- ಹೇ ಗುರುದೇವ… - March 15, 2012
- ಅಡಿಗೆಲ್ಲಿ ಕ್ರಾಂತಿ - February 16, 2012
- ಪೇಟೆಂದ-ಹಳ್ಳಿಯೆಡೆಗೆ : ಸಜಂಕಬೆಟ್ಟು ರವಿಯಣ್ಣನ ಅನುಭವ ಲೇಖನ - January 14, 2012
ಸಾಂಪ್ರದಾಯಿಕ ಆಹಾರಪದ್ಧತಿಗೆ ಮಹತ್ವ ಕೊಡ್ತ ಜಯಕ್ಕನ ಶುದ್ದಿ…
ನೀರುಳ್ಳಿ, ಬೆಳ್ಳುಳ್ಳಿ, ಐಸ್ ಕ್ರೀಂ ಮೊದಲಾದವುಗಳ ಉಪಯೋಗಿಸದ್ದೆ ಮಗಂಗೆ ತೃಪ್ತಿ ಅಪ್ಪ ಹಾಂಗೆ ರುಚಿ ರುಚಿಯಾದ ಅಡಿಗೆಗಳ ಮೂಲಕ ಅಡಿಗೆಲ್ಲಿ ಕ್ರಾಂತಿ ಮಾಡೆಕ್ಕು ಹೇಳುವ ಎಂಗಳ ಬಯಕೆ ಬೈಲಿಲ್ಲಿ ಎಲ್ಲೋರಿಂಗೂ ಗೊಂತಿದ್ದು ಹೇಳಿ ಭಾವಿಸುತ್ತೆ.
ಆ ನಿಟ್ಟಿಲ್ಲಿ ಪ್ರಯತ್ನ ಮಾಡಿ ಸುಮಾರು ಬದಲಾವಣೆಗಳ ಮಾಡಿದೆಯ.
ಕೆಲವು ಉದಾಹರಣೆಗಳ ಕೊಡುತ್ತೆ.
- ನೀರುಳ್ಳಿ,ಹಸಿಮೆಣಸು ಎಲ್ಲ ಹಾಕಿ ಅಕ್ಕಿರೊಟ್ಟಿ ಮತ್ತು ಬೆಳ್ಳುಳ್ಳಿಚಟ್ನಿ ಮಾಡಿಗೊಂಡು ಇತ್ತಿದ್ದೆಯ. ಅದು ಎಂಗಳ ಪ್ರಿಯ ತಿಂಡಿ ಆಗಿತ್ತು.
ಅದರ ಬದಲು ಉಬ್ಬು ರೊಟ್ಟಿ ಮತ್ತು ಬೆಂದಿ ಮಾಡುಲೆ ಶುರು ಮಾಡಿದೆಯ. - ನೀರುಳ್ಳಿ,ಹಸಿಮೆಣಸು, ಕುಚ್ಚಿಲು-ಬೆಳ್ತಿಗೆ ಸಮ ಸಮ ಹಾಕಿ ‘ಬಡ್ಡು ದೋಸೆ’ ಹೇಳುವ ತಿಂಡಿ, ಸೇರುಸುಲೇ ಚಟ್ನಿ ಹೆಚ್ಚಾಗಿ ಮಾಡಿಗೊಂಡು ಇತ್ತಿದ್ದೆಯ.
ಅದರ ಬದಲು ಬರಿ ಅಕ್ಕಿದೋಸೆ ಮಾಡಿ ಸೇರುಸುಲೇ ಉದ್ದಿನ ಬೇಳೆ, ಮೆಣಸು ಹೊರುದು ಹಾಕಿ ತರಕಾರಿಗಸಿ ಮಾಡುಲೆ ಶುರು ಮಾಡಿದೆಯ. - ಹಲವಾರು ತಿಂಡಿಗೋ, ಪದಾರ್ಥಂಗೋ… ನೀರುಳ್ಳಿ,ಬೆಳ್ಳುಳ್ಳಿ ಉಪಯೋಗಿಸದ್ದರೆ ‘ಎಂತೋ ಒಂದು ರುಚಿ ಕಡಮ್ಮೆ’ ಆದ ಹಾಂಗೆ ಇದ್ದು ಹೇಳುವಲ್ಲಿ ಎಲ್ಲ ಉಪಯೋಗಿಸದ್ದೆ,
‘ನೀರುಳ್ಳಿ,ಬೆಳ್ಳುಳ್ಳಿ,ಐಸ್ ಕ್ರೀಂ’ ಎಲ್ಲ ತಿಂಬದು ಚಾಮಿಗೆ ಇಷ್ಟ ಆವುತ್ತಿಲ್ಲೆ ಅಲ್ಲದ ಮಗ? ಹೇಳಿ ಹೊಸ ರುಚಿಗೆ ನಾಲಗೆಯ ಒಗ್ಗುಸಿಗೊಂಡೆಯ. - ಪಲಾವು, ರೈಸ್ ಬಾತ್ ಹೀಂಗಿದ್ದ ತಿಂಡಿಗಳ ಮಾಡುವಗ ಶ್ರೀಅಕ್ಕ ಹೇಳಿದ ಹಾಂಗೆ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು,ಏಲಕ್ಕಿ, ಲವಂಗ, ಚೆಕ್ಕೆ ಮೊದಲಾದವುಗಳ ಉಪಯೋಗಿಸಿ ಮನೆಲಿಯೇ ಮಸಾಲೆ ಮಾಡಿ ಹಾಕಿದೆ.
- ಐಸ್ ಕ್ರೀಂ ಹಾಕದ್ದೆ ಅಷ್ಟೇ ರುಚಿಕರವಾಗಿ ಫ್ರುಟ್ ಸಲಾಡ್ ಮಾಡುದು ಹೆಂಗೆ ಹೇಳಿ ಎನ್ನ ಅತ್ತಿಗೆ ಹೇಳಿಕೊಟ್ಟತ್ತು.
ಈ ಜಯಕ್ಕ ಎಂತೋ ಸಾಧಿಸಿದವರ ಹಾಂಗೆ ಎಂತಕಪ್ಪ ಹೇಳ್ತಾ ಇದ್ದು ಹೇಳಿ ಗ್ರೆಷೆಡಿ.
ಜಯಕ್ಕಂಗೆ ಇದರ ಮೀರಿದ ಆ ಪರಮಾನಂದ ಸಿಕ್ಕಿದ್ದು.
ಆದರೆ, ‘ಮಸಾಲೆ ದೋಸೆ’ ಜಯಕ್ಕಂಗೆ ಒಂದು ಸಮಸ್ಯೆ ಆಯಿದು.
ಮಕ್ಕೊಗೆಲ್ಲ ಅತ್ಯಂತ ಪ್ರಿಯ ತಿಂಡಿ ಮಸಾಲೆ ದೋಸೆ – ನೀರುಳ್ಳಿ ಹಾಕದ್ದೆ ಬಾಜಿ ಹೇಂಗೆ ಮಾಡುದಪ್ಪ ಹೇಳಿ ಎನಗೆ ಗೊಂತಾವುತ್ತಿಲ್ಲೇ…
ಮಸಾಲೆ ದೋಸೆಗೆ ಪರ್ಯಾಯ (alternative) ತಿಂಡಿ ಯಾವುದೂ ಒಪ್ಪುಗು ಹೇಳಿಯೂ ಅನ್ನಿಸುತ್ತಿಲ್ಲೇ…
ಬೈಲಿಲ್ಲಿ ಆರಾರೂ ಐಡಿಯಾ ಹೇಳುಗು ಹೇಳುವ ಮಹದಾಸೆಲ್ಲಿ ಇದರ ಬರದ್ದದು.
Article ಓದೊ೦ಡು ಇಪ್ಪಾಗ ಈ ಕೆಳಾನ ಲಿ೦ಕ್ ಸಿಕ್ಕಿತ್ತು..
” Ice cream ‘could be as addictive as cocaine’ ”
http://in.lifestyle.yahoo.com/ice-cream-could-addictive-cocaine-121431061.html
ಮನೆಯಲ್ಲೇ ಮಕ್ಕೊಗೆ / ದೊಡ್ಡವರಿಗೆ ಐಸ್ ಕ್ರೀಂ ಮಾಡಿಕೊಟ್ಟರೆ ಈ ರಗಳೆ ಇಲ್ಲೇ ಅನ್ನೇ..
Article ಒಳ್ಳೇದು ಇದ್ದು… ಧನ್ಯವಾದ…
೧.ನಮ್ಮ ನಮ್ಮ ಮನೆಗಳಲ್ಲಿ ಐಸ್ ಕ್ರೀಂ, ಚಾಕಲೇಟ್ ಮಾಡಿಕೊದೆಕ್ಕು
೨. ನಮ್ಮವರ ಜೆಮ್ಬಾರಂಗಳಲ್ಲಿ, ನಮ್ಮ ಶಾಲೆಗಳಲ್ಲಿ ಐಸ್ ಕ್ರೀಂ, ಚಾಕಲೇಟ್ ಹಂಚುದರ ನಿಲ್ಲುಸೆಕ್ಕು
ಪ್ರತಿಯೊಬ್ಬನೂ ಇದರ ಗಂಭೀರವಾಗಿ ಆಲೋಚನೆ ಮಾಡಿ ಕ್ರಮ ಕೈಗೊಂಡರೆ ಮಾಂತ್ರ ನಮ್ಮ ಮಕ್ಕಳ ಆರೋಗ್ಯಕರವಾಗಿ ಬೆಳೆಶುಲೇ ಎಡಿಗಷ್ಟೇ… ಇಂದಿನ ವೇಗದ ಜಗತ್ತಿಲ್ಲಿ ಮಕ್ಕಳ ನಿಯಂತ್ರಿಸುದು ಎಷ್ಟು ಕಷ್ಟದ ಕೆಲಸ ಹೇಳಿ ಪ್ರತಿಯೋಬ್ಬಂಗೂ ಗೊಂತಿದ್ದು… ನಮ್ಮ ಮುಂದಿನ ಜನಾಂಗವ ರೂಪಿಸುವಲ್ಲಿ ನಾವೆಷ್ಟು ಜಾಗ್ರತೆ ವಹಿಸಿರೂ ಸಾಲ…
ಒಬ್ಬ ಅಮ್ಮನಾಗಿ ಮಕ್ಕಳ ಭವಿಷ್ಯದ ದ್ರುಷ್ಟಿಂದ ಈ ಕೆಲಸಕ್ಕೆ ಹೆರಟದಷ್ಟೇ ಅಲ್ಲದ್ದೆ ಬೇರೆ ಯಾವುದೇ ಉದ್ದೇಶ ಇಲ್ಲೇ… ಐಸ್ ಕ್ರೀಂ,ಚಾಕಲೇಟ್,ಚಾ,ಕಾಫಿ ಇದೆಲ್ಲ ಆರೋಗ್ಯಕ್ಕೆ ಒಳ್ಳೆದಲ್ಲ ಗೊಂತಿದ್ದು… ನೀರುಳ್ಳಿ,ಬೆಳ್ಳುಳ್ಳಿ ರಾಜಸ,ತಾಮಸ ಗುಣಂಗಳ ಹೆಚ್ಚಿಸುವ ಕಾರಣ ಕೆಲವು ತಲೆಮಾರಿನ ನಂತರ ನಮ್ಮ ಮಕ್ಕೋ ಆರುದೆ ಬ್ರಾಹ್ಮಣರಾಗಿ ಒಳಿಯವು ಹೇಳಿ ಗೊಂತಿದ್ದು… ಆದರೆ ಅದರ ಮಕ್ಕೋ ಬೇಕು ಹೇಳಿ ಕೇಳುವಾಗ ಅಮ್ಮಂಗೆ ಎಂತ ಹೇಳುಲೂ ಎಡಿತ್ತಿಲ್ಲೇ. ಮೀನು,ಕೋಳಿ ಬೆಂದಿ ಎಲ್ಲ ಇತರ ಮಕ್ಕೋ ತಿಂತರೂ ನಮ್ಮ ಮಕ್ಕೋ ಕೇಳುತ್ತವಿಲ್ಲೇ… ಎಂತಕೆ ಹೇಳಿರೆ “ಅದರ ನಾವು ಬ್ರಾಹ್ಮರು ತಿಂತಿಲ್ಲೇ ಮಗ… ಅದು ನಮ್ಮ ಕ್ರಮ ಅಲ್ಲ ಹೇಳಿ” ಸುಲಭಲ್ಲಿ ಹೇಳುಲಾವುತ್ತು… ಎನ್ನ ಹಾಂಗೆ ಕಷ್ಟ ಪಡುವ ಸುಮಾರು ಜೆನ ಅಮ್ಮಂದ್ರ ನೋಡಿದೆ… ಹಾಂಗಾಗಿ ನಮ್ಮದೊಂದು ಅತ್ಯುತ್ತಮ ಆಹಾರ ಪದ್ಧತಿ ಹೇಳಿ ಇದ್ದರೆ ನಮ್ಮ ಮಕ್ಕಳ ಅತ್ಯುತ್ತಮ ರೀತಿಲ್ಲಿ ಬೆಳೆಶಲಕ್ಕನ್ನೇ… ಹೇಳಿ ಅನ್ನಿಸಿತ್ತು… ಬೈಲಿನ ಎಲ್ಲೋರುದೆ ಅಮ್ಮನ ದ್ರುಷ್ಟಿಂದ ಆಲೋಚನೆ ಮಾಡಿ ಸಹಕಾರ ಮಾಡೆಕ್ಕು ಹೇಳಿ ಕೇಳಿಗೊಲ್ಲುತ್ತಾ ಇದ್ದೆ…
ಬ್ರಾಹ್ಮಣರಿ೦ಗೆ ಬರಿಯ ಆಹಾರ ಪದ್ದತಿ ಮಾ೦ತ್ರ ಸಾಕ? ಅದರಿ೦ದಲೂ ಮೊದಲು ಜೀವನ ನಿರ್ವಹಣೆಗೆ ಅವು ಎ೦ತ ಮಾಡೆಕ್ಕು ಹೇಳುದಕ್ಕೆ ಮಹತ್ವ ಇಲ್ಲೆಯಾ?
ವೈಶ್ಯರಿ೦ಗೆ ಜೀವನ ನಿರ್ವಹಣೆಗೆ ವ್ಯಾಪಾರ, ಶೂದ್ರರು ಇತರರ ಕೆಲಸ ಮಾಡಿ ಜೀವನ ನಿರ್ವಹಿಸುದು ಹೇಳಿ ಎಲ್ಲ ಮೊದಲಾಣ ಕಾಲಲ್ಲಿ ಇದ್ದತ್ತಡ. ಆದರೆ ಈಗ ಹಾ೦ಗಿದ್ದಾ? ಬ್ರಾಹ್ಮಣರು ವ್ಯಾಪಾರ ಮಾಡ್ತವು, ಬ್ರಾಹ್ಮಣರು ಶೂದ್ರರು ಮಾಡಿಗೊ೦ಡಿದ್ದ ಕೆಲಸ ಮಾಡ್ತವು.
ನಾವು ಹೇಳಿ ಇರೆಕ್ಕಪ್ಪ ಭಾವನೆ ಕೇವಲ ಹವ್ಯಕರಿ೦ಗೆ ಸೀಮಿತವಾಗಿರೆಕ್ಕಾ? ಸಮಾಜದ ಮುಖ್ಯ ವಾಹಿನಿಲಿ ಇರೆಕ್ಕಲ್ಲದಾ? ನಾವು ಎಲ್ಲರೊಳಗೊ೦ದಾಗಿರೆಕ್ಕಲ್ಲದಾ?
ಲ೦ಚಕೋರತನ, ಲ೦ಪಟತನ ಇತ್ಯಾದಿಗಳ ನಿಗ್ರಹಿಸೆಕ್ಕಲ್ಲದ್ದೆ ನೀರುಳ್ಳಿ ಬೆಳ್ಳುಳ್ಳಿ ತಿ೦ಬದರ ಎ೦ತಕ್ಕೆ ನಿಗ್ರಹಿಸೆಕ್ಕು?
ಅಷ್ಟಕ್ಕೂ ಈ ಲೌಕಿಕ ಜೀವನದ ಬಗ್ಗೆ ಆಸೆ ಮೋಹ ಇಪ್ಪದು ತಪ್ಪಾ? ನಮ್ಮ ಹವ್ಯಕರಿ೦ಗೂ ನಾವು ಹೇಳೆಕ್ಕಪ್ಪದು ಉತ್ತಮ ನಡವಳಿಕೆ ಪಡಕ್ಕೊ೦ಬಲೆ, ವಿದ್ಯಾವ೦ತರಾಗಿಪ್ಪಲೆ, ಬುದ್ದಿವ೦ತರಾಗಿಪ್ಪಲೆ ಅಲ್ಲದ್ದೆ ನೀರುಳ್ಳಿ ತಿನ್ನೆಡಿ, ಬೆಳ್ಳುಳ್ಳಿ ತಿನ್ನೆಡಿ ಹೇಳಿ ಅಲ್ಲ ಹೇಳುದು ಎನ್ನ ವೈಯುಕ್ತಿಕ ಅನಿಸಿಕೆ.
ಮನಸ್ಪೂರ್ತಿಯಾಗಿ ನೀರುಳ್ಳಿ ಬೆಳ್ಳುಳ್ಳಿ ತಿ೦ಬದು ಬಿಟ್ಟರೆ ಮತ್ತೆ ಮಸಾಲೆ ದೋಸೆಗೆ ಮಾಡುವ ಪಲ್ಯದ ರುಚಿಯ ಬಗ್ಗೆ ಕಾಳಜಿ ಸರಿಯಾ? ಇದು ಲೌಕಿಕ ಆಸೆ ಅಲ್ಲದಾ?
ಬ್ರಹ್ಮಚಾರಿ ಆಗಿಪ್ಪಗ ಎನಗೆ ನೀರುಳ್ಳಿ ಅಹಾರದ ಅವಿಭಾಜ್ಯ ಅ೦ಗ ಆಗಿತ್ತು. ಆನು ಈಗಳೂ ನೀರುಳ್ಳಿ ತಿ೦ತೆ. ಎನಗೆ ಅದಲ್ಲಿ ಯಾವದೆ ತಪ್ಪಿತಸ್ಥ ಭಾವನೆ ಇಲ್ಲೆ.
ಈ ಲೌಕಿಕ ಮತ್ತು ಅಲೌಕಿಕ ಆನ೦ದ೦ಗಳ ನಡೂಕೆ ಮನುಶ್ಯ ಬೇಕಾದ ಹಾ೦ಗೆ ‘ಸ್ವಿಚ್ ಒವೆರ್’ ಮಾಡುದು ಎನಗೆ ಆಚ್ಚರಿ ಆವ್ತು.
