- ಪರಶಿವ ಪ್ರಸಂಗ - February 21, 2012
- ನಾಕು ನಾಕು ಸಾಲು - February 14, 2012
- ಒಂದು ಕೋಳಿಯ ಕಥೆ.. - March 8, 2011
ನಮ್ಮ ಹಳಬ್ಬರಲ್ಲಿ ಹಲವಾರು ಜಾನಪದ ಶುದ್ದಿಗೊ ಇದ್ದು. ಹಲವೆಲ್ಲ ಮರದ್ದು, ಕೆಲವೆಲ್ಲ ನೆಂಪಿದ್ಸು.
ದೊಡ್ಡಮಾವಂಗೆ ನೆಂಪಾದ ಈ ಶುದ್ದಿಯ –ಶಿವನ ಬಗ್ಗೆ – ಬೈಲಿಂಗೆ ಹೇಳ್ತಾ ಇದ್ದವು, ನಾವೆಲ್ಲ ಕೇಳುವೊ°.
ಶಿವರಾತ್ರಿ ಪ್ರಯುಕ್ತ ಈ ಅಪುರೂಪದ ಶುದ್ದಿ.
ಇದು ನಿಜವಾಗಿ ನೆಡದ್ಸಡ. ಕಂಡವೇ ಹೇದ್ಸು. ಇಂದು ನಿನ್ನೆಯಾಣದ್ದು ಮಾಂತ್ರ ಅಲ್ಲ.
ಜಾಂಬವ° ಸಣ್ಣ ಇಪ್ಪಗ ಅವಂಗೆ ಅವನ ಅಜ್ಜ° ಹೇದ್ಸು. ಅದು ಕೆಮಿಂದ ಕೆಮಿಗೆ ಬಾಯಿಂದ ಬಾಯಿಗೆ ಬಂದ್ಸು.
ಕತೆ ಕೇಳಿ, ಬೇಡ, ಕತೆ ಅಲ್ಲ ಸಂಗತಿ ಹೇಳುವೊ°. ಚರಿತ್ರೆ ಹೇದರೆ ನೆಡದ್ಸು (ಚರ-ನೆಡೆ). ಇತಿಹಾಸ ಹೇದರೆ ಹೀಂಗಿತ್ತಿದ್ದಡ ಹೇಳುಸ್ಸು (ಇತಿ ಹ ಆಸ – ಹೇಳುಸ್ಸು ಕೇಟದು) ಹಾಂಗಾಗಿ ಇದು ಇತಿಹಾಸ ಹೇಳುವೊ°.
ಶಿವ ದೇವರು ಹೆಂಡತಿ ಹತ್ತರೆ ಕೋಪುಸಿಂಡು ತಪಸ್ಸಿಂಗೆ ಕೂದ°. ಹೆಂಡತಿ ಹತ್ತರೆ ಕೋಪ ಬಂದರೆ ಅದು ಎಷ್ಟು ಕಡ್ಪ ಇರ್ತು ಗೊಂತಿದ್ದೋ..?
ಮಧೂರಿಲ್ಲಿ ಅನಂತೇಶ್ವರ° ಗುಂಡದೊಳ ಕೂದು ಕೂದು ಸಾಕಾಗಿ ವರ್ಷಕ್ಕೊಂದರಿ ಹೆರ ಆಯನ ನೋಡ್ಳೆ ಹೇಳಿಂಡು ಹೆರ ಬತ್ತ°. ಅಲ್ಲೇ ಅಂಙಣಲ್ಲಿ ಸುತ್ತಿ ಸುತ್ತಿ ಸಾಕಾಗಿ ಒಂದು ದಿನ ಉಳಿಯತ್ತಡ್ಕಕ್ಕೆ ಹೋಗಿಂಡು ಬಪ್ಪೊ° ಹೇದು ಹೋವ್ತ°.
