Oppanna.com

ನಾಕು ನಾಕು ಸಾಲು

ಬರದೋರು :   ದೊಡ್ಡಮಾವ°    on   14/02/2012    28 ಒಪ್ಪಂಗೊ

ದೊಡ್ಡಮಾವ°
Latest posts by ದೊಡ್ಡಮಾವ° (see all)

ಇದು ಮುಕ್ತ ಛಂದಸ್ಸು. ಮಾತ್ರೆ, ಗಣ, ಯತಿ, ಪ್ರಾಸ ಬಂಧನ ಇಲ್ಲದ್ಸು. ಪದ್ಯಗಂಧಿ ಹೇಳ್ತ ವರ್ಗಕ್ಕೆ ಸೇರ್ಸಲಕ್ಕು.
ಸಾಂಗತ್ಯ, ರಗಳೆ, ಮಹಾಛಂದಸ್ಸು – ಇದರ ದಾಯವಾದಿಗೊ.
ಬೇಕಾರೆ – ಎಲ್ಲದಕ್ಕೂ “ಬೋಚ ಭಾವಾ” ಹೇದು ಸೇರುಸಿಯೊಂಬಲಕ್ಕು.

ನಾಕು ನಾಕು ಸಾಲು

ಒಂದು ಪುಗ್ಗಗೆ ಸಣ್ಣ ಸೂಜಿ ಚುಚ್ಚಿರೆ ಸಾಕು
ನಿಮಿಷದೊಳ ಅದರ ಕತೆ ಮುಗಿದು ಹೋಕು
ಹೋಲಿಕೆ ಕೊಟ್ಟಂಡು ನೆಗೆಗಾರ° ಬರದ ನಾಕು ಸಾಲು
ಹೀಂಗೆ ಬರೆತ್ತವು ಇದ್ದಿರೋ ಆರಾರೂ ಹೇದು ಸವಾಲು || 1 ||

ಇದರ ಓದಿದ ತೆಕ್ಕುಂಜೆ ಪುಟ್ಟಣ್ಣ
ಕುಂಞಣ್ಣ ಕಿಂಞಣ್ಣ ಒಪ್ಪಕ್ಕ ಹೊನ್ನಕ್ಕ
ಎಲ್ಲೋರು ಬರದವು ರೆಜ ರೆಜಾ ಸಾಲು
ಆನುದೇ ಬರೆಯಲೋ ನಾಕು ಸಾಲು || 2 ||

ಕೋತಿ ಪಾಳ್ಯವ ಕಟ್ಟಿ ರಾಮ ಲಂಕೆಗೆ ಹೋದ°
ಯುದ್ಧಲ್ಲಿ ರಾಕ್ಷಸಂಗಳ ಗೆದ್ದು ಬಂದ°
ಮಂಗಂಗೊ ಕೇಟವು ಎಲ್ಲದಕು ಕಾರಣ ವೈದೇಹಿ ಅಲ್ಲದೋ
ಅಲ್ಲಿಗೆ ಒಂದಾರಿ ಕರಕ್ಕೊಂಡು ಹೋಗಿ || 3 ||

ಕೋತಿಗಳ ಮನವಿಯ ಸ್ವೀಕರಿಸಿದ ರಾಮ°
ಮುನ್ನೆಚ್ಚರಿಕೆ ಕೊಟ್ಟ° ಮಂಗ ಪಾಳ್ಯಕ್ಕೆ
ಅಲ್ಲಿ ನಿಂಗೊ ಬಹಳ ಸಭ್ಯ ರೀತಿಲಿ ಇರೆಕು
ಚೇಷ್ಟೆ ತೋರುಸಲಾಗ, ಗೊಂತಾತೋ || 4 ||

ಅಲ್ಲಿ ಮಾವಗಳಲ್ಲಿ ಒಳ್ಳೆ ವೈಭವ ಇದ್ದು
ಲಂಕೆಯ ವೈಭವಕ್ಕೆ ಸರಿಸಮವೆ ಅಕ್ಕು
ಊಟಕ್ಕೆ ಎಲೆ ಹಾಕಿ ಶಿಸ್ತಿಲ್ಲಿ ಬಡುಸಿದವು
ಹಲವಾರು ಖಾದ್ಯಂಗಳ ಎಲೆ ತುಂಬಾ || 5 ||

