Oppanna.com

ಮೇಷಂದ ಮೀನ ಒರೆಂಗೆ ಕಲಿಯಲೆ ಮೀನಾಮೇಷ ಎಂತಕೆ?

ಬರದೋರು :   ಒಪ್ಪಣ್ಣ    on   21/10/2011    27 ಒಪ್ಪಂಗೊ

ಬೈಲಿಲಿ ರಜ ಗವುಜಿ ಸುರು ಆಯಿದಪ್ಪೋ.ನೆಗೆಮಾಣಿಯ ಪದ್ಯ ಬಂದದೇ ಬಂದದು, ರೂಪತ್ತೆ ನೆಗೆಮಾಡಿ ಬರಣಿ-ಮಂಡಗೆ ಪೂರ ಒಡದ್ದು!
ಅದಿರಳಿ, ಮೊನ್ನೆ ಪಾಡಿಲಿ ಪೂಜೆ ಕಳುತ್ತು ಸಣ್ಣಕೆ; ಬೈಲಿಂಗೆ ಮಾಂತ್ರ ಹೇಳಿಕೆ ಇದ್ದದು.
ದಿನಾಗುಳೂ ಮೋರೆ ನೋಡ್ತ ನವಗೆ ಇದ್ದತ್ತು – ಹೇದು ಬೇರೆ ಹೇಳೇಕೋ!  ಹೇಳಿಕೆ ಇದ್ದತ್ತು, ಹೋಗಿತ್ತು. ಕಳೀಯಬಾರದ್ದ ಬೈಲಿನೋರೆಲ್ಲ ಅಲ್ಲಿ ಸೇರಿತ್ತಿದ್ದವು.
ಕಲಶಲ್ಲಿ ಕೂದ ನಾರಾಯಣಂಗೆ ಬೇಕಾದ ನೈವೇದ್ಯ ಎಲ್ಲ ಮಾಡಿದವು; ಬಂದೋರಿಂಗೂ 🙂
ಚೆಂದಲ್ಲಿ ಬಂದಾತು, ಚೆಂದಲ್ಲಿ ಉಂಡಾತು, ಚೆಂದಲ್ಲಿ ಹೆರಟಾತು.
ಹ್ಮ್, ಎರಡ್ಣೇಹಂತಿ ಊಟ ಕಳಿಶಿಂಡು ಹೆರಟಾತು, ಮನಗೆತ್ತುವಗ ಇರುಳಾತು!
~
ಅದಾ – ಎರಡ್ಣೇ ಹಂತಿ ಉಂಡಿಕ್ಕಿ ಹೆರಟ್ರೂ ಮನಗೆತ್ತುವಗ ಇರುಳಾತೋ?
ಮಟಮಟ ಮಧ್ಯಾಹ್ನ ಹೆರಟ್ರೂ ಮನಗೆತ್ತುವಗ ಇರುಳಾತು – ಅದೆಂತ್ಸು ಅಷ್ಟು ತಡವಾದ್ಸು ಹೇದು ಆಲೋಚನೆ ಮಾಡಿದಿರೊ!
ಅಲ್ಲ, ಮಾಷ್ಟ್ರುಮಾವನ ದೊಡ್ಡಮಗನ ಹಾಂಗೆ ಅಮೇರಿಕಲ್ಲಿ ಕೂದಂಡು – ಇರುಳಪ್ಪಗ ಉದಿಯಾತು, ಉದಿಯಪ್ಪಗ ಇರುಳಾತು ಹೇಳ್ತಾಂಗೆ- ಒಪ್ಪಣ್ಣನೂ ಸುರುಮಾಡಿದ ಗ್ರೇಶಿದಿರೋ? ಏಯ್, ಅದೇವದೂ ಅಲ್ಲ ಬಗೆ.
ಮತ್ತೆಂತರ?
ಎಂತ್ಸೂ ಇಲ್ಲೆ, ದಾರಿಲಿ ಜೋಯಿಶಪ್ಪಚ್ಚಿ ಮನೆ ಇದ್ದಲ್ದೋ, ಕಟ್ಟೆಪೂಜೆ ಮಾಡಿಂಡು ಮನಗೆತ್ತಿದ್ದು, ಅಷ್ಟೇ!
ಚೆನ್ನೈಬಾವ ಹು ಹು ಹೇಳುಗು!! 😉
ಅಪ್ಪು, ಜೋಯಿಷಪ್ಪಚ್ಚಿಯಲ್ಲಿ ಅಂತೇ ಹೊತ್ತುಕಳೇಕು ಹೇಳಿಗೊಂಡು ಕೂದ್ಸಲ್ಲ, ಮಾತಾಡಿಗೊಂಡು ಕೂದಿಪ್ಪಾಗ ಹೊತ್ತು ಹೋದ್ದೇ, ಗೊಂತಾಯಿದಿಲ್ಲೆ ಇದಾ.
ಅಲ್ಲಿ ಮಾತಾಡಿದ ಬಗೆಯ ನಿಂಗೊಗೂ ಹೇಳ್ತೆ, ಹೊತ್ತು ಕಳೀಯದ್ದೆ ಕೇಳಿಕ್ಕಿ. ಆತೋ?!
~

ಜೋಯಿಶಪ್ಪಚ್ಚಿಯಲ್ಲಿ ಮನೆಂದ ಹತ್ತುಮಾರು ದೂರಲ್ಲಿ ಆಪೀಸು ಕೊಟ್ಟಗೆ.
ಮನೆಲಿ ಚಿಕ್ಕಮ್ಮನ ಸವಿನಯ ಉಪಚಾರ, ಆಪೀಸಿಲಿ ಜೋಯಿಷಪ್ಪಚ್ಚಿಯ ಪಾಂಡಿತ್ಯದ ಉಪಚಾರ.
ಹೊಟ್ಟೆಲಿ ಹಶು ಆವುತ್ತರೆ ಮನಗೆ ಹೋಯೇಕು, ತಲಗೆ ಹಶು ಆವುತ್ತರೆ ಆಪೀಸುಕೊಟ್ಟಗೆಗೆ ಹೋಯೇಕು.
ಒಪ್ಪಣ್ಣಂಗೆ ಸಾಮಾನ್ಯ ಎರಡುದೇ ಹಶು ಅಪ್ಪ ಕ್ರಮ ಇದ್ದು ಅಲ್ಲಿಗೆತ್ತುವಗ!
ಮದಾಲು ಸಿಕ್ಕುತ್ತದು ಆಪೀಸು ಇದಾ, ಹಾಂಗೆ ಅಲ್ಲಿಗೇ ಹೋತು ನಾವು.
~
ಜೋಯಿಶಪ್ಪಚ್ಚಿಯ ಆಪೀಸಿಲಿ ಹಗಲಿಡೀ ಜೆನಂಗೊ ಇಕ್ಕು.
ಉದಿಯಾದರೆ ಮದ್ಯಾನ್ನ ಒರೆಂಗೆ ಪ್ರಶ್ನೆ (ಫಲಾಫಲ) ಕೇಳುಲೆ ಬಂದ ಜೆನಂಗೊ ಇಕ್ಕು. ಮಧ್ಯಾನ್ನತಿರುಗಿ ಜೋತಿಷ್ಯ ಅಧ್ಯಯನ ಮಾಡ್ಳೆ ಬಪ್ಪ ವಿದ್ಯಾರ್ಥಿಗೊ ಇಕ್ಕು.
ಅಂತೂ ಅಪ್ಪಚ್ಚಿ ದಿನ ಇಡೀ ಮಾತಾಡುಗು, ಬಚ್ಚದ್ದೆ!
ಆಪೀಸಿಲಿ ಜೆನ ಇದ್ದಷ್ಟೂ – ಮನೆಲಿ ಬೆಶಿಕಾಪಿಯೋ, ಹಾಲೋ – ಇದ್ದೇ ಇಕ್ಕು!
~

