Oppanna.com

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು”

ಬರದೋರು :   ತೆಕ್ಕುಂಜ ಕುಮಾರ ಮಾವ°    on   18/02/2012    14 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಶ್ರೀ ಕೃಷ್ಣನ ಕತೆ ಗೊಂತಿಲ್ಲದ್ದವು ಆರಿದ್ದವು?, ಅದು ಲೋಕಪ್ರಿಯ! ಅವನ ಜನ್ಮ,ಬಾಲ್ಯ,ಯೌವನದ ಕತೆಗೋ,ಅವನ ಹೋರಾಟ,ರಾಜಕೀಯ ಕೌಶಲ – ತಂತ್ರ, ದೂರದೃಷ್ಟಿ ಯೇಲ್ಲೋರಿಂಗೂ ಚಿರಪರಿಚಿತ.  ಕನ್ನಡ ಸಾಹಿತ್ಯಲ್ಲಿ ಕೃಷ್ಣನ ಬದುಕಿನ ಚಿತ್ರಣಕ್ಕೆ ಸಿಕ್ಕಿದಷ್ಟು ಪ್ರಾಮುಖ್ಯತೆ, ಅವನ ಅಕೇರಿಯಾಣ  ಗಳಿಗೆಗೆ ಸಿಕ್ಕಿದ್ದಿಲೆ ಹೇಳ್ತವು, ತಿಳುದವು. ಜೀವನವಿಡೀ ಅವ ನಡಶಿದ ಹೋರಾಟಂಗಳ  ನೋಡಿದ ನವಗೆ ಅವನ ಅಕೇರಿಯಾಣ ದಿನಂಗೊ ಹೇಂಗಿತ್ತಿದ್ದು ಹೇಳ್ತ ಕುತೂಹಲಕ್ಕೆ  ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಬರದ  ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು” ಪುಸ್ತಕಲ್ಲಿ  ಸಾಕಷ್ಟು ವಿವರಂಗಳ ಕೊಟ್ಟಿದವು. ಲೇಖಕನ ಒಂದು ಮಾತಿನ ಇಲ್ಲಿ ಪ್ರಸ್ತಾಪ ಮಾಡುದು ಸೂಕ್ತ ಹೇಳಿ ಎನಗೆ ಅನುಸುತ್ತು – ಶ್ರೀ ಕೃಷ್ಣಾವತಾರದ ಸಮಾಪ್ತಿಗೆ ಸಂಬಂಧಪಟ್ಟ ಕತೆ, ಘಟನಾವಳಿ ಭಾಗವತಾದಿಗಳಲ್ಲಿ ಓದಬಾರದ, ಕೇಳಬಾರದ, ಬರೆಯಬಾರದ, ಹೇಳಬಾರದ ಭಾಗವೆಂದು ಹಿರಿಯರ ನಂಬಿಕೆಯುಂಟು! ಜೀವನದಲ್ಲಿ ಶ್ರದ್ದೆ ಉಳಿಯಬೇಕಾದವರು, ಮಹಾಭಾರತವನ್ನು ಧರ್ಮಜನ ಪಟ್ಟಾಭಿಷೆಕದವರೆಗೂ, ಭಾಗವತವನ್ನು ಶ್ರೀ ಕೃಷ್ಣ –ರುಕ್ಮಿಣಿ ವಿವಾಹದ ತನಕ ಮಾತ್ರ ಓದುವುದುಂಟು. ಆದರೆ, ಈ ‘ಬರೆಯಬಾರದೆಂಬ’ ಹಣೆಪಟ್ಟಿ ಹೊತ್ತ ಕೃಷ್ಣ ಕಥಾಭಾಗವೂ ಉಳಿದವುಗಳಷ್ಟೆ ವ್ಯಾಸರ ಪ್ರಾಮಾಣಿಕ ರಚಿತ ! ಅದರಲ್ಲೂ ಲೋಕಕ್ಕೆ ಬೋಧೆ ಇದೆ. ಪುಸ್ತಕದ ಮುನ್ನುಡಿಲಿ ಶ್ರೀ ಎನ್ಕೆ ಇದರ ಒಂದು ಮಹತ್ಕೃತಿ ಹೇಳಿ ಹೊಗಳಿದ್ದವು – ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು” ಎಂಬ ಇಪ್ಪತ್ತು ಲೇಖಾಂಕ ಮಾಲಿಕೆಯಲ್ಲಿ ಭಾಗವತದ ಕೃಷ್ಣ ಕತೆಯನ್ನು ಶ್ರೀ ಕೃಷ್ಣ ಮಹಾತ್ಮೆಯನ್ನೂ, ಶ್ರೀ ಕೃಷ್ಣನ ಗೀತಾಬೋಧೆಯ ಸಾರಸರ್ವಸ್ವವನ್ನೂ ಹೊಸತೊಂದು ತಂತ್ರದ ಮೂಲಕ ನಮ್ಮ ಕಣ್ಮುಂದೆ ಹಿಡಿದು ನಾಟಕ ಮತ್ತೊಮ್ಮೆ ನಡೆಯುವಂತೆ ನುಡಿಮುತ್ತುಗಳಲ್ಲಿ ಪಡಿಮೂಡಿಸಿದ್ದಾರೆ. ಕನ್ನಡ ಸಾಹಿತ್ಯದ ಒಂದು ದೊಡ್ಡ ಕೊರತೆಯನ್ನು ನೀಗಿದ್ದಾರೆ.

