- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
1964 ರಲ್ಲಿ ಅಜ್ಜ ತೀರಿ ಹೋಗಿಪ್ಪಗ, ಅವರ ಹಲವು ಅಭಿಮಾನಿಗೊ, ಶಿಷ್ಯರುಗೊ ಸಂತಾಪ ಸೂಚಿಸಿ ಸಂದೇಶ ಬರದು ಕಳಿಸಿತ್ತಿದ್ದವು. ಶ್ರೀ ಖಂಡಿಗ ವೆಂಕಟ್ರಮಣ ಭಟ್, ಬರದ ॥ ಶಾಂತಿ ಪ್ರಾರ್ಥನಾ ॥ ಸಂದೇಶವ ಇಲ್ಲಿ ಹಾಕಿದ್ದೆ.
ಶೋಭಕೃದ್ವತ್ಸರೇ ಚೈವ ಮೃಗಸಂಸ್ಥೇ ರವೌ ಸತಿ ।
ತ್ರಯೋದಶ ದಿನೇ ಸಾಯಂ ವಿಪ್ರವರ್ಯಾ ದಿವಂ ಯಯುಃ ॥೧॥
ಪರೋಪಕಾರ ನಿರತಾಃ ವೈದ್ಯಶಾಸ್ತ್ರ ವಿಶಾರದಾಃ ।
ಕಾವ್ಯಸಾಹಿತ್ಯ ಸಂಪನ್ನಾಃ ವಿಶ್ವಾಮಿತ್ರ ಕುಲೇಪಿ ಚ ॥೨॥
ಜಾತ್ಯಾಶ್ಯಂಕರ ಶರ್ಮಾಣಃ ಕುರ್ನಾಡು ಗ್ರಾಮ ಸಂಸ್ಥಿತಾಃ ।
ತೆಕ್ಕುಂಜವೇಶ್ಮ ಭೂಭಾಗಾಃ ಕೃತಸರ್ವಾಧಿಕಾರಿಣಃ ॥೩॥
ಸಪುತ್ರಾ ಗ್ರಾಮಮುಖ್ಯಾಶ್ಚ ಪ್ರಶಸ್ತಾ ವಿದುಶಾಂ ವರಾಃ ।
ತೇಭ್ಯಶ್ಚ ಪರವಾನಾತ್ಮಾ ದೇಯಾತ್ ಶಾಂತಿಂಚ ಶಾಶ್ವತೀಂ ॥೪॥
ಶ್ರೀ ಷೋಡಶೀಸ್ತವಃ ದ ಉತ್ತರಾರ್ಧದ ಎಂಟು ಸ್ತೋತ್ರಂಗೊ ಕನ್ನಡಾನುವಾದದೊಟ್ಟಿಂಗೆ ಃ
ಹಲ್ ವರ್ಣೈರುಪಶೋಭಿತಾಂ ಹಲಮುಖೇನಾಕೃಷ್ಯಮಾಣಾಂ ಜನೈಃ
ಹಂತ್ರೀಮೀಶಸಮಾಶ್ರಿತಾಂ ಹರಿವರಸ್ಕಂಧೇಸ್ಥಿತಾಂ ಶಂಕರೀಂ ॥
ಹಂಸಿ ತ್ವಂ ಹರಿಶತ್ರುವರ್ಗಮಖಿಲಂ ಹಂಸೇತಿಮನ್ವಾತ್ಮಿಕಾಂ
ಹಂಸೋ ಜೀವ ಇತಿ ಪ್ರಭೇದಮತುಲಂ ದೊರೇ ವಿಧಾತ್ರೀಂ ಭಜೇ ॥೯॥
