಿಯರು ಅಪ್ಪಲೆ ಬೇಕಾದಾ ವಿಜ್ಞಾನಶಾಸ್ತ್ರದ ಸೂತ್ರಂಗೊ ಹೇಂಗೆ ಬಾಯಿಪಾಟವೋ – ಭರತನಾಟ್ಯದ ಹಸ್ತಮುದ್ರೆಗಳೂ ಅಷ್ಟೇ ಕರಗತ!
ಅಪುರೂಪಕ್ಕೊಂದರಿ ಕೆಲವು ಶುದ್ದಿಗೊಕ್ಕೆ ಒಪ್ಪ ಪ್ರೋತ್ಸಾಹ ಕೊಟ್ಟುಗೊಂಡು, ಬೈಲಿನ ಒಡನಾಟಲ್ಲೇ ಇದ್ದಿದ್ದವು.

ಬನ್ನಿ, ಬೈಲಿಲಿ ಒಂದಾಗಿ, ಅಪುರೂಪದ ಶುದ್ದಿಗಳ ವಿವರುಸಿ ಕೊಡಿ ಹೇಳಿ ಒಪ್ಪಣ್ಣ ಕೇಳಿದ್ದಕ್ಕೆ ಸಂತೋಷಲ್ಲಿ ಒಪ್ಪಿಗೊಂಡಿದವು.
ಕಲಿಯುವಿಕೆ ಎಡೇಲಿಯೂ ಬೈಲಿಂಗೆ ಬಂದು ಶುದ್ದಿ ಹೇಳುವ ಆಸಕ್ತಿ ದೀಪಿ ಅಕ್ಕಂದು.
ಎಲ್ಲೋರುದೇ ಪ್ರೋತ್ಸಾಹ ಕೊಟ್ಟು, ಕಲಿತ್ತ ಅಕ್ಕಂಗೆ ಬರೆತ್ತ ಹವ್ಯಾಸ ಬೆಳೆತ್ತ ಹಾಂಗೆ ಮಾಡೇಕು ಹೇಳ್ತದು ಕೋರಿಕೆ
ದೀಪಿಅಕ್ಕನ ಮೋರೆಪುಟ: ಸಂಕೊಲೆ
~
ಗುರಿಕ್ಕಾರ°

ಬೈಲಿನೊರಿ೦ಗೆಲ್ಲಾ ನಮಸ್ಕಾರ!!
ಓ ಮೊನ್ನೆ ಕೆಲವು ಹಳೇ ಪಟ೦ಗಳ ನೋಡುವಾಗ ಹಳೇ ನೆನಪುಗ ಕಣ್ಣಮು೦ದೆ ಬ೦ತು – ಏಕೆ ಅದರೆಲ್ಲಾ ಬೈಲಿನೊರೊಟ್ಟಿ೦ಗೆ ಹ೦ಚಿಗೊ೦ಬಲಾಗ ಹೇಳಿ ಆತು.

ಕುದುರೆಮುಖ ಹೇಳುವ ಒ೦ದು ಸಣ್ಣ ಊರಿಲಿ ಇತ್ತದು ಎ೦ಗ ಮೊದಲು.  ಇದರ  ಪೇಟೆ ಹೇಳುದಾ ಹಳ್ಳಿ ಹೇಳುದಾ ಗೊ೦ತಾವ್ತಿಲ್ಲೆ; ಏಕೆ ಹೇಳಿರೆ  – ಪೇಟೆಯ ಸೌಲಭ್ಯ೦ಗ, ಹಳ್ಳಿಯ ವಾತವರಣ – ಅಲ್ಲ್ಯಾಣದ್ದು.|
ಕುದುರೆಮುಖ ಹೇಳಿ ಇಲ್ಲಿಗೆ ಹೆಸರು ಹೇ೦ಗೆ ಬ೦ತಪ್ಪ ಹೇಳಿರೆ ತು೦ಬಾ ವರ್ಷದ ಹಿ೦ದೆ ಸ೦ಪತ್ ಐಯ೦ಗಾರ್  ಹೆಳುವೊರು ಅಲ್ಲಿಯಾಣ ಸುತ್ತಮುತ್ತಲ್ನ ಗುಡ್ಡೆಲಿ ಹೋಪಗ ಒ೦ದು ಗುಡ್ಡೆಯ ಆಕಾರ ಕುದುರೆಯ ಮೋರೆಯಾ೦ಗೆ ಕ೦ಡತ್ತಡ.
ಹಾ೦ಗಾಗಿ “ಮಲ್ಲೇಶ್ವರ” ಹೇಳಿ ಇತ್ತ ಹೆಸರು “ಕುದುರೆಮುಖ” ಹೆಳಿ ಆತು.

ಮೂಲತಹ ಭೊಮಿಲಿ ಅಡಗಿಪ್ಪ ಖನಿಜ ಸ೦ಪತ್ತಿನ ಹೆರ ತೆಗವ ಕೆಲಸ ಮಾಡುವ ಸ೦ಸ್ಥೆ  ಕೆ.ಐ.ಓ.ಸಿ.ಎಲ್ (Kudremukh Iron Ore Company Ltd.) ಇಲ್ಲಿ ಇಪ್ಪದು.
ಕುದುರೆಮುಖ ಒ೦ದು ಸಣ್ಣ ಊರು ಆದರುದೆ, ಒ೦ದು ಸಣ್ಣ ಭಾರತವೆ ಅಲ್ಲಿ ಕಾ೦ಬಾ೦ಗಿತ್ತು..
ಹತ್ತರಾಣ ಮನೆಯೊರು ತಮಿಳು ಮಾತಡುವೊರಾದರೆ, ಕೆಳಾಣ ಮನೆಯೊರು ಒರಿಯ,ಹಿ೦ದಾಣ ಮನೆಯೊರು ಗುಜರಾತಿ,ಎದುರಾಣ ಮನೆಯೊರು ಕಶ್ಮಿರಿ ಹೀ೦ಗೆಲ್ಲ… ಅ೦ದು ಒಟ್ಟಾರೆ ೧೫೦೦ ಕುಟು೦ಬ೦ಗ ಇದ್ದ ಊರಗಿತ್ತು.
ಎಲ್ಲೊರು ಆ ಕ೦ಪೆನಿಲಿ ಕೆಲಸ ಮಾಡುವೊರೇ.
ಬೇರೆ ಹೆರಾಣೊರು ಆರು ಇರವು. ಹೀ೦ಗೆ ಕ೦ಪೆನಿ ಗಣಿಗಾರಿಕೆ ಮು೦ದೊರ್ಸಿಗೊ೦ಡಿತ್ತು , ಕಾರ್ಮಿಕರುದೇ ನೆಮ್ಮದಿಲಿ  ಸಂತೃಪ್ತಿಲಿ ಇತ್ತವು.

ಆನು ಸುರೂ ಅಲ್ಲಿಗೆ ಹೋದದಿನ ಆ ಊರಿನೊರೆಲ್ಲಾ ಪಟಾಕಿ ಹೊಟ್ಟುಸಿ ಸ್ವಗತ ಮಾಡಿದವು ಹೇಳಿ ಅಮ್ಮ ಏವಗಳು ನೆಗೆಮಾಡ್ಲಿದ್ದು (ಏಕೆ ಹೇಳಿರೆ ಅದು ದೀಪವಳಿಯ ದಿನ ಆಗಿತ್ತಡ 🙂 ).
ಎಲ್ಲಾ ಹಬ್ಬ೦ಗಳ ಇಲ್ಲಿ ಎಲ್ಲೋರು ಒಟ್ಟುಸೇರಿ ಆಚರ್ಸಿಯೊ೦ಡಿತ್ತದು.

ಮಕ್ಕಳ ವಿಧ್ಯಾಭ್ಯಾಸಕ್ಕೆ ಹೇಳಿ ಕ೦ಪೆನಿ ಅಲ್ಲಿ ಒ೦ದು ಕೆ೦ದ್ರೀಯ ವಿದ್ಯಾಲಯವ ನಡೆಶಿಗೊ೦ಡಿತ್ತು.
ಕ್ರೀಡೆ ಮತ್ತೆ ಬೇರೆ ಮನೋರ೦ಜನೆಗೆ ಹೇಳೀ ಒ೦ದು Recreation Club ಇತ್ತು.
ಹೆಮ್ಮಕ್ಕಳ ಒ೦ದು ಮಹಿಳಾ ಸಮಿತಿ ಇತ್ತು.
ತಿ೦ಗಳಿ೦ಗೊ೦ದರಿ ಅವರ ಮೀಟಿ೦ಗು,ಎ೦ಗೊಗೆಲ್ಲಾ ಆವಗ ಹೆರ ಆಡುವ ಗೌಜಿ 🙂

ವಾರಕ್ಕೊ೦ದರಿ ನಡೆಸಿಗೊ೦ಡಿತ್ತ  ಹೌಸಿ ಹೌಸಿ ಆಟ, ವರ್ಷಕ್ಕೊ೦ದರಿ ನಡೆಸಿಗೊ೦ಡಿತ್ತ  ಕ್ಲಬ್ ಡೇ, ಹೊಸ ವರ್ಷದ ಆಚರಣೆ, ಕ೦ಪೆನಿ ಡೇ,ಪಾರ್ಕ್ ಡೇ(ಇದು ಎ೦ಗೊಗೆಲ್ಲಾ ಒ೦ದು ಜಾತ್ರೆ ಹಾ೦ಗೆ 🙂 ).
ಅಲ್ಲಿಯಾಣ ಮಳೆಗಾಲ- ಆಕಾಶ ಒಟ್ಟೆ ಆದಾ೦ಗೆ ಸುರಿವ ಮಳೆ, ಅದರೊಟ್ಟಿ೦ಗೆ ಉ೦ಬುಳುಗಳ ಕಾಟ, ಮತ್ತೆ ಉಪ್ಪು ಹಾಕಿ ಅದರ ಬೀಳ್ಸುವ ಗೌಜಿ ಇದರೆಲ್ಲ ಮರವಲೇ ಎಡಿಯ…
ಹೀ೦ಗೆಲ್ಲಾ ಅಲ್ಲಿಯಾಣ ಜೆನ೦ಗ ಖುಷಿಲಿ ಇತ್ತವು.

