Oppanna.com

ಬಟ್ಯನ ಮನೆ ಪೂಜೆಗೆ ಜೆನವೇ ಆಯಿದವಿಲ್ಲೇಡ…

ಬರದೋರು :   ಒಪ್ಪಣ್ಣ    on   09/03/2012    21 ಒಪ್ಪಂಗೊ

ಬಂಡಾಡಿ ಅಜ್ಜಿಯ ದೊಡ್ಡಪುಳ್ಳಿಗೆ ಓ ಮನ್ನೆ ಮದುವೆ ಕಳಾತು.
ಹೋಪಲೆ ಎಂತಾರು ವೆವಸ್ತೆ ಇದ್ದೋ ಹೇದು ನೋಟಮಡಗಿದ ನವಗೆ ಅಕೇರಿಗೆ ಗಣೇಶಮಾವನ ಬೈಕ್ಕಿನ ಹಿಂದಾಣ ಸೀಟು ವೆವಸ್ತೆ ಆತು.
ಅಡ್ಕತ್ತಿಮಾರುಮಾವ, ಆಚಕರೆಮಾಣಿ ಎಲ್ಲೋರತ್ರೆ ಮಾತಾಡಿ; ನಾಕೇ ಹೋಳಿಗೆ ಹೊಡದು ಒಪಾಸು ಬಂದೂ ಆತು.
ಬಪ್ಪಗ ಗಣೇಶಮಾವಂಗೆ ಅದೆಲ್ಲಿಗೋ – ಮೂಡಬಿದ್ರೆಗೆ ಹೋಪಲಿದ್ದ ಕಾರಣ ಬೈಲಿನ ಒರೆಂಗೆ ಬಯಿಂದವಿಲ್ಲೆ – ಬೈಲಕರೆ ಮಾರ್ಗದ ಕರೆಲಿ ಬಿಟ್ಟಿಕ್ಕಿ ಅಲ್ಲಿಂದಲೇ ಹೋದವು.
ನಾವು ತರವಾಡು ಮನೆ ಜಾಲಿಲೆ ಆಗಿ ಬತ್ತ ಏರ್ಪಾಡಿಲಿ ನೆಡಕ್ಕೊಂಡು ಹೆರಟತ್ತು.
~

ಭಾವನೆಗ ಇಲ್ಲದ್ದರೂ ಮಾತಾಡೇಕಾರೆ 9ಟೀವಿಲಿ ವಾರ್ತೆ ಓದುತ್ತವೇ ಆಯೆಕ್ಕಟ್ಟೆ; ಆದರೆ ಭಾವನೆ ಇಲ್ಲದ್ದೆ ಒಂನ್ನಿಮಿಶವೂ ಮಾತಾಡ ನಮ್ಮ ಬಟ್ಯ°.
ಮನಸ್ಸಿನ ಒಳಾಣ ಭಾವನೆಗಳ ಹಿಡುದು ಮಡಿಕ್ಕೊಂಬಲೆ ಅರಡಿಯ ಅದಕ್ಕೆ;
ಕೊಶಿ ಆದರೆ ಬೊಬ್ಬೆ ಹೊಡಾದು ಮಾತಾಡುಗು, ಬೆಶಿ ಆದರೆ ಪರಂಚಿ ಪರಂಚಿ ಮಾತಾಡುಗು, ಮೋಡ ಬಂದರೆ ಅದರಷ್ಟಕೇ ಮಾತಾಡಿಗೊಂಗು, ಬೀಡ ತಿಂದರೆ ದೊಂಡೆ ಒಳಾಂದ ಮಾತಾಡಿಗೊಂಗು. ಹೆಂಡತ್ತಿಮಕ್ಕಳಿಂದ ಹಿಡುದು ಬೈಲಿನ ಎಲ್ಲೋರಿಂಗೂ ಈ ಸಂಗತಿ ಅರಡಿಗು!
ಅದರ ಒಂದು ನಿಮಿಶ ನೋಡಿರೇ ಅದು ಯೇವ ಮೋಡಲ್ಲಿದ್ದು ಹೇಳ್ತದು ಅರಡಿಗು.

ಈ ಬಟ್ಯ° ಬಾರೀ ಬೇಜಾರಲ್ಲಿ ಇದ್ದತ್ತು ಮೊನ್ನೆ!
ಅದೆಂತಕೆ, ಏನು ತಾನು ನೋಡುವ ಮದಲು ತೂಷ್ಣಿಲಿ ಬಟ್ಯನ ಗುರ್ತ ಹೇಳಿಕ್ಕುತ್ತೆ; ಗೊಂತಿಲ್ಲದ್ದೋರಿಂಗೆ ಅರಡಿಯಲೆ.
~
ಪ್ರಾಯ ಹತ್ತರುವತ್ತು ಕಳಿಗೋ ಏನೋ– ಆರಿಂಗೊಂತು; ರಂಗಮಾವನಿಂದ ಒರಿಶಲ್ಲಿ ಹತ್ತೊರಿಶ ಹೆಚ್ಚೇ ಆಗಿ ಹೋಕೋದು.
ಅದರ ಒರಿಶ, ಹೊತ್ತುವೇಳೆ ಅದರಿಂದ ಹೆಚ್ಚು ನಿಖರವಾಗಿ ರಂಗಮಾವಂಗೇ ಗೊಂತಿಕ್ಕಷ್ಟೆ ಬೇಕಾರೆ!
ಅದಕ್ಕೆ ಬುದ್ದಿ ಗೊಂತಪ್ಪ ಲಾಗಾಯ್ತಿಂದ ಆಚಕರೆ ತರವಾಡುಮನೆಗೆ ಕೆಲಸಕ್ಕೆ ಬಕ್ಕು.
ಅದರ ಅಪ್ಪ° ಓಡ್ಯಪ್ಪುವೇ ಬಂದುಗೊಂಡಿದ್ದತ್ತು, ಅದೇ ನಮುನೆ ಇದುದೇ ಮುಂದುವರುಸಿತ್ತು.
ಶಂಬಜ್ಜನ ಏರುಜವ್ವನಲ್ಲಿ ಇದಕ್ಕೆ ಬಾಲ್ಯ. ಶಂಬಜ್ಜನೇ ಅದಕ್ಕೆ ಕೃಷಿ ಕೆಲಸಂಗಳ ಹೇಳಿಕೊಟ್ಟದು ಹೇಳಿ ಅದುವೇ ಹೇಳಿಗೊಳ್ತು.
ಕೆಲಸಲ್ಲಿ ರಜ ನಿಧಾನಿ ಅಡ, ಆದರೂ ಶ್ರದ್ಧೆಲಿ ಮಾಡಿದ ಕೆಲಸ ಮನಾರ ಆಗಿ ಇಕ್ಕು.
ಮದಲಿಂಗೇ ಹಾಂಗೇ, ಅದು ದಷ್ಟಪುಷ್ಟ ಆಗಿಂಡು ನಾಕಾಳು ಕೆಲಸ ಮಾಡದ್ರೂ, ನಂಬಿಕೆಯ ಆಳಾಗಿ ಶಂಬಜ್ಜನ ಜೆತೆಗೆ ಇದ್ದತ್ತು.ಹೊತ್ತುಗೊತ್ತು ನೋಡ್ಳಿಲ್ಲೆ, ಉದಿಯಪ್ಪಗ ಎದ್ದಿಕ್ಕಿ ತಣ್ಣನೆ ಉಂಡಿಕ್ಕಿ ಕೆಲಸಕ್ಕೆ ಬಂದರೆ ಹತ್ತುಗಂಟೆಗೆ ಕಾಪಿ, ಮಜ್ಜಾನದ ಊಟ, ಹೊತ್ತೋಪಗ ಚಾಯ ಕುಡುದು, ಇರುಳಿರುಳಾಗಿ, ಇನ್ನು ಕಾಣ್ತೇ ಇಲ್ಲೆ – ಹೇಳುವಗ ಒಪಾಸು ಹೆರಟು ಮನಗೆ ಹೋಕು.
ಮದಲಿಂಗೆ ಒಂದುಸೇರು ಅಕ್ಕಿ ಸಂಬಳ ಇಪ್ಪಗಾಣ ಕತೆ ಮಾಂತ್ರ ಅಲ್ಲ, ಮೊನ್ನೆ ಮೊನ್ನೆ ಒರೆಂಗೂ ಹಾಂಗೇ ಇತ್ತು.
ಮಜ್ಜಾನ ಉಂಡಿಕ್ಕಿ ಹಟ್ಟಿಯ ಹತ್ತರಾಣ ಕೋಣೆಲಿ ಒಂದೊರಕ್ಕು ಒರಗಿಯೇ ಒರಗ್ಗು ಅದು; ಹಾಂಗಾಗಿ ಆ ಕೋಣೆಗೆ ಬಟ್ಯನ ಕೋಣೆ ಹೇಳಿಯೆ ಹೆಸರಾಗಿತ್ತು ಅಲ್ಯಾಣ ಮಕ್ಕಳ ಬಾಯಿಲಿ.
~
ದನಿಕ್ಕುಳು ಶಂಬಜ್ಜ ತೀರಿಗೊಂಡು ರಂಗಮಾವನ ಕಾರ್ಬಾರು ಸುರು ಆದ ಮತ್ತೆಯೂ ಬಟ್ಯ° ಬದಲಾಯಿದಿಲ್ಲೆ.
ಅದೇ ನಮುನೆ ಕೆಲಸ, ಅದೇ ನಮುನೆ ನಂಬಿಕೆ. ತರವಾಡುಮನೆಲಿ ಅದು ಬೆಗರರಿಶಿ ಮಾಡಿದ ಕೆಲಸಕ್ಕೆ ಲೆಕ್ಕ ಇಲ್ಲೆ!
ಸ್ಟೀವ್ ಜೋಬ್ಸು ಹೇಳ್ತ ಕೆಲಸಗಾರ ದೊಡ್ಡ ಹೆಸರು ಮಾಡಿದ್ದದು ನಿಂಗೊಗೆಲ್ಲ ಅರಡಿಗು.
ಅದರ ಕೈಲಿ ಒಳ್ಳೆತ ಪೈಶೆ ಇತ್ತು – ಕೆಲಸ ಮಾಡಿತ್ತು, ಪೈಶೆ ಇನ್ನೂ ಹೆಚ್ಚುಮಾಡಿಗೊಂಡತ್ತು.
ಕೈಲಿ ಪೈಶೆ ಇಲ್ಲದ್ದರೂ – ಭಯಂಕರದ ಶ್ರಮಜೀವಿ ಕೆಲಸಕ್ಕಾರ ಆಗಿದ್ದದು ಹೇದರೆ ನಮ್ಮ ಬಟ್ಯನೇ ಸರಿ.

