- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಗುಜ್ಜೆ ಕೆರಮಣೆ – ಅಕ್ಷರಂದ ಪದ !
ನಿಂಗೊಗೇನಾರು ಅರ್ಥ ಆತೋ ? . ಉಮ್ಮಾ, ಎನ ಗೊಂತಾಯ್ದಿಲ್ಲೆ.
ಸಂಗತಿ ಎಂತರ ಹೇಳಿರೆ, ಮನ್ನೆ ಬೋಚಬಾವ° ಅಡ್ಕತ್ತಿಮಾರು ಮಾವನ ತೋಟದ ಬೇಲಿಕರೇಲಿದ್ದ ಮರಲ್ಲಿ ಆದ ಗುಜ್ಜೆ ಕೊಯ್ದು, ಹೆಗಲ್ಲಿ ಏರಿಸಿಗೊಂಡು ಬೈಲಕರೇಲಿ ನಡಕೊಂಡು ಮನಗೆತ್ತುವಾಗ ಮೂರ್ಸಂದಿ ಆತಡ. ಮನಗೆತ್ತುವಾಗ ಕರೆಂಟು ಹೋಗಲಾಗಿ ಜಗಿಲಕರೇಲಿ ಗುಜ್ಜೆ ಮಡುಗುತ್ತೆ ಹೇಳಿ ಹೋದಪ್ಪಗ ಕತ್ತಲೆಲಿ ಕೆರಮಣೆ ತಾಗಿ ಬಿದ್ದು ಹತ್ರೆ ಇಪ್ಪದೆಲ್ಲ ಚದುರಿ ಚಾಂದ್ರಾಣ ಆತು. ಇರ್ಲಿ., ಮತ್ತೆ ಎದ್ದು ಸರಿಮಾಡಿ ಆತು ಅದರ. ಪುಣ್ಯಕ್ಕೆ ಗಾಯ ಏನೂ ಆಯ್ದಿಲ್ಲೆ ಆರಿಂಗೂ.
ಹಾಂಗೇ, ಇದಾ, ಇಲ್ಲಿ ನಿಂಗಳತ್ರೆ ಎಂತದೋ ಮುಖ್ಯ ವಿಷಯ ಹೇಳೆಕು ಹೇಳಿ ಬಂದು ಬರವಾಗ ಕೈ ತಪ್ಪಿ ಅಕ್ಷರಂಗೊ ಪದಂಗೊ ಚದುರಿ ಚಲ್ಲಾಪಿಲ್ಲಿ ಆತು. ಅದರ ಒಂದರಿ ಜೋಡುಸಿ ಸರಿಮಾಡಿ ಎಂತರ ಹೇಳ್ಳೆ ಬಂದದು ಹೇಳಿ ತಿಳಿಸುವಿರೊ!
“ಬೇಕು, ಬೇಕು, ಮೆಕೊಟ್ಟುಕಾಯಿಸೊಪ್ಪು.ಬೇಕುಮಣೆಕತ್ತಿಬೇಕೆಕೆರವಲೆನರವಲೆಗುಜ್ಜೆಒಗ್ಗರಣೆರವಿಗೆ”
ಸರಿ ಉತ್ತರ ಹೇಳಿದವಕ್ಕೆ ಬೆಳ್ಳುಳ್ಳಿ ಹಾಕದ್ದೆ ಗುಜ್ಜೆ ಬಿರಿಯಾಣಿ ಇನಾಮು.
ನವಗೆ ಒಗ್ಗರಣೆ ಬೇಕು, ಕಾಯಿ ಸೊಪ್ಪು ಬೇಕು, ಗುಜ್ಜೆ ಕೊರವಲೆ ಮೆಟ್ಟುಕತ್ತಿ ಕೆರಮಣೆ ಬೇಕೆ ಬೇಕು…
ಇದಾ ಲಿಸ್ಟು ಇಷ್ಟು ಉದ್ದ ಆದರೆ, ಪುಳ್ಳಿಯ ಮದುವೆ ಗೌಜಿಲಿ ಇಪ್ಪ ಬಂಡಾಡಿ ಅಜ್ಜಿ ಕೋಲು ಹಿಡುಕ್ಕೊಂಡು ಬಕ್ಕು ಭಾವಾ..