ಕಕಾರ ಮೊದಲುಗೊಂಡು ಕ್ಷಕಾರದವರೆಗೆ ಇರುವ ವ್ಯಂಜನಗಳ ದೇವತೆಗಳಿಂದ ಶೋಭಿಸಲ್ಪಡುವವಳಾಗಿ, ಯೋಗಿಜನರಿಂದ ಹುಬ್ಬುಗಳ ಮಧ್ಯಪ್ರದೇಶದಿಂದ ಐದಂಗುಲ ಮೇಲ್ಭಾಗದಲ್ಲಿ ಇರುವ “ನಾದಾಂತ”ವೆಂಬ ನೇಗಿಲಾಕಾರದ ಚಕ್ರದಲ್ಲಿ ಧ್ಯಾನದ ಮೂಲಕ ಆಕರ್ಷಿಸಲ್ಪಡುವ, ಪ್ರಳಯ ಕಾಲದಲ್ಲಿ ಲೋಕಸಂಹಾರ ಮಾಡುವ, ಪರಬ್ರಹ್ಮನಲ್ಲಿ ಲಯಹೊಂದಿರುವ, ಸಿಂಹಸ್ಕಂಧಾರೂಢಳಾದ ಲೋಕಕ್ಕೆ ಕಲ್ಯಾಣಕಾರಿಣಿಯಾದ, ಇಂದ್ರನ ಶತ್ರುಗಳಾದ ದೈತ್ಯರನ್ನು ಸಂಹರಿಸುವ , “ಹಂಸ” ಎಂಬ ಮಂತ್ರ ಸ್ವರೂಪಿಣಿಯಾದ, ” ಜೀವ ಪರಮಾತ್ಮರು ಬೇರೆ ಬೇರೆ ” ಎಂಬ ಭಾವನೆಯನ್ನು ದೂರೀಕರಿಸುವ ಶ್ರೀ ದೇವಿಯನ್ನು ಭಜಿಸುವೆನು.
ಲಕ್ಷ್ಯಾಲಕ್ಸ್ಯವಿಲಾಸಿನೀಂ ಲಯಪರಾಂ ಲಂಬೋದರಪ್ರಾರ್ಥಿತಾಂ
ಲಾಸ್ಯೋಲ್ಲಾಸಿತಪಾದಪದ್ಮಯುಗಲಾಂ ಲಾಸ್ಯಪ್ರಿಯಾಂ ಭಾರ್ಗವೀಂ ॥
ಲಾವಣ್ಯೇಕವಿಧಿಂ ಜಗತ್ರಯಕರೀಂ ಶ್ರೀವತ್ಸವಕ್ಷಃಸ್ಥಿತಾಂ
ದೇವೀಂ ತ್ವಾಂ ಶರಣಂ ವ್ರಜಾಮಿ ಮನಸಾ ಲಜ್ಜಾಯಮಾನಃ ಸದಾ ॥೧೦॥
ಭಕ್ತರಲ್ಲಿ ಮಹಾತ್ಮರಾದವರಿಗೆ ಕಾಣಸಿಕ್ಕುವವಳೂ, ಅಲ್ಪರಿಗೆ ಕಾಣಸಿಕ್ಕದವಳಾದ, ಸಂಹಾರಪ್ರಿಯೆಯಾದ – ವಿನಾಯಕನಿಂದ ಪ್ರಾರ್ಥಿಸಲ್ಪಟ್ಟವಳಾದ, ಮೃದು ನಾಟ್ಯವೆನಿಸಿದ ಲಾಸ್ಯದಲ್ಲಿ ಉಲ್ಲಾಸವುಳ್ಳ ಪಾದಕಮಲಗಳುಳ್ಳ, ಲಾಸ್ಯದಲ್ಲಿ ಪ್ರೀತಿಯುಳ್ಳ, ಭೃಗುಕುಲದಲ್ಲಿ ಲಕ್ಷ್ಮೀರೂಪದಿಂದವತರಿಸಿರುವ, ಲಾವಣ್ಯದ ಸಾಗರದಂತಿರುವ, ಮೂರು ಲೋಕಗಳನ್ನುಂಟುಮಾಡುವ, ಮಹಾವಿಷ್ಣುವಿನಲ್ಲಿ ಶಕ್ತಿರೂಪದಿಂದ ಅಂತರ್ಗತೆಯಾಗಿರುವ, ಸಂತೊಷಮಯಿಯಾದ ನಿನ್ನನ್ನು, ನನ್ನ ಅಜ್ಞಾನಕ್ಕಾಗಿ ನಾಚಿಕೊಳ್ಳುತ್ತಾ ಯಾವಾಗಲೂ ಶರಣಾಗತನಾಗುವೆನು.