೧. ಬ್ರಾಹ್ಮಣರಿ೦ಗೆ ಬರಿಯ ಆಹಾರ ಪದ್ಧತಿ ಖಂಡಿತ ಸಾಲ… ಬ್ರಾಹ್ಮಣರ ಸರ್ವಾಂಗೀಣ ಅಭಿವೃದ್ದಿಗೆ, ಅ ಮೂಲಕ ದೇಶದ ಅಭಿವೃದ್ದಿಗೆ ಎಂತ ಮಾಡುಲಕ್ಕು ಹೇಳಿ ನಾವೆಲ್ಲ ಚಿಂತನೆ ಮಾಡೆಕ್ಕು…
೨. ಬ್ರಾಹ್ಮಣರ ಕರ್ತವ್ಯ ಜ್ಹಾನಾರ್ಜನೆ ಮತ್ತು ಜ್ಹಾನ ಪ್ರಸರಣ. ಬ್ರಾಹ್ಮಣ್ಯವ ಕಾಪಾಡಿಗೊಂಡು ಜೀವನ ನಿರ್ವಹಣೆಗೆ ಅತ್ಯುತ್ತಮ ಮಾರ್ಗ ಕೃಷಿ. ಇಂದು ದೇಶಲ್ಲಿ ಕೃಷಿ ಸಂಪೂರ್ಣ ಅವನತಿಯ ಸ್ಥಿತಿಲಿ ಇಪ್ಪ ಕಾರಣ ಬ್ರಾಹ್ಮಣರಿಂಗೆ ಅದರ ಅಭಿವೃದ್ದಿ ಮಾಡುಲೆ ಬೇಕಾದಷ್ಟು ಅವಕಾಶ ಇದ್ದು.
[ವೈಶ್ಯರಿ೦ಗೆ ಜೀವನ ನಿರ್ವಹಣೆಗೆ ವ್ಯಾಪಾರ, ಶೂದ್ರರು ಇತರರ ಕೆಲಸ ಮಾಡಿ ಜೀವನ ನಿರ್ವಹಿಸುದು ಹೇಳಿ ಎಲ್ಲ ಮೊದಲಾಣ ಕಾಲಲ್ಲಿ ಇದ್ದತ್ತಡ. ಆದರೆ ಈಗ ಹಾ೦ಗಿದ್ದಾ? ಬ್ರಾಹ್ಮಣರು ವ್ಯಾಪಾರ ಮಾಡ್ತವು, ಬ್ರಾಹ್ಮಣರು ಶೂದ್ರರು ಮಾಡಿಗೊ೦ಡಿದ್ದ ಕೆಲಸ ಮಾಡ್ತವು.
ನಾವು ಹೇಳಿ ಇರೆಕ್ಕಪ್ಪ ಭಾವನೆ ಕೇವಲ ಹವ್ಯಕರಿ೦ಗೆ ಸೀಮಿತವಾಗಿರೆಕ್ಕಾ? ಸಮಾಜದ ಮುಖ್ಯ ವಾಹಿನಿಲಿ ಇರೆಕ್ಕಲ್ಲದಾ? ನಾವು ಎಲ್ಲರೊಳಗೊ೦ದಾಗಿರೆಕ್ಕಲ್ಲದಾ?
ಲ೦ಚಕೋರತನ, ಲ೦ಪಟತನ ಇತ್ಯಾದಿಗಳ ನಿಗ್ರಹಿಸೆಕ್ಕಲ್ಲದ್ದೆ ನೀರುಳ್ಳಿ ಬೆಳ್ಳುಳ್ಳಿ ತಿ೦ಬದರ ಎ೦ತಕ್ಕೆ ನಿಗ್ರಹಿಸೆಕ್ಕು?]
ಮನೇಲಿ ಎಲ್ಲವೂ ಅವ್ಯವಸ್ಥಿತವಾಗಿ ಇದ್ದು ಹೇಳಿ ನಾವು ಚಿಂತೆ ಮಾಡಿಗೊಂಡು ಕೂದರೆ ಸಮಸ್ಯೆ ಪರಿಹಾರ ಆವುತ್ತಿಲ್ಲೇ. ಹಾಂಗೆ ದೇಶಲ್ಲಿ ಯಾವುದೂ ಸರಿ ಇಲ್ಲೇ ನಾವು ಸುಮ್ಮನೆ ಕೂದರೆ ಏನೂ ಪ್ರಯೋಜನ ಇಲ್ಲೇ. ದೇಶಲ್ಲಿ ಬೇರೆಲ್ಲ ಸರಿ ಇಲ್ಲೇ ಹೇಳಿ ಹೇಳುವ ಮೊದಲು ನಾವು ಸರಿ ಇದ್ದ ಹೇಳಿ ಒಂದರಿ ನೋಡಿಗೊಲ್ಲೆಕ್ಕಾವುತ್ತು… ನಾವು ಬ್ರಾಹ್ಮಣರಾಗಿ ನಮ್ಮ ಕರ್ತವ್ಯವ ಸರಿಯಾಗಿ ಮಾಡುತ್ತಾ ಇದ್ದು ಹೇಳಿ ಆದರೆ ಇತರರ ಸರಿ ಮಾಡುಲೆ ಹೆರಡುಲಕ್ಕು… ಬ್ರಾಹ್ಮಣರಲ್ಲೂ ಹಾಂಗೆ ‘ನಾವು ಪರಸ್ಪರ ಅವ ಸರಿ ಇಲ್ಲೇ… ಇವ ಸರಿ ಇಲ್ಲೇ… ಹೇಳುವ ಮೊದಲು ನಾವು ಸರಿ ಇದ್ದಾ ಹೇಳಿ ನೋಡಿಗೊಲ್ಲೆಕ್ಕಾವುತ್ತು…’. “ನಾವೊಬ್ಬ ಸರಿ ಆದರೆ ನಮ್ಮ ಪಾಲಿಂಗೆ ಜಗತ್ತು ಸರಿ ಆವುತ್ತು” ಹೇಳುದು ನೂರಕ್ಕೆ ನೂರರಷ್ಟು ಸತ್ಯ. ಆಹಾರ ಪದ್ಧತಿ ನಮ್ಮ ಗುಣ ಸ್ವಭಾವದ ಮೇಲೆ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರುವ ಕಾರಣ ನಾವು ಆಹಾರ ಪದ್ದತಿಗೆ ಪ್ರಾಮುಖ್ಯತೆ ಕೊಡಲೇ ಬೇಕು.
[ಅಷ್ಟಕ್ಕೂ ಈ ಲೌಕಿಕ ಜೀವನದ ಬಗ್ಗೆ ಆಸೆ ಮೋಹ ಇಪ್ಪದು ತಪ್ಪಾ? ನಮ್ಮ ಹವ್ಯಕರಿ೦ಗೂ ನಾವು ಹೇಳೆಕ್ಕಪ್ಪದು ಉತ್ತಮ ನಡವಳಿಕೆ ಪಡಕ್ಕೊ೦ಬಲೆ, ವಿದ್ಯಾವ೦ತರಾಗಿಪ್ಪಲೆ, ಬುದ್ದಿವ೦ತರಾಗಿಪ್ಪಲೆ ಅಲ್ಲದ್ದೆ ನೀರುಳ್ಳಿ ತಿನ್ನೆಡಿ, ಬೆಳ್ಳುಳ್ಳಿ ತಿನ್ನೆಡಿ ಹೇಳಿ ಅಲ್ಲ ಹೇಳುದು ಎನ್ನ ವೈಯುಕ್ತಿಕ ಅನಿಸಿಕೆ.
ಮನಸ್ಪೂರ್ತಿಯಾಗಿ ನೀರುಳ್ಳಿ ಬೆಳ್ಳುಳ್ಳಿ ತಿ೦ಬದು ಬಿಟ್ಟರೆ ಮತ್ತೆ ಮಸಾಲೆ ದೋಸೆಗೆ ಮಾಡುವ ಪಲ್ಯದ ರುಚಿಯ ಬಗ್ಗೆ ಕಾಳಜಿ ಸರಿಯಾ? ಇದು ಲೌಕಿಕ ಆಸೆ ಅಲ್ಲದಾ?
ಬ್ರಹ್ಮಚಾರಿ ಆಗಿಪ್ಪಗ ಎನಗೆ ನೀರುಳ್ಳಿ ಅಹಾರದ ಅವಿಭಾಜ್ಯ ಅ೦ಗ ಆಗಿತ್ತು. ಆನು ಈಗಳೂ ನೀರುಳ್ಳಿ ತಿ೦ತೆ. ಎನಗೆ ಅದಲ್ಲಿ ಯಾವದೆ ತಪ್ಪಿತಸ್ಥ ಭಾವನೆ ಇಲ್ಲೆ.ಈ ಲೌಕಿಕ ಮತ್ತು ಅಲೌಕಿಕ ಆನ೦ದ೦ಗಳ ನಡೂಕೆ ಮನುಶ್ಯ ಬೇಕಾದ ಹಾ೦ಗೆ ‘ಸ್ವಿಚ್ ಒವೆರ್’ ಮಾಡುದು ಎನಗೆ ಆಚ್ಚರಿ ಆವ್ತು.]
ಲೌಕಿಕವಾದ ಜೀವನದ ಬಗ್ಗೆ ಆಸೆ ಖಂಡಿತ ತಪ್ಪಲ್ಲ… ಈ ಜೀವನವ ಅತ್ಯುತ್ತಮ ರೀತಿಲ್ಲಿ ನಿರ್ವಹಿಸಿ ಸಾಧ್ಯವಿದ್ದಷ್ಟು ಇತರರಿಂಗೂ ಉತ್ತಮ ರೀತಿಲ್ಲಿ ನಿರ್ವಹಿಸುಲೇ ಸಹಾಯ ಮಾಡಿ ಕೊನೆಗೆ ‘ಆ ಅಲೌಕಿಕವಾದ ಆನಂದ’ ಪಡವದೆ ಪ್ರತಿಯೊಬ್ಬನ ಜೀವನದ ಗುರಿ. ಕ್ರಿಮಿ ಕೀಟಂದ ಹಿಡುದು ಉತ್ತಮೋತ್ತಮ ಜನ್ಮಂಗಳ ಪಡದು ಕೊನೆಗೆ ಮಾನವ ಜನ್ಮ… ಅದರಲ್ಲೂ ಬ್ರಾಹ್ಮಣ ಆಗಿ ಹುಟ್ಟುದು… ಹೇಳಿರೆ ನಾವು ಆ ಗುರಿಯ ಸೇರುಲೇ ಅತ್ಯಂತ ಸನಿಹಲ್ಲಿ ಇದ್ದು. ಇಷ್ಟೂ ಕಷ್ಟ ಬಂದು ಗುರಿಯ ಸಮೀಪ ಎತ್ತಿದ ನಾವು ಇನ್ನು ಬ್ರಾಹ್ಮಣ್ಯವ ಬಿಟ್ಟು ಗುರಿಂದ ಹಿಂದೆ ಹೋಯೆಕ್ಕ? ಹೇಳಿ ನಮಗೆ ನಾವೇ ಆಲೋಚನೆ ಮಾಡೆಕ್ಕು…
ಒಂದರಿ ‘ಆ ಪರಮಾನಂದ’ ಸ್ಥಿತಿಗೆ ಎತ್ತಿತ್ತು ಹೇಳಿ ಆದರೆ ಮತ್ತೆ ಅವ ಎಲ್ಲ ನಿಯಮಂಗಳ ಮೀರಿದವ… ಅವನ ಸಾಯಿಸಿರೂ ಅವಂಗೆ ಸಾವಿಲ್ಲೇ… ಅವ ಲೌಕಿಕವಾದ ಜೀವನವ ನಡೆಸುವ ಉದ್ದೇಶ ಇತರರಿಂಗೆ ಬೇಕಾಗಿ ಮಾಂತ್ರ… “ಅಮ್ಮಂಗೆ ಸಕಲ ಮರ್ಯಾದೆಗಳೊಂದಿಗೆ ಸನ್ಮಾನ ಪಡಕ್ಕೊಂಡು ಅತ್ಯುತ್ತಮ ರೀತಿಲ್ಲಿ ಇಪ್ಪ ಅವಕಾಶ ಇದ್ದರೂ ಯಾವ ತರ ಅಮ್ಮ ಹಸಿದ ಮಕ್ಕಳ ಬಿಟ್ಟಿಕ್ಕಿ ಹೋಗದೋ ಹಾಂಗೆ ಅಲೌಕಿಕವಾದ ಆನಂದ ಪಡದವ ಲೌಕಿಕವಾದ ಜೀವನಲ್ಲಿ ಇಕ್ಕು…”.
ಬ್ರಾಹ್ಮಣರಲ್ಲಿ ಸಾಕಸ್ಟು ಜನ ಕೃಷಿ ಮಾಡುವವು ಇದ್ದವು. ಆ ಬಗ್ಗೆ ಎನಗೆ ಯಾವದೇ ಗೊ೦ದಲ ಇಲ್ಲೆ.
“ಮನೇಲಿ ಎಲ್ಲವೂ ಅವ್ಯವಸ್ಥಿತವಾಗಿ ಇದ್ದು ಹೇಳಿ ನಾವು ಚಿಂತೆ ಮಾಡಿಗೊಂಡು ಕೂದರೆ ಸಮಸ್ಯೆ ಪರಿಹಾರ ಆವುತ್ತಿಲ್ಲೇ. ಹಾಂಗೆ ದೇಶಲ್ಲಿ ಯಾವುದೂ ಸರಿ ಇಲ್ಲೇ ನಾವು ಸುಮ್ಮನೆ ಕೂದರೆ ಏನೂ ಪ್ರಯೋಜನ ಇಲ್ಲೇ. ದೇಶಲ್ಲಿ ಬೇರೆಲ್ಲ ಸರಿ ಇಲ್ಲೇ ಹೇಳಿ ಹೇಳುವ ಮೊದಲು ನಾವು ಸರಿ ಇದ್ದ ಹೇಳಿ ಒಂದರಿ ನೋಡಿಗೊಲ್ಲೆಕ್ಕಾವುತ್ತು… ನಾವು ಬ್ರಾಹ್ಮಣರಾಗಿ ನಮ್ಮ ಕರ್ತವ್ಯವ ಸರಿಯಾಗಿ ಮಾಡುತ್ತಾ ಇದ್ದು ಹೇಳಿ ಆದರೆ ಇತರರ ಸರಿ ಮಾಡುಲೆ ಹೆರಡುಲಕ್ಕು… ಬ್ರಾಹ್ಮಣರಲ್ಲೂ ಹಾಂಗೆ ‘ನಾವು ಪರಸ್ಪರ ಅವ ಸರಿ ಇಲ್ಲೇ… ಇವ ಸರಿ ಇಲ್ಲೇ… ಹೇಳುವ ಮೊದಲು ನಾವು ಸರಿ ಇದ್ದಾ ಹೇಳಿ ನೋಡಿಗೊಲ್ಲೆಕ್ಕಾವುತ್ತು…’. “ನಾವೊಬ್ಬ ಸರಿ ಆದರೆ ನಮ್ಮ ಪಾಲಿಂಗೆ ಜಗತ್ತು ಸರಿ ಆವುತ್ತು” ಹೇಳುದು ನೂರಕ್ಕೆ ನೂರರಷ್ಟು ಸತ್ಯ. ಆಹಾರ ಪದ್ಧತಿ ನಮ್ಮ ಗುಣ ಸ್ವಭಾವದ ಮೇಲೆ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರುವ ಕಾರಣ ನಾವು ಆಹಾರ ಪದ್ದತಿಗೆ ಪ್ರಾಮುಖ್ಯತೆ ಕೊಡಲೇ ಬೇಕು”
ಅದರ ಅರ್ಥ ಬ್ರಾಹ್ಮಣ ಒಬ್ಬ ದೊಡ್ಡ ಉದ್ಯೋಗಲ್ಲಿಪ್ಪವ ಲ೦ಚಕೋರನಾದರೂ ಅವ ವಿಮರ್ಶಾತೀತ ಹೇಳಿಯಾ?
ನಾವು ಸರಿ ಆದರೆ ನಮ್ಮ ಪಾಲಿ೦ಗೆ ಜಗತ್ತು ಹೇ೦ಗೆ ಸರಿ ಆವ್ತು? ಜೀವನಲ್ಲಿ ಒ೦ದು ಸರ್ತಿಯೂ ಲ೦ಚ ತೆಕ್ಕೊಳದ್ದ ಮನುಶ್ಯ ಅವನ ಮನೆ ದಾಖಲೀಕರಣಕ್ಕೆ ಲ೦ಚ ಕೊಡೆಕ್ಕಾವ್ತು. ನಾವು ಸರಿ ಇದ್ದರೆ ಇದೆಲ್ಲಾ ಹೇ೦ಗೆ ಸರಿ ಆವ್ತು?
ಆಹಾರ ಪದ್ದತಿ ತು೦ಬಾ ದೊಡ್ಡ ಮಾತಾತು, ಬರಿಯ ನೀರುಳ್ಳಿ ಬೆಳ್ಳುಳ್ಳಿ ಮನುಶ್ಯರ ಸ್ವಭಾವ ಬದಲುಸುತ್ತು ಹೇಳುದು ಎಸ್ಟು ಸರಿ? ಮನುಶ್ಯನ ಬೆಳದು ಬ೦ದ ಪರಿಸರ, ಅವನ ಗೆಳೆತನ, ಒಡನಾಟ ಇದೆಲ್ಲ ಮನುಶ್ಯನ ಅಲೋಚನೆಗಳ ಮೇಲೆ ಪ್ರಭಾವ ಬೀರುಗು, ಆದರೆ ನಿರುಪದ್ರವಿ ನೀರುಳ್ಳಿ ಬೆಳ್ಳುಳ್ಳಿ ಅಲ್ಲ.
ಎನ್ನ ಸೀಮಿತ ತಿಳುವಳಿಕೆ ಪ್ರಕಾರ ‘ನೀರುಳ್ಳಿ ಬೆಳ್ಳುಳ್ಳಿ’ ತಿ೦ಬದು ಬಿಟ್ಟು ‘ಎನ್ನ ಜೀವನ ಅತ್ಯುತ್ತಮ ರೀತಿ ಆನು ನಿರ್ವಹಿಸುತ್ತಾ ಇದ್ದೆ’ ಹೇಳೀರೆ ಅದು ಬರಿಯ ಆತ್ಮ ವ೦ಚನೆ . ಮತ್ತೆ ಇಹ ಲೋಕಲ್ಲಿಪ್ಪ ಜನ೦ಗ ಲೌಕಿಕ ಚಿ೦ತನೆ ಮಾಡದ್ದರೆ ಇನ್ನಾರು ಮಾಡುದು ಲೌಕಿಕ ಚಿ೦ತನೆ?
