- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಹರೇ ರಾಮ.
ನಿನ್ನೆ ಮೊನ್ನೆಯಾಂಗೆ ಎಲ್ಲೋರನ್ನೂ ಕೇಳಿಗೊಂಡು ಇಂದ್ರಾಣ ಕಥೆಯ ಹೇಳ್ತೆ. ಇಂದುದೇ ಜಯ ವಿಜಯರ ಕಥೆ. ಅವಕ್ಕೆ ಮುಕ್ತಿ ಸಿಕ್ಕಿ ಅವು ಹರಿಯ ಸಾಮ್ರಾಜ್ಯದ ದ್ವಾರಪಾಲಕರಾದ ಕಥೆ.
ಗುರುಗಳ, ಪರಿವಾರದ ಅಣ್ಣಂದ್ರು ಶ್ರೀರಾಮಾಯಣ ಗ್ರಂಥದೊಟ್ಟಿಂಗೆ ಕರಕ್ಕೊಂಡು ಬಂದವು. ಗುರುಗೋ ಪುಷ್ಪಾರ್ಚನೆ ಮಾಡಿ ಪೀಠಾರೋಹಣ ಮಾಡಿದವು. ದಿನದ ಪ್ರಾಯೋಜಕರ ಬಪ್ಪಲೆ ಹೇಳಿ ಪುಷ್ಪಾರ್ಚನೆ ಮಾಡ್ಸಿದವು. ‘ಶ್ರೀರಾಮ ಜಯರಾಮ’ ಪದ್ಯದೊಟ್ಟಿಂಗೆ ರಾಮಾಯಣ ಗ್ರಂಥಕ್ಕೆ ಶ್ರೀಕರಾರ್ಚಿತ ಪೂಜೆಯೂ ನಡದತ್ತು. ನಂತರ ವಿದ್ವಾನಣ್ಣ ಇಂದಿನ ಕಥೆಯ ಬಗ್ಗೆ ಹೇಳಿ ರಾಮಾಯಣಲ್ಲಿ ರಾಮ ಹೇಳಿರೆ ಆನಂದ. ಆನಂದದ ಕಥೆಯ ಆನಂದಲ್ಲಿ ಕೇಳುವೋ. ಕಥೆ ಕೇಳುಲೆ ಸಾಧಾರಣ ಆದಿಕ್ಕು, ಆದರೆ ಅದರಲ್ಲಿಪ್ಪ ಅಸಾಧಾರಣ ವಿಷಯಂಗಳ ತಿಳ್ಕೊಳ್ಳೆಕ್ಕು. ಈ ರಾಮಕಥೆ ಕಲೆ, ಕಥೆಯ ಅನುಪಮ ಸಂಗಮ ಹೇಳಿ ಹೇಳಿದವು. “ಜಯ ಜಯ ಗುರುವರ, ಕರುಣಾಸಾಗರ” ಹೇಳ್ತ ಪದ್ಯದೊಟ್ಟಿಂಗೆ “ಗೋಕರ್ಣ ಗೆಣವತಿಯ ಮಹಾಬಲೇಶ್ವರನ “ ಸ್ಮರಿಸಿಯಪ್ಪಗ ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು. ಮುಂದಾಣದ್ದು ಇಂದ್ರಾಣ ಕಥೆ.
