Oppanna.com

ವಿಷಕಂಠನ ಮಗನ ಮೂರ್ತಿಲಿ ವಿಷವೇ ತುಂಬಿದ್ದಾಡ…

ಬರದೋರು :   ಒಪ್ಪಣ್ಣ    on   26/08/2011    20 ಒಪ್ಪಂಗೊ

ಮೊನ್ನೆ ಪೆರ್ಲದಣ್ಣ ಊರಿಂಗೆ ಬಂದಿತ್ತಿದ್ದ°.

ಪೆರ್ಲದಣ್ಣ ಹೋದ್ದದು ಬಂದದೂ ಪೂರ ಎಲ್ಲೋರಿಂಗೂ ಅರಡಿವಲೆ ಎಂತ ಗುಣಾಜೆಕುಂಞಿಯೋ? 🙂
ಅವ° ಊರಿಂಗೆ ಬಂದದೂ ಗೊಂತಾಯಿದಿಲ್ಲೆ, ಇರುವಾರ ಬೆಂಗುಳೂರಿಂಗೆ ಹೋದ್ದದೂ ಗೊಂತಾಯಿದಿಲ್ಲೆ; ಬೈಲಿನ ಹೆಚ್ಚಿನೋರಿಂಗೂ. ಆದರೆ ಒಪ್ಪಣ್ಣಂಗೆ ಗೊಂತಾಯಿದು!  😉
ಮೊನ್ನೆ ಕಲ್ಮಡ್ಕನಂತನಲ್ಲಿ ಪೂಜೆ ಕಳಿಶಿ ಪುತ್ತೂರಿಂದ ಬಸ್ಸು ಹತ್ತುವಗ, ಅದೇ ಬಸ್ಸಿಲಿ ಇದ್ದಿದ್ದ°.
ಒಳ್ಳೆದಾತು – ಪಕ್ಕನೆ ಟಿಗೇಟು ತೆಗವಲೆ ಹೆದರಿ ಹೋಪಲಿಲ್ಲೆ ಇನ್ನು; ಹೇಳಿಗೊಂಡು ಪೆರ್ಲದಣ್ಣನ ಒಟ್ಟಿಂಗೇ ಕೂದುಗೊಂಡದು.
ಮದುವೆ ಪ್ರಾಯದ ಮಾಣಿಯಂಗೊ ಬೆಂಗೂಳೂರಿಂದ ಅಂಬಗಂಬಗ ಊರಿಂಗೆ ಬಂದರೆ ಒಪ್ಪಣ್ಣಂಗೆ ಎಂತದೋ ಸಂಶಯ ಬಪ್ಪದು!
ಹುಬ್ಬು ಹಾರುಸಿ ಕೇಳಿದೆ, ಎಂತಾ – ಹೇಳಿಗೊಂಡು. ಒಳ್ಳೆದು ಹೇಳಿದ°.
ನಿಜವಾಗಿಯೂ ಎಂತ್ಸೂ ಇಲ್ಲೇಯಿಕ್ಕು – ಹೇಳಿ ಸುಮ್ಮನೆ ಕೂದಂಡೆ; ಬಸ್ಸು ಸುಮ್ಮನೆ ಕೂಯಿದಿಲ್ಲೆ, ಹೆರಟತ್ತು. 😉
ಟಿಗೇಟು ತೆಗವಲೆ ಧೈರ್ಯದ ಪೆರ್ಲದಣ್ಣ ಇದ್ದನಲ್ಲದೋ – ನವಗೂ ಹೆದರಿಕೆ ಇಲ್ಲೆ!
~
ಕೊಳಚ್ಚಿಪ್ಪುಬಾವ° ಒಂದು ನಮುನೆ, ಪೆರ್ಲದಣ್ಣ ಇನ್ನೊಂದು ನಮುನೆ.
ಇಬ್ರಿಂಗೂ ತುಂಬ ವಿಶಯಂಗೊ ಅರಡಿಗು; ಆದರೆ ಒಂದೇ ನಮುನೆ ಅಲ್ಲ, ಬೇರೆಬೇರೆ ರೀತಿಲಿ.
ಕೊಳಚ್ಚಿಪ್ಪು ಬಾವಂಗೆ ವಿಶಯದ ಆಳ ಅರಡಿಗು; ಪೆರ್ಲದಣ್ಣಂಗೆ ವಿಶಯಂಗಳ ವಿಸ್ತಾರ ಅರಡಿಗು!
ಆಗ ಕೊಳಚ್ಚಿಪ್ಪುಬಾವ° ಹೇಳಿದ ಶುದ್ದಿಯ ಪೆರ್ಲದಣ್ಣನ ಕೈಲಿ ಹೇಳಿರೆ ಹೇಂಗೆ?
ಇವಂಗೆ ಹಾಂಗಿರ್ತ ಶುದ್ದಿ ಜಾಸ್ತಿ ಗೊಂತಿರ್ತು; ರಜ್ಜ ಹೊಸ ಸಂಗತಿ ಸಿಕ್ಕುಲೂ ಸಾಕು ನವಗೆ – ಗ್ರೇಶಿಗೊಂಡೆ.
ಆದರೆ ಎಲ್ಲಿಂದ ಸುರುಮಾಡುದು?
ಸೀತ ಸುರುಮಾಡಿರೆ – ಒಪ್ಪಣ್ಣಂಗೆ ಇದೆಲ್ಲ ಹೇಂಗೆ ಅರಡಿವದು – ಹೇಳಿ ನೆಗೆ ಬಾರದೋ?…
~
ಕಬಕ್ಕ ಕಳಿವಗ ಎದುರಾಣ ಸೀಟಿಲಿ ಕೂದಿದ್ದ ಬೆಳಿಟೊಪ್ಪಿಯ ಜೆನ ಅದರ ಕಿಸೆಂದ ಚಿಕುಬುಕುಮೊಬೈಲಿನ ತೆಗದು ಮಾತಾಡುವಗ – ಸಮಯ ನೋಡಿ ಈ ಶುದ್ದಿ ತೆಗದೆ.
ಮುಕ್ಕಾಲು ಕಾಸಿನ ಬೆಲೆ ಇಲ್ಲದ್ದ ವಸ್ತುಗಳ ಚೀನಾಂದ ನಮ್ಮ ದೇಶದ ಒಳದಿಕೆ ತಂದು ತುಂಬುಸಿದ ಸಂಗತಿಯ, ಅದರ ಹಣೆವಾರಂಗಳ ಬಗೆಗೆ ಬೈಲಿಲಿ ಮಾತಾಡಿಗೊಂಡದರ ಮದಾಲು ಹೇಳಿದೆ.
ಹಲವಾರು ಲೋಟಣು ವಸ್ತುಗೊ, ರೇಡ್ಯ ಮೊಬೈಲುಗೊ ಕಡಮ್ಮೆ ಕ್ರಯಕ್ಕೆ ಸಿಕ್ಕುತ್ತದು; ಒಂದರಿ ಉಪಯೋಗಿಸಿ ಬಲುಗಿ ಇಡ್ಕುತ್ತದು, ಕ್ರಯ ಕಡಮ್ಮೆ ಹೇಳಿಗೊಂಡು ನಮ್ಮ ದೇಶದೋರೇ ಆ ಕಸವಿನ ತೆಗವಲೆ ಹಾತೊರವದು – ಇದೆಲ್ಲವೂ ಸರ್ವೇ ಸಾಮಾನ್ಯ ಸತ್ಯಂಗೊ ಹೇಳ್ತದನ್ನೂ ಮಾತಾಡಿಗೊಂಡತ್ತು.
ಅದೆಲ್ಲ ಚೀನಾದವರ ಹಿಕ್ಮತ್ತು; ಆಯುಧ ಇಲ್ಲದ್ದೆ ಮಾಡ್ತ ಯುದ್ಧ – ಹೇಳ್ತದರ ಪೆರ್ಲದಣ್ಣ ಹೇಳಿದ°. ಈ ವಿಷಯಲ್ಲಿ ರಜ ವಿಮರ್ಷೆಗಳೂ ನೆಡದತ್ತು.
ಕಾಂಬಲೆ ಚಿನ್ನದ ಹಾಂಗಿರ್ತ, ಈ ವಿಷದ ಕಸವುಗಳ ನಾವು ಬಳಸುದರ ತಪ್ಪುಸೇಕು – ಹೇಳ್ತದು ಒಂದು ಅಭಿಪ್ರಾಯ.
ಈ ಸಾಧನೆಗಳಿಂದಾಗಿಯೇ  ನಮ್ಮ ನಿತ್ಯಬಳಕೆಯ ವಸ್ತುಗಳ ಕ್ರಯ ಕಡಮ್ಮೆ ಅಪ್ಪಲೆ ಪರೋಕ್ಷ ಕಾರಣ – ಹೇಳ್ತದು ಇನ್ನೊಂದು ಅಭಿಪ್ರಾಯ.
ಏನೇ ಆಗಲಿ, ಬೈಲಿಲಿಯೂ, ಮತ್ತೆ ಪೆರ್ಲದಣ್ಣನೊಟ್ಟಿಂಗೂ ಒಳ್ಳೆ ವಿಮರ್ಶೆ ಆಗಿದ್ದತ್ತು.
~
ಇಷ್ಟಾಗಿ, ಪೆರ್ಲದಣ್ಣ ಒಂದು ಮಾತು ಹೇಳಿದ°.
ಅಲ್ಲಿಂದ ಬತ್ತ ವಿಷವ ತಡವಲಕ್ಕು. ಆದರೆ ನಮ್ಮ ಒಳವೇ ಬಳಸುತ್ತ ವಿಷವಸ್ತುಗಳ ತಡವಲೆ ಎಂತ್ಸರ ಮಾಡುದಪ್ಪಾ?
ನಮ್ಮ ಅಶನ-ವಸನಾದಿಗೊ ಪ್ರತಿಯೊಂದುದೇ ಕಲುಷಿತ ಮಲಿನ ಆವುತ್ತಾ ಇದ್ದು. ಕೆಲವು ದಿಕ್ಕೆ ನಾವು ಅನಗತ್ಯವಾಗಿ ವಿಷವ ಬಳಸುತ್ತು.
ತಡವಲೆ ಎಡಿವಲ್ಲಿಯೂ ತಡೆತ್ತಿಲ್ಲೆ – ಹೇಳ್ತದು ಪೆರ್ಲದಣ್ಣನ ಬೇಜಾರು.