ಹ್ಮ್, ವಿದ್ಯಾರ್ಥಿಗೊ ಇಕ್ಕು ಹೇಳಿದೆ ಅಲ್ಲದೋ – ಮೊನ್ನೆಯೂ ಇತ್ತಿದ್ದವು.
ವಿದ್ಯಾರ್ಥಿಗೊ ಅವರವರ ಆಸಕ್ತಿಲಿ ಬತ್ತ ಕಾರಣ, ಇಂತಾ ದಿನವೇ ಕ್ಲಾಸು ಸುರು, ಇದುವೇ ಪಾಟ- ಹೇಳಿ ನಿಯಮ ಏನಿಲ್ಲೆ. ಪರೀಕ್ಷೆಲಿ ಪಾಸಾಯೇಕು, ಹಾಂಗಾಗಿ ಇಂತಿಷ್ಟರ ಬಾಯಿಪಾಟ ಹೊಡೇಕು – ಹೇಳಿಯೂ ಏನಿಲ್ಲೆ.
ಎಲ್ಲ ಅವರವರ ಆಸಕ್ತಿ.
ಜ್ಯೋತಿಷ್ಯ ಶಾಸ್ತ್ರ ಹೇಳ್ತ ಸಮುದ್ರಲ್ಲಿ ಅವಕ್ಕವಕ್ಕೆ ಎಷ್ಟೆಷ್ಟು ಕೊಡಪ್ಪಾನ ಕುಡಿಯಲೆಡಿತ್ತೋ – ಅವರವರ ಸಾಮರ್ಥ್ಯ!
ಬೇರೆಬೇರೆ ಸಮೆಯಲ್ಲಿ ಕಲಿಯಲೆ ಸುರುಮಾಡ್ತ ಕಾರಣ ಎಲ್ಲ ವಿದ್ಯಾರ್ಥಿಗೊಕ್ಕೆ ಒಂದೇ ಪಾಟ ಆಗಿರೇಕು ಹೇಳಿಯೂ ಏನಿಲ್ಲೆ.
ಕೆಲವು ಜೆನ ಕಲಿವದಷ್ಟೇ – ಪಂಚಾಂಗ, ರಾಶಿ, ನಕ್ಷತ್ರ ಎಲ್ಲ ಕಂಠಸ್ಥ ಮಾಡಿಗೊಂಡಿಕ್ಕು.
ಇನ್ನೂ ಕೆಲವು ಜೆನ ಒಂದೊರಿಶ ಕಲ್ತಾತಷ್ಟೇ – ಹೇದು ಜಾತಕಸ್ಫುಟ ಮಾಡ್ತರ ಕಲ್ತುಗೊಂಡಿಕ್ಕು,
ಅಲ್ಲ, ಇನ್ನೂ ಕೆಲವು ಜೆನ ಅದಾಗಲೇ ನಾಕೊರಿಶ ಕಲ್ತಿದ್ದು, ಪ್ರಶ್ನಮಾರ್ಗವೋ – ಹೋರೆಯನ್ನೋ ಬಾಯಿಪಾಟ ಮಾಡಿಗೊಂಡಿಕ್ಕು.
ಮೊನ್ನೆಯೂ ಹಾಂಗೇ, ನಾಕು ಜೆನ ವಿದ್ಯಾರ್ಥಿಗೊ ಇದ್ದದರ್ಲಿ, ಒಬ್ಬ ಮಾಣಿ ಮೊನ್ನೆ ವಿದ್ಯಾದಶಮಿಂದ ಬಪ್ಪಲೆ ಸುರುಮಾಡಿದ್ದು, ಮತ್ತೊಬ್ಬ ಅಣ್ಣ ವೇದಾಧ್ಯಯನ ಆಗಿ ಬಂದೋನು – ಎರಡೊರಿಶ ಆತು ಕಲಿತ್ತದು, ಮತ್ತೆ ಇಬ್ರು – ಗೃಹಸ್ಥರು, ಸ್ವಾಸಕ್ತಿಲಿ ಬತ್ತೋರು, ಪುರುಸೊತ್ತಪ್ಪಗ.
ಎಲ್ಲೋರನ್ನೂ ತೂಗಿಂಡು ವಿದ್ಯಾದಾನ ಮಾಡ್ತದು ಜೋಯಿಷಪ್ಪಚ್ಚಿಯ ಹೆಗ್ಗುರುತು!
~
ಮೊನ್ನೆ ಎಂತಾತು ಹೇಳಿರೆ,
ಒಪ್ಪಣ್ಣ ಅಲ್ಲಿಗೆ ಎತ್ತುವಗ, ಒಳುದ ಮೂರು ಜೆನ ಅವರಷ್ಟಕೇ ಓದಿಗೊಂಡಿತ್ತವು. ಮೊನ್ನೆ ಬಂದ ಮಾಣಿಗೆ ಬಾಲಪಾಠ ಆವುತ್ತಾ ಇದ್ದತ್ತು.
ಪಂಚಾಂಗದ ವರ್ಣನೆ, ಜ್ಯೋತಿಷ್ಯ ಗೋಳದ ಪರಿಚಯ, ಘಳಿಗೆ-ವಿಘಳಿಗೆಯ ಲೆಕ್ಕಾಚಾರದ ಹಂತಲ್ಲಿ ಇಪ್ಪ ಮಾಣಿ – ಹೇದು ಗೊಂತಾತು ಒಪ್ಪಣ್ಣಂಗೆ.
ಸ್ವಂತ ಪುಳ್ಳಿಗೆ ಹೇಳಿಕೊಡ್ತ ನಮುನೆಲಿ ಆ ಮಾಣಿಗೆ ಹೇಳಿಕೊಟ್ಟೊಂಡಿತ್ತಿದ್ದವು; ಒಪ್ಪಣ್ಣ ಆಪೀಸುಕೊಟ್ಟಗೆಗೆ  ಎತ್ತಿದ್ದೂ ಗೊಂತಾಯಿದಿಲ್ಲೆ, ಮಾಣಿಯ ಹತ್ತರೆ ಕೂದ್ದದೂ ಗೊಂತಾಯಿದಿಲ್ಲೆ ಜೋಯಿಷಪ್ಪಚ್ಚಿಗೆ. ಮಾಣಿಯೂ ಹಾಂಗೇ – ತನ್ಮಯತೆಲಿ ಕೇಳಿಗೊಂಡಿತ್ತಿದ್ದ.
ಜ್ಯೋತಿಷ ಸಾರ ಸಮುದ್ರಲ್ಲಿ ನವಗೂ ರಜ ಆಪೋಹಿಷ್ಟಾ ಪ್ರೋಕ್ಷಣೆ ಆವುತ್ತರೆ ಆಗಲಿ ಹೇದು ಕೇಳಿಗೊಂಡು ಕೂದೆ. ಪಾಟ ಮುಗಿವನ್ನಾರ ಹಂದಿದ್ದಿಲ್ಲೆ.