ಹುಟ್ಟಿದ ಊರಿನ ಅವಂಗಾರೂ ಮರವಲೆಡಿಗೊ..? ಹೇಂಗೇಂಗೆ ಇರ್ತ ಮನುಷ್ಯರು, ಊರು ಬಿಟ್ಟು ಪರವೂರಿಲ್ಲಿ ನೆಲೆಸಿದವು ಸಾನೂ ಪ್ರಾಯ ಹೋಕಿಂಗೆ ಹುಟ್ಟೂರಿಂಗೆ ಬತ್ತವು. ಶಿವರಾಮ ಕಾರಂತ, ಬಂಬ್ರಾಣ ವೆಂಕು ಪೂಂಜನ ಹಾಂಗೆ.
ಉಳಿಯತ್ತಡ್ಕಂದ ಓಪಾಸು ಬಂದು ಸಂತೆಗೆದ್ದೆಲಿ ಬೆಡಿ. ಅದು ಕಳುದು ದೇವಸ್ಥಾನಕ್ಕೇ ಬತ್ತ°. ಇಷ್ಟೆಲ್ಲ ಕಳುದು ಅಂಙಣಕ್ಕೆ ಎತ್ತಿಯಪ್ಪಗ, ಹೆಂಡತ್ತಿ ಹೆರಗೆ ಹೇಳಿ ಗೊಂತಾತು ಅವಂಗೆ. ಹಾಂಗಾಗಿ ಪಿಸುರು ಕೊದಿಯಲೆ ಸುರು ಆತು. ಮೂಡ ಅಂಙಣಲ್ಲಿ ಬೆಶಿ ಉಸುಲು, ಸೇಂಕು ಬಿಟ್ಟಂಡು, ಕೋಪುಸಿ, ದರುಸುತ್ತ ಆ ದರ್ಶನ ಬಲಿಯ ನಿಂಗಳೂ ನೋಡಿಪ್ಪಿ.
ಮತ್ತೆ ನವಿಲು ಗರಿಯ ಬೀಸಣಿಗೆಲಿ, ಚಮರಿ ಬೀಸಣಿಗೆಲಿ ಬೀಸಿ ತಂಪು ಮಾಡಿ ಸಮಾಧಾನ ಮಾಡ್ಸು. ಮೆಲ್ಲಂಗೆ ದೇವರ ಒಳಂಗೆ ಮಾಡಿ ಗುಂಡದ ಬಾಗಿಲು ಹಾಕುಸ್ಸು.
ಕಲಿಯುಗಲ್ಲಿಯೇ ಹೆಂಡತಿ ಹೆರಗೆ ಅಗಿ ಬೇಕಪ್ಪಾಗ ಎದುರು ಸಿಕ್ಕದ್ರೆ ಇಷ್ಟೆಲ್ಲ ಕೋಪುಸಿ ದರುಸುತ್ತರೆ ಕೃತಯುಗಲ್ಲಿ ಹೇಂಗಿರೇಡ..!
ಈಗಾಣಂದ ನಾಕು ಎರಟಿ ಇಕ್ಕೋ..? ಅದರನ್ನೇ ಈಗ ಹೇಳ್ಳೆ ಹೆರಟದು. ಕತೆಂದ ಉದ್ದ ಆತು ಪೀಠಿಕೆ, ಸಾರಯಿಲ್ಲೆ, ಕೇಳಿ…
ಶಿವದೇವರು ಒಂದಾರಿ ಹೆಂಡತಿಯ ಹತ್ತರೆ ಕೋಪುಸಿಂಡು ತಪಸ್ಸಿಂಗೆ ಕೂದ°.
ಆತ್ಮ ಶಾಂತಿಗೆ ಬೇಕಾಗಿ ಉಗ್ರ ತಪಸ್ಸು. ಹೆಂಡತಿ ಹತ್ತರೆ ಕೋಪುಸಿದ್ಸು ಹೇದರೆ ಅದು ಇದ್ದತ್ತಿಲ್ಲೆ, ದಕ್ಷಾಧ್ವರಲ್ಲಿ ಸತ್ತೇ ಹೋಯಿದು.
ಯಾಗಕ್ಕೆ ಹೋಗೆಡ ಹೇದರೆ ಕೇಳದ್ದೆ ಅಪ್ಪನ ಮನೆಗೆ ನೆಡಾತು. ಅಪಮಾನ ಆತು, ಕಿಚ್ಚಿಂಗೆ ಹಾರಿ ಸತ್ತತ್ತು.