ಸಂಭ್ರಮದ ಸೋಣೆ ಸುರುವಾಗಿ ಎರಡೇ ವಾರ ಆತಷ್ಟೆ.
ಈ ಸಂದರ್ಭಲ್ಲಿ ಹೀಂಗಿರ್ತ ವಿಷದ ಶುದ್ದಿ ಎಂತ್ಸಕಪ್ಪಾ – ಬೋಚಬಾವನ ಹಾಂಗೆ ಒಂದರಿ ಆಲೋಚನೆ ಬಂತು.
ಪೆರ್ಲದಣ್ಣನೇ ಉದಾಹರಣೆಕೊಟ್ಟು ವಿವರುಸುವಗ ಅಂದಾಜಿ ಆತು.
~
ಅತಿ ಬಯಂಕರದ ವಿಷವ ಅನಗತ್ಯವಾಗಿ ಬಳಸುತ್ತ ಬಹುಮುಖ್ಯ ಜಾಗೆ –ಚವುತಿ ಆಚರಣೆ – ಹೇಳಿ ಪೆರ್ಲದಣ್ಣನ ಅಭಿಪ್ರಾಯ.
ಅದೆಂತರ, ಅದು ಹೇಂಗೆ – ಹೇಳ್ತ ವಿವರವ ಪೆರ್ಲದಣ್ಣನ ಬಾಯಿಲೇ ಕೇಳಿ ಅಪ್ಪಗ, ಕೇಳಿ ತಿಳ್ಕೊಂಡಪ್ಪಗ ಆಶ್ಚರ್ಯ ಆತು.
ಪೆರ್ಲದಣ್ಣ ಹೇಳಿದ್ಸರ ನೇರವಾಗಿ ಹೇಳಿ ಬಿಡುವ ಮದಲು, ನಮ್ಮ ಓ – ಆ ಬೈಲಕರೆಲಿ ಚವುತಿ ಆಚರಣೆ ಮಾಡ್ತಲ್ಲದೋ – ಅದರ ಉದಾಹರಣೆ ತೆಕ್ಕೊಂಡು ಮಾತಾಡುವೊ°. ಆಗದೋ?
~
ಮದಲು ನಮ್ಮ ಊರಿಲಿ ಮಣ್ಣಿಲಿ ಮಾಡಿದ ಗೆಣವತಿಯ ಮೂರ್ತಿ ಮಡಗಿ ಪೂಜೆ ಮಾಡ್ತ ಜೆಂಬಾರ ಇತ್ತಿಲ್ಲೇಡ,
ಮನೆಮನೆಗೆ ಬಟ್ಟಮಾವ° ಬಕ್ಕು, ಚವುತಿ ಲೆಕ್ಕಲ್ಲಿ ಒಂದು ಹೋಮ ಮಡಗ್ಗು, ಪೂರ್ಣಾಹುತಿ ಕೊಡುಗು, ಹೋಕು.
ಈಗ ಊರೂರಿಲಿ ಗೆಣವತಿ ಮೂರ್ತಿ. ಸಾಮೂಹಿಕ ಚವುತಿ ಆಚರಣೆಯ ಸಂಭ್ರಮ ಬೇರೆಯೇ!
ಎಂತಕೆ ಸುರು ಆದ್ಸು?
ಸ್ವಾತಂತ್ರ್ಯಪೂರ್ವಲ್ಲಿ ಜೆನಂಗಳ ಒಟ್ಟುಸೇರುಸಲೆ ಒಂದೊಂದು ಕಾರಣ ಬೇಕಾತಿದಾ – ಅದಕ್ಕೆ ಬೇಕಾಗಿ ಬಾಲಗಂಗಾಧರ ತಿಳಕ° ಈ ಕಾರ್ಯಕ್ರಮವ ಪ್ರಚಾರ ಮಾಡಿದ್ದಾಡ – ಮಾಷ್ಟ್ರುಮಾವ° ಹೇಳುಗು.
ಸಭೆ – ಸಮಾರಂಭಕ್ಕೆ ಒಟ್ಟು ಸೇರುಲೆ ಆಗದ್ದರೂ, ಈ ಚವುತಿಯ ಹೆಸರಿಲಿ ಒಟ್ಟಿಂಗೆ ಸೇರುಲಕ್ಕು; ಹೇಳ್ತ ಕಾರಣಕ್ಕೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವಡ ಅಂದು.
ಮಹಾರಾಷ್ಟ್ರ ಹೊಡೆಲಿ ಆರಂಭ ಆದ ಈ ಕಾರ್ಯಕ್ರಮ ಕ್ರಮೇಣ ಇದು ನಮ್ಮ ಊರಿಂಗೂ ಎತ್ತಿತ್ತು.
ಹಾಂಗಾಗಿ, ಸುಮಾರು ಒರಿಶಂದ ಬೆಳದು ಬಂದು, ಈಗ ಇದುದೇ ನಮ್ಮ ಸಂಸ್ಕಾರಲ್ಲಿ ಒಂದು ಗವುಜಿ ಆಗಿ ಹೋಯಿದು.
~
ನಮ್ಮ ಬೈಲಕರೆಲಿಯೂ – ಚವುತಿ ಆಚರಣೆ ಸುರು ಆಗಿ ಹತ್ತಿಪ್ಪತ್ತೊರಿಶ ಆತೋ ಏನೋ!
ಬೈಲಕರೆಯ ದೇವಸ್ಥಾನದ ಗೋಪುರಲ್ಲಿ ಗೆಣವತಿ ದೇವರ ಪ್ರತಿಷ್ಠೆ ಮಾಡಿ, ಇಷ್ಟ ಅಪ್ಪದರ ನೇವೇದ್ಯ ಮಾಡಿ, ಕಷ್ಟಂಗಳ ಎಲ್ಲ ದೂರ ಮಾಡೇಕು – ಹೇಳ್ತ ಬೇಡಿಕೆಯ ಮಡಗಿ ಪ್ರಾರ್ಥನೆ ಮಾಡಿ, ಮೂರ್ನೇ ದಿನ ಬೈಲಕರೆಹೊಳೆಲಿ ವಿಸರ್ಜನೆ ಮಾಡುಗು.
ಈಗ, ಕೆಲವೊರಿಶಂದ ಮೂರುದಿನದ ಗವುಜಿ ಸುರು ಆದರೂ, ಮದಲಿಂಗೆ ಒಂದೇ ಒರಿಶದ ಆಚರಣೆ ಆಗಿದ್ದತ್ತು.

ಮದಲಿಂಗೆಲ್ಲ,
ಉದಿಯಪ್ಪಗ ಬಟ್ಟಮಾವ° ಮೂರ್ತಿಯ ಪ್ರತಿಷ್ಠೆ ಮಾಡಿಕ್ಕಿ, ಶಾಸ್ತ್ರೋಕ್ತವಾಗಿ ಗೆಣವತಿಯ ಆವಾಹನೆಮಾಡಿಕ್ಕಿ, ಕಾರ್ಯಕ್ರಮ ಸುರುಮಾಡ್ತವು.
ಉದಿಯಪ್ಪಗಾಣ ಮಹಾಪೂಜೆ ಆದ ಮತ್ತೆ ಒಂದು ಚೆಂದದ ಗಣಹೋಮ ಇರ್ತು.
ಮಧ್ಯಾಹ್ನಕ್ಕೆ ಮಹಾಪೂಜೆ ಆಗಿ ಅನ್ನದಾನ ನೆಡೆತ್ತು.
ಹೊತ್ತೋಪಗಾಣ ಮಹಾಪೂಜೆ ಕಳುದಮತ್ತೆ; ಎರಡುಮೈಲು ದೂರದ ಬೈಲಕರೆ ಹೊಳೆಒರೆಂಗೆ ಗವುಜಿಯ ಮೆರವಣಿಗೆ.

ಮೆರವಣಿಗೆ ಹೇಂಗೆ? – ಗೆಣವತಿ ಮೂರ್ತಿಯ ಮಡಗಿದ ಮರದ ಅಟ್ಟೆಯ ಆರೆಂಟು ಜೆನ ಹೊತ್ತೊಂಡು ಹೋವುತ್ತದು.
ಎದುರಂದ ಬಟ್ಟಮಾವ° ಹೂಗಿನ ಹರಿವಾಣನ್ನೂ ಜಲಪಾತ್ರೆಯನ್ನೂ ಕೈಲಿ ಹಿಡ್ಕೊಂಡು ನೆಡವದು; ಪರಿಕರ್ಮಿ ಸತ್ಯಣ್ಣ ಮಣೆಯುದೇ, ಹಣ್ಣುಕಾಯಿ ಒಡವಲಿಪ್ಪ ಕತ್ತಿಯನ್ನೂ ಹಿಡ್ಕೊಂಡು ನೆಡಗು.
ಹಿಂದಂದ ಆಸ್ತಿಕ ಜೆನಂಗೊ, ಹತ್ತೈವತ್ತು ಜೆನ.

