Oppanna.com

ಕಣ್ಯಾರ ದೇವಸ್ಥಾನ ಒಳಿಗೊ ಭಾವಯ್ಯ?

ಬರದೋರು :   ಗೋಪಾಲಣ್ಣ    on   15/01/2012    13 ಒಪ್ಪಂಗೊ

ಗೋಪಾಲಣ್ಣ

ಕಣ್ಯಾರಲ್ಲಿ ,ಆಸುಪಾಸಿನ ಎಲ್ಲಾ ಜನರ ಮನಸ್ಸಿಲಿ ತುಂಬಿದ ಪ್ರಶ್ನೆ ಇದು.
ಇದಕ್ಕೆ ಉತ್ತರ ಕೊಡುದು -“ದೇವಸ್ಥಾನ ಹೋಗ-ಎಂತಾರೂ ಮಾಡಿ ದೇವರು ತಪ್ಪುಸುಗು”
ಹೇಂಗೆ ತಪ್ಪುಸುಗು? ಎಂತ ಪರಿಹಾರ? ತಲೆಗೆ ಹೋವುತ್ತಿಲ್ಲೆ.
ಕಣ್ಯಾರ ದೇವಸ್ಥಾನ-ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿ -ಅದರ ಕರೆಲೇ ಇಪ್ಪ ರಾಷ್ಟ್ರೀಯ ಹೆದ್ದಾರಿ ೬೬ ರ ಅಗಲ ಮಾಡುವ ಕೆಲಸಲ್ಲಿ ನೆಲಸಮ ಆವುತ್ತು,ಈ ಬಗ್ಗೆ ಅಧಿಸೂಚನೆ ಆವುತ್ತು ಹೇಳಿ ಸುದ್ದಿ.[ಕಣ್ಯಾರ ಬಗ್ಗೆ ಪರಿಚಯ ಶರ್ಮಪ್ಪಚ್ಚಿ ಬರದ್ದವು-ಅದರ ನೋಡಲಕ್ಕು]
೧೯೬೦ರ ದಶಕಲ್ಲಿ ಹೆದ್ದಾರಿಯ ಮಾಡುವಾಗ ಆವಗ ಬೇಕಾಷ್ಟು ಅಗಲ ಮಾಡಿದ್ದವು. ಆವಗ ಅಡಿಗಳ[ಮೇಲುಶಾಂತಿ ಅರ್ಚಕ ಶಂಕರನಾರಾಯಣ ಅಡಿಗ] ಮನೆ ಇದ್ದ ಜಾಗ ಹೆದ್ದಾರಿಗೆ ಹೋಯಿದು,ಮತ್ತೆ ಅಡಿಗಳಿಂಗೆ ದೇವಸ್ಥಾನದ ಹತ್ತರೆ ಬೇರೆ ಮನೆ ಆತು.ಈಗ ದಾರಿ ಅಗಲ ಮಾಡುವಾಗ ದೇವರ ಮನೆಗೇ ಬಂತು ಕುತ್ತು!
ಇದರ ಬಗ್ಗೆ ಊರವು ಪ್ರತಿಭಟನೆಗೆ ಮುಂದಾಯಿದವು.ಈಗ ತಾ ೧೪ ಮಕರ ಸಂಕ್ರಾಂತಿ ಲಾಗಾಯ್ತು ದೇವಸ್ಥಾನಲ್ಲಿ ಆಯನ[ಐದು ದಿನದ ಜಾತ್ರೆ].ಪ್ರಸಿದ್ಧವಾದ ಬೆಡಿ ತಾ ೧೭ಕ್ಕೆ.ಯಾವ ಆಸ್ತಿ ಇಲ್ಲದ ಗೋಪಾಲಕೃಷ್ಣ ದೇವರಿಂಗೆ ಆಸ್ತಿಕರೇ ಆಸ್ತಿ.ಅತಿ ವೈಭವಂದ ನಡೆವ ಜಾತ್ರೆ ಭಕ್ತ ಜನರ ಸಹಕಾರಂದ ನಡೆತ್ತಾ ಇದ್ದು.ಎಷ್ಟೋ ವರ್ಷಂದ,ವರ್ಷಂದ ವರ್ಷಕ್ಕೆ ದೊಡ್ಡ ಮಟ್ಟಿಲಿ!