ಹಿಮವತ್ ಪರ್ವತಲ್ಲಿ ಆ ಚಳಿಗುದೇ ನಖ ಶಿಖಾಂತ ಕೋಪದ ಬೇಗೆ ಇದ್ದತ್ತು. ಅದರ ತಣುಶುಲೆ ಆತ್ಮ ಶಾಂತಿ ತಪಸ್ಸು ಸುರು ಮಾಡಿದ°.
ಆ ಯೋಗ ಧ್ಯಾನ ಎಷ್ಟೋ ಎಷ್ಟೋ ಕಾಲ ಆಗಿಂಡಿದ್ದತ್ತು. “ಧರೆಯೊಳಗೆ ಚತುರ್ಯುಗಂಗಳು ಮರಳಿ ಮರಳಿ ಸಾವಿರ ಬಾರಿ ಬರಲಜಂಗೊಂದು ದಿನ” ಹಾಂಗಿಪ್ಪ ದಿನ, ಮಾಸ, ವರ್ಷ, ಯುಗ, ಕಲ್ಪಂಗೊ ಸೇರಿರೆ ಒಂದು ದೇವ ವರ್ಷ ಆತು.
ಹೀಂಗಿಪ್ಪ ಎಷ್ಟೋ ಒರುಷಂಗೊ ಕಳಾತು ಶಿವ° ತಪಸ್ಸಿಂಗೆ ಕೂದು. ಯೇವಾಗ ಲಯಕರ್ತ ಶಿವ° ನಿಷ್ಕ್ರಿಯ ಆದನೋ ಭೂಮಿಲಿ ಮರಣ ಇಲ್ಲದ್ದೆ ಆತು. ಆರಿಂಗೂ ಮರಣ ಇಲ್ಲೆ. ಗೆಡು ಮರ ಬಳ್ಳಿಗೊಕ್ಕೂ, ಕ್ರಿಮಿ ಕೀಟ ಮೃಗ ಪಕ್ಷಿಗೊಕ್ಕೂ, ಏವದಕ್ಕೂ ಸಾವು ಇಲ್ಲೆ.
ಹಾಂಗೆ ಜೆನಸಂಖ್ಯೆ ಮಕ್ಕೊ ಪುಳ್ಳಿಯಕ್ಕೊ ಮರಿ ಮಕ್ಕೊ ಹೀಂಗೆ ಎರಟಿಂದ ಎರಟಿ, ಎರಟಿಂದೆರಟಿ ಆಗಿ ಏರಿಂಡೋತು. ಒಂದೊಂದು ಮನೆಲಿ ನೂರಿನ್ನೂರು ಜೆನ.
ಹಳಬ್ಬಂಗೊ, ಮುದುಕ್ಕಂಗೊ, ಅಜ್ಜಂದ್ರು ಅಜ್ಜಿಯಕ್ಕೊ ಅಜ್ಜಿ ಪಿಜ್ಜಿ ಮುತ್ತಜ್ಜಿ… ಇವಕ್ಕೆಲ್ಲ ಆಹಾರ ವಸತಿ ಆಗೆಡದೋ..!
ಊಟದ ಹೊತ್ತಿಂಗೆ ಅಪ್ಪಗ ಎಲ್ಲ ನರ್ಕೆಲೆಲಿ ದೇವರಕ್ಕೊಗೆ ನೈವೇದ್ಯ ಕೊಡ್ತ ಹಾಂಗೆ ಬಡುಸಿ ಊಟ. ಹಳೆ ಹಳೆ ಮುದಿಯಂಗೊ ಹೇಳುಗು“ಎನ, ಇಷ್ಟೆಲ್ಲ ಉಂಡೊಂಬಲೆ ಎಡಿತ್ತಿಲ್ಲೆ ಮಗ°, ರೆಜ ಕಮ್ಮಿ ಮಾಡು” ಹೇದು.
ಕೆಲವು ಜೆನ ಅತಿ ವೃದ್ಧಂಗೊ ಕಣ್ಣೂ ಕಾಣದ್ದೆ ಕೆಮಿಯೂ ಕೇಳದ್ದೆ ಶರೀರ ಸುರುಟಿ ಬಾಕಿಪ್ಪೋರು ಅತ್ತಿತ್ತೆ ಹೋಪಗ ಕಾಲಿಂಗೆ ಎಡಗಿಂಡು ಇದ್ದಿದ್ದವು.