ಆದರೆ ೨೦೦೫ ದೆಸೆ೦ಬರ್ ೩೧,ಅಲ್ಲಿಯಾಣೊರಿ೦ಗೆಲ್ಲಾ ಮರವಲೆಡಿಯದ್ದ ದಿನ.
ಇನ್ನು ಗಣಿಗಾರಿಕೆ ನಿಲ್ಲುಸೆಕ್ಕು” ಹೇಳಿ ಸುಪ್ರೀಮ್ ಕೋರ್ಟ್ ಆದೇಶ ಕೊಟ್ಟತ್ತು. ಈ ಪರಿಸರವಾದಿಗ ಎಲ್ಲ ಸೇರಿ ಕ೦ಪೆನಿ ಅಲ್ಲ್ಯಾಣ ಪರಿಸರವ ಹಾಳು ಮಾಡ್ತು ಹೇಳಿ ದೂರು ಕೊಟ್ಟಿತ್ತಿದ್ದವಡ್ಡ.
ಇಲ್ಲಿ ನೇಲ್ಸಿದ ಪಟ೦ಗಳ ನೊಡಿರೆ ನಿ೦ಗೊಗೇ ಗೊ೦ತಕ್ಕು  ಅಲ್ಲ್ಯಾಣ ಪರಿಸರ ಹೇ೦ಗಿದ್ದು ಹೇಳಿ 🙂 .
ಆ ಪರಿಸರವಾದಿಗ ಎಲ್ಲ  ದೂರು ಕೊಡುವ ಮದಲು ಈ ಬೆ೦ಗ್ಳೂರಿನ೦ತ ಪೇಟೆಯ  ನೋಡಿತ್ತವಿಲ್ಲೇ ಹೇಳಿ ಕಾಣ್ತು ;-).
ಅಲ್ಲಿಯಾಣ ಗಾಳಿ,ನೀರು ಎಲ್ಲಾ ಎಷ್ಟು ಶುದ್ಧ ಹೇಳಿರೆ ಅಲ್ಲಿ ಇಪ್ಪೊರಿ೦ಗೇ ಗೊ೦ತು. ಇಲ್ಲಿ ನಲ್ಲಿಲಿ ಬಪ್ಪ ನೀರಿನ ಸೀದ ಕುಡುದರೆ ಮರದಿನ ಮದ್ದು ಕುಡಿಯಕ್ಕಕ್ಕು 😉 ಆದರೆ ಅಲ್ಲಿ ಹಾ೦ಗಲ್ಲ.

ಸುಪ್ರೀಮ್ ಕೋರ್ಟ್ ನ ಆದೆಶದಾ೦ಗೆ ಅಲ್ಲಿ ಗಣಿಗಾರಿಕೆ ನಿಲ್ಸಿಆತು.
ಮತ್ತೆ ಬೇರೆ ದಿಕ್ಕ೦ದ ಕಬ್ಬಿಣ ಅದಿರು ಮ೦ಗ್ಳುರಿ೦ಗೆ ತರ್ಸಿ ಕೆಲಸ ಮು೦ದೊರ್ಸುತ್ತಾ ಇದ್ದು. ಆದ ಕಾರಣ ಕುದುರೆಮುಖಲ್ಲಿ ಇತ್ತ ಜೆನ೦ಗಳೆಲ್ಲ ಮ೦ಗ್ಳೂರು, ಬೆ೦ಗ್ಳೂರಿ೦ಗೆಲ್ಲಾ ವರ್ಗ ಮಾಡಿದವು.
ಹಾ೦ಗಾಗಿ ಎ೦ಗೊಗೂ ಕುದುರೆಮುಖ ಬಿಡೆಕ್ಕಾಗಿ ಬ೦ತು 🙁

೧೫೦೦ ಕುಟು೦ಬ೦ಗ ಇದ್ದ ಊರಿಲಿ ಈಗ ೧೦೦-೧೫೦ ಕುಟು೦ಬ೦ಗ ಇದ್ದವಷ್ಟೆ.
ಚೆ೦ದ ಚೆ೦ದದ ಮನೆಗ, ಶಾಲೆಯ ಕೆಲವು ಭಾಗ, ಆಸ್ಪತ್ರೆ, helipad ಎಲ್ಲಾ ಪಾಳು ಬಿದ್ದದರ ನೋಡುವಾಗ ಬೇಜಾರಾವ್ತು 🙁

ಇನ್ನು ಸರ್ಕಾರಕ್ಕೆ ಇದರ ಪ್ರವಾಸೀ ತಾಣ ಮಾಡುದೋ ಅಥವಾ ಮಿಲಿಟ್ರಿ ಯೊರಿ೦ಗೆ ಕೊಡುವ ಅ೦ದಾಜಿದ್ದಡ.
ಎ೦ತ ಆವುತು ಗೊ೦ತಿಲ್ಲೆ.

ಏನೇ ಆಗಲಿ ಆ ಊರು ಪಾಳು ಕೊ೦ಪೆ ಆಗದ್ದೆ ಎ೦ಗೊ ಅಲ್ಲಿ  ಇಪ್ಪಗ  ಇದ್ದಹಾ೦ಗೆ ಹಸಿರು ಹಸಿರಾಗಿಯೇ ನಳ ನಳಿಸಲೀ  ಹೇಳಿ ಆಶೆ.

“ಆರ೦ಕುಶವಿಟ್ಟೊಡ೦ ನೆನೆವುದೆನ್ನಮನ೦ ಬನವಾಸಿದೇಶಮ೦ ” ಹೇಳಿ ಪ೦ಪ ಹೇಳಿದಾ೦ಗೆ ಕುದುರೆಮುಖ ಬಿಟ್ಟು 4 ವರ್ಷ ಆದರೂ  “ನೆನೆವುದೆನ್ನ ಮನ೦ ಕುದುರೆಮುಖ೦” ಹೇಳಿ ಆಯಿದು 😉

ಎಲ್ಲಾ ಹಬ್ಬ೦ಗಳ ಇಲ್ಲಿ ಎಲ್ಲೋರು ಒಟ್ಟುಸೇರಿ ಆಚರ್ಸಿಯೊ೦ಡಿತ್ತದು.

64 thoughts on “ಕುದುರೆಮುಖ – ಧರೆಗಿಳುದ ಸ್ವರ್ಗ

  1. Hi
    Very nice article.
    But sad to hear some negative comments.
    Congrats Deepika.Very nice to saw your kannada lipi.

  2. ನೀರ್ಕಜೆ ಅಪ್ಪಚ್ಚಿಯ ಅಭಿಪ್ರಾಯಕ್ಕೆ ನಮ್ಮ ಬೆಂಬಲ ಇದ್ದು.
    ಅಭಿವೃದ್ಧಿ ನಾಣ್ಯದ ಹಾಂಗೆ…
    ಅದಕ್ಕೆ ಎರಡು ಮೋರೆ,
    ನಾವು ಯೇವದರ ನೋಡ್ತು ಹೇಳುದು ಮುಖ್ಯ. ಅಲ್ಲದೋ…?

    1. ನಿಜ ದೊಡ್ಡಭಾವ, ನೀರು, ಮಣ್ಣು, ಮರಗಿಡ, ಆಹಾರ ಇತ್ಯಾದಿ ಎಲ್ಲಿವರೆಗೆ ಇದ್ದೋ ಅಲ್ಲಿವರೆಗೆ ಕಬ್ಬಿಣ ಇತ್ಯಾದಿಗಕ್ಕೆ ಬೆಲೆ ಇಪ್ಪದು. ಇದು ಇಲ್ಲಾರೆ ಕಬ್ಬಿಣ ಮಡಿಕ್ಕೊಂಡು ಎಂತ ಮಾಡುಲೆಡಿಗು ಹೇಳ್ತ ಯೋಚನೆ ಮಾಡೆಕ್ಕಾಗ ಕಾಲ ಇದು. ಮೂಲಭೂತ ಪರಿಸರವೇ ಇಲ್ಲಾರೆ ಅಭಿವೃದ್ಧಿ ಮಡಿಕ್ಕೊಂಡು ಎಂತ ಮಾಡುದು?

      1. ಸಮಾಧಾನದ ಸಂಗತಿ ಎಂತರ ಹೇಳಿರೆ,
        ಕುದುರೆಮುಖಲ್ಲಿದ್ದ ೧೫೦೦ ಕುಟುಂಬಕ್ಕೆ ಪರ್ಯಾಯ ವೆವಸ್ಥೆ ಮಾಡ್ಳೆ ಸಾಧ್ಯ ಆತು ಕಂಪೆನಿಯವಕ್ಕೆ.
        ಬೇಜಾರದ ಸಂಗತಿ ಎಂತರ ಹೇಳಿರೆ…
        ಕುದುರೆಮುಖಲ್ಲಿತ್ತಿದ್ದ,
        ಚಿರತೆ, ಆನೆ, ಹಂದಿ, ಮಂಗಂಗೊ…
        ಇವಕ್ಕೆ ಬೇರೆ ಏರ್ಪಾಡು ಮಾಡಿ ಕೊಡ್ಳೆ ಕಂಪೆನಿಯವಕ್ಕೆ ಎಡಿಗಾಯಿದಿಲ್ಲೆ.
        ಈಗ ಘಟ್ಟ ಇಳುದು ನಮ್ಮ ತೋಟಕ್ಕೆ ಎತ್ತಿದ್ದವು.

        ೨೦೦೫ರಲ್ಲಿ ಆದರೂ ಅಲ್ಲಿ ಗಣಿಗಾರಿಕೆ ನಿಲ್ಲುಸಿದ್ಸು ಪರಮ ಉಪಕಾರ ಆತು.