ಬಾಳೆಲೆಯ ಕೊಡಿಲಿ ಇದ್ದ ಚಳ್ಳಂಗಾಯಿ ಉಪ್ನೆಕಾಯಿ
ಕಂಡು ತಡೆಯದ್ದೆ ಮರಿಮಂಗ ಕೈ ಹಾಕಿತ್ತು
ನಕ್ಕಿ ನೋಡಿತ್ತದರ ಮತ್ತೆ ಒತ್ತಿ ಹಿಡುದತ್ತು
ಬಿತ್ತು ಅಷ್ಟೆತ್ತರಕ್ಕೆ ಹಾರಿ ರಟ್ಟಿತ್ತು || 6 ||

ಎನ್ನ ಮೀರುಸಲಾದೆಯೊ ನೋಡೆನ್ನ ಸಾಮರ್ಥ್ಯ
ಅದರಿಂದ ಎತ್ತರಕೆ ಹಾರಿ ಕೂದತ್ತು
ಅದರ ಕಂಡ ಮತ್ತೊಂದು ಮಂಗ ಮತ್ತಷ್ಟು ಎತ್ತರಕೆ
ಹಾರಿ ನೆಗೆದು ತೋರುಸಿ ಅದರ ಶಕ್ತಿ ತೋರ್ಸಿತ್ತು || 7 ||

ಒಂದರಿಂದೊಂದು ಆನೇನು ಸೋಲುವನೊ
ಹೇದಂಡು ಎತ್ತರೆತ್ತರ ಹಾರಿ ತೋರುಸಿದವು
ಸುಗ್ರೀವ° ಜಾಂಬವ° ಆರೊಬ್ಬನು ಬಾಕಿ ಇಲ್ಲೆ
ಹಾರಿ ಭೋಜನವ ಕೆಡುಸಿದವನ್ನೆ || 8 ||

ಕಪಿಗೆ ಚಪಲತೆ ಸಹಜ ಹೇದಂಡು ಶ್ರೀರಾಮ
ತನ್ನಲ್ಲೆ ಸಮಧಾನ ಮಾಡಿಯೊಂಡ
ಅನುದೇ ಜಾಂಬವನ ಹಾಂಗಿರ್ತ ಕಪಿ ಅಲ್ದೋ
ಹಾಂಗಾಗಿ ಬರದೆ ಈ ನಾಕು ಸಾಲು || 9 ||

~*~*~

ಸೂ: ನಾಕು ನಾಕು ಸಾಲುಗಳಲ್ಲಿ ಅಡಕವಾಗಿಪ್ಪ ರಾಮಾಯಣದ ಕತೆ ಬೈಲಿನೋರ ಗಮನಕ್ಕೆ ಬಂದಿಕ್ಕಲ್ಲದೋ!

28 thoughts on “ನಾಕು ನಾಕು ಸಾಲು

  1. ರಾಮಾಯಣಲ್ಲಿ ಬಪ್ಪ ಕಾ”ಮಿಡಿ” ಉಪ್ಪಿನಕಾಯಿಯ ಉಪಕಥೆಯ ಪದ್ಯಗಂಧಿ ರೂಪಲ್ಲಿ ದೊಡ್ಡಮಾವ (ಎನಗೆ ಭಾವ) ಚೆಂದಕೆ ಬರದ್ದವು. ಅವು ಹೇಳಿದ ಹಾಂಗೆ, ಸುಲಭಲ್ಲಿ ಓದುಸೆಂಡು ಹೋಪ ಪದ್ಯ ಲಾಯಕಿತ್ತು. ಗುರುಗೊ ಹೇಳುವ ಹಲವಾರು ಉಪಕಥೆಗೊ ಇದೇ ರೂಪಲ್ಲಿ, ದೊಡ್ಡ ಮಾವನ ಕೃಪೆಂದ ಬೈಲಿಂಗೆ ಬರಳಿ ಹೇಳಿ ಹಾರೈಸುತ್ತಾ ಒಂದು ಒಪ್ಪ.

  2. ಒಳ್ಳೇದಾಯಿದು, ಓದಿಸಿಗೊ೦ಡು ಹೋತು. ಹೀ೦ಗೊ೦ದು ಪದ್ಯಪ್ರಾಕಾರದ ಬಗ್ಗೆ ಗೊoತಿತ್ತಿದ್ದಿಲ್ಲೆ, ಅರಿವು ಕೊಟ್ಟದಕ್ಕೆ ಧನ್ಯವಾದ೦ಗೊ.