ಮತ್ತೆ ಈ ಪರಮಾನ೦ದ ಹೇಳುದು ಅಳವಲೆ ಎಡಿಯ. ಅದು ಬರಿಯ ಮನೋಸ್ಥಿತಿ.
ನಿಂಗ ಹೇಳಿದ ಹಾಂಗೆ ಮನುಶ್ಯನ ಬೆಳದು ಬ೦ದ ಪರಿಸರ, ಅವನ ಗೆಳೆತನ, ಒಡನಾಟ ಇದೆಲ್ಲ ಮನುಶ್ಯನ ಅಲೋಚನೆಗಳ ಮೇಲೆ ಪ್ರಭಾವ ಬೀರುತ್ತು… ನಮ್ಮ ಮಕ್ಕೊಗೆ ಅತ್ಯುತ್ತಮ ಆಹಾರ, ಅತ್ಯುತ್ತಮ ಪರಿಸರ ಸಿಕ್ಕುಲೇ ಎಂತ ಮಾಡುಲಕ್ಕು ಹೇಳಿ ಚಿಂತನೆ ಮಾಡುವ…
ಅತ್ಯುತ್ತಮ ಆಹಾರ ಪದ್ಧತಿ ರೂಪಿಸೆಕ್ಕು ಹೇಳಿಯೇ ನಮ್ಮ ಆಶಯ.ಬ್ರಾಹ್ಮಣರ ಆಹಾರ ಪದ್ದತಿಲ್ಲಿ ಸಂಪೂರ್ಣ ನಿಷೇಧ ಹೇಳಿದ ‘ನೀರುಳ್ಳಿ,ಬೆಳ್ಳುಳ್ಳಿ’ ಇದರ ವರ್ಜ್ಯವ ಪ್ರಥಮ ಹಂತವಾಗಿ ಆರಿಸಿಗೊಂಡದು.
{ ಬ್ರಾಹ್ಮಣರ ಆಹಾರ ಪದ್ದತಿಲ್ಲಿ ಸಂಪೂರ್ಣ ನಿಷೇಧ ಹೇಳಿದ ‘ನೀರುಳ್ಳಿ,ಬೆಳ್ಳುಳ್ಳಿ’ ಇದರ ವರ್ಜ್ಯವ ಪ್ರಥಮ ಹಂತವಾಗಿ ಆರಿಸಿಗೊಂಡದು }
ಒಂದು ಅರಿಕೆ. ಬ್ರಾಹ್ಮಣ್ಯದ ಕಾನ್ಸೆಪ್ಟ್ ನ ಮೂಲ ವೇದೋಪನಿಷತ್ತು (ಬಹುಷ: ಅಥರ್ವದ ಹೊರತಾಗಿ). ಅದರಲ್ಲಿ ನೀರುಳ್ಳಿ ಬೆಳ್ಳುಳ್ಳಿ ನಿಷೇಧ ಇದ್ದಾ? ಎನಗೆ ತಿಳುದಿಪ್ಪ ಪ್ರಕಾರ ಇಲ್ಲೆ. ಅದರ ನಂತರ ಬಂದ ಗ್ರಂಥಂಗಳಲ್ಲಿ ನಿರ್ದಿಷ್ಟ ಕಾರಣಕ್ಕೆ ನಿಷೇಧ ಬಂದದಾದಿಕ್ಕು. ಅದಕ್ಕೆ ಅಷ್ಟು ಮಹತ್ವ ಕೊಡೆಕ್ಕು ಹೇಳಿ ಇಲ್ಲೆ ಹೇಳಿ ಎನ್ನ ಅನಿಸಿಕೆ.
ನಾವು ಹಿಂದಂಗೆ ತಿರುಗಿ ಹೋವುತ್ತರೆ ಈಗ ಇದ್ದಲ್ಲಿಂದಲೇ ಹಿಂದೆ ಹಿಂದೆ ಹೋಯೆಕ್ಕಷ್ಟೇ… ವೇದ ಕಾಲಂದ ಸುರು ಮಾಡಿ ಅರ್ಥಯಿಸಿಗೊಂಡು ಬರೆಕ್ಕಾರೆ ಮಧ್ಯಲ್ಲಿ ಎಂತೆಲ್ಲ ಆತು ಹೇಳಿ ನಮಗೆ ಗೊಂತಿರೆಕ್ಕಾವುತ್ತು…
‘ನೀರುಳ್ಳಿ,ಬೆಳ್ಳುಳ್ಳಿ’ ರಾಜಸ,ತಾಮಸ ಗುಣಗಳ ಹೆಚ್ಚಿಸುವ ಕಾರಣ ಅದು ಬ್ರಾಹ್ಮಣರಿಂಗೆ ನಿಶಿದ್ದ ಹೇಳಿ ನಮಗೆ ಇಂದು ಗೊಂತಿದ್ದು ಮತ್ತು ಪೂಜೆ,ವ್ರತದ ದಿನ ಇಂದು ಕೂಡಾ ನಾವು ಸೇವಿಸುತ್ತಿಲ್ಲೇ…
ಆದರೂ ಮಹೇಶಣ್ಣಾ ಈ ಹೊಗೆಸೊಪ್ಪು, ಕುಚ್ಚಲಕ್ಕಿ ಅನ್ನ, ಚರ್ಮೋತ್ಪನ್ನ೦ಗ, ಕ್ರ್ಸಿಷ್ನಾಜಿನ ಇದಕ್ಕೆಲ್ಲ ಇಲ್ಲದ್ದ ನಿಶೇಧ ಈ ನೀರುಳ್ಳಿ ಬೆಳ್ಳುಳ್ಳಿ ಗೆ ಇಪ್ಪದು ನೋಡೀರೆ ಆಚ್ಚರಿ ಆವ್ತು.
ಬ್ರಾಹ್ಮಣರಿಂಗೆ ಸಂಪೂರ್ಣ ನಿಷೇಧ ಹೇಳಿದ ‘ನೀರುಳ್ಳಿ,ಬೆಳ್ಳುಳ್ಳಿ’, ಆರೋಗ್ಯಕ್ಕೆ ಒಳ್ಳೆದಲ್ಲದ್ದ ‘ಚಹಾ,ಕಾಫಿ, ಐಸ್ಕ್ರೀಂ,ಚಾಕಲೇಟ್’ ಇವುಗಳ ಮೊದಲ ಹಂತಲ್ಲಿ ಆರಿಸಿಗೊಂಡದು. ಹೊಗೆಸೊಪ್ಪು ಬ್ರಾಹ್ಮಣರು ಸೇವಿಸುತ್ತ ಇಲ್ಲೇ ಹೇಳಿ ತಿಳುಕ್ಕೊಂಡದು… ಎರಡನೇ ಹಂತಲ್ಲಿ ಎಂತೆಲ್ಲ ಕ್ರಮಂಗಳ ಅಳವಡಿಸಿಗೊಂಬಲಕ್ಕು ಹೇಳಿ ದಯವಿಟ್ಟು ತಿಳಿಸೆಕ್ಕು…
ಇ೦ದು ನಿ೦ಗ ಹೆಚ್ಚಿನ ಹವ್ಯಕರ ಕಾರ್ಯಕ್ರಮ೦ಗಳಲ್ಲೂ ‘ಎಲೆ ತಟ್ಟೆ’ ನೋಡುಲೆಡಿಗು. ಆದಲ್ಲಿ ರಾರಾಜಿಸಿಗೊ೦ಡಿಪ್ಪ ಹೊಗೆ ಸೊಪ್ಪು ಕಣ್ಣಿ೦ಗೆ ಕಾ೦ಗು, ಒಟ್ಟಿ೦ಗೆ ‘ಇದು ಕುಣಿಯವೋ ಭಾವ?’ ಹೇಳಿ ವಿಮರ್ಶೆ ಮಾಡಿಗೊ೦ಡು ಅದರ ಎಲೆ ಒಟ್ಟಿ೦ಗೆ ತಿ೦ಬ ನಮ್ಮ ಜಾತಿಯೊರನ್ನೂ ಕಾ೦ಗು. (ಸಣ್ಣ ಪ್ರಾಯದ ಜವ್ವನಿಗರನ್ನೂ ಸೇರುಸಿ)
ಕುಚ್ಚಲಕ್ಕಿ ಅನ್ನ ಯಾವದಾದರೂ ಕಾರ್ಯಕ್ರಮ೦ಗಳಲ್ಲಿ ಮಾಡ್ತವಾ? ಎ೦ತಕ್ಕೇಳೀರೆ ಅದು ಒ೦ದರಿ ಬೇಶಿದ್ದು, ಬ್ರಾಃಮಣರಿ೦ಗೆ ಅದು ವರ್ಜ್ಯ ಹೇಳುದೇ ಕಾರಣ. ಆದರೆ ನಮ್ಮೋರು ನಿತ್ಯೋಪಯೋಗಕ್ಕೆ ಬಳಸುತ್ತವಿಲ್ಲೆಯಾ ಅದರ?
ಸ೦ಪೂರ್ಣ ಸಾತ್ವಿಕ ಗುಣ೦ಗ ಇರೆಕ್ಕಾದ ನಮ್ಮೋರು ಚರ್ಮೋತ್ಪನ್ನ೦ಗಳ ಉಪಯೋಗಿಸುದು ಸರಿಯಾ?
ದಿನೋಪಯೋಗೀ ವಸ್ತುಗಳಾದ ಟೂತ್ ಪೇಸ್ತ್ ಎ೦ತರ ಉಪಯೋಗಿಸಿ ಮಾಡ್ತವು ಹೇಳಿ ಅ೦ದಾಜಿ ಇಕ್ಕನ್ನೆ? ಶಕ್ಕರೆ ಶುದೀಕರಣ ಮಾಡುದು ಹೇ೦ಗೆ ಹೇಳಿ ಗೊ೦ತಿಕ್ಕನೆ? ಅದೆಲ್ಲಾ ವರ್ಜಿಸೆಕ್ಕು ಬ್ರಾಹ್ಮಣರು ಹೇಳೀರೆ ಎಡಿಗಾ?
ಬಹುಶ ನೀರುಳ್ಳಿ ಬೆಳ್ಳುಳ್ಳಿ ೦ದ ಮೊದಲು ಇದೆಲ್ಲ ವರ್ಜಿಸೆಕ್ಕಕ್ಕು ಸ೦ಪೂರ್ಣ ಬ್ರಾಃಮಣೀಕರಣ ಬೇಕಾರೆ.
ಎಡಿಗು ಹೇಳಿ ಪ್ರಯತ್ನ ಮಾಡಿರೆ ಖಂಡಿತ ಎಡಿಗು… ಎಂಗಳ ಮನೆಗೆ ನೀರುಳ್ಳಿ,ಬೆಳ್ಳುಳ್ಳಿ,ಐಸ್ ಕ್ರೀಂ,ಚಾಕಲೇಟ್ ತಪ್ಪದರ ನಿಲ್ಲುಸಿದ್ದೆಯ… ಕಾಪಿ ಹುಡಿ,ಚಾ ಹುಡಿ ಬಂದವರಿಂಗೆ ಮಾಡಿ ಕೊಡುಲೆ ಬೇಕಾರೆ ಹೇಳಿ ಮಾಂತ್ರ ಮಡಿಕ್ಕೊಂಡಿದೆಯ… ಮೊದಲು ಎಂಗಳಲ್ಲಿ ಕಷಾಯದ ಹೊಡಿ ಇತ್ತಿಲ್ಲೇ… ಈಗ ಸುಮಾರು ಜೆನ ಬಂದವುದೇ ಕಷಾಯ(ಕಷಾಯ ಇದ್ದರೆ ಅದುವೇ ಅಕ್ಕು) ಹೇಳಿ prefer ಮಾಡುತ್ತವು… ಬೆಲ್ಲದ ಬದಲು (ಜೋನಿ ಬೆಲ್ಲ) ಹೇಳಿ ತಪ್ಪಲೆ ಶುರು ಮಾಡಿದ್ದೆಯ… ಟೂತ್ ಪೇಸ್ಟ್ ಬದಲು ‘ಗೌ ಗಂಗಾ’ ಹೇಳಿ ಮಠದ ಉತ್ಪನ್ನ ಉಪಯೋಗಿಸುತ್ತಾ ಇದ್ದೆಯಾ…
ನಮ್ಮ ನಮ್ಮ ಮನೆಗಳಲ್ಲಿ ಅಳವಡಿಸುತ್ತಾ ಹೋದರೆ ಸಾಕು… ಅದರಲ್ಲಿಪ್ಪ ಒಳ್ಳೆಯ ಅಂಶಗಳ ಗಮನಿಸಿ ನಮ್ಮ ಮನೆಗೆ ಬಪ್ಪವುದೇ ಅಳವಡಿಸಿಗೊಳ್ಳುತ್ತವು… ಈಗ ಇಪ್ಪವರ ತಿದ್ದುವುದಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸಿಲ್ಲಿ ನಮ್ಮ ಮಕ್ಕಳ ಬಗ್ಗೆ ಆಲೋಚನೆ ಮಾಡೆಕ್ಕು… ಹೀಂಗೆ ನಮ್ಮ ಮಕ್ಕಳ ಕಾಲಕ್ಕಪ್ಪಗ ಪ್ರತಿಯೊಬ್ಬನ ಮನೆಲಿಯೂ ಒಳ್ಳೆ ಕ್ರಮಂಗ ಬಕ್ಕು… ಹಂತ ಹಂತವಾಗಿ ಮುಂದೆ ಹೋಪ…
ಎನ್ನ ಚಿಕ್ಕಮ್ಮ ಒಬ್ಬರು ಮಂಗಳೂರಿಲ್ಲಿ ಇಪ್ಪದು. ಅವು ಆರೋಗ್ಯಕ್ಕೆ ಒಳ್ಳೆದು ಹೇಳಿ ಪೇಟೆ ಮನೆಲಿಯೂ ಮಣ್ಣಿನ ಪಾತ್ರೆಲಿ ಅಡಿಗೆ ಮಾಡುತ್ತಾ ಇದ್ದವು. ಕರಟದ ಸೌಟು ಉಪಯೋಗಿಸುತ್ತಾ ಇದ್ದವು. ಪಳ್ಳತ್ತಡ್ಕ ಕೇಶವ ಭಟ್ ಇವರತ್ರೆ ಕೇಳಿ ಹಲವು ಸಾತ್ವಿಕ ಆಹಾರ ಪದ್ದತಿಯ ಅಳವಡಿಸಿಗೊಂಡಿದವು…
ಅವರ ಪ್ರಭಾವಂದ ಅವರ ನೆಂಟರು ಹಲವು ಜೆನ ಅಳವಡಿಸಿಗೊಳ್ಳುತ್ತಾ ಇದ್ದವು… ಆನೂ ಅವರಿಂದ ಪ್ರಭಾವಿತಳಾಗಿ ಇವರತ್ರೆ ಹೇಳಿದೆ ನಾವುದೇ ಸಾತ್ವಿಕ ಆಹಾರ ಪದ್ದತಿಯ ಅಳವಡಿಸಿಗೊಂಬ ಹೇಳಿ… ಅದಕ್ಕೆ ಇವು ಹೇಳಿದವು “ನಾವು ಮಾಂತ್ರ ಕಷ್ಟಪಟ್ಟು ಸಾತ್ವಿಕ ಆಹಾರ ಪದ್ದತಿಯ ಅಳವಡಿಸಿಗೊಂಡು ೧೦ ವರ್ಷ ಹೆಚ್ಚು ಬದುಕ್ಕಿರೆ ಎಂತ ಪ್ರಯೋಜನ? ನಾವು ಮಾಂತ್ರ ಅರೋಗ್ಯವಾಗಿದ್ದರೆ ಎಂತ ಪ್ರಯೋಜನ?” ಅಷ್ಟಪ್ಪಗ ಇವು ಹೇಳಿದ್ದು “ಅಪ್ಪು” ಹೇಳಿ ಅನ್ನಿಸಿದ್ದು ಎನಗೆ…
ಈಗ ‘ಹರೇ ರಾಮ’ ದ ಪ್ರಭಾವಂದ ಕಲ್ತುಗೊಂಡಿದೆ “ನಾವೊಬ್ಬ ಬದಲಾದರೆ ನಮ್ಮ ಪಾಲಿಂಗೆ ಜಗತ್ತು ಬದಲಾವುತ್ತು”. ಈಗ ಎಂಗ ಅಳವಡಿಸಿಗೊಳ್ಳುತ್ತಾ ಇದ್ದ ಹಾಂಗೆ ಎಂಗಳ ಸಂಪರ್ಕಲ್ಲಿಪ್ಪ ಹಲವು ಜನ ಅಳವಡಿಸಿಗೊಳ್ಳುತ್ತಾ ಇಪ್ಪದು ಕಾಣುತ್ತಾ ಇದ್ದು… ಹಾಂಗಾಗಿ ಎನ್ನ ಅನುಭವಂಗಳ ಬೈಲಿಲ್ಲಿಯೂ ಹಂಚಿಗೊಳ್ಳುತ್ತ ಇದ್ದೆ. “ಜಗತ್ತು ಬದಲಾಗಲಿ ಹೇಳಿ ಕಾವ ಬದಲು ನಾವು ಬದಲಾದರೆ ನಮ್ಮ ಪಾಲಿಂಗೆ ಜಗತ್ತು ಬದಲಾವುತ್ತು…”.