        1. ನಮಸ್ತೆ ದೊಡ್ಡಭಾವ..
          {ಅಭಿವೃದ್ಧಿ ನಾಣ್ಯದ ಹಾಂಗೆ…
          ಅದಕ್ಕೆ ಎರಡು ಮೋರೆ} ಇದು ೧೦೦% ನಿಜ.
          ಕುದುರೆಮುಖಲ್ಲಿ ಗುಡ್ಡೆಗಳಲ್ಲಿ ಮಾತ್ರ ಗಣಿಗಾರಿಕೆ ಮಾಡಿಗೊ೦ಡಿದ್ದದು. ಪ್ರಾಣಿಗ ಇತ್ತ ಕಾಡುಗೊಳಲ್ಲಿ ಅಲ್ಲ. ಈಗಳೂ ಕುದುರೆಮುಖಕ್ಕೆ ಹೋಪದಾರಿಲಿ ಎರಡುಹೊಡೆಲಿಯೂ ದಟ್ಟ ಕಾಡು ಕಾಣ್ತು. ಪ್ರಾಣಿಗಳ habitat ಹಾ೦ಗೇ ಇದ್ದು.ಪ್ರಾಣಿಗೊಕ್ಕೆ ಏನೂ ತೊ೦ದರೆ ಆಇದಿಲ್ಲೆ..
          ಚಿರತೆ, ಆನೆ, ಹಂದಿ, ಮಂಗಂಗೊ…ಎಲ್ಲವೂ ಅಲ್ಲಿಯಾಣ ಕಾಡಿಲಿ ಇದ್ದವೂ ಹೇಳಿ ಎ೦ಗೊ ಅಲ್ಲಿ ಇಪ್ಪವರೆಗೂ ಶುದ್ದಿ ಇತ್ತು.
          {ಈಗ ಘಟ್ಟ ಇಳುದು ನಮ್ಮ ತೋಟಕ್ಕೆ ಎತ್ತಿದ್ದವು.} ಎ೦ಗೊಳಾ೦ಗೆ ಎಷ್ಟೋ ಜೆನ ಸುಮಾರು ವರ್ಷ೦ದ ಅಲ್ಲಿ ಇತ್ತೊರು ಆ ಜಾಗೆಯ ಬಿಟ್ಟು ಹೋದ್ದು ಬೇಜಾರಾಗಿ ಆ ಪ್ರಾಣಿಗಳೂ ಈಗ ಘಟ್ಟ ಇಳಿವಲೆ ಸುರು ಮಾಡಿದ್ದಾ ಎನ 😉 ಹ್ಹಹ್ಹ..

          1. {ಎ೦ಗೊಳಾ೦ಗೆ ಎಷ್ಟೋ ಜೆನ ಸುಮಾರು ವರ್ಷ೦ದ ಅಲ್ಲಿ ಇತ್ತೊರು ಆ ಜಾಗೆಯ ಬಿಟ್ಟು ಹೋದ್ದು ಬೇಜಾರಾಗಿ ಆ ಪ್ರಾಣಿಗಳೂ ಈಗ ಘಟ್ಟ ಇಳಿವಲೆ ಸುರು ಮಾಡಿದ್ದಾ ಎನ} 🙂 ಹ್ಹಹ್ಹಹ್ಹಾ..

  3. { ಇಲ್ಲಿ ನೇಲ್ಸಿದ ಪಟ೦ಗಳ ನೊಡಿರೆ ನಿ೦ಗೊಗೇ ಗೊ೦ತಕ್ಕು ಅಲ್ಲ್ಯಾಣ ಪರಿಸರ ಹೇ೦ಗಿದ್ದು ಹೇಳಿ }
    ಇದರ ಲಾಜಿಕ್ಕು ಅರ್ಥ ಆವುತ್ತಿಲ್ಲೆ. ಈ ಹಸಿರಿನ ಜಾಗೆಲೇ ಅಲ್ಲದ ಗಣಿಗಾರಿಕೆ ನಡೆಶಿ ಕೆಂಪು ಮಾಡುದು? ಇನ್ನುದೆ ಮುಂದುವರೆಸಿದ್ದರೆ ಹಸಿರು ಒಳಿತಿತ್ತಾ? ಇದರ ನಿಲ್ಲುಸಿ ಪರಿಸರವಾದಿಗೊ ತಪ್ಪು ಮಾಡಿದವು ಹೇಳ್ತ ಅರ್ಥ ಬತ್ತು ನಿಂಗಳ ಮಾತು. ಇದು ಸರಿ ಅಲ್ಲ ಎನ್ನ ಪ್ರಕಾರ.

    { ಆ ಪರಿಸರವಾದಿಗ ಎಲ್ಲ ದೂರು ಕೊಡುವ ಮದಲು ಈ ಬೆ೦ಗ್ಳೂರಿನ೦ತ ಪೇಟೆಯ ನೋಡಿತ್ತವಿಲ್ಲೇ ಹೇಳಿ ಕಾಣ್ತು }
    ಬೆಂಗಳೂರು ಸರಿ ಇಲ್ಲೆ ಹೇಳ್ತ ಮಾತ್ರಕ್ಕೆ ಕುದುರೆಮುಖದೆ ಬೆಂಗಳೂರು ಆಯುಕ್ಕು ಹೇಳಿ ಅರ್ಥವಾ?

    { ಅಲ್ಲಿಯಾಣ ಗಾಳಿ,ನೀರು ಎಲ್ಲಾ ಎಷ್ಟು ಶುದ್ಧ ಹೇಳಿರೆ ಅಲ್ಲಿ ಇಪ್ಪೊರಿ೦ಗೇ ಗೊ೦ತು }
    ಅದು ಹಾಂಗೆಯೇ ಒಳಿಯೆಕ್ಕಾರೆ ಗಣಿಗಾರಿಕೆ ನಿಲ್ಲದ್ದೇ ಉಪಾಯ ಇಲ್ಲೆ.

    { ೧೫೦೦ ಕುಟು೦ಬ೦ಗ ಇದ್ದ ಊರಿಲಿ ಈಗ ೧೦೦-೧೫೦ ಕುಟು೦ಬ೦ಗ ಇದ್ದವಷ್ಟೆ. }
    ಈ ಪಶ್ಚಿಮ ಘಟ್ಟದ ಕಾಡಿಂದಾಗಿಯೇ ಕರಾವಳಿಲಿ ಮಳೆ ಬಪ್ಪದು, ಅದರಿಂದಾಗಿಯೇ ಲಕ್ಷಗಟ್ಟಳೆ ಕುಟುಂಬಂಗೊ ಬದುಕ್ಕುದು ಅಕ್ಕ! ೧೫೦೦ ಕುಟುಂಬಕ್ಕೊಗೆ ಬೇಕಾಗಿ ಈ ಲಕ್ಷಗಟ್ಟಳೆ ಕುಟುಂಬಂಗೊ ಬಲಿ ಆಯೆಕ್ಕಾ?

    { ಏನೇ ಆಗಲಿ ಆ ಊರು ಪಾಳು ಕೊ೦ಪೆ ಆಗದ್ದೆ ಎ೦ಗೊ ಅಲ್ಲಿ ಇಪ್ಪಗ ಇದ್ದಹಾ೦ಗೆ ಹಸಿರು ಹಸಿರಾಗಿಯೇ ನಳ ನಳಿಸಲೀ ಹೇಳಿ ಆಶೆ }
    ಗಣಿಗಾರಿಕೆ ಮಾಡಿರೆ ಹಸುರಾವುತ್ತಿಲ್ಲೆ ಅಕ್ಕ.. ಗಣಿಗಾರಿಕೆ ಮಾಡಿದ ಪ್ರದೇಶಲ್ಲಿ ಅಕೇಸಿಯಾ ನೆಟ್ಟ ಕಂಪೆನಿ ಎಂಗೊ ಅರಣ್ಯೀಕರಣ ಮಾಡಿದ್ದೆಯೊ ಹೇಳಿ ಟಾಂ ಟಾಂ ಮಾಡಿಯೊಂಡಿತ್ತಿದವು. ಅಕೇಸಿಯಾ ಕಾಡಿನ ಎನ್ನ ಕಣ್ಣಾರೆ ನೋಡಿದ್ದೆ ೮-೧೦ ವರ್ಷದ ಹಿಂದೆ.. ಹಾಂಗೆಯೇ ಮಳೆಗಾಲದ ಹಸಿ ಹಸಿ ಮಣ್ಣಿಲಿ ಹಸುರು ಕಳದು ಕಪ್ಪಾದ ಬೆಟ್ಟಂಗಳನ್ನೂ ನೋಡಿ ಮನಸ್ಸಿಲೇ ಕೂಗಿದ್ದೆ..

    { ಹಾ೦ಗಾಗಿ ದೇಶದ ಸಂಪತ್ತಿನ ಲೂಟಿಯೇ ಖ೦ಡಿತ ಅಲ್ಲ }
    ಕಬ್ಬಿಣ ಮಾತ್ರವೇ ಸಂಪತ್ತೋ? ನೀರು, ನೀರ ಮೂಲ, ಮಳೆ, ಹಸಿರು, ಆಹಾರ, ಇದೆಲ್ಲ ಸಂಪತ್ತೇ ಅಲ್ಲದ! ಈ ನಿಟ್ಟಿಲಿ ನೋಡಿರೆ ಇದು ಸಂಪತ್ತಿನ ಲೂಟಿಯೇ ಸರಿ. ಬಳ್ಳಾರಿಯುದೆ ಕೆಮ್ಮಣ್ಣುಗುಂಡಿಯುದೆ ಸಂಪತ್ತಿನ ಲೂಟಿಯೇ. ಆನು ಕುದುರೆಮುಖವನ್ನೂ ಕೆಮ್ಮಣ್ಣುಗುಂಡಿಯನ್ನೂ ಕಣ್ಣಾರೆ ನೋಡಿದ್ದೆ. ಇವೆರಡರ ನೋಡಿದ ಮೇಲೆ ಬಳ್ಳಾರಿ ನೋಡುವ ಧೈರ್ಯ ಇಲ್ಲೆ.

    1. ನೀರ್ಕಜೆ ಮಹೇಶಣ್ಣ …. ಸಮಗ್ರ ದೃಷ್ಟಿ ಹೆಳಿ ಇಪ್ಪ ಫೊಟೊ ನೋಡಿ ಗಣಿಗಾರಿಕೆ ಮಾದುವ ಜಾಗೆ ಗೊ೦ತಾವುತ್ತು. ಅದು ದೊಡ್ಡ ಕಾಡಲ್ಲ .(ಅಕೇಸಿಯಾ ಕಾಡಿನ ಎನ್ನ ಕಣ್ಣಾರೆ ನೋಡಿದ್ದೆ ) .. ನಿ೦ಗ ಅಕೇಸಿಯಾ ಗಿಡ ನೋಡಿ ದ್ದು ಮಾರ್ಗದ ಆಚಿಚ ಹೊಡೆ ಆದಿಕ್ಕು. ಮಾರ್ಗದ ಬದಿಲಿ ಅಲ್ಲ ಗಣಿಗಾರಿಕೆ ಮಾದಿಗೊ೦ಡು ಇತ್ತದು….ಅಲ್ಲಿ ಭದ್ರ ನದಿಗೆ waste ನೀರು ಬಿಟ್ಟೂಗೊ೦ಡು ಇತ್ತದಲ್ಲ.. ಲಕ್ಯಾ ಹೆಳುವ ಅಣೇಕಟ್ಟಿ೦ಗೆ. ಅದು ಅದಕ್ಕೊಸ್ಕರವೆ ಕಟ್ಟಿದ dam.. ಪರಿಸರ ಹಾಳು ಆವುತ್ತು ಹೆಳೀ..ಸುಮ್ಮನೆ ನೆಲದಾಡಿಲಿ ಖನಿಜ೦ಗಳ ಹಾ೦ಗೆ ಬಿಡೂಳಲಾವುತ್ತ? ಆದಶ್ಟೂ pollution ಆಗದ್ದ ಹಾ೦ಗೆ ಮಾಡಿ ಖ೦ಡಿತಾ ಗಣಿಗಾರಿಕೆ ಮಾಡೂಲೆ ಅಕ್ಕು ಹೇಳಿ ಎನ್ನ ಅಭಿಪ್ರಾಯ.ಮತ್ತೆ K I O C L ಖ೦ಡಿತಾಆ ಜಾಗೆಯ ಕಪ್ಪು ಮಾದಿದ್ದಿಲ್ಲೆ. ಅದು ಗಣಿಗಾರಿಕೆ ಮಾಡಿದ ಜಾಗೆಲಿ ಗಿಡ೦ಗಳ ನೆಟ್ಟೀದು.