ಈಗ ಶಾಂತವಾದ ಕೆರೆಗೆ ದೊಡ್ಡ ಬಂಡೆಕಲ್ಲು ಎತ್ತಿ ಹಾಕಿದ ಹಾಂಗೆ ಈ ಕಠೋರ ವಾರ್ತೆ ಬಯಿಂದು.
ಈ ದೇವಸ್ಥಾನ ಎಂತದು?
******
ಪೌರಾಣಿಕ ಹಿನ್ನೆಲೆ-
ಕಣ್ವ ಋಷಿಗೆ ತ್ರೇತಾಯುಗಲ್ಲಿ ರಾಮಂಗೆ ಅಭಿಷೇಕ ಮಾಡುಲೆ ಮನಸ್ಸು. ಲಂಕೆಂದ ಬಪ್ಪಾಗ ಅಭಿಷೇಕ ಮಾಡು ಹೇಳಿದ ರಾಮ. ಬಪ್ಪಾಗ ರಾಮ ಇಲ್ಲಿ ಬಕ್ಕು ಹೇಳಿ ಕಣ್ವ ಕುಂಭಲ್ಲಿ ನೀರು ತುಂಬಿಸಿ ಕಾದ.ಆದರೆ ರಾಮ ಪುಷ್ಪಕವಿಮಾನಲ್ಲಿ ಹೋದ,ಅಯೋಧ್ಯೆಗೆ.
ಮತ್ತೆ ದ್ವಾಪರಲ್ಲಿ ಕೃಷ್ಣ ಇಪ್ಪ ದ್ವಾರಕೆಗೆ ಹೋಗಿ,ಅಭಿಷೇಕ ಮಾಡುಲೆ ಹೆರಟ.ಆಗ ಕೃಷ್ಣ -“ಇದಾ,ಇದು ಎನ್ನ ಮೂರ್ತಿ ,ಆನು ಮಥುರೆಗೆ ಹೆರಡುವಾಗ ಎನ್ನ ಸಾಕಬ್ಬೆಗೆ -ಯಶೋದೆಗೆ-ಕೊಟ್ಟ ಮೂರ್ತಿ.ಇದರ ಒಂದು ಲಾಯ್ಕ ಜಾಗಲ್ಲಿ ಮಡುಗಿ,ಅಭಿಷೇಕ ಮಾಡಿ” ಹೇಳಿ ಕೊಟ್ಟ.
ಅದೇ ಮೂರ್ತಿಯ ಈಗಾಣ ಕುಂಬ್ಳೆಲಿ ಆ ಕಣ್ವ ಸ್ಥಾಪಿಸಿದ.ಅಭಿಷೇಕ ಮಾಡಿದ.ಆ ಮಂತ್ರೋದಕ ಹರಿದು ಹೊಳೆ ಆತು.ಕುಂಭಂದ ಬಂದ ಹೊಳೆ ಕುಂಭ ಹೊಳೆ ಆತು.ಊರಿಂಗೆ ಕುಂಬ್ಳೆ ,ಕುಂಬಳೆ ಹೇಳಿ ಹೆಸರಾತು.ಕಣ್ವಪುರ,ಕಣಿಪುರ,ಕಣಿಯಾರ,ಕಣ್ಯಾರ ಹೇಳಿ ಊರಿಂಗೆ ಹೆಸರಾತು.ಶ್ರೀ ಬಾಲಗೋಪಾಲ ಇಲ್ಲಿ ನೆಲೆಆದ,ಊರಿಂಗೆ ಬೆಲೆ ಬಂದದೇ ಅವಂದ.
ಇಲ್ಯಾಣ ಧ್ಯಾನ ಶ್ಲೋಕಲ್ಲಿ ದೇವರ ವರ್ಣನೆ-
ಬಾಲಾಯ ನೀಲವಪುಷೇ ನವಕಿಂಕಿಣೀಕ
ಜಾಲಾಭಿರಾಮ ಜಘನಾಯ ದಿಗಂಬರಾಯ
ಶಾರ್ದೂಲ ದಿವ್ಯನಖ ಭೂಷಣಭೂಷಿತಾಯ
ನಂದಾತ್ಮಜಾಯ ನವನೀತಮುಷೇ ನಮಸ್ತೇ
[ಬಾಲಕ,ನೀಲವರ್ಣದಶರೀರ,ಗೆಜ್ಜೆಗಳ ಮಾಲೆಯ ಸೊಂಟಲ್ಲಿ ಹೊಂದಿದ ದಿಗಂಬರ,ನಂದಗೋಪನ ಮಗ,ಬೆಣ್ಣೆ ಕಳ್ಳ -ಇಂತವಂಗೆ ನಮಸ್ಕಾರ]