ನಿಂಗ ಹೇಳಿದ ಹಾಂಗೆ ಜೆಮ್ಬಾರಂಗಳಲ್ಲಿ ಎಲೆ ತಟ್ಟೆಲ್ಲಿ ಹೊಗೆಸೊಪ್ಪು ಮಡುಗುದರ ನಿಲ್ಲುಸೆಕ್ಕು… ಹೊಗೆಸೊಪ್ಪು ಆರೋಗ್ಯಕ್ಕೆ ಒಳ್ಳೇದಲ್ಲ ಹೇಳಿ ಪ್ರತಿಯೊಬ್ಬಂಗೂ ಗೊಂತಿದ್ದು… ನಾವು ದಾಕ್ಷಿಣ್ಯ ತೋರುಸಿ ಎಲೆ ತಟ್ಟೆಲ್ಲಿ ಹೊಗೆಸೊಪ್ಪು ಮಡುಗುವ ಮೂಲಕ ತಪ್ಪು ಕೆಲಸವನ್ನೇ ಮಾಡುದು…
ಜಯಕ್ಕಾ, ಬ್ರಾಹ್ಮಣರಾಗಿ ಹುಟ್ಟುದು ಹೇಳಿರೆ ಎಂತ? ಬ್ರಾಹ್ಮಣ ಜಾತಿಲಿ ಹುಟ್ಟುದಲ್ಲದೋ? ಒಂದು ಜಾತಿಲಿ ಹುಟ್ಟಿದ ತಪ್ಪಿಂಗೆ ಅತ್ಲಾಗಿ ಇತ್ಲಾಗಿ ನೋಡದ್ದೆ ಅನುಸರಿಸುದು ಸರಿಯಾ?
ಬ್ರಾಹ್ಮಣರ ಕರ್ತವ್ಯ ಜ್ಹಾನಾರ್ಜನೆ ಮತ್ತು ಜ್ಹಾನ ಪ್ರಸರಣ -ಸರಿಯೇ..
ಇದು ಹೀಂಗೂ ಆವುತ್ತಲ್ಲದಾ?
ಜ್ಹಾನಾರ್ಜನೆ ಮತ್ತು ಜ್ಹಾನ ಪ್ರಸರಣ ಮಾಡುವವ್ವು ಬ್ರಾಹ್ಮಣರು 🙂
ಬ್ರಾಹ್ಮಣರ ಕರ್ತವ್ಯ ಜ್ಹಾನಾರ್ಜನೆ ಮತ್ತು ಜ್ಹಾನ ಪ್ರಸರಣ
ಜ್ಹಾನಾರ್ಜನೆ ಮತ್ತು ಜ್ಹಾನ ಪ್ರಸರಣ ಮಾಡುವವ್ವು ಬ್ರಾಹ್ಮಣರು
ಎರಡೂ ಸರಿಯೇ 🙂
ಬ್ರಾಹ್ಮಣರು ಹೇಳಿಗೊಂಬ ನಾವು ನಮ್ಮ ಆಹಾರ ಪದ್ಧತಿ,ಆಚಾರ, ಕ್ರಮಂಗಳ ಒಳಿಶಿಗೊಂಡು ಬ್ರಾಹ್ಮಣರಾಗಿ ಒಳಿಯೆಕ್ಕು ಹೇಳುದೂ ಅಷ್ಟೇ ಸರಿ… 🙂
ದೇಶಲ್ಲಿ ಬ್ರಾಹ್ಮಣರು,ಕ್ಷತ್ರಿಯರು,ವೈಶ್ಯರು,ಶೂದ್ರರು ಎಲ್ಲರೂ ಬೇಕು… ಆರುದೇ ಮೇಲಲ್ಲ,ಕೀಳಲ್ಲ… ಅಥವಾ ನಮ್ಮೊಳದಿಕೆ ಪ್ರೀತಿಯಿದ್ದರೆ ಈ ಮೇಲು ಕೀಳು ಹೇಳುವ ಭಾವ ಬಪ್ಪಲೆ ಸಾಧ್ಯವೇ ಇಲ್ಲೇ…
ಎಷ್ಟೋ ತಲೆಮಾರುಗಳಿಂದ ಬ್ರಾಹ್ಮಣರಾಗಿ ಒಳುಕ್ಕೊಂಡು ಬಂದ ನಮಗೆ ಈಗ ‘ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ’ ಹೇಳಿಗೊಂಡು ಬ್ರಾಹ್ಮಣ್ಯವ ಬಿಡುಲೆ ಸುಲಭ. ಆದರೆ ಇತರರಿಂಗೆ ಬ್ರಾಹ್ಮಣರು ಅಪ್ಪದು ಅಷ್ಟು ಸುಲಭದ ಕೆಲಸ ಅಲ್ಲ… ಅವರ ಶ್ರಮಂದ ಅಪ್ಪಲಾಗ ಹೇಳಿ ಇಲ್ಲೇ… ಆದರೆ ಅತಿ ವಿರಳ… ಈ ಜ್ಹಾನಾರ್ಜನೆ ಹೇಳಿರೆ ಪುಸ್ತಕಲ್ಲಿಪ್ಪದರ ಓದಿ ಇತರರಿಂಗೆ ಹೇಳುದು ಅಲ್ಲ… ಅದಕ್ಕೆ ಒಂದು ಮನೋಸ್ಥಿತಿ ಬೇಕು… ಆ ಮನೋಸ್ಥಿತಿಗೆ ಎತ್ತುಲೇ ನಮ್ಮ ಆಹಾರ ಪದ್ಧತಿ,ಆಚರಣೆಗೋ,ಕ್ರಮಂಗೋ… ಎಲ್ಲ ಸಹಾಯ ಮಾಡುತ್ತು. ಹಾಂಗೆ ನಮ್ಮ ವಂಶ ವೃಕ್ಷವೂ ಕಾರಣ… ಹಾಂಗಾರೆ ದೇಶಲ್ಲಿ ಸಮತೋಲನವ ಕಾಪಾಡುವ ಸದುದ್ದೇಶಂದ ನಾವು ಬ್ರಾಹ್ಮಣರು ಬ್ರಾಹ್ಮಣರಾಗಿ ಒಳಿಯೆಕ್ಕಾದು ಅತೀ ಅವಶ್ಯ ಅಲ್ಲದ?
{ಬ್ರಾಹ್ಮಣರು ಹೇಳಿಗೊಂಬ ನಾವು ನಮ್ಮ ಆಹಾರ ಪದ್ಧತಿ,ಆಚಾರ, ಕ್ರಮಂಗಳ ಒಳಿಶಿಗೊಂಡು ಬ್ರಾಹ್ಮಣರಾಗಿ ಒಳಿಯೆಕ್ಕು ಹೇಳುದೂ ಅಷ್ಟೇ ಸರಿ… } – ಸರಿ 🙂
{ದೇಶಲ್ಲಿ ಬ್ರಾಹ್ಮಣರು,ಕ್ಷತ್ರಿಯರು,ವೈಶ್ಯರು,ಶೂದ್ರರು ಎಲ್ಲರೂ ಬೇಕು… ಆರುದೇ ಮೇಲಲ್ಲ,ಕೀಳಲ್ಲ… ಅಥವಾ ನಮ್ಮೊಳದಿಕೆ ಪ್ರೀತಿಯಿದ್ದರೆ ಈ ಮೇಲು ಕೀಳು ಹೇಳುವ ಭಾವ ಬಪ್ಪಲೆ ಸಾಧ್ಯವೇ ಇಲ್ಲೇ} ಇದೂ ಅಪ್ಪು.
ಆದರೆ,
{ಒಳುಕ್ಕೊಂಡು ಬಂದ ನಮಗೆ – ಬ್ರಾಹ್ಮಣ್ಯವ ಬಿಡುಲೆ ಸುಲಭ} – ಒಳುಕ್ಕೊಂಡು ಬಂದಿದ್ದರೆ – ಹಿಡುದಿದ್ದರೆ…!! (ಒಳುದ್ದು ಮತ್ತೆ ಹಿಡುಕ್ಕೊಂಡಿಪ್ಪದು ಕೆಲವರಲ್ಲಿ ಮಾತ್ರ ಅಲ್ಲದೋ?)
{ ಇತರರಿಂಗೆ ಬ್ರಾಹ್ಮಣರು ಅಪ್ಪದು ಅಷ್ಟು ಸುಲಭದ ಕೆಲಸ ಅಲ್ಲ} – ನವಗೂ ಒಳುಶಿಯೊಂಬಲೆ ಅಷ್ಟೇ ಕಷ್ಟ ಇದ್ದು. ಅರ್ಜನೆ ಮತ್ತು ರಕ್ಷಣೆಗೆ ಬೇಕಪ್ಪದು ಒಂದೇ ಮಟ್ಟಿನ ಶ್ರಮ ಅಲ್ಲದಾ?
ಅಂಬಗ,
ಆಹಾರ ಕ್ರಮ ಹೇಳಿರೆ ಅವರವರ ವಯಕ್ತಿಕ ವಿಚಾರ ಹೇಳಿ ಆತನ್ನೆ.
ಅವರವರ ಮನೋಸ್ಥಿತಿಯ ಮೇಲೆ – ಅವರವರ ಆಹಾರ ಕ್ರಮ.
ಒಂದು ಜಾತಿಲಿ ಹುಟ್ಟಿದ ಮಾತ್ರಕ್ಕೆ ಆ ಜಾತಿಯ ಮೂಲ ಗುಣಂಗೊ ಬರೆಕಾದ ಆಹಾರ ಕ್ರಮವ ಅವರ ಮೇಲೆ ಆರೋಪ ಮಾಡುದು ಸರಿಯೋ? ಆಹಾರವ ದೇಹ ಪ್ರಕೃತಿಗೆ ಹೊಂದಿಯೊಂಡು ತೆಕ್ಕೊಂಬದು ಒಳ್ಳೆದಲ್ಲದಾ?
{ಒಳುಕ್ಕೊಂಡು ಬಂದಿದ್ದರೆ – ಹಿಡುದಿದ್ದರೆ…!! (ಒಳುದ್ದು ಮತ್ತೆ ಹಿಡುಕ್ಕೊಂಡಿಪ್ಪದು ಕೆಲವರಲ್ಲಿ ಮಾತ್ರ ಅಲ್ಲದೋ?)}
{ ಇತರರಿಂಗೆ ಬ್ರಾಹ್ಮಣರು ಅಪ್ಪದು ಅಷ್ಟು ಸುಲಭದ ಕೆಲಸ ಅಲ್ಲ} – ನವಗೂ ಒಳುಶಿಯೊಂಬಲೆ ಅಷ್ಟೇ ಕಷ್ಟ ಇದ್ದು. ಅರ್ಜನೆ ಮತ್ತು ರಕ್ಷಣೆಗೆ ಬೇಕಪ್ಪದು ಒಂದೇ ಮಟ್ಟಿನ ಶ್ರಮ ಅಲ್ಲದಾ?
ಎಲ್ಲರಿಂಗೂ ಸಹಜವಾಗಿ ಮೇಲ್ನೋಟಕ್ಕೆ ಅಪ್ಪು ಹೇಳಿ ಅನ್ನಿಸುವ ವಿಷಯ. ಆದರೆ ಇಲ್ಲಿ ನಾವು ವಂಶವಾಹಿಯ ಬಗ್ಗೆ ಪ್ರಧಾನವಾಗಿ ಆಲೋಚನೆ ಮಾಡೆಕ್ಕು. ಇಂದು ಕಾಣುತ್ತಾ ಇಪ್ಪ ಬ್ರಾಹ್ಮಣ ಕಾಲದ ಪ್ರಭಾವಂದ ಶೂದ್ರನ ಹಾಂಗೆ ಕಾಣುತ್ತರೂ ಅವ ಬ್ರಾಹ್ಮಣ ವಂಶದವ ಹೇಳಿ ಆದರೆ ಅವನಲ್ಲಿ ಬ್ರಾಹ್ಮಣ್ಯ ಅವ್ಯಕ್ತವಾಗಿ ಇಕ್ಕು… ಸರಿಯಾದ ಆಹಾರ,ಪರಿಸರ,ಒಡನಾಟ ಸಿಕ್ಕಿದರೆ ಅವನ ಮಗ ಅತ್ಯಂತ ಸುಲಭಲ್ಲಿ(ಹೆಚ್ಚಿಗೆ ಶ್ರಮ ಇಲ್ಲದ್ದೆ) ಅತ್ಯುತ್ತಮ ಬ್ರಾಹ್ಮಣ ಅಕ್ಕು…
ಅಷ್ಟಕ್ಕೂ ಇಪ್ಪ ಕೆಲವರಿಂಗಾದರೂ ಬ್ರಾಹ್ಮಣ್ಯವ ಒಳಿಶಿಗೊಲ್ಲೆಕ್ಕಾರೆ ಬ್ರಾಹ್ಮಣರ ಆಹಾರ ಪದ್ಧತಿ ಬೇಕೇ ಬೇಕು ಅಲ್ಲದ. ಬಲ್ಲವರಿಂದ ತಿಳುಕ್ಕೊಂಡು ಸಾಧ್ಯವಿದ್ದಷ್ಟು ಅಳವಡಿಸಿಗೊಂಬ… ಬ್ರಾಹ್ಮಣ ಆಗಿ ಒಳುಕ್ಕೊಲ್ಳೆಕ್ಕು ಹೇಳಿ ಆಸೆ ಇಪ್ಪವಕ್ಕೆ ಆದರೂ ಸಹಾಯ ಅಕ್ಕನ್ನೇ…
ಸರಿ ಸರಿ..
{ದೇಶಲ್ಲಿ ಸಮತೋಲನವ ಕಾಪಾಡುವ ಸದುದ್ದೇಶಂದ ನಾವು ಬ್ರಾಹ್ಮಣರು ಬ್ರಾಹ್ಮಣರಾಗಿ ಒಳಿಯೆಕ್ಕಾದು ಅತೀ ಅವಶ್ಯ ಅಲ್ಲದ?} – ಅಪ್ಪಪ್ಪು… 🙂 🙂
ಇದು ತುಂಬಾ ಗಂಭೀರವಾದ ವಿಷಯ… ದೇಶಲ್ಲಿ ಇಂದು ಇಪ್ಪ ಸಮಸ್ಯೆಗೆಲ್ಲ ಬ್ರಾಹ್ಮಣರ ಕೊರತೆಯೇ ಪ್ರಧಾನ ಕಾರಣ ಹೇಳಿರೂ ತಪ್ಪಾಗ…
“ಗೋ ಬ್ರಾಹ್ಮಣೇಭ್ಯ ಶುಭಮಸ್ತು ನಿತ್ಯಂ… ಲೋಕಾ: ಸಮಸ್ತಾ: ಸುಖಿನೋ ಭವಂತು” ಸಮಸ್ತ ಲೋಕಗಳಲ್ಲಿ ಇಪ್ಪವು ಸುಖವಾಗಿರೆಕ್ಕಾರೆ ‘ಗೋ’ ಮತ್ತು ‘ಬ್ರಾಹ್ಮಣರು’ ಸುಖವಾಗಿರೆಕ್ಕು…
ಬ್ರಾಹ್ಮಣರು ಜ್ಹಾನಾರ್ಜನೆ ಮಾಡಿ ಒಳುದವಕ್ಕೆ ಮಾರ್ಗದರ್ಶನ ಮಾಡೆಕ್ಕಾದವು… operating system ಗೆ virus ಬಂದರೆ ಎಂತ ಮಾಡುದು?
ದೇಶದ ಅಭಿವೃದ್ದಿಗೆ ಬೇಕಾಗಿ ಮೊದಲು ನಡೆಕಾದ ಕೆಲಸ ಬ್ರಾಹ್ಮಣರ ಅಭಿವೃದ್ದಿ… ಹಾಂಗೆ ಹೇಳಿ ಇಂದ್ರಾಣ government ಹತ್ತರೆ ಇದರ ಹೇಳಿರೆ ಏನೇನೂ ಪ್ರಯೋಜನ ಇಲ್ಲೇ… ನಾವು ‘ಉದ್ಧರೇತ್ ಆತ್ಮನಾ ಆತ್ಮಾನಂ’ ಹೇಳಿ ನಮ್ಮ ಅಭಿವೃದ್ದಿಯ ನಾವೇ ಕಂಡುಗೊಂಬ… ಆ ಮೂಲಕ ದೇಶದ ಅಭಿವೃದ್ದಿ ಆಗಲಿ…
{ಬ್ರಾಹ್ಮಣರ ಕೊರತೆಯೇ ಪ್ರಧಾನ ಕಾರಣ } – ಬ್ರಾಹ್ಮಣ ಜಾತಿಲಿ ಹುಟ್ಟಿದ ಜೆನರ ಕೊರತೆ ಅಲ್ಲ, ಬ್ರಾಹ್ಮಣ್ಯ ಒಳಿಶಿಯೊಂಡ/ಅರ್ಜಿಸಿಯೊಂಡ ಜೆನರ ಕೊರತೆ… ಅಲ್ಲದಾ??
ಒಳುದೆಲ್ಲ ವಿಷಯಕ್ಕೆ ಅಪ್ಪಪ್ಪು ಹೇಳಿ ತಲೆ ಆಡುಸಿದ್ದೆ…
ಅಪ್ಪು
ಇಡೀ ದೇಶ ‘ಬ್ರಾಹ್ಮಣರ’ ಕೈಲಿ ಇಪ್ಪದು ಹೇಳುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೆ.
ಯಾವುದೇ ಸರಕಾರೀ ಉದ್ಯೋಗಿ ಅಥವಾ ರಾಜಕಾರಣಿ ಕುರ್ಚಿಗಾಗಿ ಹೋರಾಡುತ್ತಾ ಇದ್ದರೆ ಅವ ಒಬ್ಬ ‘ಬ್ರಾಹ್ಮಣನ’ (ಈಗ ಹೇಳುತ್ತಾ ಇಪ್ಪದು ಬ್ರಾಹ್ಮಣ ಜಾತಿಲ್ಲಿ ಹುಟ್ಟಿದ ಬ್ರಾಹ್ಮಣರ ಬಗ್ಗೆ) ಆಶ್ರಯಿಸಿರುತ್ತ. ಹಾಂಗಾರೆ ಆ ಬ್ರಾಹ್ಮಣ ಮನಸ್ಸು ಮಾಡಿರೆ ದೇಶವ ಕಾಪಾಡುಲೆ ಎಡಿಗು. ಅವ ಮಾಡುವ ಪೂಜೆಯ,ಹವನದ ಸಂದರ್ಭಲ್ಲಿ ‘ಈ ವ್ಯಕ್ತಿಯ ಕುರ್ಚಿ ಭದ್ರವಾಗಿರಲಿ’ ಹೇಳಿ ಸಂಕಲ್ಪ ಮಾಡುವ ಬದಲು ‘ದೇಶಕ್ಕೆ ಒಳಿತಪ್ಪ ಹಾಂಗೆ ಆಗಲಿ,ಎಲ್ಲೋರಿಂಗೂ ಒಳಿತಪ್ಪ ಹಾಂಗೆ ಆಗಲಿ’ ಹೇಳಿ ಸಂಕಲ್ಪ ಮಾಡಿಗೊಂಡರೆ ನಿಜವಾಗಿಯೂ ತನಗೂ,ಆ ವ್ಯಕ್ತಿಗೂ ಒಳಿತಾವುತ್ತು.