    1. (ಓದಿಸಿಗೊ೦ಡು ಹೋತು )- ಅಣ್ಣೊ ಇದಾ ಹೋಪಗ ಅತ್ತಿತ್ತೆ ಹೋಗಿ ಆತೋ ಒಂದೇ ಹೊಡೆಂಗೆ ಹೋದರೆ ಮತ್ತೆ ವಾಪಾಸು ಬಪ್ಪಲೆ ಬಙ ಅಕ್ಕು…. ಹಾಂ ಹೇಳಿದ್ದಿಲ್ಲೇಳಿ ಬೇಡ.

  3. ಕಪಿ ಎಲ್ಲಿ ಹೋದರೂ ಕಪಿಯೇ..ಸುಗ್ರೀವ,ಜಾಂಬವರೂ ಸುಮ್ಮನೆ ಕೂಯಿದವಿಲ್ಲೆ…ಲಾಯಿಕ ಪದ್ಯ.

    1. ಅಂದ್ರಾಣ ಕಪಿಗೊ ಮಾಡಿದ್ದಕ್ಕಿಂತ ಹೆಚ್ಚು ಹರ್ಕತ್ತು ಈಗಾಣ ಅಧಿಕಾರಲ್ಲಿ ಇರ್ತೋರು ಮಾಡುದು ಕಾಂಬಗ ಬೇಜಾರ ಆವ್ತು ಗೋಪಾಲಾ..

    2. (ಕಪಿ ಎಲ್ಲಿ ಹೋದರೂ ಕಪಿಯೇ..ಸುಗ್ರೀವ,ಜಾಂಬವರೂ)
      ಆದರೆ ಜಾಂಬವ ಕಪಿ ಅಲ್ಲನ್ನೇ…. ಕರಡಿ ಅಲ್ಲದಾ?

      1. ಶ್ಯಾಮಾ,
        ಜಾಂಬವ° ಕರಡಿ ಅಪ್ಪು. ಆದರೆ,
        ಮರ್ಕಟಂಗಳ ಒಟ್ಟಿಂಗೆ ಸೇರಿಯಪ್ಪಗ ಕರಡಿಗೂ ಮಂಗಬುದ್ಧಿ ಬಂತಿಲ್ಯೋ…
        ಅದು ಒಡನಾಟದ ಗುಣ, ಅಷ್ಟೆ.
        ಹಾಂಗೆ ಹೇಳ್ತರೆ ನಾವು ಮನುಷ್ಯಂಗಳನ್ನೂ ಮಂಗ ಹೇಳ್ತಿಲ್ಯೋ,
        ಮಂಗ ಬುದ್ಧಿ ತೋರ್ಸುತ್ತ ಕಾರಣ ಮಂಗ ಹೇದು ಹೇಳುಸ್ಸು.
        (“ಅದು ಬರೀ ಮಂಗ, ಅದರ ಕಳುಸಿರೆ ಏನಕ್ಕೇನಾರೂ ಮಾಡಿ ಹಾಕುಗು” ಹೇಳಿ ನಮ್ಮ ಹೆರಿಯವು ಹೇಳ್ತ ಹಾಂಗೆ)

        ಮಂಗನ ಕೊಣಿಶುತ್ತ ಹಾಂಗೆ ಕರಡಿಯನ್ನು ಕೊಣಿಶುತ್ತವು, ಹಾಂಗಾಗಿ ಕರಡಿಯುದೆ ಮಂಗನ ವರ್ಗಕ್ಕೆ ಸೇರಿದ್ಸು. (ಕರಡಿಯ ತಕ ತಕ ಕುಣಿಸುತ ಬಂದನು…”)

        ಒಟ್ಟಾರೆ ಹೇಳ್ತರೆ ರಾಮನದ್ದು ಕಪಿ ಪಾಳ್ಯ ಅಲ್ಲದೋ. ಜಾಂಬವ°ನೂ ಅದರ ಒಂದು ಅಂಗ. ಹಾಂಗಾಗಿ ತಾತ್ಕಾಲಿಕವಾಗಿ ಮಂಗ ಹೇದ್ಸು. ಇವ° ಜವ್ವನಿಗರೊಟ್ಟಿಂಗೆ ಸೇರಿ ಕವಿತ್ವ(ಕಪಿತ್ವ) ಮಾಡಿದ°, ಜಾಂಬವ° ಸಣ್ಣ ಮಂಗಂಗಳ ಒಟ್ಟಿಂಗೆ ಸೇರಿ ಕಪಿ ಆದ ಹಾಂಗೆ… 😉