ಹ್ರೀಂಕಾರಾಲಯಸಂಸ್ಥಿತಾಂ ಭವಸತೀಂ ಹ್ರೀಂಕಾರ ಮಂತ್ರಾತ್ಮಿಕಾಂ
ಹ್ರೀಮಿತ್ಯೇ ವವಿಭಾವಯಾಮಿ ಸತತಂ ಹ್ರೀಂಕಾರರೂಪಾಂ ಶಿವಾಂ ॥
ಹ್ರೀಮಿತ್ಯಾದಿಸಮಸ್ತಮಂತ್ರನಿಲಯಾಂ ಹ್ರೀಂಕಾರವರ್ಣೋಜ್ವಲಾಂ
ಹ್ರೀಂ ದೇವೀಮಖಿಳಾಂಡಕೋಟಿವನಿತಾಸಂಸೇವಿತಾಂ ಶಾಂಭವೀಂ ॥೧೧॥
ಹ್ರೀಂಕಾರವನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡಿರುವ, ಶಿವನ ಸತಿಯಾದ, ” ಹ್ರೀಂ” ಎಂಬ ಮಂತ್ರದ ಆತ್ಮ ಸ್ವರೂಪೆಯಾದ, “ಹ್ರೀಂ” ಎಂಬ ಮಂತ್ರವೇ ಶರೀರವಾಗಿರುವ, “ಹ್ರೀಂ” ಎಂಬುದೇ ಮೊದಲಾದ ಸಮಸ್ತ ಮಂತ್ರಗಳಲ್ಲೂ ಶಕ್ತಿರೂಪದಿಂದ ವಾಸಿಸುತ್ತಿರುವ, “ಹ್ರೀಂ” ಎಂಬ ಮಂತ್ರದಲ್ಲಿರುವ ವರ್ಣಗಳಲ್ಲಿ ಪ್ರಕಾಶಮಾನಳಾಗಿರುವ, “ಹ್ರೀಂ” ಎಂಬ ಮಂತ್ರದ ಅಭಿಮಾನಿನಿಯಾದ, ಅನೇಕ ಕೋಟಿ ಬ್ರಹ್ಮಾಂಡಗಳಲ್ಲಿರುವ ಸಕಲ ಸ್ತ್ರೀಯರಿಂದ ಪೂಜಿಸಲ್ಪಡುವ, ಶಂಭುವಿನ ಪತ್ನಿಯಾದ ನಿನ್ನನ್ನು ನಾನು ” ಹ್ರೀಂ” ಎಂಬ ಮಂತ್ರದ ಮೂಲಕವಾಗಿಯೇ ಧ್ಯಾನಿಸುವೆನು.
ಸರ್ವೈಃ ಪೂಜಿತಪಾದಪದ್ಮಯುಗಳಾಂ ಸರ್ವಾರ್ಥಸಂಪತ್ಪ್ರದಾಂ
ಸರ್ಗಾದೌಸಕಲಾಗಮೈಃ ಪರಿವೃತಾಂ ಸಚ್ಚಿತ್ಸುಖಾಂ ಶಾಶ್ವತಾಂ ॥
ಸರ್ಗಂ ಸರ್ವವಿಧಂ ಕರೋಷಿ ಮನಸಾ ಸ್ವರ್ಗಪ್ರದಾಂ ಭಾವಯೇ
ಸರ್ವೇಷಾಂ ಜನನೀಂ ಜಯಂತಿ ಜನನೀತ್ಯಾಹೂಯಮಾನಾಂ ಸದಾ ॥೧೨॥