ಪುಸ್ತಕದ ಮೋರೆಪುಟ

ಮಹಾಭಾರತ ಯುದ್ಧ ಮುಗುದು ಮೂವತ್ತಾರು ವರ್ಷ ಕಳುದ ನಂತರಂದ ಕತೆಯ ಪ್ರಸ್ಥಾವನೆ ಶುರುವಾವುತ್ತು. ಹಸ್ತಿನಾಪುರಲ್ಲಿ ಧರ್ಮರಾಯ ನೆಮ್ಮದಿಲಿ ಆಡಳಿತೆ ನಡಶಿಗೊಂಡಿದ್ದ, ಋಷಿಗೊ ನಿರ್ವಿಘ್ನವಾಗಿ ತಪಾಚರಣೆ ಮಾಡಿಗೊಂಡಿದ್ದವು.ಆದರೆ ಭಗವಾನ್ ಕೃಷ್ಣಂಗೆ ಮಾಂತ್ರ ನೆಮ್ಮದಿ ಇಲ್ಲೆ.ಕಾರಣ ಅವತಾರಿ ಶ್ರೀ ಕೃಷ್ಣನ  ಚಕ್ಷುವಿಂಗೆ ಘೋರ ಭವಿಷ್ಯತ್ತಿನ ಸೂಚನೆಗೊ ಕಾಣುತ್ತು. ಬಾನಿಲಿ ಉಲ್ಕಾಪಾತಂಗೊ, ಮೂವತ್ತಾರು ವರ್ಷಂಗಳ  ಹಿಂದೆ ಕುರುಕ್ಷೆತ್ರಲ್ಲಿ ಕಂಡ ಗ್ರಹಗತಿ – ತ್ರಯೋದಶಿ, ಚತುರ್ದಶಿ, ಅಮಾವಸ್ಯೆಗೊ ಹೆಚ್ಚು ಕಮ್ಮಿ ಒಂದೇ ದಿನ ಗೋಚರ ಅಪ್ಪದರ ಮುಂದೆಯೇ ತಿಳುದು ರುಕ್ಮಿಣಿಗೆ ಮುಂದೆ ಅಪ್ಪ ಅನರ್ಥಂಗಳ ಮುನ್ಸೂಚನೆ ಕೊಡ್ತ. ಪರಮ ಭಕ್ತರುಗೊ ಅಕ್ರೂರ, ಉದ್ಧವರಿಂಗೆ ಗೀತೆಯೆ ಸಾರವ ಮತ್ತೆ ಉಪದೇಶಿಸುತ್ತ. ವಸುದೇವ ದೇವಕಿಯರ ಕಂಡು – ವೃದ್ಧಾಪ್ಯಲ್ಲಿ ಅಪ್ಪ-ಅಬ್ಬೆಯ ನೋಡಿಗೊಂಬದು ಮಕ್ಕಳ ಕರ್ತವ್ಯವೇ. ಆದರೆ ಒಟ್ಟಿಂಗೆ ಇನ್ನೊಂದು ಕರ್ತವ್ಯವೂ ಇದ್ದು. ಅದರ ಮಾಡ್ಲೆ ಮಕ್ಕೊಗೆ ಭಾಗ್ಯ ಬೇಕು , ಮಾಡ್ಸಿಗೊಂಬಲೆ ಹೆರಿಯೊರಿಂಗೂ ಭಾಗ್ಯ ಬೇಕು.  ಮುನಿಶಾಪ  ಸುಳ್ಳಾಗ ಸಂಶಯ ಬೇಡ.  ಆದರೆ, ಎನಗೆ ಎನ್ನ ಕರ್ತವ್ಯ ಮಾಡ್ಲೂ ಎಡಿಯದ್ದೆ ಬಕ್ಕು ಹೇಳುಲೆ ಆನು ಬಂದದು ಹೇಳಿ ಕೃಷ್ಣ  ದುಃಖ ಪಟ್ಟುಗೊಳ್ತ.     