ಬಟ್ಯಂಗೆ ಕೆಲಸ ಹೇಳುದು ಹೇದು ಇಲ್ಲೆ ರಂಗಮಾವ; ಹೇಳೇಕಾದ ಅಗತ್ಯವೂ ಇಲ್ಲೆ! ಅದು ಎಲ್ಲೋರಿಂಗೂ ಗೊಂತಿತ್ತು.
ಬಟ್ಯ ಬಂದರೆ ಸಾಕು, ಕೆಲಸ ಅದರಷ್ಟಕೇ ಸುರುಮಾಡಿಗೊಂಗು.
ಅದುವೇ ಮಾಡ್ತ ಕೆಲಸಂಗೊ ಇದ್ದತ್ತು, ಇನ್ನೊಬ್ಬ ಆ ಕಾರ್ಯಂಗಳ ಮಾಡಿಕ್ಕ°.
ಮದಲಿಂಗೆ – ಒರಿಶಕ್ಕೊಂದರಿ ಬೇಲಿ ತಿದ್ದುದೋ, ಉಜಿರುಕಣಿ ಸರಿ ಮಾಡ್ತದೋ, ತೋಟದಕರೆಲಿ ಬಲ್ಲೆ ಕೆರಸುದೋ, ಬೆದ್ರಹಿಂಡ್ಳು ಮುಳ್ಳುಕೆರಸುದೋ, ನೆಟ್ಟಿಗೆದ್ದೆಗೆ ತೂಣ ಬಡಿವದೋ
– ಹೀಂಗಿರ್ಸು ಮಾಡಿಗೊಂಡಿದ್ದರೂ, ಮತ್ತೆಮತ್ತೆ ಪ್ರಾಯ ಆಗಿ ಬಂಙದ ಕೆಲಸ ಮಾಡಿಂಡಿತ್ತಿಲ್ಲೆ. ಸುಲಾಬದ್ದೇನಾರು – ತೋಟಕ್ಕೆ ಬಂದ ಮುಜುವೋ, ಮಂಗನೋ ಇದ್ದರೆ ಓಡುಸಲೆ ದಾಸುವಿನ ಕಟ್ಟಿಂಡು ಹೋಪದು, ಹಟ್ಟಿಗೆ ಹಸಿಹುಲ್ಲು ತಪ್ಪದು, ಎಲೆತಟ್ಟೆಲಿ ಎಲೆಡಕ್ಕೆ ಮುಗಿಯದ್ದ ಹಾಂಗೆ ನೋಡಿಗೊಂಬದು, ಸುಣ್ಣದಂಡೆಲಿ ಹಸಿಸುಣ್ಣ ಒಳಿಶುದು – ಇತ್ಯಾದಿ ಕೆಲಸಂಗೊ ಅದರದ್ದೇ.
ಸ್ವತಃ ದೈವಭಕ್ತ ಆದ ಬಟ್ಯಂಗೆ ತರವಾಡುಮನೆ ಪೂಜೆ ಸಮೆಯ ಬಂತುಕಂಡ್ರೆ ಬೇರೇ ಕೆಲವು ಕೆಲಸಂಗೊ ಇದ್ದತ್ತು, ಈಗಳೂ ಇದ್ದು. ಉಪ್ಪರಿಗೆ ಅಟ್ಟಂದ ಹಳೇಕಾಲದ ಕಲಶಚೆಂಬು, ಹರಿವಾಣಂಗಳ ಇಳುಶಿ, ಹುಳಿಹಾಕಿ ತೊಳದು ಪಳಪಳ ಹೊಳೆಶಿ ಮನಾರಕ್ಕೆ ಕವುಂಚಿ ಮಡಗ್ಗು. ಬಟ್ಟಮಾವಂದ್ರು ಎತ್ತುವಗ ಚೆಂಡಿಪೂರ ಒಣಗಿ ತೆಯಾರಾಗಿಪ್ಪ ಹಾಂಗೆ!
ಒಂದು ವಾರ ಮದಲೇ ಮೂಡುಗೆದ್ದೆಂದ ದರ್ಭೆಯ ಕೊಯಿದು, ಒಣಗುಸಿ ಕಟ್ಟ ಕಟ್ಟಿ ಮಡಗ್ಗು.
ಪಾಲಾಶವೇ ಇತ್ಯಾದಿ ಸಮಿತ್ತುಗೊ – ಸಂಕೆ ಹೇಳಿರೆ ಸಾಕು – ಕಟ್ಟಿ ಮಡಗ್ಗು.
ಪೂಜೆ ದಿನ ಕೇಪುಳೆ ಹೂಗೋ ಎಂತಾರು ಕೊಯಿದು ತಂದು, ಆದು ಹಾಕಿ ಕೊಡ್ತದು -ಹೀಂಗೆಲ್ಲ ನೇರಂಪೋಕು ಕೆಲಸಂಗೊ.
ಬಟ್ಯಂಗೆ ಪೂಜೆಕ್ರಮಂಗಳೂ ಗೊಂತಿದ್ದು – ಹೇದು ಪರಿಕರ್ಮ ಅರಡಿವ ಕಿಟ್ಟಮಾವನ ಅಭಿಪ್ರಾಯ.

ಆಚೊರಿಶ ಒಂದು ಸಣ್ಣ ಓಪ್ರೇಶನು ಅಪ್ಪನ್ನಾರವೂ ತರವಾಡುಮನೆಗೆ ಸರಾಗು ಬಂದುಗೊಂಡಿತ್ತು. ಅದಾದ ಮತ್ತೆ ರಜ ಕಮ್ಮಿ.
ದಿನಬಿಟ್ಟುದಿನವೋ, ವಾರಕ್ಕೊಂದರಿಯೋ ಮಣ್ಣ ಬಕ್ಕು; ಎಲೆತಿಂದಿಕ್ಕಿ ಅರ್ದದಿನ ಹಗೂರದ ಕೆಲಸಮಾಡಿ, ಉಂಡೊರಗಿ, ಬೊಬ್ಬೆ ಮಾತಾಡಿ, ಪುಗೆರೆ-ತಾರಾಯಿ ಎಂತಾರು ಹಿಡ್ಕೊಂಡು ಹೋಕು.
~

ಬಟ್ಯನ ಮನಗೆ ಬಂದ ಸತ್ಯನಾರಾಯಣ
ಬಟ್ಯನ ಮನಗೆ ಬಂದ ಸತ್ಯನಾರಾಯಣ

ಆ ಮನೆಗೆ ಬಟ್ಯ ಹೇದರೆ ಸಂಬಳದ ಆಳು ಅಲ್ಲಲೇ ಅಲ್ಲ, ಅದೊಂದು ಹತ್ತರಾಣ ಜೆನ; ಒಂದೇ ಅಳಗೆ ಅಶನ ಎಷ್ಟೋ ಸಮೆಯ ಉಂಡ ಸಹಜೀವಿ!
ಅಲ್ಲದ್ದರೆ, ಸಂಬಳದ ಆಳಿನ ಕೈಲಿ ಹೀಂಗಿರ್ಸ ಅಸಲಾಗದ್ದ ಕೆಲಸಂಗಳ ಮಾಡುಸುಲೆ ಶಾಂಬಾವ ಒಪ್ಪುಗೊ?
~
ಬಟ್ಯಂದು ತುಂಬು ಸಂಸಾರ; ಅದರ ಮಕ್ಕೊ ದೊಡ್ಡಾಗಿ ಅವ್ವವ್ವೇ ದುಡಿತ್ತವು.
ಹಾಂಗಾಗಿ ಬಟ್ಯನ ದುಡಿಮೆ ಪೂರ ಅದರ ಮದ್ದಿಂಗೂ, ಅದರ ಬೂತಕ್ಕೂ – ದೇವರಿಂಗೂ ಇಪ್ಪದು. 🙂
ಅಪ್ಪು, ಅದು ಭಯಂಕರ ದೈವಭಕ್ತ; ಸನಾತನಿ. ಹಾಂಗಾಗಿ ಸುಖೀ ಮನಸ್ಸು ಅದರದ್ದು.
ಒರಿಶಕ್ಕೊಂದರಿ ಸತ್ಯಾರಣ ಪೂಜೆಮಾಡುಸದ್ದರೆ ಮನಗೆಂತೋ ಆವುತ್ತು – ಹೇಳ್ತದು ಅದರ ಅಪ್ಪ ಓಡ್ಯಪ್ಪು ಹೇಳಿಕೊಟ್ಟಿದು.
ಹಾಂಗಾಗಿ ಬಟ್ಯನ, ಬಟ್ಟಮಾವನ ಪುರುಸೊತ್ತಿಂಗೆ ಅನುಸರುಸಿ, ಒಂದರಿ ಪೂಜೆ ಗವುಜಿ ಎಳಗುಸದ್ದರೆ ಸರಿ ಬಾರ.

