Oppanna.com

ಉಪ್ನಾನಲ್ಲಿ ಉಂಡ ಉಪ್ನಾಯಿ ‘ಕಾಟುಮಾವಿನ ಮೆಡಿ’ದು!

ಬರದೋರು :   ಒಪ್ಪಣ್ಣ    on   04/05/2012    23 ಒಪ್ಪಂಗೊ

ಉಪ-ನಯನ ಹೇದರೆ ಕನ್ನಡ್ಕ ಅಡ; ಪಾಡಿಮಾವ ಒಂದೊಂದರಿ ನೆಗೆ ಮಾಡುಗು.
ಆದರೆ, ಕನ್ನಡ್ಕದ ಡಾಗುಟ್ರ ಮನೆಲೇ ಉಪ್ನಾನ ಆದರೆ ಎಂತ ಹೇಳುಸ್ಸು? 😉

ಮನ್ನೆ ಹಾಂಗೇ ಆತು – ಕಾನಾವು ಕಣ್ಣಿನ ಡಾಗುಟ್ರ ಮನೆಲಿ ಕಾನಾವಣ್ಣಂಗೆ ಉಪ್ನಾನದ ಗವುಜಿ.
ಗವುಜಿ ಆರಿಂಗೆಲ್ಲ? – ಎಲ್ಲೋರಿಂಗುದೇ;
ದೊಡಾ ಚೆಪ್ಪರ ಒಳದಿಕೆ ಮಾಡಿದ ಚೆಂದದ ಮಂಟಪಲ್ಲಿ ಕೂದ ಕಾನಾವಣ್ಣಂಗೆ; ಅವನ ಹಿಂದಂದಲೇ ಕೂದ ಡಾಗುಟ್ರುಭಾವ-ಶ್ರೀಅಕ್ಕಂಗೆ, ಒಟ್ಟೊಟ್ಟಿಂಗೇ ಕೂದ ಕಾನಾವಣ್ಣನ ಅಣ್ಣಂಗೆ, ಸೋದರಮಾವ° ಕೈರಂಗಳ ತಮ್ಮಣ್ಣಂಗೆ, ಕರೆಲಿ ಕೂದ ಹೆರಿಯೋರಿಂಗೆ, ಬಂದೋರಿಂಗೆ, ಉಡುಗೊರೆ ಕೊಡ್ತೋರಿಂಗೆ, ಆಡ್ತೋರಿಂಗೆ, ಉಣ್ತೋರಿಂಗೆ; ಎಲ್ಲೋರಿಂಗೂ.
ಜೆನವೂ ಒಳ್ಳೆತ ಸೇರಿದ್ದು. ಹೇಳಿಕೆ ಕೊಟ್ಟಲ್ಲಿಂದ ಎಲ್ಲ ಒಬ್ಬಲ್ಲದ್ರೊಬ್ಬ ಬಯಿಂದವು – ಹೇದು ಮನೆಯೋರಿಂಗೂ ಕೊಶಿ.
ಮೂಡುಕಡಲಿಲಿಪ್ಪ ಚೆನ್ನೈಭಾವನಿಂದ ತೊಡಗಿ ಪಡುಕಡಲಿನ ಅಕ್ಷರದಣ್ಣನ ಒರೆಂಗೆ;
ತೆಂಕ್ಲಾಗಿಪ್ಪ ಕಣ್ಣನೂರಿಂದ ಹಿಡುದು ಬಡಗಲಾಗಿಪ ಉಡುಪಿ ಒರೆಂಗೆ..
ಅರ್ತಿಕಜೆ ಅಜ್ಜಿಂದ ಹಿಡುದು ಪುತ್ತೂರು ಪುಟ್ಟಕ್ಕನ ಒರೆಂಗೆ;
ತೆಕ್ಕುಂಜೆ ಮಾವನಿಂದ ತೊಡಗಿ ಆಚಕರೆ ಮಾಣಿಯ ಒರೆಂಗೆ,
ಮುಳಿಯಭಾವನ ಭಾಮಿನಿಂದ ತೊಡಗಿ – ಕಾನಾವಣ್ಣನ ಭಾಮಿನಿ ಒರೆಂಗೆ – ಎಲ್ಲೊರುದೇ.
ಅವು ಮಾಂತ್ರವೋ? ಅಲ್ಲಪ್ಪಾ – ನಮ್ಮ ಬೈಲಿನ ಲೆಕ್ಕದ ಕಾರ್ಯಕ್ರಮವೂ ಇದ್ದ ಕಾರಣ ಕೆಪ್ಪಣ್ಣ, ಡೈಮಂಡು, ಬಲ್ನಾಡು, ಸುಭಗಣ್ಣ, ಅಭಾವ, ಪೆಂಗಣ್ಣ – ಎಲ್ಲೋರುದೇ ಮುನ್ನಾದಿನಂದಲೇ ಸೇರಿಗೊಂಡಿದವು.
~
ಉದೆಕಾಲದ ಮೂರ್ತ ಇದ್ದದರಿಂದ ಅಂಬೆರ್ಪಿನ ಕೆಲವು ಬೇಗವೇ ಬಂದಿಕ್ಕಿ ಹೆರಟವು; ಅತವಾ ಊಟಕ್ಕಪ್ಪಗ ಎತ್ತಿದವು.
ಆದರೆ ಪುರ್ಸೋತಿನ ಜೆನಂಗೊ ಉದೆಕಾಲಕ್ಕೇ ಬಂದು ಎರಡ್ಣೇಹಂತಿ ಊಟ ಆದ ಮತ್ತೆಯೇ ಹೆರಟದು!
ಏನುಭಾವ, ಏನು ಅತ್ತೆ– ಒಳ್ಳೆದು ಕುಂಞಿಮಾವ; ಎಲ್ಲೋರುದೇ ಅತ್ತಿತ್ತೆ ಕೇಳಿಗೊಂಬದೇ! ಆರ ಮಾತಾಡ್ಸುದು, ಆರ ಬಿಡುದು – ಎಲ್ಲೋರಿಂಗೂ ಓಡಾಟದ ಗವುಜಿ.
ಸ್ವತಃ ಕಾನಾವಣ್ಣಂಗಂತೂ – ಒಂದು ಹೊಡೆಲಿ ಬಟ್ಟಮಾವ ನೀರುಕುಡಿಶಲೆ ದಿನಿಗೆಳುದು, ಇನ್ನೊಂದು ಹೊಡೆಲಿ ಆಟ ಆಡ್ಳೆ ಭಾಮಿನಿ ದಿನಿಗೆಳುದು – ಒಟ್ಟಾರೆ ಯೇವ ಹೊಡೆಂಗೆ ಹೋವುತ್ಸು ಹೇದು ಕನುಪ್ಯೂಸು! 😉
~
ಬೈಲಿನ ಹತ್ತು ಜೆನ ಸೇರಿ ಮಾತಾಡುವಗ ಊಟದ ನೆಂಪೇ ಆಗ ಇದಾ.
ಹಾಂಗಾಗಿ ಊಟದ ಹಂತಿ ಹಾಕಲೆ ಹೊತ್ತು ಹೋದ್ಸೂ ಗೊಂತಾಗದ್ದೆ, ಮತ್ತೆ ಕಾನಾವುದೊಡ್ಡಬಾವ ನೆಂಪುಮಾಡೇಕಾಗಿ ಬಂತು! 😉
ಉಂಬಗ ರಜ ಹೊತ್ತಾತು – ಹೇದು ಕೆಲವು ಜೆನ ಹೇದರೂ, ಅದು ದೊಡ್ಡ ಸಮಸ್ಯೆ ಆರಿಂಗೂ ಆಗಿ ಬಿದ್ದಿದಿಲ್ಲೆ ಹೇಳ್ತದರ ಎಲ್ಲೋರುದೇ ಒಪ್ಪುಗು!
ಅದಿರಳಿ; ಊಟ ಸುರು ಆತು.

ವೇಣಿಅಕ್ಕ° ಈ ಒರಿಶ ಸಂಪಾಲುಸಿದ ಮೆಡಿ; ಜೀರಕ್ಕಿ ಮೆಡಿಯೋ ಕಾಣ್ತು! (ರುಚಿ ನೋಡ್ಳೆ ತಿಂದೇ ಆಯೆಕ್ಕಟ್ಟೆ!!)