ಈಗಳೇ ಹೇಳಿದ್ದೆ…
ಮತ್ತೆ ಹೇಳಿದ್ದಾ ಇಲ್ಲೆ ಹೇಳಿಕ್ಕುದು ಬೇಡ.. ಹಾಂ..!! 😉
ಅಕ್ಕಕ್ಕು.!!
ಆದರೆ ಭಾವ, ಈಗ ಗುಜ್ಜೆ ಬಿರಿಯಾಣಿ ಎನಗೇ ಹೇಳ್ತನ್ನೇ ಶೇ.ಪುಳ್ಳಿ. ಎಂತ ಹೇಳ್ತೀ?!
ಅವ ಹಟ ಹಿಡುದರೆ ಇನ್ನೆಂತ ಮಾಡ್ಲೆಡಿತ್ತು?
ಶೇ ಭಾವಂಗೇ ಕೊಟ್ಟಿಕ್ಕುವೊ..
ಕೊಡೆಕೋ?!
“ಗುಜ್ಜೆ ಕೊರವಲೆ ಮೆಟ್ಟುಕತ್ತಿ ಬೇಕು, ಕಾಯಿ ಕೆರವಲೆ ಕೆರಮಣೆ ಬೇಕು, ಒಗ್ಗರಣಗೆ ಬೇಕು ಬೇವಿನಸೊಪ್ಪು.” ಪೂರ್ತಿ ಹೇಳಿದ್ದ ಇಲ್ಲೆ ಇದಾ.
‘ಕೆರವಲೆ’ ಶಬ್ದ ತಪ್ಪಿ ಹೋತು ಎನಗೆ..
ಛೇ…!!
ಕೊರವದರ್ಲೇ ಇತ್ತಿದ್ದೀರೊ!!
😉
ಏಭಾವಾ, ನಿಂಗೊ ಎರಡುಜೆನ ಮತ್ತ್ತೆ ಮಾತಾಡಿಯೊಳಿ ನವಗೆ ಬರೆಕಾದ್ದು ಬರೇಕು …..ಹ್ಮ್ಮ್
ಬಕ್ಕು ಬಾವಾ ಬಕ್ಕು.
ಪಷ್ಟಾಯ್ದು ನಿಂಗಳ ಪ್ರಯತ್ನ ಭಾವ. ಹತ್ತರತ್ರೆ ಬಂದ ಹಾಂಗೆ ಕಾಣುತ್ತು. ಇನ್ನೊಂದರಿ ಪ್ರಯತ್ನ ಮಾಡಿರೆ ಬಿರ್ಯಾಣಿ ನಿಂಗಳೇ ಹೊಡದಿಕ್ಕುವಿ ಕಾಣುತ್ತು ಎಲ್ಲೋರಿಂದ ಮದಲು.
ಅಕ್ಕಕ್ಕು ಬುಕ್ಕೊ ಬತ್ನಾಯೆಗ್ ದಾಲ ಇಜ್ಜಿ ಮಾಡಿಕ್ಕಿ.
ಏ ಭಾವಾ ಮೇಣ ತೊಳವಲೆ ಚಿಮಣಿ ಎಣ್ಣೆ ಬೇಡದೋ ಕಾಯಿಸೊಪ್ಪೇ ಸಾಕೋ , ಹೀಂಗೆ ಕೇಳೀರೆ ಮತ್ತೆ ಸಾಬೂನೂ ನಾವೇ ಕೊಡೆಕ್ಕಕ್ಕು….. ಎಂತ ಮಾಡುದಪ್ಪಾ…
ಏ ಭಾವಾ ಎಂತರ ಇದು ಪೂರಾ ರಚ್ಚಾ-ಪಚ್ಚಾ ಆಯಿದನ್ನೇ , ಕೆರಮಣೆ ತಾಂಟಿ ಬಿದ್ದರೆ ಹೀಂಗೂ ಆವುತ್ತೋ ಉಮ್ಮಪ್ಪ ನವಗರಡಿಯ. ಅದಪ್ಪು ಗುಜ್ಜೆ ಬಿರಿಯಾಣಿ ಮಾಡುಲೆ ಈ ಮೂರು ಸಾಮಾನು ಇದ್ದರೆ ಸಾಕಕ್ಕೋ ………