ಅದಾ, ಈಗ ಗೊಂತಾತೋ – ತಡವಾದ್ಸು ಎಂತ್ಸಕೇ ಹೇದು?! ಹ್ಮ್, ಪಾಟ ಕೇಳಿಗೊಂಡು ಕೂದ್ಸು
ಅಂತೇ – ಪಾಟ ಕೇಳಿದ್ದೆ ಹೇಳಿರೆ ನಿಂಗೊ ನಂಬೆಯಿ, ಎನಗೊಂತಿದ್ದು. ಅದಕ್ಕೇ, ಎಂತ್ಸರ ಕೇಳಿಗೊಂಡು ಕೂದ್ದೂ ಹೇಳಿಯೂ ಹೇಳಿಕ್ಕುತ್ತೆ, ಆಗದೋ?
~
ಮಾಣಿಗೆ ಬಾಲಪಾಠ ಆಗಿಂಡಿತ್ತು ಹೇಳಿದೆ ಅಲ್ದಾ, ಯೇವದರದ್ದೇ ಆಗಲಿ, ಅಡಿಪಾಯ ಗಟ್ಟಿಗೆ ಇದ್ದರೆ ಅಳಿ ಇಲ್ಲೆ ಹೇಳ್ತದರ ಜೋಯಿಶಪ್ಪಚ್ಚಿ ನಂಬುತ್ತವು.
ಹಾಂಗಾಗಿಯೇ ಅವು ಬಾಲಪಾಠವ ಹೆಚ್ಚು ಆಸಕ್ತಿಂದ, ಹೆಚ್ಚು ದೀರ್ಘವಾಗಿ ಮಾಡ್ತವು.
ತಿತಿ, ನಕ್ಷತ್ರ, ರಾಶಿ – ಇತ್ಯಾದಿದು ಒಳಗೊಂಡ ವಿವರಣೆಯೇ ಬಾಲಪಾಠದ ಪ್ರಧಾನ ಅಂಶಂಗೊ.
ಎಂತರ ವಿವರುಸಿಗೊಂಡಿತ್ತವು – ಹೇಳ್ತರಿಂದಲೂ, ಆ ವಿವರುಸುತ್ತ ರೀತಿಯೇ ಮಾಣಿಯ ಮಂಡಗೆ ನೇರವಾಗಿ ಹೋವುತ್ತ ಹಾಂಗೆ ಪರಿಣಾಮ ಕೊಟ್ಟುಗೊಂಡಿದ್ದತ್ತು.
ಹತ್ತರಾಣ ಕುರುಶಿಲಿ ಕೂದುಗೊಂಡ ಒಪ್ಪಣ್ಣಂಗೂ – ನೇರವಾಗಿ ತಲೆಯ ಒಳದಿಕ್ಕಂಗೇ ಹೋಗಿಬಿಟ್ಟತ್ತು.
~
ಭೂಗೋಲವೂ ಒಂದು ಆಕಾಶಕಾಯ; ಭೂಗೋಲದ ಸುತಲೂ ಆಕಾಶ ಇದ್ದು.
ಆಕಾಶಲ್ಲಿ ಅನೇಕಾನೇಕ ಇತರ ಆಕಾಶಕಯಂಗೊ ಇದ್ದು. ಉಪಗ್ರಹಂಗೊ, ಧೂಮಕೇತುಗೊ, ನಕ್ಷತ್ರಂಗೊ, ಇತ್ಯಾದಿ.
ಹಲವಾರು ಒಂಟಿ ನಕ್ಷತ್ರಂಗೊ ಸೇರಿಗೊಂಡ್ರೆ ಒಂದು ನಕ್ಷತ್ರ ಪುಂಜಂಗೊ ಆವುತ್ತಲ್ಲದೋ – ಆ ನಕ್ಷತ್ರಕಾಯಂಗಳ ಗುಂಪುಗೊಕ್ಕೇ ಜ್ಯೋತಿಷ್ಯಲ್ಲಿ ನಕ್ಷತ್ರ ಹೇಳ್ತದು.
ಒಟ್ಟು ಇಪ್ಪತ್ತೇಳು ನಕ್ಷತ್ರಂಗೊ, ಬೈಲಿಲಿ ಮಕ್ಕೊಗಿಪ್ಪ ಶುದ್ದಿಲಿ ಶಾಂತತ್ತೆ ಅಂದೇ ಹೇಳಿದ್ದವು.
ಅಶ್ವಿನಿ – ಭರಣಿ – ಕೃತ್ತಿಕೆ – ಹೀಂಗೇ..
ಭೂಮಿಯ ಸುತ್ತವೂ ಇಪ್ಪ ಗೋಲವ ಇಪ್ಪತ್ತೇಳು ವಿಭಾಗ ಮಾಡಿದ್ದವು.
ಒಂದೊಂದು ವಿಭಾಗವನ್ನೂ ಒಂದೊಂದು ನಕ್ಷತ್ರಪುಂಜದ ಮೂಲಕ ಗುರ್ತು ಹಿಡಿತ್ತವು – ಹೇಳಿದವು, ಅವರ ಮೇಜಿಲಿ ಮಡಿಕ್ಕೊಂಡಿದ್ದಿದ್ದ ತಿರುಗುತ್ತ ಭೂಮಿಗೋಲದ ಸುತ್ತ ಕೈಲಿ ತೋರುಸಿಗೊಂಡು.
ಬಾನಲ್ಲಿಪ್ಪ ಚಂದ್ರಂಗೆ ಈ ನಕ್ಷತ್ರಂಗೊ ಹೆಂಡತ್ತಿಯಕ್ಕೊ ಆಡ. ಅದ್ರಾಮಂಗೆ ನಾಕು – ಹೇಳಿಗೊಂಡವು ಎಡೇಲಿ!
ಎಲ್ಲೋರ ಮನಗೂ ಒಂದೊಂದು ದಿನಕ್ಕೆ ಹೋಗಿಬಂದಪ್ಪಗ ಒಂತಿಂಗಳು ಮುಗಿತ್ತು – ಚಾಂದ್ರಮಾನ ಮಾಸ; ಹೇಳಿದವು.
~
ಲಾವಂಚ ಹಾಕಿದ ಬೆಶಿನೀರಿನ ಚಿಕ್ಕಮ್ಮ ತಂದುಮಡಗ್ಗು, ಅಪ್ಪಚ್ಚಿಯ ಬಲದಹೊಡೆಲಿ ಇರ್ತ ಹೂಜಿಲಿ.
ಇಡಿದಿನ ಮಾತಾಡಿರೂ ಬಚ್ಚದ್ದೆ ಇರ್ತ ಗುಟ್ಟು ಇದುವೇ ಇದಾ!
ಅಂಬಗಂಬಗ ಒಂದೊಂದು ಮುಕುಳಿ ನೀರು ಕುಡಿತ್ತದು! ಒಂದರಿ ನೀರುಕುಡುದು ಮಾತು ಮುಂದುವರುಸಿದವು.
~