ಊಟಕ್ಷಿಣೆ ಸಿಕ್ಕೇಕಾರೆ ಮೂರ್ನೇ ಹಂತಿಗೆ ಕೂದರಾಗ, ಅದರಿಂದ ಮದಲೇ ಕೂದುಗೊಳೇಕು!
ಆದರೆ ಹಂತಿ ಹಾಕಲಪ್ಪಗ ಒಂದರಿ ಅಡಿಗೆಕೊಟ್ಟಗ್ಗೆ ಹೋಗಿ ಉದಯಣ್ಣನ ಮಾತಾಡ್ಸಿ, ಒಂದು ಗ್ಳಾಸು ಮಜ್ಜಿಗೆನೀರು ಕುಡುದು ಬಂದು ನೋಡುವಗ – ಸುರೂವಾಣ ಹಂತಿ ಭರ್ತಿ ಕೂದು ಆಯಿದು; ಜೆನ ತುಂಬಿ ಸಮಲುತ್ತು. ಇನ್ನು ನಾವೆಲ್ಲಿಗೆ?
ಸರಿ, ಎರಡ್ಣೇ ಹಂತಿಗೆ ಕೂಪೊ° ಹೇದು ನಿಗಂಟು ಮಾಡಿತ್ತು. ಹೇಂಗೂ, ಬೈಲ ಲೆಕ್ಕಲ್ಲಿ ಹಸ್ತೋದಕ ಹಂತಿಲಿ ಚೆನ್ನೈಭಾವ, ಮಿಂಚಿನಡ್ಕಬಾವ ಇತ್ಯಾದಿ ಘಟಾನುಘಟಿಗೊ ಇತ್ತಿದ್ದವು, ಅವಕ್ಕೆ ಊಟಕ್ಷಿಣೆ ಸಿಕ್ಕಿಕ್ಕು! 😉
ಅವರ ಊಟ ಮುಗಾತು; ನಾವು ಎರಡ್ಣೇ ಹಂತಿ ಹಿಡುದತ್ತು; ಯೇನಂಕೂಡ್ಳಣ್ಣನ ಒಟ್ಟಿಂಗೆ.
ಕೆಮರ ಬಿಟ್ಟು ಹಂತಿಲಿ ಕೂಪದೇ ಅಪುರೂಪ ಈ ಯೇನಂಕೂಡ್ಳಣ್ಣ, ಅವನ ಒಟ್ಟಿಂಗೆ ಹಂತಿಲಿ ಕೂಪಲೆ ಸಿಕ್ಕಿದ್ದುದೇ ಪೂರ್ವ ಜೆಲ್ಮದ ಸುಕೃತವೇ ಸರಿ; ಅಪ್ಪೋ?
~
ಸುದರಿಕೆ ಭಾವಯ್ಯಂದ್ರು ಬಳುಸುದು ಹೆಚ್ಚೋ – ನಾವು ಉಂಬದು ಹೆಚ್ಚೋ? ಪ್ರಮಾಣ ನೋಡಿರೆ ಎರಡೂ ಸರಿಸರಿ ಇಕ್ಕಿದಾ; ಏಳುವಗ ಬಾಳೆಕಾಲಿ ಆವುತ್ತು! 😉
ಬಳುಸಿದ್ದರ ಪೂರ ಉಂಡದೇ – ಬದನೆ ಬೋಳು ಒರೆಂಗೆ.
ತುಪ್ಪಶನ (ಗೀರೈಸು) ಬಪ್ಪಲೆ ಸುರು ಅಪ್ಪಗ ಹತ್ತರೆ ಕೂದ ಯೇನಂಕೂಡ್ಳಣ್ಣ ಕೇಳಿದ° –  “ಪ್ಚ! ಉಪ್ಪಿನಕಾಯಿ ಭಾರೀ ಲಾಯ್ಕಿದ್ದು ಒಪ್ಪಣ್ಣೋ, ನೋಡಿದೆಯೋ..?”  – ಹೇದು!

ಯೆತಾರ್ತಕ್ಕೂ ನಾವು ಜೆಂಬ್ರಲ್ಲಿ ಉಪ್ನಾಯಿ ಉಂಬದು ಹದಾಕೆ.
ಮುಂಡಿಯೋ, ಸೌತ್ತೆಯೋ ಮಣ್ಣ ಇರ್ತು; ಬಾಳೆ ಕರೆಂಗೆ ಬಳುಸುತ್ತವು – ಕರೇಲೇ ಇರ್ತು; ಅದರಷ್ಟಕೇ..
ಇಂದೂ ಹಾಂಗೇ, ತಪಲೆಲಿ ತುಂಬುಸಿದ್ದ ಉಪ್ಪಿನಾಯಿಯ ಹಲ್ಲಿನಡಾಗುಟ್ರಕ್ಕ ಬಳುಸಿಂಡು ಬಪ್ಪಗ ಒಪ್ಪಣ್ಣನತ್ರೆ “ಏನು” ಕೇಳಿದ್ದವು; ನೆಂಪಿದ್ದು.
ಅವರತ್ರೆ “ಒಳ್ಳೆದು ಗೀತಕ್ಕ” ಹೇಳ್ತರ ಎಡಕ್ಕಿಲಿ ಉಪ್ಪಿನಾಯಿ ಗಮನುಸಲೆ ಬಿಟ್ಟೇ ಹೋಗಿತ್ತು!
ಯೇನಂಕೂಡಲು ಅಣ್ಣ ಹೇಳಿಅಪ್ಪದ್ದೇ, ಒಂದರಿ ನೋಡಿಕ್ಕುವೊ° – ಹೇದು ತೋರುಬೆರಳಿಲಿ ಹೊರಡಿಮುಟ್ಟಿ, ನಾಲಗೆಗೆ ರುಚಿ ತೋರ್ಸಿದೆ – ವಾಹ್!! ಮೆಡಿ ಉಪ್ಪಿನಕಾಯಿ! ಜೀರಕ್ಕಿ ಪರಿಮ್ಮಳದ ಹೊರಡಿ!!
ಈ ಸೆಕಗೆ ನವಗೆ ತುಪ್ಪಶನ ಕರಗ, ಅದರ ಬದಲು ಹೊಡಿ ಅಶನಕ್ಕೆ ಮೆಡಿ ಉಪ್ಪಿನಾಯಿ ಸೇರ್ಸಿ ಉಂಡರೆ ಸಾಕು – ಹೇದು ನಿಗಂಟು ಮಾಡಿ ಊಟ ಮುಂದುವರ್ಸಿತ್ತು.
~

ಹದಾ ಬೆಳದ ಕಾಟುಮಾವಿನ ಮೆಡಿ ಉಪ್ಪಿನಾಯಿ ಹಾಕಿದ್ಸರ – ಸಣ್ಣಸ..ಣ್ಣಕೆ ತುಂಡುಸಿದ್ದು.
ತುಂಡುಸಿದ್ದರ ಕಂಡ್ರೆ ಕೆತ್ತೆಯೋ, ಸೌತ್ತೆ ಹೊಡಿಯೋ, ಮುಂಡಿ ಕಡಿಯೋ – ಗ್ರೇಶೇಕು; ಅದೇವದೂ ಅಲ್ಲ – ಮಾವಿನ ಮೆಡಿಯೇ!
ಹೊರಡಿಯೇ ಪರಿಮ್ಮಳ, ತುಂಡು ಇನ್ನೂ ಪರಿಮ್ಮಳ!
ಪರಿಮ್ಮಳ ಮಾಂತ್ರ ಅಲ್ಲ, ಸೊನೆಯ ಒಟ್ಟಿಂಗೆ ಗರ್ಕನೆ ತುಂಡಪ್ಪ- ಆ ಕರ್ಕು ಒಳುದ್ದಿದಾ!

“ಅಪ್ಪಾತೋ – ಮೆಡಿ ಭಾರೀ ಪಷ್ಟಿದ್ದು” – ಹೇದೆ ಯೇನಂಕೂಡ್ಳಣ್ಣನ ಕೆಮಿಲಿ.
ಎಲ್ಲೋರ ಬಾಳೆಲಿ ತುಪ್ಪಶನ ಮುಗಿವಗ ಒಪ್ಪಣ್ಣನ ಬಾಳೆಲಿ ಉಪ್ಪಿನಾಯಿ ಮುಗಾತು. ಇನ್ನೊಂದರಿ ತರೆಕ್ಕಾರೆ ಹಲ್ಲಿನಡಾಗುಟ್ರೇ ಆಯೇಕಟ್ಟೆಯೊ ಹೇಂಗೆ! ಉಮ್ಮಪ್ಪ!