      1. {ಮತ್ತೆ K I O C L ಖ೦ಡಿತಾಆ ಜಾಗೆಯ ಕಪ್ಪು ಮಾದಿದ್ದಿಲ್ಲೆ}
        ಈ ಕೆಳಾಣ ಸ್ಲೈಡ್ ಶೋ ಲಿ ೧೩ ನೇ ಮತ್ತೆ ೨೦ ನೇ ಫಟ ನೋಡಿ.. ಇಂಥಾ ಬೆಟ್ಟಗಳನ್ನೇ ಆನು ಅಂದು ನೋಡಿದ್ದು.

        http://www.udayavani.com/gallery/GalleryFullpagePhoto.aspx?cat3=2042&catid=889&videoid=889&languageid=15&albumid=1760605

    2. ನಮಸ್ತೆ ಮಾವ..
      ಎಲ್ಲೋರಿ೦ಗೂ ಅವರವರ ಊರಿನ ಮೇಲೆ ಅಭಿಮಾನ ಇಪ್ಪದೇ ಅಲ್ಲದಾ,ಆನು ಅಲ್ಲಿಯೇ ಹುಟ್ಟಿ ಬೆಳದ ಕಾರಣ ಹಾ೦ಗೆ ಎನಗೂ…ಆನು ನಿ೦ಗೋ ಹೆಳಿದ್ದರ ಒಪ್ಪುತ್ತಿಲ್ಲೆ. ನಿ೦ಗೊ ಕೊಟ್ಟ ಸ೦ಕೋಲೆಲಿಪ್ಪ ಪಟ೦ಗಳ ನೋಡಿದೆ.ಅದು mining ಮಾಡಿಗೊ೦ಡಿಪ್ಪಗ ತೆಗದ ಫೊಟೊ ಆದಿಕ್ಕು.ಅಲ್ಲಿ ಹೇ೦ಗೆ ಹೇಳಿರೆ ಒ೦ದು ಗುಡ್ಡೆಲಿ mining ಮುಗುದಿಕ್ಕಿ,ಕ೦ಪೆನಿಯೇ ಆ ಜಾಗೆಗಳಲ್ಲಿ ಸೆಸಿ ನೆಡ್ತು.ಒ೦ದು ರಜ್ಜ ರಜ್ಜ ಜಾಗೆಲಿ ಹೇಳಿ ಆವ್ತಿಲ್ಲೆನ್ನೆ ಹಾ೦ಗಾಗಿ ಒ೦ದು ಇಡೀ ಗುಡ್ಡೆಲಿ ಅಪ್ಪನ್ನಾರ ಎ೦ತ ಮಾಡ್ತಿಲ್ಲೆ.ಒ೦ದು ಗುಡ್ಡೆಯ ಎಲ್ಲಾ ಕೆಲಸ ಮುಗುದಿಕ್ಕಿ,ಸೆಸಿ ನೆಟ್ಟು,ಅದು ದೊಡ್ಡ ಅಪ್ಪಲೆ ಚೂರು ಸಮಯ ಬೇಕಾಉತನ್ನೆ,ಅದರ ಮದಲು ಕೆ೦ಪು ಕಾ೦ಬದಪ್ಪು.ಆದರೆ ಸೆಸಿಗ ಬೆಳದಿಕ್ಕಿ ಆ ಗಿಡ್ಡೆಗ ಪುನಾ ಹಸಿರು ಆವ್ತು.
      {ಇದರ ಲಾಜಿಕ್ಕು ಅರ್ಥ ಆವುತ್ತಿಲ್ಲೆ} – ಈಗ ನಿ೦ಗೊಳ doubt clear ಆದಿಕ್ಕು ಹೇಳಿ ಗ್ರೇಶುತ್ತೆ 😉
      ಪರಿಸರ ಹಾಳಾವ್ತು ಹೇಳಿ,ನೆಲದಡಿಯ೦ದ ಯಾವ ಖನಿಜವನ್ನೂ ತೆಗೆಯದ್ದೆ ಕೋರ್ತಿತ್ತರೆ,ಈಗಾಣ ಸವಲತ್ತುಗ ಎವದೂ ಇರ್ತಿತ್ತಿಲ್ಲೆ.ಈಗ ನಮ್ಮ ಎಲ್ಲೋರ ಮನೆಗಳಲ್ಲಿಯೆ ಕಬ್ಬಿಣದ ವಸ್ತುಗ ಎಷ್ಟೂ ಇರ್ತು ಅದೆಲ್ಲ ಹೇ೦ಗೆ ಸಿಕ್ಕುದೂ?, ಹೀ೦ಗೆ ಅಗದ ಕಬ್ಬಿಣ೦ದ ಅಲ್ಲದ?
      ಈಗ ನಮ್ಮ ಊರಿಲಿಯೇ ಎಷ್ಟೋ ಜೆನ೦ಗ ರಬ್ಬರ್ ನೆಡುಲೇ ಹೇಳಿ “ದೊಡ್ಡ ದೊಡ್ಡ ಕಾಡುಗಳನ್ನೆ ” ಕಡಿತ್ತಾ ಇಲ್ಲೆಯಾ…ಇದು ಬರೀ ಆ ಕುಟು೦ಬದ financial developmentಇ೦ಗೆ ಆವ್ತಷ್ಟೆ. ಆದರೆ ಕುದುರೇಮುಖಲ್ಲಿ “ಗುಡ್ಡೆಗಳಲ್ಲಿ” ಗಣಿಗಾರಿಕೆ ಮಾಡಿ ಕಬ್ಬಿಣ ತೆಗಕ್ಕೊ೦ಡಿತ್ತದು ಇಡೀ ದೇಶದ(ಅದು public sector,private ಅಲ್ಲ ಆದಕಾರ್ಣ) economic developmentಇ೦ಗೆ ಸಹಾಯ ಆಇಕೊ೦ಡಿತ್ತಿಲ್ಲೆಯಾ..
      ಅಲ್ಲಿ ಪ್ರಾಣಿಗ ಇತ್ತ ಕಾಡುಗಳಲ್ಲಿ ಗಣಿಗಾರಿಕೆ ಮಾಡಿಗೊ೦ಡು ಇತ್ತಿದ್ದವಿಲ್ಲೆ.ಗಣಿಗಾರಿಕೆ ಮಾಡಿಗೊ೦ಡಿತ್ತದು ಸಣ್ಣ ಸಣ್ಣ ಸೆಸಿಗ ಇತ್ತ ಗುಡ್ಡೆಗಳಲ್ಲಿ.

      ಎ೦ಗೊ ೨೦೦೬ ಒರೆಗೆ ಅಲ್ಲಿ ಇತ್ತಿದ್ದೆಯ.ಅಲ್ಲಿ ತನಕ “೩೦ ವರ್ಷ ಸತತ ಗಣಿಗಾರಿಕೆ” ಮಾಡಿಗೊ೦ಡು ಬ೦ದಿತ್ತು k.i.o.c.l. ಎ೦ಗೊ ಇಪ್ಪ ವರೆಗೆ ಅಲ್ಲಿಯಾಣ ಗಾಳಿ,ನೀರು ಎ೦ತದೂ ಹಾಳಾಗಿತ್ತಿಲ್ಲೆ.ಊರಿ೦ಗೆ ಹೋದಿಪ್ಪಗ ಸಿಕ್ಕುತಿತ್ತ ಗಾಳಿ,ನೀರಿ೦ದಲೂ ಎಷ್ಟೋ ಶುದ್ಧ ಕುದುರೆಮುಖದ ಗಾಳಿ ನೀರು ಇರ್ತಿತ್ತು. ಮಳೆಯ೦ತೂ ಹೆಳುದೇ ಬೇಡ sept-oct ಒರೆಗೂ ಭಾರೀ ಮಳೆ ಇರ್ತಿತ್ತು.ಆಕಾಶ ಒಟ್ಟೆ ಆದ ಹಾ೦ಗೆ ಸುರುಕ್ಕೊ೦ಡಿತ್ತು 😉 ( ೨,೩ ವರ್ಷ ಅಲ್ಲ ೩೦ ವರ್ಷ ಸತತ ಗಣಿಗಾರಿಕೆ ಮಾಡಿಗೊ೦ಡಿತ್ತ ಜಾಗೆಲಿ)

      ನಿ೦ಗೊಳ ಒಪ್ಪವ ಓದಿ ಅ೦ಸಿತ್ತು ನಿ೦ಗೊ ದೊಡ್ಡ ಪರಿಸರ ವಾದಿಗಳಾ ಹೇಳಿ ( ಎನ್ನ ಬೈಕ್ಕೊಳಡಿ 😉 ) ಆನ೦ತೂ ಪರಿಸರವಾದಿಯೂ ಅಲ್ಲ anti-ಪರಿಸರವಾದಿಯೂ ಅಲ್ಲ. ಎನ್ನ ಊರೇ ಆದಕಾರಣ,ಆನು ಕುದುರೆಮುಖ ಪ್ರೇಮಿ ಅಷ್ಟೆ 🙂