ನೆಡವಗ ಮಹಾಗಣಾಧೀಶ್ವರ ದೇವರ ಪಾದಾರವಿಂದಕ್ಕೆ ಗೋವಿಂದಾಣಿ ಗೋವಿಂದಾ – ಹೇಳುಗು.
ಯೇವದಾರು  ಮಂತ್ರಂಗಳನ್ನೋ – ಸೂಕ್ತಂಗಳನ್ನೋ ಬಟ್ಟಮಾವ° ಹೇಳಿಗೊಂಡು ಹೋಕು; ಅವರಷ್ಟಕ್ಕೇ.
ದಾರಿಲಿ ನೇವಿದ್ಯ, ಹಣ್ಣುಕಾಯಿ – ಎಂತ್ಸಾರು ಇದ್ದರೆ ಅಟ್ಟೆಯ ನೆಲಕ್ಕಲ್ಲಿ ಮಡಗುತ್ಸು ಒಂದರಿ; ಬಟ್ಟಮಾವ° ಮಣೆಮಡೂಗಿ ಕೂದುಗೊಂಬದು; ಕ್ರಮಾಗತ ಮಂತ್ರ ಹೇಳಿ ನೈವೇದ್ಯ ಮಂಗಳಾರತಿ ಮಾಡಿ ಪ್ರಸಾದ ಕೊಡುಗು.
ಪುನಾ ಮೂರ್ತಿಯ ಎತ್ತಿಗೊಂಡು ಹೋಪದು.
~
ಹೊತ್ತಪ್ಪಗ ಹೆರಟ ಮೆರವಣಿಗೆ ಇರುಳಿರುಳಪ್ಪಗ – ನೆಕ್ರಾಜೆಗೆ ಹೋವುತ್ತ ದಾರಿಲಿ; ಬೈಲಕರೆ ಹೊಳಗೆ ಎತ್ತಿತ್ತೋ- ಹಣ್ಣುಕಾಯಿ, ಮಂಗಳಾರತಿ ಮಾಡುದು. ಮಧೂರು ದೇವರ ನೆಂಪುಮಾಡಿಗೊಂಡು ಗೋವಿಂದ ಹಾಕುತ್ತದು. ಬಟ್ಟಮಾವನ ಸಹಿತ, ಅಟ್ಟೆಯ ಹೊತ್ತ ಭಕ್ತಾದಿಗೊ – ಎಲ್ಲೋರುದೇ ಹೊಳಗೆ ಇಳಿತ್ತದು.
ಗೆಣವತಿಯ ಅಟ್ಟೆಯ ಒಟ್ಟಿಂಗೇ ಹೊಳೆ ನೀರಿಲಿ ಮುಳುಂಗುದು.
ಮುಂಗುವಗ ಗೆಣಪ್ಪಣ್ಣ ಇತ್ತಿದ್ದ°, ಏಳುವಗ ಇಲ್ಲೆ!!! 🙂
ಅದುವೇ ವಿಸರ್ಜನೆ!
~
ಗೆಣವತಿಯ ಮೂರ್ತಿಯೂ ಹಾಂಗೇ – ಬೈಲ ಕಲಾವಿದ ಆನಂದ° ಮಾಡ್ತದು.
ಅದಕ್ಕೆ ಯಕ್ಷಗಾನ, ನಾಟಕ ಎಲ್ಲ ಅರಡಿಗಿದಾ, ಅದರೊಟ್ಟಿಂಗೆ ಚಿತ್ರ ಬಿಡುಸುದು, ಗೊಂಬೆ ಮಾಡ್ತದು – ಹೀಂಗಿರ್ತ ಹವ್ಯಾಸಂಗೊ ಇದ್ದತ್ತು. ಹಾಂಗಾಗಿ ಊರ ಆಚರಣೆಗೆ ಇಪ್ಪ ಗೆಣವತಿ ಮೂರ್ತಿಯೂ ಅದೇ ಮಾಡ್ತ ವೆವಸ್ತೆ!

ಒಂತಿಂಗಳ ಮದಲೇ ತೆಯಾರಿ ಮಾಡುಗು.
ಶುದ್ಧಲ್ಲಿದ್ದೊಂಡು ಜೇಡಿಮಣ್ಣಿನ ಆದು ಹಾಕಿ, ದಿನಾಗುಳೂ ಅದರ ಮೆಟ್ಟಿ, ನೊಂಪುಮಾಡಿ, ಹುಳಿಬರುಸಿ, ಪಾಕಕ್ಕೆ ಬೇಕಾದ ಹಾಂಗೆ ಮಾಡುಗು.
ಒಂದೊಳ್ಳೆ ಮೂರ್ತಲ್ಲಿ – ಮರದ ಅಟ್ಟೆಯ ಮಡಗಿ, ಅದರ ಮೇಗೆ ಮೂರ್ತಿ ಮಾಡ್ತ ಕಾರ್ಯ ಆರಂಭ ಮಾಡ್ತದು.
ಗೆಣವತಿಯ ಪಟವನ್ನೂ ಎದುರು ಮಡಿಕ್ಕೊಂಡು, ಕಲಸಿ ಮಡಗಿದ ಮಣ್ಣಿನ ರಜರಜವೇ ಅಟ್ಟೆಯ ಮೇಗೆ ಸೇರುಸಿ ಸೇರುಸಿ, ಪಟಲ್ಲೇ ಇದ್ದ ಆಕಾರವ ಬರುಸುಲೆ ಪ್ರಯತ್ನ ಮಾಡುಗು.
ಕಚ್ಚೆಹಾಕಿ ಚಕ್ಕನಕಟ್ಟಿ ಕೂದೊಂಡ ದೊಡ್ಡ ಹೊಟ್ಟೆ ಮಾಣಿ, ಹೊಟ್ಟೆಯ ಮೇಗೆ ಆನೆಯ ಮೋರೆ, ಅದಕ್ಕೆ ಒಂದು ಕಿರೀಟ, ಮೈಗೊಂದು ಜೆನಿವಾರ, ನಾಕು ಕೈಲಿ ನಾಕು ಸಾಧನಂಗೊ – ಇದಿಷ್ಟಿದ್ದರೆ ಸಾಕು; ಮತ್ತೆ ಏನು ಮಾಡಿರೂ ‘ಇದು ಗೆಣಪ್ಪಣ್ಣ’ ಹೇಳಿ ಗುರ್ತ ಹಿಡಿವಲೆ ಬೋಚಬಾವಂಗೂ ಎಡಿತ್ತು. ಅಲ್ಲದೋ?
ಒಂದರಿ ಈ ಆಕಾರ ಎಲ್ಲ ಬರುಸಿ ಒಣಗಿದ ಮತ್ತೆ, ತೀರಾ ಅಗತ್ಯ ಕಂಡ ಒಂದೊಂದು ಭಾಗಕ್ಕೆ ರಜ್ಜ ರಜ್ಜ ಬಣ್ಣ ಕೊಡ್ತು.