*****
ಚಾರಿತ್ರಿಕ ಹಿನ್ನೆಲೆ-
ಕೇರಳ ಕಮ್ಯೂನಿಷ್ಟರ ನಾಡು.ಪುರಾಣ ಕತೆ ಸರಿ ಅಲ್ಲ ಹೇಳುಗು,ಹೋಗಲಿ,ಅವರ ಇಷ್ಟ.
ಕದಂಬ ವಂಶದ ರಾಜ ಒಬ್ಬ [ಮಯೂರ ವರ್ಮ ಹೇಳಿ ]ಇಲ್ಲಿ ಬಪ್ಪಾಗ ಅವನ ಮಗಳು ಇಲ್ಲಿ ಹೊಳೆಲಿ ಮಿಂದು ಮೂರ್ಛಿತೆ ಆವುತ್ತು.ಅದರ ಗುಣ ಮಾಡುಲೆ ಆರಿಂಗೂ ಆಗದ್ದೆ,ಕಡೆಂಗೆ ತೌಳವ ಬ್ರಾಹ್ಮಣ ಒಬ್ಬ ಗುಣ ಮಾಡುತ್ತ.ಅವಂಗೆ ರಾಜಕುಮಾರಿಯ ಮದುವೆ ಮಾಡಿ ಕೊಡುತ್ತ.ಅವರ ಮಗನೇ ಜಯಸಿಂಹ.ಅವಂಗೆ ಕುಂಬಳೆ ಸೀಮೆಯ ಪಟ್ಟ ಕಟ್ಟುತ್ತವು-ಆ ಕದಂಬ ರಾಜ.[ಸುಮಾರು ೧೦-೧೧ನೇ ಶತಮಾನ].ಒಬ್ಬ ಜಯಸಿಂಹ ರಾಜನ ತಂಗೆಗೆ ಮಕ್ಕೊ ಇಲ್ಲದ್ದೆ ,ಆ ಮೇಲೆ ಈ ದೇವರ ಅನುಗ್ರಹಂದ ಸಂತಾನ ಆತು -ಹೇಳಿಯೂ ಕತೆ ಇದ್ದು.
ಅವರ ವಂಶದವು ಅಳಿಯ ಸಂತಾನ ಪದ್ಧತಿಲಿ ಈ ಸೀಮೆಯ ಆಳುತ್ತ ಬಂದವು.ಅವರ ರಾಜಧಾನಿ ಕುಂಬಳೆಲಿ ಇತ್ತು-ಕೋಟೆಯೂ ಇತ್ತು.ಈಗಲೂ ಅದರ ಅವಶೇಷ ಇದ್ದು.
ಮತ್ತೆ ಕೆಲವು ಕಾಲಾನಂತರ ಶತ್ರುಗಳ ಬಾಧೆಂದ ಹೇಳಿ ಕಾಣುತ್ತು, ಅವು ಮಾಯಿಪ್ಪಾಡಿಗೆ ಹೋವುತ್ತವು.ಈಗಲೂ ರಾಜವಂಶಸ್ಥರು ಅಲ್ಲಿ ಇದ್ದವು.ಅವರ ಚರಿತ್ರೆ ಬಗ್ಗೆ ಲಿಖಿತ ದಾಖಲೆ,ದಂತ ಕತೆಗೊ ತುಂಬಾ ಇದ್ದು.ಮಾಯಿಪ್ಪಾಡಿ ಅರಸರ ಪಟ್ಟಾಭಿಷೇಕ ಇಲ್ಯಾಣ ವಸಂತ ಮಂಟಪಲ್ಲಿ ಆಗಿಕೊಂಡಿತ್ತಡ.
ರಾಜವಂಶಸ್ಥರೇ ಈ ದೇವಸ್ಥಾನದ ಆನುವಂಶಿಕ ಮೊಕ್ತೇಸರರು.ಅಡೂರು,ಮಧೂರು,ಕಾವು ,ಕಣ್ಯಾರ ನಾಕೂ ದೇವಸ್ಥಾನ[ಸೀಮೆಯ ಮುಖ್ಯ ಶ್ರದ್ಧಾ ಕೇಂದ್ರಂಗೊ] ಅವರದ್ದೇ,ಅವರ ಹೆಸರಿಲೇ ನಡೆವದು-ಸ್ವಾತಂತ್ರ್ಯಾನಂತರ ಆಡಳಿತೆ ವ್ಯವಸ್ಥೆ ಬೇರೆ ಆದರೂ.