ಗುಜ್ಜೆಮೇಲಾರ, ಪಾಯಿಸ, ಹೋಳಿಗೆ ಎಡೆಲಿ ಉಪ್ಪಿನಕಾಯಿಗೆ ದಾರಿಯೇ ಸಿಕ್ಕಿದ್ದಿಲ್ಲೆ ತೋರ್ತು; ಮತ್ತೆ ಬಂದದು ಮಜ್ಜಿಗ್ಗನ್ನದ ಒಟ್ಟಿಂಗೇ.  ನಾವು ಬಿಟ್ಟಿದಿಲ್ಲೆ, ಎಂಟು ತುಂಡು ಹಾಕಿಂಡು ಮಜ್ಜಿಗೆಲಿ ಉಂಡಿಕ್ಕಿ – ಭೋಜನಾಂತೇ – ಹೇದು ಎಲ್ಲೋರು ಹೇಳಿದ ಮೇಗೆಯೇ ಎದ್ದದು.
~
ಬಲ್ನಾಡಜ್ಜ° ಸುರೂವಾಣ ಹಂತಿಗೆ ಉಂಡಿಕ್ಕಿ ಕುರ್ಶಿಲಿ ಕೂದುಗೊಂಡ್ರೆ, ಎರಡ್ಣೇ ಹಂತಿ ಎದ್ದ ಮತ್ತೆಯೇ ಹೆರಡುಗಷ್ಟೆ; ಅದು ಕ್ರಮ.
ಅನುಕೂಲ ಅಪ್ಪಗ ನಮ್ಮದೂ ಹಾಂಗೇ! 😉
ಅಲ್ಲದ್ದರೂ – ಊಟ ಆದ ಮತ್ತೆ ಎಂತ ಕೆಲಸ? ಕರಗುಸುದು ಅಲ್ಲದೋ. ಮನುಗಿದಲ್ಲೇ, ಕೂದಲ್ಲೇ ಕರಗುಸುದು ಒಪ್ಪಣ್ಣಂಗೆ ಹೆಚ್ಚು ಅಭ್ಯಾಸ!  😉
ಗೊಂಟಪೇನಿನ ಬುಡಲ್ಲಿ ಮಡಗಿದ ಕೆಂಪು ಬಣ್ಣದ ಕುರ್ಶಿಲಿ ಮೈನೀಡಿ ಕೂದುಗೊಂಡೆ, ಮೂರ್ನೇ ಹಂತಿ ಆಗಿ ಏಳುವನ್ನಾರವೂ.
ಮೂರ್ನೇ ಹಂತಿಲಿ ಊಟ ಆಗಿ ಕೈರಂಗಳತಮ್ಮಣ್ಣ ಎಲೆಯಿಂಬಲೆ ತಟ್ಟೆಹುಡ್ಕಿಂಡುಬಪ್ಪಗಳೇ ನವಗೆ ಎಚ್ಚರಿಗೆ ಆದ್ಸು!
~
ಕೈರಂಗಳ ತಮ್ಮಣ್ಣನ ನಿಂಗೊಗೆ ಗುರ್ತ ಇದ್ದಲ್ಲದೋ?
ಕೈರಂಗಳಲ್ಲಿ ಮನೆ; ಶ್ರೀಅಕ್ಕಂಗೆ ತಮ್ಮ, ನವಗೆ ಅಣ್ಣ – ಹಾಂಗಾಗಿ ಅವರ ಕೈರಂಗಳತಮ್ಮಣ್ಣ ಹೇಳುದು ಎಲ್ಲೋರುದೇ.
ಅವಕ್ಕೆ ಬೈಲಿನ ಸರೀ ಗುರ್ತ ಇದ್ದು; ಶ್ರೀಅಕ್ಕನ ತಮ್ಮನೇ ಅಲ್ಲದೋ! ಹಾಂಗಾಗಿ ಒಪ್ಪಣ್ಣಂಗೂ ಒಂದು ಸಲುಗೆ.
ಪೇನಿನ ಬುಡಲ್ಲೇ ಎಲೆಯಿಂಬಲೆ ಕೂದ ಕಾರಣ ಮಾತಾಡ್ಳೂ ಸುಲಬ ಆತು.
ಊಟ ಲಾಯಿಕಾಯಿದು; ಅಲ್ಲದೋ – ಹೇದು ಮಾತು ಸುರು ಆತು.
ಏವ್.. ಅಪ್ಪು – ಹೇದು ಒಂದು ತೇಗು ಬಂತು ಒಪ್ಪಣ್ಣಂಗೆ; ತೇಗಿಲಿಯೂ ಮೆಡಿ ಉಪ್ಪಿನಕಾಯಿಯ ಪರಿಮ್ಮಳವೇ! 😉

ಊಟಕ್ಕಿದ್ದಿದ್ದ ಉಪ್ಪಿನಕಾಯಿ ಭಾರೀ ಪಷ್ಟಿತ್ತು ಅಣ್ಣ – ಹೇಳಿದೆ, ತೆಗದ ಬಾಯಿಗೆ!
“ಅಪ್ಪಪ್ಪು, ಉಪ್ಪಿನಕಾಯಿ ಅಮ್ಮನ ಪಾಕ” ಹೇಳಿದವು ಹುಬ್ಬು ಹಾರ್ಸಿಂಡು!
ಅಪ್ಪೋ – ಕೈರಂಗಳ ದೊಡ್ಡಮ್ಮನ ಪಾಕದ ಉಪ್ಪಿನಾಯಿಯೋ ಇದು! ಕೇಳಿದೆ ಪುನಾ.
ಅಪ್ಪಡ!
ಲೋಕಾಭಿರಾಮ ಇಪ್ಪ ಮಾತುಕತೆ ಉಪ್ಪಿನಕಾಯಿಯ ಬಗ್ಗೆಯೇ ತಿರುಗಿತ್ತು.
~
ಕೈರಂಗಳ ದೊಡ್ಡಮ್ಮ ಉಪ್ಪಿನಕಾಯಿ ಹಾಕಿರೆ ನಾಕೊರಿಶ ಒಳಿತ್ತ ಹಾಂಗೇ ಹಾಕುಗಡ.
ಅದರ ಗುಟ್ಟು ಎಂತರ? ಕೇಳಿದೆ, ಪೂರ್ತಿ ಅರಡಿಯದ್ದರೂ – ಗೊಂತಿಪ್ಪಷ್ಟು ಹೇಳಿದವು ಅಣ್ಣ.

ಹದಾ ಬೆಳದ ಮೆಡಿಗಳ ತಂದು ಕೊಟ್ಟರೆ ಉಪ್ಪಿಲಿ ಹಾಕಿ ಹಸಿ ಕರುಶಿ, ತಣಿಲಿಲಿ ಹರಗಿ ಮಡಗಿ, ಹೊರಡಿ ಬೆರುಸಿ ಬರಣಿಲಿ ಮಡಗ್ಗು. ಬರಣಿಗಳೂ ಹಾಂಗೇ – ಗೆನಾ ಉಪ್ಪಿನಾಯಿಯ ಹಿಂದೆ, ಅಕೇರಿಗೆ ಸಿಕ್ಕುತ್ತ ಹಾಂಗೆ ಮಡಗ್ಗು, ಬೇಗ ಮುಗುಶುತ್ತದರ ಎದೂರೆ ಮಡಗ್ಗು.
ಯೇವದು ಎಲ್ಲಿದ್ದರೆಂತ, ಮಕ್ಕೊಗೆ ಕೊದಿ ಆತು ಹೇದು ಸೀತ ಹೋಗಿ ಬರಣಿಗೆ ಕೈ ಹಾಕುತ್ತ ಹಾಂಗಿಲ್ಲೆ; ಬೇಕಾದ ಹಾಂಗೆ ರಜರಜವೇ ತೆಗದು ಕೊಡುಗಷ್ಟೆ. ಅಷ್ಟು ಶ್ರದ್ಧೆಯ ಕಾರ್ಯ ಅದು.
ಶ್ರದ್ಧೆ ಉಪ್ಪಿನಾಯಿ ಹಾಕುವಗ ಮಾಂತ್ರ ಅಲ್ಲ, ಅದು ಮುಗಿವನ್ನಾರವೂ.
ಬರಣಿಗೊ ಅಟ್ಟದೊಳಂಗೆ ಹೋದರೆ ಮತ್ತೆ ಅವ್ವೇ ತೆಗದು ಕೊಡುವನ್ನಾರ ಅದು ಹೆರಬಾರ!
ಉಪ್ಪಿನಕಾಯಿ ಹಾಕುತ್ತ ಸಮೆಯಲ್ಲಿ ಆ ಕೋಣಗೇ ಮಕ್ಕೊ ಹೋವುತ್ತ ಹಾಂಗಿಲ್ಲೆ, ನೀರಪಸೆ ರಟ್ಟುಸಿ ಉಪ್ಪಿನಾಯಿ ಹಾಳುಮಾಡುಗು – ಹೇಳ್ತ ಲೆಕ್ಕಲ್ಲಿ!
~