ಬಟ್ಯನ ಬಗ್ಗೆ ಇಷ್ಟು ವಿಶಯ ಬೈಲಿಂಗೆ ಗೊಂತಿಪ್ಪದೇ; ಒಪ್ಪಣ್ಣ ಪುನಾ ಹೇಳಿಕೊಡೇಕು ಹೇದು ಇಲ್ಲೆ. ಅಲ್ಲದೋ!
ನಾವು ಹೇಳುಲೆ ಹೆರಟ ವಿಶಯ – ಬಟ್ಯಂಗೆ ಬೇಜಾರ ಆದ್ದದು.
~
ಬೈಲಕರೆಂದ ನೆಡಕ್ಕೊಂಡು ಬತ್ತ ದಾರಿಲಿ, ಹೊತ್ತೋಪಗ ತರವಾಡುಮನಗೆ ನಾವು ಎತ್ತಿತ್ತಲ್ಲದೋ – ಬಟ್ಯನೂ ಬಂದಿತ್ತು ಆ ದಿನ.
ಹೊತ್ತೋಪಗಾಣ ಚಾಯ ಕುಡುದು ಗ್ಲಾಸಿನ ತೊಳಸಿಕ್ಕಿ ಬಂದು ಚಾವಡಿಲಿ ಕಾಲುನೀಡಿ ಕೂದತ್ತು.
ಎಂತ ಬಟ್ಯಾ…° – ಹೇಳಿ ಮಾತಾಡುಸಿದೆ. ಬಟ್ಯ° ಗೌರವಲ್ಲಿ ರಂಗಮಾವನ ಹತ್ತರೆ ತುಳುವಿಲೇ ಮಾತಾಡಿರೂ, ನಮ್ಮತ್ತರೆ ಪ್ರೀತಿಲಿ ಹವ್ಯಕಲ್ಲೇ ಮಾತಾಡುಗು; ಮಾತಾಡಿತ್ತು.
ಆದರೆ, ಯೇವತ್ರಾಣ ಹಾಂಗೆ ನೆಗೆನೆಗೆಲಿ ಮಾತಾಡುದಲ್ಲದ್ದೆ, ಬೇಕೋ-ಬೇಡದೋ ಹೇದು ಮನಸ್ಸಿಲಿದ್ದತ್ತು.
ಆಗಳೇ ಹೇಳಿದ ಹಾಂಗೆ, ಬಟ್ಯ ಬೇಜಾರಲ್ಲಿದ್ದರೆ ನವಗೆ ಗೊಂತಾಗದೋ!
ಎಂತ ಬಟ್ಯ°, ಉಶಾರಿಲ್ಲೆಯೋ – ಕೇಳಿದೆ; ಎಂತ ಇಲ್ಲೆಪ್ಪ – ಸರೀ ಇದ್ದೆ; ಹೇಳಿತ್ತು ಬೇಜಾರಲ್ಲಿ.
ದೇಹಕ್ಕೆ ಉಶಾರಿದ್ದರೂ – ಮನಸ್ಸಿಂಗೆ ಅಷ್ಟು ಉಶಾರಿಲ್ಲೆ ಹೇದು ನವಗೆ ಗೊಂತಾತು. ಎಂತಕೆ ಬೇಜಾರಾತು?
~
ಹಳ್ಳಿಲಿರ್ತೋರಿಂಗೆ ಎಂತಕೆ ಬೇಜಾರಕ್ಕು?
ಸಾವಿರಗಟ್ಳೆ ಪೈಸೆ ಮಾಡಿದ್ದಿಲ್ಲೇದು ಬೇಜಾರವೋ? ಹೊಸಾ ಮನೆ, ಹೊಸಾ ಕಾರು ತೆಗದ್ದಿಲ್ಲೇದು ಬೇಜಾರವೋ – ಅಲ್ಲಲೇ ಅಲ್ಲ!
ಎರಡು ಸರ್ತಿ ಬೆಲಕ್ಕಿಅಪ್ಪಗ ಹೇಳುಲೆ ಸುರುಮಾಡಿತ್ತು.
~

ಬಟ್ಯನ ದೈವಭಕ್ತಿಂದಾಗಿ ಅದರ ಮನೆಲಿ ಪೂಜೆ – ಪುನಸ್ಕಾರಂಗೊ ಅಪ್ಪದು ನವಗೆ ಗೊಂತಿಪ್ಪದೇ.
ಎಂತ ಪೂಜೆ ಇದ್ದರೂ ನವಗೆ ಹೇಳಿಕೆ ಹೇಳದ್ದೆ ಇರ; ಹೇಳಿಕೆ ಹೇಳಿದಲ್ಲಿಗೆ ನಾವು ಹೋಗದ್ದೆ ಇರ.
ಹಾಂಗಾಗಿ, ಸಣ್ಣ ಇಪ್ಪಾಗಳೇ ಬಟ್ಯನಲ್ಲಿಗೆ ಪೂಜಗೆ ಹೋವುತ್ತದು ಅಭ್ಯಾಸ ಇದ್ದು.
ಬಟ್ಟಮಾವ ಶ್ರದ್ಧೆಲಿ ಮಂತ್ರ ಹೇಳುವಗ,
ಅಷ್ಟೇ ಶ್ರದ್ಧೆಲಿ ಸ್ವಸ್ತಿಕದ ಎದುರು ಕೂದುಗೊಂಡು ದೇವರನ್ನೇ ಧೇನುಸೆಂಡು ಕೂಪ ಬಟ್ಯ° ದಂಪತಿಗೊ.
ಕತೆ ಓದ್ಯರ ಆಂಡ್ – ಹೇಳುವಗ ಮಕ್ಕೊ ಪುಳ್ಯಕ್ಕಳ ಪೂರಾ ಬಲುಗಿ ಕೂರುಸಿ,
ಬಟ್ಟಮಾವ° ಹೇಳ್ತ ಕತೆಯ – ಶ್ಲೋಕವ ಕೇಳುಸೆಂಡು,
ಮಂಗಳಾರತಿ ಅಪ್ಪಗ ಕಣ್ಣುತುಂಬೆಂಡು,
ಸಂಸ್ಕೃತ ಮಂತ್ರಂಗಳ ಪೂಜೆ ಕಳುದ ಮತ್ತೆ ಬಟ್ಟಮಾವ ತುಳುವಿಲಿ ಮಾಡುವ ಪ್ರಾರ್ತನೆಗೆ ಕಣ್ಣಿಲಿ ಧಾರೆಧಾರೆಯಾಗಿ ನೀರಾಗಿಂಡು,
ಹೆರಡ್ಳಪ್ಪಗ ಬೊಂಡ ಕೆತ್ತಿ ಕತ್ತಿಯನ್ನೂ ಕೊಟ್ಟು, ಒಟ್ಟೆ ಮಾಡಿ ಕುಡುಶೆಂಡು
– ಅದು ಬಟ್ಯನ ಉಪಚಾರ! ಒಪ್ಪಣ್ಣಂಗೆ ನೆಂಪು ಬಪ್ಪಗಳೇ ಹಾಂಗೆ! ಅಂದೂ ಹಾಂಗೆ, ಇಂದೂ ಹಾಂಗೇ.
~
ಬಟ್ಯ ಮಾತಾಡ್ಳೆ ಸುರುಮಾಡುವಗ ಆ ದಿನದ ದೃಶ್ಯಂಗೊ ಒಂದೊಂದಾಗಿ ನೆಂಪಪ್ಪಲೆ ಸುರು ಆತು. ಮೊನ್ನೆಯೂ ಹಾಂಗೇ, ನವಗೆ ಹೇಳಿಕೆ ಇದ್ದತ್ತು, ನಾವೂ ಹೋಗಿತ್ತು.
ನಾವು ಎತ್ತುವಗಳೇ – ಕತೆ ಅರ್ದ ಓದಿ ಆಗಿತ್ತು. ಅದಕ್ಕೆ ತುಂಬ ಹೊತ್ತು ಕೂತಿಕ್ಕಲೆ ಎಡಿತ್ತಿಲ್ಲೇದು ಅದರ ದೊಡ್ಡಮಗ ಕೂದ್ಸು ಈ ಸರ್ತಿ.
ಆದರೆ, ಶ್ರದ್ಧೇಲಿ ಅವರ ಹಿಂದೆಯೇ ಕೂದುಗೊಂಡಿದು.
ಬಟ್ಟಮಾವಂಗೆ ಮುನ್ನಾಣದಿನ ಎಲ್ಲಿಯೋ ಪ್ರಯಾಣ ಇತ್ತೋ ಏನೋ, ಆವಳಿಗೆ ಬಂದುಗೊಂಡಿತ್ತು, ಆದರೆ ಬಟ್ಯಂಗೆ ಆವಳಿಗೆ ಬಾರ ಇದಾ! ಅಷ್ಟೂ ಶ್ರದ್ಧೆ.
ಸಹಸ್ರನಾಮ, ಕಥಾಶ್ರವಣ, ಹಣ್ಣುಕಾಯಿ ನೈವೇದ್ಯ, ಮಂಗಳಾರತಿ, ಉಂಡೆಪಚಾದ ಎಲ್ಲ ಆಗಿ ಬಟ್ಟಮಾವಂಗೆ ಒಂದು ಬೊಂಡ ಕೊಡುಗು!
ಬಟ್ಟಮಾವನ ಒಟ್ಟಿಂಗೆ ನವಗುದೇ ಬಕ್ಕು.
ನಾವು ಬೊಂಡ ಕುಡುದಾದ ಮತ್ತೆ ಅವಕ್ಕೆ ಊಟ ಸುರು; ಬಾಬು-ಅಣ್ಣಪ್ಪುವವರ ಅಡಿಗೆ ಆದ ಕಾರಣ ನವಗೆ ಊಟ ಇಲ್ಲೆ.
ಯೇವಗಳೂ ಹಾಂಗೇ.
ಪೂಜೆ ಚೆಂದಲ್ಲೇ ಕಳಾತು; ಸಣ್ಣಕೆ – ಹೇದು ಒಂದೇ ವಿತ್ಯಾಸ ಅಷ್ಟೆ.