‘ಹರೇ ರಾಮ’ ಹೇಳಿ ಶುರು ಮಾಡಿದ ಗುರುಗೊ ನಿನ್ನೆಯ ಕಥೆಯ ಮುಂದುವರೆಸಿ ಜಯ ವಿಜಯರ ಮನಸ್ಸಿನ ವರ್ಣನೆ ಮಾಡ್ತಾ ಎರಡು ತಲೆ ಇಪ್ಪ ಗಂಡಬೇರುಂಡದ ಕಥೆಯ ಹೇಳಿದವು. ಆ ಪಕ್ಷಿಯ ಒಂದು ತಲೆಗೆ ಒಳ್ಳೆ ಹಣ್ಣು ಸಿಕ್ಕಿಯಪ್ಪಗ ಅದು ಇನ್ನೊಂದಕ್ಕೆ ಕೊಟ್ಟಿದಿಲ್ಲೆಡಾ. ಆ ದ್ವೇಷ ಸಾಧನೆಗೆ ಇನ್ನೊಂದು ತಲೆ ವಿಷದ ಹಣ್ಣು ಸಿಕ್ಕಿಯಪ್ಪಗ ಅದರ ತಿಂತೆ ಹೇಳಿ ಇನ್ನೊಂದು ತಲೆಗೆ ಹೆದರಿಸಿತ್ತಡ. ಹಾಂಗೆ ವಿಷದ ಹಣ್ಣು ತಿಂದು ಇಡೀ ದೇಹ ನಾಶ ಆತಡ.. ಇದರ ಹಾಂಗೇ ಎರಡು ದೇಹ ಒಂದೇ ಮನಸ್ಸು ಹೇಳ್ತ ಹಾಂಗಿದ್ದ ಜಯವಿಜಯರ ಸ್ಥಿತಿಯೂ ಹಾಂಗೆ ಆತು. ಅವು ಜಗಳ ಮಾಡಿಗೊಂಡದ್ದಕ್ಕೆ ಕಾರಣವಾದ ಕಥೆಯ ಹೇಳ್ತಾ, ಯಾಗಲ್ಲಿ ಪ್ರಮುಖವ್ಯಕ್ತಿಗೋ ಹೋತಾ, ಅಧ್ವರ್ಯ, ಉದ್ಗಾತ, ಬ್ರಹ್ಮ ಹೇಳಿ ಹೇಳಿದವು. ಅದರಲ್ಲಿ ಜಯ ವಿಜಯರಿಂಗೆ ಅಧ್ವರ್ಯವುದೇ ಬ್ರಹ್ಮ ಸ್ಥಾನವುದೇ ಸಿಕ್ಕಿತ್ತು. ಅದಕ್ಕೆ ತಕ್ಕದಾಗಿ ಅವಕ್ಕೆ ಸಿಕ್ಕಿದ ದಕ್ಷಿಣೆಗೆ ಜಗಳ ಆಡಿ ಅತ್ತಿತ್ತ ಶಾಪ ಕೊಟ್ಟುಗೊಂಡವು ಹೇಳಿ ವಿವರಿಸಿದವು.
ಯಾರೂ ಕಾಣದ್ದ ಜಾಗೆಲಿ ನಿಂದು ಕನ್ನಡಿಯ ನೋಡಿ ನಮ್ಮ ನಾವು ತಿದ್ದಿಗೊಳ್ತ ಹಾಂಗೆ, ರಾಮಾಯಣಾವುದೇ, ನಾವು ಮಾಡ್ಳೆ ಸಾಧ್ಯತೆ ಇಪ್ಪ ಅಲ್ಲದೇ ಮಾಡುವ ತಪ್ಪಿನ ನವಗೆ ತಿಳ್ಕೊಂಬಲೆ ಸಹಾಯ ಮಾಡ್ತು. ಯಾವುದೇ ಅಣ್ಣತಮ್ಮಂದ್ರ ಅಥವಾ ಸಂಬಂಧಿಕರ ನೋಡಿರುದೇ ಅವರ ಮನಸ್ಸಿಲಿಪ್ಪದು, ಬಪ್ಪದು – ‘ನಿನ್ನ ಮೇಲೆ ಪ್ರೀತಿ ಅಸ್ತಿ, ಆದರೆ, ಆಸ್ತಿಯ ಮೇಲೆ ರಜಾ ಜಾಸ್ತಿ’ ಹೇಳಿ ವ್ಯಂಗ್ಯ ರೀತಿಲಿ ಹೇಳಿದವು. ರಾಮ ಭರತರ ನಡುವಿನ ಬಾಂಧವ್ಯಕ್ಕೂ ಜಯವಿಜಯರ ನಡುವೆ ಇದ್ದ ಬಾಂಧವ್ಯಕ್ಕೂ ಹೋಲಿಸಿ ಅವರಿಬ್ಬರ ನಡುವಿನ ವ್ಯೆತ್ಯಾಸ ವಿವರಿಸಿದವು. “ರಾಮನುಂ ಭರತನುಂ ತಬ್ಬಿಕೊಡತ್ತಂದು” ಹೇಳ್ತ ಕಗ್ಗದ ಸಾಲಿನ ನೆನಪು ಮಾಡಿಗೊಂಡವು. ಅದರ ಪ್ರೇಮಕ್ಕ ಹಾಡಿರೆ ಗೋಪಣ್ಣ ತಬಲ, ಶ್ರೀಪಾದ ಮಾವ° ಹಾರ್ಮೋನಿಯಂ, ನೀರ್ನಳ್ಳಿ ಮಾವ° ಚಿತ್ರ ಬಿಡುಸಿದವು.