ಕಾನಾವಣ್ಣನ ಉಪ್ನಾನದ ದಿನವ ಜೋಯಿಶಪ್ಪಚ್ಚಿ ನಿಗಂಟು ಮಾಡುವಗಳೇ, ಆ ಜೆಂಬ್ರಕ್ಕೆ ಉಪ್ಪಿನಾಯಿ ಬರಣಿಯ ದೊಡ್ಡಮ್ಮ ನಿಗಂಟು ಮಾಡಿದ್ದವಡ; ಅಣ್ಣ ನೆಗೆಮಾಡಿಂಡು ಹೇಳಿದವು!
ಉಪ್ನಾನದ ಏರ್ಪಾಡಿಂಗೆ ಅಲ್ಲಿಂದ ಬಪ್ಪಗ ವೇನಿನ ಎದುರಾಣ ಸೀಟಿಲಿ ಬರಣಿಯನ್ನೇ ಮಡಿಕ್ಕೊಂಡು ಬಂದದಡ.
ಮುನ್ನಾದಿನ ಬಂದಪ್ಪದ್ದೇ ಬರಣಿಂದ ಮೆಡಿಯ ತೆಗೆಶಿ, ಅಡಿಗೆ ಉದಯಣ್ಣನ ಕೈಲಿ ಮನಾರಕ್ಕೆ ಸಣ್ಣಸಣ್ಣಕೆ ತುಂಡುಸಿ ತಪಲೆ, ಪಾತ್ರೆಗೊಕ್ಕೆ ಹಾಕಿ ಮಡಗಿಸಿದ್ದದಡ. ತುಂಡುಸಿದ್ದಂತೂ – ಹಲ್ಲಿನ ಎಡೆಲಿ ಸಿಕ್ಕುತ್ತಷ್ಟೇ ಸಣ್ಣ ಆಯಿದು! 😉
ಅದನ್ನೇ ಇದಾ- ಮನ್ನೆ ಹಲ್ಲಿನಡಾಗುಟ್ರು ಬಳುಸಿದ್ದು.
~
ಉಪ್ನಾನಂದ ಹೆರಟು ಮನಗೆ ಬಂದು ಎರಡು ದಿನ ಆದರೂ ಉಪ್ಪಿನಾಯಿ ಪರಿಮ್ಮಳ ಕೈಂದ ಹೋಗಿತ್ತಿಲ್ಲೆ.
ಕೈಂದ ಹೋದರೂ, ಸ್ಮೃತಿಂದ ಹೋಯಿದಿಲ್ಲೆ ಇದಾ! 😉
ನೆಡಕ್ಕೊಂಡು ಮನಗೆ ಬಪ್ಪಗ ಒಂದು ಪಿರ್ಕು ತಲಗೆ ಬಂತು;
ಕೈರಂಗಳ ದೊಡ್ಡಮ್ಮ ಉಪ್ಪಿನಾಯಿ ಹಾಕಿ ಮಡಗಿದ ಭರಣಿಯ ಹೊತ್ತರೆಂತ?
ಹೊರುದೋ, ಯೇವತ್ತು?! ಶಿವರಾತ್ರಿ ದಿನ ಆದರೆ ಒಳ್ಳೆದು – ಸಿಕ್ಕಿ ಬಿದ್ದರೂ ಮಾಪು ಇದ್ದು! 😉
ಛೇ, ಅದೆಲ್ಲ ನಮ್ಮಂದ ಅಪ್ಪ ಹೋಪದಲ್ಲ, ಕಳ್ಳೇಕಾರೆ ಕಡ್ಡಿದೂಮನ ಹಾಂಗೆ ಇರೆಕಡ – ಹೇಳಿ ಇನ್ನೊಂದರಿ ಅನುಸಿತ್ತು.
ಅದಿರಳಿ.
~

ನಿನ್ನೆಲ್ಲಮೊನ್ನೆ ಆಚಮನೆ ದೊಡ್ಡಪ್ಪನಲ್ಲಿಗೆ ಪೇಪರು ಓದಲೆ ಹೋದಿಪ್ಪಗಳೂ ಅದೇ ಶುದ್ದಿ ನೆಂಪಾಗಿತ್ತು.
ಪೇಪರು ಓದಿಕ್ಕಿ ಮಾತಾಡುವಗ – ಕಾನಾವುಪ್ನಾನ ಗವುಜಿಯೋ ; ಜೆನ ಎಷ್ಟಕ್ಕು; ಸೀವು ಎಂತರ – ಕೇಳಿದವು ದೊಡ್ಡಪ್ಪ.
ಎಲ್ಲ ಹೇಳಿಕ್ಕಿ ಉಪ್ಪಿನಾಯಿ ಭಾರೀ ಲಾಯಿಕಿತ್ತು ಹೇಳಿದೆ.
ಮೆಡಿ ಉಪ್ಪಿನಕಾಯಿಯ ಹಿಂದೆ ಇಪ್ಪ ಹಲವು ಶುದ್ದಿಗಳ ಆಚಮನೆ ದೊಡ್ಡಪ್ಪ ಮಾತಾಡಿದವು.
ನಾವುದೇ ಅದನ್ನೇ ಮಾತಾಡುವೊ°.
~

ತೋಟಲ್ಲಿ ಅಡಕ್ಕೆ ಆವುತ್ಸು ಲೆಕ್ಕ ಇಲ್ಲೆ, ಬೇಸಗೆಲಿ ಮಾವಿನ ಮೆಡಿ ಸಂಪಾಲುಸದ್ದರೆ ಅವ ಬರೇ ಬೂಸು ಹೇದು ಲೆಕ್ಕ ಅಡ; ಮನೆ ಹೆಮ್ಮಕ್ಕಳ ಲೆಕ್ಕಲ್ಲಿ. ಹಾಂಗಾಗಿ,  ಚಳಿಗಾಲ ಹೋಪಲೆ ಪುರ್ಸೊತ್ತಿಲ್ಲೆ, ನಮ್ಮೋರಿಂಗೆ ಮಾವಿನ ಮರ ನೋಡ್ತ ಕೆಲಸ ಅಡ, ದೊಡ್ಡಪ್ಪ ನೆಗೆಮಾಡಿಂಡೇ ಶುದ್ದಿ ಸುರುಮಾಡಿದವು.
ದೊಡ್ಡಪ್ಪ ಅವರ ಅನುಭವವನ್ನೂ ಹೇಳ್ತವೋ ಏನೋ; ಕೇಳುಲೆ ನವಗೆ ಧೈರ್ಯ ಸಾಲ ಇದಾ! 😉

ಯೇವ ಮರಲ್ಲಿ ಎಷ್ಟು ಹೂಗು ಹೋಯಿದು, ಯೇವದರ್ಲಿ ಹೇಂಗೆ ಮೆಡಿ – ಹೇಳಿಗೊಂಡು ದಾರಿಲಿ ಹೋಪಗ ನೋಡಿಂಬದೇ ಕೆಲಸ. ಅಪುರೂಪದ ಭಾವಯ್ಯಂದ್ರು ಅತ್ತಿತ್ತೆ ಸಿಕ್ಕಿರೆ ಅಂಬಗಳೂ ಕೇಳುದೇ – ಈ ಸರ್ತಿ ಮಾವಿನಮರ ಹೂಗೋಯಿದೋ? ರಜ ಮೆಡಿ ಸಿಕ್ಕುಗೋ – ಹೇದು.

~
ಎಲ್ಲ ಮರದ ಮೆಡಿಯೂ ಉಪ್ಪಿನಕಾಯಿಗೆ ಆಗ; ಕೆಲವು ಒಳ್ಳೆ ಜಾತಿಯ ಮೆಡಿಗಳೇ ಆಯೇಕು.
ಒಳ್ಳೆ ಜಾತಿ? ಮಾವಿನ ಮೆಡಿಯೇ “ಕಾಟು” ಹೇಳಿದ ಮೇಗೆ ಅದರ್ಲಿ ಒಳ್ಳೆ ಜಾತಿ ಯೇವದಪ್ಪಾ – ಹೇದು ಸಂಶಯ ಬಂತೊ!
ಕಾಟುಮಾವಿನ ಮರಲ್ಲಿಯೂ ಹಲವು ವಿಭಾಗಂಗೊ ಇದ್ದು.
ಜರ್ಸಿ ದನಗೊ ಆದರೆ ಒಂದೇ ನಮುನೆ – ಕಶಿ ಮೆಡಿಗಳೂ ಒಂದೇ ನಮುನೆ; ಆದರೆ ಕಾಟುಮಾವಿನ ಮೆಡಿಲಿ ಹಲವು ವೈವಿಧ್ಯಂಗೊ; ಊರಜಾತಿ ದನಗಳ ಹಾಂಗೆ.
ಒಂದೊಂದು ಪ್ರಬೇಧದ್ದು ಒಂದೊಂದು ವೈಶಿಷ್ಠ್ಯ, ಒಂದೊಂದು ಒಂದೊಂದಕ್ಕೆ ಕೊಶಿ!
~