ಮೀತ್ತೇನೆ ಹೇದು ಅಬ್ಬಿ ಹೊಂಡಕ್ಕೆ ಹೋಗಿ ಹರುದು ಬಿದ್ದು ಅಲ್ಲಿಂದ ಏಳ್ಳೆಡಿಯದ್ದೆ ಮುರ್ಯೋ ಕೊಟ್ಟೊಂಡು ಇದ್ದಿದ್ದವು. ಈ ಸಾವಿರ ಗಟ್ಳೆ ಒರುಷ ಪ್ರಾಯ ಆದೋರು ಶರೀರ ಸುಕ್ಕು ಗಟ್ಟಿ ಗೋಂಕುರು ಕೆಪ್ಪೆಯ ಹಾಂಗೆ ಇದ್ದಿದ್ದವು.
ಅವರ ಕಾಲಿಂಗೆ ಎಡಗುಸ್ಸಕ್ಕೆ ಬೇಕಾಗಿ ದಾರಂದಲ್ಲಿಯೋ ಹೊಗೆ ಹಲಗೆಲಿಯೋ ಹೆರುಕ್ಕಿ ಮಡಗಿಂಡು ಇದ್ದಿದ್ದವು. ಊಟಕ್ಕೆ ಅಪ್ಪಗ ಅವಕ್ಕೆ ಅಲ್ಲಿಗೆ ಕೊಡುಸ್ಸು. ಕೆಲವು ಸರ್ತಿ ಈ ಹೆರಿಯವು ಆರು? ಎಲ್ಲಿದ್ದವು?
ಹೇದು ನೆಂಪಾಗದ್ದೆ ಬುದ್ದಿಮುಟ್ಟು ಆಗಿಂಡು ಇದ್ದತ್ತು. ಕೆಲವು ಸರ್ತಿ ಹೀಂಗೆ ಮರತ್ತು ಹೋಗಿ ಅವು ಹಶು ಆಗಿ“ಮಗಾ°, ಹಶು ಆವುತ್ತು, ಎಂತಾರೂ ಒಂದು ಹೊಡಿ ತಿಂಬಲೆ ಕೊಡು” ಹೇದು ದೆನಿಗೇದು ಹೇಳುಗು.
ಕೆಲವು ಸರ್ತಿ ಅವು ಮಾತಾಡಿದ್ಸು ದೂರಕ್ಕೆ ಕೇಳ. ಎಂತಾರೂ ಮೂಲೆ ಮುಡುಕ್ಕಿಲ್ಲಿ ಹುಡುಕ್ಕುವಗ ಅವಕ್ಕೆ ಎಚ್ಚರಿಕೆ ಆಗಿ ಆನು ಎಷ್ಟು ಹೊತ್ತಾತು ನಿನ್ನ ದೆನಿಗೇಳುಸ್ಸು, ಏಕೆ ಬಾರದ್ಸು ಕೇಳುಗು.
ಮಾತಾಡಿದ್ಸು ದೊಂಡೆಂದ ಹೆರ ಬಾರದ್ರೆ ಇವಕ್ಕೆ ಕೇಳುಸ್ಸು ಎಲ್ಲಿಂದ..! ಇವು ಬಸ್ಸೆಲ್ಲಿಂದ..!
ಒಂದೊಂದಾರಿ ಹೇಳುಗು “ಎನಗೆ ಮೈಯೆಲ್ಲ ಮರ ಮರ ಆವುತ್ತು ಮಗಾ°, ಒಂದಾರಿ ಮೈ ಚೆಂಡಿ ಮಾಡೇಕಾತು.”
ಹಾಂಗೆ ಅವರ ಹೆರುಕ್ಕಿಂಡು ಬಂದು ಒಂದು ಮರಿಗೆಲಿ ಅದ್ದಿ ತೆಗೆಸ್ಸು. ತಿರುಗಿ ಅಲ್ಲಲ್ಲಿ ದಾರಂದಲ್ಲಿಯೋ, ಸಿಕ್ಕಲ್ಲಿಯೋ ಕೊಂಡೋಗಿ ಮಡಗುಸ್ಸು. ಕೆಲವು ಸರ್ತಿ ಅಮಾಸೆಗೋ, ಶೆಂಕ್ರಾಂತಿಗೋ ಅವಕ್ಕೆಲ್ಲ ಸಾಮೂಹಿಕ ಮೀಯಾಣ.
