ನಮ್ಮ ಬೈಲಿನೋರಿಂಗೆ ನೇರಂಪೋಕು(ಹೊತ್ತು ಹೋಪಲೆ ಇಪ್ಪ) ಒಯಿವಾಟುಗೊಕ್ಕೆ ಏನೂ ಕಮ್ಮಿ ಇಲ್ಲೆ!
ಮನೆಲೇ ಎಂತಾರು ಗುರುಟುದೋ, ನೆರೆಕರೆ ಸರ್ಕೀಟು ಬಿಡುದೋ, ಬೈಲಿಲಿ ತಿರುಗುದೋ, ಚೆಂಙಾಯಿಗಳೊಟ್ಟಿಂಗೆ ಲೊಟ್ಟೆ ಹರಟುದೋ (ಇಲ್ಲಿ ಮಾಡ್ತ ನಮುನೆ) – ಹೀಂಗೇ ಎಂತಾರು ಇರ್ತು.
ಹೇಂಗೂ ಇಡೀ ಪುರುಸೊತ್ತಿನ ಜೀವಮಾನ ಇದಾ..
ಇದೇ ಪುರುಸೊತ್ತಿನ ಸಮೆಯಲ್ಲಿ ಊರಿಲಿ ಎಲ್ಯಾರು ಆಟಬಂದರೆ ಮತ್ತೆ ಕೇಳುದೇ ಬೇಡ, ಎಲ್ಲದಕ್ಕೂ ಹೋತು, ಪಳ್ಳತಡ್ಕಣ್ಣನೂ- ಕುಡ್ಪಲ್ತಡ್ಕಬಾವನೂ ಒಟ್ಟಿಂಗೆ ಹೆರಡುಗು, ನಮ್ಮ ದೊಡ್ಡಬಾವ ಹೇಂಗೂ ಬಂದೇ ಬಕ್ಕನ್ನೆ; ಎಲ್ಲೊರೂ ಸೇರಿ ಒಟ್ಟಿಂಗೆ ಒಂದು ಗೌಜಿ!
ಆಟದ ಅಡ್ಕ ರಜ ಹೊಡಿಮಾಡಿಕ್ಕಿ ಮನಗೆ ಬಂತು, ಮರದಿನ ಮದ್ಯಾನ್ನ ಒರೆಂಗೆ ಒರಗಿತ್ತು!
ಎದ್ದಮತ್ತೆ ಆ ದಿನ ಎಲ್ಯಾರು ಆಟ ಇದ್ದೋ ನೋಡಿತ್ತು – ನವಗೆ ಬೇರೆಂತ ಮಂಡೆಬೆಶಿ, ಅಲ್ಲದೋ!
ಹಾಂಗೆ ನೋಡಿರೆ – ಕೃಷಿ ಮಾಡ್ತವಂಗೆ ಯೇವತ್ತೂ ಕೆಲಸ ಇದ್ದು, ಯೇವತ್ತೂ ಅಂಬೆರ್ಪುದೇ ಇದ್ದು..!!
ಅದರೊಟ್ಟಿಂಗೆ ಹೀಂಗಿರ್ತ ಮನೋರಂಜನೆಗೊಕ್ಕೆ ಪುರುಸೊತ್ತೂ ಇದ್ದು!
ಪೇಟೆಮಕ್ಕಳ ಹಾಂಗೆ ಉದಿಯಾದರೆ ಆಪೀಸು, ಇರುಳಾದರೆ ಮನೆ, ಯೇವತ್ತುದೇ ಅಂಬೆರ್ಪೇ ಹೇಳ್ತ ಹಾಂಗೆಂತೂ ಇಲ್ಲೆನ್ನೆ!
ನಮ್ಮ ಬೈಲಿಲಿ ಆಟದ ಮರುಳಂಗೊ ಇಪ್ಪದು ಗೊಂತಿಪ್ಪದೇ. ಬೈಲಿನ ನೆರೆಕರೆಲಿ ಎಷ್ಟೇ ದೂರಲ್ಲಿ ಆಟ ಇದ್ದರೂ ಅಲ್ಲಿಗೆ ಹೋಗಿಯೇ ಹೋಕು.
[ಮರುಳಂಗೊ ಹೇಳಿರೆ ಅದೊಂದು ಪರಿಭಾಷೆ! – ನಿಜವಾಗಿ ಮರುಳು ಹೇಳಿ ಅರ್ತ ಅಲ್ಲ,
ಬದಲಾಗಿ ಆ ಬಗ್ಗೆ ಅತಿ ಪ್ರೀತಿ ಇಪ್ಪವ್ವು ಹೇಳಿ ಲೆಕ್ಕ; ಮರುಳ° ಹೇಳಿರೆ ನಾಳೆ ಚೆಂಬರ್ಪು ಅಣ್ಣ, ಚೆನ್ನಬೆಟ್ಟಣ್ಣ, ಬಾಯಾರು ರಾಜಣ್ಣ, ವೇಣೂರಣ್ಣ – ಎಲ್ಲ ಸೇರಿ ಕೊತ್ತಳಿಂಗೆಲಿ ಹಾಕುಗಿದಾ, ಒಪ್ಪಣ್ಣಂಗೆ! ;-( ]
ಆಟ ನೋಡಿಕ್ಕಿ ಬಪ್ಪಾಗ ಅಲ್ಲಿ ಬಂದ ವೇಷಂಗಳ ಬಗ್ಗೆ ಒಂದು ಚರ್ಚೆಯೂ ಅಪ್ಪಲಿದ್ದು.
ಇಂದು ದೇವಿ ವೇಷ ಭಾರೀ ಚೆಂದ ಆಯಿದು.. , ಮೈಷಾಸುರ° ಕೊಣುದ್ದದು ಏನೂ ಸಾಲ.., ಎಡಕ್ಕಿಲಿ ಒಂದರಿ ಬಾಗೊತಂಗೆ ಗೆಂಟ್ಳು ಕಟ್ಟಿತ್ತೋಳಿಗೊಂಡು.., ಮಂಗಳ ಲಾಯ್ಕಾಗಿತ್ತು.., ಎಂತದೇ ಆದರೂ ನಮ್ಮ ಬಲಿಪ್ಪ° ಬಲಿಪ್ಪನೇ ಅಪ್ಪ! – ಹೀಂಗೆ ಅವ್ವವ್ವು ಗಮನುಸಿದ ವಿಷಯಂಗಳ ಮಾತಾಡಿಗೊಂಡು…
ಇದು ನಮ್ಮ ಯಕ್ಷಗಾನ ಆಟದ ಶುದ್ದಿ.
ಇದೇ ನಮುನೆ ಆಟಂಗಳ ಮರುಳರುದೇ ಇದ್ದವು.
ಯೇವ ಆಟಂಗೊ? – ಬಿಂಗಿಮಾಣಿಯಂಗಳ ಕಂಬಾಟ, ಲಗೋರಿ, ಶಾಲೆಲಿ ಕಲಿಶುತ್ತ ಖೊಕ್ಕೊ (ಕೊಕ್ಕ ಅಲ್ಲ, ಅದು ತೋಟಂಗಳಲ್ಲಿ ಅಪ್ಪದು), ಕಬಡ್ಡಿ, ರಜ್ಜ ಅರ್ತವರ ಕ್ರಿಕೇಟು, ಓಲಿಬೋಲು, ಓಡುದು, ಹಾರುದು, ಬೀಳುದು – ಹೀಂಗೆ ಎಂತೆಲ್ಲ..
ಕೆಲವು ಜೆನಕ್ಕೆ ಭಾಗವಹಿಸುದು ಇಷ್ಟ ಆದರೆ, ಮತ್ತೆ ಕೆಲವು ಜೆನಕ್ಕೆ ಅದರ ನೋಡುದು ಒಂದು ಕೊದಿ!
ಮದಲಿಂಗೆಲ್ಲ ಹೀಂಗಿರ್ತ ಆಟಂಗಳ ನೋಡೆಕ್ಕಾರೆ ದೊಡ್ಡಬಾವನ ಶಾಲಗೇ ಹೋಯೆಕ್ಕಷ್ಟೆ!
ಈಗೀಗ ರೇಡ್ಯಲ್ಲಿ, ಟೀವಿಲಿ, ಪೇಪರಿಲಿ ಎಲ್ಲ ಬತ್ತಿದಾ, ಹಾಂಗಾಗಿ ಅದರ ಬಗ್ಗೆ ಗಮನ ಕೊಡುವೋರೂ ಜಾಸ್ತಿ ಆಯಿದವು, ಅದರ ಶುದ್ದಿ ಹೇಳುವೋರೂ ಜಾಸ್ತಿ ಆಯಿದವು.
ಮನೋರಂಜನೆಗೆ ತಕ್ಕ ಈ ಆಟಂಗಳ ಹಚ್ಚಿಗೊಂಡವು ನಮ್ಮ ಬೈಲಿಲಿ ಕೆಲವು ಜೆನ ಇದ್ದವು, ಅದರೊಟ್ಟಿಂಗೆ ಅದನ್ನೇ ಜೀವನ ಹೇಳಿಗೊಂಡು ಮಾಡಿದೋರೂ ಇದ್ದವು.
ಈ ಆಟಂಗಳಲ್ಲಿ ಲೋಕದ ಜೆನಂಗಳ ಹೆಚ್ಚು ಎಳದ ಆಟ ಹೇಳಿರೆ ಪುಟ್ಟುಬೋಲು.
(ಪುಟ್ಟು ಚೆಂಡಿನ ಕಾಲಿಲಿ ಕುಟ್ಟುತ್ತ ಕಾರಣ ಕುಟ್ಟುಬೋಲು ಹೇಳಿಯೂ ಹೇಳ್ತವಡ, ಅಜ್ಜಕಾನಬಾವ° ಹೇಳಿದ್ದು!)
ಲೋಕಲ್ಲಿ ಅದರ ಕೊದಿ ಜಾಸ್ತಿ ಆದರೂ, ನಮ್ಮ ಊರಿಲಿ, ನಮ್ಮ ದೇಶಲ್ಲಿ ಅದರ ಗಂಧ ರಜ ಕಮ್ಮಿಯೇ ಅಡ!
ಹಾಂಗಾರೆ ನಮ್ಮ ಆಸಕ್ತಿ ಮತ್ತೆಂತರ?
ಕ್ರಿಗೇಟು!!
ನಮ್ಮ ಊರಿಲಿ ಇಷ್ಟು ಸಣ್ಣ ಮಾಣಿಗೇ ಶುರು ಆವುತ್ತು, ಇದರ ಕೊದಿ!
ಜಾಲಮಧ್ಯಲ್ಲಿ ಮೂರು-ಮೂರು ಸಲಕ್ಕೆತುಂಡುಗಳ ನೆಟ್ಟು, ಅದರ ಒಳಾಣ ಜಾಗೆಲಿ ಆಡ್ತ ಆಟ.
ಒಬ್ಬ ಬೋಲು (ಚೆಂಡಿಂಗೆ ಇಂಗ್ಳೀಶಿಲಿ ಹಾಂಗೆ ಹೇಳುದಿದಾ) ಇಡ್ಕಲೆ, ಇನ್ನೊಬ್ಬ ಅದರ ಬೀಸಕ್ಕೆ ಬಡಿವಲೆ!
ಇಡೀ ಜಾಲಿಲೆ ಆಗಿ ಹನ್ನೊಂದು ಜೆನ ಆ ಬೋಲಿನ ಹಿಡಿವಲೆ – ಎರಡು ಜೆನ ಆಡ್ತದರ ತಪ್ಪು-ಸರಿ ನೋಡ್ಳೆ – ಗುರಿಕ್ಕಾರಂಗೊ ಅಡ!
~ಬಡಿತ್ತವ° ಬಡುದು ಸೀತ ಗಾಳಿಲೇ ಜಾಲಕರೆಯ ಗೆರೆ ದಾಂಟಿರೆ ಆರು ಪೋಯಿಂಟಡ,
~ನೆಲಕ್ಕಂಗೆ ಬಿದ್ದು ಗೆರೆ ದಾಂಟಿರೆ ನಾಲ್ಕು ಪೋಯಿಂಟಡ.
~ಅದರಿಂದ ಮೊದಲೇ ಆರಾರು ಹಿಡ್ಕೊಂಡರೆ ಒಪಾಸು ಸಲಕ್ಕೆ ತುಂಡಿನ ಹತ್ರೆ ನಿಂದವಂಗೆ ಕೊಡೆಕ್ಕು – ಅಷ್ಟ್ರ ಒಳ ಒಂದರಿಂದ ಇನ್ನೊಂದಕ್ಕೆ ಓಡಿಗೊಂಡ್ರೆ ದಕ್ಕಿತ್ತು. ಎಷ್ಟು ಸರ್ತಿ ಓಡಿದ್ದನೋ ಅಷ್ಟು ಪೋಯಿಂಟು!!
ಅತ್ಲಾಗಿ ಓಡಿದವ° ಸಲಕ್ಕೆ ತುಂಡಿನ ಹತ್ತರೆ ನಿಂದವನ ಕೈಗೆ ಬೋಲು ಸಿಕ್ಕುವ ಮದಲೇ ಎತ್ತದ್ರೆ, ಆ ಬೋಲಿಲಿ ಸಲಕ್ಕೆ ತುಂಡುಗೊಕ್ಕೆ ಬಡುದು ಬೀಳುಸುಗು.
ಅಂಬಗ ಓಡಿ ಎತ್ತದ್ದವ° ಆಟಂದ ಹೆರ ಅಡ. ಅವ° ಎತ್ತೆಕ್ಕಾರೆ ಮದಲೇ ಬೋಲು ಹಿಡ್ಕೊಂಡವು ಇಡ್ಕಿದ್ದು ಸೀತ ಬಂದು ಸಲಕ್ಕಗೇ ಬಡುದರುದೇ ಹಾಂಗೇ ಅಡ.
ಇದು ನಮ್ಮ ಊರಿಲಿ ಆಡ್ತ ಈ ಆಟದ ತೋರಮಟ್ಟಿನ ನಿಯಮಂಗೊ..!
~
ಆಡಿರೆ ಬಚ್ಚುತ್ತಿಲ್ಲೆಯೋ – ಹಾಂಗಾಗಿ ಅದರ ನೋಡುವೋರೇ ಜಾಸ್ತಿ!
ಅಪ್ಪು, ಈ ಆಟವ ಮನೋರಂಜನೆಯ ಅಂಗ ಆಗಿ ತೆಕ್ಕೊಂಡವು ಧಾರಾಳ- ನಮ್ಮ ಊರಿಲಿದೇ ಹಾಂಗೇ!
ನೋಡುವೋರು ಜಾಸ್ತಿ ಆಗಿಯೇ ಅದರ ಆಡುವವುದೇ ಜಾಸ್ತಿ ಆದ್ದು. ಆಡುವೋರು ಜಾಸ್ತಿ ಆಗಿಯೇ ಅದರ ನೋಡುವೋರು ಜಾಸ್ತಿ ಆದ್ದು.
ಅಂದು ಬೈಲಿನ ಎಲ್ಯಾರು ಯೇವದಾರು ಮೇಳದ ಆಟ ಇದ್ದು ಹೇಳಿ ಆದರೆ ಯೇವ ರೀತಿ ಕೊಶೀಲಿ ಹೋಯ್ಕೊಂಡು ಇತ್ತಿದ್ದವೋ – ಅದೇ ನಮುನೆ ಈಗ ಪ್ರಪಂಚದ ಎಲ್ಯಾರು ಈ ಆಟ ಇದ್ದು ಹೇಳಿ ಆದರೆ ಕೊಶೀಲಿ ಅದರ ಬಗ್ಗೆ ತಿಳ್ಕೊಂಗು!
ಮರದಿನ ಪೇಪರಿಲಿ ಓದಿರೆ ಸಾಕು ಹೇಳಿ ಆದರೆ ಕಜೆ ಚಂದ್ರದೊಡ್ಡಪ್ಪನ ಹಾಂಗೆ – ಕೆಲವು ಜೆನ ಆಟದ ಮರದಿನ ಇಡೀ ಕೂದಂಡು ಓದುಗು!
ಅಲ್ಲ, ಅಂಬಗಳೇ ಆಯೆಕ್ಕು ಹೇಳಿ ಆದರೆ – ರೇಡ್ಯಲ್ಲಿ ಹೇಳ್ತವಡ ಅಲ್ಲದಾ, ಅದಾ- ಒಂದೊಂದೇ ಚೆಂಡು ಹಾಕಿಅಪ್ಪಗ ಎಂತಾತೂಳಿ ಹೇಳ್ತ ಕಮೆಂಟ್ರಿ – ಅದರ ಕೇಳುಗು.
ಆಟದ ಮುನ್ನಾಣ ದಿನ ರೇಡ್ಯದ ಬೆಟ್ರಿ ಸರಿ ಇದ್ದೋಳಿ ನೋಡ್ಯೊಂಡ್ರಾತು, ಅಷ್ಟೆ – ಬಂಡಾಡಿ ಅಜ್ಜಿಯ ರೇಡ್ಯದ ಹಾಂಗೆ ಬೆಟ್ರಿ ಕಮ್ಮಿ ಆಗಿ ಕೆರೆಕೆರೆ ಹೇಳಿರೆ ಆಗ ಇದಾ!
ಬೆಂಗುಳೂರಿಲಿ ಕೆಲವು ಜೆನ ಕೆಮಿಗೆ ಸ್ಪೀಕರು ಸಿಕ್ಕುಸಿಗೊಂಡು ಬಸ್ಸಿಲಿ ಹೋಪಗಳೂ ಕೇಳ್ತವಡ, ಪೆರ್ಲದಣ್ಣ ಹೇಳಿದ್ದು. ನಮ್ಮ ಬೈಲಿಲಿ ಪಳ್ಳತಡ್ಕ ಗೆಣವತಿದೊಡ್ಡಪ್ಪ, ಆಚಮನೆ ಪುಟ್ಟಣ್ಣ – ಇವೆಲ್ಲ ತೋಟಲ್ಲಿದೇ ಆಟ ಕೇಳುಗು; ಅಡಕ್ಕೆ ಹೆರ್ಕುವಗಳೂ ಕವಂಗಕುರುವೆಯ ಒಳದಿಕೆ ರೇಡಿಯ ಮಾತಾಡಿಗೊಂಡು ಇಕ್ಕು!
ಅದೂ ಅಲ್ಲದ್ದೆ, ಕೇಳಿರೂ ಸಾಲ, ನೋಡೆಕ್ಕೇ ಹೇಳಿ ಆದರೆ ಟೀವಿ ಮಡಗ್ಗು.
ಈಗೀಗ ಹೆಚ್ಚಿನ ಎಲ್ಲೋರ ಮನಗೂ ಟೀವಿ ಬೈಂದನ್ನೆ, ಶಬ್ದವೂ, ಚಿತ್ರವೂ ಎರಡುದೇ ಕಾಣ್ತಿದಾ – ಹಾಂಗಾಗಿ ಈಗ ಕ್ರಿಗೇಟು ನೋಡ್ಳೆ ಇದುವೇ ಕೊಶಿ ಅಡ!
~
ಈಗೀಗ ಕ್ರಿಗೇಟು ಹೇಳಿರೆ ಕ್ರಿಗೇಟು ಮಾಂತ್ರ ತೋರುಸುದು ಅಲ್ಲಡ!
ಇಡೀ ಆಟವ ಸಿನೆಮದ ಹಾಂಗೆ ಮಾಡಿ ತೋರುಸುದಲ್ಲದ್ದೇ, ಎಡೆಡೆಲಿ ಕೆಲವು ಕೂಚಕ್ಕಂಗೊ ಕೊಣಿತ್ತದರನ್ನೋ, ನೋಡ್ತವು ಬೊಬ್ಬೆ ಹೊಡೆತ್ತದನ್ನೋ – ಸುತ್ತುಮುತ್ತು ನೆಡೆತ್ತ ಎಲ್ಲವನ್ನುದೇ ತೋರುಸುಗು!
ಅದಲ್ಲದ್ದೇ, ಪುರುಸೊತ್ತಿಲಿ ಬೆನ್ನುಬೇನೆ ಮದ್ದನ್ನೋ, ಕೋಲ ಮಾಡಿ ಕುಡಿತ್ತವಕ್ಕೆ ಕೋಕಕೋಲವನ್ನೋ, ಪಾತ್ರ ತೊಳೆತ್ತ ಸಾಬೊನು ಹೊಡಿಯನ್ನೋ, ಚೆಂದದ ಎಲಿಪ್ಪಾಶಾಣವನ್ನೋ, ರುಚಿಯಾದ ನಾಯಿಬಿಸ್ಕೇಟನ್ನೋ
-ಎಲ್ಲ ಎಡ್ವಟೇಸು(Advertisement) ತೋರುಸುತ್ತವಡ!
ಜೆನಂಗೊ ನೋಡೆಕ್ಕು ಹೇಳಿ ಹಾಕುತ್ತ ಈ ಎಡ್ವಟೇಸು ಎಷ್ಟು ಜೆನ ನೋಡ್ತವೋ ಬಿಡ್ತವೋ – ಉಮ್ಮ! ನೋಡಿದಷ್ಟು ಸಾಕವಕ್ಕೆ!
ಮಾಷ್ಟ್ರಮನೆಅತ್ತೆ ಅಂತೂ ಈ ಎಡ್ವಟೇಸು ಬಂದರೆ ‘ಬೆಶಿನೀರಿಂಗೆ ಕಿಚ್ಚು ಹಾಕಿ ಬತ್ತೆ’, ‘ಒಲಗೆ ತುಂಬುಸಿ ಬತ್ತೆ’, ‘ಚಾಯ ಮಡಗಿ ಬತ್ತೆ’ – ಹೇಳಿಕ್ಕಿ ಟೀವಿ ಬುಡಂದ ಎದ್ದು ಹೋವುತ್ತವಡ.