ಕಾಟು ಮಾವಿಲಿಪ್ಪ ಹಲವು ಜಾತಿಗಳ ದೊಡ್ಡಪ್ಪ ಹೇಳಿಂಡು ಹೋದವು.
ಸುರೂವಾಣದ್ದು ಜೀರಕ್ಕಿಮೆಡಿ.
ಎಳತ್ತು ಮೆಡಿ ಇಪ್ಪಗಳೇ ಬಯಂಕರ ಪರಿಮ್ಮಳ; ಅಷ್ಟೇ ಸೊನೆಪ್ಪ.
ಅರುಶಿನ ಬಣ್ಣದ ಮೆಡಿಗಳ ಕೊಯಿದು ಹಸಿಕರುಶಿ ಉಪ್ಪಿನಾಯಿ ಹಾಕಿರೆ ಎಷ್ಟು ಸಮಯ ಆದರೂ ಅದರ ಬಣ್ಣ ಹಾಳಾಗ.
ಅದಷ್ಟೇ ಅಲ್ಲದ್ದೆ, ಅದರ ಹೆಸರೇ ಹೇಳಿದ ಹಾಂಗೆ – ಜೀರಕ್ಕಿ ಪರಿಮ್ಮಳ. ಮೆಡಿಂದಾಗಿ ಉಪ್ಪಿನಕಾಯಿ ಹೊರಡಿಗೂ ಇದೇ ಪರಿಮ್ಮಳ! ಉಪ್ಪಿನಕಾಯಿ ಹಾಕಲೆ ಮೊದಾಲಾಣ ಪ್ರಾಶಸ್ತ್ಯ ಜೀರಕ್ಕಿ / ಜೀರಿಗೆಮಾವಿನ ಮೆಡಿಗೆ.
ಮಾಷ್ಟ್ರುಮಾವನ ಹಟ್ಟಿಯತ್ತರೆ ಒಂದು ಮರ ಇದ್ದು, ಜೀರಕ್ಕಿಮಾವಿಂದು; ಒರಿಶ ಬಿಟ್ಟು ಒರಿಶ ಹೂಗು ಹೋಪದು; ಮನಸ್ಸು ಬಂದ ಒರಿಶ ಮೆಡಿ ಅಪ್ಪದು. ಆದರೆ, ಮೆಡಿ ಮಾಂತ್ರ ಒಳ್ಳೆತ ಪರಿಮ್ಮಳದ್ದು!

ಮೆಣಸು / ಮುಣ್ಚಿಕುಕ್ಕು ಹೇದರೆ ಇನ್ನೊಂದು ಜಾತಿ.
ಬಟ್ಯನ ದರ್ಖಾಸಿಲಿ ಮೇಗೆ ಗುಡ್ಡೆಲಿ ಒಂದು ಮರ ಇದ್ದಲ್ಲದೋ – ಮುಣ್ಚಿಕುಕ್ಕು ಅಡ ಅದು; ಬಟ್ಯ° ಹೇಳುಗು.
ಜೀರಿಗೆಮಾವಿನಷ್ಟು ಬೆಳಿ ಬಣ್ಣ ಅಲ್ಲ, ರಜ ಹಸುರು ಹಸುರು ಬಣ್ಣದ್ದು. ಜೀರಿಗೆಯ ನಮುನೆ ಘಮ್ಮನೆ ಪರಿಮ್ಮಳ ಇಲ್ಲದ್ದರೂ, ಇದೊಂದು ಬೇರೆ ನಮುನೆ ಪರಿಮ್ಮಳ.
ಬಟ್ಯಂಗೆ ಇದು ’ಮೆಣಸಿನ’ ಪರಿಮ್ಮಳ ಬತ್ತಾಡ; ಅದಕ್ಕೇ ಇದರ ಮುಣ್ಚಿಕುಕ್ಕು ಹೇಳ್ತದು.
ಮಾವಿನ ಪರಿಮ್ಮಳದ ಶುಂಟಿಗೆಂಡೆಗೆ ಕುಕ್ಕುಶುಂಟಿ ಹೇಳುದು ನೆಂಪಾತು ಒಪ್ಪಣ್ಣಂಗೆ!
~
ಎಲ್ಲ ಮೆಡಿ ಮನಾರದ್ದು ಗ್ರೇಶಿಕ್ಕೆಡಿ; ಕೆಲವು ಬರೇ ಬೂಸುದೇ ಇರ್ತು.
ಪಾರೆ ಮಗುಮಾವನ ಜಾಗೆಲಿ ಒಂದು ಮರ ಇದ್ದು; ಎಷ್ಟೂ ಮೆಡಿ ಅಕ್ಕು, ಆದರೆ ಬರ್ಕತ್ತಿಲ್ಲೆ.
ಪಾತಿ ಅತ್ತೆಗಂತೂ ಆ ಮೆಡಿಯ ಸುದ್ದಿ ತೆಗದರೆ ಪಿಸುರು ಬಕ್ಕು. ಎಂತಗೆ?
ಮೆಡಿ ಹಾಕುವಗ ಹಸುರು ಬಣ್ಣ ಇದ್ದರೂ, ರಜ ಸಮೆಯಲ್ಲಿ ಕಪ್ಪಾತು.
ಒಂದೊರಿಶ ಕಳುದು ತೆಗದರೆ ಮತ್ತೆ ಕೇಳುದೇ ಬೇಡ – ಎಲ್ಲಾ ಮೆಡಿಗೊ ಕಪ್ಪು ಕಪ್ಪು! ರುಚಿ ಸಾದಾರ್ಣ ಇದ್ದರೂ – ನೋಟ ಇಲ್ಲೆ ಇದಾ, ಹಾಂಗಾಗಿ ಇದು ಅಕೇರಿಯಾಣ ಪ್ರಾಶಸ್ತ್ಯ.
ಪಾತಿ ಅತ್ತೆ ಇದರ ಪಿಸುರಿಲಿ ಶಾಲಿಗ್ರಾಮ ಜಾತಿದು – ಹೇಳುಗು!
~
ಬೈಲಕರೆ ಕಟ್ಟಪುಣಿಲೇ ಹೋಗಿ ಅಪ್ಪಗ ಸುಂದರಿಯ ಮನೆ ಸಿಕ್ಕುತ್ತಲ್ಲದೋ – ಅಲ್ಲೇ ಬಲತ್ತಿಂಗೆ ದೊಡಾ ಮರ ಇದ್ದು.
ಆ ಮರದ ಮೆಡಿಗೊ ಬೇರೆ ನಮುನೆ; ಉರುಟುರುಟು –  ಹಣ್ಣಾದ ಮತ್ತೆ ಮೆಸ್ತಂಗೆಮೆಸ್ತಂಗೆ ಆಗಿ ಗುಳ ಜಾಸ್ತಿ.
ಮಾಂಬ್ಳಕ್ಕೆಯೋ, ಸಾಸಮೆಗೋ, ಗೊಜ್ಜಿಗೋ ಮಣ್ಣ ಭಾರೀ ಲಾಯಿಕು ಅದು.
ಬೆಲ್ಲನೀರು ದಿನಾಗುಳೂ ಎರೆತ್ತೋ ಏನೋ ಸುಂದರಿ – ಸೀವುಸೀವು ಮೆಡಿ ಇದರದ್ದು.
ಆದರೆಂತಾತು, ಉಪ್ಪಿನಾಯಿ ಹಾಕಲೆ ಪ್ರೇಜನ ಇಲ್ಲೆ. ಎಂತಗೆ?
– ಉಪ್ಪಿಲಿ ಹಾಕಿದ ಮೆಡಿ ಚಿರುಟೆಕ್ಕಲ್ಲದೋ – ಇದು ಚಿರುಟುತ್ತಿಲ್ಲೆ, ಮೆಡಿಯೇ ಉಪ್ಪುನೀರು ಎಳದು ಉಬ್ಬಿ ನಿಲ್ಲುತ್ತಡ!!
ಇದರ ಉಪ್ಪಿನಾಯಿ ಹಾಕಿರೆ ದೊಡ್ಡದೊಡ್ಡ ಮೆಡಿಗೊ – ನೆಕ್ಕರೆ ಮೆಡಿಯ ಹಾಂಗೆ ಕಾಣ್ತು! ಅದಕ್ಕೇ ಇದರ ಬಸುಂಬ ಹೇಳುಗು.
ಹಾಂಗಾಗಿ, ಈ ಮರದ ಮೆಡಿಯ ಆರೂ ಕೊಯಿತ್ತವಿಲ್ಲೆ, ಬಿದ್ದದರ ಹೆರ್ಕಿ ಮಾಂಬಳವೋ ಮಣ್ಣ ಎರಗು ಪಾತಿಅತ್ತೆ.
~
ದೊಡ್ಡಪ್ಪಂಗೆ ಇನ್ನೂ ವೈವಿಧ್ಯಂಗೊ ಗೊಂತಿದ್ದು; ಒಪ್ಪಣ್ಣಂಗೆ ಈಗ ಮರದತ್ತು ಅಷ್ಟೇ!
ಬರೇ ಕಾಟುಮಾವಿನ ಮೆಡಿ ಆದರೂ – ಅದರ್ಲಿ ಎಷ್ಟು ಜಾತಿಗೊ; ಎಷ್ಟು ವೈವಿಧ್ಯಂಗೊ! ಅದದಕ್ಕೆ ಅದರದ್ದೇ ವೈಶಿಷ್ಠ್ಯ.