ಸಣ್ಣಕೆ? – ಅಪ್ಪು, ಯೇವತ್ತೂ ನೂರ್ರ ಮೇಗೆ ಜೆನ ಅಪ್ಪಲ್ಲಿ ಈ ಒರಿಶ ಹತ್ತೈವತ್ತೋ-ಅರುವತ್ತೋ ಜೆನ ಅಕ್ಕಷ್ಟೆ.
ಅದೆಂತ ಹಾಂಗೇದು ನಾವು ಅಂಬಗ ಯೋಚನೆ ಮಾಡಿದ್ದಿಲ್ಲೆ.
ನಾವು ಹೆರಟಿಕ್ಕಿ ಬಂದಿತ್ತಿದ್ದು ಆ ದಿನ. ಇಂದು ಆ ವಿಶಯ ಬಟ್ಯ ಹೇಳುವಗಳೇ ನೆಂಪು.

ದೈವಭಕ್ತ ಬಟ್ಯ ಅದರ ನೆಮ್ಮದಿಯ ಮನೆಪೂಜೆಯ ‘ಸಣ್ಣಕೆ’ ಮಾಡುಗೊ?
ಪೂಜೆ ’ಸಣ್ಣಕೆ’ ಹೇದು ಆದ್ಸು – ಹೇಳಿಕೆ ಸಣ್ಣ ಮಾಡಿ ಅಲ್ಲ ಅಡ; ಬಂದ ಜೆನಂಗೊ ಕಮ್ಮಿ ಆಗಿಯೇ ಪೂಜೆ ಸಣ್ಣ ಆದ್ಸಡ.
ಅಂಬಗ ಎಂತಕೆ ಈ ಒರಿಶ ಜೆನಕಮ್ಮಿ ಆದವು?
~

ಬೈಲಕರೆಲ ನೇಲುಸಿದ ಬೇನರುಗ!!
ಬೈಲಕರೆಲಿ ಒಂದು ಹೊಸಾ ‘ರಗಳೆ’ ಸುರು ಆಯಿದು.
ಬೇಲೆ ಇಲ್ಲದ್ದವು ಸೇರಿಗೊಂಡು “ಯಂಗ್ ಯೂತ್ಸ್” – ಹೇದು ಬೇನರು ಹಾಕಿಂಡು ಹೊಸಾ ಸಂಘಟನೆ ಸುರು ಆಯಿದಡ.
ಹೆಸರೇ ಹೇಳ್ತಾಂಗೆ ಕೆಲವು ತುಂಡು ಜವ್ವನಿಗರು ಪೋಲಿ ಮಾಡ್ಳೆ ಇಪ್ಪ ಸಂಘಟನೆ.
ಹೊಸ ಒರಿಶದ ಸಮೆಯಲ್ಲಿ ಬೇಂಡು, ವೀಡ್ಯ ಗವುಜಿ ಮಾಡುದು, ಕ್ರಿಸ್ಮಸ್ಸು ಸಮೆಯಲ್ಲಿ ಬೊಬ್ಬೆ ಹೊಡವದು, ಅವರ ವಾರ್ಷಿಕೋತ್ಸವದ ಸಮೆಯಲ್ಲಿ ಸಿನೆಮಪದ್ಯ ಹಾಡುದು – ಅಂತೂ ಇರುಳಿಡೀ ಒರಕ್ಕಿಲ್ಲೆ ಬೈಲಿಲಿ, ಹರಟೆ.
ಊರಿನ ಕೆಲವು ಸೋಜಂಗೊ, ಮತ್ತೆ ಕೆಲವು ಮಾಪುಳೆಗೊ, ಮತ್ತೆ ಕೆಲವು ನಮ್ಮವುದೇ ಇದ್ದವು.
ದಶಂಬ್ರ ಆರಕ್ಕೆ ಕಲ್ಲಿಡ್ಕುವೋರೇ ಇದರ್ಲಿಯೂ ಇಪ್ಪದು; ಅವು ಮಾಡುವ ಘನಂದಾರಿ ಕೆಲಸ ಎಂತದು ಕೇಳಿರೆ, ಆರಿಂಗೂ ಅರಡಿಯ.
ಈಗ ಅವರ ಸಂಘಟನೆಯ ವಿಸ್ತಾರ ಮಾಡ್ಳೆ ಭಯಂಕರ ಹೆರಡ್ತಾ ಇದ್ದವಡ; ಅದಕ್ಕೆ ಒಂದು ಹೊಸಾ ಕೆಣಿ – ನಾಟಕ ಕಾರ್ಯಕ್ರಮಂಗೊ!!
ಅಂಬಗಂಬಗ ಹೀಂಗಿರ್ಸ ಬೊಬ್ಬೆ ಆವುತ್ತಡ ಈಗ.
ಅಂಗುಡಿಗಳಿಂದ ಪೈಶೆ ಒಸೂಲಿ ಮಾಡಿತ್ತು, ನಾಟಕ ಎಳಗುಸಿತ್ತು; ಒಳುದ್ದರಲ್ಲಿ ಹೋಟ್ಳಿಂಗೆ ಹೋತು.ಮೊನ್ನೆಯೂ ಹಾಂಗೇ ಆಯಿದಡ;
ನಾಟಕ ಯೇವತ್ತು? – ಅದೇ; ನಮ್ಮ ಬಟ್ಯನ ಮನೆ ಪೂಜೆಯ ದಿನ!! ನಾಟಕ ಎಲ್ಲಿ? ಅದೇ – ಬೈಲಕರೆ ಶಾಲೆಯ ಜಾಲಿಲಿ.
ದೊಡಾ ಪ್ರಚಾರ ಕೊಟ್ಟು, ವೇನಿಲಿ-ಜೀಪಿಲ ಮೈಕ್ಕ ಕಟ್ಟಿಗೊಂಡು ಊರೂರು ಹೇಳಿಗೊಂಡು ಬಯಿಂದವಡ.
ಬೆಗುಡು ನೆಗೆಗೇ ಪ್ರಸಿದ್ಧ ಕಲಾವಿದನ ದಿನಿಗೆಳಿ, “ಎಂಕ್ ಬೇಲೆ ಇಜ್ಜಿ” ಹೇಳ್ತ ಒಂದು ನಾಟಕ ಏರ್ಪಾಡು ಮಾಡಿದವಡ.
ಅದು ಮಾಂತ್ರವೋ – ತುಳು ಅರಡಿವ ಬೈಲಿನ ಸುಮಾರುಜೆನ ಎಂಕ್ಲಾ ಬೇಲೆ ಇಜ್ಜಿ – ಹೇಳಿಗೊಂಡು ನಾಟಕ ನೋಡ್ಳೆ ಹೋಗಿತ್ತವಡ.
ಹಾಂಗೆ ಹೋದವರಲ್ಲಿ ಈ ಬಟ್ಯನ ಮನಗೆ ಪೂಜಗೆ ಬರೆಕ್ಕಾದ, ಬಂದು ಸುದರಿಕೆ ಮಾಡೇಕಾದ ಪುಳ್ಳರುಗಳೂ ಇದ್ದಿದ್ದವಡ.
ನೂರೈವತ್ತು ಜೆನರ ಏರ್ಪಾಡಿಂಗೆ ಹೆರಟ ಈ ಬಟ್ಯನ ಮನೆಲಿ, ಆದ್ದು ಬರೇ ಐವತ್ತು ಜೆನ!
ಉಂಡೆಪಚಾದ ಆದರೂ ಬಂದೋರಿಂಗೆ ಕೊಟ್ಟು ಮುಗುಶಲಕ್ಕು; ಈ ನಮುನೆ ಒಳುದ ಶಾಕಪಾಕಂಗಳ ವಿಲೇವಾರಿ ಆಗೆಡದೋ!
ಸುಧರಿಕೆ, ಬೊಬ್ಬೆ ಗವುಜಿ ಎಂತದೂ ಇಲ್ಲದ್ದ ಮವುನ ಪೂಜೆ ಆಗಿದ್ದಿದ್ದು ಅದು.
ಒರಿಶಾವಧಿ ಪೂಜೆಯ ದೊಡ್ಡ ಗವುಜಿ, ಬಂಧುವರ್ಗಕ್ಕೆ ನೆಮ್ಮದಿಯ ಊಟ ಹಾಕುತ್ತ ಬಟ್ಯನ ಏರ್ಪಾಡೆಲ್ಲ ತಲೆಕೆಳ ಆಗಿ ಬಿದ್ದುಗೊಂಡಿತ್ತು.
ಎನ್ನ ಪೈಕಿಯೋರಿಂಗೆ ಬುದ್ಧಿ ಕೊಡು ದೇವರೇ – ಹೇದು ಸತ್ಯಾರಾಣ ದೇವರ ಹತ್ತರೇ ಕೇಳಿಗೊಂಡತ್ತೋ ಏನೊ!
ಈಗ ಸರೀ ಅರ್ತ ಆತು, ಬಟ್ಯನ ಬೇಜಾರಕ್ಕೆ ಕಾರಣ ಎಂತರ ಹೇದು!  ಛೇ!!
~
ಪೂಜೆ ಹೇದರೂ ಜೆನಂಗೊ ಸೇರಿ ಕುಶಿ ಆನಂದುಸುವ ಕಾರ್ಯಕ್ರಮ.
ನಾಟಕ ಹೇದರೂ ಜೆನಂಗೊ ಸೇರಿ ಆಸ್ವಾದಿಸುವ ಕಾರ್ಯಕ್ರಮ.
ಆದರೆ, ಎರಡೂ ಒಂದೇ ದಿನ ಬಂದರೆ, ಯೇವದಕ್ಕೆ ಪ್ರಾಮುಖ್ಯತೆ ಕೊಡೇಕು – ಹೇಳ್ತದು ನಮ್ಮ ವಿವೇಚನೆಲಿ ಇರೆಕು.
ದೇವರ ಕಾರ್ಯಕ್ರಮಕ್ಕೆ ಸೇರದ್ದೆ, ಬರೇ ಕುಶಿಲಿದ್ದರೆ ಅದು ಕುಶಿಯೋ – ಹೇಳ್ತದು ಬಟ್ಯನ ಪ್ರಶ್ನೆ.
ಕಾಲಕ್ರಮೇಣ ದೈವಭಕ್ತಿ ಕಮ್ಮಿ ಆಗಿಂಡು, ಪೇಶನು ಮಾಡ್ತ ವಿದ್ಯೆಗಳೇ ಹೆಚ್ಚಾವುತ್ತಾ ಇದ್ದಾಡ.