ಇದೇ ಅಜ್ಜಂದ್ರು, ಇದೇ ಭೂಗೋಲದ ಸುತ್ತವ – ಹನ್ನೆರಡು ತುಂಡುಗೊ ಆಗಿ ವಿಭಾಗಮಾಡಿದ್ದವು.
ಮುನ್ನೂರರುವತ್ತು ಡಿಗ್ರಿಯ ಗೋಲವ ಹನ್ನೆರಡು ತುಂಡು ಮಾಡಲಾಗಿ – ಮೂವತ್ತು ಡಿಗ್ರಿಯಂತೆ; ಹೇಳಿದವು.
ಅವು ಗಣಿತ ಮಾಡುವಗ ಕನ್ನಡ ಪದಂಗಳ ಬಳಕೆ ಮಾಡ್ತದು ಹತ್ತರಾಣೋರಿಂಗೆ ಅರಡಿಗು.
ಅದಿರಳಿ, ಈ ಮೂವತ್ತು ಡಿಗ್ರಿಯ ಜಾಗೆಯ ಬೇರೆಬೇರೆ ಗುರ್ತ ಹಿಡಿತ್ತದು ಹೇಂಗೆ ಈ ಕಪ್ಪು ಆಕಾಶಲ್ಲಿ?
– ಬಾನಲ್ಲಿ ಕೆಲವು ನಕ್ಷತ್ರಂಗೊ ಸೇರಿ ಒಂದೊಂದು ಆಕೃತಿಗೊ ಬತ್ತಲ್ಲದೋ – ಕೆಲವು ಆಕೃತಿಗಳ ನೋಡುವಗ ನಮ್ಮ ನಿತ್ಯ ಜೀವನದ ಕೆಲವು ವಸ್ತುಗಳ ನೆಂಪುಬಪ್ಪ ನಮುನೆ ಇದ್ದಾಡ.
ಹಾಂಗಾಗಿ, ಆಯಾ ಜಾಗಗೆ ಆಯಾ ಆಕಾರದ ಹೆಸರನ್ನೇ ಮಡಗಿದವಡ.
ಏಡಿನ ಆಕಾರಲ್ಲಿ ನಕ್ಷತ್ರ ಕಂಡ ಜಾಗೆಯ ಮೂವತ್ತು ಡಿಗ್ರಿ ಅವಕಾಶಕ್ಕೆ “ಮೇಷ”ರಾಶಿ ಹೇಳಿದವು. ಅದರಿಂದ ಮತ್ತಾಣ ಮೂವತ್ತು ಡಿಗ್ರಿ ತುಂಡಿಲಿ ಹೋರಿಯ ನಮುನೆ ಕಂಡತ್ತಡ, ಅದರ ವೃಷಭ ಹೇಳಿದವು…
ಹೀಂಗೆ ಒಂದೊಂದೇ ಹೆಸರು ಮಡಗಿ – ಹನ್ನೆರಡು ಹೆಸರುದೇ ಆಗಿಬಿಟ್ಟತ್ತು – ಹೇಳಿಗೊಂಡು ಅದೇ ಬೂಗೋಲದ ಬೊಂಬೆಯ ಸುತ್ತವೂ ಕೈಬೆರಳಿಲಿ ತೋರುಸಿಗೊಂಡವು.
ಬಾನಲ್ಲಿಪ್ಪ ಸೂರ್ಯದೇವರು ದಿನವೂ ರಜರಜವೇ ತನ್ನ ಸ್ಥಾನಪಲ್ಲಟ ಮಾಡಿಗೊಂಡು, ಹನ್ನೆರಡು ತಿಂಗಳು ಕಳುದಪ್ಪಗ ಪುನಾ ಮದಲಾಣ ಜಾಗಗೇ ಬತ್ತನಾಡ, ಅಲ್ಲದೋ?
ಹಾಂಗಾಗಿ, ಒಂದು ರಾಶಿಲಿ ಇರ್ತಷ್ಟು ಸಮೆಯಕ್ಕೆ ಒಂದು “ಸೌರ ಮಾಸ” ಹೇಳ್ತದು – ಹೇಳಿದವು ಅಪ್ಪಚ್ಚಿ.
~
ಲಾವಂಚದ ನೀರಿನೊಟ್ಟಿಂಗೆ, ಗೆಣಮೆಣಸು ಹಾಕಿದ ಬೆಲ್ಲ – ದೆಯ್ಯರಲ್ಲಿಂದ ತಂದದರ – ಅಗುಕ್ಕೊಂಗು. ದೊಂಡೆ ಸರಿ ಮಾಡಿಗೊಂಬಲೆ.
~
ಖಗೋಲದ ಪೂರ್ಣವೃತ್ತಕ್ಕೆ ಮುನ್ನೂರರುವತ್ತು ಭಾಗೆ. (ಭಾಗೆ / ಭಾಗ ಹೇಳಿತ್ತುಕಂಡ್ರೆ ಡಿಗ್ರಿ ಹೇಳಿ ಅರ್ತ)
ಇದೇ ಮುನ್ನೂರರುವತ್ತು ಭಾಗೆಯ ಸಣ್ಣಸಣ್ಣ ಇಪ್ಪತ್ತೇಳು ತುಂಡು ಮಾಡಿರೆ ನಕ್ಷತ್ರಂಗೊ ಆತು.
ಅದನ್ನೇ ರಜ ದೊಡ್ಡದಾದ ಹನ್ನೆರಡು ತುಂಡುಗೊ ಮಾಡಿರೆ ರಾಶಿಗೊ ಆತು.
ಅಂಬಗ, ಪ್ರತಿ ರಾಶಿಯೂ ಕೆಲವು ನಕ್ಷತ್ರಂಗಳ ಒಳಗೊಳ್ತು, ಪ್ರತಿ ನಕ್ಷತ್ರದ ಭಾಗವೂ ಯೇವದೋ ಒಂದು ರಾಶಿಯ ಭಾಗಲ್ಲಿ ಇರ್ತು – ಅಪ್ಪೋಲ್ಲದೋ – ಕೇಳಿದವು ಮಾಣಿಯ ಕೈಲಿ.
ಮಾಣಿಯೂ ಯೇವದೇ ಸಂಶಯ ಇಲ್ಲದ್ದೆ ಅಪ್ಪು ಹೇಳಿದ.
ಹ್ಮ್, ಹಾಂಗಾಗಿ, ಒಂದು ರಾಶಿಗೆ ಎರಡೂಕಾಲು ನಕ್ಷತ್ರದ ಹಾಂಗೆ ವಿಂಗಡುಸಿ ಹಂಚಿದ್ದವು ಅಜ್ಜಂದ್ರು – ಹೇಳಿದವು ಜೋಯಿಶಪ್ಪಚ್ಚಿ.
ಪ್ರತಿ ನಕ್ಷತ್ರಲ್ಲಿಯೂ ನಾಲ್ಕು ತುಂಡುಗೊ; ಪಾದಂಗೊ ಹೇಳುದದರ.
ಎರಡೂಕಾಲು ನಕ್ಷತ್ರ ಹೇಳಿತ್ತುಕಂಡ್ರೆ, ಎರಡೂಕಾಲಕ್ಕೆ ನಾಲ್ಕರಿಂದ ಗುಣಿಸಲಾಗಿ ಒಂಬತ್ತು ಪಾದಕ್ಕೆ ಒಂದು ರಾಶಿ.
ಉದಾಹರಣೆಗೆ, ಸುರೂವಾಣ ಮೇಷರಾಶಿ ಹೇಳಿತ್ತುಕಂಡ್ರೆ, ಸುರೂವಾಣ ಅಶ್ವಿನೀ ನಕ್ಷತ್ರದ ನಾಲ್ಕುಪಾದ, ಮತ್ತಾಣ ಭರಣೀ ನಕ್ಷತ್ರದ ನಾಲ್ಕು ಪಾದ – ಎಂಟಾತು – ಕೃತ್ತಿಕಾ ನಕ್ಷತ್ರದ ಸುರೂವಾಣ ಪಾದ (ಕಾಲ್ವಾಶಿ) ಸೇರಿರೆ ಒಂಬತ್ತು ಪಾದ – ಮೇಷರಾಶಿಗೆ ಸಮ – ಹೇಳಿ ಕಾಗತಲ್ಲಿ ಬರದು ತೋರುಸಿದವು.
ಎಲ್ಲವನ್ನೂ ಕೂಡುಸಿ ಕಳದೇ ನೆಂಪುಮಡಗೇಕು ಹೇಳಿ ಏನಿಲ್ಲೆ, ಅದಕ್ಕೆ ಒಂದು ಸೂತ್ರ ಇದ್ದಾಡ ಅಜ್ಜಂದ್ರದ್ದು, – ಅಶ್ವಿನೀಭರಣೀ ಕೃತ್ತಿಕಾ ಪಾದೋಮೇಕಂ ಮೇಷಃ – ಹೇಳಿಗೊಂಡು ವಿವರುಸಿಗೊಂಡು ಹೋದವು.
ಅಪ್ಪಚ್ಚಿ ಒಂದೊಂದನ್ನೇ ಹೇಳಿಗೊಂಡು ಹೋದಾಂಗೇ, ಮಾಣಿ ಬರಕ್ಕೊಂಡು ಹೋದ.
ನಾಳೆ ಬಪ್ಪ ಮದಲು ಕಂಠಸ್ಥ ಮಾಡಿಗೊಂಡು ಬಕ್ಕು, ಉಶಾರಿ ಮಾಣಿ!
~
ಇಷ್ಟುದೇ ಅವು ವಿವರಣೆ ಕೊಟ್ಟದು ಭೂಗೋಲ, ಸೂರ್ಯ, ಚಂದ್ರ, ಚಲನೆ – ಹೇಳ್ತ ತತ್ವಂಗಳ.
ಇದು ಜ್ಯೋತಿಷ್ಯದ ಬಾಲಪಾಠಲ್ಲಿ ಎಂತಕೆ ಬತ್ತಪ್ಪಾ – ಗ್ರೇಶಿದಿರೋ?
ಅದುವೇ ಅವರ ಪಾಠದ ಮತ್ತಾಣ ಹಂತ – ರಾಶಿಚಕ್ರ!
~
ಆಕಾಶಮಂಡಲಲ್ಲಿ ಇಪ್ಪ ಎಲ್ಲಾ ವಸ್ತುಗಳುದೇ ಈ ಹನ್ನೆರಡು ರಾಶಿಗಳಲ್ಲಿ ಯೇವದಾರು ಒಂದರ್ಲಿ ಇರೇಕಲ್ಲದೋ!
ಅಪ್ಪೋ – ಅಲ್ಲದೋ? ಅಪ್ಪು! ಮಾಣಿಯೂ ಒಪ್ಪಿದ.
ಈ ಎಲ್ಲಾ ಆಕಾಶಕಾಯಂಗಳೂ ನಮ್ಮ ಮೇಲೆ ರಜರಜ ಪರಿಣಾಮಂಗಳ ಮಾಡ್ತವು.
ಪರಿಣಾಮದ ಪರಿಮಾಣ ಹೆಚ್ಚುಕಮ್ಮಿ ಇಕ್ಕು. ಈ ಹೆಚ್ಚುಕಮ್ಮಿ – ಅನೇಕ ಸ್ಥಿತಿಗಳ ಮೇಗೆ ಅವಲಂಬಿತ ಆಗಿಕ್ಕು – ಹೇಳಿದವು.
ಮುಖ್ಯವಾಗಿ ನಮ್ಮ ಜನನ ಕಾಲಲ್ಲಿ ಅವು ಇಪ್ಪ ಸ್ಥಾನಂಗೊ.
ಸ್ಥಾನಂಗಳ ಹೇಂಗೆ ಗುರುತು ಮಾಡುದು – ಇದೇ ರಾಶಿಗಳ ಮೂಲಕ – ಹೇಳಿದವು.
~
ಇನ್ನೂ ಸರಳವಾಗಿ ಹೇಳೇಕಾರೆ
– ಮಗುವಿನ ಜನನ ಅಪ್ಪ ಸಂದರ್ಭಲ್ಲಿ, ಈ ಇಡೀ ಮುನ್ನೂರರುವತ್ತು ಭಾಗೆಯ ಒಂದು ಪಟ ತೆಗದು ಮಡಗಿರೆ ಹೇಂಗಕ್ಕು? – ಅದುವೇ ನಮ್ಮ “ಜಾತಕ” – ಹೇಳಿದವು ಜೋಯಿಶಪ್ಪಚ್ಚಿ.
ಅಪ್ಪಡ, ಜಾತಕಲ್ಲಿಪ್ಪ ರಾಶಿಚಕ್ರ ಹೇಳಿತ್ತುಕಂಡ್ರೆ, ಇದೇ ಹನ್ನೆರಡು ರಾಶಿಯ ಪಟ ಅಡ.
ಮಗುವಿನ ಜನನ ಕಾಲಲ್ಲಿ – ಯೇವ ಗ್ರಹ ಯೇವ ರಾಶಿಲಿ ಇದ್ದಿದ್ದ, ಎಷ್ಟು ಡಿಗ್ರಿ ಚಲನೆ ಆಯಿದ, ಹೇಳ್ತ ಅತ್ಯಂತ ನಿಖರ ಮಾಹಿತಿಯ ದಾಖಲೆ ಮಾಡ್ತ ಕಾರ್ಯವೇ “ಜಾತಕ ಸ್ಫುಟ”!
ಹೇಳಿಗೊಂಡು, ಕಾಲಿಕಾಗತಲ್ಲಿ ರಾಶಿಚಕ್ರ ಬರವಲೆ ತೊಡಗಿದವು.
~