ಮದಲಿಂಗೆ – ಪುತ್ತೂರಿಂದ ಹೋಪಗ  ಮಾರ್ಗದ ಕರೆಲಿ ನೂರಾರು ಕಾಟುಮಾವಿನ ಮರಂಗ ಇದ್ದತ್ತು; ಮಾರ್ಗಕ್ಕೆ ತಂಪು ಕೊಟ್ಟೊಂಡು. ಮೆಡಿ ಸಮೆಯಲ್ಲಿ ಅದರ ಕೊಯಿದು ಅಲ್ಲೇ ಬುಡಲ್ಲಿ ಮಾರುಗು; ಕೆಲವು ಮೆಡಿ ಲಾಯಿಕದ್ದು ಇದ್ದೊಂಡಿತ್ತು.
ಮೊನ್ನೆ ಕಾನಾವಣ್ಣನ ಉಪ್ನಾನಕ್ಕೆ ಹೋಪಗ ನೋಡುವಗ – ಇದೆಲ್ಲವನ್ನೂ ಕಡುದು ಮಾರ್ಗ ಬೋಳುಬೋಳಾದ್ಸು ಕಂಡತ್ತು; ಮಾರ್ಗ ಅಗಲ ಮಾಡುದಡ ಇವು! 🙁
ಇನ್ನು ಬಪ್ಪೊರಿಶಂದ ಮೆಡಿಗೆ ಎಂತ ಮಾಡುದು!
ಛೇ! ಅದರ್ಲಿ ಎಷ್ಟು ಜೀರಕ್ಕಿ ಮಾವು ಇತ್ತೋ, ಎಷ್ಟು ಮುಣ್ಚಿಕುಕ್ಕು ಇತ್ತೋ, ಯೇವದೆಲ್ಲ ಮಾಂಬಳಕ್ಕಪ್ಪ ಬಸುಂಬ ಜಾತಿಗಳೋ – ಉಮ್ಮ! ಇನ್ನು ಪುನಾ ನೆಟ್ಟು ಮಾಡುದಾರು?
~

ಕೈಗೆತ್ತುವ ಕಶಿ ಮಾವಿನ ಗೆಡು ನೆಟ್ಟು ಹಣ್ಣು ತಿಂಬ ಏರ್ಪಾಡಿಲಿ ಇದ್ದವು ಎಲ್ಲೋರುದೇ; ನೆಟ್ಟು ಮೂರೇ ಒರಿಶಲ್ಲಿ ಚೀಪೆಚೀಪೆ ಹಣ್ಣುಗೊ ಸಿಕ್ಕುತ್ತು.
ಕಾಟುಮಾವಿನ ಗೆಡು ನೆಟ್ಟು ಮರ ಮಾಡುದಾರು? ಗುಡ್ಡೆಯಷ್ಟೆತ್ತರ ಬೆಳವನ್ನಾರ ಕಾವಲೆ ಪುರ್ಸೊತ್ತಾರಿಂಗಿದ್ದು?! ಅಲ್ಲದೋ? ಛೇ! – ಹೇಳಿದವು ಆಚಮನೆ ದೊಡ್ಡಪ್ಪ.
ಹೀಂಗೇ ಕಾಟುಮಾವಿನ ಮರಂಗಳ ಕಡಿವದು ಮಾಂತ್ರ, ನೆಡ್ಳಿಲ್ಲೆ – ಹೇದರೆ ಮುಂದಕ್ಕೆ ಅಪುರೂಪದ ಪ್ರಭೇದಂಗೊ ಒಳಿತ್ಸು ಹೇಂಗೆ? ಕೆಲವು ಪರಿಮ್ಮಳಂಗೊ, ಕೆಲವು ಸೀವುವೊ, ಕೆಲವು ಗುಳಂಗೊ, ಕೆಲವು ಹುಳಿಪಿಂಡಂಗೊ – ಎಲ್ಲವೂ ನಮ್ಮೂರಿನ ಕಾಟು ಮಾವಿನ ವೈವಿಧ್ಯಂಗೊ.
ಮುಂದಾಣ ಪಾತಿಅತ್ತೆಗೊಕ್ಕೆ ಉಪ್ಪಿನಕಾಯಿ ಹಾಕಲೆ ಹೀಂಗಿರ್ಸ ವೈವಿಧ್ಯಂಗೊ ಸಿಕ್ಕುಗೋ?
ಅಲ್ಲ, ಕಶಿ ಮಾವಿನ ಮೆಡಿಯನ್ನೇ ಕಡುದು ಉಪ್ಪಿನಕಾಯಿ ಹಾಕೇಕಷ್ಟೆಯೋ?!
ಆಚಮನೆ ದೊಡ್ಡಪ್ಪ ಹೇಳುವಗಳೇ  ಬೇಜಾರಾಗಿತ್ತು; ಪೇಪರು ಓದಿ ಮನಗೆ ಬಪ್ಪಗ ಅಂತೂ ಇದೇ ವಿಶಯ ತಲೆಲಿದ್ದತ್ತು.

ಈ ಮಳೆಗಾಲ ಹಲವು ಜಾತಿಯ ಕಾಟುಮಾವಿನ ಗೆಡು ನೆಟ್ಟು ಮರ ಮಾಡೇಕು ಹೇದು ಒಪ್ಪಣ್ಣಂಗೆ ಅನುಸೆಂಡಿತ್ತು.
ಮಾಷ್ಟ್ರುಮಾವನಲ್ಲಿಂದ ಜೀರಿಗೆ ಮಾವು – ಉಪ್ಪಿನಾಯಿಗೆ ಅಪ್ಪದು, ಬಟ್ಯನಲ್ಲಿಂದ ಮುಣ್ಚಿಕುಕ್ಕು – ಚಟ್ಣಿಗೆ ಅಪ್ಪದು, ಪಾರೆ ಮಗುಮಾವನಲ್ಲಿಂದ ಶಾಲಿಗ್ರಾಮದ್ದು – ಮಾಂಬುಳಕ್ಕೆ, ಸುಂದರಿಯಲ್ಯಾಣ ಬಸುಂಬ – ಸಾಸಮೆಗೆ – ಎಲ್ಲ ಜಾತಿದೂ ಒಂದೊಂದು ಮರ ಬೇಕು ನಮ್ಮಲ್ಲಿ!
ನಿಂಗಳೂ ಈ ಬಗ್ಗೆ ಯೋಚನೆ ಮಾಡುವಿರೋ? ಕಾಟು ಮಾವಿನ ಮರದ ಬುಡ ನೆಟ್ಟು ಮಾಡುವಿರೋ?
ಎಲ್ಲ ಜೆಂಬ್ರಂಗೊಕ್ಕೂ ಉಪ್ಪಿನಕಾಯಿ ಹಾಕಲೆ ತಕ್ಕ ಎಲ್ಲೋರಿಂಗೂ ಮಾವಿನ ಮೆಡಿ ಸಿಕ್ಕಲಿ, ಅಲ್ಲದೋ? ಎಂತ ಹೇಳ್ತಿ?
~
ಒಂದೊಪ್ಪ: ಕಶಿ ಮಾವಿಂಗೆ ಸೀವು ತುಂಬುಸಲೆಡಿಗು; ಆದರೆ ಕಾಟು ಮಾವಿನ ಸತ್ವ, ಪರಿಮ್ಮಳ ತುಂಬುಸಲೆಡಿಗೊ?

ಸೂ:
ನಮ್ಮ ಬೈಲಿಲಿ ಅಡಿಗೆ ವಿಭಾಗಲ್ಲಿ ಬಂದ ಉಪ್ಪಿನಕಾಯಿ ಶುದ್ದಿಗೊ:

23 thoughts on “ಉಪ್ನಾನಲ್ಲಿ ಉಂಡ ಉಪ್ನಾಯಿ ‘ಕಾಟುಮಾವಿನ ಮೆಡಿ’ದು!

  1. ಏ ಒಪ್ಪಣ್ಣ, ಇಡೀ ಶುದ್ದಿಯ ಬಾಯಿಲಿ ನೀರರಿಶಿಗೊಂಡೇ ಓದಿದೆ. ಪುಣ್ಯಕ್ಕೆ ಹತ್ತರೆ ಕೂದವಂಗೆ ಗೊಂತಾಯ್ದಿಲ್ಲೆ.
    ಲಾಯಕ ಆಯ್ದು .. ಎಂತರ ? ಶುದ್ದಿಯೂ, ಮೆಡಿ ಉಪ್ಪಿನಕಾಯಿಯೂ. ಸುರ್ರ್…..