ಈ ದೇಗುಲದ ಭಕ್ತವೃಂದ ಸತತವಾಗಿ ಆರ್ಥಿಕ ಸಹಾಯ ಕೊಟ್ಟು,ಕ್ಷೇತ್ರವ ರಕ್ಷಿಸಿದ್ದು.ಇಲ್ಲಿನ ಅಡಿಗಳಕ್ಕೊ ಬಹಳ ಉತ್ತಮ ರೀತಿಲಿ ಪೂಜೆ,ಅಲಂಕಾರ,ಉತ್ಸವದ ಕಟ್ಟು ಕಟ್ಟಲೆಗೊ,ಅವಲಕ್ಕಿ ಪ್ರಸಾದದ ತಯಾರಿ ಎಲ್ಲಾ ಮಾಡಿ ಅವಕ್ಕೂ ಹೆಸರು ಬಪ್ಪ ಹಾಂಗೆ ಕ್ಷೇತ್ರವ ಮುನ್ನಡೆಸಿದ್ದವು. ದೇವರ ಹೊತ್ತು ,ಉತ್ಸವ ಮಾಡುವಲ್ಲಿ ಆ ಶೋಭಾಯಮಾನವಾದ ಅಲಂಕಾರಲ್ಲಿ,ಮಟ್ಟುಗಳಲ್ಲಿ ಇಲ್ಯಾಣ ಅಡಿಗಳ ಸಾಧನೆಗಳ ಆಸುಪಾಸಿನವೆಲ್ಲಾ ಹೊಗಳುತ್ತವು. ಸರಕಾರ ಕ್ಷೇತ್ರದ ಆಡಳಿತೆಯ ಕೈಗೆ ತೆಕ್ಕೊಂಬ ಮೊದಲೇ ಇಲ್ಲಿ ಸುವ್ಯವಸ್ಥಿತವಾದ ಆಡಳಿತ ಕ್ರಮ ಇತ್ತು.[ಕೆಲವು ಸಲ ಸಣ್ಣ ಸಣ್ಣ ರಗಳೆಗೊ,ಭಿನ್ನಮತ ಇದ್ದದು ಬಿಟ್ಟರೆ].
ಆಸುಪಾಸಿನ ಕೃಷಿಕರು ದನದ ಕಂಜಿ ಹುಟ್ಟಿ ಶುದ್ಧ ಆದ ದಿನ ಇಲ್ಲಿಗೆ ಹಾಲು ತಂದು ಕೊಡುತ್ತವು.ದನಂಗೊಕ್ಕೆ ಸೌಖ್ಯ ಇಲ್ಲದ್ದರೆ,ಹರಕೆ ಹೊತ್ತು ಕಂಜಿಗಳ ದೇವರಿಂಗೆ ಒಪ್ಪಿಸುಗು.ಕಂಜಿಗಳ ಸಾಂಕಲೆ ಇಲ್ಲಿ ವ್ಯವಸ್ತೆ ಇಲ್ಲದ್ದ ಕಾರಣ ,ಕಂಜಿಗಳ ಏಲಂ ಮಾಡಿಕೊಂಡಿತ್ತಿದ್ದವು,ಮತ್ತೆ ಅದರ ಕೆಲವರು ದುರುಪಯೋಗ ಮಾಡಿದ ಕಾರಣ-ಏಲಂ ನಿಲ್ಲಿಸಿ ತುಂಬಾ ವರ್ಷ ಆತು.ಈಗ ಕೃಷಿಕರು ಒಪ್ಪಿಸಲೆ ಸಂಕಲ್ಪ ಮಾಡಿದ ಕಂಜಿಗಳ ಬಾಬತ್ತು ಮೌಲ್ಯ ಮಾತ್ರ ಕೊಡುದು-ಹೇಳಿ ಮಾಡಿದ್ದವು.
ಯಕ್ಷಗಾನದ ಮೇರು ವ್ಯಕ್ತಿ ಪಾರ್ತಿಸುಬ್ಬ ಈ ದೇವರನ್ನೇ ಸ್ತುತಿಸಿ,ಪ್ರಸಂಗ ಬರದ್ದ.ತನ್ನ ರಾಮಾಯಣ ಪ್ರಸಂಗ ಸರಣಿಯ ಸುರುವಿಲಿ-
ಧಾತ್ರೀಗುತ್ತಮ ಕಣ್ವ ನಾಮ ಪುರದೊಳ್ ನಿಂದಿರ್ದ ಶ್ರೀ ಕೃಷ್ಣನಾ
ತತ್ಪಾದಾಂಬುಜ ದಿವ್ಯನಾಮ ಬಲದಿಂದೀ ಪಾರ್ವತೀನಂದನಂ