ಜೋಯಿಶಪ್ಪಚ್ಚಿ ಬರದ ರಾಶಿ-ಚಕ್ರ

(ಜೋಯಿಶಪ್ಪಚ್ಚಿ ಬರದು ಕೊಟ್ಟ ರಾಶಿಚಕ್ರವ ಇಲ್ಲಿ ನೇಲುಸಿದ್ದೆ ಇದಾ)
ನಾವಿದರ ಕಂಪ್ಲೀಟರಿಲಿ ಎಷ್ಟು ಬೇಕಾರೂ ಚೆಂದ ಮಾಡ್ಳಕ್ಕು, ಆದರೆ ಜಾತಕಪುಸ್ತಕಲ್ಲಿ ಇಷ್ಟೆಲ್ಲ ಮನಾರ ಮಾಡ್ಳೆ ಎಡಿಯ! 😉 ಅದಿರಳಿ,
ಇಲ್ಲಿ ನಾವು ಗಮನುಸಿರೆ, ಮಧ್ಯಭಾಗಲ್ಲಿ ಭೂಮಿ ಇದ್ದೊಂಡು, ಸುತ್ತಲಿನ ಗೋಲಾವಕಾಶವ ಹನ್ನೆರಡು ತುಂಡು ಮಾಡಿದ್ದು ಕಾಣ್ತು. ಇದುವೇ ಹನ್ನೆರಡು ರಾಶಿಗೊ.
ಒಂದೊಂದು ರಾಶಿಗೊಕ್ಕೆ ಒಂದೊಂದು ಹೆಸರುಗೊ.

ಈ ರಾಶಿ ಗುರ್ತ ಮಾಡ್ತದು ಎಲ್ಲಿಂದ? ಸುರೂವಾಣದ್ದು ಎಲ್ಲಿದ್ದು?
ಗೋಲಲ್ಲಿ ಆದಿ-ಅಂತ್ಯ ಹೇಳಿ ಏನಿಲ್ಲೆ, ಎಲ್ಲಿಂದ ಬೇಕಾರೂ ಸುರು ಮಾಡ್ಳಕ್ಕು. ಆದರೂ – ಈ ಗೆರೆಪೆಟ್ಟಿಗೆಲಿ ಬರವಗ ನಿರ್ದಿಷ್ಟತೆ ಮಡಿಕ್ಕೊಳ್ತವು ಜೋಯಿಶಕ್ಕೊ.