ಮುನಿಶಾಪ – ಯಾದವರ ವಿನಾಶಕ್ಕೆ ಮೂಲ ಕಾರಣ. ಮಹಾಭಾರತ ಯುದ್ಧದ ನಂತರ ಬದುಕಿದ ಯಾದವರಲ್ಲಿ ಕೃತವರ್ಮ ಸಾತ್ಯಕಿಗೊಕ್ಕೆ ಅಹಂಕಾರ ಹೆಚ್ಚಾಗಿ ಒಬ್ಬಕ್ಕೊಬ್ಬ ಪ್ರತಿಸ್ಪರ್ಧಿಗಳ ಹಾಂಗೆ ಬೆಳೆತ್ತವು. ಸ್ಯಮಂತಕ ಮಣಿಯ ಅಕ್ರೂರನ ಕೈಗೆ ಕೊಟ್ಟ ಮತ್ತೆ ದ್ವಾರಕೆಲಿ ಧನ ಕನಕಾದಿಗೊ ಅಯಾಚಿತವಾಗಿ ವೃದ್ಧಿ ಆವುತ್ತು. ಯಾದವರುಗೊ ಮದ್ಯಪಾನಾಸಕ್ತರಾಗಿ  ಜೂಜು,   ವ್ಯಭಿಚಾರಾದಿಗಳಲ್ಲಿ  ಕಾಲ ಕಳೆತ್ತವು.  ಕೃಷ್ಣನ ಮಕ್ಕೊ, ಪುಳ್ಯಕ್ಕಳೂ ಅದೇ ದಾರಿ ಹಿಡಿತ್ತವು. ಸ್ವೈರಾಚಾರ, ಗೇಲಿ, ಸ್ವಜನ ಕಲಹ ದಿನನಿತ್ಯ ನಡಕ್ಕೊಂದು ಬತ್ತು. ಜಾಂಬವತಿಲಿ ಹುಟ್ಟಿದ ಕೃಷ್ಣನ ಮಗ ಸಾಂಬ , ಅವನ ಸುತ್ತ ಚಾರುದೆವ, ಚಾರುಗುಪ್ತಾದಿಗೊ, ಭಾನುಮಂತ, ಚಂದ್ರಭಾನು, ಸುಬಾಹು, ಸೋಮಕ, ಪಾವನ, ವಹ್ನಿ ಮುಂತಾಗಿ ಕೃಷ್ನನ ಮಕ್ಕೊ ಯಾದವ ಜವನಿಗರೊಟ್ಟಿಂಗೆ ಸೇರಿ ಋಷಿ ಪೀಡನೆ ಶುರು ಮಾಡ್ತವು. ಹೀಂಗಿರ್ತ ಸಮಯಲ್ಲಿ ದೂರ್ವಾಸ ಮಹರ್ಷಿಯ ಎದುರು ಸಾಂಬನ ಗರ್ಭಿಣಿ ಸ್ತ್ರೀಯ ವೇಷಲ್ಲಿ ನಿಲ್ಲುಸಿ ಹುಟ್ಟುತ್ತ ಮಗು ಕೂಸೋ -ಮಾಣಿಯೋ ಹೇಳೆಕ್ಕು ಹೇದು ಪೀಡಿಸಿಯಪ್ಪಗ, ಸುಮ್ಮನೆ ನೆಗೆ ಮಾಡಿ ಕೂದ್ದದಕ್ಕೆ ಋಷಿಯ ಕೌಪೀನಕ್ಕೆ ಕೈ ಹಾಕಿ ಗೇಲಿ ಮಾಡ್ತವು. ತಡವಲೆಡಿಯದ್ದ ಕೋಪಲ್ಲಿ ದೂರ್ವಾಸ ಮಹರ್ಷಿ ಶಾಪ ಕೊಡ್ತವು – ಇಡೀ ಯಾದವ ಕುಲವನ್ನೇ ನಾಶ ಮಾಡ್ತ ಕಬ್ಬಿಣದ ಒನಕೆ ಗರ್ಭಿಣಿಯ ಹೊಟ್ಟೆಲಿ ಹುಟ್ಟಲಿ ! ಒನಕೆಯ ನಿಧಾನಕ್ಕೆ ತಳದು ನಿರ್ನಾಮ ಮಾಡಿದರೆ ಮತ್ತೆ ಶಾಪ ತಟ್ಟ ಹೇಳ್ತ ನಂಬಿಕೆಲಿ ಮಹಾರಾಜ ಉಗ್ರಸೇನನ ಆಜ್ಞಾನುಸಾರ ಅರಮನೆ ಸೇವಕಂಗೊ, ಹೀಂಗೆ ಹುಟ್ಟಿದ ಕಬ್ಬಿಣದ ಒನಕೆಯ ಪಿಂಡಾರಕದ ಸಮುದ್ರ ಕರೆಲಿ ತಳದು ತಳದು ಕರಗುಸುತ್ತವು. ಅದೇ ಜಾಗೆಲಿ,ಸಮುದ್ರ ತಟಲ್ಲಿ ದಟ್ಟವಾಗಿ “ಜೊಂಡು ಹುಲ್ಲು” ಬೆಳೆತ್ತು.