  4. ರಾಮಾಯಣದ ಒಂದು ಘಟನೆ ಪದ್ಯ ರೂಪಲ್ಲಿ ಚೆಂದಕೆ ಬಂತು
    [ಕಪಿಗೆ ಚಪಲತೆ ಸಹಜ ಹೇದಂಡು ಶ್ರೀರಾಮ, ತನ್ನಲ್ಲೆ ಸಮಧಾನ ಮಾಡಿಯೊಂಡ]- ಇದು ಆದರ್ಶ.

    1. ಗುರುಗೊ ವರ್ಣನೆ ಮಾಡ್ತ ಶ್ರೀರಾಮ ಕಥೆ ಪೂರ್ತಿ ಕೇಳಿಗೊಂಡ್ರೆ ರಾಮಾಯಣಲ್ಲಿ ಇರ್ತ ಹೀಂಗಿಪ್ಪ ಸಣ್ಣ ಸಣ್ಣ ಉಪಕಥೆಗೊ ಪೂರ್ತಿ ಚೆಂದಕ್ಕೆ ಸಿಕ್ಕುಗು, ಅಲ್ಲದೋ ಶರ್ಮಾ..

  5. ಬೈಲಿಲಿ ಪುಗ್ಗೆ ಮೇಲೆ ಮೇಲೆ ಹಾರುವಾಗ ಅದರ ಹಿಡಿವಲೆ ಹೆರಟ ಕವಿ(ಪಿ)ಗಳ ನೆಂಪಿಲಿ ದೊಡ್ಡಮಾವ ರಾಮಾಯಣದ ಕಪಿಗ ಹಾರಿದ ಕತೆ ನೆಂಪಾಗಿ ಬರದ “ಪದ್ಯಗಂಧಿ” ಪಷ್ಟಾಯಿದು.
    ಆದರೆ, ಪದ್ಯಗಂಧಿ ಹೇಳ್ತ ಛಂದಸ್ಸಿನ ಲಕ್ಷಣ ಹೇಂಗೆ ದೊಡ್ಡಮಾವ ? ಕುತೂಹಲ ಇಪ್ಪ ಕಾರಣ ಆನು ಕೇಳುದು.

    1. ‘ಪದ್ಯ ಗಂಧಿ’ ಹೇದರೆ ಪದ್ಯದ ವಾಸನೆ ಇಪ್ಪದು ಹೇಳಿ ಅರ್ಥ, ಒಂದು ಧಾಟಿಲಿ ಓದಲೆ ಎಡಿತ್ತ ಹಾಂಗಿರ್ಸು. ಮುದ್ದಣನ ರಾಮಾಶ್ವಮೇಧಲ್ಲಿ ಇದರ ಛಾಯೆ ಇದ್ದು. ಸಂಸ್ಕೃತದ ದಂಡಕಂಗೊ ಪದ್ಯಗಂಧಿ.

      ಪದ್ಯಗಂಧಿ ಒಂದೇ ಥರ ಏನಲ್ಲ. ಬೇರೆ ಬೇರೆ ಧಾಟಿಗೆ ಒಡ್ಡುತ್ತ ಹಾಂಗೆ ಇಪ್ಪಲಕ್ಕು. ನಿರ್ದಿಷ್ಟ ಛಂದಸ್ಸು, ನಿಯಮ ಎಂತ್ಸೂ ಇಲ್ಲೆ. ಓದುಸುತ್ತ ಗುಣವೇ ಅದರ ಲಕ್ಷಣ.

  6. ||ಬೈಲ ನೆ೦ಟರ ಸಭೆಲಿ ಪನ್ನೀರು ತಳುದಾ೦ಗೆ
    ದೊಡ್ದಮಾವನ ಪದ್ಯಗ೦ಧಿ ಬ೦ತು
    ಸ೦ತೋಷವಾತೆನಗೆ ಉಪಕತೆಯ ಸ್ವಾರಸ್ಯ
    ಹೂಗಿನ ಸುಗ೦ಧದಾ ನೆ೦ಪು ತ೦ತು||

    ಭಾರೀ ಲಾಯ್ಕಾಯಿದು ದೊಡ್ಡಮಾವಾ..