      1. {ಎಲ್ಲೋರಿ೦ಗೂ ಅವರವರ ಊರಿನ ಮೇಲೆ ಅಭಿಮಾನ ಇಪ್ಪದೇ ಅಲ್ಲದಾ,ಆನು ಅಲ್ಲಿಯೇ ಹುಟ್ಟಿ ಬೆಳದ ಕಾರಣ ಹಾ೦ಗೆ ಎನಗೂ}
        ಅಕ್ಕಾ, ನಿಂಗ ಹುಟ್ಟಿದ ಊರಿನ ಬಗ್ಗೆ ಅಭಿಮಾನ ಇಪ್ಪದು ಸರಿ. ಆದರೆ ಅದಕ್ಕೆ ಪರಿಸರವಾದಿಗಳ ಬಗ್ಗೆ ಕಾಮೆಂಟು ಮಾಡುವ ಅಗತ್ಯ ಇಲ್ಲೆ ಅಲ್ಲದಾ? ಊರಿನ ಬಗ್ಗೆ, ನೆನಪಿನ ಬಗ್ಗೆ ಹೇಳಿದ್ದರೆ ಆನು ಆಕ್ಷೇಪ ಎತ್ತುತ್ತಿಲ್ಲೆ. ಪರಿಸರ ನಾಶ, ಗಣಿಗಾರಿಕೆ ಬಗ್ಗೆ ಹೇಳಿ ಅಪ್ಪಗ ಒಬ್ಬ ಪರಿಸರ ಪ್ರೇಮಿಯಾಗಿ (ಅಪ್ಪು! ನಿಂಗ ಊಹಿಸಿದ್ದು ಸರಿ, ಆನೊಬ್ಬ ಪರಿಸರ ಪ್ರೇಮಿಯೇ ಅಪ್ಪು) ಆನು ಹೇಳೆಕ್ಕಾದ್ದು ಎನ್ನ ಕರ್ತವ್ಯ. ಎನ್ನ ನಿಲುವು ಒಪ್ಪುದು ಬಿಡುದು ನಿಂಗೊಗೆ ಬಿಟ್ಟದು. ಹೇಳುದು ಮಾತ್ರ ಎನ್ನ ಕೆಲಸ ಇದಾ.. 🙂

        ಇನ್ನು ನಿಂಗಳ ಪ್ರತಿಕ್ರಿಯೆಲಿ ಕೆಲವು ಕೊರತೆಗೊ ಇದ್ದು. ಮೊದಲನೇಯದಾಗಿ ಕಂಪೆನಿ ಮರ ನೆಟ್ಟ ಬಗ್ಗೆ. ಎನ್ನ ಆಕ್ಷೇಪ ಇದ್ದದು ಎರಡು ವಿಷಯಕ್ಕೆ – ಒಂದು, ಅರಣ್ಯೀಕರಣ ಸಾಕಷ್ಟು ಕಡೆ ಆಯಿದೇ‌ ಇಲ್ಲೆ. ಈ ಭಾಗಂಗಗಳ ಎಲ್ಲ ಎನಗೆ wikimapia.org ಲಿ ನೋಡುವ ಅಭ್ಯಾಸ ಇದ್ದು. ಆನು ಮನ್ನೆ ನೋಡಿ ಅಪ್ಪಗಳುದೆ ಅಲ್ಲಿ ನಿಂಗ ಹೇಳಿದ ಹಾಂಗೆ ಪೂರ್ತಿ ಕಾಡು ಇಲ್ಲೆ. ಗಣಿಗಾರಿಕೆ ನಡದ ಕೆಂಪು ಪ್ರದೇಶ ಸ್ಪಷ್ಟವಾಗಿ ಕಾಣುತ್ತು. ಎರಡನೇ ಆಕ್ಷೇಪ ಅರಣ್ಯೀಕರಣಕ್ಕೆ ಉಪ್ಯೋಗ್ಸಿದ ಅಕೇಸಿಯಾ ಮತ್ತಿತರ ಮರಂಗಳ ಬಗ್ಗೆ. ಇದರ ಬಗ್ಗೆ ಅಧ್ಯಯನ ಮಾಡಿ ಬರದ ಪತ್ರಿಕಾ ವರದಿ ಬಗ್ಗೆ ವಿನಯಕ್ಕಂಗೆ ಬರದ ಕಮೆಂಟಿಲಿ ವಿವರ ಕೊಟ್ಟಿದೆ. ನಿಂಗ ಇದರ ಬಗ್ಗೆ ಏನೂ ಹೇಳಿದ್ದಿಲ್ಲಿ.

        ಇನ್ನು ಗಣಿಗಾರಿಕೆ ನಡದ್ದು ಮರ ಇಲ್ಲದ್ದಲ್ಲಿ ಮಾತ್ರ, ಮರ ಇಪ್ಪಲ್ಲಿ ಅಲ್ಲ, ಆದ್ದರಿಂದ ವನ್ಯಜೀವಿಗೊಕ್ಕೆ ಯಾವುದೇ‌ ತೊಂದರೆ ಇಲ್ಲೆ ಹೇಳುವ ವಾದ ಯಾವ ಒಬ್ಬ ವನ್ಯಜೀವಿ ಬಗ್ಗೆ ತಿಳುದವನೂ ಒಪ್ಪತಕ್ಕದ್ದಲ್ಲ. ಇದಕ್ಕೆ ಎರಡು ಪ್ರಮುಖ ಕಾರಣ – ಒಂದನೇದು ವನ್ಯಜೀವಿಗೊಕ್ಕೆ ಅವರದ್ದೇ‌ ಆದ ಪ್ರೈವೇಟ್ ಸ್ಪೇಸ್ ಇರ್ತು. ಅಲ್ಲಿ ಯಾವುದೇ‌ ಅಸಹಜ ಚಟುವಟಿಕೆ ನಡದರುದೇ‌ ಅವಕ್ಕೆ ಹಾನಿ ಆವುತ್ತು. ಮನುಷ್ಯರ ಕಂಡರೇ ಹರುದು ಬಿದ್ದು ಓಡುವ ಜಿಂಕೆಗೊ ಗಣಿಗಾರಿಕೆ ನಡೆತ್ತಾ ಇಪ್ಪಗ ಎಂತ ಮಾಡುಗು ಹೇಳಿ ಯೋಚನೆ ಮಾಡಿ. ಇನ್ನು ಎರಡನೇ ಪ್ರಮುಖ ಕಾರಣ ಆಹಾರ. ಶೋಲಾ ಪ್ರದೇಶಲ್ಲಿ ಬೆಟ್ಟದ ಮೇಲಿನ ಹುಲ್ಲು ವನ್ಯಜೀವಿಗೊಕ್ಕೆ ಪ್ರಮುಖ ಆಹಾರ. ಎಂತಕ್ಕೆ ಹೇಳಿರೆ ಕಾಡಿನೊಳ ಬೆಣಚ್ಚಿ ಇಲ್ಲದ್ದೆ ಇಪ್ಪ ಕಾರಣ ಹುಲ್ಲು ಬೆಳೆತ್ತಿಲ್ಲೆ. ಬೆಟ್ಟಲ್ಲಿ ಹಾಂಗಲ್ಲ. ಬೇಕಾಷ್ಟು ಹುಲ್ಲು ಬೆಳೆತ್ತು. ಇಂತಿಪ್ಪ ಬೆಟ್ಟವ ಬೋಳ್ಸಿರೆ ಅವು ಎಂತರ ತಿನ್ನೆಕ್ಕು! ಯೋಚನೆ ಮಾಡಿ.

        ಇನ್ನು ಅದುರು, ಕಬ್ಬಿಣ ಬಗ್ಗೆ. ಖನಿಜ ತೆಗೆಯದ್ದೇ ಕೂರ್ತಿತ್ತಾರೆ ಈಗಾಣ ಸೌಲಭ್ಯಂಗೊ ಇರ್ತಿತ್ತಿಲ್ಲೆ ನಿಜ. ಆದರೆ ಈ ಖನಿಜ ಸಂಪತ್ತು ನವೀಕರಿಸಲಾಗದ್ದು ಹೇಳಿ ನಿಂಗೊಗೆ ತಿಳುದಿಕ್ಕು. ಒಂದಲ್ಲಾ ಒಂದು ದಿನ ಅದು ಬರಿದಪ್ಪದೇ. ನಿಂಗಳ ಮಕ್ಕಳ ಕಾಲಕ್ಕೆ ಅವು ಬರಿದಾದರೆ ಅವು ಎಂತ ಮಾಡೆಕ್ಕು? ಅಷ್ಟಪ್ಪಗಳಾದರೂ ಅನಿವಾರ್ಯವಾಗಿ ಅವು ಈ ಸೌಲಭ್ಯಂಗಳ ಬಿಡೆಕ್ಕಾವುತ್ತನ್ನೇ?‌ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರೆಸಿದ್ದೇ ಆದರೆ ಆ ಹೊತ್ತಿಂಗೆ ನೀರು ಆಹಾರ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳೂ ಬರಿದಾಗಿರ್ತು. ಅದರ ಬದಲಾಗಿ ಈಗಳೇ ಗಣಿಗಾರಿಕೆ ಕಮ್ಮಿ ಮಾಡಿ ಈ ನೈಸರ್ಗಿಕ ಸಂಪತ್ತುಗಳನ್ನಾರೂ ಉಳಿಶುದೇ ಬುಧ್ಧಿವಂತಿಕೆ ಅಲ್ಲದಾ? ಯೋಚನೆ ಮಾಡಿ.

      2. ಕುದುರೆಮುಖಲ್ಲಿ ಗಣಿಗಾರಿಕೆ ನಿಲ್ಸಿ ಇಷ್ಟು ವರ್ಷ ಆದರೂ ಆ ಜಾಗೆಲಿ ಸಹಜ ಕಾಡೂ ಬೆಳದ್ದಿಲ್ಲೆ, ಕಂಪೆನಿ ಅರಣ್ಯವೂ ಇಲ್ಲೆ. ಈ ಕೆಳಾಣ ಲಿಂಕು ನೋಡಿ. ಗಣಿಗಾರಿಕೆ ನಡದ ಪ್ರದೇಶಕ್ಕೂ ಸುತ್ತಲಿನ ಪ್ರದೇಶಕ್ಕೂ ಇಪ್ಪ ವ್ಯತ್ಯಾಸ ನೋಡಿ. ಅಂಥಾ ಇತರ ಪ್ರದೇಶಲ್ಲೂ ಗಣಿಗಾರಿಕೆ ನಡೆಯೆಕ್ಕು ಹೇಳಿರೆ ಎಷ್ಟು ಬೇಜಾರು ಅಲ್ಲದ!
        http://wikimapia.org/#lat=13.192652&lon=75.2508545&z=15&l=0&m=b

  4. olle lekhana deepika, kuduremukhake sannadippga hogi gonthida karana e lekhana odiyappaga allige april may raje kalavale hoykondu iddadu nempathu. enna mava alli engineer agithavu,avu ega alli illadru, engo ella egalu avara kuduremuka mava heliye dinigoludu.
    alliyana prikrithi soundarya, radhakrishna devasthana, park, lakyadam ellavu chanda.
    hinge baretha iru:-)

    1. ಧನ್ಯವಾದ ಸೌಮ್ಯಕ್ಕ!! ಓದಿ ಒಪ್ಪ ಕೊಟ್ಟದು ಖುಶಿ ಆತು..ರಧಾ ಕ್ರಿಷ್ಣ ದೆವಸ್ಥಾನವ ನೆನಪ್ಪು ಮಾಡಿದ್ದನ್ತೂ ತು೦ಬಾ ಖುಶಿ ಆತು.ನಿ೦ಗೊಳ ಮಾವನ ಹೆಸರು ಎನ್.ಟಿ.ಭಟ್ ಹೇಳಿಯಾ?