“ನಾವು ಹೇಳಿ ಇರೆಕ್ಕಪ್ಪ ಭಾವನೆ ಕೇವಲ ಹವ್ಯಕರಿ೦ಗೆ ಸೀಮಿತವಾಗಿರೆಕ್ಕಾ? ಸಮಾಜದ ಮುಖ್ಯ ವಾಹಿನಿಲಿ ಇರೆಕ್ಕಲ್ಲದಾ? ನಾವು ಎಲ್ಲರೊಳಗೊ೦ದಾಗಿರೆಕ್ಕಲ್ಲದಾ?”
ಎಲ್ಲರೊಳಗೊಂದಾಗಿ ಸಮಾಜದ ಮುಖ್ಯವಾಹಿನಿಲಿ ಇದ್ದುಗೊಂಡು ನಾವು ಬ್ರಾಹ್ಮಣ್ಯದತ್ತ ಒಲವು ತೋರುಸಿ ಇತರರನ್ನು ಆ ಕಡೆ ಹೆಂಗೆ ಆಕರ್ಶಿತರನ್ನಾಗಿ ಮಾಡುಲಕ್ಕು ಹೇಳುದಕ್ಕೆ ಒಂದು ಉದಾಹರಣೆ ಅನುಭವಿಸಿದೆ.
ಮಗ North Indian ಊಟ ಮಾಡೆಕ್ಕು ಹೇಳಿ ಆಸೆ ಆಯಿದು; ಅಮ್ಮನೂ ಬರೆಕ್ಕು ಹೇಳಿ ಹಠ ಮಾಡುಲೆ ಸುರು ಮಾಡಿದ. ಮೊದಲೊಂದರಿ ಹೀಂಗೆ ಹಠ ಮಾಡಿ ಹೋದಿಪ್ಪಗ ‘ನೀರುಳ್ಳಿ/ಬೆಳ್ಳುಳ್ಳಿ’ ಹಾಕದ್ದ ಪದಾರ್ಥ ಎಂತ ಇದ್ದು ಹೇಳಿ ವಿಚಾರುಸಿ ‘ಖಾಲಿ ದೋಸೆ/ಚಟ್ನಿ’ ತಿಂದಿಕ್ಕಿ ಬಂದಾಯಿದು. ಈ ಸರ್ತಿ ಅವಂಗೆ ಸಮಾಧಾನ ಆಗಲಿ… ದೋಸೆ ಚಟ್ನಿ ತಿಂಬ ಹೇಳಿ ನಿರ್ಧರಿಸಿ ಹೋದದ್ದು. ಅಲ್ಲಿ ವಿಚಾರುಸಿಯಪ್ಪಗ ‘Veg Koorma’ ಮಾಡಿಕೊಡುವ. ನಿಂಗೊಗೆ ಬೇಕಾದ್ದದರ Order ಮಾಡಿ. ನಿಂಗೊಗೆ ಬೇಕಾದ ಹಾಂಗೆ ಮಾಡಿ ಕೊಡುವ ಹೇಳಿದವು. “Business Improve ಮಾಡುಲೆ ಹೊಸ Idea ಸಿಕ್ಕಿದ ಹಾಂಗೆ ಆಯಿದಡ ಅವಕ್ಕೆ”.
ರಾಜಕಾರಣಿಗೋ ಅವಕ್ಕೆ ಬೇಕಾದ ಹಾಂಗೆ ಸಮಾಜವ ಬದಲಾಯಿಸುತ್ತ ಇದ್ದವು. ಮಾಧ್ಯಮದವು ಅವಕ್ಕೆ ಲಾಭ ಅಪ್ಪ ಹಾಂಗೆ ಸಮಾಜವ ಬದಲಾಯಿಸುತ್ತಾ ಇದ್ದವು. ದರೋಡೆಕೊರನಾಗಲೀ ಅಥವಾ ಇತರ ಕೆಟ್ಟ ಕೆಲಸ ಮಾಡುವವನು ಕೂಡಾ ತನಗೆ ಬೇಕಾದ ಹಾಂಗೆ ಸಮಾಜವ ಬದಲಾಯಿಸಿ ಆನು ‘ಕೆಟ್ಟವ’ ಹೇಳಿಗೊಂಡು ರಾಜಾರೋಷವಾಗಿ ತಿರುಗುತ್ತಾ ಇದ್ದ. ಎಲ್ಲರೂ ಅವರವರ ಸ್ವಾರ್ಥಕ್ಕೆ ಬೇಕಾಗಿ ಸಮಾಜವ ಬದಲಾಯಿಸುತ್ತಾ ಇದ್ದವು. ನಾವೇಕೆ ನಿಸ್ವಾರ್ಥವಾಗಿ ನಮಗೆ ಬೇಕಾದ ಹಾಂಗೆ ಸಮಾಜವ ಬದಲಾಯಿಸುಲೇ ಆಗ? ನಾವೆಂತಕೆ ‘ಆನು ಬ್ರಾಹ್ಮಣ ಅಪ್ಪು’ ಹೇಳಿ ಅಭಿಮಾನಂದ ಹೇಳಿಗೊಮ್ಬಲೂ ಎಡಿಯದ್ದೆ… ‘ಆನು ಬ್ರಾಹ್ಮಣ ಅಲ್ಲ’ ಹೇಳಿ ಒಪ್ಪಿಗೊಮ್ಬಲೂ ಎಡಿಯದ್ದೆ ‘ಸಿಂಬಳದ ನೊಣದ’ ಹಾಂಗೆ ಇರೆಕ್ಕು? ನಾವು ಹೆಂಗೂ ಕಷ್ಟಪಟ್ಟು ಆತು… ನಮ್ಮ ಮುಂದಿನ ಪೀಳಿಗೆಯವು ಆದರೂ ‘ಸುಖ ಅನುಭವಿಸುವ’ ಹಾಂಗೆ ಮಾಡುಲಕ್ಕನ್ನೇ?
ಅತ್ತಿಗೆ.,
ನೀರುಳ್ಳಿಯ ಬದಲಿಂಗೆ ಕ್ಯಾಬ್ಬೆಜನ್ನ ಉಪಯೋಗಿಸಿ.. ರುಚಿಲಿ ಎಂತ ವ್ಯತ್ಯಾಸ ಗೊಂತಾವುತಿಲ್ಲೇ..
ಅತ್ತಿಗೆ ಫ್ರುಟ್ ಸಲಾಡ್ ರೆಸಿಪಿಯ ಬೇಗ ಬ್ಲಾಗಿಲಿ ಹಾಕುತ್ತೆ..
ಶ್ರೀ ಶ್ಯಾಮ್
ತುಂಬಾ ಧನ್ಯವಾದ ಶ್ರೀ ಅತ್ತಿಗೆ… ಅಡಿಗೆಲ್ಲಿ ಹೊಸ ಹೊಸ ಪ್ರಯೋಗಂಗಳ ಮಾಡುತ್ತಾ ಇರು… ಬೈಲಿಂಗೆ ಬತ್ತಾ ಇರು… ಬೈಲಿಂಗೆ ಅಡಿಗೆ ಶುದ್ದಿ ಹೇಳುಲೆ ಬಾ… ನಾವೆಲ್ಲ ಒಂದಾಗಿ ಅತ್ಯುತ್ತಮ ಆಹಾರ ಪದ್ದತಿಯ ಅಳವಡಿಸಿಗೊಂಬ…
ಕ್ಯಾಬೇಜುದೆ ತಾಮಸ ಹೇಳಿ ಹೇಳ್ತವು.. ಅದೊಂಥರಾ ವಾಸನೆ ಅಲ್ಲದ… ಎನ್ನ ಕೇಳಿರೆ ಇದೆಲ್ಲವೂ ಒಳ್ಳೆಯ ವಸ್ತುವೇ. ಯಾವುದು ಸಸ್ಯಮೂಲದ್ದೋ, ಯಾವುದು ಫ್ರೆಷ್ ಆಗಿದ್ದೋ ಅದೆಲ್ಲಾ ಸೇವನೆಗೆ ಯೋಗ್ಯ. ಇದರ ಮೇಲೆ ಪರ್ಸನಲ್ ಪ್ರಿಫರೆನ್ಸ್ ಗೆ ಬಿಟ್ಟದು.
ಪ್ರತಿಯೊಂದು ತರಕಾರಿಯ ರಾಜಸ,ತಾಮಸ ಗುಣಂಗಳ ಬಗ್ಗೆ ಗಮನ ಕೊಡುವ ಮೊದಲು ನಾವು ಅತೀ ಅಗತ್ಯವಾಗಿ ಗಮನ ಕೊಡೆಕ್ಕಾದ್ದು ವಿಷಮುಕ್ತ ಹಾಲು,ಹಣ್ಣು,ತರಕಾರಿಗಳ ಬಗ್ಗೆ… ಬೇಕಾದಷ್ಟು ಉತ್ತಮ ತರಕಾರಿಗ ಸಿಕ್ಕುತ್ತು ಹೇಳಿ ಆದರೆ ಅದರಲ್ಲಿ ಅತ್ಯುತ್ತಮವಾದ್ದು ಯಾವುದು ಹೇಳಿ ಆರಿಸಿಗೊಮ್ಬಲಕ್ಕು…
ನಮ್ಮಲ್ಲಿ ಊರಿಲ್ಲಿ ಇಪ್ಪವು(ಉತ್ಪಾದಕರು) ಇದ್ದವು, ಪೇಟೆಲ್ಲಿ ಇಪ್ಪವು ಇದ್ದವು(ಗ್ರಾಹಕರು). ನಮ್ಮ ಇದೇ NETWORK ಬಳಸಿಗೊಂಡು ನಮಗೆಲ್ಲ ವಿಷಮುಕ್ತ ಹಾಲು,ಹಣ್ಣು,ತರಕಾರಿ ಸಿಕ್ಕುವ ಹಾಂಗೆ ಪ್ರಯತ್ನ ಮಾಡುಲಕ್ಕು… ಸಣ್ಣ ಹಂತಲ್ಲಿ ಸುರು ಮಾಡಿದರೂ ಮುಂದೆ ಬೆಳದು ಪ್ರತಿಯೊಬ್ಬಂಗೂ ವಿಷಮುಕ್ತ ಹಾಲು,ಹಣ್ಣು,ತರಕಾರಿಗ ಸಿಕ್ಕುವವರೆಗೆ ಬೆಳೆಶುಲಕ್ಕು…
ಈಗಾಣ ಕಾಲಲ್ಲಿ ಎಲ್ಲೋರೂ healthy eating ನ ಪೂರ್ಣ ತಿಳುವಳಿಕೆ ಇಪ್ಪೋರೆ. ಎನ್ನ ಮನಸಿಲಿಯೂ ಆನು ಭಾರೀ healthy ಆಹಾರ ತಯಾರುಸುತ್ತೆ ಹೇಳಿ ಇದ್ದು. ಎನ್ನ ನಂಬಿಕೆಗೆ ಪೂರ್ಣ ವಿರುದ್ಧ ನಂಬಿಕೆಯೋರೂ ಇದ್ದವು. ಅವರ ಪ್ರಕಾರ ಅವರದ್ದು healthy eating. ಹಾಂಗಿಪ್ಪಾಗ ಅವಕ್ಕವಕ್ಕೆ ಹೇಂಗೆ ಸರಿ ಕಂಡತ್ತೋ ಹಾಂಗೆ ಮಾಡಿಗೊಂಡು ಹಿತ ಮಿತವಾಗಿ ಉಂಡರೆ ಸಾಕಲ್ಲದಾ? ರುಚಿ ಹೊಂದುತ್ತು ಹೇಳಿ ಆದರೆ, ಆರೋಗ್ಯಕ್ಕೆ ತೊಂದರೆ ಆವ್ತಿಲ್ಲೆ (ಉದಾ: ಕೆಲವರಿಂಗೆ ಬದನೆ, ಬಾಳೆಕಾಯಿ ಗ್ಯಾಸು ಅಡ. ಕೆಲವರಿಂಗೆ ಅಲ್ಲ) ಹೇಳಿ ಆದರೆ ಅವಕ್ಕವಕ್ಕೆ ಬೇಕಾದ ಹಾಂಗಿಪ್ಪದು ತಿಂದರಾತನ್ನೆ. ಎಲ್ಲೋರೂ At the end ಬಯಸುದು ಆರೋಗ್ಯ… ಅದರ ಪಡವ ವಿಧಾನ ಯಾವುದಾದರೆಂತ.
ಆ ಎನ್ನದು, ಆನು ಹೇಳುವ ಭಾವ ಮೀರಿ ‘ನಮ್ಮದು’ ಹೇಳಿ ಒಂದಿದ್ದರೆ ಎಷ್ಟು ಒಳ್ಳೆದು ಅಲ್ಲದ? ಈ ಒಪ್ಪಣ್ಣ ತಾಣ ಸುರುವಪ್ಪ ಮೊದಲು ಎಲ್ಲೋರು ಉತ್ತಮ ರೀತಿಲ್ಲಿ communication ಮಾಡಿಗೊಂಡು ಇತ್ತಿದ್ದವು… ಆದರೆ ಈಗ ಎಷ್ಟು ಹೆಮ್ಮೆಲ್ಲಿ ನಮ್ಮ ಭಾಷೆಲ್ಲಿ ಮಾತನಾಡುತ್ತಾ ಇದ್ದು ಹೇಳುವ ಅಭಿಮಾನ ಪ್ರತಿಯೋಬ್ಬಂಗೂ ಇದ್ದು ಅಲ್ಲದ?
ಇನ್ನೊಂದು ಸಂದೇಹ…… ನೀರುಳ್ಳಿ ಬೆಳೆಗಾರರ ಜೀವನ?!
ಗ್ರಾಹಕರು ಕಡಮ್ಮೆ ಆದರೆ ಉತ್ಪಾದಕರು ಪರ್ಯಾಯ ಬೆಳೆಗಳ ಕಂಡುಗೊಳ್ಳುತ್ತವು… ಬ್ರಾಹ್ಮಣರು ಬ್ರಾಹ್ಮಣರಾಗಿ ಒಳುದರೆ ಇಡೀ ದೇಶಕ್ಕೆ ಒಳ್ಳೇದು… ಹಾಂಗಾಗಿ ನಾವು ನೀರುಳ್ಳಿ ತಿಮ್ಬದರ ನಿಲ್ಲುಸಿರೆ ಬೆಳೆಗಾರರಿಂಗೆ ಯಾವುದೇ ಹಾನಿ ಅಪ್ಪಲೇ ಸಾಧ್ಯ ಇಲ್ಲೇ… “ನಾವು ದನಗಳ ರಕ್ಷಿಸಿರೆ ಬ್ಯಾರಿಗೋ ಎಂತ ತಿಮ್ಬದು?” ಹೇಳಿ ನಾವು ಅವರ ಮೇಲೆ ಕರುಣೆ ತೋರುಸೆಕ್ಕಾದ ಅಗತ್ಯ ಇಲ್ಲೇ ಅಲ್ಲದ…
“ಹವ್ಯಕ ಬ್ರಾಹ್ಮಣರು ನೀರುಳ್ಳಿ,ಬೆಳ್ಳುಳ್ಳಿ ತಿಮ್ಬದರ ನಿಲ್ಲುಸಿದ್ದವು” ಹೇಳಿ ಪತ್ರಿಕೆಗಳಲ್ಲಿ ಪ್ರಚಾರ ಮಾಡಿರೆ ಒಂದು ವೇಳೆ ಬೆಳೆಗಾರರಿಂಗೆ ತೊಂದರೆ ಅಕ್ಕೋ ಏನೋ… ನಾವು ಯಾವುದೇ ಪ್ರಚಾರ ಇಲ್ಲದ್ದೆ ಆತ್ಮ ಸಾಕ್ಷಿಯಾಗಿ ‘ನೀರುಳ್ಳಿ,ಬೆಳ್ಳುಳ್ಳಿ’ ತಿಮ್ಬದರ ನಿಲ್ಲುಸಿ ಬ್ರಾಹ್ಮಣರಾಗಿ ಒಳಿವ… ಖಂಡಿತವಾಗಿಯೂ ಆರಿಂಗೂ ತೊಂದರೆ ಆಗ… ಎಲ್ಲೋರಿಂಗೂ ಒಳಿತಕ್ಕು…
ಇದೆಲ್ಲ ಮನಸ್ಥಿತಿಯ ಮೇಲೆ ಇಪ್ಪದಲ್ಲದ ಜಯಕ್ಕಾ?
ಬ್ರಾಹ್ಮಣ್ಯವ ನಿಜಕ್ಕೂ ಆಚರಿಸುಲೆ ಎಡಿಗಾರೆ, ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕ್ಕವಕ್ಕೆ ಅದೇ guidance ಕೊಟ್ಟೋಂಡು ಹೋವ್ತು..
ಅದು ದೇಹ ಮತು ಮನಸ್ಸಿನ ಅಗತ್ಯ ಅಲ್ಲದಾ?
ಪ್ರಕೃತಿ ಅದಾಗಿಯೇ ಸೂಚನೆಗಳ ಕೊಡ್ತಾ ಹೋಕು – ಮತ್ತೆ ಆ ಸೂಚನೆ ವ್ಯಕ್ತಿಂದ ವ್ಯಕ್ತಿಗೆ ಶಕ್ತ್ಯಾನುಸಾರ ಬದಲಾಗಿಯೊಂಡು ಹೋಕು..
ಸಿಂಧೂ ಅಕ್ಕಾ..
ನೀರುಳ್ಳಿ ಬೆಳ್ಳುಳ್ಳಿ ಆರೋಗ್ಯಕ್ಕೆ ಯಾವತ್ತೂ ಒಳ್ಳೆದೇ..
ದೇಹಕ್ಕೆ ಅದರಿಂದ ಯಾವುದೇ ಹಾನಿ ಇಲ್ಲೆ.. ಇದ್ದರೆ ಪ್ರಯೋಜನವೇ. 🙂
ಆದರೆ ಮನಸ್ಸಿಂಗೆ ಅದು ಅಷ್ಟು ಒಳ್ಳೆದಲ್ಲ ಹೇಳ್ತವು.
ಆಹಾರವ ಪ್ರಸಾದ ರೂಪಲ್ಲಿ ಸ್ವೀಕಾರ ಮಾಡ್ತು ಹೇಳಿ ಆದರೆ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ ಮಾಡ್ಲೆ ಆಗ..
ಅಲ್ಲದಾ?