ಆಟ ಸುರು ಆದರೆ ಮತ್ತೆ ಹಂದುಲೆ ಮನಸ್ಸು ಬತ್ತಿಲ್ಲೆ ಅಲ್ಲದೋ! ಆದರೆ ಅಜ್ಜಕಾನಬಾವ° ಈ ಎಡ್ವಟೇಸು ನೋಡಿಯೇ ಕೊಶಿಪಡಕ್ಕೊಂಬದು!!
ಇದರೆಡಕ್ಕಿಲಿ ಮೊನ್ನೆ ಎಂತಾತು ಹೇಳಿರೆ, ನಮ್ಮ ಅರವಿಂದಪ್ಪಚ್ಚಿ ಮದ್ಯಾನ್ನ ಸಿಕ್ಕಿದವು – ಪುತ್ತೂರು ಬಷ್ಟೇಂಡಿಲಿ, ಚೊಕ್ಕಾಡಿಗೆ ಹೋಪದಡ.
ಕೈಲಿ ಮೊಬಾಯಿಲು ಇತ್ತಲ್ದ, ನೋಡಿಗೊಂಡು ಇತ್ತಿದ್ದವು. ಎಂತರಪ್ಪ ಹಾಂಗುದೇ ನೋಡುತ್ಸು, ಇಷ್ಟುದ್ದ ಸಮೋಸ (ಸರಳ ಮೊಬೈಲು ಸಂದೇಶ (sms) ) ದೊಡ್ಡಬಾವನೂ ಕಳುಸುತ್ತ°ಯಿಲ್ಲೆನ್ನೆ!- ಹೇಳಿ ಗ್ರೇಶಿ ಕೇಳಿದೆ, ‘ಎಂತ ಅರವಿಂದಪ್ಪಚ್ಚಿ, ಹಾಂಗುದೇ ಮೊಬಯಿಲು ನೋಡ್ತಿ’ – ಹೇಳಿಗೊಂಡು. ‘ಇಂದು ಕ್ರಿಕೇಟು ಇದ್ದನ್ನೆ ಒಪ್ಪಣ್ಣ!! ‘ – ಹೇಳಿದವು. ಬುದವಾರದ್ದಿನ – ಬಾರತವೂ- ದಕ್ಷಿಣಾಪ್ರಿಕವೂ ಆಡುದಡ.
ಮದ್ಯಾಂತಿರುಗಿ ಸುರು ಆಗಿ, ನೆಡಿರುಳು ಮುಗಿತ್ತ ನಮುನೆದು. ಐವತ್ತು ಐವತ್ತು – ನೂರು ಓವರು.
ನೂರು ಓವರಿಂಗೆ ಆರುನೂರು ಸರ್ತಿ ಚೆಂಡು ಇಡ್ಕೆಕ್ಕು, ಅದು ಗೊಂತಿದ್ದನ್ನೇ – ನವಗೆ ಅದೆಲ್ಲ ಸದ್ಯ ಅರ್ತ ಅಪ್ಪಲೆ ಸುರು ಆದ್ದು.
ಓ! ಅಂಬಗ ಇಂದು ನಮ್ಮ ಬೈಲಿಲಿ ಗೌಜಿಯೇ ಗೌಜಿ ಹೇಳಿ ಅನುಸಿತ್ತು!
ಚೊಕ್ಕಾಡಿಬಸ್ಸು ಬಂದಕೂಡ್ಳೆ ಅಪ್ಪಚ್ಚಿ ಹೆರಟವು, ಗುರುಗೊ ಅಲ್ಲಿಗೆ ಬಪ್ಪದಡ, ಹೊತ್ತಪ್ಪಗ – ಹಾಂಗೆ ಅಂಬೆರ್ಪು!!
~
ಸೀತ ಬೈಲಿಂಗೆ ಬಪ್ಪಗ ಯೋಚನೆ ಮಾಡಿಗೊಂಡು ಬಂದೆ – ಇಂದು ಕೆಲವು ಜೆನ ಎಲ್ಲ ಹೇಂಗೆ ಇಕ್ಕು!!
ಸಾಕೇತ ಮಾಣಿಗೆ ಚಿಪ್ಸು ತಿಂಬಲೂ ಪುರುಸೊತ್ತಿರ, ಆಚಮನೆಪುಟ್ಟಣ್ಣ ಗೊಬ್ಬರ ಹೊರ್ತರೆ ರೇಡ್ಯವನ್ನೂ ಒಟ್ಟಿಂಗೆ ಹೊರುಗು, ಪಳ್ಳತಡ್ಕ ದೊಡ್ಡಪ್ಪ ಬುಡಬಿಡುಸುತ್ತರೆ ರೇಡ್ಯ ಒಂದು ಒಟ್ಟಿಂಗೆ ಮಡಿಕ್ಕೊಂಗು,
ಮುಳಿಯಾಲದಪ್ಪಚ್ಚಿ ನಾಳೆ ಕನ್ನಡಪ್ರಬ ಪೇಪರಿನ ಆಟದಪುಟ ಇಡೀ ಓದುಗು, ದೊಡ್ಡಬಾವ ಟೀವಿನೋಡಿಗೊಂಡು ಸಮೋಸ ಕಳುಸುಗು,
ಅಜ್ಜಕಾನಬಾವ° ಅಂಬಗಂಬಗ ಬೇಂಕಿನ ಪ್ರಸಾದಂಗೆ ಪೋನುಮಾಡುಗು, ಅವನ ಬೇಂಕಿಲಿ ಟೀವಿ ಇದ್ದನ್ನೆ!
ಪೆರ್ಲದಣ್ಣ ಇಂಟರ್ನೆಟ್ಟಿಲಿ ಬಪ್ಪ ರನ್ನು ನೋಡುಗು, ಚೆಂಬರ್ಪು ಅಣ್ಣ ದೂರದರ್ಶನಲ್ಲಿ ಪದ್ಯಾಣಮಾವನ ಬಾಗವತಿಗೆ ನೋಡಿಗೊಂಡು ಕೂರುಗು!
ಮನಗೆ ಎತ್ತಿದ ಮತ್ತೆ, ಹೀಂಗೇ ರಜ ಗಾಳಿತಿಂಬಲೆ ಹೇಳಿಗೊಂಡು – ಬೈಲ ಸುರೂವಿಂಗೆ ಮಾಷ್ಟ್ರುಮಾವನ ಮನೆ ಸಿಕ್ಕುತ್ತಿದಾ, ಒಳ ಹೊಕ್ಕೆ!
ಗಣೇಶಮಾವಂದೇ ಇತ್ತಿದ್ದವು, ಟೀವಿ ನೋಡ್ಳೆ ಬಂದದೋ ತೋರ್ತು!
ಟೀವಿ ಓನು ಆಯಿದು, ಮಾಷ್ಟ್ರತ್ತೆ ಕೂದುಗೊಂಡಿದವು ಎದೂರಂಗೆ, ಹೊತ್ತಪ್ಪಗಾಣ ಎಲ್ಲ ಕೆಲಸ ಮುಗುಶಿಗೊಂಡು!
‘ಓ! ಎಂತ ಒಪ್ಪಣ್ಣಾ, ಎತ್ಲಾಗಿಂದ’ ಹೇಳಿ ಪ್ರೀತಿಲಿ ಮಾತಾಡುಸಿದವು. ಎಡ್ವಟೇಸು ಬಂದುಗೊಂಡು ಇತ್ತಿದಾ, ಒಂದು ಆಸರಿಂಗೆ ತಂದು ಕೊಟ್ಟವು.
ಅದಾದ ಮತ್ತೆ ಕ್ರಿಗೇಟು ಸುರು ಆತನ್ನೆ! ಚೆರಪ್ಪಿಗೊಂಡು ಕ್ರಿಕೇಟು ನೋಡಿದ್ದು ಮತ್ತೆ!!
ನೋಡುವಗ ಎಡೆಡೆಲಿ ವಿವರುಸಿಗೊಂಡು ಇತ್ತಿದ್ದವು – ಹೇಂಗೆ, ಏನು – ತಾನು – ಎಲ್ಲಿಗೆ ಹೋದರೆ ಎಷ್ಟು ರನ್ನು, ಹೇಂಗೆ ಹಾಕಿರೆ ವೈಡು, ನೋಬೋಲು, ಔಟು, ರನ್ನೌಟು – ಇದೆಲ್ಲ!
ಒಪ್ಪಣ್ಣಂಗೆ ರಜ ರಜ ಅರ್ತ ಆತು! ನೋಡ್ತ ಆಸಕ್ತಿ ಜಾಸ್ತಿ ಆತು, ಅಲ್ಲೇ ಕೂದುಗೊಂಡದು, ಗಟ್ಟಿಗೆ!!
ಮಾಷ್ಟ್ರಮನೆಅತ್ತೆಗೆ ಸಚಿನು ಹೇಳಿರೆ ರಜ್ಜ ಹತ್ತರೆ ಹೇಳಿ ಕಾಣ್ತು!
ಆ ಜೆನ ಜಾಲಿಂಗೆ ಇಳುದರೆ ಸಾಕು, ಇವಕ್ಕೆ ಬಾರೀ ಕೊಶಿ.
ಆ ಜೆನ ಒಂದೊಂದು ಬೋಲಿಂಗೂ ಬಡುದಪ್ಪಗ ಅತ್ತೆಗೆ ಹಾಲುಕುಡುದಷ್ಟು ಕೊಶಿ ಅಕ್ಕು!
(ಹೀಂಗೇ ಬಡುದು ಬಡುದು ಔಟಾದ ಮತ್ತೆಯೇ ಒಲೆಲಿ ಮಡಗಿದ ಹಾಲು ನೆಂಪಪ್ಪದು!)
ಆ ಜೆನ ಚೆಂದಕೆ ಆಡ್ತಡ. ಒಳುದ ಹೊಸಬ್ಬರು ಎಲ್ಲ ಒಂದೇ ನಮುನೆ ಆಡಿರೆ ಈ ಸಚಿನು ಆ ಬೋಲಿಂಗೆ ಹೇಂಗೆ ಬೇಕೋ ಹಾಂಗೆ ಆಡ್ತಡ -ಗಣೇಶಮಾವ ಹೇಳಿದವು.
ಕೂದಂಡು ನೋಡಿದೆ ಬಾವ, ರಜ ಹೊತ್ತಿಲೇ ರುಚಿ ಹತ್ತಿತ್ತು.
ಸಚಿನಿನ ಒಳ್ಳೆ ಆಟದ ಒಟ್ಟಿಂಗೆ ಗಣೇಶಮಾವನ ವಿವರಣೆಗೊ! ಒಳ್ಳೆ ಹಸರ ಸೀವಿಂಗೆ ತುಪ್ಪ ಹಾಕಿದ ನಮುನೆ. ವಾಹ್!