ಎಡದ ಹೊಡೆಯ ಸುರುವಿಂದ ಎರಡ್ಣೇ ಪೆಟ್ಟಿಗೆಲಿ ಮೇಷ.
ಮತ್ತಾಣದ್ದು ವೃಷಭ, ಮಿಥುನ – ಇತ್ಯಾದಿ ಆಗಿಂಡು – ಗಡಿಯಾರದ ಮುಳ್ಳಿನ ನಮುನೆಲಿ ಒಂದು ಸುತ್ತ ಬಂದು – ಎಡದ ಭಾಗಲ್ಲಿ, ಮೇಗೆ ಇಪ್ಪ ಕೋಣೆ “ಮೀನ ರಾಶಿ” ಹೇಳಿದವು.
ಜ್ಯೋತಿಷ್ಯರೂಪೀ ನಕ್ಷತ್ರಂಗೊ, ಗ್ರಹಂಗೊ, ಉಪಗ್ರಹಂಗೊ, ಧೂಮಕೇತುಗೊ, ಕ್ಷುದ್ರಗ್ರಹಂಗೊ – ಎಲ್ಲವುದೇ ಈ ಹನ್ನೆರಡು ರಾಶಿಲಿ ತುಂಬೇಕಿದಾ!

ನಾವು ಹುಟ್ಟುತ್ತ ಕಾಲಕ್ಕೆ ಯೇವ ರಾಶಿ ಪೂರ್ವದ ದಿಗಂತಲ್ಲಿ ಇದ್ದತ್ತೋ –ಅದರ ಲಗ್ನ ಹೇಳ್ತದು. ಹಾಂಗಾಗಿ, ಆ ರಾಶಿಯ ಪೆಟ್ಟಿಗೆ ಒಳದಿಕ್ಕೆ “ಲ” ಹೇಳಿ ಬರೆತ್ತವು ಜೋಯಿಶಕ್ಕೊ.
ಎಲ್ಲಾ ಗ್ರಹಂಗಳ ಪರಿಣಾಮವ ಲೆಕ್ಕಾಚಾರ ಹಾಕಲೆ ಈ ಲಗ್ನಂದ ಎಷ್ಟು ದೂರಲ್ಲಿ ಇದ್ದು, ಯೇವ ಹೊಡೆಲಿ ಇದ್ದು ಹೇಳ್ತದು ಗೊಂತಾಯೇಕು – ಹೇಳಿದವು.

ಅದಾ, ಮೇಷಾದಿ ರಾಶಿಗೊ ಗೊಂತಿತ್ತು ನವಗೆ, ಆದರೆ ರಾಶಿಚಕ್ರಲ್ಲಿ ಅದು ಹೇಂಗೆ ಬಪ್ಪದು, ಅದರ ಅರ್ಥ ಎಂತ್ಸರ ಹೇಳ್ತದು ಮದಲು ಗೊಂತಿತ್ತಿಲ್ಲೆ.
ಕಷ್ಟ ಹೇಳಿ ಗ್ರೇಶಿಗೊಂಡಿದ್ದ ಒಂದು ವಸ್ತುವಿನ ಅವರದ್ದೇ ಆದ ವಿಧಾನಲ್ಲಿ ಹೇಳಿಕೊಟ್ಟು ಮಕ್ಕೊಗೆಲ್ಲ ಬಹುಸುಲಾಬ ಮಾಡಿತೋರುಸುತ್ತದು ಜೋಯಿಶಪ್ಪಚ್ಚಿಯ ವಿಧಾನ!
ಆ ಮಾಣಿಗೆ ಇದರ ಕೇಳಿ ಸಂಪೂರ್ಣ ಅರ್ಥ ಆತು, ಹತ್ತರೆ ಕೂದ ಒಪ್ಪಣ್ಣಂಗೂ ಅರ್ತ ಆತು. 🙂
~
ಅರ್ತ ಮಾಡಿಗೊಂಡು ಅಲ್ಲೇ ಕೂದರೆ ನೆಡಿರುಳು ಕಳುದರೂ ಮನಗೆ ಎತ್ತ; ಹಾಂಗಾಗಿ ಮೆಲ್ಲಂಗೆ ಹೆರಟೆ.
ಅಪ್ಪು, ನಾವು ಹೇಂಗೂ ಇದರ ಮನಸ್ಸಿಂಗೆ ಮಾಡಿಗೊಳ್ತು, ಬೈಲಿಂಗೂ ಹೇಳಿರೆ ಎಂತಾ?
ಅಲ್ಲದೋ?
ಪೂರ್ತ ಅಲ್ಲ, ಎಷ್ಟ ಅರಡಿಗೊ ಅಷ್ಟು; ಅರ್ತ ಆದಷ್ಟರ ಬೈಲಿಂಗೆ ಹೇಳಿಕ್ಕುವೊ ಹೇದು ಇಂದು ಬಂದದು!
ಇದರ ಕೇಳಿದ ನಿಂಗೊಗೆ ಅರ್ತ ಆತೋ?
ಆಗದ್ದರೆ ಇನ್ನೂ ಮೀನ-ಮೇಷ ಲೆಕ್ಕ ಹಾಕೆಂಡು ಕೂರೆಡಿ, ಜೋಯಿಶಪ್ಪಚ್ಚಿಯ ಪುರುಸೊತ್ತು ಕೇಳಿಗೊಂಡು ಸೀತ ಬಂದುಬಿಡಿ.
ಅವರ ಪುರುಸೊತ್ತು ನಮ್ಮ ಬೈಲಕರೆಗಣೇಶಮಾವಂಗೆ ಅರಡಿಗು! ಆತೋ?
~

ಯೇವದೇ ಕಾರ್ಯಕ್ಕೆ ಮೀನ-ಮೇಷ ಮಾಡಿಗೊಂಡು ಕೂದರೆ ಕೈ ಎತ್ತ.
ಅವಕಾಶ ನೋಡಿಗೊಂಡು ಸುರುಮಾಡಿಯೇ ಬಿಟ್ರೆ ಆಗಿಯೊಳ್ತು ಅದರಷ್ಟಕೆ.
ಹಾಂಗಾಗಿಯೇ ಮೊನ್ನೆ ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶಲ್ಲಿ ಮೀನಮೇಷ ನೋಡದ್ದೆ ಕಲ್ತುಗೊಂಡದು!
ಹೇಂಗೆ ಒಯಿವಾಟು!? 🙂

ಒಂದೊಪ್ಪ: ಮೀನಮೇಷ ನೋಡುವವಂಗೆ ಕರ್ಕಾಟಕವೋ – ವೃಶ್ಚಿಕವೋ ಕಚ್ಚಿಯಪ್ಪಗ ಎಂತ ಮಾಡುಗೋ! 🙂

27 thoughts on “ಮೇಷಂದ ಮೀನ ಒರೆಂಗೆ ಕಲಿಯಲೆ ಮೀನಾಮೇಷ ಎಂತಕೆ?

  1. ನಾವು ಹುಟ್ಟುತ್ತ ಕಾಲಕ್ಕೆ ಯೇವ ರಾಶಿ ಪೂರ್ವದ ದಿಗಂತಲ್ಲಿ ಇದ್ದತ್ತೋ –ಅದರ ಲಗ್ನ ಹೇಳ್ತದು
    ಸಿಂಹ ರಾಶಿಲಿ ಹುತ್ತಿದವನ ಲಗ್ನ ಯಾವುದು?
    ಲೇಖನ ತುಂಬ ಲಾಯಕ್ಕಾಯಿದು.!

    1. ಲಗ್ನ ತಿಲಿಯಲು ಹುತ್ತಿದ ಸಮಯ ಗೊನ್ತಿರೆಕು. ಅಪ್ಪಗ ಲೆಕ್ಕ ಮಾದಲಕ್ಕು.