“ಚಾತುರ್ವರ್ಣಂ ಮಯಾ ಸೃಷ್ಟ್ಯಂ ಗುಣಕರ್ಮವಿಭಾಗಷ:” – ಇದು ಗೀತೆಲಿ ಹೇಳಿದ್ದು. ಹೇಳಿರೆ ವರ್ಣ ಹೇಳ್ತದು ಗುಣ ಮತ್ತೆ ವೃತ್ತಿ ಮೇಲೆ ನಿರ್ಧರಿತ ಅಪ್ಪದು. ಅಂಬಗ ನಮ್ಮ ಹವ್ಯಕ ಸಮಾಜಲ್ಲೇ ಕೆಲವು ಬ್ರಾಹ್ಮಣರು, ಕೆಲವು ಕ್ಷತ್ರಿಯ ಸ್ವಭಾವದವು, ಕೆಲವು ವೈಶ್ಯ, ಅನೇಕ ಶೂದ್ರರು ಇರ್ತವು ಹೇಳಿ ಆತು. ಇಂತಿಪ್ಪಗ ಎಲ್ಲರಿಂಗೂ ಒಂದೇ ರೀತಿಯ ಆಹಾರ ಪಧ್ಧತಿ ಹೇಳುಲೆ ಹೇಂಗೆ ಸಾಧ್ಯ? ನೀರುಳ್ಳಿ ಬೆಳ್ಳುಳ್ಳಿ ಮೆಡಿಟೇಶನ್/ಧ್ಯಾನ ಮಾಡುವವಕ್ಕೆ ಉಪದ್ರ ಕೊಡ್ತು ಹೇಳ್ತ ಕಾರಣಕ್ಕೆ ಅದರ ಬ್ರಾಹ್ಮಣರಿಂಗೆ (ಮೆಡಿಟೇಶನ್/ಧ್ಯಾನ ಮಾಡುವವಕ್ಕೆ) ನಿಷೇಧಿಸಿದವು ಹೇಳ್ತದು ಬಹುಜನರ ಅಭಿಪ್ರಾಯ.
ಇನ್ನು ಎನ್ನ ವೈಯಕ್ತಿಕ ಅಭಿಪ್ರಾಯ. ಯೋಗಲ್ಲಿ ಅನೇಕ ಬಗೆ ಇದ್ದು. ಮನಸ್ಸಿನ ಏಕಾಗ್ರತೆ ಸಾಧಿಸಿ ಅದರ ಮೂಲಕ ಆತ್ಮ ಸಾಕ್ಷಾತ್ಕಾರ ಮಾಡಿಯೊಂಬದಕ್ಕೆ ರಾಜಯೋಗ ಹೇಳ್ತವು. ಈಗ ಫೇಮಸ್ ಆದ ಶಾರೀರಿಕ ಯೋಗ, ಪ್ರಾಣಾಯಾಮ ಎಲ್ಲ ಇದರ ಭಾಗವೇ. ಇನ್ನು ಉಳಿದಂತೆ ಭಕ್ತಿಯೋಗ, ಕರ್ಮಯೋಗ ಜ್ನಾನಯೋಗ ಇದ್ದು. ಇವುಗಳ ಪ್ರಚಾರ ಕಮ್ಮಿ ಆದರೆ ತಿಳಿದೋ ತಿಳಿಯದೆಯೋ ಈ ದಾರಿ ಹಿಡುದವಿದ್ದವು. ಬಹುಷ: ಈ ಎಲ್ಲ ದಾರಿಗಳಲ್ಲಿ ರಾಜಯೋಗಕ್ಕೆ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ, ಆದ್ದರಿಂದ ನೀರುಳ್ಳಿ ಬೆಳ್ಳುಳ್ಳಿ ವ್ಯರ್ಜ್ಯ ಹೇಳುದು ಆದಿಕ್ಕು. ಒಳುದವಕ್ಕೆ? ಅವರವರ ವೈಯಕ್ತಿಕ ನೆಲೆಗಟ್ಟಿನ ಮೇಲೆ ಹೋವುತ್ತು ಅಲ್ಲದ?.
ಸಾತ್ವಿಕ, ರಾಜಸಿಕ, ತಾಮಸಿಕ ಮೂರು ಗುಣಂಗಳೇ ಹೊರತು ಅವುಗಳಲ್ಲಿ ಯಾವುದೂ ಕನಿಷ್ಟ, ಗರಿಷ್ಟ ಅಲ್ಲ. ಅಂತೆಯೇ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರಾದಿ ವರ್ಣಗಳೂ. ಸಾತ್ವಿಕತೆಯೇ ಶ್ರೇಷ್ಟ ಆಗಿದ್ದಿದ್ದರೆ ಭಗವದ್ಗೀತೆಯೇ ಇರುತ್ತಿದ್ದಿಲ್ಲ. ಗೀತೆಯಲ್ಲಿ ರಾರಾಜಿಸಿದ್ದು ಹಿಂಸೆಯಿಂದ ಒಡಗೂಡಿದ ಕ್ಷತ್ರಿಯ ಧರ್ಮವೇ ಹೊರತು ಸಾತ್ವಿಕತೆಯ ಬ್ರಾಹ್ಮಣ ಧರ್ಮ ಅಲ್ಲ!
ಕೊನೇ ಮಾತು – ಸರಿ/ತಪ್ಪು, ಹೆಚ್ಚು/ಕಮ್ಮಿ, ಶ್ರೇಷ್ಠ/ಕನಿಷ್ಟ ಮುಂತಾದವುಗಳ ಬಗ್ಗೆ ಅರಿವಿದ್ದೂ (Discretion) ಅವುಗಳಿಂದ ಹೊರತಾದ ಅಥವಾ ಅವಕ್ಕೆ ನಿರ್ಲಿಪ್ತವಾದ (agnostic) ಸ್ಥಿತಿಯೇ ಯೋಗಸ್ಥಿತಿ! ಮಾತು ಎಲ್ಲೆಲ್ಲಿಂದ ಎಲ್ಲೆಲ್ಲಿಗೋ ಹೋತು. ನೀರುಳ್ಳಿ ಎಲ್ಲಿ, ಯೋಗಸ್ಥಿತಿ ಎಲ್ಲಿ! 🙂
ಈ ಯಾವ ಮಾತೂ ಜಯಶ್ರೀ ಅಕ್ಕನ ಉದ್ದೇಶಿಸಿ ಅಲ್ಲ. ವೈಯಕ್ತಿಕ ಕಾಮೆಂಟು ಬರವಲೆ ಎನಗೆ ಆಸಕ್ತಿ ಇಲ್ಲೆ! ಆನು ಅಲೋಪತಿ ಪರವೂ ಅಲ್ಲ, ವಿರೋಧಿಯೂ ಅಲ್ಲ. ಅಲೋಪತಿ ಒಳ್ಳೆದು ಹೇಳಿದ್ದು ಹೇಳಿದ ಕಾರಣಕ್ಕೆ ನೀರುಳ್ಳಿ ತಿನ್ನೆಕ್ಕು ಹೇಳಿ ಹೇಳ್ತೂ ಇಲ್ಲೆ. ನಿಂಗೊ ಹೇಳಿದ ತೆಂಗಿನೆಣ್ಣೆಯ ವಿಚಾರವ ಸಮ್ಮತವೇ ಎನಗೂ!
ಆನು ಹೇಳಿದ್ದು ತಪ್ಪು ಹೇಳಿ ಆದರೆ ಸಂತೋಷ! ಬೇಜಾರಿಲ್ಲೆ! ಹಾಂಗೆಯೇ ಆನು ಏನೋ ಹೇಳಿದೆ ಹೇಳಿ ಆರೂ ಎಂತವೂ ಗ್ರೇಶುದು ಬೇಡ! ಆತೋ 🙂
ಮಹೇಶಣ್ಣನ ಒಪ್ಪ ನೋಡಿ ತುಂಬಾ ಖುಷಿ ಆತು… ನಮ್ಮ ಭಾಷೆ ಹೇಳಿ ಇದ್ದ ಹಾಂಗೆ ನಮ್ಮ ಆಹಾರ ಪದ್ಧತಿ ಹೇಳಿ ಬೇಕು… ನಮ್ಮದು ಕ್ರಮ ಹೀಂಗೆ ಹೇಳಿ ಇಲ್ಲದ್ದರೆ ಮಕ್ಕಳ ಬೆಳೆಸುವಲ್ಲಿ ತುಂಬಾ ತೊಂದರೆ ಆವುತ್ತು… ಒಂದು ವೇಳೆ ಹವ್ಯಕ ಬ್ರಾಹ್ಮಣರಲ್ಲಿ ನಾಲ್ಕು ವರ್ಣದವು ಇದ್ದವು ಹೇಳಿ ಆದರೆ ನಾಲ್ಕು ತರದ ಆಹಾರ ಪದ್ಧತಿ ಯಾವ ತರ ಇರೆಕು ಹೇಳಿ ಚರ್ಚಿಸಿ ರೂಪಿಸುವ…
ಸರಿ ಅಕ್ಕೋ 🙂
ಹಿತವೂ, ಪ್ರಿಯವೂ ಆದ ಅತ್ಯುತ್ತಮ ಆಹಾರ ಪದ್ದತಿಯ ರೂಪಿಸಿ ಅದರ ಅಳವಡಿಸಿಗೋಲ್ಲೆಕ್ಕಾರೆ ನಾವೆಲ್ಲ ಒಂದಾಗಿ ಪರಿಶ್ರಮ ಪಡೆಕ್ಕು…
ಉದಾಹರಣೆಗೆ ಸಕಲ ಶಾಸ್ತ್ರಂಗಳ ಬಲ್ಲಂತಹ ಡಾಮಹೇಶಣ್ಣ, ಆಯುರ್ವೇದವ ಅರದು ಕುಡುದಂತಹ ಸೌಮ್ಯಕ್ಕ, ಅಡಿಗೆಲ್ಲಿ ಹೊಸ ಹೊಸ ಪ್ರಯೋಗ ಮಾಡುವ ವೇಣಿಯಕ್ಕ… ಇನ್ನೂ ಹಲವು ಮಂದಿ ಇಕ್ಕು(ಉದಾಹರಣೆಗೆ ಕೆಲವು ಹೆಸರು ಹೇಳಿದ್ದಷ್ಟೇ)… ಸಣ್ಣ ಸಣ್ಣ ರುಚಿ ವ್ಯತ್ಯಾಸಂಗಕ್ಕೆ ನಾಲಗೆಯ ಒಗ್ಗುಸಿಗೊಮ್ಬಲೆ ಸಿದ್ದರಿಪ್ಪ ನಾವು… ಎಲ್ಲೋರು ಒಂದಾಗಿ ಚರ್ಚಿಸಿರೆ ಅತ್ಯುತ್ತಮ ಆಹಾರ ಪದ್ದತಿಯ ರೂಪಿಸಿ ಅಳವಡಿಸಿಗೊಮ್ಬದು ಕಷ್ಟದ ಕೆಲಸ ಏನು ಅಲ್ಲ…
ಸಾತ್ವಿಕ ಆಹಾರ ಹೇಳಿಗೊಂಡು ಏಕಾಏಕಿ ಚಪ್ಪೆ ಚಪ್ಪೆ ತಿಮ್ಬಲೆ ಆರಿಂಗೂ ಎಡಿಯ… ಹಸಿಮೆಣಸು ಆರೋಗ್ಯಕ್ಕೆ ಒಳ್ಳೇದಲ್ಲ ಹೇಳಿ ಆದರೆ ಏಕಾಏಕಿ ಎಲ್ಲಾ ಕಡೆ ಕಾಳುಮೆಣಸು ಉಪಯೋಗಿಸುಲೂ ಎಡಿಯ… ಯಾವ ತರ ಹಂತ ಹಂತವಾಗಿ ಹಿತವೂ,ಪ್ರಿಯವೂ,ಆರೋಗ್ಯಕರವೂ ಆದ ಅಹಾರಪದ್ದತಿಯ ರೂಪಿಸಲಕ್ಕು ಹೇಳಿ ನಾವೆಲ್ಲ ಸೇರಿ team work ಮಾಡೆಕ್ಕು… ಹೀಂಗೆ ಮಾಡುವಗ ಮಧ್ಯೆ ಮಧ್ಯೆ ಡಾಮಹೆಶಣ್ಣನ ಹತ್ತರೆ,ಸೌಮ್ಯಕ್ಕನ ಹತ್ತರೆ ಎಲ್ಲ ಸಂಸ್ಕೃತ ಮಾತನಾಡಿಗೊಂಡರೆ ಎಲ್ಲೋರಿಂಗೆ ಸಂಸ್ಕೃತ ಮಾತನಾಡುಲೆ ಅಭ್ಯಾಸವೂ ಅಕ್ಕು…
ಧರ್ಮಶಾಸ್ತ್ರಲ್ಲಿ ಸಂಪೂರ್ಣ ನಿಷೇಧ ಹೇಳಿದಂತಹ ನೀರುಳ್ಳಿ,ಬೆಳ್ಳುಳ್ಳಿ ಗಳ ಬಿಟ್ಟರೆ ನಮಗೆ ಬ್ರಾಹ್ಮಣ್ಯವ ಕಾಪಾಡಿಗೊಮ್ಬಲೆ ಸುಲಭ… ಬ್ರಾಹ್ಮಣರು ಹೇಳಿ ಹಣೆ ಪಟ್ಟಿ ಕಟ್ಟಿಗೊಂಡ೦ತಹ ನಾವು ಕೂಡಾ ನೀರುಳ್ಳಿ,ಬೆಳ್ಳುಳ್ಳಿ ತಿಂದು ಕ್ಷತ್ರಿಯರು ಆತು ಹೇಳಿ ಆದರೆ ದೇಶಲ್ಲಿ ಬ್ರಾಹ್ಮಣರಾಗಿ ಒಳಿವವು ಆರು? ದೇಶಲ್ಲಿ ಬ್ರಾಹ್ಮಣರು ಮಾಡೆಕ್ಕಾದ ಕರ್ತವ್ಯವ ಮಾಡುವವು ಆರು? ನಾವು ಬ್ರಾಹ್ಮಣರಾಗಿ ನಮ್ಮ ಕರ್ತವ್ಯವ ಸರಿಯಾಗಿ ಮಾಡಿತ್ತು ಹೇಳಿ ಆದರೆ ಕ್ಷತ್ರಿಯರು,ವೈಶ್ಯರು,ಶೂದ್ರರು ಎಲ್ಲರು ಅವರವರ ಕರ್ತವ್ಯವ ಸರಿಯಾಗಿ ಮಾಡುಗು… ದೇಶಲ್ಲಿ ಶಾಂತಿ ನೆಲೆಸುಗು… ಹೇ೦ಗೂ ಆರೂ ಮೇಲಲ್ಲ,ಕೀಳಲ್ಲ ಹೇಳುವ ಭಾವ ನಮಗೆ ಇದ್ದು… ನಾವು ನಮ್ಮ ಕರ್ತವ್ಯವ ನಿರ್ವಹಿಸುದೆ ಸುಲಭ ಅಲ್ಲದ?
ಅಣ್ಣಾ,
ಬಹುಜನರ ಅಭಿಪ್ರಾಯ – ಸರೀ ಇದ್ದು..
ವೈಯಕ್ತಿಕ ಅಭಿಪ್ರಾಯ – ಇದಕ್ಕೂ ಅಪ್ಪಪ್ಪು ಹೇಳಿದೆ… 🙂
ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದ…
ಉತ್ತರ ಭಾರತಲ್ಲಿ ನೀರುಳ್ಳಿಯ ಕ್ರಯ ಸರಕಾರದ ಪತನಕ್ಕೆ ದಾರಿ ಆಯಿದು ಒಂದಾರಿ! ನೀರುಳ್ಳಿ,ಬೆಳ್ಳುಳ್ಳಿ-
ಅದು ತಾಮಸ ಆಹಾರ ಆದಿಕ್ಕು-ಆದರೆ ಆರೋಗ್ಯಕ್ಕೆ ಅದು ಒಳ್ಳೆದೇ ಸರಿ. ಆಯುರ್ವೇದಲ್ಲೂ ಅದರ ದೂಷಿಸಿದ್ದವಿಲ್ಲೆ ಹೇಳಿ ಓದಿದ ನೆನಪು.ನಮ್ಮ ಉಂಡಲ ಕಾಳು,ಹಪ್ಪಳ,ಉಪ್ಪಿನಕಾಯಿ,ಹುಳಿ ಗೊಜ್ಜಿ,ಕಾಳ,ಕೊದಿಲು,ಚಟ್ನಿಪುಡಿ- ಎಲ್ಲವೂ ಭಗವದ್ಗೀತೆಲಿ ಹೇಳಿದ ರಾಜಸ- ತಾಮಸ ಆಹಾರದ ವರ್ಣನೆಗೆ ಹೊಂದುತ್ತು.ಜೀವನಲ್ಲಿ ಬರೀ ಸಾತ್ವಿಕ ಗುಣ ಇದ್ದರೆ ಸಾಲ,ರಜ ತಾಮಸ,ರಾಜಸ ಗುಣವೂ ಬೇಕು-ಆತ್ಮರಕ್ಷಣೆಗೆ ಅದು ಅಗತ್ಯ-ಬಲ್ಲವರು ಹೇಳುವ ಮಾತು ಕೇಳಿದ್ದೆ.ಹಾಂಗಾಗಿ ಹೆಚ್ಚು ನಿಯಂತ್ರಣ ಮಾಡೆಕ್ಕು ಹೇಳಿ ಕಾಣುತ್ತಿಲ್ಲೆ.