ಬಟ್ಯ ಎರಡು ತಲೆಮಾರು ಹಿಂದಾಣ ಜೆನ; ನಾವು ದೇವರ ನೆಂಪುಮಾಡಿರೇ ಕೊಶಿ ಸಿಕ್ಕುತ್ತದು ಹೇಳ್ತರ ಸ್ವತಃ ಮನಗಂಡಿದು.
ದೈವಭಕ್ತಿಲಿ ಪೂಜೆ ಮಾಡಿರೆ ಇಡೀ ಕುಟುಂಬ ಸಂಸಾರಕ್ಕೆ ನೆಮ್ಮದಿ – ಹೇಳ್ತದು ಅದು ಅರ್ತುಗೊಂಡ ಸತ್ಯ.
ಆದರೆ, ಅದಕ್ಕೂ ಬಾರದ್ದೆ ಹೀಂಗಿರ್ಸ ಬೇಂಡು ಗವುಜಿಯ ಕೊಣಿಯಲೆ ಹೋವುತ್ತವನ್ನೇ ಹೇದು ಬಟ್ಯಂಗೆ ತುಂಬ ಬೆಜಾರ.

ಅದೇ ಬೇಜಾರಲ್ಲಿ, ಆ ದಿನ ಪೂಜೆಗೆ ಬಾರದ್ದೆ, ನಾಟಕ ನೋಡ್ಳೆ ಹೋದ ಪುಳ್ಳರು ಸಿಕ್ಕಿಸಿಕ್ಕಿ ಅಪ್ಪಗ ಎರಾಡು ಪರಂಚಲೆ ಇದ್ದಡ.
ಅಪ್ಪು; ಅದರ ಪೈಕಿ ಮಕ್ಕೊಗೆ ಅದು ಈಗಳೂ ಬೈಗು! ಹೇಳಿದಾಂಗೆ ಕೇಳದ್ದರೆ!!
ತರವಾಡುಮನೆಗೆ ಬತ್ತ ದಾರಿಲಿ ಸಂಕುವಿನ ಮಗ ಸೂರಿ ಸಿಕ್ಕಿಪ್ಪಗ ರಜ ಬೊಬ್ಬೆ ಹೊಡದ್ದು – ಬಂದ ಮತ್ತುದೇ ತರವಾಡುಮನೆಲಿಯೂ ಅದೇ ಭಾವನೆಲಿ ಇದ್ದತ್ತು ಬಟ್ಯ.

ದೇವರ ಪೂಜೆಗೇ ಒದಗದ್ದ ಎನ್ನ ಪೈಕಿ ಪುಳ್ಳರುಗೊ ಆನು ಸತ್ತಪ್ಪಗ ಆದರೂ ಬಕ್ಕೋ – ಹೇಳಿ ಬಟ್ಯ ಕೇಳುವಗ ಅದರ ಕಣ್ಣಿಲಿ ನೀರೇ ಅರಿಯಲೆ ಸುರು ಆತು.
ಛೆ, ಹಾಂಗೆಲ್ಲ ಹೇಳ್ಳಾಗ ಬಟ್ಯಾ – ಹೇದು ಪಾತಿಅತ್ತೆ ಒಳಂದ ಪರಂಚಿತ್ತು.
ಅದು ಹಾಂಗೆಲ್ಲ ಮಾತಾಡುವಗ ಒಪ್ಪಣ್ಣಂಗೂ ಬೇಜಾರಾತು.

ಒಂದೊಪ್ಪ: ಪೂಜೆಗೆ ಜೆನ ಆಗದ್ದದೂ ದೇವರು ಆಡಿದ ನಾಟಕವೇ ಅಲ್ಲದೋ – ಹೇದು ರಂಗಮಾವ ಹೇಳುವಗ ಬಟ್ಯಂಗೆ ಸಮಾದಾನ ಆತು.

ಸೂ: ಪಟ ಇಂಟರ್ನೆಟ್ಟಿಂದ.

cheap moncler jackets

21 thoughts on “ಬಟ್ಯನ ಮನೆ ಪೂಜೆಗೆ ಜೆನವೇ ಆಯಿದವಿಲ್ಲೇಡ…

  1. ಬಟ್ಯ ನ ವಿಷಯಂಗಳ ಕೂಲಂಕುಷವಾಗಿ ವಿವರಿಸಿ, ಮೊದಲಾಣ ಬಾಂಧವ್ಯದ ಬಗ್ಗೆ ಬೆಳಕು ಚೆಲ್ಲಿದ್ದಿ. ಅಭಿನಂದನೆಗೊ.

  2. ಭಾವನಾತ್ಮಕವಾಗಿದ್ದು.. ಇದಕ್ಕೆ ಬಂದ ಒಪ್ಪಂಗಳೂ ರೈಸಿದ್ದು .. ಓದುಲೆ ಭಾರೀ ಖುಷಿಯಾತು ಒಪ್ಪಣ್ಣ 🙂

    ಹೀಂಗೆ ಬರೆಯಿ.

  3. ಹಾಂ…ಸುಮಾರು ಐವತ್ತು ವರುಷ ಹಿಂದೆ ಕೊಟ್ಟ ಸಂಬಳಕ್ಕೆ /ಭತ್ತ / ಸಾಂತಾಣಿ….ಬಹಳ ಬೆಲೆ ಇತ್ತು….
    ಮಳೆ ಕಾಲಲ್ಲಿ ಕೆಲಸ ಇಲ್ಲೆ ಹೇಳಿ ಹೇಳಿದರೂ ಕಲಸ ಕೊಡುಲೆ ಒರೆಂಜಿಗೊಂಡು ಬಂದು ಹೊಟ್ಟೆ ಪಾಡಿಂಗಾಗಿ ನಿಯತ್ತಿಲೇ ದುಡಿದ ಪ್ರಾಮಾಣಿಕ ಆಳುಗಳ ಆಟಿ ತಿಂಗಳ ಹೆರಹಾಕುವ ಸಾಹಸ ನಿಜಕ್ಕೂ ಕಂಣ್ಣಿಂಗೆ ಕಟ್ಟಿತ್ತು…..
    ಅಂಬಗ ಒಂದು.. ಒಂದು ವರೆ… ಎರಡು ರೂಪಾಯಿ ದೊಡ್ಡ ಸಂಬಳ..!

    ನೆಲ ಬೆಣ್ಚಿಗೆ ಬಂದು ಎತ್ತುಗಳ ಕಟ್ಟಿ ಹೂಡುಲೆ ಸುರುಮಾಡಿದರೆ ಮಧ್ಯಾಹ್ನ ವರೇಗೆ ..ಮತ್ತೆ ಗೆದ್ದೆ ಕೆಲಸ…ಈಗ ನೋಡುಲೂ ಸಿಕ್ಕ.

    ಸೊಪ್ಪಿಂಗೆ ಹೋದರೆ ಹನುಸುಲೆ ಎಡಿಯದ್ದಹಾಂಗಿದ್ದ ಸೊಪ್ಪಿನ ಕಟ್ಟ…ನೆಗ್ಗಿ ತಲೆಗೆ ಮದಗಲೇ ಎರಡು ಜೆನ ಬೇಕು…..

    ೪..೫ ಮಣ (೫೦ ರಿಂದ ೬೦ ಕೆ.ಜಿ. ) ಮೂರು ಮೈಲು ದೂರದ ಅಡ್ಯನಡ್ಕಕ್ಕೆ ಹೊತ್ತು ಗೊಂಡೇ ಹೋಕು
    ಅಂಬಗ ಎಂಗಳ ಪಕಳ ಕುಂಜಂದ….

    ಹೊಟ್ಟೆ ಸರಿ ತುಂಬಿದರೆ ಭೀಮನ ಕೆಲಸ ಅಂದು……..