ಸಕಲರಿಂದಲೂ ಪೂಜಿಸಲ್ಪಡುವ ಪಾದಕಮಲವುಳ್ಳ, ಸರ್ವಕಾರ್ಯಗಳಿಗೆ ಸಾಧನಗಳಾದ ಸಂಪತ್ತನ್ನು ಕರುಣಿಸುವ, ಸೃಷ್ಟಿಯಾಗುವ ಮೊದಲು ಸಕಲ ಶಾಸ್ತ್ರಗಳ ಅಭಿಮಾನಿದೇವತೆಗಳಿಂದ ಸ್ತ್ರೀ ರೂಪದಿಂದ ಸುತ್ತುವರಿಸಲ್ಪಟ್ಟಿರುವ, ಸತ್ಯಜ್ಞಾನಗಳಿಂದ ಸುಖಿಸುತ್ತಿರುವ, ದುಷ್ಟ ಸಂಹಾರಕ್ಕಾಗಿ ಪುನಃ ಪುನಃ ದುರ್ಗಾದ್ಯವತಾರಗಳನ್ನು ಸ್ವೀಕರಿಸುತ್ತಿರುವ,”ಸ್ವೇದಜ, ಅಂಡಜ.ಉದ್ಭಿಜ, ಜರಾಯುಜ”ಗಳೆಂಬ ಎಲ್ಲತರಹದ ಸೃಷ್ಟಿಯನ್ನು ಸಂಕಲ್ಪಮಾತ್ರದಿಂದಲೇ ಸೃಷ್ಟಿಸುತ್ತಿರುವ, ಜ್ಞಾನಿಗಳಲ್ಲದ ಪುಣ್ಯಾತ್ಮರಿಗೆ ಸ್ವರ್ಗಸುಖವನ್ನೀಯುವ, ಸಕಲರಿಗೂ ತಾಯಿಯಂತೆ ಕರುಣೆತೋರುವ , ” ಓ ಜಯಂತಿ ! ಓ ಜನನಿ !” ಎಂದು ಭಕ್ತರಿಂದ ಕೂಗಿ ಕರೆಯಲ್ಪಡುವ ನಿನ್ನನ್ನು ಸ್ಮರಿಸುತ್ತಿರುವೆನು.
ಕಮ್ರಾಂ ಕಾಂತಿಮುಪಾಶ್ರಿತಾಂ ಕರಿವರೈರಾಸೇವ್ಯಮಾನಾಂ ಶ್ರಿಯಾ
ಕಸ್ತೂರೀಪರಿಲೇಪಿತಾಂಗವಿಲಸನ್ಮುಕ್ತಾಮಣೀರಾಜಿತಾಂ ॥
ಕಃ ಸ್ತೋತುಂ ಪ್ರವರೋ ಭವಾನಿ ಭವತೀಂ ಕಾತ್ಯಾಯನೀಸೇವಿತಾಂ
ಕಾಂತಾಂ ಕಾಲೀವರಪ್ರದಾಂ ಕುವಲಯಾಲಂಕಾರಸಂಶೋಭಿತಾಂ ॥೧೩॥
ಕಾಮಿನಿಯಾಗಿಯುಳ್ಳ, ಕಾಂತಿಮತಿಯಾದ, ಆನೆಗಳೊಡಗೊಂಡಿರುವ ಗಜಲಕ್ಷ್ಮೀ ದೇವಿಯಿಂದ ನಿತ್ಯವೂ ಸೇವಿಸಲ್ಪಡುವ, ಕಸ್ತೂರಿಯಿಂದ ಸಂಪೂರ್ಣ ಲೇಪಿಸಲ್ಪಟ್ಟ ಅಂಗಗಳಲ್ಲಿ ಶೋಭಿಸುತ್ತಿರುವ, ಧೂಮಾವತಿದೇವಿಯಿಂದ ಸೇವಿಸಲ್ಪಡುವ, ಸಕಲಭಕ್ತರ ಮೇಲೆ ಇಚ್ಚೆಯುಳ್ಳ, ಕಾಳೀದೇವಿಗೆ ಸಂಹಾರಕರ್ತ್ರೀಯಾಗೆಂದು ವರವಿತ್ತಿರುವ, ಅಳ್ಳಿ ಹೂವಿನ ಮಾಲೆಗಳೀಂದ ಅಲಂಕರಿಸಲ್ಪಟ್ಟ, ಓ ಭವಾನಿ ! ನಿನ್ನನ್ನು ಸ್ತೋತ್ರಮಾಡುವುದಕ್ಕೆ ಯಾರವ್ವ ಸಮರ್ಥರು !!