ಸಾತ್ವಿಕ,ರಾಜಸ,ತಾಮಸ ಗುಣಗಳಿಂದ ಕೂಡಿ ನಮ್ಮ ಆಹಾರ ಪದ್ಧತಿ ಯಾವ ತರ ಇರೆಕ್ಕು ಹೇಳಿ ಬಲ್ಲವರು ಸೇರಿ ಚರ್ಚಿಸಿ ನಿರ್ಧರಿಸಿದರೆ ತುಂಬಾ ಉತ್ತಮ. ನೀರುಳ್ಳಿ,ಬೆಳ್ಳುಳ್ಳಿ ಮಾಂತ್ರ ನಮ್ಮ ಆಹಾರಂದ ವರ್ಜ್ಯ ಹೇಳಿ ಧೈರ್ಯವಾಗಿ ಹೇಳುಲೇ ನಮ್ಮಂದಲೇ ಹಿಂದಿನ ತಲೆ ಮಾರಿನವು ಕೂಡ ಅದರ ತಿನ್ನದ್ದೆ ಇಪ್ಪ ಒಂದು ಸಾಕ್ಷಿ ಸಾಕು… ಆಯುರ್ವೇದಲ್ಲಿ ಅದರ ದೂಷಿಸಿದ್ದವಿಲ್ಲೇ ಹೇಳಿ ಆದರೆ ಮದ್ದು ಆಗಿ ಅಗತ್ಯ ಬಿದ್ದರೆ ತೆಕ್ಕೊಂಬಲೆ ಅಕ್ಕೋ ಏನೋ… ಆದರೆ ಆಹಾರವಾಗಿ ತೆಕ್ಕೊಂಬದು ಸಂಪೂರ್ಣ ನಿಶಿದ್ದ ಹೇಳಿ ಅನ್ನಿಸುತ್ತು… ಬಲ್ಲವರು ಹೇಳೆಕ್ಕು…
ಆಯುರ್ವೇದಲ್ಲಿ ನೀರುಳ್ಳಿ, ಬೆಳ್ಳುಳ್ಳಿಗಳ ವಾತಕ್ಕೆ ದಿವ್ಯೌಷಧಿ ಹೇಳಿ ಹೇಳಿರುದೆ, ಬ್ರಾಹ್ಮಣರು ತಿಂತವಿಲ್ಲೆ ಹೇಳಿ ಹೇಳಿದ್ದವು- ಕಾರಣ ರಾಜಸ, ತಾಮಸ ಗುಣಂಗಳ ಹೆಚ್ಚುಸುತ್ತು. ಶಾಸ್ತ್ರಲ್ಲಿ ದನದ ಮಾಂಸಕ್ಕೂ, ನಾಯಿ, ಕಾಕೆ ಹೀಂಗಿಪ್ಪ ಮಾಂಸಂಗೊಕ್ಕೂ ಔಷಧೀಯ ಗುಣಂಗಳ ಹೇಳ್ತು. ನಾವಾರೂ ತಿಂತಿಲ್ಲೆನೆ! (ಚೀನೀಯರು ಇತ್ಯಾದಿ ತಿಂಗು, ಅದು ಬೇರೆ ವಿಷಯ) ನಿಜವಾಗಿ ನೋಡಿರೆ ಧರ್ಮಶಾಸ್ತ್ರಲ್ಲಿ ಬ್ರಾಹ್ಮಣರಿಂಗೆ ಮಾಂಸಾಹಾರ ಒಳ್ಳೆಯದಲ್ಲ ಹೇಳಿದ್ದವೇ ಹೊರತು ನಿಷೇಧ ಇಲ್ಲೆ. ಆದರೆ ನೀರುಳ್ಳಿ, ಬೆಳ್ಳುಳ್ಳಿ, ಗೃಂಜನಕ(ಬೆಳ್ಳುಳ್ಳಿ ಜಾತಿಯ ಗೆಂಡೆ) ಮತ್ತೆ ಎರಡು ಜಾತಿಯ ಹೊಳೆ ಮೀನುಗಳ ತಿಂಬಲೆ ನಿಷೇಧ ಇಪ್ಪದು!
ಧನ್ಯವಾದ ಮಹೇಶಣ್ಣ… ಅತ್ಯುತ್ತಮ ಆಹಾರ ಪದ್ದತಿಯ ರೂಪಿಸುಲೆ ಮಾರ್ಗದರ್ಶನ ಮಾಡೆಕ್ಕು ಹೇಳಿ ಬೈಲಿನ ಪರವಾಗಿ ಕೇಳಿಗೊಳ್ಳುತ್ತಾ ಇದ್ದೆ…
ಜಯಕ್ಕಾ
ನೀರುಳ್ಳಿ ಮತ್ತು ಬೆಳ್ಳುಳ್ಳಿ ನಿ೦ಗ ಎ೦ತಕ್ಕೆ ಉಪಯೋಗಿಸುತ್ತಿಲ್ಲಿ?
ಏಲಕ್ಕಿ ಲವ೦ಗ ಚಕ್ಕೆ ಇತ್ಯಾದಿಗಳೂ ಮಸಾಲೆ ವಸ್ತುಗ ತಾನೆ? ಶು೦ಟಿ ಗೆ ಇಪ್ಪ ಘಾಟು ಕಡಮ್ಮೆ ಏನಲ್ಲ ತಾನೆ? ಆದಕ್ಕೆಲ್ಲ ಇಪ್ಪ ಮಾನ್ಯತೆ ನೀರುಳ್ಳಿ ಬೆಳ್ಳುಳ್ಳಿಗೆ ಏಕಿಲ್ಲೆ ಹೇಳುದು ಗೊ೦ತಾವ್ತಿಲ್ಲೆ.
ನೀರುಳ್ಳಿ,ಬೆಳ್ಳುಳ್ಳಿ ಅತ್ಯಂತ ತಾಮಸ ಗುಣಂಗಳ ಹೊಂದಿದ್ದು… ಸಂಪೂರ್ಣ ಸಾತ್ವಿಕ ಆಹಾರ ಪದ್ದತಿಯ ಅಳವಡಿಸಿಗೊಲ್ಲೆಕ್ಕು ಹೇಳಿ ಆಸೆ ಇದ್ದು… ಸಾತ್ವಿಕ ಆಹಾರ ಪದ್ದತಿಯ ಬಲ್ಲವರ ಹತ್ತರೆ ಕೇಳಿ ತಿಳುಕೊಲ್ಳೆಕ್ಕಷ್ಟೇ… ಮೊದಲ ಹಂತವಾಗಿ ನೀರುಳ್ಳಿ,ಬೆಳ್ಳುಳ್ಳಿ, ಐಸ್ಕ್ರೀಂ, ಚಾಕಲೇಟ್, ಚಾ,ಕಾಫಿ ಇವುಗಳ ವರ್ಜನೆಯ ಆರಿಸಿಗೊಂಡದು…
ISCON ನವ್ವು ಮಾಡುವ ಯಾವುದೇ ಆಹಾರ೦ಗವಕ್ಕು ನೀರುಳ್ಳಿ,ಬೆಳ್ಳುಳ್ಳಿ ಹಾಕುತ್ತವಿಲ್ಲೆ.ತು೦ಬಾ ರುಚಿ ಆಗಿರ್ತು ಎಲ್ಲವುದೆ.. ಅವರ ಬೆ೦ಗ್ಲೂರ್ ಸೆ೦ಟರಿಲಿ ಪುಸ್ತಕ ಸಿಕ್ಕುತ್ತು ಅಕ್ಕ..
ಧನ್ಯವಾದ…
“ಆತ್ಮಸಾಕ್ಷಾತ್ಕಾರ ವಿಜ್ನಾನ” ಹೇಳಿ ISCONನವರ ಒಂದು ಪುಸ್ತಕಲ್ಲಿ ಆಹಾರ ಪಧ್ಧತಿಗಳ ಬಗ್ಗೆ ಬರದ್ದವು. ಲಾಯಕಿದ್ದು 🙂
ಅಪ್ಪು, ಅವರ ಸಿದ್ದಾ೦ತ ( ದ್ವೈತ ) ಅದರ ಬಿಟ್ರೆ ಮತ್ತೆಲ್ಲವೂ ಅದ್ಭುತ..ಸುಮಾರು ಯುವ ಜನರ ಸರಿ ದಾರಿಗೆ ಅವರಿ೦ದಾಗಿ ಬೈ೦ದವು…
ಸಿದ್ದಾಂತ ಯಾವುದಾದರೇ ಎಂತ? ಸಮಾಜ ಸರಿ ದಾರಿಗೆ ಬಂದರೆ ಸಾಕು ಅಲ್ಲದ? ನಾವು ಅವಕ್ಕೆ ಅಭಿನಂದನೆಗಳ ಹೇಳುವ…
ಖ೦ಡಿತ, ಃ)
“ಸುಮಾರು ಯುವ ಜನರ ಸರಿ ದಾರಿಗೆ ಅವರಿ೦ದಾಗಿ ಬೈ೦ದವು…” – ಸುಮಾರು ಜೆನ ಮನೆಬಿಟ್ಟೂ ಹೋಯಿದವು.
🙁
ಆಧ್ಯಾತ್ಮದ ಬೆಳಕಿನ ಶಕ್ತಿಯ ಸೆಳೆತ ತುಂಬಾ ಬಲವಾಗಿರುತ್ತು. ಅದರ ಅನುಭವಿಸಿದವಂಗೆ ಸಂಸಾರಲ್ಲಿ ಇಪ್ಪಲೆ ತುಂಬಾ ಕಷ್ಟ ಆವುತ್ತು. ಇದಕ್ಕೆ ತಮ್ಮ ಹೇಳಿದ ಹಾಂಗೆ ಮನೆ ಬಿಟ್ಟು ಆಶ್ರಮಂಗಳ ಸೇರಿದ ಎಷ್ಟೋ ಜೆನ ಉದಾಹರಣೆ ಸಿಕ್ಕುತ್ತು. ಹಾಂಗಾರೆ ನಮ್ಮ ಗುರುಗಳ ಮಾರ್ಗದರ್ಶನಲ್ಲಿ ಅದೆಷ್ಟೋ ಜೆನ ಸಾಧನೆಯ ವಿವಿಧ ಹಂತಲ್ಲಿ ‘ಆಧ್ಯಾತ್ಮ ಸಾಧನೆ’ ಅಭ್ಯಾಸ ಮಾಡುತ್ತಾ ಇದ್ದವು. ಅವು ಲೌಕಿಕವಾದ ಸಂಸಾರಲ್ಲಿ ಇದ್ದವೋ,ಅಲೌಕಿಕವಾದ ಲೋಕಲ್ಲಿ ವಿಹರಿಸುತ್ತಾ ಇದ್ದವೋ, ಅಥವಾ ಸಾಧನೆಗೆ ತೊಡಗಿದ್ದವು ಹೇಳಿ ಕೂಡ ಗೊಂತಾಗದ್ದ ರೀತಿಲ್ಲಿ ಜೀವನ ನಡೆಸುತ್ತಾ ಇದ್ದವನ್ನೇ? ಇದರ ಗುಟ್ಟು ಎಂತರ ಆದಿಕ್ಕು ಹೇಳಿ ಹಲವು ದಿನಂದ ಚಿಂತಿಸಿದೆ. ಇಂದು ಉತ್ತರ ಸಿಕ್ಕಿತ್ತು ತಮ್ಮ. ಅದು “ರಾಮ”.
‘ರಾಮ’ ಹೇಳುವ ಶಬ್ದವೇ ಸಮನ್ವಯತೆಯ ಸಾರುತ್ತು. ರೇಖಿ ವಿದ್ಯೆ ಗೊಂತಿದ್ದರೆ ಅದರಲ್ಲಿಯೂ energy grounding effect ಮಾಡುವ ‘ರಾಮ’ ಹೇಳುವ ಒಂದು ಸಂಕೇತ ಇದ್ದು.
“‘ರಾಮ’ ನಮ್ಮ ಗುರುಗಳಾಗಿ ಸಿಕ್ಕಿದ್ದು ನಿಜವಾಗಿಯೂ ನಮ್ಮೆಲ್ಲರ ಸೌಭಾಗ್ಯವೇ.”
ಅಪ್ಪು ನಾವು ನಮ್ಮ ಆಹಾರ ಪದ್ದತಿಯ ಉಳಿಸಿಗೊಳ್ಲೆಕ್ಕು..ನಾವು ಸಾತ್ವಿಕರು ನಮ್ಮ ಆಹಾರ ಕೂಡ ಅದೇ ಆಗಿರೆಕ್ಕು…
ಧನ್ಯವಾದ ಮಾವ… ನಾವೆಲ್ಲ ಒಂದಾಗಿ ಚರ್ಚಿಸಿ ಅತ್ಯುತ್ತಮ ಆಹಾರ ಪದ್ದತಿಯ ರೂಪಿಸುವ… ಬೈಲಿನ ಎಲ್ಲರೂ ಆ ಆಹಾರ ಪದ್ದತಿಯ ಅಳವಡಿಸಿಗೊಂಡು ಬೈಲಿನ ಮಕ್ಕೋ ಎಲ್ಲ ಅತ್ಯುತ್ತಮ ರೀತಿಲ್ಲಿ ಬೆಳವ ಹಾಂಗೆ ಆಗಲಿ…
ಆದರೆ ಯಾವದೆ ವೈದ್ಯರೂ ಈ ಎರಡರ ನಿಶೇಧಿಸುತ್ತವಿಲ್ಲೆ ಅಕ್ಕ.
ಜಾಸ್ತಿ ಉಪ್ಪ್ ಖಾರ ತಿ೦ಬಲಾಗ ಹೇಳ್ತವು. ಚಾಯ ಕಾಪಿ ಜಾಸ್ತಿ ಕುಡಿವಲಾಗ ಹೇಳಿಯೂ ಹೇಳ್ತವು.
ಐಸ್ ಕ್ರೀ೦ ಬಹುಶ ಒಳ್ಳೆದಲ್ಲ ಕಾಣ್ತು. ಆದರೆ ನೀರುಳ್ಳಿ ಬೆಳ್ಳುಳ್ಳಿ ಎ೦ತಕ್ಕೆ ನಿಶಿದ್ದ ಹೇಳಿ ಅ೦ದಾಜಿ ಆವ್ತಿಲ್ಲೆ.
ತಾಮಸ ಗುಣ೦ಗಳ ಪ್ರಚೋದನೆ ಇದರಿ೦ದ ಅಪ್ಪದಾ?
ISCONನವರ ಪುಸ್ತಕ ತೆಕ್ಕೊಂಡು ಕೆಲವು ಸಮಯ ಪ್ರಯೋಗ ಮಾಡಿ ನೋಡಿ…
ಆಕ್ಕಾ
ಸರಿ. ಯಾವಗಾರೂ ಎನಗೆ ನೀರುಳ್ಳಿ ಬೆಳ್ಳುಳ್ಳಿ ತಿ೦ಬದು ಬಿಡುವ ಮನಸ್ಸಾದರೆ ಹಾ೦ಗೆ ಮಾಡ್ತೆ
ಮತ್ತೆ ಯಾವದೇ ವಿಶಯಲ್ಲಿ ಇಪ್ಪ ‘ಎಸ್ಸೆನ್ಸ್, ಡೆಕೊರ್ಸ್, ಮಿತ್ಸ್’ ಈ ನೀರುಳ್ಳಿ ಬೆಳ್ಳುಳ್ಳಿ ತಿ೦ಬ ವಿಶಯಲ್ಲೂ ಇಕ್ಕಾ ಮತ್ತು ಅದು ಎನಗೆ ಗೊ೦ತಕ್ಕಾ ಹೇಳಿ ಕೇಳಿದೆ ಅಸ್ತೆ.
ನಿಂಗೊಗೆ ಸರಿಯಾಗಿ ತಿಳುಕ್ಕೊಂಬಲೆ ತುಂಬಾ ಕುತೂಹಲ ಇದ್ದ ಕಾರಣ ಹೇಳಿದೆ ಅಷ್ಟೇ… ‘ಎಸ್ಸೆನ್ಸ್, ಡೆಕೊರ್ಸ್, ಮಿತ್ಸ್’ ಸರಿಯಾಗಿ ಗೊಂತಾಯೇಕ್ಕಾರೆ ನಾವೇ ಪ್ರಯೋಗ ಮಾಡಿ ತಿಳುಕ್ಕೊಲ್ಲೆಕ್ಕು… ಎಂತಕೆ ಹೇಳಿರೆ ಇನ್ನೊಬ್ಬ ಹೇಳಿದ್ದು ಎಷ್ಟಾದರೂ second hand information ಅಲ್ಲದ?
ಆಕ್ಕಾ
ಯಾವದರ ಮಾಡ್ತರೂ ಅದರ ಎ೦ತಕ್ಕೆ ಮಾಡುದು ಹೇಳುದು ತಿಳುಕ್ಕೊಳೆಕ್ಕು. (Essence) ಆ ವಿಶಯ ಗೊ೦ತಾದ ನ೦ತರ ಮಾಡೆಕ್ಕಪ್ಪದು ಪ್ರಯೋಗ.
ಪ್ರಯೋಗಲ್ಲಿ ಮಿತ್ಸ್ ಗೊ೦ತಕ್ಕು ಅಸ್ಟೆ.
ಮತ್ತೆ ನಮ್ಮ ಬೈಲಿನೋರು ಹೇಳಿದ್ದರ ತೀರಾ ಸ೦ಶಯಲ್ಲಿ ‘ಸೆಕೆ೦ಡ್ ಹಾ೦ಡ್’ ಇನೊರ್ಮೆಶನ್ ಹೇಳಿ ನೋಡೆಕ್ಕಾಗಿಲ್ಲೆ ಕಾಣ್ತು ಎನಗೆ. ಕುತೂಹಲ ಅಪರಾಧ ಅಲ್ಲ ತಾನೆ?
ನಿಜವಾಗಿಯೂ ನಿಂಗಳ ಕುತೂಹಲ ನೋಡಿ ಖುಷಿ ಆಗಿ ಹೇಳುತ್ತಾ ಇಪ್ಪದು… ಬೈಲು ಹೇಳುತ್ತಾ ಇದ್ದು ‘ತಾಮಸ ಗುಣವ ಕಡಮ್ಮೆ ಮಾಡುಲೆ ಬೇಕಾಗಿ ನೀರುಳ್ಳಿ,ಬೆಳ್ಳುಳ್ಳಿ ತಿಮ್ಬದರ ಬಿಡೆಕ್ಕು’… ಇನ್ನು ಧೈರ್ಯವಾಗಿ ಪ್ರಯೋಗ ಮಾಡಿ… ಕುತೂಹಲ ತಣಿಸಿಗೊಳ್ಳಿ… ನಂತರ ಮಿತ್ಸ್ ನ ಬೈಲಿಂಗೆ ಹೇಳುಲೆ ಮರೆಡಿ…
ಹಾಕದ್ದೆ ಅಷ್ಟೇ ರುಚಿಕರವಾಗಿ ಫ್ರುಟ್ ಸಲಾಡ್ ಮಾಡುದು – ಹೇಂಗೆ ಹೇಂಗೆ???
ಹೇಂಗೆ ಮಾಡುದು ಹೇಳಿ ಬೈಲಿನವಕ್ಕೆ ಹೇಳಿಕೊಡುವೆಯಾ ಹೇಳಿ ಶ್ರೀ ಅತ್ತಿಗೆಯತ್ತರೆ ಕೇಳುತ್ತೆ…
ನಿಂಗೊಗೆ ಗೊಂತಿದ್ದನ್ನೇ.. ನೋಡೊ° ಒಂದು ಬರದು ಹಾಕಿ..