        1. ಓ..ಸರೀ..ಪರಿಚಯ ಇದ್ದು.ಸರಸ್ವತಿ ಅತ್ತೆಯ,ರಶ್ಮಿ ಅಕ್ಕನ,ಅಣ್ಣ೦ದ್ರ,ಮಾವನ ಎಲ್ಲೊರನ್ನು ಸರೀ ಗೊ೦ತಿದ್ದು 🙂

  5. ಆನು ಹಾಸ್ಟೆಲಿಲ್ಲಿ ಇದ್ದಿಪ್ಪಗ ಎಂಗಳ ರೂಮಿಲ್ಲಿ ಕುದುರೆಮುಖದ ಇಬ್ರು ಕೂಸುಗೊ ಇತ್ತಿದ್ದವು, ಒಂದು ತಮಿಳು ಮತ್ತೊಂದು ಮಲಯಾಳಿ ಕುಟ್ಟಿ ! ಆದರೆ ಅವರಿಬ್ಬರ ಅಪ್ಪಂದ್ರೂ ಅಲ್ಲಿಯೇ ಕೆಲಸಲ್ಲಿ ಇದ್ದ ಕಾರಣ ಆ ಇಬ್ರುದೇ ಹುಟ್ಟಿ ಬೆಳದ್ದು ಅಲ್ಲಿಯೇ. ದೀಪಿಕಾ ಇಲ್ಲಿ ಬರದ ಎಲ್ಲ ಭಾವಂಗಳೂ ಅವರ ಇಬ್ರ ಮಾತಿಲ್ಲಿಯೂ ಇತ್ತು… ಅಲ್ಲಿಂದ ಕುಟುಂಬಂಗೊ ಮುಂದೊಂದು ದಿನ ಹೆರ ಹೋಯಕು ಹೇಳ್ತ ಸೂಚನೆ ಅಂಬಗಳೇ ಇತ್ತಿದ್ದು. ಅಲ್ಲಿಯಾಣ ವರ್ಣನೆ ಮಾಡಿಗೊಂಡಿತ್ತವು ಇಬ್ರುದೇ, ಕಣ್ಣ ಮುಂದೆ ಕಟ್ಟಿದ ಹಾಂಗೆ ಪಾರ್ಕ್ ಡೇ ಕ್ಲಬ್ ಡೇ ಗಳ ಬಗ್ಗೆ ವಿವರ್ಸುವಗ ಎಂಗಳೇ ಅಲ್ಲಿ ಇದ್ದ ಅನುಭವ ಆಗಿಯೊಂಡಿತ್ತು!! ಆ ವರ್ಷವೇ ಒಂದರಿ ಕಾಲೇಜಿಂದ ಪ್ರವಾಸ ಹೋಗಿತ್ತೆಯ ಅಲ್ಲಿಗೆ 🙂
    ದೀಪಿಕಾ ಬರದ ಈ ಲೇಖನ ಓದಿಯಪ್ಪಗ ಅಲ್ಲಿಯಾಣ ನೆನಪಾತು, ಒಟ್ಟಿಂಗೇ ಹಾಸ್ಟೆಲಿನ ಸ್ನೇಹಿತೆಯರ ನೆಂಪೂ ಆತು…ವಾರ್ಡನ್ನಿಂಗೆ ಗೊಂತಾಗದ್ದೆ, study hours ಲ್ಲಿ ಕಥೆ ಹೇಳಿಗೊಂಡಿದ್ದದು ನೆಂಪಾತು ! ಆ ದಿನಂಗೊ ಇನ್ನು ಬಾರ.. ಅದೇ ರೀತಿ ದೀಪಿಕಾ ಕೂಡ ತನ್ನ ಜೀವನದ ಆ ಅಮೂಲ್ಯ ದಿನಂಗಳ ಮರವಲೇ ಎಡಿಯ 🙂 ಕುದುರೆಮುಖಲ್ಲಿ ಕಳೆದ ಬಾಲ್ಯದ ದಿನಂಗೊ ಎಂದಿಂಗೂ ನಿನ್ನ ಬಾಳಿಲ್ಲಿ ಹಸಿರು ನೆನಪಾಗಿರಲಿ..
    ಉತ್ತಮ ಶುದ್ದಿಯೊಟ್ಟಿಂಗೆ ಶುಭಾರಂಭ ಮಾಡಿದ್ದೆ ತಂಗೀ.., ಒಳ್ಳೆದಾಗಲಿ….

    1. {ವಾರ್ಡನ್ನಿಂಗೆ ಗೊಂತಾಗದ್ದೆ, study hours ಲ್ಲಿ ಕಥೆ ಹೇಳಿಗೊಂಡಿದ್ದದು ನೆಂಪಾತು}
      ಹೀಂಗೆ ಮಾಡಿ ಜಾಸ್ತಿ ಮಾರ್ಕ್ ತೆಗದು ನಿಂಗಳಾಂಗೆ ಡಾಗುಟ್ರ ಆವ್ತೆ ಹೇಳ್ತ ನೆಗೆಮಾಣಿ..ಅವಂಗೆ ಎಂತ ಹೇಳೆಕ್ಕು….

      1. ಹ್ಹಹ್ಹಹ್ಹ…..ಹ್ಹಿಹ್ಹಿಹ್ಹಿ….

      2. ನೆಗೆಮಾಣಿ ಮೊದಾಲು ಇಂಗ್ಲೀಷು ಕಲಿಯಲಿ, ಸ್ಲೇಟು ಬೆಳ್ಳಕ್ಕೆ ಹೋತು ಹೇಳಿ ಖುಷೀಲಿ ಇತ್ತಿದ್ದ, ಹೊಸತ್ತು ಕೊಡ್ಸುಲಕ್ಕು. ಮತ್ತೆ ನೋಡುವ ದೀಪಿ ಅಕ್ಕನ ಹಾಂಗೆ ಇಂಜಿನಿಯರೋ ಶ್ವೇತಕ್ಕ ನ ಹಾಂಗೆ ಲೆಕ್ಚರರೋ ..ಅಲ್ಲ ಡಾಕ್ಟ್ರೋ ಎಂತ ಅಪ್ಪದು ಹೇಳಿ !

        1. {ಮತ್ತೆ ನೋಡುವ ದೀಪಿ ಅಕ್ಕನ ಹಾಂಗೆ ಇಂಜಿನಿಯರೋ ಶ್ವೇತಕ್ಕ ನ ಹಾಂಗೆ ಲೆಕ್ಚರರೋ…}
          ದೀಪಿ ಅಕ್ಕನ ಗೊಂತಾತು…
          ಇದು ಶ್ವೇತಕ್ಕ ಹೇಳಿರೆ ಆರಪ್ಪಾ…?

    2. ಧನ್ಯವಾದ ಸುವರ್ಣಿನಿ ಅಕ್ಕ..ನಿ೦ಗೊಳ ಒಪ್ಪ ಓದಿ ಖುಷಿ ಆತು!! ನಿ೦ಗೊಳ room mate ಗಳ ಹೆಸರು ಹೇಳುವಿರಾ(ಎನಗೆ ಗೊ೦ತಿದ್ದಾ ಹೇಳಿ ನೋಡ್ಳೆ)

  6. ಅಬ್ಬಬ್ಬಾ.. ಈ ಕೂಸಿಂಗೆ ತಾನು ಹುಟ್ಟಿ ಬೆಳದ ಊರಿನ ಮೇಗೆ ಇಪ್ಪ ಅಭಿಮಾನವೇ..! ಆರು ಎಂತದೇ ಹೇಳಿರೂ ಬಿಟ್ಟುಕೊಡ್ಲೆ ತಯಾರಿಲ್ಲೆನ್ನೆ..?!! 🙂
    ಮನಸ್ಸಿಲ್ಲೇ ಹೀಂಗೊಂದು ಉದ್ಗಾರ ಬಂದು ದೀಪಿಕಂಗೆ ಸ್ವಾಗತ ಹೇಳ್ಳೂ ಮರದತ್ತು;)
    ನಿಜ. ಈ ಅಭಿಮಾನ ಇರೆಕಾದ್ದದೇ. ‘ತನ್ನ ನಾಡನು ನೆನೆನೆನೆದುಬ್ಬದ ಮಾನವನಿದ್ದರೆ ಲೋಕದಲಿ- ತಾವಿಲ್ಲವನಿಗೆ ನಾಕದಲಿ’ ಹೇಳ್ತು ಕವಿವಾಣಿ.
    ಕುದುರೆಮುಖ ಚೆಂದ. ಪರಿಚಯಿಸಿದ ಲೇಖನವೂ ಅಷ್ಟೇ ಚೆಂದ. ದೀಪಿಕಂಗೆ ಅಭಿನಂದನೆಗೊ.
    ಇದಾ ಆನು ಸಣ್ಣಾಗಿಪ್ಪಗ ಕೇಳಿದ ಒಂದು ಚುಟುಕ-
    ಕುದುರೆಮುಖ ಬೆಟ್ಟ
    ಹತ್ತಿಬಂದ ಭಟ್ಟ
    ಕುದುರೆಮುಖ
    ಹವೆಯು ಸುಖ
    ಎಂದು ಹೊಗಳಿ ಬಿಟ್ಟ!

    1. ಸುಭಗವಾಣಿಯೂ ರುಚಿಯಾದ ಬೆ೦ದಿಗೆ ಒಗ್ಗರಣೆ ಕೊಟ್ಟ ಹಾ೦ಗಾಯಿದು..