ಎಂಗೊ ಆಟ ನೋಡುದು ಆ ಜೆನಕ್ಕೂ ಗೊಂತಾವುತ್ತೊ – ಉಮ್ಮ, ಇಲ್ಲೆ ಆಯಿಕ್ಕು.
ಆದರೂ ಎಂಗೊ ನೋಡಿ ಕೊಶಿ ಪಟ್ಟ ಹಾಂಗೆ ಅದುದೇ ಲಾಯ್ಕ ಲಾಯ್ಕಲ್ಲಿ ಆಡಿಗೊಂಡು ಇತ್ತು.
ಅನುಬವಿಸಿ ಆಡಿಗೊಂಡು ಇತ್ತು ಆ ಸಚಿನು.
ಓವರಿನ ಸುರುವಾಣ ಚೆಂಡು ಮೂಡಕ್ಕೆ ಹೋದರೆ ಮತ್ತಾಣದ್ದು ಬಡಗಿಂಗೆ, ಅದರಿಂದ ಮತ್ತಾಣದ್ದು ತೆಂಕಕ್ಕೆ, ಮತ್ತಾಣದ್ದು ಮೇಗಂತಾಗಿ, ಓ ಅಲ್ಲೆ – ನೋಡ್ಳೆ ಕೂದವರ ತಲೆ ಮೇಲ್ಕಟೆ ಆಗಿ ಹೆರಂಗೆ, ಮತ್ತೊಂದು ಆಗ್ನೇಯಕ್ಕೆ – ಒಟ್ಟು ಇಡೀ ಜಾಲಿಂಗೆ ಹರೋ ಹರ ಮಾಡಿ
ಇನ್ನಾಣ ಬೋಲಿಂಗೆ ಎತ್ಲಾಗಿ ಬಡಿತ್ತು ಹೇಳಿ ಅದಕ್ಕೂ, ದೇವರಿಂಗೂ ಮಾಂತ್ರ ಗೊಂತಿಕ್ಕಷ್ಟೆ ಹೇಳಿದವು ಗಣೇಶಮಾವ°! – ಗಣೇಶಮಾವಂಗೆ ದೈವಬಕ್ತಿ ಜಾಸ್ತಿ ಇದಾ!!
~
ಈ ಸಚಿನು ಸಣ್ಣ ಇಪ್ಪಗಳೇ ಸೇರಿದ್ದಡ ಅಲ್ದಾ, ಹಾಂಗಾಗಿ ಒಳ್ಳೆತ ಸರುವೀಸು!
ಗಣೇಶಮಾವ° ಇದರ ಕುಂಬ್ಳೆಆಯೆನದ ದಿನಾಣ ತಂತ್ರಿಗಳ ಹಾಂಗೆ ಹೋಲುಸಿದವು.
ಅದಪ್ಪುದೇ, ತಂತ್ರಿಗೊ ಇಡೀ ಸುತ್ತಿನ ಬಲಿಕಲ್ಲಿಂಗೆ ಪೂಜೆ ಮಾಡ್ತವಿದಾ, ಅವು ಹೋದ ಹಾಂಗೆ ಜೆನಂಗಳ ಬೊಬ್ಬೆ, ಗಲಾಟೆ – ಗೌಜಿ, ಓಲಗ,ಚೆಂಡೆ – ಎಲ್ಲವುದೇ!!
ಇಡೀ ಜಾಲು ಅದರದ್ದೇ ಆತು.
ಎರಡು ಹೊಡೆಂದ ಬೋಲು ಇಡ್ಕಿರೂ ಆ ಸಲಕ್ಕೆ ತುಂಡುಗೊ ಹಂದಿದ್ದಿಲ್ಲೆ! ಎಂತ ಮಾಡುದು!
ದಕ್ಷಿಣ ಆಪ್ರಿಕಾದ ಎಲ್ಲಾ ಜೆನಂಗ ಸೇರಿ ಚೆಂಡು ಇಡ್ಕಿದವು, ಒಬ್ಬ ಆದ ಮೇಲೆ ಒಬ್ಬ – ಉಹೂಂ! ಎಂತದೂ ಹಂದಿದ್ದಿಲ್ಲೆ!!
ಬಡುದತ್ತು ಬಡುದತ್ತು, ರಜ್ಜ ಹೊತ್ತಿಲೇ ರನ್ನು ಐವತ್ತು ಆತು! ಮಾಷ್ಟ್ರಮನೆ ಅತ್ತೆಗೆ ಕೊಶಿಯೂ! ಹಾಂಗೆ ಸಚಿನು ಔಟು ಅಪ್ಪನ್ನಾರ ನೋಡುದು ಹೇಳಿಗೊಂಡು ಕೂದುಗೊಂಡವು! ಈ ಜೆನ ಬಡಿವದು ಬಡುಕ್ಕೊಂಡೇ ಇತ್ತು, ಐವತ್ತು ಇಪ್ಪದು ನೂರಾತು!!
ಮಾಷ್ಟ್ರಮನೆ ಅತ್ತಗೆ ಕೊಶಿಯೋ ಕೊಶಿ!
ಮಾಷ್ಟ್ರುಮಾವ ಪೇಟೆಂದ ತಂದ ರಸ್ಕಿನ ಪೆಕೆಟು ಒಂದರ ತಂದು ಎದುರು ಮಡಗಿದವು!
ಈಗೀಗ ಸಚಿನಿಂದು ನೂರಪ್ಪದು ಕಡಮ್ಮೆ ಅಡ, ಅಪುರೂಪಲ್ಲೆ ಆದ ಕಾರಣ ಈ ನಮುನೆ ಕೊಶಿ!
ನೂರಾದರೆ ಮತ್ತೊಂದು ಹತ್ತಿಪ್ಪತ್ತು ರನ್ನು ಬಡುದು ಔಟು ಆವುತ್ತವಲ್ಲದೋ – ಹಾಂಗೆ ಇನ್ನೊಂದು ರಜಾ ಹೊತ್ತು, ಔಟು ಆದ ಮತ್ತೆ ಅಶನ ಮಡಗುತ್ತೆ ಹೇಳಿದವು ಅತ್ತೆ!
ಹ್ಮ್, ಕಾದವು, ಕಾದವು – ಮತ್ತೊಂದು ಐವತ್ತು ಮಾಡಿತ್ತು ಸಚಿನು! ಈಗ ಅದರದ್ದು ನೂರೈವತ್ತು!!
ಪ್ರತೀ ಐವತ್ತಕ್ಕೊಂದರಿ ಹೆಲ್ಮೆಟ್ಟು ತೆಗದು ಬೇಟು ನೇಚಿ ಕೊಶಿ ತೋರುಸುತ್ತ ಕ್ರಮ ಅಡ, ಈಗಳೂ ಹಾಂಗೇ ಮಾಡಿತ್ತು!
ಆಡಿಗೊಂಡೇ ಇತ್ತು!
ಮಾಷ್ಟ್ರತ್ತೆಯ ಅಶನ ಮುಂದೆ ಹೋಯ್ಕೊಂಡೇ ಇತ್ತು!
~
ಸಣ್ಣ ಮಾಣಿ – ಸಾಕೇತಪುಟ್ಟನಿಂದ ಹಿಡುದು, ಆಚಮನೆಪುಟ್ಟಣ್ಣನ ಹಾಂಗೆ ಕೃಷಿಕರ ತೊಡಗಿ, ಜವ್ವನಿಗ ಅರವಿಂದಪ್ಪಚ್ಚಿಯನ್ನೂ ಸೇರಿ, ಗಣೇಶ ಮಾವ°, ದೊಡ್ಡಬಾವನ ಹಾಂಗೆ ತಿಳುದವರನ್ನೂ ಒಳಗೊಂಡು, ಮಾಷ್ಟ್ರತ್ತೆಯ ಹಾಂಗೆ ಮನೆವಾರ್ತೆಯವರನ್ನುದೇ ಕೊಶಿಪಡಿಸುವ ಈ ಸಚಿನು ಆರಪ್ಪಾ!!
ಇದಾರು? ಹೇಳಿ ರಜಾ ಆಸಕ್ತಿ ಬಂದು ಕೇಳಿದೆ ಅವರತ್ರೆ- ಆ ಜೆನರ ಪೂರ ಜಾತಕ ಗೊಂತಾತು!
ಸಚಿನು ಕಾಂಬಲೆ ಹೇಂಗೆ, ಅದರ ಆಟ ಹೇಂಗೆ – ಎಲ್ಲ ಮಾಷ್ಟ್ರಮನೆ ಅತ್ತೆ ಹೇಳಿದವು.
ಪೂರ್ತಿ ಹೆಸರು ಸಚಿನು ರಮೇಶ ತೆಂಡುಲ್ಕರು – ರಮೇಶ ಹೇಳ್ತದರ ಮಗ°, ‘ತೆಂಡುಲ್ಕರು’ ಹೇಳಿ ಇಪ್ಪಕಾರಣ ಮಾರಾಟಿ – ಹೇಳಿದವು ಮಾಷ್ಟ್ರುಮಾವ°!
ದೊಡ್ಡ ದೈವಭಕ್ತ° ಅಡ, ಕಳುದೊರಿಷ ಸುಬ್ರಮಣ್ಯಕ್ಕೆ ಬಯಿಂದು – ಹೇಳಿದವು ಗಣೇಶಮಾವ°, ಸುಬ್ರಮಣ್ಯಲ್ಲಿ ಅವಕ್ಕೆ ಕಾಂಬಲೆ ಸಿಕ್ಕಿ ‘ಏನು ಒಳ್ಳೆದು’ ಮಾತಾಡಿದ್ದವಡ!
ಅಂತೂ ಈ ಮೂರೂ ಜೆನ ಸೇರಿ ಅವಕ್ಕವಕ್ಕೆ ಅರಡಿವಷ್ಟು ವಿಷಯ ಕೊಟ್ಟವು.
~
ನಿನ್ನೆ ಸಾಕೇತಮಾಣಿಯ ಹತ್ರೆ, ಸಚಿನಿನ ಪಟಂಗೊ ಯೇವದಿದ್ದು ಕೇಳಿಅಪ್ಪಗ ಒಂದಟ್ಟಿ ತೋರುಸಿ – ಇಷ್ಟಿದ್ದು ಒಪ್ಪಣ್ಣಮಾವ°, ಹೇಳಿದ!
ಮಾವ° ಹೇಳುವಗ ಒಂದರಿ ಬೇಜಾರಾದರೂ, ಪಟಂಗಳ ನೋಡಿ ಕೊಶಿ ಆತು.
ಅವನ ಅಟ್ಟಿಂದ ತೆಗದ ಕೆಲವೆಲ್ಲ ಇಲ್ಲಿ ಹಾಕಿದ್ದು, ನಿಂಗಳೂ ನೋಡ್ಳೇ ಹೇಳಿಗೊಂಡು.