ನರ್ಕೆಲೆಲಿ ಕೊಟ್ಟ ಅಶನ ಮತ್ತಾಣ ಸರ್ತಿ ಅಶನ ಕೊಡ್ಳೆ ಹೋಪಗ ಅಲ್ಲೇ ಉಣ್ಣದ್ದೆ ಬಾಕಿ ಆಗಿಂಡು ಇರ್ಸೂ ಇದ್ದು. ಅಜ್ಜ, ಪಿಜ್ಜ, ಮುತ್ತಜ್ಜರಿಂದ ಹಿಂದಾಣವರ ಹೆಸರು ಮರತ್ತು ಹೋಗಿರ್ತು.
ಕುಟುಂಬಲ್ಲಿ ತಿತಿ ಮಾಡೇಕಾದವು ಮುದು ಮುದಿ ಆಗಿ ಪಂಚೇಂದ್ರಿಯಂಗೊ ಶಿಥಿಲ ಆಗಿ ನೆಂಪು ಶೆಕ್ತಿ ಕಮ್ಮಿ ಆಗಿ ಇದ್ದಿದ್ದವು. ಇದ್ದಿದ್ಸು ಜೀವ ಮಾಂತ್ರ. ಅವು ತಿತಿ ಮಾಡ್ಸು ಹೇಂಗೆ! ಅವರತ್ರೆ ಮಾಡುಸುಸ್ಸು ಹೇಂಗೆ!
ಒಂದೊಂದರಿ ನೆಡು ಇರುಳು ಎಲ್ಲ ಹಾಡು ಹೇಳುಸ್ಸು ಕೇಳುಗು, ಅಜ್ಜಿಯಕ್ಕೊ. ಹೊತ್ತು ಹೋಪಲೆ ಒಂದು ಕೆಲಸ ಬೇಕಾನೆ!
ಅಜ್ಜಂದ್ರು ಮಂತ್ರ ಶ್ಲೋಕಂಗಳ ಹೇಳುಸ್ಸು ಕೇಳುಗು. ಅಂತೂ ಒರಗುತ್ತವಕ್ಕೆ ರಗಳೆ. ಆದರೆ ಅವು ರಗಳೆ ಹೇದು ಇವರ ಕಡೆಗಣುಸಿದ್ದವಿಲ್ಲೆ. ಅವಕ್ಕೆ ಗೊಂತಿದ್ದು ನಾಳಂಗೆ ನಮ್ಮ ಅವಸ್ಥೆಯೂ ಹೀಂಗೆ ಹೇದು! ಪ್ರತೀ ಮನೇಲಿಯೂ ಜೆನ ತುಂಬಿ ಇದೇ ಅವಸ್ಥೆ.
ಬ್ರಹ್ಮ ತಪ್ಪಸ್ಸಿಂಗೆ ಕೂಯಿದಾ° ಇಲ್ಲೆ ಅಲ್ದೋ.
ಹಾಂಗಾಗಿ ಮಕ್ಕೊ ಹುಟ್ಟಿಂಡು ಇದ್ದಿದ್ದವು. ಅಂದರೆ ಮತ್ತೆ ಮತ್ತೆ ಜೆನ ತುಂಬಿದ ಹಾಂಗೆ ಮನೆಗಳಲ್ಲಿ ಏಕಾಂತಕ್ಕೆ ಸೌಕರ್ಯ ಕಮ್ಮಿ ಕಮ್ಮಿ ಆಗಿಂಡು ಹೋದ್ಸರಿಂದಾಗಿ ಜನನ ಪ್ರಮಾಣವುದೆ ತಕ್ಕ ಮಟ್ಟಿಂಗೆ ಕಮ್ಮಿ ಕಮ್ಮಿ ಆಗಿಂಡಿದ್ದಿಕ್ಕು.!