    2. ಸುಭಗಮಾವ೦ಗೆ ಧನ್ಯವಾದ..ಚುಟುಕು ಪಷ್ಟಾಯಿದು 🙂

  7. ಕುದುರೆ ಮುಖದ ಬಗೆಲಿ ಸಚಿತ್ರ ವರದಿ ಲಾಯಕಾಯಿದು. ಪಟಂಗಳುದೆ ಲಾಯಕು ಬಯಿಂದು. ಕೆಲವು ವರ್ಷಗಳ ಹಿಂದೆ ಲಕ್ಯಾ ಅಣೆಕಟ್ಟಿನ ಮೇಗೆ ನಿಂದು ನೋಡಿದ್ದದು ನೆಂಪಾತು. ದೀಪಿಕ ಬರೆತ್ತ ಶೈಲಿ ಲಾಯಕಿದ್ದು. ಕೂಚಕ್ಕನ ಲೇಖನಂಗೊ ಬೈಲಿಂಗೆ ಬತ್ತಾ ಇರಳಿ.

  8. ದೀಪಿಕಾ೦ಗೆ ಸ್ವಾಗತ !!
    ‘ಭೂಮಿಗಿಳುದ ಸ್ವರ್ಗ’ ನಿಜ ಹೇಳಿ ಕಾಣುತ್ತು ಚೆ೦ದದ ಪಟ೦ಗಳ ನೋಡಿಯಪ್ಪಗ.ಪ್ರವಾಸಕ್ಕೆ ಸರಿಯಾದ ಜಾಗೆ,ಉಳುಕ್ಕೊ೦ಬಲೆ ವೆವಸ್ಥೆ ಇದ್ದೊ?ನಮ್ಮ ರಾಜ್ಯದ ಪ್ರವಾಸಿತಾಣ೦ಗಳ ಅವಸ್ಥೆ ಹೇಳಿ ಗುಣ ಇಲ್ಲೆ,ಅಲ್ಲದೋ?

    1. ಧನ್ಯವಾದ ಮಾವ !! ಪ್ರವಾಸಕ್ಕೆ ಸರಿಯಾದ ಜಾಗೆಯೆ..”ಕಟ್ಟೋಣ – ಕನಸು ಕಟ್ಟೋಣ ” ಆ ಪಟ ಅಲ್ಲಿಯ “guest house “ನ ಪಟ.. ಅಲ್ಲಿ ಉಳ್ಕ್ಕೊ೦ಬಲೆ ರೂ೦ ಸಿಕ್ಕುತ್ತು..ಹೊರನಾಡಿ೦ಗೆ ಅಲ್ಲಿ೦ದ ಕೇವಲ ೨೮ ಕಿ. ಮಿ ಇಪ್ಪದು..

      1. ಮಾಹಿತಿಗೆ ಧನ್ಯವಾದ೦ಗೊ. ಮು೦ಗಡ ಬುಕಿ೦ಗ್ ಮಾಡೆಕೊ? ಅಲ್ಲಿ ಬೇರೆ ಹೋಟೆಲ್ (ಲಾಡ್ಜಿ೦ಗ್) ವ್ಯವಸ್ಥೆಯೋ ಮತ್ತು ಇದ್ದೋ?

        1. ಅಲ್ಲಿ ಬೇರೆ ಹೋಟೆಲ್ ಇಲ್ಲೆ. guest house ಲಿ ಮಾತ್ರ ಉಳುಕ್ಕೊ೦ಬ ವ್ಯವಸ್ಥೆ ಇಪ್ಪದು.

  9. Article chenda aydu.. adare ganigarike nilsiddu oleldatu, illadre kudure mukha innondu ballary avtitaali…

    1. ಕುದುರೆಮುಖ ಇನ್ನೊ೦ದು ballary ಖ೦ಡಿತವಾಗಿಯೂ .ಆಗ. mining ಮಾದಿದ ಜಾಗೆಲಿ ಮಣ್ನಿನ ಸವಕಳಿ ಆಗದ್ದಹಾ೦ಗೆ ಗಿಡ೦ಗಳ .. ನೆಟ್ಟೀದು.

    2. ಧನ್ಯವಾದ ಮಾವ!! ಇಲ್ಲಿ ನೇಲಿಸಿದ ಪಟ೦ಗ ೩೦ ವರ್ಷ ಸತತ ಗಣಿಗಾರಿಕೆ ಮಾಡಿಗೊನ್ಡಿಪ್ಪಗ ತೆಗದ ಪಟ೦ಗ ಹಾ೦ಗಾಗಿ ಇಲ್ಲಿ ಗಣಿಗಾರಿಕೆ ಎಶ್ಟು ಸಮಯ ಮಾಡಿದರೂ ಎ೦ಗಳ ಕುದ್ರೆಮುಖ ಹಸಿರು ಹಸಿರಾಗೆ ಇಕ್ಕು..ಆದರೆ ballary ಯ ಹಾ೦ಗೆ ಖ೦ದಿತಾ ಆಗ..

  10. ಕುದುರೆಮುಖ ಚೆಂದದ ಜಾಗೆ.೧೯೯೬ರಲ್ಲಿ ನೋಡಿದ್ದೆ.
    ಇಷ್ಟೆಲ್ಲಾ ಕರ್ಚಿ ಮಾಡಿ ನಮ್ಮಲ್ಲಿಪ್ಪ ಅದುರಿನ ಹೆರದೇಶಕ್ಕೆ ಕಳುಸುದು ದಂಡ,ನಾಳೆ ನಮಗೆ ಬೇಕಾರೆ ಎಲ್ಲಿಗೆ ಹೋಪದು ಹೇಳಿ ಆವಾಗಲೇ ಎನಗೆ ಕಂಡತ್ತು.

  11. ಶುದ್ದಿ ಲಾಯಕ್ಕ ಆಯ್ದು. ಎಂತ ಸಂಶಯವೂ ಬಯಿಂದಿಲ್ಲೆ.

  12. ಕುದುರೆಮುಖ ಮತ್ತೆ ಅಲ್ಲಿಯಾಣ ಉದ್ಯಾನ ನೋಡ್ಲೆ ಹೇಳಿ ಮಂಗಳೂರಿಂದ ಎಂಗೊ ಹೋದ್ದದು ಇದ್ದು, ಹಲವಾರು ವರ್ಷ ಮೊದಲು.
    ಅಲ್ಲಿ ಗಣಿಗಾರಿಕೆ ನಿಲ್ಲಿಸಿದ ಮತ್ತೆ ಶೂನ್ಯ ಆವರಿಸಿಕ್ಕು. ಆದರೆ, ಗಣಿಗಾರಿಕೆ ಹೇಳಿರೆ ದೇಶದ ಸಂಪತ್ತಿನ ಲೂಟಿಯೇ ಆಲ್ಲದಾ?.
    ಅದಿರಿನ ಮಂಗಳೂರಿಲ್ಲಿ ಸಂಸ್ಕರಿಸಿಂಡು ಇತ್ತಿದ್ದರೂ,ಹೆಚ್ಚಿನ ಅಂಶ ಹೆರೆ ದೇಶಕ್ಕೆ ರಫ್ತು ಆಗಿಂಡು ಇತ್ತಿದ್ದು ಹೇಳಿ ಕೇಳಿದ್ದೆ.

    1. {ಗಣಿಗಾರಿಕೆ ಹೇಳಿರೆ ದೇಶದ ಸಂಪತ್ತಿನ ಲೂಟಿಯೇ ಆಲ್ಲದಾ?. } ಸರಿಯಾದ ರೀತಿಲಿ ಮಾದಿದರೆ ಖ೦ಡಿತವಾಗಿಯೂ ಅಲ್ಲ ಹೇಳಿ ಎನ್ನ ಅಭಿಪ್ರಯ. ಗಣಿಗಾರಿಕೆ ಇಲ್ಲದ್ದೆ ಅದಿರಿನ ತೆಗವಲೆ ಎಡ್ಯನ್ನೆ. ಹೆರೆ ದೇಶಕ್ಕೆ ರಫ್ತು ಮಾಡುದು ಆದರೂ……….. k i o c l ಸುಮಾರು exportduty (೧೦-೧೫%) ಕಟ್ಟೂತು. ಮತ್ತೆ ಅದ್ರ ಕಾರ್ಮಿಕರು; …ಅದಕ್ಕೆ materials supply ಮಾಡುವ ಕ೦ಪೆನಿಗ ಕೊದುವ ಟಾಕ್ಸ್ ಎಲ್ಲ govt ಗೆ ಹೂಪದಲ್ಲದ? ಹಾ೦ಗಾಗಿ ದೇಶದ ಸಂಪತ್ತಿನ ಲೂಟಿಯೇ ಖ೦ಡಿತ ಅಲ್ಲ.

  13. ಆನು ಉಜಿರೆಲಿ ಪಿ.ಯು.ಸಿ. ಕಲ್ತುಗೊಂಡಿಪ್ಪಗ ಟೂರ್ ಹೋದ್ದದು ನೆಂಪಾತು. ಭದ್ರ ಹೊಳೆಗೆ ತತ್ಕಾಲ ಸಂಕ ಇತ್ತಿದ್ದು. ಡಾಮ್ ನೋಡಿದ ನೆಂಪು ಇಲ್ಲೆ, ಬಹುಶಃ ಆಗ ಇತ್ತಿಲೆ. ಸಚಿತ್ರ ಲೇಖನ ಲಾಯಿಕಾಯಿದು.

    1. ಆ ಡಾಮ್ ಅಲ್ಲಿ plant ಸುರುವಪ್ಪಗಳೆ ಇದ್ದ ಡಾಮ್ . ಆದರೆ ಅದು ಮೈನ್ ದಾರಿನ್ದ ಚುರು ಒಳ ಹೋಯಕ್ಕು. ಅನ್ದು ಸಣ್ಣಕ್ಕಿತ್ತು.೧೯೯೧ ಲಿ ಡಾಮ್ ನ ಎತ್ತರ ಹೆಚ್ಹು ಮಾಡಿದ್ದು. ಇದು ಭದ್ರ ಹೊಳೆಯ ಉಪನದಿ ಲಕ್ಯಾ ಹೆಳುವ ನದಿಗೆ ಮಣ್ಣ್ಲಿಲಿ ಕಟ್ಟೀದ ಡಾಮ್..