ಅಪಶಕುನ, ಉತ್ಪಾತಂಗಳ ಕಂಡು ವಿನಾಶ ಸಮಯ ಬಂತು ಹೇಳಿಗೊಂಡು ಯಾದವರ ಪಿಂಡಾರಕದ ಪ್ರಭಾಸಕ್ಷೇತ್ರಕ್ಕೆ ಯಾತ್ರೆಗೆ ಹೋಪಲೆ ಕೃಷ್ಣ ಸಲಹೆ ಕೊಡ್ತ. ಯಾತ್ರಾದಾನವಾಗಿ  ಬ್ರಾಮ್ಮರಿಂಗೆ ಧನ ಕನಕ ಗೋದಾನಾದಿಗಳ ಕೊಡ್ತ. ಬ್ರಾಮ್ಮರು ದಾನ ಸಿಕ್ಕಿದ ಹಳ್ಳಿಗೊಕ್ಕೆ ವಲಸೆ ಹೋವುತ್ತವು. ಯಾತ್ರೆಗೆ ಹೆರಟ ಯಾದವಂಗೊ ಬೇಗ ವಾಪಾಸಾಗವು ಹೇಳಿಗೊಂಡು ಬಾಕಿ ವ್ಯಾಪಾರಿ ಜೆನಂಗಳೂ ಬೇರೆ ಬೇರೆ ಹಳ್ಳಿಗೆ ಹೋವುತ್ತವು. ನಿಘಂಟಾದ ದಿನಲ್ಲಿ ಯಾದವರೆಲ್ಲ ಪ್ರಭಾತಕ್ಷೇತ್ರಕ್ಕೆ ಹೋವುತ್ತವು. ಆತ್ಮ ಸಖ ಅರ್ಜುನಂಗೆ ಹೇಳಿ ಕಳುಶಿ, ತನ್ನ ರಥವ ಅಗ್ನಿಗೆ ಅರ್ಪಿಸಿ ಪಿಂಡಾರಕಕ್ಕೆ ಕೃಷ್ಣ ‘ಮಹಾಪ್ರಯಾಣ’ಹೆರಡುತ್ತ. ಎಲ್ಲ ರಾಣಿಯರ ವಸುದೇವ – ದೇವಕಿಯರೊಟ್ಟಿಂಗೆ ಅರಮನೆಲಿ ಬಿಟ್ಟು ದ್ವಾರಕೆಂದ ಹೆರಡುತ್ತ. ಯಾದವರುಗೊ ಅಲ್ಲಿ ಸಮುದ್ರ ತಟಲ್ಲಿ ಮದ್ಯ ಮದಿರಾದಿಗಳ ಸೇವಿಸಿ ಕಾಮಾತುರರಾವುತ್ತವು. ಸ್ವೇಚ್ಛಾಚಾರಲ್ಲಿ  ಲೋಕದ ಸೊಯ ಇಲ್ಲದ್ದೆ, ಒಬ್ಬಕ್ಕೊಬ್ಬನ  ಅಪಹಾಸ್ಯ ಮಾಡಿಗೊಂಡು, ಅವರವರ ಸ್ಥಿಮಿತವ ಕಳಕ್ಕೊಂಡು  ಬಡ್ಕೊಂಬಲೆ ಶುರು ಮಾಡುತ್ತವು. ಸಮುದ್ರ ಕರೆಲಿ ಇತ್ತಿದ”ಜೊಂಡು ಹುಲ್ಲ”ನ್ನೆ ಪೊರ್ಪಿ ಆಯುಧವಾಗಿ  ಉಪಯೊಗಿಸಿ ಕಾದಾಡಿ ಸಾಯ್ತವು. ಮಾರಣಹೋಮವೇ ನಡೆತ್ತು  ಅಲ್ಲಿ. ಈ ಮೃತ್ಯುತಾಂಡವಂದ ತಪ್ಪುಸಿ ಬದುಕಿ ಒಳಿವ ಆಶೆ ಆರಿಂಗೂ ಇತ್ತಿಲೆ – ಆರೊಬ್ಬನೂ ಉಳಿತ್ತವಿಲ್ಲೆ. ಎಲ್ಲೋರು  ಮುನಿಶಾಪದ ದಳ್ಳುರಿಲಿ ಬಿದ್ದು ಭಸ್ಮ ಆವುತ್ತವು !