    ಧರ್ಮ ಕರ್ಮದ ಸುಖ ನೆಮ್ಮದಿಯ ಜೀವನ…ಮನೆ ಮಕ್ಕಳ ಹಾಂಗೆ ಅವರ ಕಂಡ ನಮ್ಮ ಹಿರಿಯರು…ಧನಿಗೊ..

    …. ಸಾಮರಸ್ಯ ತುಂಬಿದ ಕೊಂಡು ಕೊಳ್ಲುವ ಕಾಲ…ಕೃಷಿಕರ ಸ್ವರ್ಣ್ಣ ಯುಗ ಅದು…

    ಇಂದು……!!!

    ಮಾಡಿದಷ್ಟು ಕೆಲಸಕ್ಕೆ ಕೇಳಿದಷ್ಟು ನಮಸ್ಕಾರ ಪೋರ್ವಕ ಮೊತ್ತ ಕೊಡುತ್ತರೂ…ಅವರ ಪುರುಸೊತ್ತಿಂಗೆ ನಾವು ಕಾಯಕ್ಕು…

    ಹೋ..ಹೇಳಿ ಮಾತಾಡಿದರೆ…ಮುಗುದ ಕೈ ಓರೆ ಯಾದರೆ ಮತ್ತೆ ಅವು ಇಲ್ಲೆ…

    ಈ ವರ್ಷ ತೆಂಗಿನಕಾಯಿ ಕೊಯ್ದಾಯಿದೇ ಇಲ್ಲೆ…ಎರಡು ಸರ್ತ್ತಿ ಅಡಕ್ಕೆ ತೆಗೆಷಕ್ಕಾರೆ ಪ್ರಾಣಕ್ಕೇ ಬಂತು……
    ೫೦ ದಿನ ಕಳತ್ತು ೩ನೇ …ಇಷ್ಟರ ವರೇಗೆ ..ಊಹೂಂ…ಕೊಯಿಲು ಆಯಿದೇ ಇಲ್ಲೆ…ಅಡಕ್ಕೆ ಉದುರಿಯೇ ಮುಗಾಯತು….

    ” ಬಟ್ಯ” ಪ್ರತಿನಿಧಿಸುವ ಆಳು ಗಳ ದಂತೆ ಕಥೆ…ಸಾಕ್ಕ್ಷ್ಯಚಿತ್ರ ಮಾಡಿದರೆ ನಮ್ಮ ಮಕ್ಕಗೊ” ಹೀಂಗೂ ಇತ್ತೋ ” ಹೇಳಿ ಗೊಂತಕ್ಕು…

    ತೋಟದ ಕೃಷಿ ಬಿಟ್ಟು ಪೇಟೆಯ ಹೋಟ್ಲು ಊಟಕ್ಕೆ ನಮ್ಮ ಮಕ್ಕೊ ಹೋಗದ್ದೆ ಎಂತ ಮಾಡುದು ?

    ! ಕಾಲಾಯ ತಸ್ಮೈ ನಮಃ !

  4. ತು೦ಬಾ ಲಾಯಿಕಾಯಿದು. ಎನ್ನ ಅಪ್ಪನ ಮನೇಲಿದ್ದ; ಸಾ೦ತಪ್ಪು , ತಿಮ್ಮ ರತ್ನ ಮಾಯಿಲ ಎಲ್ಲ ನೆನಪಾತು.ಅವರಲ್ಲಿಯ ಜೆಂಬಾರಕ್ಕೆ ಹೋಗಿ ಅವಲಕ್ಕಿ ಬೊ೦ಡ ಎಲ್ಲ ತಿ೦ನ್ದಿಕ್ಕಿ ಬ೦ದುಗೊ೦ಡು ಯಿತ್ತದು ನೆನಪ್ಪಾತು ವಿಶುವಿನ ದಿನ ಎ೦ಗೊಗು ನಮಸ್ಕಾರ ಮಾಡುಗು..ಈಗ ಹೊದಿಪ್ಪಗಸಾ ಮೊದಲಿನಾ೦ಗೆ ಪ್ರೀತಿ ಮಾಡುಗು. ನಮ್ಮ ಭಾಶೆಲಿ ಯೆ ಮಾತನಾಡುಗು.ಬೀಜ ಸುಟ್ಟುಹಾಕಿ ಕೊಡುಗು.ಅವರೆಲ್ಲರ ಪ್ರೀತಿ ಇದರ ಓದಿಅಪ್ಪಗ ಪುನ ನೆನಪ್ಪಾತು.

  5. ಬೊಳುಂಬಿಂಗೆ ಕೆಲಸಕ್ಕೆ ಬಂದೊಂಡಿದ್ದಿದ್ದ “ಬೆಳಿ ರಾಮು” (ಬೆಳಿ ಬಣ್ಣದ್ದು!), “ಕರಿ ರಾಮು” (ಕರಿ ಬಣ್ಣದ್ದು) ಇನ್ನೂ ಕೆಲವರ ನೆಂಪು ಮಾಡಿತ್ತು ಲೇಖನ. ಅವಕ್ಕೂ ಹವ್ಯಕ ಭಾಷೆ ಚೆಂದಕೆ ಬಕ್ಕು. ಅವರ ಮನೆಲಿ ಅಪ್ಪಂತಹ ಎಂತಾರು ಜೆಂಬಾರಕ್ಕೆ ಹೋಗಿ, ಬೊಂಡ ಕುಡುದ್ದದು ನೆಂಪಾತು. ಮನೆಂದ ಜೆಂಬಾರಕ್ಕೆ ಕೊಪ್ಪರಿಗೆ, ಇನ್ನಿತರ ಪಾತ್ರಂಗಳ ತೆಕ್ಕೊಂಡು ಹೋದರೆ, ಪುನಃ ತಂದು ಕೊಡುವಗ ಅದರಲ್ಲಿ, ಬೆಲ್ಲ, ಹಸರ ಬೇಳೆ/ ಕಡ್ಳೆ ಬೇಳೆ ಹಾಕಿ ಕೊಟ್ಟೊಂದಿದ್ದವು. ಅವರ ಜೆಂಬಾರಲ್ಲಿ ಊಟ ಉಂಬಲಾಗದ್ದಕ್ಕೆ, ನವಗೆ ಮನೆಲಿ ಪಾಯಸ ಮಾಡಿ ಉಂಬಲೆ ಹೇಳೀ !
    ಧನಿ / ಒಕ್ಕಲುಗಳ ಈ ಭಾವನಾತ್ಮಕ ಸಂಬಂಧ ಈಗೆಲ್ಲಿ ಕಂಡು ಬತ್ತು ?

    ಪೂಜೆ, ನಮ್ಮ ಕ್ರಮ, ಜೆಂಬರಂಗಳಲ್ಲಿ ಇಪ್ಪ ಈಗಾಣ ಜವ್ವನಿಗರ ಆಸಕ್ತಿ ಸಿನಿಮಾ, ಡೇನ್ಸು ನಾಟಕದ ಕಡೆಂಗೆ ಹೋವ್ತಾ ಇಪ್ಪದು ಬೇಜಾರಿನ ಸಂಗತಿ. ಇದು ಶೂದ್ರರಲ್ಲಿ ಮಾಂತ್ರ ಅಲ್ಲ, ನಮ್ಮವರಲ್ಲಿಯುದೆ ಹೇಳ್ತದು ಸತ್ಯ ಸಂಗತಿ.
    ಶಿವರಾತ್ರಿ ದಿನ ದೇವಸ್ಥಾನಲ್ಲಿ ತುಳು ನಾಟಕ ಮಡಗಿರೆ ಜನಸಂದಣಿ ಜಾಸ್ತಿ ಹೇಳಿ ಅದೂ ನೆಡೆತ್ತು. ಕ್ಲಬ್ಬುಗಳ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕಳುದು ಕಾಪಿಕ್ಕಾಡಿನ ತುಳು ನಾಟಕ ಒಂದು ಸ್ಪೆಷಲ್ ಆಕರ್ಷಣೆ ! ಯುವಜನರ ಆಕರ್ಷಣೆಗೆ ಎಂತಾರು ಒಂದು ಮಾಡೆಕಾನೆ ?

    “ದೇವರ ಪೂಜೆಗೇ ಒದಗದ್ದ ಎನ್ನ ಪೈಕಿ ಪುಳ್ಳರುಗೊ ಆನು ಸತ್ತಪ್ಪಗ ಆದರೂ ಬಕ್ಕೋ ” – ಬಟ್ಯನ ಮಾತು ಮನಸ್ಸಿಂಗೆ ನಾಟಿತ್ತು. ಬಟ್ಯನ ಮೂಲಕ ಒಪ್ಪಣ್ಣನ ಮನಸ್ಸಿನ ಕಳಕಳಿ ಅರ್ಥ ಆತು. ಏನಿದ್ದರೂ ದೇವರು ಆಡ್ತ ನಾಟಕ ಹೇಳಿ ಗ್ರೇಶೆಕಷ್ಟೆ. ಆದರೂ ಇತ್ತೀಚೆಗ್ಗಿನ ದಿನಂಗಳಲ್ಲಿ ದೇವರ ಬಗ್ಗೆ ಹೆಚ್ಚಿನ ಪ್ರೀತಿ ಜೆನಂಗಳಲ್ಲಿ ಕಂಡು ಬತ್ತಾ ಇದ್ದದು ಒಂದು ಸಮಾಧಾನದ ಸಂಗತಿ.