ಮನೆಲಿ ಮಾಡಿ ತಿಂತೆಯ° 😉
ಇಲ್ಲಿ ಹೇಳಿದರೆ ಅದು ಸರಿಯಾಗ… ಫೋಟೋ ಸಮೇತ ವಿವರುಸಿದರೆ ಮಾಂತ್ರ ಅದರ ಸರಿಯಾದ ರುಚಿ ಸಿಕ್ಕುಗಷ್ಟೇ… ಶ್ರೀ ಅತ್ತಿಗೆ ಪಾಕ ಶಾಸ್ತ್ರ ಪ್ರವೀಣೆ… ಬೈಲಿಂಗೆ ಬಂದರೆ ಹಲವು ಹೊಸ ರುಚಿ ಸಿಕ್ಕುಗು ಅಲ್ಲದ… ವೇಣಿಯಕ್ಕಂಗೂ ಒಬ್ಬನೇ ಅಡಿಗೆ ಮಾಡಿ ಬೇಜಾರಪ್ಪದಕ್ಕೆ ಸಹಾಯ ಅಕ್ಕು… ಸರಿ ಅಲ್ಲದ?
ಅಕ್ಕಕ್ಕು…
ಓ ಶ್ರೀ ಚಿಕ್ಕಮ್ಮ.. ಎಲ್ಲಿದ್ದಿ?
ದಿನಿಗೇಳ್ತಾ ಇದ್ದವಿದಾ??
{ನೀರುಳ್ಳಿ,ಬೆಳ್ಳುಳ್ಳಿ,ಐಸ್ ಕ್ರೀಂ’ ಎಲ್ಲ ತಿಂಬದು ಚಾಮಿಗೆ ಇಷ್ಟ ಆವುತ್ತಿಲ್ಲೆ ಅಲ್ಲದ ಮಗ? } ಇದರ ಓದುವಾಗ ಎ೦ತಕ್ಕೆ ಹಿ೦ಗೆ ಹೇಳುತ್ತೀ ಹೇಳಿ ಆವುತ್ತಾ ಇದ್ದು? ನೀರುಳ್ಳಿ,ಬೆಳ್ಳುಳ್ಳಿ, ಲಿ ತು೦ಬಾ ಮದ್ದಿನಗುಣ ಇದ್ದಲ್ಲದ? ,ಇದರ್ಲ್ಲಿanti-inflammatory, antibiotic, anti-allergic and antiviral ಗುಣ ತು೦ಬಾ ಇದ್ದನ್ನೆ..ಮತ್ತೆ ಇದರಲ್ಲಿ ಇಪ್ಪ Allistatin ಹೇಳುವ antibiotic ಕೆಟ್ಟ ಕೊಲೆಸ್ತ್ರೊಲಿನ ಕಡಮ್ಮೆ ಮಾಡುತ್ತಡ ಅಲ್ಲದ? . ಐಸ್ ಕ್ರೀಂ’ ಹೆರ ಅ೦ಗಡಿದು ಬೇಡದ್ದರೆ ಮನೆಲೆ ಮಾಡಿ ಕೊಡುಲಾವುತ್ತನ್ನ
ಯಾವ ವೈದ್ಯಕೀಯ ವಿಜ್ಹಾನದ ಆಧಾರಲ್ಲಿ ‘ನೀರುಳ್ಳಿ,ಬೆಳ್ಳುಳ್ಳಿ’ ಆರೋಗ್ಯಕ್ಕೆ ಒಳ್ಳೇದು ಹೇಳಿ ಹೇಳುತ್ತಾ ಇದ್ದಿರೋ ಆ ವೈದ್ಯಕೀಯ ವಿಜ್ಹಾನಕ್ಕೆ ಸವಾಲಪ್ಪಂತಹ ಹಲವು ಪವಾಡಂಗಳ ಜೀವನಲ್ಲಿ ಅನುಭವಿಸಿದೆ… ಹಾಂಗಾಗಿ ಆ ವೈದ್ಯಕೀಯ ವಿಜ್ಹಾನದ ಮೇಲೆ ಏನೇನೂ ನಂಬಿಕೆ ಇಲ್ಲೇ…
ಮಕ್ಕಳ ಸಾತ್ವಿಕ ಆಹಾರ,ಸಾತ್ವಿಕ ಚಿಂತನೆಗಳೊಂದಿಗೆ ಅತ್ಯುತ್ತಮ ತರಲ್ಲಿ ಬೆಳೆಸೆಕ್ಕು ಹೇಳಿ ಆಸೆ ಇದ್ದು… ಬೈಲಿನ ಎಲ್ಲ ಮಕ್ಕಳೂ ಅತ್ಯತ್ತಮ ತರಲ್ಲಿ ಬೆಳೆಯಲಿ ಹೇಳಿ ಆಸೆ ಇದ್ದು… ಹಾಂಗಾಗಿ ಮಾತನಾಡುಲೆ ಅತಿ ಸಂಕೋಚಪಡುವ ಸ್ವಭಾವದ ಆನು ಸಂಕೋಚ ಬಿಟ್ಟು ಬೈಲಿಲ್ಲಿ ಮಾತನಾಡುಲೆ ಶುರು ಮಾಡಿದೆ…
[ಈ ಜಯಕ್ಕ ಎಂತೋ ಸಾಧಿಸಿದವರ ಹಾಂಗೆ ಎಂತಕಪ್ಪ ಹೇಳ್ತಾ ಇದ್ದು ಹೇಳಿ ಗ್ರೆಷೆಡಿ.] – ಅಕ್ಕು.
[ಜಯಕ್ಕಂಗೆ ಇದರ ಮೀರಿದ ಆ ಪರಮಾನಂದ ಸಿಕ್ಕಿದ್ದು] – ಅದೇ ಬೇಕಾದ್ದು.
[ಐಡಿಯಾ] – ಉಮ್ಮಾ., ಎನಗರಡಿಯ. ಮಾಡಿ ಕೊಟ್ಟರೆ ಕೊರತೆ ಹೇಳ್ಳೆ ಅರಡಿಗು.
ಅಕ್ಕೋ… ನಿಂಗಳ ಛಲಕ್ಕೆ ಉತ್ಸಾಹಕ್ಕೂ ಮೆಚ್ಚೆಕ್ಕಾದ್ದೆ. ಜಯಕ್ಕಂಗೆ ‘ಇದರ ಮೀರಿದ ಆ ಪರಮಾನಂದ’ ಯಾವತ್ತೂ ಇರಲಿ ಹೇಳಿ ಇತ್ಲಾಗಿಂದ – ‘ಚೆನ್ನೈವಾಣಿ’.
ಒಂದರಿ ‘ಆ ಪರಮಾನಂದದ’ ರುಚಿ ಸಿಕ್ಕಿದ ಮೇಲೆ ‘ಈ ಲೌಕಿಕವಾದ ಜೀವನ’ ಎಷ್ಟು ನಿಸ್ಸಾರ ಹೇಳಿ ಅನ್ನಿಸುತ್ತು ಹೇಳಿರೆ ‘ಕ್ಷೀರ ಸಾಗರಲ್ಲಿ ಮುಳುಗುಲೇ ಅವಕಾಶ ಇಪ್ಪವ ಒಂದು ಚಮಚ ಹಾಲಿಂಗೆ ಬೇಕಾಗಿ ಕ್ಯೂ ವಿಲ್ಲಿ ನಿಲ್ಲೆಕ್ಕಾರೆ ಅವಂಗೆ ಹೆಂಗಕ್ಕೋ ಹಾಂಗೆ’ ಆವುತ್ತು… ಆದರೂ ಗುರುಕ್ರುಪೆಂದಾಗಿ ಆ ಪರಮಾನಂದವ ಅನುಭವಿಸಿಗೊಂಡು ಲೌಕಿಕವಾದ ಜೀವನವ ಮೊದಲಿಗಿಂತಲೂ ಉತ್ತಮ ತರಲ್ಲಿ ನಿರ್ವಹಿಸುವುದು ಹೆಂಗೆ? ಹೇಳಿ ಕಲ್ತುಗೊಂಡೆ… ‘ಇಹ ಪರ’ ಗತಿಯ ರಾಮ ಯಾವ ತರ ಕರುಣಿಸುತ್ತ ಹೇಳಿ ಅನುಭವಿಸಿದೆ… ನಿಂಗಳೆಲ್ಲರ ಸಹಕಾರಂದ ನಾವೆಲ್ಲಾ ಒಂದಾಗಿ ಆದಷ್ಟು ಬೇಗ ಆ ಗುರಿಯ ಸೇರುವ ಹಾಂಗೆ ಆಗಲಿ…
ಒ೦ದು ಚಮಚ ಹಾಲು ಕುಡುದರೆ ಹೊಟ್ಟೆ ತು೦ಬ.
ಆದರೆ ಕ್ಶೀರ ಸಾಗರಲ್ಲಿ ಮನುಶ್ಯ ಮುಳುಗಿದರೆ ಎ೦ತ ಅಕ್ಕು?
ಅವಕಾಶ ಇದ್ದು ಹೇಳಿ ಆಲೋಚನಾವಿಹೀನನಾಗಿ ಕ್ಶೀರ ಸಾಗರಲ್ಲಿ ಮುಳುಗುಲಾಗ. ಕ್ಶೀರವೇ ಆದರೂ ಅಮ್ಲ ಜನಕ ಇಲ್ಲದ್ದೆ ಒ೦ದಕ್ಕೆ ಒ೦ದೂವರೆ ಆಗಿ ಹೋಕು.
ಜೀವನದ ಸಣ್ಣ ಸಣ್ಣ ಸ೦ತೋಶ೦ಗಳ ಬಿಡೆಕ್ಕಾ?
“ಲೌಕಿಕವಾದ ಜೀವನವ ಮೊದಲಿಗಿಂತಲೂ ಉತ್ತಮ ತರಲ್ಲಿ ನಿರ್ವಹಿಸುತ್ತಾ ಇದ್ದೆ…” ಹೇಳಿರೆ ಅದರರ್ಥ ಯಾವ ಸುಖವನ್ನೂ ಕಳಕ್ಕೊಲ್ಲದ್ದೆ ಪರಮಾನಂದವ ಪಡಕ್ಕೊಂಡಿದೆ… ಕ್ಷೀರ ಸಾಗರಲ್ಲಿ ಮುಳುಗುವ ಆಸೆ ಇಲ್ಲದ್ದರೆ ಈಜುಲಕ್ಕು… ಎಲ್ಲ ಅವಕಾಶಂಗಳೂ ಇದ್ದು ಅಲ್ಲಿ…
ಅಡಿಗೆ ಬದಲಾವಣೆ ಒಳ್ಳೆದು. ಐಸ್ ಕ್ರೀಮ್ ಏನೋ ಬೇಡ ಸರಿ, ಆದರೆ ನೀರುಳ್ಳಿ ಬೆಳ್ಳುಳ್ಳಿ ಹಿತಮಿತವಾಗಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದೇ ಅಲ್ಲದಾ!
“ಬಡ್ಡು ದೋಸೆ” ಹೆಸರು ಮೊದಲ ಬಾರಿಗೆ ಕೇಳಿದೆ 🙂
ಆಧುನಿಕ ವೈದ್ಯಕೀಯ ಪದ್ದತಿಯ ಪ್ರಕಾರ ನೀರುಳ್ಳಿ,ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೇದೋ,ಅಲ್ಲದೋ ಹೇಳಿ ಗೊಂತಿಲ್ಲೇ.
ನಿಜವಾಗಿಯೂ ಮನುಷ್ಯನ ಆರೋಗ್ಯಕ್ಕೆ ನೀರುಳ್ಳಿ,ಬೆಳ್ಳುಳ್ಳಿಯ ಆಹಾರವಾಗಿ ಸೇವಿಸುವುದು ಒಳ್ಳೆದಲ್ಲ. ಇದಕ್ಕೆ ಸಾತ್ವಿಕ ಆಹಾರ ಪದ್ದತಿಯ ಅನುಸರಿಸಿದ ಋಷಿ,ಮುನಿಗಳು ಅಥವಾ ಹಿಂದಿನವು ಸಾಕ್ಷಿ. ನೀರುಳ್ಳಿ,ಬೆಳ್ಳುಳ್ಳಿ ಅತ್ಯಂತ ತಾಮಸ ಗುಣ ಉಳ್ಳ ಆಹಾರ ಹೇಳುದಕ್ಕೆ ನಾವು ಇಂದು ಕೂಡ ಪೂಜೆ,ವ್ರತದ ದಿನ ನೀರುಳ್ಳಿ,ಬೆಳ್ಳುಳ್ಳಿ ಸೇವಿಸದ್ದೆ ಇಪ್ಪದೆ ಸಾಕ್ಷಿ.
ಆಧುನಿಕ ವೈದ್ಯಕೀಯ ಪದ್ದತಿಯ ಮೇಲೆ ಏನೇನೂ ನಂಬಿಕೆ ಇಲ್ಲೇ ಮತ್ತು ಆಸಕ್ತಿಯೂ ಇಲ್ಲೇ.
ಎಂತಾರು ರೋಗ ಬಂದರೆ ಮೊದಲು ನೆನಪಪ್ಪದು ದೇವರ.ಆ ನಂಬಿಕೆಯೇ ರೋಗ ಗುಣ ಅಪ್ಪಲ್ಲಿ ಪ್ರಧಾನ ಪಾತ್ರ ವಹಿಸುದು.ಮದ್ದು ಹೇಳಿ ನೀರು ಕುಡುದು ರೋಗ ಕಮ್ಮಿ ಆದ ಕಥೆ ಎಲ್ಲೋರಿಂಗೂ ಗೊಂತಿಕ್ಕು. ಹಲವು ಸ್ವಂತ ಅನುಭವಂಗಳೂ ಆಯಿದು. ಎಷ್ಟರ ಮತ್ತಿಂಗೆ ಹೇಳಿರೆ ಆನಿಂದು ಜೀವಿಸುತ್ತ ಇಪ್ಪದಕ್ಕೆ ಕೂಡ ಗುರುಗಳ ಮೇಲಿನ ನಂಬಿಕೆ ಕಾರಣ.
ಆಧುನಿಕ ವೈದ್ಯಕೀಯ ಪದ್ದತಿಯ ಮೇಲೆ ಏನೇನೂ ನಂಬಿಕೆ ಇಲ್ಲದ್ದೆ ಅಪ್ಪಲೇ ಕಾರಣಂಗ ಹಲವು.
೧. ಕೆಲವು ವರ್ಷ ಮೊದಲು ತೆಂಗಿನೆನ್ಣೆಯ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆದಲ್ಲ ಹೇಳಿದ ವೈದ್ಯ ವಿಜ್ಹಾನವೇ ಪುನಃ ಅದು ಒಳ್ಳೇದು; ಕೆಲವು ಮಲ್ಟಿ ನ್ಯಾಷನಲ್ ಕಂಪೆನಿಗ ಅವರ ಎಣ್ಣೆಯ ಮಾರ್ಕೆಟಿಂಗ್ ಗೆ ಬೇಕಾಗಿ ಹಾಂಗೆ ಹೇಳಿದ್ದು ಹೇಳಿ ಒಪ್ಪಿಗೊಂಡದು…
೨. ನಾವು ಸಣ್ಣ ಇಪ್ಪ ಸಮಯಲ್ಲಿ ಕೋಕೋಯುಕ್ತ ಪೇಯಂಗ(boost,bourn vito… ಹೀಂಗಿಪ್ಪದು) ತುಂಬಾ ಒಳ್ಳೇದು ಹೇಳಿದ ವೈದ್ಯ ವಿಜ್ಹಾನ ಈಗ ಅದು ಬುದ್ದಿಶಕ್ತಿಗೆ ಒಳ್ಳೆದಲ್ಲ ಹೇಳುತ್ತಾ ಇಪ್ಪದು…
ಇಂತಹವು ಹಲವು ಇದ್ದು… ಈ ವಿಷಯಲ್ಲಿ ಚರ್ಚಿಸುಲೇ ಕೂಡ ಆಸಕ್ತಿ ಇಲ್ಲೇ.
ಇತ್ತೀಚಿಗೆ ‘ಮರಕ್ಕಿಣಿ ಶಂಕರ ನಾರಾಯಣ ಭಟ್’ ಬರದ ‘ನಿಸರ್ಗ ಜೀವನ ಮತ್ತು ಚಿಕಿತ್ಸೆ’ ಹೇಳುವ ಅತ್ಯುತ್ತಮ ಪುಸ್ತಕ ಸಿಕ್ಕಿತ್ತು. ಅದರಲ್ಲಿ ಆಧುನಿಕ ಔಷಧಿಗ ಯಾವ ತರ ಆರೋಗ್ಯಕ್ಕೆ ಹಾನಿಕರ, ನಿಷ್ಣಾತ ದಾಕ್ತ್ರರರು ಕೂಡ ಆಧುನಿಕ ವೈದ್ಯಶಾಸ್ತ್ರದ ಬಗ್ಗೆ ನಂಬಿಕೆ ಇಲ್ಲದ್ದ ಹಲವು ಉದಾಹರಣೆಗ, ಪ್ರಕೃತಿ ಸಕಲ ಜೀವರಾಶಿಗಳ ಆರೋಗ್ಯವ ಸಮನಾಗಿಸುವ ವೈದ್ಯಾಲಯ ಆದ್ದರಿಂದ ನಾವು ಪ್ರಕೃತಿಗೆ ಹತ್ತಿರ ಆಗಿ ಜೀವನ ನಡೆಸುವುದೇ ಆರೋಗ್ಯದ ಗುಟ್ಟು… ಹೀಂಗಿದ್ದ ಹಲವು ವಿಚಾರಂಗಳ ತುಂಬಾ ಲಾಯಕಲ್ಲಿ ವಿವರಿಸಿದ್ದವು…
——
ಬರಿ ಅಕ್ಕಿ ದೋಸೆಗೆ ‘ನೀರುಳ್ಳಿ,ಹಸಿಮೆಣಸು’ ಅಥವಾ ‘ನೀರುಳ್ಳಿ,ಕೊತ್ತಂಬರಿ,ಕೆಂಪುಮೆಣಸು’ ಹಾಕಿ ಮಾಡುವ ದೋಸೆಗೆ ಎಂಗಳಲ್ಲಿ ‘ಬಡ್ಡು ದೋಸೆ’ ಹೇಳುತ್ತವು…