ಹಣವಿರುವುದು ಮನುಷ್ಯರಿಂಗೆ ಆದರೆ ಹಣಕ್ಕಾಗಿ ಮನುಷ್ಯರಪ್ಪಲಾಗ ಹೇಳಿ ಹೇಳಿದವು. ನಾವು ಶ್ರೀಪತಿಯ ಒಲುಶಿಗೊಂಡರೆ ಶ್ರೀಪತಿಯೊಟ್ಟಿಂಗೆ ಶ್ರೀಯೂ ಬಕ್ಕುಹೇಳಿರೆ ಐಶ್ವರ್ಯವೂ ಬಕ್ಕು ಆದರೆ ಹೆಂಡತಿಯೊಟ್ಟಿಂಗೆ ಬೇರವು ಹೋಪಗ ಹೇಂಗೆ ಸಿಟ್ಟು ಬತ್ತೋ ಹಾಂಗೇ ಯಾರಾರು ಐಶ್ವರ್ಯದ, ಶ್ರೀಯ ಹಿಂದೆ ಬಿದ್ದರೆ ಶ್ರೀಪತಿಗೆ ಕೋಪ ಬತ್ತು. ಅದು ಲೋಭಿಯ ನಾಶಕ್ಕೆ ದಾರಿ ಮಾಡಿಕೊಡುತ್ತು ಹೇಳಿದವು. ಇದು ಸ್ವಯಂ ಸೀತೆಗೂ ಅನುಭವ ಆಯಿದು. ಕನಕಮೃಗದ ಆಶೆಗೆ ಬಿದ್ದದಕ್ಕೆ ಅತ್ತ ರಾಮನೂ ಇಲ್ಲೆ, ಇತ್ತ ಸ್ವರ್ಣಜಿಂಕೆಯೂ ಇಲ್ಲೇಳಿ ಆತು ಹೇಳಿ ವಿವರಿಸಿದವು. ಹೃದಯಲ್ಲಿ ಶ್ರೀಪತಿಯು, ಪೆಟ್ಟಿಗೆಲಿ ಶ್ರೀಯು ಇಪ್ಪವರಲ್ಲಿ ಯಾರ ಭಾಗ್ಯ ದೊಡ್ಡದು ಹೇಳಿ ತುಲನೆ ಮಾಡಿರೆ! ಯಾರ ಭಾಗ್ಯ ದೊಡ್ಡದು? ಶ್ರೀಪತಿ ಒಲುದರೆ ಶ್ರೀಯೂ ಒಲಿಯುವ ಹಾಂಗೆ ಹೇಳಿ ಹೇಳುವಾಗ, “ನಮ್ಮ ಭಾಗ್ಯ ದೊಡ್ಡದು ನಮ್ಮ ಭಾಗ್ಯ ದೊಡ್ಡದು” ಹೇಳ್ತ ಪದ್ಯವ ಪ್ರೇಮಕ್ಕಂದೇ, ಶ್ರೀಪಾದ ಮಾವಂದೇ ಹಾಡಿದವು.