ಈ ಪರಿಸ್ಥಿತಿ ಭೂಮಿಲಿ ಎಷ್ಟೋ ವರ್ಷ ನೆಡದತ್ತು.
ಭೂದೇವಿಗೆ ಈ ಜೀವಿಗಳ ಭಾರ ತಾಳಲೆ ಎಡಿಯದ್ದೆ ಬ್ರಹ್ಮಂಗೆ ದೂರು ಕೊಟ್ಟತ್ತು. ಹಾಂಗೆ ದೇವತೆಗೊ ಎಲ್ಲ ಸೇರಿಂಡು ಶಿವನ ಮರಳಿ ಕರ್ತವ್ಯಕ್ಕೆ ಬೋಧಿಸುಲೆ ಬೇಕಾಗಿ ಉಪಾಯ ಮಾಡಿ ಮನ್ಮಥನ ಕೂಡಿಂಡು ಶಿವನ ಮನ ಚಂಚಲ ಆವ್ತ ಹಾಂಗೆ ಮಾಡಿದವು.
ಬ್ರಾಹ್ಮರು “ಪಾರ್ವತೀ ಪತೇ ಹರ ಹರ” ಹೇದವು.
~*~*~
ಇಂದು ಒಂದು ಗುಂಪು ಇನ್ನು ಈ ಸಮಸ್ಯೆಗೋ ಎಲ್ಲ ಇನ್ನು ಬಗೆಹರಿವಲಿಲ್ಲೇ… ಶಿವನೆ ಸಂಪೂರ್ಣ ಲಯ ಮಾಡಿ ಬಿಡು ಹೇಳಿ ಪ್ರಾರ್ಥಿಸುತ್ತ ಇದ್ದು… ಇನ್ನೊಂದು ಗುಂಪು ಎಲ್ಲೋರಿಂಗೂ ಸನ್ಮಾರ್ಗವ ತೋರುಸಿ ಪಾಲನೆ ಮಾಡು ಹೇಳಿ ವಿಷ್ಣುವ ಪ್ರಾರ್ಥಿಸುತ್ತಾ ಇದ್ದು… ನಾವು ನಮಗೆ ಸದ್ಬುದ್ದಿಯ ಕೊಟ್ಟು ‘ಯಥಾ ಯೋಗ್ಯಂ ತಥಾ ಕುರು’ ಹೇಳಿ ಆ ಅಮ್ಮನ/ಭಗವಂತನ ಪ್ರಾರ್ಥಿಸುವ ಅಲ್ಲದ…
ಪ್ರತಿ ಯುಗಾಂತ್ಯದ ಸಮಯಲ್ಲೂ ಅಧರ್ಮ ತಾನ್ದವವಾಡುದು… ಮತ್ತೆ ಧರ್ಮ ರಕ್ಷಣೆಗೋಸ್ಕರ ಒಂದು ಯುದ್ಧ ನಡವದು… ಧರ್ಮಕ್ಕೆ ಜಯ ಅಪ್ಪದು… ಇದೆಲ್ಲ ಗೊಂತಿಪ್ಪ ನಾವು ಧರ್ಮ ಮಾರ್ಗದತ್ತ ಹೆಜ್ಜೆ ಹಾಕುವ…
ದೊಡ್ದಮಾವಾ,ಗಮ್ಮತ್ತಿದ್ದು ಸ೦ಗತಿ.
{ಹೆಂಡತಿ ಹತ್ತರೆ ಕೋಪುಸಿಂಡು ತಪಸ್ಸಿಂಗೆ ಕೂದ°}ಬೇರೆ೦ತ ಮಾಡುಲೆಡಿಗು ಅವ೦ಗೆ ?ತಪಸ್ಸು ಹೇಳಿ ಹೇಳಿಗೊ೦ಡತ್ತು ಮತ್ತೆ.
ಅ೦ತೂ ಈಶ್ವರ ದೇವರು ಡ್ಯೂಟಿ ಮಾಡದ್ದೆ ಲೋಕಲ್ಲಿ ಸ೦ತೆ ಆತದಾ..
ಶಿವ ತಪಸ್ಸಿಂಗೆ ಕೂದು ತನ್ನ ಕಾರ್ಯವ ಮಾಡದ್ದಿಪ್ಪಗ ಲೋಕವೇ ಅಲ್ಲೋಲ ಕಲ್ಲೋಲ ಆತು.
ಸೃಷ್ಟಿ, ಸ್ಥಿತಿ, ಲಯ ಒಂದಕ್ಕೊಂದು ಪೂರಕವಾಗಿದ್ದರೇ ಲೋಕಲ್ಲಿ ವ್ಯೆವಹಾರ ನೆಡಗಷ್ಟೆ.
ಕತೆ ಚೊಕ್ಕ ಆಯಿದು.
ಒಳ್ಳೆ ಕಥೆ ಮಾವ. ಇಂಥ ಅಮೂಲ್ಯ ಕಥೆಗೊ ಬೈಲಿಂಗೆ ಬತ್ತಾ ಇರಳಿ.
ಮರಣದ ಮಹತ್ತ್ವ ತಿಳಿಸುವ ಕತೆ…ಎಲ್ಲದಕ್ಕೂ ಒಂದು ಅಂತ್ಯ ಬೇಕೇ ಬೇಕು.
ಕತೆ ಪಷ್ಟಾಯಿದು.
ದೊಡ್ಡಮಾವನ ಬತ್ತಳಿಂಗೆಲಿ ಇನ್ನೂ ಎಷ್ಟೆಷ್ಟು ಇದ್ದೊ ಹೀಂಗಿಪ್ಪದು. ಒಂದೊಂದೇ ಬರಳಿ ಬೈಲಿನವಕ್ಕೆ ಕೇಳುಲೆ.
ಶಿವ ಮಾಡಿದ ಸ್ಟ್ರೈಕಿಂದಾಗಿ ಇಷ್ಟೆಲ್ಲ ಅನಾಹುತ ಆತಾನೆ. ನವಗೆ ಎಲ್ಲೋರು ಬೇಕಪ್ಪ. ಹುಟ್ಟುಸುವವನೂ ಬೇಕು, ಕಾಪಾಡುವವನೂ ಬೇಕು, ನಾಶ ಮಾಡ್ತವನೂ ಬೇಕು. ಎಲ್ಲವುದೆ ಒಂದು ಪಾಕಕ್ಕೆ ಹೋದರೆ, ಎಲ್ಲವೂ ಸರಿ ಅಕ್ಕು. ದೊಡ್ಡಭಾವನ ಕಥೆ ಶೋಕು ಇತ್ತು.
“ಏನು ಧನ್ಯವೋ ಈ ಬೈಲು… ಎಂತ ಮಾನ್ಯವೋ….” ಇಂದು ಅಜ್ಜನ ಕಾಲಿಲ್ಲಿ ಕೂದುಗೊಂಡು ಕಥೆ ಕೇಳುವ ಭಾಗ್ಯ ಎಷ್ಟು ಜೆನ ಪುಳ್ಳಿಯಕ್ಕಗೆ ಇದ್ದೋ ಗೊಂತಿಲ್ಲೇ… ಒಂದರಿ ಅಜ್ಜನ ಕಾಲಿಲ್ಲಿ ಕೂದುಗೊಂಡು ಕಥೆ ಕೇಳಿದ ಹಾಂಗೆ ಆತು ಎಂಗೊಗೆಲ್ಲ… ಧನ್ಯವಾದ ದೊಡ್ದಮಾವ…
ಮಾವಾ ನಾವುದೇ ಚೆನ್ನೈ ಭಾವ ನೊಟ್ಟಿಂಗೆ “ಪಾರ್ವತೀ ಪತೇ ಹರ ಹರ” ಹೇಳಿತ್ತು ..
ದೊಡ್ಡಮಾವನ ಶುದ್ದಿ ಓದಿಕ್ಕಿ ನಾವುದೇ ಅಕೇರಿಗೆ “ಪಾರ್ವತೀ ಪತೇ ಹರ ಹರ” ಹೇಳಿತ್ತು. ‘ಜಾಂಬವ° ಸಣ್ಣ ಇಪ್ಪಗ ಅವಂಗೆ ಅವನ ಅಜ್ಜ° ಹೇದ್ಸು – ನವಗಿಂದು ದೊಡ್ಡಮಾವ° ಹೇದ್ದು’. ಲಾಯಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’