  2. “ಎಲ್ಲೊರಿಂಗೂ ದೀಪಾವಳಿಯ ಹಾರ್ದಿಕ ಶುಭಶಯಂಗೊ”
    ಉತ್ತಮ ಮಾಹಿತಿ ಇಪ್ಪ ಒಪ್ಪ ಶುದ್ಧಿ ಒಪ್ಪಣ್ಣಾ.
    ಜೋಯಿಷಪ್ಪಚ್ಚಿಯ ಲಾಯಿಕ ಸ್ವರ ಕೆಮಿಗೆ ಕೇಳಿದ ಹಾಂಗೆ ಆವ್ತು ಎನಗೆ.
    ಲಾಯಿಕಾಯಿದು ಬರದ್ದು,
    ಸುಮನಕ್ಕ…

    1. ಸುಮನಕ್ಕಾ,
      ದೀಪಾವಳಿಯ ವಿಶೇಷ ಶುಭಾಶಯಂಗೊ..
      ಹೇಳಿದಾಂಗೆ,
      ಹರಿಯೊಲ್ಮೆಗೆ ಹೋಪ ದಾರಿಲಿ ಜೋಯಿಶಪ್ಪಚ್ಚಿ ಮನೆ ಮೆಟ್ಟುಕಲ್ಲು ಹತ್ತಿ, ಬೆಲ್ಲ-ನೀರು ಕುಡುದೇ ಬಂದುಗೊಂಡು ಇದ್ದದು! ಗೊಂತಿದ್ದೋ?! 🙂

  3. ಒಪ್ಪಣ್ಣ ಲೇಖನ ಅತ್ಯಂತ ಮಾಹಿತಿ ಪೂರ್ಣವಾಗಿದ್ದು. ಸಂಗ್ರಹ ಯೋಗ್ಯ ಲೇಖನಗಳ ಪಟ್ಟಿಗೆ ಈ ಬರಹವೂ ಸೇರೆಕ್ಕಾದ್ದೆ. ಜಾತಕ, ರಾಶಿ, ನಕ್ಷತ್ರದ ಬಗೆಗಿನ ಮೂಲ ಮಾಹಿತಿ ಇದರಲ್ಲಿದ್ದು, ನಿರೂಪಣೆ ಶೈಲಿ ಕೂಡ ಲಾಯ್ಕ ಆಯಿದು…

    1. ಕೆಪ್ಪಣ್ಣಾ, ಒಪ್ಪ ಕಂಡು ತುಂಬಾ ಕೊಶೀ ಆತು.
      ನೀನು ಬೈಲಿಂಗೆ ಅಪುರೂಪ ಹೇದು ಪೆಂಗಣ್ಣ ಹೇಳಿಗೊಂಡಿಪ್ಪಗಳೇ – ಯೇವದೋ ರಾಶಿಲಿ ನೀನು ಪ್ರತ್ಯಕ್ಷ ಆದೆ. ರಾಶಿ ಯೇವದು – ಹೇಳಿ ಜೋಯಿಶಪ್ಪಚ್ಚಿಯ ಕೈಲೇ ಕೇಳೆಕ್ಕಟ್ಟೆ.

      ಇದೂ – ಬಪ್ಪ ವಾರ ರಾಶಿ-ನಕ್ಷತ್ರಂಗಳ ಜೋಯಿಶಪ್ಪಚ್ಚಿ ಆಕಾಶಲ್ಲೇ ಗುರ್ತ ಮಾಡುಸಿ ತೋರುಸುತ್ತವಾಡ. ನಿನ್ನ ಕನ್ನಡ್ಕ ಒಂದರಿ ಕೊಡೆಕ್ಕಾತೋ? 😉

    1. ಸತ್ಯಣ್ಣಾ, ಒಪ್ಪ ಕಂಡು ಕೊಶಿ ಆತು.
      ನಿಂಗಳ ಗುರ್ತ ಗೊಂತಾಯಿದಿಲ್ಲೇನೇ, ರಜ್ಜ ವಿವರ ಹೇಳುವಿರೋ? 🙂

      1. ಆನು ಸತ್ಯನಾರಾಯಣ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಮಾಡ್ತಾ ಇದ್ದು. ಎನ್ನ ಊರು ಕುಂತ್ತಿಕಾನ, ಬದಿಅದ್ಕ ಹತ್ರ, ಕಾಸರಗೋಡ್. ಹೊಸತಾಗಿ ಆನು ಲಾಗಿನ್ ಮಾಡಿದ್ದು. ನಿಂಗಳ ಲೇಖನ ಅತ್ಯಂತ ಮಾಹಿತಿ ಪೂರ್ಣವಾಗಿದ್ದು. ನಿಂಗಳ ಕೆಲವು article ಓದಿದ್ದೆ, ಲಾಯಕೈದ್ದು, ತುಂಬಾ ಖುಷಿ ಆತು

  4. ಬರದ್ದದು ಒಪ್ಪ ಆಯಿದು ಒಪ್ಪಣ್ಣ.

    1. ವಿದ್ಯಕ್ಕಾ, ಒಪ್ಪ ಕಂಡು ಕೊಶೀ ಆತು.
      ಪುರುಸೊತ್ತಪ್ಪಗ ರವಿಯಣ್ಣಂಗೆ ಹೇಳಿಕೊಡಿ ಜೋತಿಷ್ಯ, ಆಗದೋ? 🙂

      1. ರವಿಯಣ್ಣಂಗೆ ಜೋತಿಷ್ಯವೂ ಗೊಂತಿದ್ದು.ಕಲ್ತಿದವು.

  5. {ಕರ್ಕಾಟಕವೋ – ವೃಶ್ಚಿಕವೋ ಕಚ್ಚಿಯಪ್ಪಗ ಎಂತ ಮಾಡುಗೋ}
    ಧನುಸ್ಸಿಂದ ಬಿಟ್ಟ ಬಾಣದ ಹಾಂಗೆ ಓಡುಗು. ಅಲ್ಲದೊ?

    ತುಲೆಲ್ಲಿ ತೂಗಲೆಡಿಯದ್ದಷ್ಟು ಇಪ್ಪ ಅಪಾರ ಜ್ಞಾನಸಂಪತ್ತಿನ ಕುಂಭಂದ ಮಕರಂದವ ಹೀಂಗೇ ವಿತರಿಸಲಿ ಒಪ್ಪಣ್ಣ !!

      1. ಡಾಮಹೇಶಣ್ಣಾ,
        ಒಪ್ಪ ಭಾರೀ ಲಾಯಿಕ ಆಯಿದು!
        ಧನು, ಮಕರ, ಕುಂಭ – ಎಲ್ಲವೂ ಬಯಿಂದು.

        ನಿಂಗಳ ಸಂಸ್ಕೃತಯುಕ್ತ ಪಾಂಡಿತ್ಯಕ್ಕೆ ನಮೋ ನಮಃ!

  6. ಜೋತಿಷ್ಯ – ಖಗೋಲ ಶಾಸ್ತ್ರ ಎರಡೂ ಒಂದಕ್ಕೊಂದು ಪೂರಕ, ಅದರ ಬಗ್ಗೆ ವಿವರಿಸಿದ್ದು ಚೊಕ್ಕ ಆಯಿದು.
    ಎರಡು ಶಬ್ದಂಗೊ ಎನ್ನ ಗಮನ ಸೆಳೆದತ್ತು – ಒಂದು ” ಬಾಲಪಾಠ”, ಎರಡ್ನೆದು ” ಆಪೋಹಿಷ್ಟಾ ಪ್ರೋಕ್ಷಣೆ” ಒಳ್ಳೆ ಪ್ರಯೋಗ.

    1. ತೆಕ್ಕುಂಜೆಮಾವಾ,
      ಜೋಯಿಶಪ್ಪಚ್ಚಿಯ ಹಾಂಗೆ ಪಾಟ ಮಾಡಿರೆ ಯೇವ ಕಷ್ಟದ ಜ್ಯೋತಿಷ್ಯ ಸೂತ್ರಂಗಳೂ ಸುಲಾಬಲ್ಲಿ ನಮ್ಮ ಮಂಡಗೆ ಹೊಕ್ಕುಗಲ್ಲದೋ? ಎನಗೂ ಅದರ ಕೇಳಿ ತುಂಬಾ ಕೊಶಿ ಆಗಿದ್ದತ್ತು.