ಹೀಂಗೆ ಮುಂದುವರೆಶಿ, ಜಯವಿಜಯರು ಅತ್ತಿತ್ತ ಶಾಪ ಕೊಟ್ಟುಗೊಂಡು ಅದು ಅವಕ್ಕೆ ಅವರ ಒಳ ಮನಸ್ಸಿಂಗೆ ಅರ್ಥ ಅಪ್ಪಗ ಹರಿಯ ಧ್ಯಾನ ಮಾಡುಲೆ ಶುರು ಮಾಡ್ತವು ಹೇಳುವಾಗ ನಮ್ಮ ಪ್ರಾರ್ಥನೆ, ವಾಹನಲ್ಲಿ ನಾವು ಮಡಿಕೊಳ್ಳುತ್ತ ಸ್ಪೇರ್ ವೀಲ್ ಅಪ್ಪಲಾಗಾದು ನಮ್ಮ ದಾರಿಯುದ್ದಕ್ಕೂ ಉಪಯೋಗಕ್ಕೆ ಬಪ್ಪ ಸ್ಟಿಯರಿಂಗ್ ವ್ಹೀಲ್ ಆಯೇಕ್ಕು ಹೇಳಿ ಹೇಳಿದವು. ದೇವರು ತನಗೆ ತೊಂದರೆ ಆದರೆ ಸಹಿಸಿಗೊಳ್ತ, ಆದರೆ ತನ್ನ ಭಕ್ತರಿಂಗೆ ತೊಂದರೆ ಆದರೆ ಸಹಿಸುತ್ತಾ ಇಲ್ಲೆ. ಉದಾಹರಣೆಗೆ, ಮಹಾಭಾರತದ ಸಂದರ್ಭಲ್ಲಿ ಕೃಷ್ಣ ಯಾವುದೇ ಕಾರಣಕ್ಕೂ ಆಯುಧ ಪ್ರಯೋಗ ಮಾಡ್ತಿಲ್ಲೆ ಹೇಳಿ ಶಪಥ ಮಾಡಿರ್ತ. ಹಾಂಗೆ ಭೀಷ್ಮ ಕೃಷ್ಣನ ಕೈಲಿ ಸುದರ್ಶನ ಚಕ್ರವ ಹಿಡುಶದ್ದೆ ಬಿಡೆ ಹೇಳಿ ಪ್ರತಿಜ್ಞೆ ಮಾಡಿರ್ತ. ಅಕೇರಿಗೆ ಕೃಷ್ಣನೇ ಸುದರ್ಶನ ಚಕ್ರವ ಹಿಡುದು ರಥಂದ ಇಳುದು ಬಂದ. ಕಾರಣ ಭೀಷ್ಮ ಅವನ ಭಕ್ತ ಆಗಿತ್ತ. ಅವಂಗೆ ಮುಕ್ತಿ ಮಾರ್ಗವ ತೋರಿಸಿದ ಕಥೆಯನ್ನೂ ವಿವರಿಸಿದವು.
ಜಯವಿಜಯರು ಅತ್ತಿತ್ತ ಕೊಟ್ಟುಗೊಂಡ ಶಾಪದ ಫಲವಾಗಿ ವಿಜಯ ಗಂಡಕೀ ನದಿಲಿ ಮಕರ ಆಗಿ ಹುಟ್ಟಿತ್ತು. ಜಯಂದೇ ಅದೇ ಪರಿಸರಲ್ಲಿ ಆನೆ ಆಗಿ ಹುಟ್ಟಿತ್ತು. ಇಬ್ಬರೂ ಮೊದಲು ಹೇಂಗೆ ಪರಸ್ಪರ ವಿರುದ್ದ ಸ್ವಭಾವದವಾಗಿತ್ತಿದ್ದವೋ ಹಾಂಗೆ ಈಗಳೂ ವಿರುದ್ದ ಸ್ವಭಾವದವಾಗಿತ್ತವು.. ಆನೆ -ಅಣ್ಣ ಶುದ್ದ ಸಸ್ಯಾಹಾರಿಯಾದರೆ, ಮಕರ- ತಮ್ಮ ಮಾಂಸಾಹಾರಿ ಆಗಿತ್ತಿದ್ದ. ಅವರಿಬ್ಬರನ್ನೂ ದೂರ ದೂರ ಅಪ್ಪಲೆ ವಿಧಿ ಬಿಟ್ಟಿದಾ ಇಲ್ಲೆ. ವಿಧಿಗೆ ಯಾರನ್ನಾರು ಒಬ್ಬರೊಬ್ಬರ ಸೇರ್ಸೆಕ್ಕು ಹೇಳಿ ಕಂಡರೆ ಹೇಂಗಾರು ಮಾಡಿ ಸೇರ್ಸುತ್ತು ಹೇಳಿ ಹೇಳುವಾಗ ಪಾರಿವಾಳ ಮತ್ತು ಗರುಡನ ಕಥೆಯ ಹೇಳಿದವು. ಆನೆಯ ಆನೇ ಹೇಳುವ ಅಹಂಕಾರದ ಬಗ್ಗೆ ಹೇಳಿ ‘ಆನೇ ಆನೇ ನಾನೇ ನಾನೇ’ ಹೇಳ್ತ ಪದ್ಯವ ಪ್ರೇಮಕ್ಕ ಹಾಡಿರೆ ಮದದಾನೆಯ ಚಿತ್ರವ ನೀರ್ನಳ್ಳಿ ಮಾವ ಬಿಡುಸಿದವು. ಈ ಪದ್ಯಲ್ಲಿ ಆನೇ ಹೇಳ್ತ ಭಾಷೆಯನ್ನೂ ಆನೇ ಹೇಳ್ತ ಭಾವವನ್ನು ನೆನಪು ಮಾಡಿದವು. ಹಾಂಗೆ ಗೋಪಾಲಣ್ಣನ ಕೈಲಿ ತಬಲಾವಾದನದ ಮೂಲಕ ಆನೆ ನಡಕ್ಕೊಂಡು ನೀರು ಕುಡಿವಲೆ ನದೀ ತೀರಕ್ಕೆ ಬಪ್ಪದು, ಮೊಸಳೆ ನೀರಿಲಿ ಹೋಪದು. ಹಾಂಗೆ ಮೊಸಳೆ ಆನೆಯ ಕಾಲಿಂಗೆ ಕಚ್ಚುದರ ತೋರಿಸಿಕೊಟ್ಟವು. ಇಲ್ಲಿ ಮೊಸಳೆ ಆಗಿಪ್ಪ ತಮ್ಮ ಆನೆ ಆಗಿಪ್ಪ ಅಣ್ಣ ಇದ್ದವು, ತಮ್ಮ ಅಣ್ಣನ ಕಾಲಿಡಿದರೆ ಸರಿ. ಆದರೆ ಈತರ ಕಚ್ಚಿ ಹಿಡಿದವರು ಹೊಸ ಪರಿ ಹೇಳಿ ಹೇಳಿದವು.
ಅಷ್ಟಪ್ಪಗ ಅದನ್ನೇ ಪದ್ಯದರೂಪಲ್ಲಿ ಹೇಳ್ತ ‘ಕೊಳವನು ಹೊಕ್ಕು ಕಳೆಯುವೆ ಹೊತ್ತು’ ಹೇಳ್ತ ಪದ್ಯಕ್ಕೆ ನೀರ್ನಳ್ಳಿ ಮಾವ ಮೊಸಳೆ ಆನೆಯ ಕಾಲಿಂಗೆ ಕಚ್ಚುತ್ತ ಚಿತ್ರ ಮಾಡಿದವು. ಕಥೆಯ ಮುಂದುವರುಸುತ್ತಾ, ವಿಜಯ ಕಾಲಿಂಗೆ ಕಚ್ಚಿಯಪ್ಪಗ ಬಿಡುಸಿಗೊಂಬಲೆಡಿಗಾಗದ್ದೆ ಅಕೇರಿಗೆ ಹರಿಧ್ಯಾನವ ಮಾಡ್ಳೆ ಶುರು ಮಾಡಿದ. ಜಯನ ಬಗ್ಗೆ ಹೇಳುತ್ತರ “ತಟ್ಟಿರೆ ಓನು ಅಪ್ಪ ಹಳೆ ರೇಡಿಯೋದಾಂಗೆ” ಹೇಳಿ ಹೇಳಿದವು. ಆ ಜಯನ ಮನಸ್ಸಿಲಿ ಆಗ ಬಂದದ್ದರ “ನೀರಜನಯನ ನಿನ್ನನೇ ನಂಬಿದೆ” ಹೇಳ್ತ ಪದ್ಯವ ಪ್ರೇಮಕ್ಕ ಹಾಡಿರೆ ನೀರ್ನಳ್ಳಿ ಮಾವನ ಚಿತ್ರವು ವಿಶ್ವಣ್ಣನ ನೃತ್ಯವೂ ಇತ್ತು. ಎಡೇಲಿ ನಾವು ಉಪಯೋಗಿಸುವ ಭಾಷೆಯ ವರ್ಣನೆ ಮಾಡ್ತಾ ನಾವು ನಮ್ಮ ಹೇಳ್ತದರಲ್ಲಿ ಭಗವದ್ಭಾವನೆ ಇದ್ದು. ಆನು ಹೇಳ್ತದರಲ್ಲಿ ಒಂಟಿತನ ಇದ್ದು ಹೇಳಿಯೂ ಹೇಳಿದವು. ಕೊನೆಕಾಲಲ್ಲಿ ಶರಣಾಗತಿಯ ಭಾವವ ವಿವರಿಸುವವನ ರಾಮಾಯಣಲ್ಲಿಲ್ಲದ್ದ ಒಂದು ಕಥೆಯ ಹೇಳಿದವು. ಕಪ್ಪೆ ಹಾವು ಹಿಡಿವಗ ವಟ ವಟ ಹೇಳ್ತದು ರಾಮಧ್ಯಾನ ಅಡ. ಆದರೆ ರಾಮನೇ ಎಂತಾರು ತಾಗುಸಿರೆ ಯಾರತ್ರೆ ಹೇಳಲಿ ಹಾಂಗಾದ ಕಾರಣ ಸುಮ್ಮನಿದ್ದದು ಹೇಳಿತ್ತಡಾ ಕಪ್ಪೆ. ಇದೇ ರಾಮನ ಮುಂದೆ ಶರಣಾಗತಿಯ ಭಾವ ಹೇಳಿದವು. ಕೊನೇಕಾಲಲ್ಲಿ ಜಯ ಹರಿಗೆ ಶರಣಾದಪ್ಪಗ ಹರಿ ಶಾಂತಾಕಾರಲ್ಲಿ ಜಯಂಗೆ ಕಾಣ್ತನಡಾ ಹೇಳಿ ಹೇಳುವಾಗ ಪ್ರೇಮಕ್ಕ ಶಾಂತಾಕಾರಂ ಶ್ಲೋಕ ಹಾಡಿದವು. ಆಗ ಹರಿ ಪ್ರತ್ಯಕ್ಷ ಆಗಿ ಜಯವಿಜಯರಿಂಗೆ ಮುಕ್ತಿ ಕೊಟ್ಟನಡ ಹೇಳಿ, ಇತ್‍ನಾ ತೋ ಕರ್‍ನಾ ಸ್ವಾಮೀ ಮೇರೆ ಪ್ರಾಣ್ ತನ್‍ಸೇ ನಿಕ್‍ಲೇ ಹೇಳ್ತ ಹಿಂದಿ ಪದ್ಯದ ಸಾಲಿನ ನೆಂಪು ಮಾಡಿಯೊಂಡವು.