ಕೃಷ್ಣ  ಇದನ್ನೆಲ್ಲ ನೋಡಿ  ಹತಾಶನಾಗಿ,  ಬಲರಾಮನ ಹೊಡುಕಿಗೊಂಡು  ಬತ್ತ. ಸಮುದ್ರ ಕರೆಲಿ ಯೋಗಾರೂಢನಾಗಿ ಕೂದೊಂಡು ಇತ್ತಿದ್ದ ಬಲರಾಮನ ಬಾಯಿಂದ ದೊಡ್ಡದೊಂದು ಬೆಳಿ ಸರ್ಪ ನಿಧಾನಕ್ಕೆ ಹೆರ ಬಪ್ಪ ದೃಶ್ಯವ ಕೃಷ್ಣ ಕಾಣುತ್ತ°. ಅಣ್ಣನ ಪ್ರಾಣಪಕ್ಷಿ ಹೋದ ಮೇಲೆ ದುಃಖಿತನಾಗಿ ಅಲ್ಲಿಂದ ಮುಂದೆ ಬಂದು ಒಂದು ಮರದ ಕೆಳ ಕೂದ  ಭಗವಂತನ ನೀಲ ಕಾಲ್ಬೆರಳು ಒಬ್ಬ ವ್ಯಾಧಂಗೆ ನವಿಲಿನ ತಲೆಯ ಹಾಂಗೆ ಕಂಡು ಬಾಣ ಬಿಟ್ಟಪ್ಪಗ, ಅದು ಪ್ರಾಣಾಂತಿಕವಾಗಿ ಪರಿಣಮಿಸುತ್ತು. ಅದರ ಬೇನೆಲಿ “ಅಮ್ಮಾ” ಹೇಳಿ ಅಬ್ಬೆಕ್ಕೊ ದೇವಕಿ, ಯಶೋದೆಯರ  ನೆಂಪು ಮಾಡಿಗೊಳ್ತ. ಅವಸಾನ ಕಾಲಕ್ಕೆ ಗಾಂಧಾರಿ , ಕರ್ಣರ ನೆಂಪು ಬತ್ತು. ಅವನ ಮೂರನೆ ಅಬ್ಬೆ(!)- ಪೂತನಿಯನ್ನೂ ನೆಂಪು ಮಾಡಿಗೊಳ್ತ ( ಬಾಲಕೃಷ್ನಂಗೆ ಹಾಲೂಡುಸುವ ಸಮಯಕ್ಕೆ ಪೂತನಿಗೆ ತನ್ನದೇ ಎದೆ ಹಾಲು ಕುಡುದು ಸತ್ತುಹೋದ ಮಗನ ನೆಂಪಾಗಿ ಹಾಲು ಜಿನುಗಿತ್ತಡ. ಅದರ ಒಂದೊಂದು ಹನಿಲಿಯೂ ವಾತ್ಸಲ್ಯದ  ಬಿಂದುವ ಹರಿಸಿತ್ತಡ. ಈ ಸಂದರ್ಭವ ಲೇಖಕ  ಕೃಷ್ಣ -ಪೂತನಿಯರ ಸಂವಾದ ರೂಪಲ್ಲಿ ತುಂಬ ಹೃದಯಂಗಮವಾಗಿ  ಬರದ್ದವು. ಪೂತನಿಯ ವೆಗ್ತಿತ್ವಕ್ಕೊಂದು ಹೊಸ ರೂಪ ಕೊಟ್ಟು ಓದುಗನ ಕಣ್ಮುಂದೆ ಅನಾವರಣ ಮಾಡಿದ್ದವು). ತಂಗೆ ದ್ರೌಪದಿಯ ನೆನಪಿಸಿಗೊಂಡು “ತಂಗೆ ಕೃಷ್ಣೆ ..ನೀನು ಎನ್ನ ಮೇಲೆ ಮಡಗಿದ ಪ್ರೀತಿ, ಭಕ್ತಿಗೆ ಸಮನಾಗಿ,ಆನು ನಿನ್ನ ಸರಿಯಾಗಿ  ನೋಡಿಗೊಂಡಿದಿಲೆ ” ಹೇಳಿ ದುಃಖಿಸಿಗೊಂಡು ಇರುಳು ಕಳೆತ್ತ. ಸೂರ್ಯೋದಯದ ಹೊತ್ತಿಂಗೆ ಅವತಾರಿಯ ದೇಹದ  ಒಂದೊಂದೇ ವ್ಯವಹಾರ ಸ್ತಬ್ಧ ಅಪ್ಪಲೆ ಶುರುವಾವುತ್ತು. ಅರ್ಜುನ ನೀನು ಬರಲಿಲ್ಲ ! ನಾನು ಕೊನೆಯದಾಗಿ ನಿನ್ನನ್ನು ಕಾಣಬಯಸಿದ್ದೆ! “ಇಷ್ಟೋಸಿ ಮೇ”… ಆದವನೇ ? ಏಕೋ ಬರಲಿಲ್ಲ!” ಅರ್ಜುನ ಇನ್ನೂ ಬಯಿಂದನಿಲ್ಲೆ.ಕೃಷ್ಣ ಮತ್ತೊಂದರಿ ತಂಗೆಯ ನೆನಸಿಗೊಂಡು ದ್ರೌಪದಿ ! ಕೃಷ್ಣೆ ! ಪುಣ್ಯವತಿ ! ಮಹಾಭಾಗ್ಯಳೇ ! ನನ್ನನ್ನು ಕ್ಷಮಿಸು !” ಹೇಳ್ತಾ  ಪ್ರಾಣ ಬಿಡ್ತ.