ಬಣ್ಣ ಎಂತರ? –
ಕುಂಕುಮದ ಕೆಂಪು, ನೆಲ್ಲಿ ಎಲೆಯ ಹಸುರು, ಮಸಿಯ ಕಪ್ಪು, ಸೇಡಿಹೊಡಿಯ ಬೆಳಿ, ಅರುಶಿನ ಹೊಡಿಯ ಅರುಶಿನ!
ಇಷ್ಟೇ ಸಾಕನ್ನೇ ಗೆಣಪ್ಪಣ್ಣ ನೈಸರ್ಗಿಕವಾಗಿ ಚೆಂದಕಾಂಬಲೆ! 🙂
ಇದರೆಲ್ಲ ಬೇಕಾದಲ್ಲಿಗೆ ಬೇಕಾದ ಹಾಂಗೆ ಬಣ್ಣಕೊಟ್ಟು ತೆಯಾರಿ ಮಡಗ್ಗು.
~
ಉತ್ಸವ ಸಮಿತಿಯೋರು ಚವುತಿ ದಿನ ಉದಿಯಪ್ಪಗ ಹೋಪದು, ಶಂಖ ಜಾಗಟೆ ತೆಕ್ಕೊಂಡು.
ಇವು ಹೋದ ಮತ್ತೆ ಗೆಣಪ್ಪಣ್ಣನ ಮೂರ್ತಿಯ ಕಪ್ಪು ಕಣ್ಣಿಂಗೆ ಎರಡು ದೃಷ್ಟಿಬೊಟ್ಟಿನ ಮಡಗಿ, ಕಾಯಿ ಒಡದು, ಸಂತೋಷಲ್ಲಿ ಕಳುಸಿ ಕೊಡುಗು, ಕಲಾವಿದ ಆನಂದ°.
ಶಂಖಜಾಗಟೆ ಶಬ್ದಲ್ಲಿ ಗೆಣಪ್ಪಣ್ಣನ ಮೂರ್ತಿಯ ತಪ್ಪದು ಪ್ರತಿಷ್ಠೆ ಅಪ್ಪ ಜಾಗೆಗೆ – ದೇವಸ್ಥಾನದ ಗೋಪುರಕ್ಕೆ.
ಅಲ್ಲಿಂದ ಮತ್ತೆ ಬಟ್ಟಮಾವನ ಉಸ್ತುವಾರಿಯ ಕಾರ್ಯಂಗೊ. ದಿನ ಇಡೀ ಗೆಣಪ್ಪಣ್ಣ ಇಪ್ಪ ಗವುಜಿ.
ಆಸ್ತಿಕ ಜೆನಂಗೊ ಹತ್ತು ನೂರಿನ್ನೂರು ಜೆನ ಸೇರಿರೆ ಭಾಗ್ಯ. ಎಲ್ಲಾ ವೆವಸ್ತೆಗಳೂ ಅದೇ ಮಟ್ಟಿಂಗೆ ಇದ್ದತ್ತು!
ಇದು ಹತ್ತಿಪ್ಪತ್ತು ಒರಿಶ ಮದಲಾಣ ಕತೆ.
~
ಈಗ ಹಾಂಗಲ್ಲ, ವಿಪರೀತ ಗವುಜಿ.
ಗವುಜಿ ಎಂತರ?
ಒಂದಲ್ಲ, ಮೂರು ದಿನದ ಆಚರಣೆ.
ಇಂದು ಉದಿಯಪ್ಪಗ ಪ್ರತಿಷ್ಠೆ ಆದರೆ, ನಾಳೆ ಇಡೀ, ನಾಳ್ತು ಹೊತ್ತೋಪಗ ವಿಸರ್ಜನೆ.
ಪ್ರತಿ ಸಂಧ್ಯಾಕಾಲಲ್ಲಿ ಗೆಣವತಿಗೆ ಮಹಾಪೂಜೆ.
ಶ್ರದ್ಧಾಭಗ್ತಿಯ ಜೆನಂಗೊ ಎಡೆಹೊತ್ತಿಲಿ ಅವರ ಭಕ್ತಿಯ ಪ್ರಸಾದವ ತೆಕ್ಕೊಂಡು ಮನಗೆ ಹೋಕು.
ಮೂರೂದಿನವೂ, ಮೂರು ಹೊತ್ತೂ ಬಂದು ಸೇರಿಕ್ಕಲೆ ಎಡಿಯ ಹೇಳ್ತ ಲೆಕ್ಕಲ್ಲಿ ಬಟ್ಟಮಾವ° ಗೆಣವತಿಹೋಮ ಮಾಡಿಕ್ಕಿ ಹೋವುತ್ತವು. ದೇವಸ್ಥಾನದ ಪೂಜೆಯ ಮಾಲಿಂಗಣ್ಣ ಮಹಾಪೂಜೆಗಳ ಮಾಡುಗು, ಚೆಂದಲ್ಲಿ.
ಎಡೆಹೊತ್ತಿಲಿ ಮಾಲಿಂಗಣ್ಣನ ಪುಳ್ಳಿ ಅಲ್ಲಿಯೇ ಕೂದೊಂಡು ಬಂದೋರಿಂಗೆ ತೀರ್ಥಪ್ರಸಾದ ಕೊಡ್ತದು, ಹಣ್ಣುಕಾಯಿ ಮಾಡ್ತದು ಇತ್ಯಾದಿ.
ಪರಿಕರ್ಮಿ ಸತ್ಯಣ್ಣನ ಮಗ ಶಂಕರ° ಅಲ್ಲಿಯೇ ಇಪ್ಪಕಾರಣ ಕಾಯಿ ಒಡವಲೆ, ಆರತಿ ಹೊತ್ತುಸಿ ಕೊಡ್ಳೆ ತೊಂದರೆ ಇಲ್ಲೆ!
ಮದಲಾಣ ಹಾಂಗೆ ಅಯಿವತ್ತು-ನೂರು ಜೆನ ಬಂದು ಸೇರುದಲ್ಲ, ಬದಲಾಗಿ ಸಾವಿರಾರು ಜೆನಂಗೊ ಬಂದು ಗೆಣವತಿಯ ಕಂಡಿಕ್ಕಿ ಹೋವುತ್ತವು.
~
ಮೂರು ದಿನ ಆಚರಣೆ ಇಪ್ಪ ಕಾರಣ ಬರೇ ಧಾರ್ಮಿಕ ಕಾರ್ಯಂಗೊ ಮಾಂತ್ರ ಅಲ್ಲ, ಸಂಘಟನಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮಂಗಳೂ ನೆಡೆತ್ತು.
ಮಳೆಗಾಲದ ಜಡಲ್ಲಿದ್ದಿದ್ದ ಬೈಲಿಂಗೆ ಹಲವಾರು ಆಟಂಗೊ, ಸ್ಪರ್ಧೆಗೊ – ಎಲ್ಲ!
ಗೆಣವತಿಯ ಮಡಗುತ್ಸು ತೆಂಕ ಗೋಪುರಲ್ಲಿ ಆದರೆ, ಪಡು ಗೋಪುರಲ್ಲಿ ಷ್ಟೇಜು ಮಾಡುಗು.
ಇಂದು, ನಾಳೆ, ನಾಳ್ತು – ಚವುತಿಯ ಮೂರು ದಿನವೂ ಆ ಷ್ಟೇಜು ಪೂರ್ತಿ ಸ್ಪರ್ಧೆ, ಸಭೆ ಕಾರ್ಯಕ್ರಮಂಗೊ. ಕೆಲವು ಸ್ಪರ್ಧೆಗೊ ಹೆರಾಣ ಅಂಗಣ, ಜಾಲಿಲಿಯೂ ಆವುತ್ತು.

ಇಂದು ಹಗಲು ಮಕ್ಕಳ ಸ್ಪರ್ಧೆಗೊ, ನಾಳೆ ಹಗಲು ದೊಡ್ಡೋರಿಂಗೆ ಸ್ಪರ್ಧೆಗೊ. ಮಕ್ಕಳ ಸ್ಪರ್ಧೆಗೆ ದೊಡ್ಡವು ಬಕ್ಕು, ದೊಡ್ದೋರ ಸ್ಪರ್ಧೆಗೆ ಮಕ್ಕಳೂ ಬಕ್ಕು. ಹಾಂಗಾಗಿ ನಿತ್ಯವೂ ಜೆನ ತುಂಬ!!
ಇಂದು ಮಧ್ಯಾನ್ನಮೇಗೆ ನಾಟಕ-ಭರತನಾಟ್ಯ, ನಾಳೆ ಮಧ್ಯಾನ್ನಮೇಗೆ ಯಕ್ಷಗಾನ!
ನಾಳ್ತು ಉದಿಯಪ್ಪಗಾಣ ಸಭಾಕಾರ್ಯಕ್ರಮಲ್ಲಿ ಒಬ್ಬ ವಿಶೇಷ ಅತಿಥಿ ಬಂದು ಸ್ಪರ್ಧೆಲಿ ಗೆದ್ದ ಮಕ್ಕೊಹೆಮ್ಮಕ್ಕೊ ಗೆಂಡುಮಕ್ಕೊಗೆ ಪ್ರಶಸ್ತಿ ಕೊಡ್ತದು.
ಸಭೆ ಬಿರುದ ಮತ್ತೆ ಮಧ್ಯಾಹ್ನ ಅನ್ನದಾನ, ಹೊತ್ತೋಪಗ ವಿಸರ್ಜನಾ ಮೆರವಣಿಗೆ!
ಲೋರಿಯ ಮುಚ್ಚಲು ತೆಗದು, ಅದರ್ಲಿ ಈ ಮೂರ್ತಿಯ ಮಡಗಿ, ಕರೆಲಿ ನಾಕು ಜೆನ ಚೆಂದಕೆ ಹಿಡ್ಕೊಂಡು, ಮಾಲಿಂಗಣ್ಣ ಪೂಜೆ ಮಾಡಿಗೊಂಡು ಹೋಪ ಗವುಜಿಯೇ ಬೇರೆ!
ಗೆಣವತಿಯೂ, ಮಾಲಿಂಗಣ್ಣನೂ ಲೋರಿಲಿ ಕೂದುಗೊಂಡು; ಕೆಲವು ಜೆನ ಸಕಾಯಕ್ಕೆ ನಿಂದುಗೊಂಡು.
ಒಳುದೋರೆಲ್ಲ ಲೋರಿಕರೆಲಿ ನೆಡಕ್ಕೊಂಡು.
ಬೇಂಡು, ಚೆಂಡೆ, ಡೇನ್ಸು, ಕುಣಿತ, ಗರ್ನಾಲು – ಎಲ್ಲವೂ ಇದ್ದು. ಒರಿಶಕ್ಕೊಂದರ ಹಾಂಗೆ ಹೊಸತ್ತು ಸೇರಿಗೊಂಡು ಹೋವುತ್ತು.
ಬರೇ ಎರಡು ಮೈಲು ಹೋಪಲೆ ನಾಕೈದು ಗಂಟೆ!!
~
ಕಾಲ ಬದಲಾದ ಹಾಂಗೆ ಕೋಲವೂ ಬದಲಾಯಿದು.
ಮದಲಾಣ ನಮುನೆಗೆ ನೂರಿನ್ನೂರು ಜೆನರ ಏರ್ಪಾಡಲ್ಲ, ಬದಲಾಗಿ ಸಾವಿರ ಜೆನರ ಅಡಿಗೆ ಏರ್ಪಾಡು.
ಮದಲಾಣ ಹಾಂಗೆ ಹಣ್ಣುಕಾಯಿ ಮಾಂತ್ರ ಅಲ್ಲ, ಈಗ ನಾನಾ ಸೇವೆಗೊ ಇದ್ದು –ವಿಶೇಷಪೂಜೆ, ಹೂಗಿನ ಪೂಜೆ, ಅರ್ಚನೆ, ಮಂಗಳಾರತಿ, ಪಂಚಕಜ್ಜಾಯ, ಅಷ್ಟದ್ರವ್ಯ, ಅಪ್ಪ, ಅಮ್ಮ – ಹೇಳಿ ಸುಮಾರು ಸೇವೆಗೊ.
ಒಂದೊಂದು ಸೇವಗೆ ಒಂದೊಂದು ಬಣ್ಣದ ರಶೀದಿ; ಅದರ ತೋರುಸಿರೆ ಒಂದೊಂದು ಪ್ರಸಾದಂಗೊ.
ಸರ್ವಸೇವೆ ಹೇಳಿರೆ ಎಲ್ಲಾ ಪ್ರಸಾದ ತೊಟ್ಟೆಂದ ಒಂದೊಂದು ಮುಷ್ಠಿ ತುಂಬುಸಿ ದೊಡ್ಡ ಕಟ್ಟ ಕೊಡ್ತವು.
ಅಂತೂ – ಶಂಕರಂಗೆ ಕೈತುಂಬ ಕೆಲಸ!
~
ಇದೆಲ್ಲ ಒಳ್ಳೆದೇ, ಆದರೆ ಒಂದು ವಿಶಯ ಇದ್ದು.
ಈಗ ಗೆಣವತಿ ಮೂರ್ತಿ ಬೈಲಿನ ಆನಂದ° ಮಾಡುದಲ್ಲ!  ಅದಕ್ಕೆ ಪ್ರಾಯ ಆಗಿ ಕೈ ನಾಜೂಕು ಬತ್ತಿಲ್ಲೆ; ಅದರಿಂದ ಮುಂದಕ್ಕೆ – ಮಕ್ಕೊಗೆ ಆಸಕ್ತಿ ಇಲ್ಲೆ.
ಹಾಂಗಾಗಿ ಈಗ ಮೂರ್ತಿಯ ಪೇಟೆಂದ ತಪ್ಪದು.
ಪೇಟೆಂದ? ಅಪ್ಪು!
ಮದಲಾಣ ಹಾಂಗೆ ’ಮೂರ್ತಿ ಮಾಡುಸುತ್ತ ಮೂರ್ತ’ಕ್ಕೆ ಹೋಯೇಕಾದ ಅಗತ್ಯ ಇಲ್ಲೆ.
ಬೇರೆಬೇರೆ ಡಿಸೈನಿಂದು, ಬೇರೆಬೇರೆ ಎತ್ತರದ್ದು, ಬೇರೆಬೇರೆ ಬಣ್ಣಂಗಳದ್ದು ಮೂರ್ತಿಗೊ ಸಾಲುಸಾಲು ತೆಯಾರು ಮಡಿಕ್ಕೊಂಡು ಇರ್ತಾಡ; ಸಂಜೀವಶೆಟ್ಟಿಯಲ್ಲಿ ಪೇಂಟಂಗಿ ನೇಲುಸಿದ ನಮುನೆ.
ಅಲ್ಲಿಗೆ ಹೋಗಿ ನವಗೆ ಬೇಕಾದ್ದರ ತೆಕ್ಕೊಂಡು ಬಪ್ಪದೇ ಇಪ್ಪದು.
ಛೆ!! ಕಾಂಬಲೆ ಎಂತಾ ಚೆಂದ ಇರ್ತು ಗೊಂತಿದ್ದೋ – ಪಳಪಳನೆ ಹೊಳೆತ್ತು. ಗೆಣಪ್ಪಣ್ಣನೇ ಎದ್ದು ಬತ್ತ ನಮುನೆ ಕಾಣ್ತು.
ಮದಲಾಣ ಹಾಂಗೆ ನಾಕೈದು ಬಣ್ಣ ಮಾಂತ್ರ ಅಲ್ಲ, ಈಗ ಪಚ್ಚೆ, ಕೆಂಪು, ಕಡುಕೆಂಪು, ಪಿಂಕು, ಬೂದು, ನೀಲಿ, ಚಿನ್ನದ ಬಣ್ಣ, ತಗಡಿನ ಬಣ್ಣ – ಷೋ, ಹೇಳಿ ಪುರೇಸ. ಜೆನಂಗೊಕ್ಕೆ ಚೆಂದ ಕಾಂಬಲೆ ಯೇವ ಬಣ್ಣ ಎಲ್ಲ ಬೇಕೋ – ಅದೆಲ್ಲ ಮೆತ್ತುತ್ತವು ಆ ಮೂರ್ತಿಗೆ.
~