ಹಿಂಗೆಲ್ಲಾ ಆದ ಕಾರಣ ಗಂಡಕೀ ನದಿಯ ಹರಿಕ್ಷೇತ್ರ ಹೇಳಿ ಹೇಳ್ತದು. ಆ ಹರಿಯ ಸುದರ್ಶನ ಚಕ್ರ ಸುತ್ತುವಾಗ ಗಂಡಕೀಯ ಕಲ್ಲುಗೊಕ್ಕೆ ತಾಗಿ, ಆ ಕಲ್ಲುಗಳಲ್ಲಿ ಚಕ್ರಮೂಡಿತ್ತು, ಆ ಕಲ್ಲುಗೋ ಸಾಲಿಗ್ರಾಮ ಆತು. ಆ ಸಾಲಿಗ್ರಾಮದ ಹಿಂದೆ ಈ ಜಯ ವಿಜಯರಿತ್ತವು. ಈ ಕಥೆ ಇದ್ದು, ರಾಮಾಯಣದ ಕಥೆ ಇದ್ದು ಹೇಳುವಾಗ, “ಹರಿಯ ಕರುಣೆಯ ಪರಿಯ’ ಪದ್ಯವ ಪ್ರೇಮಕ್ಕ ಹಾಡಿದವು. ಇದಾದ ಮೇಲೆ ರೂಪಕ. ಜಯ ವಿಜಯರಿಂಗೆ ಹೇಳಿರೆ ಕರಿ-ಮಕರ ಆಗಿದ್ದವಕ್ಕೆ ಮುಕ್ತಿ ಸಿಕ್ಕಿದ್ದರ ರೂಪಕಲ್ಲಿ ಅಭಿನಯಿಸಿ ತೋರುಸಿದವು. ರೂಪಕದ ಲೆಕ್ಕಲ್ಲಿ ತಿಮ್ಮಣ್ಣ ಅಶೋಕಣ್ಣನವರ ಆನೆ ಮೊಸಳೆಯ ಪ್ರತಿಕೃತಿಗೊ ಹರಿ ಪ್ರತ್ಯಕ್ಷ್ಯವಾಗಿ ಅವಕ್ಕೆ ಮುಕ್ತಿ ಕೊಟ್ಟದು. ಸುದರ್ಶನ ಚಕ್ರ ಮೇಲೆಂದ ಕೆಳ ಬಂದದ್ದು ಭಾರೀ ರೈಸಿತ್ತು. ಮುಂದೆ ಗುರುಗೋ ಈ ದಿನದ ಕಥೆಯ ಉಪಸಂಹಾರ ಮಾಡಿದವು. ಜಯ ವಿಜಯರ ಪಥನ ಆದರುದೇ ಅವಕ್ಕೆ ಮುಕ್ತಿ ಸಿಕ್ಕಿತ್ತು. ಅದು ಅಂತಿಂಥಾ ಮುಕ್ತಿಯಲ್ಲ., ಸಾರೂಪ್ಯ ಮುಕ್ತಿ. ಭಗವಂತನ ರೂಪವೇ ಸಿಕ್ಕಿತ್ತು, ಚತುರ್ಭುಜರಾದವು. ವೈಕುಂಠಕ್ಕೇ ದ್ವಾರಪಾಲಕರಾಗಿಪ್ಪ ಅವಕಾಶ ಸಿಕ್ಕಿತ್ತು ಹೇಳಿ ಇಂದ್ರಾಣಾ ಕಥೆಯ ಮುಗುಶಿದವು. ಅಷ್ಟಪ್ಪಗ “ದನ್ಯವಾಯಿತು ಬದುಕು ಹರಿಕೃಪೆಯ ದೊರೆತು” ಪದ್ಯವ ಪ್ರೇಮಕ್ಕ ಹಾಡಿದವು. “ಜಯ ಜಯ ರಾಮಕಥಾ” ಪದ್ಯಕ್ಕೆ ಎಲ್ಲೋರು ಕೊಣುದು ಕೊಶಿ ಪಟ್ಟವು. ಶ್ರೀರಾಮಯಣ ಗ್ರಂಥಕ್ಕೆ ಪೂಜೆಯೂ ಮಂಗಳಾರತಿಯನ್ನೂ ಗುರುಗೋ ಮಾಡಿದವು. ಸೀತಾಕಲ್ಯಾಣ ಲೆಕ್ಕಲ್ಲಿ ಅನ್ನ ಪರಮಾನ್ನ ಪ್ರಸಾದವೂ ಇತ್ತು. ನಾವು ನಾಳೆಯಾಣ ಸುಧರಿಕೆಯ ನೆಂಪಾಗಿ ಎರಡು ಚಕ್ರದ ಕಾರಿಲಿ ಹೆರಟು ಬಂತಿದಾ,
ಓಯೀ., ನಾಳೆಯೂ ಇದ್ದು.