ಕೃಷ್ಣನ ಅಂತ್ಯವ ಲೇಖಕರು ವರ್ಣಿಸಿದ ರೀತಿ ಅತ್ಯಮೋಘ! “ಒಂದು ಕ್ಷಣ ಸೂರ್ಯ ಬಹು ಪ್ರಕಾಶಮಾನವಾಗಿ ಮಿಂಚಿ ಮೇಲೆದ್ದ. ದೇವತೆಗಳೆಲ್ಲ ಪುಷ್ಪವೃಷ್ಟಿಗೈದರು! ನೆಲಕ್ಕೊರಗಿದ ಆ ಸುಂದರ ಕೃಷ್ಣಮೂರ್ತಿಯ ಪಾದಗಳಿಂದ ಮುಡಿಯವರೆಗೆ ನಾನಾವರ್ಣದ ಹೂಗಳು ಶರೀರದ ಮೇಲೆ ಬೀಳುತ್ತಾ ಅದೊಂದು ಪುಷ್ಪಶಯನವೆನಿಸಿತು.ಚತುರ್ಭುಜನೂ,ನೀಲ ಮೇಘಶ್ಯಾಮನೂ, ಪೀತಂಬರಧಾರಿಯೂ, ಶಂಖ ಚಕ್ರಾದಿ ಆಯುಧಸಮೇತನೂ,ಕೋಟಿ ಕೋಟಿ ಸೂರ್ಯಪ್ರಕಾಶನೂ ಆದ ದಿವ್ಯಪುರುಷನೊಬ್ಬ ಶ್ರೀ ಕೃಷ್ಣ ವಿಗ್ರಹದಿಂದ ಮೇಲೇಳುತ್ತಾ ಅಭಯಹಸ್ತ ಚಾಚುತ್ತಾ ಆಗಸದಲ್ಲಿ ಅಂತರ್ಧಾನನಾದ! ವಿಮಾನಗಳಲ್ಲಿ ದೇವತೆಗಳೂ,ಗಂಧರ್ವ ಅಪ್ಸರೆಯರೂ, ಮಹರ್ಷಿಗಳೂ ಹಿಂಬಾಲಿಸಿದರು” ನಿಜವಾಗಿಯೂ ಕರುಳುಮಿಡಿವ ಅಂತ್ಯ! ಶ್ರೀ ಕೃಷ್ಣನ ಮರಣಾನಂತರ ಅಲ್ಲಿಗೆ ಬಂದ ಅರ್ಜುನನ ಮನಸ್ಥಿತಿ,ದೇಹಸ್ಥಿತಿ ಅವನ ಸೋಲ್ಸುತ್ತು.ಈ ಪ್ರಕರಣ ಈ ಪುಸ್ತಕ ಮಾಲಿಕೆಯ ಮಾಣಿಕ್ಯ !