ಲಕ್ಶ್ಮೀಂ ರಾಜಕುಲಾಶ್ರಿತಾಂ ರಣಮಯೀಂ ಲಾಕ್ಷಾರಸಾಲಂಕ್ರತಾಂ
ಲಕ್ಷ್ಮೀಲಾಲಿತವಿಗ್ರಹಾಂ ತ್ರಿಣಯನಾಂ ಲಕ್ಷ್ಮೈಕತಾನಾಂ ಶಿವಾಂ ॥
ಲಕ್ಷ್ಯಾಲಕ್ಷ್ಯವಿಧಾಯಿನೀಂ ಲಯತನುಂ ಲಜ್ಜಾಸ್ಪದಾಂ ಸುಂದರೀಂ
ಲಂಬೇತ್ವಾಂ ಗಿರಿಶಾರ್ಧಹಾರಿವಪುಷಂ ಶ್ರೀಕಾಮಸಂಸೇವಿತಾಂ ॥೧೪॥
ರಾಜವಂಶವು ಆಶ್ರಯಿಸಿಕೊಂಡಿರುವ ರಾಜ್ಯಲಕ್ಷ್ಮಿಯಾಗಿರುವ, ರಣರಸಿಕಳಾಗಿರುವ,ಅಲತಿಕೆಯ ರಸದಿಂದ ಅಲಂಕಾರ ಮಾಡಲ್ಪಟ್ಟ ಹಸ್ತಪಾದಗಳುಳ್ಳ, ತ್ರಿನೇತ್ರೆಯಾದ,ಶುಭಲಕ್ಷಣಗಳಿಂದ ಒಪ್ಪುವ ಶರೀರವುಳ್ಳ, ಸಂಪತ್ತಿನಲ್ಲೇ ಏಕಾಗ್ರತೆಯುಳ್ಳ- ದೃಶ್ಯಗಳಾದ ತೇಜಸ್ಸು ಮುಂತಾದವುಗಳಿಗೂ, ಅದೃಶ್ಯಗಳಾದ ಧರ್ಮಾದಿಗಳಿಗೂ ನಿಯಾಮಕಳಾದ- ಲೋಕರಕ್ಷೆಗಾಗಿ ಅವತರಿಸಿದಾಗ ಲಯಹೊಂದತಕ್ಕ ಭೌತಿಕ ದೇಹವನ್ನು ಧರಿಸಿದ, ಲಜ್ಜಾ ಧರ್ಮವನ್ನು ಹೊಂದಿದ, ಸುರೂಪೆಯಾದ,ತಪಃಪ್ರಭಾವದಿಂದ ಪರಶಿವನ ಅರ್ಧದೇಹವನ್ನೇ ತನ್ನ ಅರ್ಧ ದೇಹವಾಗಿ ಪಡೆದಿರುವ- ಮೋಕ್ಷಶ್ರೀಯನ್ನಪೇಕ್ಷಿಸುವ ಸಾಧುಗಳಿಂದ ಸೇವಿಸಲ್ಪಡುವ ನಿನ್ನನ್ನು ಆಶ್ರಯಿಸುವೆನು.
ಹ್ರೀಂಕಾರತ್ರಯಲಾಲಿತಾಂ ಶಿವಕರೀಂ ಹ್ರೀಂಕಾರಸದ್ರೂಪಿಣೀಂ
ಹ್ರೀಂಹ್ರೀಂಮಂತ್ರವಿಭಾವಿತಾಂ ಪಶುಪತೇರಂಕಾಶ್ರಯಾಮಾಶ್ರಯೇ ॥
ಹ್ರೀಂದೇವೀಂ ಪ್ರಣವಾತ್ಮಿಕಾಂ ಭಗವತೀಂ ಹ್ರೀಂಕಾರ ಸೌಧಾಶ್ರಿತಾಂ
ಹ್ರೀಮಿತ್ಯೇವ ಜಪಂ ವಿಧಾಯ ನಿಯತೋ ಹ್ರೀಂಜ್ಯೋತಿರಭ್ಯರ್ಥಯೇ ॥೧೫॥