ತರಾವಳಿ ಗೆಣವತಿ ಮೂರ್ತಿಗೊ: ಎಲ್ಲದರ್ಲಿಯೂ ವಿಷದ ಪಯಿಂಟು ಇದ್ದೇ ಇದ್ದು

ಇದೆಲ್ಲ ಸರಿ, ಈ ಬದಲಾವಣೆಲಿ ತೊಂದರೆ ಎಂತರ?
ಈ ಮೂರ್ತಿಗಳ ಇಷ್ಟೂ ಚೆಂದ ಮಾಡ್ತವಲ್ಲದೋ – ಅದರ್ಲಿ ಇಪ್ಪದೇ ವಿಷದ ಪೈಂಟು ಅಡ.
ಅಲ್ಲಿ ಮೆತ್ತುತ್ತ ಪೈಂಟಿಲಿ ಸೀಸವೋ, ಸತುವೋ – ಹೀಂಗಿತ್ತ ವಿಷಂಗೊ ಇರ್ತಾಡ.
ಇದು ಒಂದರಿ ನಮ್ಮ ದೇಹಕ್ಕೆ ಸೇರಿಗೊಂಡ್ರೆ ದೇಹಂದ ಹೆರ ಹೋವುತ್ತಿಲ್ಲೇಡ. ಆ ವಿಷಂಗೊ ಸಂಪರ್ಕ ಆದ ರಕ್ತನಾಳಂಗೊ, ನರಂಗೊ ಸಾವದೇ ಅಡ.
ಮೂರುದಿನದ ಆಚರಣೆಗೆ ಬೇಕಾಗಿ ಎಷ್ಟೋ ಲೀಟ್ರುಗಟ್ಳೆ ಈ ವಿಷಂಗಳ ನಮ್ಮ ಊರಿನ ನೀರಿಂಗೆ ಸೇರುಸುತ್ತದು ಎಷ್ಟು ಒಳ್ಳೆದು? – ಕೇಳಿದ°.
ಇದೇ ವಿಷದ ಮೂರ್ತಿಯ ಬೈಲಕರೆ ಹೊಳೆಲಿ ಮುಂಗುಸಿರೆ ಹೇಂಗಕ್ಕು? ಆ ನೀರೇ ಅಲ್ಲದೋ – ನಮ್ಮ ತೋಟದ ಕೆರೆಗಳಲ್ಲಿ ಒರತ್ತೆ ಆಗಿ ಬಪ್ಪದು? ಆ ನೀರನ್ನೇ ಅಲ್ಲದೋ – ನಾವು ಕುಡಿವದು? ಆ ನೀರನ್ನೇ ಅಲ್ಲದೋ, ನಾವು ಆಹಾರ ವಸ್ತುಗೊಕ್ಕೆ ಹಾಕುತ್ಸು?
ಹರಿತ್ತ ನೀರಾದ ಕಾರಣ ಗೊಂತಾಗ, ಅಲ್ಲದ್ದರೆ ಮೀನುಗೊ ಸತ್ತದೂ ಕಾಂಗು! ಅಲ್ಲದೋ?
ಅದೇ ಮೀನಿನ ಅಲ್ಲದೋ ಇಬ್ರಾಯಿ ಮಾರುದು? ಆ ಮೀನಿನ ತಿಂತ ಮನುಷ್ಯರು ಹೇಂಗಿಕ್ಕು?
ಒಟ್ಟು, ಒಂದು ದಿಕ್ಕೆ ವಿಷ ಸೇರಿತ್ತು ಹೇಳಿರೆ, ಮತ್ತೆ ಆ ಸಮಾಜಲ್ಲೇ ವಿಷ ತುಂಬಿತ್ತು ಹೇಳಿ ಅರ್ತ.
ಹಾಂಗಾಗಿ, ಅನಗತ್ಯ ವಿಷದ ಬಳಕೆ ಮಾಡ್ತ ಜಾಗೆಗಳ ನಾವು ಬದಲಾವಣೆ ಮಾಡೇಕು – ಇದು ಪೆರ್ಲದಣ್ಣನ ಅಭಿಮತ.
ನಮ್ಮ ಊರಿಲಿ ಆದರೂ ರಜ ಕಮ್ಮಿ ಅಡ, ಬೆಂಗುಳೂರಿಲಿ ಹೇಳಿ ಸುಖ ಇಲ್ಲೆ, ಮೂರ್ತಿ ಮಣ್ಣಿಂದೂ ಅಲ್ಲ – ಎಂತದೋ ಪೇರಿಸುಪ್ಲೇಷ್ಟರಿನ ಮೂರ್ತಿ ಅಡ, ಅದಕ್ಕೆ ಮೆತ್ತಿದ ಬಣ್ಣ; ಅದರ ಚೆಂದ ಮಾಡ್ಳೆ ಹಾಕಿದ ಪ್ಲೇಷ್ಟಿಕು ಹೂಗುಗೊ – ಒಟ್ಟು, ಚೆಂದ ಕಂಡರೆ ಆತು. ಅಷ್ಟೇ!
~
ಅಪ್ಪನ್ನೇ ಕಂಡತ್ತು.
ಮದಲಿಂಗೂ ಗೆಣಪ್ಪಣ್ಣನ ಆಚರಣೆ ಆಗಿಂಡಿತ್ತು, ಚೆಂದಕೆ. ಈಗಳೂ ಆವುತ್ತು; ಮದಲಿಂದಲೂ ಗವುಜಿಲಿ.
ಗವುಜಿ ಆಚರಣೆಲಿ ಇರಳಿ, ವಿಷ ತುಂಬಿದ ಚೆಂದದ ಮೂರ್ತಿ ತಂದು ಎಂತ ಗುಣ?
ಗೆಣಪ್ಪಣ್ಣನ ಚವುತಿ ಗವುಜಿ ಇರಳಿ, ಆದರೆ ಆಚರಣೆಗೆ ಬಳಸುತ್ತ ಆ ಮೂರ್ತಿ ನೈಸರ್ಗಿಕ ಆಗಿರಳಿ.

ಪೆರ್ಲ ಎತ್ತುವಗ ಪೆರ್ಲದಣ್ಣ ಇಳುದ°,  ಅವ° ಹೇಳಿದ ಈ ಮಾತುಗೊ ಇನ್ನೂ ತಲೆಲಿ ಏರಿಗೊಂಡೇ ಇದ್ದತ್ತು.
ನಿಸರ್ಗಕ್ಕೆ ಹೆಚ್ಚು ಹತ್ತರೆ ಆದ ಬಣ್ಣಂಗೊ, ಪ್ರಕೃತಿಲಿ ಕರಗಿ ಹೋವುತ್ತ ಲೇಪಂಗೊ, ಸ್ವಾಭಾವಿಕವಾದ ಅಲಂಕಾರಂಗೊ – ಇದೆಲ್ಲ ಇಪ್ಪ ಚವುತಿ ಇದ್ದರೆ ಅದುವೇ ನಿಜವಾದ ದೇವರ ಸೇವೆ – ಹೇಳ್ತದು ಪೆರ್ಲದಣ್ಣನ ಅಭಿಮತ.
ನಿಂಗೊ ಎಂತ ಹೇಳ್ತಿ?