ನೋಡಿ, ಹೇಂಗಿದ್ದು ಹೇಳಿ!!
~
ನೂರೈವತ್ತು ಆಡಿದ ಜೆನ ನಿಲ್ಲುಸಿದ್ದಿಲ್ಲೆ, ಆಡಿಗೊಂಡೇ ಇತ್ತು..
ನೋಡುವಾಗಳೇ ಅದು ಇನ್ನೂರಾತು.
ಹೆಲ್ಮೆಟ್ಟು ಇನ್ನೊಂದರಿ ತೆಗದು ನೇಚಿತ್ತು!!
ಟೀವಿಲಿ ನೋಡಿದ ಕೂಡ್ಳೇ ದೊಡ್ಡಬಾವನ ಸಮೋಸ ಬಂತು! ಎಲ್ಲೊರಿಂಗೂ ಕೊಶಿಯೇ ಕೊಶಿ.
ಮಾಷ್ಟ್ರುಮನೆ ಅತ್ತಗಂತೂ ಕೇಳುದೇ ಬೇಡ.
ಕೂದಲ್ಲಿಂಗೇ ಹೇಳಿದವು, ‘ಅಯ್ಯೋ, ಚಿನ್ನ! ಇನ್ನೂರಾಡಿತ್ತು ಇಂದು, ಆರೂ ಮಾಡದ್ದ ಕೆಲಸ. ಗಟ್ಟಿಗ°. ಇನ್ನೂ ಆಡ್ಳಿ ಅಪ್ಪಾ!’ ಹೇಳಿ.
ಆದರೆ ಅಲ್ಲಿ ಕೂದ ಗುರಿಕ್ಕಾರಂಗೊ ಕೇಳೆಕ್ಕೆ, ಐವತ್ತು ಓವರು ಆದ ಲೆಕ್ಕಲ್ಲಿ ಅವು ನಿಲ್ಲುಸಿದವು. ಇಲ್ಲದ್ರೆ ಆ ಜನ ಇನ್ನುದೇ ಆಡ್ತಿತು.
ಸುಮಾರು ಸಮೆಯದ ಮತ್ತೆ ಒಂದು ದೊಡ್ಡ ದಾಖಲೆ ಮಾಡಿದ ಕೊಶಿಲಿ, ನೋಡ್ತವರ ಕಡೆಂಗೆ ಬೇಟು ನೇಚಿ ನೆಗೆಮಾಡಿ ಜಾಲಿಂದ ಒಳ ಬರೆಕಾರೇ ಅದರ ಚೆಂಙಾಯಿಗೊ ಬಂದು ತೋಚಿ ಹಿಡ್ಕೊಂಡವು!
ಒಟ್ಟು ಬಾರತದ ಪೋಯಿಂಟು ನಾನೂರು, ಅದರ ಅರೆವಾಶಿ ಇದರದ್ದೊ ಒಬ್ಬಂದು!!
ಮತ್ತೆ ಐವತ್ತು ಓವರು ಅವು ಆಡಿದವು, ಆದರೂ ಭಾರತ ಎಷ್ಟೋ ಜಾಸ್ತಿ ಪೋಯಿಂಟು ಮಾಡಿದ ಕಾರಣ ಗೆದ್ದತ್ತು!!
ಗೆದ್ದ ಕೊಶಿಗೆ ಜಾಲಿಲಿದ್ದ ಸಲಕ್ಕೆಗಳ ಪೊರ್ಪಿ ಕೈಲಿ ಹಿಡ್ಕೊಂಡು ಕೊಣುಕ್ಕೊಂಡಿತ್ತವು!
ನವಗೆ ಅದರ ನೋಡ್ತದೇ ಒಂದು ಕೊಶಿ ಇದಾ!
~
ಈ ಚಿನ್ನ – ಆಡಿ ಆಡಿಯೇ ಚಿನ್ನದ ಗಟ್ಟಿ ಮಾಡಿದ್ದಡ!!! ಗೊಂತಿದ್ದಾ?!
ನಮ್ಮ ದೇಶಲ್ಲಿ ಬೇರೆ ಏವ ಆಟಂದಲೂ ಈ ಕ್ರಿಕೇಟಿಂಗೇ ಹೆಚ್ಚು ಮಾನ್ಯತೆ ಕೊಡುದಡ.
ಒಂದು ಆಟಲ್ಲಿ ಗೆದ್ದತ್ತು ಕಂಡ್ರೆ ಆಡಿದೋರಿಂಗೆ, ಆಡುಸಿದೋರಿಂಗೆ ಎಲ್ಲ ಕೋಟಿ ಕೋಟಿ ಪೈಸೆ ಕೊಡುಗಡ.
ಒಬ್ಬ ಚೆಂದಕ್ಕೆ ಆಡಿದಾಳಿ ಆದರೆ ಅವಂಗೆ ಪ್ರತ್ಯೇಕ ಪೈಸೆ ಸಿಕ್ಕುಗು – ಅದುದೇ ಬೇರೆ ಬೇರೆ ಕಂಪೆನಿಗಳಂದ, ಸರಕಾರಂದ – ಹೀಂಗೆ ಪ್ರತ್ಯೇಕ ಪ್ರತ್ಯೇಕ ಮೂಲಂಗಳಂದ.
ಎಲ್ಲ ಒಟ್ಟಿಂಗೆ ಸೇರುಸಿರೆ ಅವನ ಇಡೀ ಜೀವಮಾನಕ್ಕೆ ಸಾಕಡ ಆ ಪೈಸೆ! – ಅಜ್ಜಕಾನ ಬಾವ ಕ್ರಿಗೇಟಿನ ಹಿಂದೆ ಇಪ್ಪ ಈ ಇನ್ನೊಂದು ಶುದ್ದಿಯ ಹೇಳಿದ°.
‘ಚೆ, ಸಣ್ಣದಿಪ್ಪಗಳೇ ರಜ ಅಬ್ಯಾಸ ಮಾಡಿ ಈ ಕ್ರಿಗೇಟಿಂಗೇ ಸೇರುಲಾವುತ್ತಿತ್ತು’ ಹೇಳಿ ಗುಣಾಜೆ ಮಾಣಿಗೆ ಒಂದೊಂದರಿ ಅನುಸುತ್ತಡ!, ಎಂತ ಮಾಡುದು – ಕ್ರಿಕೇಟು ಆಡ್ಳೆ ಹೋದರೆ ಶೋಬಕ್ಕನ ವೆಬ್ಸೈಟು ಮಾಡುದು ಆರು ಬೇಕೇ!
~
ಆಟಕ್ಕೆ ಪ್ರೋತ್ಸಾಹ ಕೊಡೊದು ತಪ್ಪಲ್ಲ. ಆದರೆ ಅದು ಅತಿ ಅಪ್ಪಲಾಗ ಇದಾ.
ಕ್ರಿಗೇಟಿನ ಹಾಂಗೆಯೇ ನಮ್ಮಲ್ಲಿ ಬೇರೆ ಆಟಂಗಳೂ ಇದ್ದಲ್ದೊ.
ಅದಕ್ಕುದೇ ಹೀಂಗೇ ಪ್ರೋತ್ಸಾಹ ಸಿಕ್ಕೇಕು – ಅಲ್ಲಿಯುದೇ ಈ ಚಿನ್ನದ ಹಾಂಗೆಯೇ ಸಾದನೆ ಮಾಡ್ತವು ಇದ್ದವು.
ಅವರನ್ನುದೇ ನಾವು ಗುರುತುಸೇಕು – ಹೇಳಿ ಮಾಷ್ಟ್ರುಮಾವ° ಏವಗಳೂ ಹೇಳುಗು.
ಅಪ್ಪಾದ ವಿಷಯವೇ ಅಲ್ದೊ!?
~
ಮಾಷ್ಟ್ರಮನೆ ಅತ್ತೆಗೆ ಹಸರು ಪಾಯ್ಸ ಮಾಡಿ ಸುರುದು ಉಂಬಷ್ಟು ಕೊಶಿ ಆಗಿತ್ತು ಮೊನ್ನೆ.
( ಆದರೆಂತ ಮಾಡುದು, ಅಶನ ಮಡಗುದೇ ಮರದು ಹೋಗಿತ್ತು. ಇರುಳು ಜೋರು ಹಶು ಆವುತ್ತು ಹೇಳಿಗೊಂಡು ಅವರ ಮಗ° ಗಣೇಶಮಾವನಲ್ಲಿ ಉಂಡದಡ!! )
ಆಗಲಿ, ಜೀವನಲ್ಲಿ ಹೀಂಗಿದ್ದ ಮನರಂಜನೆಗಳೂ ಬೇಕಿದಾ! ಒಪ್ಪಕ್ಕನ ಅರ್ಗೆಂಟಿನ ಎಡಕ್ಕಿಲಿ ರೆಜ ನೆಮ್ಮದಿ ಸಿಕ್ಕೆಡದೋ 😉
~
ನಿನ್ನೆ ಬೈಲಿಲೆಲ್ಲ ಇದೇ ಶುದ್ದಿ. ಹಾಂಗೆ ಒಪ್ಪಣ್ಣಂದೂ ಅದೇ ಶುದ್ದಿ!
ಎಲ್ಲೊರೂ ಸಚಿನಿನ ಹೊಗಳುವೋರೇ. ಅದು ಸುಮಾರು ಸರ್ತಿ ಹೀಂಗೇ ಬಾರತವ ಗೆಲ್ಲುಸಿದ್ದಡ.
ಒಬ್ಬೊಬ್ಬ° ಅದು ಒಂದೊಂದರಿ ಬಡುದ ಕ್ಷಣವ ನೆಂಪು ಮಾಡಿಯೊಂಡು ಇತ್ತಿದ್ದವು – ಯಕ್ಷಗಾನ ಆಟ ಮುಗಿಶಿ ಬಪ್ಪಾಗ ಮೂರ್ತಿಅಣ್ಣ, ರಾಜಬಾವ ಎಲ್ಲ ವೇಷಂಗಳ ಬಗ್ಗೆ ಮಾತಾಡಿಯೊಂಡು ಬಂದ ಹಾಂಗೆ.
ಮುಳಿಯಾಲದಪ್ಪಚ್ಚಿ ಇನ್ನು ಮುಂದಾಣ ಮೇಚು ಏವಾಗ ಹೇಳಿ ಪೇಪರಿಲಿ ಹುಡುಕ್ಕಿಯೊಂಡಿದ್ದವು.
ಮಾಷ್ಟ್ರಮನೆ ಅತ್ತೆ ಗಣೇಶಮಾವನ ಹತ್ತರೆ ನೋಡಿ ಹೇಳ್ಳೆ ಹೇಳಿಯೊಂಡಿತ್ತವು.