  6. ಅಜ್ಜನ ಮನೆಲಿ ಮದಲು ಇತ್ತಿದ್ದ ‘ಐತಪ್ಪು’ ವ ನೆಂಪಾತು. ದೊಡ್ಡ ಕೆಲಸಗಾರ ಅಲ್ಲದ್ದರೂ, ಮನೆಯವಕ್ಕೆ ಈ ಜೆನ ಇಲ್ಲದ್ದರೆ ಆಗ. ಮಾಡುವ ಕೆಲಸವ ಭಕ್ತಿಲಿ ಮಾಡುಗು. ಪ್ರಾಯ ಆದ ಮೇಲೆ ಕೆಲಸ ಮಾಡ್ಲೆ ಎಡಿಯದ್ದರೂ ಮನೆಗೆ ಬಕ್ಕು. ಮೇಲಾರ, ಉಪ್ಪಿನಕಾಯಿ ಕೇಳಿ ಬಳುಶಿಗೊಂಡು ಉಂಡಿಕ್ಕಿಯೇ ಹೋಕ್ಕು. ಅಷ್ಟು ಆಗದ್ದೆ ಹಿತವೂ ಆಗ.
    ಎಂತ್ಸಕೆ ಹೇಳುದು ಕೇಳಿರೆ, ಬರೇ ಕೆಲಸಕ್ಕೆ ಹೋಪದು ಮಾಂತ್ರ ಅಲ್ಲ , ಅದೊಂದು ಅವಕ್ಕೆ ಭಾವನಾತ್ಮಕ ಕೊಂಡಿ, ಸಾವನ್ನಾರಕ್ಕೆ ಬಿಡ್ತವಿಲ್ಲೆ. ಆದರೆ ಅವರ ಮುಂದಾಣ ಪೀಳಿಗೆಯವು ಇದರ ಮಡಿಕ್ಕೊತ್ತವಿಲ್ಲೆ.

  7. ಬಾಣಾರೆ… ಬಟ್ಯನ್ನೆರ್ನ ಈವೊಡುದ ಪೂಜೆಗ್ ಯಾನ್ಲ ಬರ್ರೆ ಆತಿಜಿ. ಈರೆನ ಬರೆವು ತೂದು ಯೆಂಕ್ಲಾ ನಾಚಿಕೆ ಅಂಡ್ . ಮಾಪು ಮಲ್ಪುಲೆ ಬಾಣಾರೆ. ಬೊಡೆದಿ ಜೋಕ್ಲು ಒತ್ತಾಯ ಮಲ್ತೆರ್ ಪಂಡ್ ತ್ ಯಾನ್ಲಾ ನಾಟಕೊಗು ಪೋದಿತ್ತೆ. ಬಟ್ಯನ್ನೆರೆಗ್ ಈತ್ ಬ್ಯೇಜರ್ ಆಪುಂಡ್ ಪಂಡ್ ತ್ ಗೊತ್ತಿತ್ತಿಜ್ಜಿ. ಇತ್ತೇ ಬಾರೀ ಬೇಜಾರಾವೊಂದುಂಡ್ ಎಂಕ್….. 🙁

    1. ರಡ್ಡ್ ಜನೆರ್ಲಾ ಬೇಜಾರ್ ಮಲ್ತೊಂತ್ ಕುಳ್ಡ ಎಂಚ. ಒರ ಪೋತು ಬಟ್ಯನ್ ತೂತ್ ಬತ್ತ್ಂಡ ಬಟ್ಯಗ್ಳ ಪ್ರಾಯತ ಜೀವೋಟು ಎಲ್ಯ ಒಂಜಿ ಸಮಾಧಾನ ಆವತ್ತ. ಎಂಚ… ಆಲೋಚನೆ ಮಾಲ್ತ್ ತೂಲೆ.

      1. ಬಯ್ಯಗ್ ಪೇಂಟೆಗ್ ಪೋನಗ ಸಾದಿಟ್ ತಿಕ್ವೆರ್. ಅಪಗ ಕಾರ್ ಗ್ ಬೂರ್ದು ಮಾಪು ಕೇನ್ವೆ. ಬಾಣಾರೆಡ ಒರ ಪಂಡ್ರ್ ಲೇ.

        1. ಹೊತ್ತೋಪಗ ಪೇಟೆಂದ ಬಂದ ಮೇಲೆ ಓದುಲೆ ಬರವಲೆ ಗೊಂತಪ್ಪದೋ, ಬಾಕಿ ಹೊತ್ತಿಲಿಯೂ ಅರಡಿಗಾವುತ್ತೋ..? ಅಲ್ಲ ಒಂದು ಚೋದ್ಯ ಎನ್ನ ಮನಸಿಂಗೆ ಬಂದದು ಅಟ್ಟೆ.

        2. ಓ ಕೊರಗ್ಗ
          ನೀರು ಬುಡಿಯರ ಬಲ ಪಂಡ ಈ ಪೇಂಟೆಗು ಪಿದಾಡ್ತ ಅತ್ತಾ.. ನಾನ ಕಾಂಡೆ ಮುಟ್ಟ ನಿನ್ನಟ ಪಾತೆರ್ಯರ ಬಲ್ಲಿ..

  8. ತೂಷ್ಣಿಲಿ & ಉಜಿರುಕಣಿ– ಈ ಎರಡೂ ಪದಂಗೊ ಎನಗೆ ಹೊಸತ್ತು. ಅದರ ಅರ್ಥ ಒಪ್ಪಣ್ನ ಹೇಳಿಕೊಟ್ತರೆ ಹೊಸ ಶಬ್ದ ಕಲ್ತ ಹಾಂಗಾತು 🙂
    ಒಂದೇ ಅಳಗೆ ಅಶನ ಎಷ್ಟೋ ಸಮೆಯ ಉಂಡ ಸಹಜೀವಿ!— ಈ ಮಾತು ತುಂಬಾ ಭಾವನಾತ್ಮಕ ಆಗಿ ಕಂಡತ್ತು !! ಒಮ್ದೇ ಅಮ್ಮನ ಹೊಟ್ಟೆಲಿ ಹುಟ್ಟಿ ಒಂದೇ ಅಳಗೆ ಅಶನ ಉಂಡು, ಒಟ್ಟಿಂಗೇ ಬೆಳದ ಅಣ್ಣ ತಮ್ಮಂದ್ರ ನಡೂಕೆ ಇಲ್ಲದ್ದ ಬಾಂಧವ್ಯ ಬಟ್ಯನ ಮನಸ್ಸಿಲ್ಲಿ ಇದ್ದು ಹೇಳುದು ಮಾಂತ್ರ ಸತ್ಯವೇ .
    ಮುಖ್ಯವಾಗಿ ನಮ್ಮ ಊರಿಲ್ಲಿ, ಹಳ್ಳಿಗಳಲ್ಲಿ ಆವ್ತಾ ಇಪ್ಪ ಸಾಮಾಜಿಕ ಬದಲಾವಣೆಯ ಬಗ್ಗೆ ಟಾರ್ಚು ಲೈಟಿನ ಬೆಣಚ್ಚು ಹಾಕಿ ತೋರ್ಸಿದ್ದಿ. ಸೂರ್ಯನ ಬೆಣಚ್ಚಿಲ್ಲಿ ನೋಡಿರೆ ಇನ್ನೂ ಸುಮಾರು ಹೀಂಗಿದ್ದ ವಿಚಾರಂಗೊ ಇದ್ದು..ಅಲ್ಲದಾ?
    ರಂಗಮಾವ ಹೇಳಿದ ಹಾಂಗೆ, ಎಲ್ಲವೂ ದೇವರು ಆಡ್ಸುವ ನಾಟಕ !! ಜೀವನವೇ ಹಾಂಗೆ !! ಲೇಖನ ಲಾಯ್ಕಿದ್ದು. ಬಟ್ಯನ ಭಾವನೆಗಳ ವಿವರ್ಸಿದ ರೀತಿ ಖುಶಿ ಆತು 🙂

    1. ಅಕ್ಕೆ.. ಈರೆಗ್ ಗೊತ್ತಿಜ್ಯಾ ???? ತೂಶ್ಣಿ ಪಂಡ ಎಲ್ಯೇಟ್ ಮಲ್ತ್ ದ್ ಮುಗಿಪ್ಪುಣ. ಬೊಕ್ಕ ಉಜಿರ್ ಕಣಿ ಪಂಡ ಕಂಗ್ ದ ತೋಟತ ನಡೂಟು ಮಲ್ಪುನ ಕಣಿ

  9. ಭಾವನಾತ್ಮಕ ಬರಹ ಒಪ್ಪಣ್ಣ.
    ಹೀ೦ಗೆ ನೆರೆಕರೆಲಿ ಪೂಜೆಗೆ ಹೋಗಿ ಬೊ೦ಡ ಕುಡುದ ಬಾಲ್ಯವೂ ನೆ೦ಪಾತು.
    {ಬಟ್ಟಮಾವ ತುಳುವಿಲಿ ಮಾಡುವ ಪ್ರಾರ್ತನೆಗೆ ಕಣ್ಣಿಲಿ ಧಾರೆಧಾರೆಯಾಗಿ ನೀರಾಗಿಂಡು,}
    {ದೇವರ ಪೂಜೆಗೇ ಒದಗದ್ದ ಎನ್ನ ಪೈಕಿ ಪುಳ್ಳರುಗೊ ಆನು ಸತ್ತಪ್ಪಗ ಆದರೂ ಬಕ್ಕೋ }
    ಓದೊಗ ಕಣ್ಣೂ ತು೦ಬಿತ್ತು.
    ದೇವರ ಮೇಲೆ ನ೦ಬಿಕೆ ಮತ್ತೆ ಹುಟ್ಟಲೆ ಆ ದೇವರೇ ಬುದ್ಧಿ ಕೊಡೆಕ್ಕಟ್ಟೆ.