ಒಂದೊಪ್ಪ: ಮಗನ ಮೈಲಿಪ್ಪ ವಿಷವ ನುಂಗಲೆ ಶಿವ° ಇನ್ನೊಂದರಿ ವಿಷಕಂಠನೇ ಆಯೆಕ್ಕಕ್ಕೋ?

ಸೂ: ನಿಂಗಳ ಊರಿಲಿ ಚವುತಿ ಆಚರಣೆಗೆ ನೈಸರ್ಗಿಕ ಮೂರ್ತಿ ಆಗಿಪ್ಪ ನಮುನೆ ನೋಡಿಗೊಂಡರೆ ನಿಂಗೊಗೊಂದು ಒಪ್ಪ!

20 thoughts on “ವಿಷಕಂಠನ ಮಗನ ಮೂರ್ತಿಲಿ ವಿಷವೇ ತುಂಬಿದ್ದಾಡ…

  1. samayochitha shuddi laikaidu.
    oppannange gammattu iddo gontille.
    officu heligondu full bc.
    elloru mannina ganapananne pooje maadi kaapadali
    bannada ganapa beda allado oppanna.
    bahusha oppannana maneli gammattu ille kanuttu.
    ondoppa soooper.

  2. ಒಪ್ಪಣ್ಣಾ…,

    ಅಸಂಖ್ಯಾತ ಹೆಸರಿಪ್ಪ ಗೆಣವತಿ ದೇವರ ರೂಪವೂ ಅನಂತವೇ!!! ಪ್ರತಿಯೊಬ್ಬನ ಕಣ್ಣಿಂಗೆ ಒಂದೊಂದು ರೀತಿ ಕಾಂಬದಲ್ಲದಾ? ಅವನಲ್ಲಿ ಎಲ್ಲವೂ ಅಡಕವಾಗಿದ್ದಲ್ಲದಾ? ಆನೆಯ ಮೋರೆ, ಮನುಷ್ಯ ಶರೀರ ಪ್ರಾಣಿ- ಮನುಷ್ಯರ ಅವಲಂಬನೆಯ ಹೇಳ್ತಲ್ಲದಾ? ಅವ° ಅಷ್ಟು ದೊಡ್ದ ಶರೀರದವ° ಆದರೂ ಅವನ ವಾಹನ ಎಲಿ ಅಲ್ಲದಾ? ನಮ್ಮ ಹತ್ತರೆ ಎಷ್ಟಿದ್ದರೂ ಇಪ್ಪದರಲ್ಲಿ ಇದ್ದದರಲ್ಲಿ ಹೊಂದಿಗೊಳ್ಳೆಕ್ಕು ಹೇಳಿ ನವಗೆ ಸೂಕ್ಷ್ಮವಾಗಿ ಹೇಳ್ತ° ಅಲ್ಲದಾ? ಎಲ್ಲ ದೇವರ ಮಾಡುವಾಗ ಒಂದೇ ರೀತಿಲಿ ರೂಪ ಕೊಟ್ಟು ಮಾಡ್ತವು.. ಆದರೆ ಗಣಪತಿಯ ಮಾಡುವಾಗ ಚಿತ್ರಲ್ಲಿಯೂ ಬೇರೆ ಬೇರೆ ವಸ್ತುಗಳಲ್ಲಿ ಗಣಪತಿಯ ರೂಪ ಮಾಡ್ತವಲ್ಲದಾ? ಎಲೆ ರೂಪದ ಗಣಪತಿ, ಹೂಗಿನ ರೂಪದ ಗಣಪತಿ.. ಪ್ರಕೃತಿಯ ಎಲ್ಲ ರೂಪದ ಗಣಪತಿ..!!! ಪ್ರಕೃತಿಂದ ಬಂದದು ಪ್ರಕೃತಿಗೇ ಸೇರೆಕ್ಕು ಹೇಳಿ ನವಗೆ ನೆನಪ್ಪು ಮಾಡ್ತ ನಮ್ಮ ಒಂದು ಪೂಜಾವಿಧಾನ.

    ಸಾರ್ವಜನಿಕವಾಗಿ ಪೂಜೆ ಮಡುಗಿದ್ದದು ಸಂಘಟನೆಗೆ ಬೇಕಾಗಿ ಅಲ್ಲದಾ? ಈಗಳೂ ಅದು ಆವುತ್ತು. ಆದರೆ ಅದು ಎಷ್ಟು ಶ್ರದ್ಧೆಲಿ ಆವುತ್ತು ಹೇಳುದು ಮಾಂತ್ರ ನಾವು ನೋಡುಲಿಪ್ಪದು. ನೀನು ಹೇಳಿದ ಹಾಂಗೆ ಮೂರ್ತಿಗೆ ಮೂರ್ತ ಮಡುಗದ್ದೆ, ಅವರವರ ಕಣ್ಣಿಂಗೆ ಕೊಶಿ ಕಂಡದರ ನೋಡಿ ತಪ್ಪದಲ್ಲದಾ? ಮೂರ್ತಿ ಎಷ್ಟು ದೊಡ್ದದು, ಎಷ್ಟು ಖರ್ಚು ಮಾಡಿ ತಂದದು ಹೇಳಿ ಮಾಂತ್ರವೇ ಜೆನಂಗೋಕ್ಕೆ ಪ್ರತಿಷ್ಠೆಯ ಸಂಗತಿ. ಆರಿಂಗುದೇ, ಅದರ ಮೂರ್ತ ರೂಪಕ್ಕೆ ತಪ್ಪಗ ಅದರ ಮಾಡಿದ ಕೈ, ಅದರ ಮೂಲ ರೂಪ ಅಂದಾಜು ಮಾಡಿದ ಮನುಷ್ಯನ ಮನಸ್ಥಿತಿ ಎಂತ ಇತ್ತು ಹೇಳಿ ಗೊಂತಿರ್ತಿಲ್ಲೆ. ಮೊದಲು ಮೂರ್ತಿ ಮೂರ್ತ ಮಾಡಿ ತಪ್ಪಗ ಆ ಕಲಾವಿದಂಗೆ ತಾನು ಇದರ ಆರಿಂಗೆ ಮಾಡ್ತಾ ಇದ್ದೆ, ಯಾವ ಊರಿನ ಜನಂಗಳ ನಂಬಿಕೆಗೆ ಬೇಕಾಗಿ ಮಾಡ್ತಾ ಇದ್ದೆ.., ಆ ಊರಿನವರ ಮನೋಭಾವ, ಅವರ ಶ್ರದ್ಧೆ ಎಲ್ಲವನ್ನೂ ಮನಸ್ಸಿಲಿ ಮಡಿಕ್ಕೊಂಡು, ತನ್ನ ಊರಿಂಗೆ ಒಳ್ಳೆದಾಗಲಿ ಹೇಳಿ ಮನಸ್ಸಿಲಿ ಮಡಗಿಯೊಂದು ಗೆಣವತಿಯ ಮೂರ್ತ ರೂಪಕ್ಕೆ ತಕ್ಕು ಅಲ್ಲದಾ? ಮದಲು ಬಟ್ಟಮಾವ° ಹೋಪಗ ಒಟ್ಟಿಂಗೆ ಇಪ್ಪೋರುದೇ ಅಷ್ಟೇ ಶುದ್ಧಲ್ಲಿ ಇಕ್ಕು. ಕೆಲವು ಕಡೆಲಿ, ಮೂರ್ತಿ ಮಾಡುಲೆ ಮೂರ್ತ ಮಾಡಿದ ಮೇಲೆ ಶುದ್ಧಲ್ಲಿಯೇ, ಸಸ್ಯಾಹಾರಿಗ ಆಗಿ ಇಕ್ಕು ಬಾಕಿ ಜನಂಗ. ಆದರೆ ಈಗ ದೇವರ ಹತ್ತರೆ ನಿಂಬೋರು ಕೂಡಾ ಅವರ ಒಳ ’ದೇವರ’ ಇಳಿಶಿಗೊಂಡೇ ಬಕ್ಕಲ್ಲದಾ?

    ಒಪ್ಪಣ್ಣ, ನೀನು ಹೇಳಿದ ಹಾಂಗೆ ಈಗಾಣ ಮೂರ್ತಿಲಿ ಹಾಕುವ ಬಣ್ಣಂಗಳಲ್ಲಿ ಇಪ್ಪ ವಿಷ ನಮ್ಮ ನೆಲ,ಜಲ,ವಾಯು ಎಲ್ಲವನ್ನೂ ಹಾಳು ಮಾಡ್ತು. ನಾವು ಚೆಂದಲ್ಲಿ ನೋಡಿಗೊಳ್ಳೆಕ್ಕಾದ ನಮ್ಮ ಸುತ್ತಲಿನ ವಾತಾವರಣವ ಹಾಳು ಮಾಡ್ತಾ ಇದ್ದು.. ನಮ್ಮ ಮುಂದಾಣವ್ವು ಈ ವಿಷಯುಕ್ತ ಮಣ್ಣು, ನೀರು ಉಪಯೋಗ ಮಾಡೆಕ್ಕಲ್ಲದಾ? ಗೆಣವತಿಯ ಮಡುಗುತ್ತ ಮೂಲ ಉದ್ದೇಶವೇ ಮರದು ಎಲ್ಲರ ಪ್ರತಿಷ್ಠೆಗೆ, ಗೌಜಿಗೆ ಮಾಂತ್ರವೇ ಕಾರ್ಯಕ್ರಮ ಮಾಡ್ತ ಹಾಂಗೆ ಆಯಿದು. ಇನ್ನಾದರೂ ಎಲ್ಲೋರೂ ಮೂಲಪ್ರಕೃತಿಗೇ ತಿರುಗಿ ಮದಲಾಣ ಹಾಂಗೆ ಸಾವಯವ ಮಣ್ಣಿನ ಗಣಪನ ಮಾಡಿ, ಸಾವಯವ ಬಣ್ಣ ಹಾಕಿ, ಸಾವಯವ ಪ್ರಸಾದ ತೆಕ್ಕೊಂಡು, ಸಾವನ್ನಾರ ಸಾವಯವ ಆಹಾರ ತೆಕ್ಕೊಂಡು, ಬೆಳೆಶಿ, ಪ್ರಕೃತಿಯ ಗೌರವಿಸುತ್ತೆಯಾ° ಹೇಳಿ ಹೇಳುಲಕ್ಕಲ್ಲದಾ?