  2. *ಉಪ-ನಯನ ಹೇದರೆ ಕನ್ನಡ್ಕ ಅಡ; ಕನ್ನಡ್ಕದ ಡಾಗುಟ್ರ ಮನೆಲೇ ಉಪ್ನಾನ ಆದರೆ ಎಂತ ಹೇಳುಸ್ಸು?
    -ಲೇಖನದ ಸುರುವಾಣ ಈ ವಾಕ್ಯವೇ ಇಡೀ ಲೇಖ್ಹನದ ಚಂದವ ಹೇಳ್ತು ! ಆದರೆ ಉಪನಯನ ಹೇಳ್ತ ಶಬ್ದದ ನಿಜವಾದ ಅರ್ಥ ಎಂತರ? ಇದರ ತಿಳುದೋರು ವಿವರ್ಸಿರೆ ಸಂತೋಷ. ಕನ್ನಡ್ಕದ ಡಾಗುಟ್ರ ಮನೆಲಿ ಆದ ಉಪನಯನವ ಕಣ್ಣುತುಂಬಾ ನೋಡುವ ಅವಕಾಶ ತಪ್ಪಿತ್ತು ಹೇಳಿ ಬೇಜಾರುದೇ ಆತು 🙁

    *ಜೆನ ತುಂಬಿ ಸಮಲುತ್ತು.
    -ಈ ಪ್ರಯೋಗ ಇಷ್ಟ ಆತು ! ಎನ್ನ ಅತ್ತಿಗೆಯ ಮಗಳು (ನಾಲ್ಕು ವರ್ಷ) ಅದರ ಅಜ್ಜಿಯ ಹತ್ತರೆ ಒಮ್ದರಿ ಹೀಂಗೆ ಹೇಳಿದ್ದು ’ಅಜ್ಜಿ, ನೀನು ಎಂಗಳ ಕಾರಿಲ್ಲಿ ಬಪ್ಪಲೆ ರಜ್ಜ ಕಷ್ಟ ಇದ್ದು..ನಾವು ತುಂಬ ಜನ ಇದ್ದಲ್ಲದಾ…ಕಾರಿಲ್ಲಿ ಜನ ತುಂಬಿ ಚೆಲ್ಲುಗು, ನೀನು ಮಾವನ ಕಾರಿಲ್ಲಿ ಬಾ’ ಹೇಳಿ !! -ಕಾರಿಲ್ಲಿ ಜನ ತುಂಬಿ ಚೆಲ್ಲುದೂ…ಹಂತಿಲಿ ಜನ ತುಂಬಿ ಸಮಲುತ್ತದೂ ಒಂದೇ ಹಾಂಗೆ ಕಂಡತ್ತು !

    *ಮುಂದಾಣ ಪಾತಿಅತ್ತೆಗೊಕ್ಕೆ ಉಪ್ಪಿನಕಾಯಿ ಹಾಕಲೆ ಹೀಂಗಿರ್ಸ ವೈವಿಧ್ಯಂಗೊ ಸಿಕ್ಕುಗೋ?
    – ಮುಂದಾಣ ಕಾಲಲ್ಲಿ ಮನೆಲಿ ಉಪ್ಪಿನಕಾಯಿ ಹಾಕುತ್ತ ಪಾತಿಅತ್ತೆಗಳೇ ಇರವು ಒಪ್ಪಣ್ನ !! ಅಂಗಡಿಂದ ಕುಪ್ಪಿಲಿ/ಪ್ಯಾಕೇಟಿಲ್ಲಿ ಸಿಕ್ಕುತ್ತ ಪುಪ್ಪಿನಕಾಯಿ ತಪ್ಪ ಪೇಟೆಯ ಅಕ್ಕಂದ್ರೇ ಹೆಚ್ಚಿಗೆ !!

    *ಕಶಿ ಮಾವಿಂಗೆ ಸೀವು ತುಂಬುಸಲೆಡಿಗು; ಆದರೆ ಕಾಟು ಮಾವಿನ ಸತ್ವ, ಪರಿಮ್ಮಳ ತುಂಬುಸಲೆಡಿಗೊ?
    -ಇದು ಮನಸ್ಸಿಂಗೆ ನಾಟುವ ಪ್ರಶ್ನೆ…ಕೇಳಿದ್ದು ಮಾವಿನಮೆಡಿಯ ಬಗ್ಗೆ ಆದರೂ..ಬದಲಾವ್ತಾ ಇಪ್ಪ ನಮ್ಮ ಜೀವನ,ಕಳಕ್ಕೊಳ್ತಾ ಇಪ್ಪ ಉತ್ತಮ ಮೌಲ್ಯ,ಆಚರಣೆಗಳ ಬಗ್ಗೆಯೊ ಅನ್ವಯ ಅಪ್ಪ ಪ್ರಶ್ನೆ…ನಾವು ಹಿಂದಿರುಗಿ ಆ ಕಾಲಕ್ಕೆ ಹೋಪಲೆಡಿಯದ್ದರೂ..ಅಂದಿನ ಆಚರಣೆ, ಸತ್ಸಂಪ್ರದಾಯ, ಉತ್ತಮ ವಿಚಾರಂಗಳ ಬಿಡದ್ದೇ ಬದುಕ್ಕೆಕು ಹೇಳುದರ ನೆನಪಿಸುತ್ತು.

    1. (ಆದರೆ ಉಪನಯನ ಹೇಳ್ತ ಶಬ್ದದ ನಿಜವಾದ ಅರ್ಥ ಎಂತರ? )
      ವಿಕಿಪಿಡಿಯಲ್ಲಿ ಅರ್ಥ ಹೀಂಗೆ ಕೊಟ್ಟಿದವು—
      Upa+nayana also means taking somebody near (upain) knowledge.

  3. ಒಪ್ಪಣ್ಣನ ಶುದ್ದಿ ಲಾಯಿಕ ಆಯಿದು.
    ಹಲವಾರು ಕಾರಣಂದ ಬೈಲಿಂಗೆ ಬಪ್ಪಲೆ ತಡವು ಆತಿದಾ.
    ಪೇಟಿಲಿಪ್ಪ ಎಂಗೊ ಎಲ್ಲಿ ಕಾಟು ಮಾವಿನ ಕಾಯಿ ಹಣ್ಣು ಸಿಕ್ಕುತ್ತು ನೋಡ್ತಾ ಇರ್ತೆಯೊ. ಅದರ ರುಚಿ, ಪರಿಮಳಕ್ಕೆ ಅದುವೇ ಸಾಟಿ.
    ಈ ಉಪ್ನಾನದ ಉಪ್ಪಿನಕಾಯಿ ಶುದ್ದಿ ಓದುವಾಗ ಎನಗೆ “ಭೂತಯ್ಯನ ಮಗ ಅಯ್ಯು” ಸಿನೆಮಾದ ಒಂದು ದೃಷ್ಯ ನೆಂಪಾವ್ತು.
    ಅಲ್ಲಿ ಲೋಕನಾಥಂಗೆ ಉಪ್ಪಿನ ಕಾಯಿ ಭಾರೀ ಇಷ್ಟ ಆಗಿರ್ತು. ಅಕೇರಿಗೆ, ಭರಣಿಂದ ಉಪ್ಪಿನ ಕಾಯಿ ತೆಗದು ಅದರ ನಕ್ಕುವ ಆ ದೃಷ್ಯ ಯೇವತ್ತಿಂಗೂ ಮರೆಯ.
    “ಊಟಕ್ಕಿಲ್ಲದ ಉಪ್ಪಿನ ಕಾಯಿ” ಹೇಳಿ ಒಂದು ಗಾದೆಯೂ ಕನ್ನಡಲ್ಲಿ ಇದ್ದು.
    ಅಂತೂ ಉಪ್ಪಿನಕಾಯಿ ಶುದ್ದಿ ಉಪ್ಪಿನ ಕಾಯಿ ಉಂಡಷ್ಟೇ ಕೊಶಿ ಕೊಟ್ಟತ್ತು.

  4. ಯೇವದು ಎಷ್ಟೇ ಲಾಯಕಾದರೂ ಊಟ ಸರಿಯಾದ ಹೊತ್ತಿಂಗೆ ಆಗದ್ದರೆ ರುಚಿ ಗೊಂತಪ್ಪದು,ಗೊಂತಾದರೂ ಅದರ ಅನುಭವಿಸುದೂ ನಮ್ಮಂದ ಆಗದ್ದ ಕೆಲಸ.ಖಾರ ಮಾಂತ್ರ ನೆಂಪಿಲ್ಲಿ ಒಳುದ್ದು,ಮನಸ್ಸಿಂದು.

  5. ಹಾ..ನಿ೦ಗಳ ಶುದ್ದಿ ಓದಿ ಮೊನ್ನೆ ಕಾನಾವಿಲಿ ಉ೦ಡ ಉಪ್ಪಿನಕಾಯಿಯ ರುಚಿ ಪುನಾ ನೆನಪ್ಪಾತು.
    ಮತ್ತೆ ಕಾಟು ಮಾವಿನಹಣ್ಣಿನ ರುಚಿ ಹೇಳಿರೆ…ಅಷ್ಟೂ ರುಚಿಅಪ್ಪಾ. ಮೊನ್ನೆ ಊರಿ೦ದ ಬಪ್ಪಗ ಒ೦ದು ನಾಕು ತ೦ದು ಲಾಯ್ಕಲ್ಲಿ ತಿ೦ದೆ.
    ಅಡ್ಕತ್ತಿಮಾರುಮಾವನಲ್ಲಿ ಅಪ್ಪ ಕಾಟು ಮಾವಿನ ಹಣ್ಣುದೇ ಭಾರೀ ರುಚಿ!! ಎ೦ತ ಜಾತಿದು ಹೇಳಿ ಗೊ೦ತಿಲ್ಲೆ ಆದರೆ ಒಳ್ಳೆ ಗುಳ ಗುಳ ಆಗಿ ಆಹಾ…ಕಳುದೊರ್ಷ ತಿ೦ದದು ನೆನಪ್ಪಾತು:-)

  6. ಉಪನಯನದ ಗೌಜಿ ಮರವಲೇ ಎಡಿಯ ಒಪ್ಪಣ್ಣ. ಶ್ರೀಅಕ್ಕನಲ್ಲಿ ಉಪ್ಪಿನಕಾಯಿಂದ ಹಿಡಿದು ಎಲ್ಲವೂ ಗೌಜಿಯೇ.