ಅರವಿಂದಪ್ಪಚ್ಚಿ, ಸಾಕೇತ ಮಾಣಿ, ದೊಡ್ಡಬಾವ ಹೀಂಗೆ ಆಟದ ಮರುಳಿಪ್ಪೋರು ಎಲ್ಲೊರೂ ಸಚಿನಿನ ಮುಂದಾಣ ಸಾದನೆಯ ನೋಡ್ಳೆ ಕಾದೊಂಡಿದ್ದವು.
ಇಂದು ಇನ್ನೂರು ಆಡಿದ ಈ ಮಾಣಿ ಇನ್ನೂ ನೂರು ಕಾಲ ಆಡಿ ಬದುಕ್ಕಲಿ ಹೇಳಿ – ಎಲ್ಲೊರುದೇ ಗ್ರೇಶಿಗೊಂಡು ಇತ್ತಿದ್ದವು.
ಒಂದೊಪ್ಪ: ಚಿನ್ನದ ಕ್ರಯ ಏರಿದ ಹಾಂಗೆ ಈ ಚಿನ್ನದ ಆಟವೂ ಹೊಳೆಯಲಿ!
ಸೂ: ಸಚಿನಿನ ಜಾತಕಪಟ ಇಲ್ಲಿದ್ದು: (http://www.cricinfo.com/india/content/player/35320.html )
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಅಪ್ಪನೊಟ್ಟಿಂಗೆ ಕೂದುಗೊಂಡು ಆನುದೆ ನೋಡಿದ್ದೆ ಈ ಮೇಚು, ಭಾರಿ ಲಾಯಿಕಿತ್ತು. ಬರದ್ದುದೆ ಭಾರಿ ಲಾಯ್ಕಾಯಿದು. ನಿಂಗ ಹೇಳಿದ ಹಾಂಗೆ ಸಚಿನ್ ಮಾಮ ಇನ್ನುದೆ ಹೀಂಗೆ ಸಾಧನೆ ಮಾಡಲಿ ಹೇಳಿ ಎನ್ನ ಆಶೆ……………………….
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಹೇಳುದಕ್ಕೆ ಸಚಿನು ಒಂದು ಉದಾಹರಣೆ ಅಲ್ಲದಾ?
ಇಷ್ಟು ಸಾಧನೆ ಮಾಡಿದರೂ ಇನ್ನೂ ಆನು ಏನೂ ಮಾಡಿದ್ದಿಲ್ಲೆ ಹೇಳುವ ಹಾಂಗೆ ಇಪ್ಪ ಸ್ವಭಾವ ನವಗೆ ಬೇರೆ ಆರಲ್ಲಾದರೂ ಕಾಂಬಲೆ ಸಿಕ್ಕುಗಾ?
ಬೇರೆ ಆರಾರು ಒಂದು ಸರ್ತಿ ಆಡಿಯಪ್ಪಗ ಏನಾರು ಸಾಧಿಸಿ ಅದರ ನಾವು ಖುಷಿಪಡುವ ಹೊತ್ತಿಂಗೆ ಅವು ಕುಡುದು ಗಲಾಟೆ ಮಾಡಿಯಾ ಅಲ್ಲ ಆರಿಂಗಾರು ಪೆಟ್ಟು ಹಾಕಿಯಾ ಸುದ್ದಿಗೆ ಬಕ್ಕು..
ಈ ಸಚಿನನ ಚರಿತ್ರೆ ನೋಡಿರೆ ಎಲ್ಲಿಯು ಅದು ಯಾವ ವಿವಾದಂಗೊಕ್ಕೆ ಬೀಳದ್ದೆ ಒಳ್ಳೆ ರೀತಿಲಿ ಇದ್ದು ಈಗಾಣವಕ್ಕೆ ಇದು ಒಂದು ಮಾದರಿಯಾಗಿ ಇದ್ದು…
ನಿಜ, ಈಗಾಣ ಕಾಲಲ್ಲಿ ಕ್ರಿಕೆ ಟಿನ್ಗೆ ಸಿಕ್ಕಿದ ಮರ್ಯಾದಿ ಬೇರೆ ಆಟ ನ್ಗೊಕ್ಕೆ ಇಲ್ಲೇ.. ಈಗ ಹಾಕಿ ವಿಶ್ವ ಕಪ್ ನಮ್ಮಲ್ಲೇ ಅಪ್ಪ ಕಾರಣ ಅದುದೆ ಎಲ್ಲೋರ ಮನಸ್ಸು ಗೆಲ್ಲುತ್ತಾ ನೋಡುವ…
ಹಾಂಗೆ ಸಚಿನು ಇನ್ನುದೆ ಆಟ ಆಡಿಗೊಂದು ಎಲ್ಲಾ ನಮೂನೆ ದಾಖಲೆಗಳ ಕ್ರಿಕೆ ಟ್ಟಿಲಿ ಮಾಡಲಿ.. ಅದು ಭಾರತ ರತ್ನ ಆಗಲಿ…ಅಲ್ಲದಾ?
ಒಪ್ಪಣ್ಣ ಭಾವ ಇತ್ಲಾಗಿ ಬಂದದ್ದು ರಜಾ ತಡ ಆತು ಈ ಸರ್ತಿ.. ಎಂತ ಹೇಳಿರೆ ನಮ್ಮ ಮಾಷ್ಟ್ರು ಮಾವನ ಮಗನ (ಅಮೇರಿಕಲ್ಲಿಪ್ಪವ ಇದಾ) ಮದುವೆ ತಯಾರಿ ಕೆಲ್ಸಂಗ ಜೋರು ಇದಾ.. ಹೋಗದ್ರೆ ಮಾಷ್ಟ್ರು ಮನೆ ಅತ್ತೆ ಜೋರು ಮಾಡುಗು ಹೇಳಿ ಅತ್ತ ಹೋಗಿತ್ತಿದ್ದೆ..
ತೆಂಡುಲ್ಕರ್ ಹೇಳಿರೆ ತೆಂಡುಲ್ಕರೇ ಅಲ್ಲದಾ.. ಈಗಾಣ ಮಕ್ಕ ಕೈಲಿ ಚೋಕೋಲೇಟ್ ಹಿಡಿವ ಸಮಯಕ್ಕೆ ಬೇಟ್ ಹಿಡ್ದನಡ… ಮೊನ್ನಾಣ ಆಟ ಜೋರಿತ್ತು.. ೫೦ರಿಂದ ೧೫೦ ವರೆಗಿನ ಆಟ ನೋಡುಲೆ ಆಯಿದಿಲ್ಲೆ ಹೇಳಿ ಬೇಜಾರ.. ಗಣೇಶ ಭಾವ ಒಟ್ಟಿಂಗೆ ಮದುವೆ ಪಡಿವಾಟಿ ಹೇಳಿಯೊಂಡು ಪೇಟೆಗೆ ಹೋದ್ದು ಇದಾ…
ಮತ್ತೆ ಇರುಳು ಹೈಲೈಟ್ಸ್ ನೋಡಿದ್ದು.. ಮಾಶ್ಟ್ರತ್ತೆ ಎರಡೆರಡು ಸೀವು ಮಾಡಿದ್ದು.. ಗಣೇಶ ಭಾವನು ಆನುದೆ ಉಂಡಿಕ್ಕಿ ವರಗಿದವಕ್ಕೆ ಚೋಮನ ಕೋಳಿ ಕೂಗಿದ್ರು ಗೊತ್ತಾಯಿದಿಲ್ಲೆ..
ಲಾಯ್ಕಾಯ್ದು ಬರ್ದು.
ಹರ್ಷಣ್ಣ ಬಂದದ್ದು ಕುಶಿ ಆತು ಎನಿಗೆ!
ನೆಟ್ಟಾರಿಲ್ಲಿ ನಿಂಗ್ಳ ಮನೆ ಎಲ್ಲಿ ಹೇಳಿ ಸರೀ ಗೊತ್ತಾಯಿದಿಲ್ಲೆ ಮಾತ್ರ!
ಅಂತಾರಾಷ್ಟ್ರೀಯ ಕ್ರಿಕೆಟ್ಲಿ 20 ವರ್ಷ ಅನುಭವ ಇಪ್ಪ ಸಚಿನ್ಗೆ ಈಗಲೂ ಅಸಾಧಾರಣ ಪ್ರತಿಭೆಇಪ್ಪದು ಇಡೀ ಲೋಕಕ್ಕೆ ಈಗ ಮತ್ತೊಂದರಿ ಗೊಂತಾತು . ಇನ್ನೂ ಹತ್ತು ವರ್ಷoಗಳ ಕಾಲ ಕ್ರಿಕೆಟ್ಲಿ ಸಚಿನ್ ಮುಂದುವರಿಯಕ್ಕು ಹೇಳಿ ನಮ್ಮೆಲ್ಲೋರ ಆಶೆ ಅಲ್ದಾ? ಲಿಟ್ಲ್ ಮಾಸ್ಟರ್ ,ಕ್ರಿಕೆಟ್ನ ದೇವರು ಮುಂದಾಣ 2011ರ ವಿಶ್ವಕಪ್ ಭಾರತಕ್ಕೆ ತಂದುಕೊಡಲಿ ಹೇಳಿ ನಮ್ಮ ಬೈಲಿನ ಎಲ್ಲೋರ ಹಾರೈಕೆ.
ಒಪ್ಪಣ್ಣ, ಆಟ ನೋಡುವ ಗೌಜಿಲಿ ಮಾಷ್ಟ್ರ ಮನೆ ಅತ್ತೆ ಎಂತ ತಿಂದದು ಹೇಳಿ ನಿನಗೆ ಕನ್ ಫ್ಯೂಸು ಆತೋ ಹೇಳಿ…
ಮರದಿನ ಅತ್ತೆ ಫೋನು ಮಾಡಿಪ್ಪಗ ಕ್ರಿಕೆಟಿನ ವಿಷಯ ಕೇಳಿದೆ,ಅದಕ್ಕೆ ಅತ್ತೆ ” ಈ ಒಪ್ಪಣ್ಣನ ಕತೆಲಿ ಎಡಿಯಪ್ಪ… ಆನು ಕ್ರಿಕೆಟು ನೋಡಿದ್ದು ಇಡೀ ಬೈಲಿಂಗೆ ಹೇಳಿದ್ದ… ಅಂದ ಹಾಂಗೆ ಆನು ತಿನ್ದೊಂಡಿದ್ದದು ರಸ್ಕು ಅಲ್ಲ ಆತೋ , ಅದು ಮಾವ ಪುತ್ತೂರಿಂದ ತಂದ ಗೆಣನ್ಗಿನ ಚಿಪ್ಸು… ಒಪ್ಪಣ್ಣನೂ ತಿಂದಿದನ್ನೇ … ಹೇಳುವಾಗ ತಪ್ಪಿದ್ದಾಯಿಕ್ಕು ” ಹೇಳಿ ಹೇಳಿದವು… 🙂
ಯೇ ಒಪ್ಪಕ್ಕಾ!!