ಯಾದವೀ ಕಲಹದ ರೀತಿಯ ದುರ್ಘಟನೆ ಈಗಾಣ ರಾಜಕೀಯ ,ಸಾಮಾಜಿಕ ಕ್ಷೇತ್ರಲ್ಲಿ  ಪುನರಾವರ್ತನೆ ಆವುತ್ತಾ ಇಪ್ಪದು ವಿಷಾದನೀಯ. ಕುಡಿತ,ಸೇಡು,ವ್ಯಭಿಚಾರ,ಜೂಜು,ದ್ವೇಷ ಇವು ಅಂದು ಯಾದವರ ಬಲಿ ತೆಕ್ಕೊಂಡತ್ತು, ಅದುವೇ ಈಗ ನಮ್ಮ ನಾಯಕರುಗಳ,ನಾನಾ ಪಕ್ಷದವರ  ಬಲಿ ತೆಕ್ಕೊಳ್ತಾ ಇದ್ದು. ದೇವರೇ ಪ್ರತ್ಯಕ್ಷ ಆದರೂ ಇಂಥಾ ಜನಾಂಗವ ಒಳುಶುವ ಬದಲು ಅಳಿಶಿ ಮುಗುಶಿಯೇ ಹೋಕ್ಕು ಹೇಳ್ತದೇ “ಶ್ರೀ ಕೃಷ್ಣಾವತಾರದ  ಕೊನೆಯ ಗಳಿಗೆ “ಯ ಸಂದೇಶ !

~*~*~

 

14 thoughts on “ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು”

  1. ನನ್ನಗೆ ನಮ್ಮ ಹಿಂದೂ ಧಮದ ವಿಷ್ಣು ದೇವರ ಮಹತ್ವ ಕಥೆಗಳು ತಿಳಿದುಕೊಳ್ಳಬೇಕು ಯಾವ ಪುಸ್ತಕ ಓದಬೇಕು ಆನ್ ಲೈನ್ ನಲ್ಲಿ ಸಿಕ್ಕುತ ಸರ್

  2. ಒಪ್ಪ ಮಾಹಿತಿ. ಧನ್ಯವಾದಂಗೊ ಮಾವ.

    1. ಪ್ರೀತಿಯ ರಮೇಶಣ್ಣನಿಗೆ ನಮಸ್ಕಾರ,
      ಇದು ಬ್ರಾಹ್ಮಣರಿಗೆ ಮಾತ್ರ ಅಲ್ಲ, “ಹವ್ಯಕ ಭಾಷೆ” ಮಾತನಾಡಬಲ್ಲ ಎಲ್ಲ ಭಾರತೀಯರಿಗೆ.

      ಭಾರತೀಯತೆಯೇ ನಮ್ಮ ಹಿರಿಮೆ,
      ಭಾರತೀಯತೆಯೇ ನಮ್ಮ ಧರ್ಮ,
      ಭಾರತೀಯತೆಯೇ ನಮ್ಮ ಆದರ್ಶ.
      ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಬೇರೆಬೇರೆ ಭಾಷೆಗಳಲ್ಲಿ, ಬೇರೆಬೇರೆ ಉಪ ಭಾಷೆಗಳಲ್ಲಿ ಈ ಭಾರತೀಯತೆ ಪ್ರಕಟಗೊಂಡಿವೆ, ಪ್ರಕಟಗೊಳ್ಳುತ್ತಿದೆ.
      ಕನ್ನಡ ನಾಡಭಾಷೆಯಾಗಿ, ಸಂಸ್ಕೃತ ದೇವಭಾಷೆಯಾಗಿ “ಹವ್ಯಕ ಭಾಷೆ / ಹವಿಗನ್ನಡ” ಮಾತೃಭಾಷೆಯಾಗಿರುವ ಭಾರತೀಯ ಜನರಿಗೆ ಈ ವೆಬ್-ಸೈಟ್ ವೇದಿಕೆಯಾಗಿದೆ.

      ನಿಮಗೆ ಆ ಭಾಷೆ ಬರುವುದಾದಲ್ಲಿ ನಿಮಗೂ ಸ್ವಾಗತವೇ.
      ಎಲ್ಲರೂ ಸಾಹಿತ್ಯಾಸಕ್ತರೇ ವಿನಃ, ಯಾವ ಜಾತಿ, ಯಾವ ಪಂಗಡದವರು – ಎಂಬುದು ಅಪ್ರಸ್ತುತ.

      ದಯವಿಟ್ಟು ಇಂತಹ ಕಮೆಂಟ್ ಗಳನ್ನು ಈ ವೆಬ್-ಸೈಟಿನಲ್ಲಿ ಅಳವಡಿಸಬೇಡಿ.
      ನಾವೆಲ್ಲರೂ ಭಾರತೀಯರು, ಮರೆಯಬೇಡಿ.