ಹರೇ ರಾಮ
ಪಟಂಗೋ:
“ಜಯ ಜಯ ರಾಮಕಥಾ ಜೈ ಶ್ರೀ ರಾಮಕಥಾ”
ರಾಮ ಕಥೆಗೆ ಬಪ್ಪಗ ತಡವಾಗಿತ್ತು,
ಕಥೆ ತಪ್ಪಿತ್ತನ್ನೇ ಹೇಳಿ ಬೇಜಾರಾಗಿತ್ತು..
ಅಣ್ಣನ ವಿವರಣೆ ಓದಿದಮೇಲೆ ತೃಪ್ತಿಯಾತು…
ಹರೇ ರಾಮ.. 🙂
ಅದೆಂತ್ಸು ಎರಡು ಚಕ್ರದ ಕಾರು ಹೇಳಿರೆ?
ಯೇ ಮಾಣೀ,
ಅದು ಪೆಂಗಣ್ಣ ನೆಡಕ್ಕೊಂಡು ಹೋದ್ಸರ ಹೇಳಿದ್ಸೋ°…
ರಾಮಕಥೆ ಕೇಳುಲೆ ಸುರುವಾಣ ದಿನ ಮಾಂತ್ರ ಎಡಿಗಾತಷ್ಟೆ.
ಒಳುದ ಶುದ್ದಿ ಕೇಳುವಾಗ ಅಲ್ಲಿಗೆ ಹೋಗಿಯೇ ನೋಡೆಕಾತು, ಕೇಳೆಕ್ಕಾತು ಹೇಳಿ ತೋರ್ತಾ ಇದ್ದು.
ದೊಡ್ಡಭಾವಾ,
ಕಾರ್ಯಕ್ರಮವ ಶಬ್ದಲ್ಲಿ ವಿವರುಸುಲೆ ಎಡಿಯ…
ನೃತ್ಯ ರೂಪಕ ಅಂತೂ ಅದ್ಭುತ..
ಸಾಧ್ಯ ಆದರೆ ಇಂದು ಬನ್ನಿ… ಕೊನೇ ದಿನ ಅಲ್ಲದಾ?
ನಿರೂಪಣೆ ಲಾಯಿಕ ಆಯಿದು. ಓದಿದವಕ್ಕೆ, ನೋಡೆಕ್ಕು ಹೇಳ್ತ ಪ್ರೇರಣೆ ಖಂಡಿತಾ ಆಗದ್ದೆ ಇರ.
ರೂಪಕ ತುಂಬಾ ತುಂಬಾ ಲಾಯಿಕ ಆಗಿತ್ತಿದ್ದು.
ಲಾಯ್ಕ ವರದಿ. ಹೋಗದ್ದವಕ್ಕೆ ತುಂಬಾ ಉಪಯುಕ್ತ. ಇಡೀ ರಾಮಕಥಾ ಕಾರ್ಯಕ್ರಮ ವಿಡಿಯೊ ತೆಗೆತ್ತಾ ಇದ್ದವೊ?ಯಾವುದಾದರೂ ವೆಬ್ ಸೈಟಿಲಿ ಹಾಕುಗೊ?
ಎಲಾ ಪೆಂಗಣ್ಣನೇ! ಇಲ್ಲೆ ಹೋಗಿ ಅಲ್ಲೆ ಕೇಳಿ ಆಚಿಗೆ ಬಂದು ಈಚಿಗೆ ಶುದ್ದಿ ಹೇಳಿ ಆತಿದಾ. ಶುದ್ದಿ ಓದಿ ನವಗೂ ಇಂದ್ರಾಣ ರಾಮಕಥಾ ತುಸು ಅನುಭವ ಆತು. ಲಾಯಕ ಆಯ್ದು ಅಣ್ಣೋ.,ಧನ್ಯವಾದಂಗೊ ಹೇಳಿತ್ತು -‘ಚೆನ್ನೈವಾಣಿ’.