ನೀನೆಂತರ ಹಾಂಗೆಲ್ಲ ಹೇಳುದು!
ಮೊನ್ನೆ, ಗೆಣಂಗಿನ ಚಿಪ್ಸಿನ ಸುರುವಿಂಗೇ ತಂದು ಮಡಗಿದ್ದವು. ಸಚಿನಿಂಗೆ ನೂರು ಅಪ್ಪಗ ಅದು ಮುಗಾತು! ಮತ್ತೆ ತಂದದು ರಸ್ಕು.
ಗೆಣಂಗಿನ ಚಿಪ್ಸು ಯೇವತ್ತೂ ಇರ್ತನ್ನೆ, ಹಾಂಗೆ ವಿಶೇಷ ಎಂತ್ಸೂ ಇಲ್ಲೇಳಿ ಹೇಳಿದ್ದಿಲ್ಲೆ.
ರಸ್ಕು ಇದ್ದದು ವಿಶೇಷವೇ ಅಲ್ಲದೋ – ಅದಕ್ಕೆ ಅದರ ಹೇಳಿದ್ದು.
ಒಪ್ಪಣ್ಣ ಲೊಟ್ಟೆ ಹೇಳ್ತ ಕ್ರಮ ಇಲ್ಲೆಪ್ಪಾ ಇಲ್ಲೆ!! 😉
ಮತ್ತೆ ನೂರೈವತ್ತಪ್ಪಗ ಟೊಪ್ಪಿ ತೆಗದ್ದಿಲ್ಲೆಯಾ ಹೇಳಿ ಕಾಣ್ತು ಒಪ್ಪಣ್ಣ, ಖಾಲಿ ಬೇಟಿನ ಮಾತ್ರ ನೆಗ್ಗಿದ್ದಾಳಿ ಕಾಣ್ತು…
ಲಾಯಿಕ ಆಯಿದು
ಸಣ್ಣಾದಿಪ್ಪಗ ಕೊತ್ತಳಿಂಗೆ ಬೇಟಿಲ್ಲಿ ಆಡಿದ್ದೆಲ್ಲಾ ನೆಂಪಾತು ಈ ಲೇಖನ ಓದಿ…
ಅಪ್ಪು ಬಾವ! ನೀನು ಹೇಳಿದ್ದು ಸರಿ ಇದ್ದು.
ಎಂಗೊ ನೋಡಿದ ಟೀವಿ ಸಣ್ಣ ಇತ್ತು.
ಹಾಂಗಾಗಿ ಒಂದನ್ನೇ ತೆಗದ್ದು. ಎರಡೂ ಕೈಲಿ ಹಿಡ್ಕೊಂಡು ನೆಗ್ಗಲೆ ಟೀವಿ ದೊಡ್ಡ ಬೇಕಲ್ಲದಾ..
ಹಾಂಗಾಗಿ ಬೇಟು ಮಾಂತ್ರ, ಮುಟ್ಟಾಳೆ ತೆಗದ್ದಿಲ್ಲೆ!!
ಒಹೋ ಹಾಂಗ ಒಪ್ಪಣ್ಣ…ಎನಗೆ ಗೊಂತಾತಿಲ್ಲೆ..
ಸಣ್ಣದೇ ಚೆಂದ ಬಾವ … ನೀನೆ ಒಂದರಿ ಹೇಳಿತ್ತಲ್ಲಾ…
ಅಂತು ಯೇವುದೋ ಒಂದರ ನೆಗ್ಗಿದ್ದನ್ನೆ ಅಷ್ಟು ಸಾಕು!!
Sachin 100 Run Maadidaga Crease li Ittadu Dhoni Alla, Dinesh Kartik. E sanna Tappuga Tappu Tiluvalike Nidtu. 100 madidaga Photo e linkli iddu,
http://www.cricinfo.com/indvrsa2010/content/image/449850.html?object=35320;page=1 .
ಉಮ್ಮ, ಎಂತದೋ ಮದುಅಣ್ಣ..
ಸಾಕೇತದ ಮಾಣಿ ಕೊಟ್ಟದರ ಒಪ್ಪಣ್ಣ ಹಾಕಿದ್ದು!!
ನೋಡೊ, ಅವನತ್ರೆ ಕೇಳಿ ಸರಿ ಮಾಡ್ತೆ. ಆತೋ?
ಗಟ್ಟಿಗ ಮಾಣಿ, ನೀನು!!
sooper aidu oppanno…idara odi tumba kushi aatu.
mastru mane attage cricketina a,b,c,d heli kottadu aarada? avara magane heli aaro heligondu ittiddavu.appo heli oppanna mukhatha sikkire kelekku.
sachin namma bharatha kanda, ‘bharatha rathna’ aagali…..navella haraisuva….
aatada bagge baravaliddo oppanno barettare oppannana maneli keram kuttiddu bareyekku aata.sannadippaga neenu anna cricket aadiddu nempu batta.? tange ball herkitandu kottugondiddadu allada.?engala oppannange nempikku.marava praya aidille allada oppanno….
ಈ ಕ್ರಿಕೆಟ್ ಜ್ವರದ ಲಕ್ಷಣ ಹೇ೦ಗಿರ್ತು?
ಪೇಟೆಲಿ ಆ ಹೊತ್ತಿ೦ಗೆ ಜನ/ವಾಹನಸ೦ಚಾರ ತು೦ಬ ಕಮ್ಮಿ(ಗ್ರಹಣ ಹಿಡುದಾ೦ಗೆ).
ಇಪ್ಪ ಜನ೦ಗಳೂ ಟೀವಿ ಇಪ್ಪ ಅ೦ಗಡಿಗಳಲ್ಲೋ ಹೋಟೆಲುಗಳಲ್ಲೋ ಇರ್ತವು.
ಆಸ್ಪತ್ರೆಲಿ ಪೇಷೆ೦ಟುಗಳೂ ಕಮ್ಮಿ..ಈ ಜ್ವರಕ್ಕೆ ಮದ್ದು ಇಲ್ಲೆಅನ್ನೆ!
ಶಾಲೆಲಿ ಮಕ್ಕಳೂ ಕೆಲವು ಕಾ೦ಬಲೆ ಸಿಕ್ಕ(ಜ್ವರ ಅಲ್ದ..)
ಮನೆಗೊಕ್ಕೆ ಹೋದರೆ ಆರೂ ಮಾತಾಡ..ಆಸರಿ೦ಗೆ ನೀರೂ ಸಿಕ್ಕ.
ಒಬ್ಬ೦ದ ಒಬ್ಬ೦ಗೆ ಸ೦ಪರ್ಕ೦ದ ಹರಡುವ ಅ೦ಟು ರೋಗ ಇದು.
ಅಂಬಗ,
ಇದಕ್ಕೆ ಮದ್ದೆಂತರ ಅರವದು ಡಾಗುಟ್ರೇ?
ಕಿರಿ ಕಿರಿ ಕಿರಿಕೆಟ್ಟು ಹೇಳಿ ಸುಮ್ಮನೇ ಕಿರಿಯರೆಲ್ಲಾ ಕೆಟ್ಟು ಹೋವ್ತವೂ ಹೇಳಿ ಎನ್ನ ಅಭಿಪ್ರಾಯ. ಎನಗೆ ಅದರ ಕಣಿ ಕಂಡ್ರೆ ಆವುತ್ತಿಲ್ಲೆ ಹೇಳುತ್ತವಿಲ್ಲೆಯೋ ಹಾಂಗೆ ಆವುತ್ತು. ಕ್ರಿಕೆಟ್ಟು, ಅದೊಂದು ಮರ್ಲೇ. ಸುಮ್ಮನೇ ಸಮಯ ಹಾಳು. ಯಾವುದೂ ಅತಿಯಾಗಿ ಅಪ್ಪಲಾಗ. ಎನಗೆ ಮದಲಿಂದಲೂ ಈ ಕ್ರಿಕೆಟ್ಟು ಹೇಳಿರೆ ಒಂತರಾ ಎಲರ್ಜಿ. ಎಂತಕೆ ಹೇಳಿ ಗೊಂತಿಲ್ಲೆ. ನಮ್ಮ ಊರ ಆಟಂಗಳನ್ನೂ ಮಕ್ಕೊ ಆಡೆಕು, ನೋಡೆಕು. ಅದಕ್ಕೆ ಪ್ರೋತ್ಸಾಹ ಸಿಕ್ಕೆಕು.
ಒಪ್ಪಣ್ಣನ ಲೇಖನ ಲಾಯಕಾಯಿದು. ಎರಡು ಮಾತಿಲ್ಲೆ. ವಿಷಯ ಮಂಡನೆ ಲಾಯಕು ಮಾಡಿದ್ದ. ಒಳ್ಳೆದಾಗಲಿ.
ಜೆಂಬಾರಲ್ಲಿ ಅಪ್ಪ ಹರಟೆಲ್ಲಿ ಕ್ರಿಗೆಟಿನ ಮರುಳಿನದ್ದುದೆ ಒಂದು ಕೊಡುಗೆ ಇದ್ದು, ಅಲ್ಲದ ಗಣೇಶ ಮಾವ°?
ಕ್ರಿಕೆಟಿನ ಬಗ್ಗೆ ಮಾತಾಡದ್ರೆ ಅದೊಂದು ಮರ್ಯಾದೆ ಪ್ರಶ್ನೆ!! ಹಾಂಗಾಗಿ ಎಲ್ಲೋರೂ ಮಾತಾಡುಗು.
ಆಟಕ್ಕೆ ಪ್ರೋತ್ಸಾಹ ಕೊಡೊದು ತಪ್ಪಲ್ಲ. ಆದರೆ ಅದು ಅತಿ ಅಪ್ಪಲಾಗ ಇದಾ.
ಕ್ರಿಗೇಟಿನ ಹಾಂಗೆಯೇ ನಮ್ಮಲ್ಲಿ ಬೇರೆ ಆಟಂಗಳೂ ಇದ್ದಲ್ದೊ.
ಅದಕ್ಕುದೇ ಹೀಂಗೇ ಪ್ರೋತ್ಸಾಹ ಸಿಕ್ಕೇಕು – ಅಲ್ಲಿಯುದೇ ಈ ಚಿನ್ನದ ಹಾಂಗೆಯೇ ಸಾದನೆ ಮಾಡ್ತವು ಇದ್ದವು.
ಅವರನ್ನುದೇ ನಾವು ಗುರುತುಸೇಕು – ಹೇಳಿ ಮಾಷ್ಟ್ರುಮಾವ° ಏವಗಳೂ ಹೇಳುಗು.
ಅಪ್ಪಾದ ವಿಷಯವೇ ಅಲ್ದೊ!?