    1. ಬೈಲಿಲ್ಲಿಯೇ ಇದ್ದುಗೊಂಡು ಭಾಮಿನಿಯ ಒಲುಶಿಗೊಂಡ ನಿನ್ನ ಸಾಧನೆ ಮೆಚ್ಚೇಕಾದ್ಸು. ಬರೆತ್ತಾ ಇರು, ಆನು ಓದಿಗೊಂಡು ಇರ್ತೆ.

  7. ನೆಗೆಗಾರನ ಪುಗ್ಗಂದ ರಾಮಾಯಣದ ಪದ್ಯಗಂಧಿಗೆ ಏರುಸಿದ ದೊಡ್ಡಮಾವ೦ಗೆ ನಮೋ ನಮ:

    ಕೋತಿ ಪಾಳ್ಯವ ಮುನ್ನಡೆಸೆಕ್ಕಾರೆ,ನಿಯಂತ್ರಿಸೆಕ್ಕಾರೆ
    ಆ ಶ್ರೀರಾಮನೋ, ವೈದೇಹಿಯೋ ಆಯೆಕ್ಕಷ್ಟೇ…
    ಅಳಿಲು ಸೇವೆ ಮಾಡಿಗೊಂಡು
    ರಾಮಾಯಣವ ನೋಡುಲೆ ಮಾಂತ್ರ ನಾವು ಅಕ್ಕಷ್ಟೇ…

    1. ಜಯಶ್ರೀ, ನೀನು ಹೇಳಿದ ಹಾಂಗೆ ರಾಮಾಯಣವ ಓದಿಗೊಂಡ್ರೆ ಸಾಕು, ಜೀವನಲ್ಲಿ ಉಪಯೋಗುಸೆಕ್ಕಾದ ತುಂಬಾ ವಿಚಾರಂಗೊ ಸಿಕ್ಕುತ್ತು. ನಿನ್ನ ಒಪ್ಪ ನೋಡಿ ಕೊಶಿ ಆತು.

  8. ದೊಡ್ಡಮಾವಾ,
    ಅಂತೂ ಇಂತೂ ಬೈಲಿನ ಮಂಗಂಗಳ ತಲಗೆ ರಜ ಕೆಲಸ ಕೊಟ್ಟಿ , ಚಳ್ಳಂಗಾಯಿ ಒತ್ತಿಯಪ್ಪಗ ಬಿತ್ತು ಮೇಲೆ ರಟ್ಟಿದ್ದು ಗ್ರೇಶೀರೆ ನೆಗೆಬತ್ತು, ಅದೇ ಅಕೇರಿಯಾಣ ನಾಕು ಸಾಲು – ನೆಗೆಮಾಡಿದ್ದೆಂತಕೆ ಹೇಳಿ ಆಲೋಚನೆ ಮಾಡುವಾಂಗುದೇ ಮಾಡಿತ್ತು
    ನಮ್ಮಂದ ಎಡಿಯಪ್ಪ ನಿಂಗಳಹಾಂಗಿರ್ತವರತ್ರೆ …ಹು!

    1. ಬೈಲಿನ ಮಂಗಂಗೊ ಅಲ್ಲ, ನಿನ್ನ ಹಾಂಗಿರ್ತ ಮಗಂದ್ರು ಬರದಷ್ಟು ವಿಶಾಲ ಶುದ್ದಿಗಳ, ಪದ್ಯಂಗಳ ಎನಗೆ ಇಲ್ಲಿ ಬರವಲೆ ಎಡಿಗಾಯಿದಿಲ್ಲೆ. ಈ ವಿಷಯಲ್ಲಿ ನೀನೇ ಉಷಾರಿ, ಆತೋ…