    2. ಧನ್ಯವಾದ ಮಾವ!! ನಿ೦ಗ ಕಲ್ತುಗೊಂಡಿಪ್ಪಗ ನೋಡಿದ್ದಲ್ಲದ? ಹಾ೦ಗಾಗಿ ಇನ್ನೊ೦ದರಿ ನಿ೦ಗಳ “ಪಾರು” ಮತ್ತೆ ಮಕ್ಕಳ ಒಟ್ಟೀ೦ಗೆ ಇನ್ನೊ೦ದರಿ ಹೂಪಲಕ್ಕು… 😉

      1. ಅಯ್ಯೋ…”ಪಾರು” ವ ಎನಗೆ ಗೆಂಟು ಹಾಕಿರೆ ಎನ್ನ ಮನೆ ದೇವರಿಂಗೆ ಕೋಪ ಬಕ್ಕು….!!!

  14. ದೀಪಿಅಕ್ಕಾ,
    ಶುದ್ದಿಗೊಕ್ಕೆ ಒಪ್ಪಕೊಟ್ಟೊಂಡು ಅಲ್ಲಿಂದಲೇ ಪ್ರೋತ್ಸಾಹಕೊಟ್ಟೊಂಡು ಇದ್ದೋರು, ಈಗ ಬೈಲಿಂಗೇ ಇಳುದು ಶುದ್ದಿ ಹೇಳುಲೆ ಸುರುಮಾಡಿದ್ದು ನಿಜಕ್ಕೂ ಕೊಶಿ ಆತು.
    ಬನ್ನಿ, ಇನ್ನು ಶುದ್ದಿ ಹೇಳ್ತಾ ಇರಿ. ಕೇಳುಲೆಂಗೊ ಇಪ್ಪಗ ನಿಂಗೊಗೆ ಹೇಳುಲೆಂತಾಯೇಕು, ಅಲ್ದೋ? 🙂

    ಈ ಶುದ್ದಿ ತುಂಬಾ ಚೆಂದ ಆಯಿದು.
    ಕುದುರೆಮುಖದ ಭವ್ಯತೆಯ ಗ್ರೇಶಿ ಎಷ್ಟು ಕೊಶೀ ಆತೋ, ಈಗಾಣ ಅವಸ್ಥೆಯ ಚಿತ್ರಂಗಳ ಮೂಲಕ ಕಂಡು ಮನಸ್ಸ ಕರಗಿತ್ತು.
    ಭರತನಾಟ್ಯದ ಭಾಶೆಲಿ ಹೇಳ್ತರೆ – ನವರಸಲ್ಲಿ ಬತ್ತ ಆನಂದವೂ, ದುಃಖವೂ ಎರಡುದೇ ಆತು!! 🙁

    ಶುದ್ದಿಗೊ ಬತ್ತಾ ಇರಳಿ. ಹರೇರಾಮ.

    1. ಧನ್ಯವಾದ ಮಾವ!! ಆತು ಬರವಲೆ ಪ್ರಯತ್ನ ಮಾಡುತ್ತೆ ..

  15. ಕುದುರೆಮುಖದ ಪಟಂಗ ಲಾಯಿಕ ಬಯಿಂದು.ಸಣ್ಣಕಿಪ್ಪಗ ಒಂದರಿ ಟೂರ್ ಹೋದ್ದದು ನೆಂಪಾತು.ಸವಿವರ ಶುದ್ಧಿ ಚೆಂದದ ಪಟಂಗಳ ಕೊಟ್ಟದಕ್ಕೆ ಧನ್ಯವಾದಂಗೋ!!

    1. ಧನ್ಯವಾದ ಮಾವ!!
      {ಸಣ್ಣಕಿಪ್ಪಗ ಒಂದರಿ ಟೂರ್ ಹೋದ್ದದು} ಅ೦ಬಗ ಸುಮಾರು ಸಮಯ ಆದಿಕ್ಕು ಇನ್ನೊ೦ದರಿ ಎಡಿಗಾರೆ ಈಗ ಹೋಗಿ ನೋಡಿ!!!

  16. ವಾ..!! ಕುದುರೆ ಮುಖವ ಪಟಲ್ಲಿ ನೋಡಿ ಭಾರಿ ಕೊಶಿಯಾತು ಅಕ್ಕ… ಅಲ್ಲಿಯಾಣ ವಾತಾವರಣ ನೋಡಿರೆ ಭಾರೀ ಚೆ೦ದ ಕಾಣ್ತು..
    ಹಸಿರು ತೋರಣ ಕಟ್ಟಿದ ಬೆಟ್ಟ ಗುಡ್ಡೆಗೊ.. ಮೋಡ, ಹೊಳೆ ಎಲ್ಲಾ ಚೆ೦ದ ಇದ್ದು..
    ಕುದುರೆ ಮುಖದ ಒ೦ದು ಇಣುಕು ತೋರ್ಸಿದ್ದಕ್ಕೆ ಧನ್ಯವಾದ೦ಗೊ ಅಕ್ಕ..

    ಹಾ ಮತ್ತೆ ನಮ್ಮ ಬೆ೦ಗ್ಳೂರುದೆ ಹಾ೦ಗೆ ಅಲ್ಲದೋ – ಎಲ್ಲಾ ಊರಿನ ಜೆನ೦ಗೊ ಸಿಕ್ಕುಗು..
    ನಿ೦ಗೊ ಹೇಳಿದಾ೦ಗೆ ನೀರು ಮಾನ್ರ ನಲ್ಲಿ೦ದ ಕುಡುದಿಕ್ಕ ಲೆಡಿಯಾ.. 😉

    1. ಓದಿದಕ್ಕೆ ಧನ್ಯವಾದ 🙂
      {ಮತ್ತೆ ನಮ್ಮ ಬೆ೦ಗ್ಳೂರುದೆ ಹಾ೦ಗೆ ಅಲ್ಲದೋ – ಎಲ್ಲಾ ಊರಿನ ಜೆನ೦ಗೊ ಸಿಕ್ಕುಗು.}
      ಅಪ್ಪು ಬೆ೦ಗ್ಳೂರುದೆ ಹಾ೦ಗೆ,ಎಲ್ಲಾ ಊರಿನ ಜೆನ೦ಗೊ ಸಿಕ್ಕುಗು.ಆದರೆ ಕುದುರೆಮುಖ ಊರು ಎಶ್ಟು ಸಣ್ಣಾ ಹೇಳಿರೆ…ಬೆ೦ಗ್ಳೂರಿನ ಒ೦ದು area ದ ಅರ್ಧದಷ್ಟೂ ಇರ!!! ಮತ್ತೆ ಇನ್ನೊ೦ದು ವಿಷಯ ಎ೦ತ ಹೇಳಿರೆ ಇಲ್ಲಿ ಎಲ್ಲಾ ಕೆಲವೊ೦ದರಿ ಹತ್ತರಾಣ ಮನೆಲಿ ಆರಿದ್ದವು ಹೆಳಿಯೇ ಗೊ೦ತಿರ್ತಿಲ್ಲೆ ಅಲ್ಲಿ ಹಾ೦ಗಲ್ಲ ಎಲ್ಲೋರಿ೦ಗೂ almost ಇಡೀ ಊರ್ನೊರನ್ನೆಲ್ಲಾ ಗೊ೦ತಿಕ್ಕು 🙂

  17. ದೀಪಿ..ಲಾಇಕಾಯಿದು ಆತ. ಓದುವಾಗ ನಾವು ಅಲ್ಲಿ ಆಡಿದ್ದು ಎಲ್ಲ ನೆನಪಾತು. ಮನೆಗ ಎಲ್ಲಾ ಈಗ ಹಾಮಸು ಬನ್ದದು ನೊಡಿ ಬೆಜಾರತು….ನೀನು park li ಅಡಿಗೊನ್ದಿತ್ತ ಪಟ ಹಾಕಕ್ಕಾತು.ದೀಪಿ ಕುದ್ರೆಮುಖ ಬಗ್ಗೆ ಒಪ್ಪಣ್ಣಲ್ಲಿ ಬರದ್ದು ಹೆಳುವಾಗ vidya atte english li ಬರದ್ದಾ ಹೇಳಿ ಕೇಳಿತ್ತು. ನೀನು ಬರವದರ ಮುನ್ದುವರುಸು. ಇನ್ನೊ೦ದರಿ ಕುದ್ರೆಮುಖದ ನಿನ್ನ ಬಾಲ್ಯದ ಬಗ್ಗೆ ಬರೆ ಆತ. ಬರೆತ್ತ ಬರೆತ್ತ ….ನಿನ್ನ ಬರವಣಿಗೆ ಲಾಯಿಕಾಗಲಿ ಹೇಳಿ ಎನ್ನ ಹಾರೈಕೆ.ಆತ.

  18. ಒಳ್ಳೇ ಪಟ೦ಗೊ. ಧನ್ಯವಾದ೦ಗೊ.
    ಕುದುರೆಮುಖ, ಒಟ್ಟಾರೆಯಾಗಿ ಹೇಳ್ತರೆ ಮಲೆನಾಡು ಪೂರ್ತಿ ಮಳೆಗೆ ಭಾರೀ ಪ್ರಸಿಧ್ಧ ಅಲ್ಲದೊ.. ಆನು ಕಳುದ ಸರ್ತಿ ಬ೦ದಿಪ್ಪಗ ಕೂಡ ಶೃ೦ಗೇರಿ ಹೊಡೇ೦ಗೆ ಬ೦ದಿತ್ತಿದ್ದೆ. ಅಲ್ಲಿಯಾಣ ಹಸಿರು ವನಸಿರಿ, ಗಾಳಿ, ಗ್ರಾಮೀಣತೆ, ಜನ೦ಗೊ, ಅವರ ಜೀವನಶೈಲಿ ಎಲ್ಲವೂ ಆಸಕ್ತಿ ದಾಯಕ. ಲಾಯಕ ಲೇಖನಕ್ಕೆ ಧನ್ಯವಾದ೦ಗೊ. ಪುರುಸೊತ್ತಿಲ್ಲಿ ಇನ್ನೊ೦ದರಿ ಓದೆಕ್ಕಷ್ಟೆ.

    1. ಓ ಅಪ್ಪೊ ಶೃ೦ಗೇರಿಗೆ ಹೊದಿತ್ತಿರೋ…ಇನ್ನೊ೦ದರಿ ಹೋದರೆ ಕುದುರೆಮುಖವ ನೋಡಿ.ಅಲ್ಲಿ೦ದ ಹೆಚ್ಚು ದೂರ ಇಲ್ಲೆ ಃ-).
      ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×