ಬತ್ತೀಸಾಕೃತಿ ರಾಗ ತಾಳ ವಿಧದಿಂ ರಾಮಾಯಣಂ ಪೇಳ್ವುದಂ
ಭಕ್ತಿಧ್ಯಾನದಿ ಕೇಳ್ದು ಪುಣ್ಯಕತೆಯಂ ಸಂತೋಷಮಂ ತಾಳ್ವುದು॥-ಹೇಳಿ ಹಾಡಿದ್ದ.
ಈ ಕ್ಷೇತ್ರಲ್ಲಿ,ಹತ್ತಿರವೇ ಇಪ್ಪ ಮೈದಾನಲ್ಲಿ ಎಷ್ಟು ಯಕ್ಷಗಾನ ಆಯಿಕೊಂಡಿತ್ತು,ಈ ಕಣ್ಯಾರಲ್ಲಿ ಎಷ್ಟು ಜನ ವೇಷಧಾರಿಗೊ ಇತ್ತಿದ್ದವು-ಹಳಬರ ಹತ್ತರೆ ಕೇಳಿ ನೋಡೆಕ್ಕು.ಈಗ ಆಧುನಿಕತೆಯ ಕಾರಣಂದಾಗಿ ಕಣ್ಯಾರಲ್ಲಿ ಯಕ್ಷಗಾನ ಕ್ಷೀಣ ಆವುತ್ತಾ ಇದ್ದು.ಮಲಯಾಳೀಕರಣ ಆವುತ್ತಾ ಇದ್ದು.
ಈ ದೇವಸ್ಥಾನವೂ ಇಲ್ಲದ್ದರೆ-ಗ್ರೇಶಲೆ ಎಡಿಯ.ನಮ್ಮ ಧಾರ್ಮಿಕ ಚಟುವಟಿಕೆಗೆ ದೊಡ್ಡ ಪೆಟ್ಟು ಬೀಳುಗು.
*****
ಈಗ-ಹೆದ್ದಾರಿ ಅಗಲ ಮಾಡುದು ಅಗತ್ಯ.
ಆದರೆ,ದೇವಸ್ಥಾನಕ್ಕೆ ಅಡ್ಡಿ ಆಗದ್ದ ಹಾಂಗೆ ಮಾಡಲೆ ಎಡಿಯದೊ?
ಈ ಎಂಜಿನಿಯರಿಂಗ್ ಯುಗಲ್ಲಿ ಇದು ಅಸಾಧ್ಯವೊ? ಅಲ್ಲ.
ಈಗ ಇಪ್ಪ ಹೆದ್ದಾರಿಯ ಏಕಮುಖ ದಾರಿಯಾಗಿ ಮಡಿಕ್ಕೊಂಡು,ಕುಂಬಳೆಹೊಳೆಗೆ ಈಗ ಇಪ್ಪ ಸಂಕಂದ ರಜ ಮೇಲೆ ಇನ್ನೊಂದು ಸೇತುವೆ ಕಟ್ಟಿಸಿ,ಮತ್ತೊಂದು ಏಕಮುಖ ದಾರಿ ದೇವಸ್ಥಾನದ ಮೂಡುಹೊಡೆಲಿ ಪೇಟೆಗೆ ಬಪ್ಪ ಹಾಂಗೆ ಮಾಡೆಕ್ಕು.ಆದರೆ,ತುಂಬಾ ಅಂಗಡಿಗೊ,ಖಾಸಗಿ ಜಾಗೆ ಹೋಕು.
ಊರವು ಈ ಪರ್ಯಾಯ ಚಿಂತನೆ ಮಾಡಿ,ದೇವಸ್ಥಾನ ಒಳಿಶುವ ಬಗ್ಗೆ ಹೋರಾಟ ಮಾಡೆಕ್ಕು.
ಕರ್ಚಿ ಅಕ್ಕು,ಆದರೆ ಕಣ್ಯಾರ ದೇವಸ್ಥಾನ,ಮೇಲೆಂದ ಇಳಿವಾಗಲೇ ಕಣ್ಣಿಂಗೆ ಕಾಣುವ ಚೆಂದದ ದೀಪಮಾಲೆ-ಆ ವಾತಾವರಣ ಬೇರೆ ಕಡೆ ನಿರ್ಮಾಣ ಅಪ್ಪ ದೇವಸ್ಥಾನಲ್ಲಿ ಸಿಕ್ಕುಗೊ?ಅದರ ಒಳಿಶೆಕ್ಕು,ಒಳಿಶಲೇ ಬೇಕು-
ಎಂತಗೆ?
ಆ ದೇವಸ್ಥಾನ ಇಲ್ಲದ್ದ ಕಣ್ಯಾರ ,ಕಣ್ಯಾರ ಆಗಿ ಇರ.