ನಿಜವಾಗಿ ಇಂದು ಭಾರತ ಈ ಚಿನ್ನ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇಲ್ಲಿ ಎರಡು ವಿಷಯಗಳಿವೆ. ಯಾರು ಈ ಆಟವನ್ನು ಹುಟ್ಟು ಹಾಕಿದರೋ ಅವರೇ ನಾಚುವಂತಹ ಸಾಧನೆಯನ್ನು ಇಂದು ಭಾರತದ ಆಟಗಾರರು ಅದರಲ್ಲೂ ಸಚಿನ್ ಮಾಡಿ ತೋರಿಸಿದ್ದರೆ. ಈ ರೀತಿಯ ಸಾಧನೆಗಳು ಈ ಆಟಕ್ಕೆ ಸೀಮಿತವಾಗಬಾರದು. ಇದು ಮುಂದುವರಿಯಬೇಕು. ೨೦೨೦ ಸಮೀಪಿಸುತ್ತಿದೆ, ಆಗ ಎಲ್ಲ ಆಟಗಳಲ್ಲಿ ಭಾರತ ಆಟಗಾರರು ಸಾಧನೆ ಮಾಡುವಂತಾಗಲಿ.
ಹಾಗೆಯೇ, ಕ್ರಿಕೇಟ್ ಇಂದು ನಮ್ಮೆಲ್ಲ ದೇಶೀ ಆಟಗಳನ್ನು ನುಂಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಎಲ್ಲಿ ನೋಡಿದರೂ ಇಂದು ಕ್ರಿಕೇಟ್ ನೋಡಲು ಸಿಗುತ್ತದೆ. ಆದರೆ ನಮ್ಮಲ್ಲಿ ಆಟಗಳು ಇರುವುದು ಶಾರೀರಿಕ ಮತ್ತು ಬೌದ್ಧಿಕವಾಗಿ ಬ್ಯಕ್ತಿ ನಿರ್ಮಾಣವಗಲೆಂದು. ಇಂದು ಎಲ್ಲವೂ ವ್ಯಾಪಾರೀಕರಣಗೋಂಡಿದೆ. ಆಟಕ್ಕಿಂತ ಹೆಚ್ಚಾಗಿ ಅಜ್ಜಕಾನ ಬಾವ ಹೇಳುವ ಹಾಗೆ ಹಣ ಎಷ್ಟು ಸಿಕ್ಕುತ್ತೆ, ಯಾವ ಆಟಗಾರನಿಗೆ ಎಷ್ಟು ಬೆಲೆ, ಯಾರು ಇದನ್ನು ಪ್ರಯೋಜಿಸುವವರು….. ಹೀಗೆಲ್ಲಾ ವ್ಯಪಾರಿಕರಣದತ್ತ ಸಾಗುತ್ತಿದೆ.
ನಿಜವಾಗಿ ವ್ಯಕ್ತಿಗತವಾಗಿ ಸಚಿನ್ ಸಾಧನೆ ಮಾಡಿದ್ದರೂ ಅದು ಅವರ ಪ್ರತಿಭ್ಹೆಗೆ ಸಂದ ಜಯ. ಅದರ ಇನ್ನೋಂದು ಮುಖ್ಹವನ್ನು ಈ ಸಂಧರ್ಭದಲ್ಲಿ ಯೋಚನೆ ಮಾಡುವುದು ಸೂಕ್ತ ಎಂದು ತೋರುತ್ತದೆ. ಜಗತ್ತಿನ ಎಷ್ಟು ದೇಶಗಳು ಈ ಆಟವನ್ನು ಆಡುತ್ತಿವೆ. ಜಗತ್ತಿನಲ್ಲಿ ಅತ್ಯಂತ ಪ್ರಗತಿ ಹೊಂದಿದ ದೇಶಗಳು ಎಂದು ಕರೆಯಿಸಿಕೋಳ್ಳುವ ಎಷ್ಟು ದೇಶಗಳು ಈ ಆಟವನ್ನು ಆಡುತ್ತಿವೆ? ಅದನ್ನು ಯೋಚಿಸುವುದು ಸೂಕ್ತ ಎಂದೆನಿಸುತ್ತದೆ. ಎಕೆಂದರೆ ಅವರು ದೇಶದ ಪ್ರಗತಿಯನ್ನೇ ಬಯಸುವವರು. ಅವರ ಚಿಂತನೆಯ ಧಾಟಿ ಎಂತಹದ್ದು ಹಾಗದರೆ? ಕ್ರಿಕೇಟ್ ಆಡಲು ತಗಲುವ ಸಮಯ ೮ ರಿಂದ ೧೦ ಗಂಟೆ ಹಾಗದರೆ ಅದನ್ನು ನೋಡುವವರ ಸಂಖ್ಯೆ ಒಪ್ಪಣ್ಣನ ಮಾತುಗಳಲ್ಲೇ ವ್ಯಕ್ತವಾಗಿದೆ. ಇಲ್ಲಿ ಒಂದು ಸಂಗತಿ ಇದೆ ೮ ರಿಂದ ೧೦ ಗಂಟೆ ಭಾರತದೇಶದ ಜನಸಂಖ್ಹೆಯ ೧% ತೆಗೆದುಕೊಂಡಾಗಲೂ ಸುಮಾರು ಸಂಖ್ಹೆಯೇ ಅಯಿತು. ಅವರೆಲ್ಲರೂ ತಮ್ಮ ಕೆಲ್ಸ ಕಾರ್ಯಗಳಿಗೆ ರಜೆ ಹಾಕಿ ಈ ಆಟವನ್ನು ನೋಡಲು ಕೂರುತ್ತಾರೆ. ಹಾಗದರೆ ದೇಶದ ಆರ್ಠಿಕ ಸ್ಥಿತಿ, ಉತ್ಪಾದನೆ ಪ್ರಮಾಣ ಎಲ್ಲವೂ ಕುಂಠಿತವಾಗಲಿಲ್ಲವೇ?
ಈ ಆಟವನ್ನು ಆಡುವ ದೇಶಗಳ ಸಾಧನೆ ಎಂತಹದ್ದು ಪಾಕಿಸ್ಥಾನ, ಬಾಂಗ್ಲಾ, ಶ್ರೀಲಂಕಾ, ದ.ಆಫ್ರಿಕಾ, ಕಿನ್ಯಾ, …… ಹೀಗೆ ಇನ್ನು ಕೆಲವು ದೇಶಗಳು. ಈ ದೇಶಗಳು ಜಗತಿಕವಾಗಿ ಸಾಧನೆ ಮಾಡಿದ ದೇಶಗಳಲ್ಲ. ಆದರೆ ಭಾರತ ಈ ಎಲ್ಲ ದೇಶಗಳ ಪಟ್ಟಿಯಲ್ಲಿ ಬರುವುದೇ ಇಲ್ಲ. ವಿಜ್ನಾನ, ತಾಂತ್ರಿಕತೆ, ಸಂಸ್ಕೃತಿ, ನಾಗರಿಕತೆ ಎಲ್ಲದರಲ್ಲೂ ಮುಂದುವರಿದ ದೇಶ. ಹೀಗಿರುವಾಗ ನಾವು ಈ ದೇಶಗಳೊಂದಿಗೆ ಗುರುತಿಸುಕೋಳ್ಳುವುದು ಸರಿಯೇ? ನಾವು ನಮ್ಮ ದೇಶೀ ಆಟಗಳನ್ನು ಹೆಚ್ಚು ಪ್ರೋತ್ಸಹಿಸುವುದು ಓಳ್ಳೆಯದಲ್ಲವೇ?. ಆಟದ ದೃಷ್ಟಿಯಿಂದ ಯವ ವಿರೋಧವೂ ಇಲ್ಲ, ಆದರೆ ನಮ್ಮದೂ ಇದೇ ಪ್ರಮಾಣದಲ್ಲಿ ಜಗತ್ತಿಗೆ ತೋರಿಸುವ ಪ್ರಯತ್ನ ಒಂದು ಕಡೆಯಿಂದ ಮಾಡುವುದು ಒಳ್ಳೆಯದಲ್ಲವೇ? ಮನೆಗಳಲ್ಲಿ ಮಕ್ಕಳಿಗೆ ಪಗಡಿ ಆಟ ಮಹಾಭಾರತದಲ್ಲಿ ಆಡಿದ ಆಟ ಎಂದು ಎಂದಾದರೂ ಮಕ್ಕಳೋಂದಿಗೆ ಆಡಲು ಪ್ರಯತ್ನ ಮಾಡಿದ್ದೇವೆಯೇ?… ಹಾಗೆ ಹೋರಂಗಣ ಆಟಗಳಾದ ಕಬಡ್ಡಿ, ಖೋ ಖೋ, ಆಟ್ಯಾ ಪಾಟ್ಯ, ಲಗೋರಿ, ಹೈಥ್ರೋ ಬಿತ್ರೋ (ಬೆನ್ನಿಗೆ ಪೆಟ್ಟು ತಿಂದಿದ್ದು ಇನ್ನೂ ನೆನಪಿದೆ)… ಹೇಳುತ್ತ ಹೋದರೆ ಮುಗಿಯುವುದಿಲ್ಲ ನಮ್ಮ ಆಟಗಳು.
ಒಟ್ಟಾರೆ ಹೇಳುವುದಾದರೆ ನಮ್ಮ ಆಟಗಳನ್ನು ಪ್ರೋತ್ಸಹಿಸಬೇಕು. ಸರಕಾರದವರು ಜಾರಿಗೆ ತರಬೇಕು, ಷಾಲೆಗಳಲ್ಲಿ ಆಡಿಸಬೇಕು ಹೀಗೆಲ್ಲ ಅಂದುಕೊಳ್ಳದೆ ನಮ್ಮ ಮನೆಗಳಲ್ಲಿ ಮಕ್ಕಳಿಗೆ ಆಟ ಆಡಿಸದಿದ್ದರೂ, ಈ ರೀತಿ ಆಟಗಳಿವೆ ಎಂದಾದರು ಹೇಳಿದರೆ ಅವುಗಳತ್ತ ೧೦೦೦ ಮಕ್ಕಳಲ್ಲಿ ಒಬ್ಬನಿಗಾದರು ಆಸಕ್ತಿ ಮೂಡಬಹುದು. ಈ ಕೆಲಸವನ್ನು ನಾವೇ ಮಾಡಬೇಕಲ್ಲವೇ?
ಲೇಖನ ಚನ್ನಾಗಿ ಮೂಡಿಬಂದಿದೆ… ಸಾಧ್ಯ ಆದ್ರೆ ಒಪ್ಪಣ್ಣನ BLOG ನಲ್ಲಿ “ನಮ್ಮ ಆಟಗಳು” ಅನ್ನೋ ಆಟದ ಅಂಕಣ ಆದಷ್ಟು ಬೇಗ ಪ್ರರಂಭವಾಗಲೀ ಮೇಲೆ ತಿಳಿಸಿದ ಎಲ್ಲ ವಿಚರಗಳಿಗೆ ಪೂರಕವಾಗಲಿ ಎಂದು ಅಪೇಕ್ಷಿಸುತ್ತೇನೆ.