ನಿನ್ನ ಮೂಲಮಂತ್ರದಲ್ಲಂತರ್ಗತವಾಗಿರುವ ಮೂರು ಹ್ರೀಂಕಾರದ ದೇವತೆಗಳಿಂದ ಕೊಂಡಾಡಲ್ಪಟ್ಟವಳಾದ -ಪ್ರಪಂಚದ ಲಯ ಕಾರ್ಯಕ್ಕಾಗಿ ಆದಿಯಲ್ಲಿ ಕಾರಣ ಪುರುಷನಾದ ಶ್ರೀ ಶಿವನನ್ನುಂಟುಮಾಡಿರುವ – ಹ್ರೀಂಕಾರ ಮತ್ತು ಸತ್ಯ ಇವುಗಳನ್ನು ಲೋಕಕ್ಕೆ ಬೊಧಿಸುತ್ತಿರುವ-“ಹ್ರೀಂ” ಎಂಬ ಮಂತ್ರದ ಮೂಲಕವಾಗಿಯೇ ಧ್ಯಾನಿಸಲ್ಪಡುವ, ಅಜ್ಞಾನಿಗಳನ್ನು ಜ್ಞಾನ ಪ್ರದಾನದಿಂದ ರಕ್ಷಿಸುವ ಪಶುಪತಿಯ ವಾಮಾಂಕ ಸುಂದರಿಯಾದ ನಿನ್ನನ್ನು ಆಶ್ರಯಿಸುವೆನು. “ಹ್ರೀಂ” ಮಂತ್ರದ ಅಧಿದೇವತೆಯಾದ, ಓಂಕಾರ ಸ್ವರೂಪೆಯಾದ, ಕೀರ್ತಿ ಶಾಲಿನಿಯಾದ ಹ್ರೀಂಕಾರವೆಂಬ ಮಾಳಿಗೆಯಲ್ಲಿರುವ, ನಿನ್ನನ್ನು ತೇಜೋರೂಪವನ್ನು ನನಗೆ ಕಾಣಿಸುವಂತೆ ಬೇಡಿಕೊಳ್ಳುವೆನು.
ಶ್ರೀರೂಪಾಂ ಶಿರಸಾ ನವಾಮಿ ನಿಯತಂ ಶ್ರೀರಾಜಸದ್ಮಾಶ್ರಿತಾಂ
ಶ್ರೀಚಕ್ರಸ್ಥಿತರಾಜರಾಜ ಸಹಿತಾಂ ಶ್ರೀಸಿಂಹಪೀಠಸ್ಥಿತಾಂ ॥
ಶ್ರೀವಿದ್ಯಾಂ ಶಿವಮಂತ್ರತತ್ಪರಜನೈಃ ಸಾಧ್ಯಾಂ ಪರಮಂಬಿಕಾಂ
ಶ್ರೀಚಿಂತಾಮಣಿಮಂತ್ರಚಿಂತನಜನೈರಾಕೃಷ್ಯಮಾಣಾಂ ಶ್ರಿಯಂ ॥೧೬॥
ಲಕ್ಷ್ಮೀರೂಪೆಯಾಗಿರುವ, ಚಂದ್ರಬಿಂಬವೆಂದು ಕರೆಯಲ್ಪಡುವ ಬ್ರಹ್ಮರಂಧ್ರದಲ್ಲಿ ಮನೆ ಮಾಡಿಕೊಂಡಿರುವ, ಶ್ರೀಚಕ್ರದಲ್ಲಿರುವ ಕಾಮೇಶ್ವರನಾಮಕನಾದ ಶಿವನವಾಮಾಂಕಸ್ಥಿತೆಯಾದ, ಸಿಂಹಾಸನ ಸಮಾರೂಢೆಯಾದ, ಲಕ್ಷ್ಮೀದೇವಿಯು ಉಪಾಸನೆಮಾಡಿದ ಮಂತ್ರರೂಪಿಣಿಯಾದ, ಶಿವಮಂತ್ರವನ್ನು ಉಪಾಸನೆ ಮಾಡಿ ಅವನ ಅನುಗ್ರಹವನ್ನು ಪಡೆದ, ಸಾಧಕರಿಂದ ಮಾತ್ರ ಕಾಣಲಿಕ್ಕೆ ಸಾಧ್ಯೆಯಾಗಿರುವ,”ಶ್ರೀಚಿಂತಾಮಣಿ” ಎಂಬ ಪರಾಪ್ರಾಸಾದ ಮಂತ್ರಾನುಷ್ಟಾನ ಮಾಡುವ ಭಾವುಕರಿಂದ ತಮ್ಮ ಬಳಿಗೆ ಬರಿಸಿಕೊಳ್ಳಲಿಕ್ಕೆ ಸಾಧ್ಯವಿರುವ, ಶ್ರೀಜಗದಂಬಿಕೆಯಾದ ರಾಜರಾಜೇಶ್ವರಿಯನ್ನು ತಲೆಬಾಗಿಸಿ ನಮಸ್ಕರಿಸುವೆನು.