    ಒಪ್ಪಣ್ಣೋ.., ಚೌತಿಯ ಆಚರಣೆ ತುಂಬಾ ಚೆಂದಲ್ಲಿ ಒಂದಾಗಿ ಒಂದು ಬರದ್ದೆ. ಎರಡು ರೀತಿಯ ಆಚರಣೆಯ ತೂಗಿದ್ದುದೇ ಲಾಯ್ಕಾಯಿದು. ಆಚರಣೆ ಸರಳ ಆದರೂ ತಕ್ಕಡಿಲಿ ಮದಲಾಣ ಕ್ರಮವೇ ಭಾರ ಆಗಿ ಭೂಮಿಗೆ ಎತ್ತಿತ್ತು ಅಪ್ಪೋ!!!! ಒಂದೊಪ್ಪ ಲಾಯ್ಕಾಯಿದು. ವಿಷವ ನುಂಗಲೆ ವಿಷಕಂಠನೇ ಬರೆಕ್ಕಷ್ಟೇ..!!! ವಿಷಂದ ದೂರ ಇಪ್ಪಲೆ ಗೆಣಪ್ಪನೇ ಮತಿ ತೋರ್ಸೆಕ್ಕಷ್ಟೇ!!!

  3. ಗಣೇಶೋತ್ಸವದ ಗೌಜಿಯ ಚೆಂದಕೆ ವಿವರಿಸುತ್ತ ಎಡೆಲಿ, ಗಣಪತಿಯ ಮೈಯ ವಿಷದ ವಿಷಯವನ್ನು ತಿಳುಸಿ ಕೊಟ್ಟು ಒಂದು ಚಿಂತನೆಗೆ ಅವಕಾಶ ಮಾಡಿ ಕೊಟ್ಟಿದ ಒಪ್ಪಣ್ಣ. ಎನ್ನ ಅಂದಾಜು ಪ್ರಕಾರ, ನಮ್ಮ ಹವ್ಯಕರಲ್ಲಿ ಗಣಪತಿ ಮೂರ್ತಿಯ ಕೂರುಸಿ ಪೂಜೆ ಮಾಡ್ತದು ರಜಾ ಕಡಮ್ಮೆಯೋ ಹೇಳಿ. ಮನೆಮನೆಗಳಲ್ಲಿ, ಸಾರ್ವಜನಿಕವಾಗಿ ಗಣೇಶನ ಕೂರುಸುತ್ತವು ನಿಜವಾಗಿಯು ತಲೆಗೆ ತೆಕ್ಕೊಳೆಕಾದ ವಿಚಾರ ಇದು. ಗಣೇಶೋತ್ಸವಂದ ಆವ್ತ ಮಾಲಿನ್ಯವ ಎಷ್ಟು ಹೇಳಿರು ಸಾಲ. ಗಣೇಶೋತ್ಸವದ ಮೆರವಣಿಗೆಲಿ ಎಣ್ಣೆ ಹಾಕಿದವೇ (ತಲಗಲ್ಲ, ಹೊಟ್ಟೆಗೆ) ಹೆಚ್ಚು ರೈಸುತ್ತದು ಕಂಡು ಬತ್ತದು ಬೇಜಾರಿನ ವಿಷಯ.

  4. ಮಕ್ಕೊಗೆ ಶಾಲೆಲಿ ಮಣ್ಣಿನ ಗಣಪತಿ ಮಾಡುಲೆ ಹೇಳಿ ಕೊಟ್ಟು ,ಆ ಗಣಪತಿಯ ಅವರ ಅವರ ಮನೆಲಿ ಕೂರುಸಿ ಪೂಜೆ ಮಾಡುವಾಂಗೆ ಮಾಡಿದರೆ ಮಕ್ಕಳು ಕಲ್ತಂಗೆ ಆತು ,ನಮ್ಮ ಹಬ್ಬಕ್ಕೆ ಮೂರ್ತಿಯೂ ಆತು. ಅಲ್ಲದೋ?

    ಶಾಲೆಲಿ ಆಗದ್ರೆ ನಮ್ಮ ಸಮಾಜದ ವತಿಯಿಂದ ನಾವು ಆದರು ಹೀಂಗೆಂತಾರು ಮಾಡಿದರೆ ನಮ್ಮ ಕಡೆದು ಕಿರು ಕಾಣಿಕೆ ಆವುತ್ತಲ್ಲ ವಿಷ ಕಡಮ್ಮೆ ಮಾಡುಲೆ.ಎಂತ ಹೇಳ್ತಿ?

  5. ಒಪ್ಪಣ್ಣಾ,
    ಸಕಾಲಿಕ ಲೇಖನ.
    ಮೂರು ದಿನ ಗೌಜಿ ಮಾಡಿ, ಬಣ್ಣಕೆ ಮರುಳಾಗಿ, ವರ್ಷ ಇಡೀ ಎಲ್ಲರೂ ವಿಷಯುಕ್ತ ನೀರು ಕುಡಿತ್ತ ಹಾಂಗೆ ಅಪ್ಪಲಾಗ. ಇದರ ಬಗ್ಗೆ ಜಾಗ್ರತೆ,ಜಾಗೃತಿ ಎರಡು ಆಯೆಕ್ಕಾದ್ದು ಮುಖ್ಯ.
    ಇತ್ತೀಚೆಗೆ, ಪರಿಸರ ಸ್ನೇಹಿ ಗಣೇಶನ ತಯಾರು ಮಾಡಿ ಕೊಡುವವು ಇದ್ದವು. ನೈಸರ್ಗಿಕ ಬಣ್ಣ ಉಪಯೋಗಿಸಿ ಮಾಡಿದ ಗಣಪಂಗೆ ಬೇಡಿಕೆ ತುಂಬಾ ಇದ್ದು ಹೇಳಿಯೂ ಕೇಳಿದ್ದೆ.
    ಆರಾಧನೆ ಮುಖ್ಯವಾಗಿ ಆಯೆಕ್ಕಾದಲ್ಲಿ, ಅಡಂಬರವೇ ಮುಖ್ಯ ಅಪ್ಪಗ, ಪರಿಸರ ಹಾನಿ ಬಗ್ಗೆ ರೆಜವೂ ಅಲೋಚನೆ ಬತ್ತಿಲ್ಲೆ ಹೇಳುವದು ಅಷ್ಟೇ ಸತ್ಯ.
    ಸ್ವಾತಂತ್ರ್ಯ ದಿನ ಬಣ್ಣದ ಪ್ಲಾಸ್ಟಿಕ್ ಧ್ವಜ ಉಪ್ಯೋಗಿಸುವದು ಬೇಡ ಹೇಳಿ ಎಷ್ಟು ವಿಜ್ಞಾಪನೆ ಮಾಡಿರೂ, ಕಡೇಂಗೆ ಎಲ್ಲರ ಕೈಲಿಯೂ, ವಾಹನಂಗಳಲ್ಲಿಯೂ ಕಾಂಬದು ಪ್ಲೇಶ್ಟಿಕ್ ದ್ವ್ಹಜವೇ. ಮರುದಿನ ಅದರ ದುರವಸ್ಠೆಯ, ದೇಶಾಭಿಮಾನಿ ಆದವಂಗೆ ನೋಡಿ ಸಹಿಸಲೆ ಅಸಾಧ್ಯ

  6. ಅರಿಶಿನ ದಂತಹ ನೈಸರ್ಗಿಕ ಬಣ್ಣ ವಿಷ ಮುಕ್ತ. ಸರ್ವೇ ಸಾಮಾನ್ಯ ವಾಗಿ ಪೈಂಟಿಲಿ ಇಪ್ಪ ಸೀಸವೇ ಮೊದಲಾದ ರಾಸಾಯನಿಕಂಗೊ ವಿಷ . ಅದು ಲೆಡ್ ಫ್ರೀ ಆಗಿದ್ದರೆ ಅದು ಅಂತಹ ವಿಷಂದ ಮುಕ್ತ .ಈಗ ಏಶ್ಯನ್ ಪೈಂಟಿಲಿ ಬಪ್ಪ ನೀರು ಮಿಕ್ಸ್ ಮಾಡುವ ಎನಾಮಲ್ (ಪ್ರೀಮಿಯಮ್ ಸೆಮಿ ಗ್ಲೋಸಿ ಎನಾಮಲ್ ) ವಿಷ ಮುಕ್ತ.