  7. ಜೋಯಿಷಪ್ಪಚ್ಚಿ ತಿಳುಸಿಕೊಟ್ಟದರ ಬೈಲಿನವಕ್ಕೆಲ್ಲ ಅರ್ಥ ಅಪ್ಪ ಹಾಂಗೆ ಒಪ್ಪಣ್ಣ ಚೆಂದಕೆ ವಿವರುಸಿ ಕೊಟ್ಟಿದ°. ರಾಶಿ, ನಕ್ಷತ್ರಂಗಳ, ಪಂಚಾಂಗದ ಲೆಕ್ಕಾಚಾರದ ಬಗೆಲಿ ಒಳ್ಳೆ ಮಾಹಿತಿ ಕೊಟ್ಟತ್ತದ ಲೇಖನ.

    ಕಳುದ ವಾರ ಮೀನು, ಮಾಂಸದ ವಿಷಯ ಬೈಲಿಂಗೆ ಬಂದರೆ, ಈ ಸರ್ತಿ ಮೀನ ಮೇಷದ ವಿಚಾರ ಬಂತದ. ಎಂತ ವೈವಿಧ್ಯತೆ ಇದ್ದಲ್ಲದೊ ಒಪ್ಪಣ್ಣನ ಬರಹಂಗಳಲ್ಲಿ. ಪ್ರತಿ ಶುಕ್ರವಾರವನ್ನು ನೆಂಪು ಮಾಡುಸುತ್ತ ಒಪ್ಪಣ್ಣಂಗೆ ಧನ್ಯವಾದಂಗೊ.

    1. ಹ ಹ!
      ಮೀನುಮಾಂಸಕ್ಕೂ, ಮೀನ ಮೇಷಕ್ಕೂ ಪ್ರಾಸ ಹಿಡುದ್ದು ಸಾಕು ಮಾವ ನಿಂಗೊ! ಯಬ್ಬೊ!
      ಬೈಲಿಲಿ ವೈವಿಧ್ಯಕರ ನೆರೆಕರೆಯೋರು ಇಪ್ಪನ್ನಾರವೂ, ಶುದ್ದಿ ವೈವಿಧ್ಯಕರವಾಗಿ ಬತ್ತು. ಅಲ್ಲದೋ?

      ಜೋಯಿಶಪ್ಪಚ್ಚಿ ಸಿಕ್ಕಿದ್ದರ್ಲಿ ಈ ಶುದ್ದಿ ಬಂತದಾ! 🙂

  8. ಪಂಚಾಂಗವ ಅರ್ಥ ಮಾಡಿಗೊಂಬಲೆ, ಮೂಲ ಪಾಠವ ಎಲ್ಲರಿಂಗೂ ಅರ್ಥ ಆವ್ತ ಹಾಂಗೆ ಚೆಂದಕೆ ವಿವರಿಸಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ.
    ಇನ್ನು ಮೀನ ಮೇಷ ಎಣ್ಸೆಕ್ಕು ಹೇಳಿ ಇಲ್ಲೆ.
    ಸಂಗ್ರಹ ಯೋಗ್ಯ ಲೇಖನ.

    1. ಶರ್ಮಪ್ಪಚ್ಚೀ..
      ನಮ್ಮ ಸಮಾಜದ ಮಾಣಿ-ಕೂಸುಗೊ ಜಾತಕವನ್ನೂ ಅವ್ವವ್ವೇ ನೋಡಿಗೊಳ್ತ ಹಾಂಗಾದರೆ ಎಷ್ಟು ಚೆಂದ ಅಲ್ಲದೋ? 🙂

  9. ಲಾವಂಚ ನೀರು ಕುಡ್ಕೊಂಡು ಹೇಳಿದ ಶುದ್ದಿಗೆ ಮದಾಲು ಒಂದು ಒಪ್ಪ.
    ಕಷ್ಟ ಹೇಳಿ ಗ್ರೇಶಿಗೊಂಡಿದ್ದ ಒಂದು ವಸ್ತುವಿನ ಅವರದ್ದೇ ಆದ ವಿಧಾನಲ್ಲಿ ಹೇಳಿಕೊಟ್ಟು ಮಕ್ಕೊಗೆಲ್ಲ ಬಹುಸುಲಾಬ ಮಾಡಿತೋರುಸುತ್ತದು ಜೋಯಿಶಪ್ಪಚ್ಚಿಯ ವಿಧಾನವ ನಿಂಗಳೂ ಅನುಸರಿಸಿ ಬೈಲಿಂಗೆ ಬರದ್ದದು ಕಷ್ಟ ಹೇಳಿ ಗ್ರೇಶಿಗೊಂಡಿದ್ದ ಎನ್ನ ಹಾಂಗಿಪ್ಪವಕ್ಕೂ ರಜಾ ಸುಲಭಲ್ಲಿ ಅರ್ಥ ಆವ್ತಾಂಗೆ ಇದ್ದು. ಇದರ ಕೇಳಿದ ನಿಂಗೊಗೆ ಅರ್ತ ಆತೋ ಕೇಳಿರೆ ಮೇಗಂತಾಗಿ ಕೆಳಂತಾಗಿ ಎಡತ್ತು ಬಲತ್ತು ಒಟ್ಟಿಂಗೆ ತಲೆ ಆಡುಸೆಕ್ಕಷ್ಟೆ. ಕರ್ಕಾಟಕವೋ – ವೃಶ್ಚಿಕವೋ ಕಚ್ಚೆಕ್ಕಾರೆ ಮದಲೆ ಮೂರೋ-ನಾಕೋ ಸರ್ತಿ ಓದೆಕ್ಕೇ ಈಗಳೇ ಇದರ. ಚಾಂದ್ರಮಾನ , ಸೌರಮಾನಂದ ಹಿಡುದು ರಾಶಿಚಕ್ರ ಹೇಳಿ ಕೆಲವು ಮೂಲಭೂತ ವಿಷಯಂಗಳ ನಾವು ತಿಳ್ಕೊಳ್ಳೆಕ್ಕಾದ ಹಲವು ಉಪಯುಕ್ತ ಮಾಹಿತಿ ಇದರಲ್ಲಿ ಇದ್ದು ಹೇದು ಮೆಚ್ಚುಗೆ ಹೇಳುತ್ತು – ‘ಚೆನ್ನೈವಾಣಿ’

    1. ಶುದ್ದಿ ಹೇಳಿ ಅರ್ದ ಗಂಟೆಲೇ ಚೆನ್ನೈವಾಣಿ ಕೇಳಿ ಬಾರೀ ಕೊಶಿ ಆತಿದ.
      ಮೇಗೆ-ಕೆಳ-ಎಡತ್ತು ಬಲತ್ತು ತಲೆ ಆಡುಸುವಗ ತಲೆ ತಿರುಗದ್ದ ಹಾಂಗೆ ಜಾಗ್ರತೆ ಇದ್ದರೆ ಆತು ಚೆನ್ನೈಭಾವಾ.. 🙂

      ನಿಂಗಳೂ, ಡಾಮಹೇಶಣ್ಣನೂ ಕೂಡಿ ಸಂಸ್ಕೃತ ಕಲಿಶುವಾಗ, ಜ್ಯೋತಿಷ್ಯವೂ ಒಟ್ಟಿಂಗೆ ಸುರುಮಾಡುವನೋ ಕಂಡತ್ತಿದಾ, ಹಾಂಗೆ ಈ ಶುದ್ದಿ ಹೇಳಿದ್ದು! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×