ವಿಶ್ವಾಮಿತ್ರಕುಲೇ ಜಾತಃ ಕೃಷ್ಣಶರ್ಮಾ ದ್ವಿಜೋತ್ತಮಃ ॥
ತಸ್ಯ ಪುತ್ರಃ ಶಂಕರೋಹಂ ಚಕ್ರೇ ಶ್ರೀಷೋಡಶೀಸ್ತವಂ ॥೧೭॥
ವಿಶ್ವಾಮಿತ್ರ ಗೋತ್ರದಲ್ಲಿಜನಿಸಿದ ಕೃಷ್ಣಶರ್ಮಾ ಎಂಬ ಬ್ರಾಹ್ಮಣೋತ್ತಮರ ಮಗನಾದ ನನ್ನ ಅರಿವಿಲ್ಲದೆ ಆ ಶ್ರೀದೇವಿಯು ನುಡಿಸಿದಂತೆ ರಚಿಸಿರುವೆನು.
ಸಮಾಪ್ತಿ.
ತೆಕ್ಕುಂಜೆಮಾವಾ..
ವೃತ್ತಲ್ಲಿಪ್ಪ ಪಾಂಡಿತ್ಯದ ಶ್ಲೋಕಂಗಳ ಓದುವಗ ತಲೆಯೇ ವೃತ್ತಾಕಾರಲ್ಲಿ ತಿರುಗುತ್ತನ್ನೇಪಾ..
ಅರ್ಥವನ್ನೂ ಒಟ್ಟಿಂಗೇ ಕೊಟ್ಟದು ತುಂಬಾ ಒಳ್ಳೆದಾತು.
ಉತ್ತಮ ಸಂಗ್ರಹ..
{ ಚಕ್ರೇ ಶ್ರೀಷೋಡಶೀಸ್ತವಂ ॥೧೭॥ }
ಅಕೇರಿಗೆ ಕೇಳಿಗೊಂಡದು ಪಷ್ಟಾಯಿದು ಮಾವ.
ಅಷ್ಟು ಪಾಂಡಿತ್ಯ ಇದ್ದರೂ, ಆ ನಮುನೆ ದೀನ ಭಾವಲ್ಲಿ ಕೇಳುವಗ ’ತುಂಬಿದ ಕೊಡ’ಹೇಳ್ತ ಭಾವನೆ ಬಪ್ಪದು ನವಗೆ.
ಒಳ್ಳೆ ಶ್ಲೋಕ ಬೈಲಿಂಗೆ ಕೊಟ್ಟದು ಸಂತೋಷ ಆತು.
ಹರೇರಾಮ
ನಮೋ ನಮಃ…
ಕುಮಾರ ಬಾವ, ನಮ್ಮ ಅಜ್ಜ ಬರೆದ “ಶ್ರೀ ಷೋಡಶೀಸ್ತವಃ” ಸ್ತೋತ್ರಂಗಳ ಉತ್ತರಾರ್ಧವ ಬೈಲಿನವಕ್ಕೆ ಪರಿಚಯ ಮಾದಿಕೊಟ್ಟದು ತು೦ಬಾ ಸಂತೋಷ …!!
[ತೇಭ್ಯಶ್ಚ ಪರಮಾತ್ಮಾ ದೇಯಾತ್ ಶಾಂತಿಂಚ ಶಾಶ್ವತೀಂ ] – ನಮನ ಸಹಿತ ಒಪ್ಪ. ಪ್ರತಿ ಗೆರೆ ಒಂದೇ ಅಕ್ಷರಂದ ಇದ್ದು ವಿಶೇಷ ಮತ್ತು ಲಾಯಕ್ಕ ಆವ್ತು ಹೇಳಿ ಇತ್ಲಾಗಿಂದ ಒಪ್ಪ.
ಇಂತಹಾ ಸಂಸ್ಕೃತ ವಿಧ್ವಾಂಸರು ಈಗ ಹವ್ಯಕಲ್ಲಿ ಕಮ್ಮಿ ಇಪ್ಪದು ಬೇಜಾರ.