    1. {ದೇವರ ಮೇಲೆ ನ೦ಬಿಕೆ ಮತ್ತೆ ಹುಟ್ಟಲೆ ಆ ದೇವರೇ ಬುದ್ಧಿ ಕೊಡೆಕ್ಕಟ್ಟೆ.}
      ಅಪ್ಪು… ಈ ಭಕ್ತಿ, ನಂಬಿಕೆ ಹೇಳುದು ಅದೊಂದು 2 way process … ಹರೇರಾಮಲ್ಲಿ ‘ಪ್ರಮುಖ’, ‘ಸಮ್ಮುಖ’ ಹೇಳುವ ವಿಭಾಗಲ್ಲಿ ಹಲವು ಜೆನರ ಅನುಭವಂಗಳ ಓದಿ ಎನಗೆ ಗುರುಭಕ್ತಿ ಜಾಸ್ತಿ ಆತು… ಗುರುಭಕ್ತಿ ಜಾಸ್ತಿ ಆವುತ್ತ ಇದ್ದ ಹಾಂಗೆ ಹಲವು ಅನುಭವಂಗ ಆತು… ಇದು ಇನ್ನೂ ಇನ್ನೂ ಭಕ್ತಿಯ ಹೆಚ್ಚಿಸಿತ್ತು… ಈಗ ಅನ್ನಿಸುತ್ತು “ದೇವರ ಮೇಲೆ ನಂಬಿಕೆ ಹೇಳುದು ಒಂದಿದ್ದರೆ ಜೀವನ ಅದೆಷ್ಟು ಸುಲಭ… ಯಾವ ಸಮಸ್ಯೆಗಳೂ ಇಲ್ಲೇ…”

      ನಮ್ಮ ನಮ್ಮ ಜೀವನಲ್ಲಿ ದೇವರ ಮೇಲೆ ನಂಬಿಕೆಂದಾಗಿ ಆದ ಲಾಭಂಗಳ ನಾವು ಹಂಚಿಗೊಲ್ಲೆಕ್ಕು… ಅದರಿಂದಾಗಿ ಇನ್ನೊಬ್ಬನ ಭಕ್ತಿಯ ಭಾವ ಪ್ರೇರಿತವಾಗಿ ಅವಂಗೂ ಲಾಭ ಆವುತ್ತು… ಖಂಡಿತವಾಗಿಯೂ ಇದು ಮೂಢ ನಂಬಿಕೆ ಅಲ್ಲ… ಅದರ ಹಿಂದೆ ನಾವು ಎಷ್ಟು ಕಲ್ತರೂ ಮುಗಿಯದ್ದ ‘ಆಧ್ಯಾತ್ಮ ಜ್ಹಾನ’ ಹೇಳುವ ಒಂದು ಜ್ಹಾನ ಇದ್ದು. ಆ ಜ್ಹಾನ ನಾವು ಇಂದು ಕಾಣುತ್ತ ಇಪ್ಪ ಎಲ್ಲ ಜ್ಹಾನಂಗಕ್ಕೂ ಮೂಲ ಜ್ಹಾನ. ಅದರ ತಿಳುಕ್ಕೊಂಡರೆ ಇಂದು ಕಾಣುತ್ತಾ ಇಪ್ಪ ಎಲ್ಲ ಜ್ಹಾನವ ತಿಳುಕ್ಕೊಂಡ ಹಾಂಗೆ.

  10. ಸ್ಟೀವ್ ಜೋಬ್ಸು – ಬಟ್ಯ ನ ಹೋಲಿಕೆ ಇಷ್ಟ ಆತು…
    ಯಾವುದೇ ವ್ಯಾಮೋಹ ಇಲ್ಲದ್ದೆ ನಿಸ್ವಾರ್ಥ ಸೇವೆ ಸಲ್ಲಿಸುವ ಬಟ್ಯ ನಿಜಕ್ಕೂ ಶ್ರೇಷ್ಟನೆ…

    ದೇಶಲ್ಲಿ ನಿಜವಾಗಿಯೂ ಜಾತಿ,ಮತೀಯ ಸಮಸ್ಯೆಗಳಿಂದ ಎಲ್ಲ ದೊಡ್ಡ ಸಮಸ್ಯೆ “ಎಂಕ್ ಬೇಲೆ ಇಜ್ಜಿ” ಹೇಳುವವರ ಸಮಸ್ಯೆ… ಅವರ ಪಳಗಿಸುಲೇ ಅಥವಾ ನಮಗೆ ಅವರಿಂದ ತೊಂದರೆ ಆಗದ್ದ ಹಾಂಗೆ ರಕ್ಷಿಸಿಗೊಮ್ಬಲೆ ಎಂತಾರು ಅಸ್ತ್ರ ಬೇಕು ನಮಗೆ…

    “ಪೂಜೆಗೆ ಜೆನ ಆಗದ್ದದೂ ದೇವರು ಆಡಿದ ನಾಟಕವೇ ಅಲ್ಲದೋ – ಹೇದು ರಂಗಮಾವ ಹೇಳುವಗ ಬಟ್ಯಂಗೆ ಸಮಾದಾನ ಆತು.” ನಿಜವಾಗಿಯೂ ಭಕ್ತಿ ಇಪ್ಪವು ಪೂಜೆಗೆ ಬಂದರೆ ಪ್ರಯೋಜನ…

  11. ಸಮಾಜಲ್ಲಿ ಆವುತ್ತಾ ಇಪ್ಪ ಬದಲಾವಣೆಯ ತೋರುಸುವಲ್ಲಿ ಯಶಸ್ವಿ ಆಯಿದಿ…

  12. ಛೇ.. ಮದುವೆಗೆ ಹೋಪಲಾತಿಲ್ಲೆ..!
    ಅಣ್ಣ ಎಂತ ಮದುವೆಗೆ ಬಾರದ್ದು ಹೇಳಿ ಖಂಡಿತಾ ಕೇಳುಗು ಅನು ಅಕ್ಕ°…
    ತಪ್ಪಿತ್ತನ್ನೇ…

    ಲೇಖನ ಲಾಯಕಾಯಿದು ಒಪ್ಪಣ್ಣ.
    ಮೊನ್ನೆ ಅನು ಅಕ್ಕ° ಬರದ ಲೇಖನವೂ ಈ ವಿಷಯಕ್ಕೆ ಪೂರಕವೇ ಅಲ್ಲದಾ?

  13. ಬಟ್ಯನ ಹಾಂಗೆ ಇದ್ದ ಆಳು ಎಂಗಳ ಮನೆಲೂ ಇತ್ತು.ಈಗ ಪ್ರಾಯ ಆತು.ಈಗ ಅಂತಾ ನಂಬಿಗಸ್ಥ ಕೆಲಸಗಾರರು ಸಿಕ್ಕವು.
    ಪೂಜೆ ಬಗ್ಗೆ ಸಣ್ನ ಪ್ರಾಯದವಕ್ಕೆ ಆಸ್ಥೆ ಇಲ್ಲೆ ಹೇಳುದರ ಚೆಂದಕ್ಕೆ ವಿವರಿಸಿದ ಒಪ್ಪಣ್ಣ.ಅದೇ ರೀತಿ ಯಕ್ಷಗಾನಕ್ಕೂ ಸಣ್ಣ ಪ್ರಾಯದವರ ಪ್ರೀತಿ ಕಮ್ಮಿ ಆಯಿದು.

  14. [ಬೈಕ್ಕಿನ ಹಿಂದಾಣ ಸೀಟು ವೆವಸ್ತೆ ಆತು.] – ಬೇಸಗೆ ಸುರುವಾತು ಬಾವ, ಬೈಲಿ ಆರಾದ್ದಾರು ನೇನೋ ಕಾರು ಮಣ್ಣ ಕಂಡರೆ ಕೈ ತೋರ್ಸುತ್ತು ಒಳ್ಳೆದು ಇನ್ನಾಣ ಸರ್ತಿ ಹೋಪಗ . ಅದರ್ಲಿಯೂ ಹಿಂದಾಣ ಸೀಟು ಇರ್ತು ಅದಾ.

    [ಛೆ, ಹಾಂಗೆಲ್ಲ ಹೇಳ್ಳಾಗ ಬಟ್ಯಾ – ಹೇದು ಪಾತಿಅತ್ತೆ ಒಳಂದ ಪರಂಚಿತ್ತು.] – ಬಟ್ಯಂಗೂ ತರವಾಡು ಮನಗೂ ಇಪ್ಪ ಮಾನಸಿಕ ಭಾವನಾತ್ಮಕ ಸಂಬಂಧ ಮಾತಿಲ್ಲಿ ವಿವರುಸಲೆ ಎಡಿಯ ಅನುಭವಿಸಿದವಕ್ಕೇ ಅಥವಾ ಕಣ್ಣಾರೆ ಕಂಡವಕ್ಕೇ ಅರ್ಥ ಅಕ್ಕಷ್ಟೆ.

    ನಿರೂಪಣೆ ಲಾಯಕ ಆಯ್ದು, ಶುದ್ದಿ ಮನಮುಟ್ಟಿತ್ತು, ಶುದ್ದಿ ಓದುತ್ತಾಂಗೆ ಬಟ್ಯನ ಚಿತ್ರಣವೂ ಕಣ್ಣ ಮುಂದೆ ಬಂತು ಹೇಳಿ ಇತ್ಲಾಗಿಂದ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×