13 thoughts on “ಕಣ್ಯಾರ ದೇವಸ್ಥಾನ ಒಳಿಗೊ ಭಾವಯ್ಯ?

  1. ನಾವೆಲ್ಲಾ ಕೃಷ್ಣನ ಇಷ್ಟೂ ಭಕ್ತಿಲ್ಲಿ ಪ್ರಾರ್ಥಿಸಿರೆ ಖಂಡಿತ ಅವ ಕಣ್ಯಾರ ಬಿಟ್ಟು ಹೋಗ…

  2. ಇದು ಸಾಧ್ಯ ಇದ್ದೊ? ಜೆನರ ಅಭಿಪ್ರಾಯ ಸ೦ಗ್ರಹ ಮಾಡದ್ದೆ ಏಕಾಏಕಿ ದೇವಸ್ಥಾನವ ಹೊಡಿಮಾಡಿ ಮಾರ್ಗ ಅಗಲ ಮಾಡುವಷ್ಟು ಧೈರ್ಯ ಈ ರಾಜಕಾರಣಿಗೊಕ್ಕೆ ಇಕ್ಕೊ?ಅಧಿಸೂಚನೆ ಬ೦ದರೆ ಎಲ್ಲೋರು ಒಗ್ಗಟ್ಟಾಗಿ ಧಿಕ್ಕರಿಸೆಕ್ಕು.

    1. ತಾ.೨೪ಕ್ಕೆ ಕಾಸರಗೋಡಿಲಿ ಈ ಬಗ್ಗೆ ಪ್ರತಿಭಟನೆ ಮಾಡುತ್ತವಡ.

  3. ಹೆದ್ದಾರಿಗೆ ಬೇರೆ ವೆವಸ್ಥೆ ಮಾಡಿ, ದೇವಸ್ಥಾನ ಅಲ್ಲಿಯೇ ಒಳಿಯೆಕ್ಕು. ತಾಂತ್ರಿಕತೆ ಇಷ್ಟು ಮುಂದುವರಿದಿಪ್ಪಗ ಅದು ಖಂಡಿತಾ ಅಸಾಧ್ಯ ಆಗ. ಮಾಡುತ್ತ ಸಂಕಲ್ಪ ಬೇಕು. ಇದಕ್ಕಾಗಿ ಒತ್ತಾಯ ಕೂಡಾ ‘ಕಮ್ಮಿನಿಷ್ಟಂಗಳ’ ರಾಜ್ಯಲ್ಲಿ ಅಗತ್ಯವೂ ಇದ್ದು.
    [ಆ ದೇವಸ್ಥಾನ ಇಲ್ಲದ್ದ ಕಣ್ಯಾರ ,ಕಣ್ಯಾರ ಆಗಿ ಇರ.] ಸತ್ಯವಾದ ಮಾತು.
    ದೇವಸ್ಥಾನದ ಐತಿಹಾಸಿಕ ಮತ್ತೆ ಪೌರಾಣಿಕ ಹಿನ್ನೆಲೆಲಿ ಲೇಖನ ಲಾಯಿಕ ಆಯಿದು.