  7. ಗಣಪತಿ ಮೂರ್ತಿಗೆ ಉಪಯೋಗ್ಸುವ ಬಣ್ನಲ್ಲಿ ವಿಷ ಇಪ್ಪದು ಪರಿಸರಕ್ಕೆ ಒಳ್ಳೆದಲ್ಲ, ನಮ್ಮ ಆರೊಗ್ಯಕ್ಕೂ ಒಳ್ಳೆದಲ್ಲ. ನಮ್ಮ ಊರಿಲ್ಲಿ ಸಾರ್ವಜನಿಕ ಗಣಪತಿ ಮಡೂಗುತ್ತವು, ಆದರೆ ಮನೆ ಮನೆಲಿ ಗಣಪತಿ ಮಡುಗಿ ಪೂಜೆ ಮಾಡೂವ ಕ್ರಮ ಇದ್ದಲ್ಲಿ ಆವು ಅದರ ಕುಡಿವ ನೀರಿನ ಬಾವಿಗೆ, ತೋತಕ್ಕೆ,ಗೆದ್ದೆಗೆ ನೀರು ಬಿಡ್ತ ಕೆರೆಲಿಯೋ ವಿಸರ್ಜನೆ ಮಾಡ್ತವು. ಅದು ತುಂಬಾ ಹಾಳು. ಆಶ್ಚರ್ಯ ಹೇಳಿರೆ ಜನಕ್ಕೆ ಇದರ ಬಗ್ಗೆ ಹೇಳಿರೂ ಅರ್ಥ ಅಪ್ಪದು ಕಡಮ್ಮೆ.
    ಎಂದಿನ ಹಾಂಗೆಯೇ ಶುದ್ದಿ ಒಪ್ಪ ಇದ್ದು 🙂 ಬೈಲಿನ ಎಲ್ಲೋರಿಂಗೂ ಗಣಪತಿ ಚೌತಿಯ ಶುಭಾಶಯಂಗೊ, ಗಣಪತಿ ಎಲ್ಲರಿಂಗೂ ವಿದ್ಯೆ ಬುದ್ಧಿ ಕೊಡಲಿ 🙂

  8. ಒಳ್ಳೆದಾತು ನಿಂಗ ಹೇಳಿದ್ದು.. ಇನ್ನು ತೊಂದರೆ ಇಲ್ಲೆ..

  9. ಒಳ್ಳೆ ಲೇಖನ..

    ಒಂದು ಸಂದೇಹಃ ‘ಒಳ್ಳೆ’ ಬರವದು ಹೇಂಗೆ? oLLe ಹೇಳಿ ಬರದರೆ ‘ಒೞೆ ‘ ಹೀಂಗೆ ಬತ್ತು. ಆನು ಇಲ್ಲಿ ಈಗ ಬರದ್ದು ಮೇಗಂದ ಕಾಪಿ ಮತ್ತು ಪೇಸ್ಟ್ ಮಾಡಿ.
    ಗೂಗಲ್ ಟ್ರಾನ್ಸ್ಲಿಟರೇಶನ್ ಲಿ ಸರಿ ಬತ್ತು ಅಥವಾ ಎಪಿಕ್ ಬ್ರೌಸರ್ ಲಿ ಕೂಡ ಸರಿಯಾಗಿ ಬತ್ತು. ವರ್ಡ್ ಪ್ರೆಸ್ಸ್ ಲಿ ಮಾತ್ರವಾ ಹೀಂಗೆ? ಅಥವಾ ಬೇರೆ ಸುಲಭ ಉಪಾಯ ಇದ್ದಾ?

    1. ಕಿಟ್ಟಣ್ಣಾ.. ‘ಒಳ್ಳೇ’ ಹೇಳಿ ಬರವಲೆ ಎರಡ್ಣೇ ಸರ್ತಿ ಎಲ್ ಒತ್ತುವಗ ಶಿಫ್ಟ್ ಮತ್ತು ಎಕ್ಸ್ ಕೀಗಳ ಒಟ್ಟಿ೦ಗೆ ಒತ್ತಿ೦ಡು ಎಲ್ ಟೈಪ್ ಮಾಡಿ ನೋಡಿ.

  10. ಉತ್ತಮ ಮಾಹಿತಿ ಇಪ್ಪ ಲೇಖನ.ಧನ್ಯವಾದಂಗೊ.

  11. ಗೊಂತಿಲ್ಲದ್ದೆ ಮಾಡ್ತ ತಪ್ಪಿಂಗೆ ಕ್ಷಮೆ ಇದ್ದಡ…. ಆದರೆ ಗೊಂತಿದ್ದೂ ಮಾಡ್ತ ತಪ್ಪಿಂಗೆಂತ ಶಿಕ್ಷೆ ಅಣ್ಣೋ……….

  12. ಬೊಂಬಾಯಿಲಿ ” ಗಣಪತಿ ಬಪ್ಪ ಮೋರೆಯಾ” ಹೇಳಿಗೊಂಡು ಸಮುದ್ರಲ್ಲಿ ವಿಸರ್ಜನೆ ಮಾಡಿಯಾದ ಮತ್ತೆ ಹತ್ತು ದಿನವರೆಗೆ ಸುತ್ತುಮುತ್ತ ಯೇವುದೇ ಬೀಚುಗೊಕ್ಕೆ ಹೋಪಲೆ ಯೆಡಿಯ.. ಎಲ್ಲ ಮಾಲಿನ್ಯದ ಕಾರಣಂದಾಗಿ. ಪರಿಸರ ಪ್ರೇಮಿ ಗೆಣಪತಿ ಮೂರ್ತಿಯ ಮಾಡೆಕ್ಕು ಹೇಳುವ ಜಾಗ್ರತಿ ಶುರುವಾಯಿದಷ್ಟೆ, ಇನ್ನೂ ಪರಿಣಾಮಕಾರಿಯಾಗಿ ಅಳವಡಿಕೆ ಆಯಿದಿಲ್ಲೆ.
    ಒಪ್ಪಣ್ಣನ ಈ ಶುದ್ದಿ ಸಕಾಲಿಕ.

  13. ಅಪ್ಪು ಅಣ್ಣೋ… ಈಗ ಈ ಸಾರ್ವಜನಿಕ ಗಣೇಶೋತ್ಸವ ಹೇಳ್ತದು ಊರಿನ ಎಲ್ಲೋರ ಒಟ್ಟು ಸೇರುಸುವ ಬದಲು ಜಗಳಂಗೊಕ್ಕೆ ಕಾರಣವೂಆವುತ್ತಾ ಇದ್ದಿದಾ. ಕೆಲವು ಕಡೆಲಿ ಅವರವರ ಪ್ರತಿಶ್ಟೆಯೇ ಚೌತಿಂದಲುದೇ ದೊಡ್ಡದಾಗಿ ಪ್ರದರ್ಷನ ಆವುತ್ತಾ ಇದ್ದು. ಗಣಪತಿಯ ಪೂಜಗೆ ಬಪ್ಪವರಿಂದ ಹೆಚ್ಚುಜೆನ ಬಪ್ಪದು ಹೊತ್ತೋಪಗಾಣ ಆರ್ಕೆಶ್ಟ್ರಾಕ್ಕೆ ಹೇಳುದಂತೂ ಸತ್ಯ. ಕೆಲವು ಕಡೆಲಿ ಚೌತಿ ಆಚರಣೆ ಚೌತಿ ಮುಗುದು ತಿಂಗಳು ಆದರುದೇ ನಡೆತ್ತು… ಏನೇ ಇರಲಿ ಸಕಾಲಿಕ ಲೇಖನ ……… ಗಣಪತಿಯ ಮೂರ್ತಿಯಂತೂ ವಿಶಲ್ಲೇ ಮಾಡುದು, ಹಾಂಗೇ ಚೌತಿ ದಿನ ಕೊಡ್ತ ಉಂಡೆಯೂ ವಿಷದ್ದಾಗದ್ದರೆ ಅಶ್ಟೇ ಸಂತೋಷ ಅಲ್ಲದೋ…………….. “ಗಣಪತಿ ಬಪ್ಪಾ….. ಮೋರೆಯಾ”

  14. ಅನಗತ್ಯ ವಿಷದ ಬಳಕೆ ಮಾಡ್ತ ಜಾಗೆಗಳ ನಾವು ಬದಲಾವಣೆ ಮಾಡೇಕು….. ಅಪ್ಪು.. ಅಪ್ಪು.. ಅಪ್ಪು….

  15. ಮೊದಲಿನ ವಿವರಣೆ ಓದುವಗ ಸಣ್ಣ ಇಪ್ಪಗ ಕೆಯ್ಯೂರು ದೇವಸ್ಥಾನಲ್ಲಿ, ಮತ್ತೆ ಪುತ್ತೂರಿಲ್ಲಿ ಅನುಭವಿಸಿದ ಗೌಜಿಗೊ ಎಲ್ಲ ನೆಂಪಾತು.
    ಅಮೇಲೆ ಬರದ ಬದಲಾವಣೆಯಾದ ಈಗಿನ ಮೂರ್ತಿ ಮಾಡುವ ಕ್ರಮ ಓದಿ “ಓ ಹೀಂಗೂ ಮಾಡ್ತವ?” ಹೇಳಿ ಬೇಜಾರಾತು.
    ಅಪ್ಪು, ಒಪ್ಪಣ್ಣ ಹೇಳಿದ ಹಾಂಗೆ ನೈಸರ್ಗಿಕ ಮೂರ್ತಿಯೇ ಚಂದ. ಇದು ಎಲ್ಲೋರು ತಿಳಿಯೆಕ್ಕಾದ ವಿಷಯ.
    ~ಸುಮನಕ್ಕ

  16. ಉದ್ದಕ್ಕೆ ಚೌತಿ ಗಣಪತಿ ಮೆರವಣಿಗೆ ಮಾಡಿದ್ದು ಲಾಯಕ್ಕ ಆಯ್ದು. ಒಟ್ಟಿಂಗೆ ನೈಸರ್ಗಿಕ ಮೂರ್ತಿ ಆಗಿಪ್ಪ ನಮುನೆ ನೋಡಿಗೊೞೆಕ್ಕು ಹೇಳುವ ಜನಜಾಗೃತಿ ಸಂದೇಶ ಸಕಾಲಿಕ. ಜೊತೆಲಿ ಇತರ ಚಿಂತನೆ ವಿಮರ್ಶೆಗಳೂ ಲಾಯಕ್ಕ ಆಯ್ದು ಹೇಳಿ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×