  9. ಪದ್ಯಗ೦ಧಿ ತು೦ಬಾ ಲಾಯಕ ಆಯಿದು.
    ವೈಭವೀಕರಣ ಆದಿಕ್ಕು ಇದು. ಆದರೂ ಇದರ ಓದಿಅಪ್ಪಗ ನೆಗೆ ಬತ್ತು.
    ಈಗಾಣ ಕಾಲಲ್ಲಿ ಸಾಪ್ತ್ ವೇರ್ ಕ೦ಪನಿ ಗಳಲ್ಲಿ ಕೆಲಸ ಮುಗಿಸುವ ವರೆಗೆ ಟೀಮ್ ನ ಉಪಯೋಗಿಸಿಗೊ೦ಬದೂ, ಮತ್ತು ನ೦ತರ ಏನಾರೂ ಸಣ್ಣ ವಿಶಯ೦ಗಳ ದೊಡ್ದ ಮಾಡಿ ಟೀಮ್ ನ ಮೂಲೆಗು೦ಪು ಮಾಡಿ ಲೀಡರ್ ಗ ಹೆಸರು ತೆಕ್ಕೊ೦ಬದೂ ಸಾಮಾನ್ಯ. ಬಹುಶ್ಜ ಇದು ಮೊದಲಾಣ ಕಾಲಲ್ಲೆ ಇದ್ದಿಕ್ಕಾ ಹೇಳಿ ಇದರ ಓದಿ ಅಪ್ಪಗ ಎನಗೆ ಒ೦ದು ಸ೦ಶಯ.

    1. ಈ ಸಾಫ್ಟುವೇರು ಕಂಪೆನಿಯವು ಎಂತಾ ಕೆಲಸ ಮಾಡ್ತವು ಹೇಳಿ ಎಲ್ಲ ಎನಗೆ ಗೊಂತಾಗ.
      ಆದರೂ ರಾಮಾಯಣಲ್ಲಿ ಇದ್ದಿದ್ದ ಈ ಕಥೆಯ ಹಾಂಗಿರ್ತ ಅನುಭುವಂಗೊ ನಮ್ಮ ನಿತ್ಯ ಜೀವನಲ್ಲ್ಲಿಯೂ ಆವ್ತು. ಹಾಂಗಾಗಿ ರಾಯಾಯಣವೂ, ಶ್ರೀ ರಾಮನೂ ನವಗೆ ಆದರ್ಶ. ಅಲ್ಲದೋ…

  10. ನಮೋ ನಮಃ ದೊಡ್ಡಮಾವ°
    ಅಪ್ಪಪ್ಪು. [ಎಲ್ಲೋರು ಬರದವು ರೆಜ ರೆಜಾ ಸಾಲು]- ಬೈಲಿಲಿ ಮಂಗಂಗಳ ಬಗ್ಗೆ ರಾಮಾಯಣದ ಬಗ್ಗೆ ಮಾವ ಹೇಳಿದ್ದು.

    [ನಿಮಿಷದೊಳ ಅದರ ಕತೆ ಮುಗಿದು ಹೋಕು]
    [ಎಲ್ಲದಕು ಕಾರಣ ವೈದೇಹಿ ಅಲ್ಲದೋ] [ಹೇದಂಡು ಎತ್ತರೆತ್ತರ ಹಾರಿ ತೋರುಸಿದವು]
    [ಅನುದೇ ಜಾಂಬವನ ಹಾಂಗಿರ್ತ ಕಪಿ ಅಲ್ದೋ]

    ಒಟ್ಟಾರೆ ಮಾವನ ಬೆನ್ನು ತಟ್ಟಕೋ ನಮ್ಮ ಹೆಗಲು ಉದ್ದಿಗೊಳ್ಳೆಕೊ ಹೇಳಿ ತೀರ್ಮಾನ ಮಾಡ್ಳೆ ಎಡಿಯದ್ದ ಪರಿಸ್ಥಿತಿ!

    ಅಂತೂ ದೊಡ್ಡಮಾವ° ದೊಡ್ಡ ವಿಷಯವ ದೊಡ್ಡಕೆ ಮಾಡದ್ದೆ ನಾವು ದೊಡ್ಡಕೆ ಓದಿ ಒಂದು ಕ್ಷಣ ದಡ್ಡ ಆದ್ದು ಅಪ್ಪು ಅಪ್ಪು ಹೇಳಿತ್ತು – ‘ಚೆನ್ನೈವಾಣಿ”

    1. ರಾಮಾಯಣದ ಕಥೆಯ ಎನಗೆ ಅರಡಿತ್ತ ಹಾಂಗೆ ಹೇದೆ, ಅಳಿಯೋ…
      ನಿನ್ನ ಸಂಗ್ರಹಂಗಳ ನೋಡಿ ಕೊಶಿ ಆತು ಎನಗೆ…
      ಹಾಂಗಾಗಿ ಆನು, ನಿನ್ನ ಬೆನ್ನು ತಟ್ಟುಸ್ಸೇ ಒಳ್ಳೆದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×