  4. I too agree with Shri YV Bhat. As he suggested, if they really want to do National Highway expansion, then they has to find a suitable remedy/solution with affecting the Lord Krishna Temple at Kumble. As per my point of opinion they can take a turn from Siriya or Arikkadi towards seashore and build a sealink (Like Bandra-Worli Sealink at Mumbai). But actual cost may increase, at the same time we can protect Lord Krishna Temple Kumblel.

    Seshadri Srinivasan he is the man behind Bandra worli sealink Project. Consult him or make the responsible authority to consult him, take opinion in this regard and go head.

    Think it off and convenience the policy makers, politicians, NH authority officilas etc,…..

  5. ನಮ್ಫ್ಮ ದೇವಸ್ಠಾನಂಗಳ ಒಂದೊಂದಾಗಿ ನಾಶಮಾಡುವ ದೊಡ್ಡ ಕಾರಸ್ತಾನ ಒಂದರ ಅಂಗ ಆದಿಕ್ಕೋ ಇದು? ಇಲ್ಲದ್ದರೆ ಮಾರ್ಗ ರಜಾ ಅತ್ಲಾಗಿ ಹಾಕುಲೆ ಎಡಿಯದ?

  6. ರಜ್ಜ ಸಮಯ ಮೊದಲು ಶೊರ್ನುರ್ ಮನ್ಗಲೊರು ರೈಲು ಮಾರ್ಗ ಮಾದುವಗ ೧೭ ದೆವಸ್ಥನ ನೆಲಸಮ ಅಯಿದಡ.

  7. It is too bad. All the members of this site should fight. I am the first guy to join. In this century it is shame on the part of engineers if they cannot find out an alternate solution. If necessary they can bring in a bend (curve) and continue the road laying. If they cannot all of us go and stop the work .Before going for a conflicting type of protest let us make a representation and see.Encourage people to participate in the struggle.

    It should be a single line resolution NO ROAD BY DEMOLISHING THE TEMPLE. Road work will continue after worshiping Lord Krishna at Kumble. Come and join the team.

    1. ವೈ.ವಿ. ಮಾವನ ಅಭಿಮತ ನ್ಯಾಯವಾದ್ದು. ಎನ್ನ ಸಂಪೂರ್ಣ ಪ್ರೋತ್ಸಾಹ/ಬೆಂಬಲ ಮಾವನೊಟ್ಟಿಂಗೆ ಖಂಡಿತಾ ಇದ್ದು. ವೈ.ವಿ.ಮಾವ ಕಾರ್ಯಪ್ರವೃತ್ತ ಆದರೆ ನಮ್ಮಿಂದ ಎಂತ ಆಯೇಕು ಹೇಳೀರಾತು.

      1. {ವೈ.ವಿ. ಮಾವನ ಅಭಿಮತ ನ್ಯಾಯವಾದ್ದು}
        ನಾವು ಒಟ್ಟಿಂಗೆ ಇದ್ದು..ಭಾವ

  8. ದೇವಸ್ಥಾನ ಇಪ್ಪ ಜಾಗ್ಗೆ ಹೆದ್ದಾರಿ ತಲುಪಲಪ್ಪಗ ಒ೦ದು ಫ್ಲೈ ಓವರ್ ಮಾಡ್ಲಕ್ಕು, ಅ೦ದರೆ ಆರ ಜಾಗೆಯುದೆ ಹೋಗ, ಅಗತ್ಯ ಇಪ್ಪಷ್ಟು ಅಗಲವುದೆ ಮಾಡ್ಲಕ್ಕು. ಚೂರು ಖರ್ಚು ಜಾಸ್ತಿ ಅಕ್ಕಾಯ್ಕು. ಆದರೆ ಒಟ್ಟಾರೆ ಬಜೆಟ್-ನ ಮೇಲೆ ನೋಡುವಗ ಈ ಖರ್ಚು ದೊಡ್ಡ ಖರ್ಚು ಎ೦ತ ಅಲ್ಲ.

  9. ಇದರ ಬಗ್ಗೆ ಆಲೋಚನೆ ಮಾಡಿತ್ತಿದ್ದವು.ಪೇಟೆಯ ನಡುವಿಲೆ ಮಾರ್ಗ ಮಾಡುದು ಹೇಳಿ..ಲೇಖನ ಲಾಯ್ಕಾಯ್ದು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×