  3. ಧನ್ಯವಾದ ಮಾವ. ಚೆ೦ದದ ಪುಸ್ತಕ ಪರಿಚಯ.ವಿವರಣೆಗೊ ಮನಸ್ಸಿ೦ಗೆ ತಟ್ಟಿತ್ತು.ಇಡೀ ಪುಸ್ತಕ ಓದೆಕ್ಕು ಹೇಳಿ ಆಸೆ ಆಯಿದು.

  4. ಅಬ್ಬ ಒಂದೇ ಉಸುಲಿಲಿ ಓದಿದೆ ಮಾವ. ಬರದ್ದು ಲಾಯ್ಕಾಯ್ದು. ಆ ಪುಸ್ತಕವೂ ಅಷ್ಟೇ ಲಾಯ್ಕಿಕ್ಕು. ಮಾಹಿತಿಗೆ ಧನ್ಯವಾದಂಗೊ ಮಾವ.

  5. ಕೃಷ್ಣನ ಕೊನೆಯ ಕ್ಷಣಂಗಳ ಬಗ್ಗೆ ನಾರಾಯಣಾಚಾರ್ಯರ ಮಾತುಗಳ ಕೇಳುವಗ ಮನಸ್ಸಿಂಗೆ ತುಂಬಾ ಬೇಜಾರು ಆವ್ತು. ಕೃಷ್ಣನ ಮರಣಕ್ಕೆ ಒಂದು ಕಾರಣ ಬೇಕಿತ್ತಷ್ಟೆ. ಆನು ಮದಲೇ ಕೇಳಿದ ಕತೆ ಆದರು ಗೊಂತಿಲ್ಲದ್ದ ಸುಮಾರು ವಿಷಯಂಗೊ ಗೊಂತಾತು. ಕೃಷ್ಣಂಗೆ ಅರ್ಜುನನ ಕಡೇಂಗೆ ಕಾಣಲಾಗದ್ದದು, ಪೂತನಿಗೆ ತಾಯಿಯ ಸ್ಥಾನ ಕೊಟ್ಟದು ಎಲ್ಲವುದೆ ಎನಗೆ ಹೊಸತ್ತೇ. ಪುಸ್ತಕದ ಬಗ್ಗೆ ಮಾಹಿತಿ ಒದಗುಸಿಕೊಟ್ಟ ಕುಮಾರಭಾವಂಗೆ ಧನ್ಯವಾದಂಗೊ.

  6. ಈ ಕಥೆ ಓದುವಾಗ ಬೇಜಾರು ಆವುತ್ತು… ಹಾಂಗಾಗಿಯೇ… “ಭಾಗವತಾದಿಗಳಲ್ಲಿ ಓದಬಾರದ, ಕೇಳಬಾರದ, ಬರೆಯಬಾರದ, ಹೇಳಬಾರದ ಭಾಗವೆಂದು ಹಿರಿಯರ ನಂಬಿಕೆಯುಂಟು!” ಹೇಳಿ ಹೇಳಿದ್ದದೋ ಏನೋ…

  7. ಕೃಷ್ಣನ ಅಂತ್ಯವ ಲೇಖಕರು ವರ್ಣಿಸಿದ ರೀತಿ ಅತ್ಯಮೋಘ, ಅದರ ಕುಮಾರ ಮಾವ ಬೈಲಿಂಗೆ ಪ್ರಸ್ತುತ ಪಡಿಸಿದ್ದೂ ಅತ್ಯಮೋಘವೇ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

  8. ಪ್ರೊ. ಎಸ್. ಕೆ. ನಾರಾಯಣಾಚಾರ್ಯರು, ಯಾವುದೇ ಘಟನೆಗಳ ಕಣ್ಣಿಂಗೆ ಕಟ್ಟುವ ಹಾಂಗೆ ಬರವದರಲ್ಲಿ ನಿಸ್ಸೀಮರು. ಅವರ ಪಾಂಡಿತ್ಯಕ್ಕೆ ತಲೆದೂಗಲೇ ಬೇಕು.
    ಅವರ ಈ ಕೃತಿಯ ಇಲ್ಲಿ ಪರಿಚಯಿಸಿದ ಕುಮಾರಣ್ಣಂಗೆ ಧನ್ಯವಾದಂಗೊ.

  9. ಒಪ್ಪ ಮಾಹಿತಿಗೆ ನಮ್ಮ ಒಪ್ಪಂಗೊ……

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×