  7. ಲಾಯ್ಕ ಸುದ್ದಿ. ಹಲಸು-ಮಾವು ಹವ್ಯಕರ ಸಂಸ್ಕ್ರತಿಯ ಅವಿಭಾಜ್ಯ ಅಂಗ. ಕಾಟು ಮಾವಿನ ಕಾಯಿ ಆದರೆ ಇಡೀ ಊರಿಂಗೆ ಹಂಚುದು ಹವ್ಯಕರ ಔದಾರ್ಯ. ಈಗೀಗ ಎಲ್ಲರೂ ಹಲಸು ಮಾವಿನ ಮರ ಕಡಿತ್ತವೆ ಹೊರತು ನೆಡುತ್ತವಿಲ್ಲೆ. ಜೆಂಬಾರಗಳಲ್ಲಿ ಹೊಸ ಮಾವಿನ ಮೆಡಿ ಉಪ್ಪಿನಕಾಯಿ ಬಳುಸಿರೆ ಆದು ವಿಶೇಷ. ಸರಳ ವಿಷಯಂಗಳಲ್ಲಿ ತೃಪ್ತಿ ಕಾಂಬದೆ ನಮ್ಮ ವಿಶೇಷತೆ.

    ಖಾಲಿ ಭರಣಿಗೊ ಹವ್ಯಕರ ಅಟ್ಟಲ್ಲಿ ಹೊರಡುದು ಕಾಂಬಗ ಬೇಜರವುತ್ತು. ಪೇಟೆ ಉಪ್ಪಿನಕಯಿ ನಮ್ಮವರ ಮನೆಗಳಲ್ಲಿ ಕಾಂಬಲೆ ಶುರು ಆಯಿದು. 🙁

  8. ಲಾಯ್ಕ ಆಯಿದು.

  9. ಒಳ್ಳೇ ಶುದ್ದಿ, ಒಪ್ಪ೦ಗೊ. ಅಪ್ಪೆಮೆಡಿ ಉಪ್ಪಿನಕಾಯಿಯುದೆ ಭಾರೀ ಪಷ್ಟಾವುತ್ತು ಒಪ್ಪಣ್ಣಾ..
    ಈ ಸರ್ತಿ ಎನಗೆ ಶೃ೦ಗೇರಿ ಹೊಡೆ೦ದ ಚೂರು ಅಪ್ಪೆಮೆಡಿ ಉಪ್ಪಿನಕಾಯಿಯೇ ಸಿಕ್ಕಿದ್ದತ್ತು.

  10. ಚಿಕ್ಕಮ್ಮನ ಮಗನ ಉಪನಯನಕ್ಕೆ ಬರೆಕೂ ಹೇಳಿಯೇ ಇತ್ತಪ್ಪಾ – ಹೇಳಿಕೆಯೂ ಇದ್ದತ್ತು.
    ಪರೀಕ್ಷೆ ಇದಾ.. ಹೋಪಲಾತಿಲ್ಲೆ.. 🙁
    ಲೇಖನ ಓದಿ ಖುಶಿ ಆತು. 🙂

  11. ಕಾನಾವಣ್ನನ ಉಪ್ನಾನಲ್ಲಿ ಉಪ್ಪಿನಕಾಯಿ ಉಂಡರೂ ಈಗ ಒಪ್ಪಣ್ನ ಹೇಳಿದ ಸುದ್ದಿಯ ಬಾಯಿಲಿ ನೀರರಿಶ್ಯೊಂಡೇ ಓದೆಕ್ಕಾದ ಪರಿಸ್ಥಿತಿ ಆತಲ್ಲದೋ………

    ಉಪ್ನಾನದ ಉಪ್ಪಿನಕಾಯಿಯ ಹಾಂಗೇ ಒಪ್ಪಣ್ನನ ಶುದ್ದಿಯೂ ಒಪ್ಪೊಪ್ಪ ಆಯ್ದು………….

  12. ಒಪ್ಪಣ್ಣನ ಸುದ್ದಿ ಯಾವಗಾಣ ಹಾಂಗೆ ಲಾಯಿಕ್ಕಾಯಿದು… ಸುದ್ದಿ ಓದಿ ಅಪ್ಪದ್ದೆ ಉಪ್ನಾನಕ್ಕೆ ಬರೆಕ್ಕಿತ್ತು ಹೇಳಿ ಕಂಡತ್ತು.. ದೊಡ್ಡಮ್ಮನ ಉಪ್ಪಿನಕಾಯಿ ನೆಂಪು ಮಾಡಿ ಬಾಯಿಲಿ ನೀರು ಬರ್ಸಿದೆ… ಅಪ್ಪು,ದೊಡ್ದಮ್ಮನ ಉಪ್ಪಿನಕಾಯಿ ತುಂಬಾ ರುಚಿ.. ಶ್ರೀ ಅಕ್ಕನ್ನ ಹತ್ತರೆ ಆ ಉಪ್ಪಿನಕಾಯಿ ಮಾಡುವ ಕ್ರಮದ ಮಾಹಿತಿ ಇದ್ದೋ ಏನೋ!! ಅಕ್ಕನೇ ಹೇಳೆಕ್ಕಷ್ಟೆ!!!

  13. ಕಾನಾವಣ್ಣನ ಉಪ್ನಾನದ ಗೌಜಿಯ ಒಟ್ಟಿಂಗೆ ಮೆಡಿ ಉಪ್ಪಿನಕಾಯಿ ರೈಸಿದ್ದು ಲಾಯಕಾತು. ಇಡೀ ಬೈಲು ಅಲ್ಲಿ ಸೇರಿದ್ದು ಕೇಳಿ ಕೊಶಿ ಆತು. ಚೆ. ಎನಗೆ ಒಂದು ಒಳ್ಳೆ ಕಾರ್ಯಕ್ರಮ ತಪ್ಪಿ ಹೋತಾನೆ ಹೇಳಿ ಮನಸ್ಸಿನ ಒಳಾ ಬೇಜಾರು ಆತು. ಆದರೂ ಎಂಗೊಗೆ ಕಾನಾವಿನ ಮೆಡಿ ಉಪ್ಪಿನಕಾಯಿ ತಪ್ಪಿಹೋಯಿದಿಲ್ಲೆ. ನಾಕು ದಿನ ಮದಲೇ ನಾಂದಿದಿನವೇ ಎಂಗೊಗೆ ಮೆಡಿ ಉಪ್ಪಿನ ಕಾಯಿ ರುಚಿ ನೋಡಿ ಆಗಿತ್ತು ! ತೇಗಿಲಿಯೂ ಮೆಡಿ ಉಪ್ಪಿನಕಾಯಿಯ ಪರಿಮ್ಮಳವೇ! ಎರಡು ದಿನ ಕೈಲಿಯುದೆ ಪರಿಮ್ಮಳ. ಒಪ್ಪಣ್ಣ ಸರಿಯಾಗಿ ಹೇಳಿದೆ ನೋಡು.

    ಉಪ್ನಾನದ್ದಿನ ಕಾನಾವಣ್ಣಂಗೆ ಕಂಫ್ಯೂಸು ಆದ್ದದು ಸಹಜ ಬಿಡು. ಉಪ್ನಾನದ ಗೌಜಿಯ ಮನಸ್ಸಿಲ್ಲೇ ಕಲ್ಪನೆ ಮಾಡ್ಯೊಂಡೆ.
    ವಿವಿಧ ನಮುನೆಯ ಕಾಟು ಮಾವಿನ quote ಮಾಡಿ ವಿವರುಸಿದ್ದು ಚೆಂದ ಆತು. ಉಪ್ಪಿನ ಕಾಯಿ ಹಾಕಲಿಪ್ಪ ಮೆಡಿಯ ಮುರುದು ಸೊನೆಯ ಕಾರಂಜಿ ರಟ್ಟುಸೆಂಡಿದ್ದಿದ್ದು ನೆಂಪಾತು.

  14. ಕಾನಾವಣ್ಣನ ಉಪ್ನಾನದ ಊಟವನ್ನೂ,ಮೆಡಿ ಉಪ್ಪಿನಕಾಯಿ ರುಚಿಯನ್ನೂ ಗ್ರೇಶಿಯಪ್ಪಗ ಒ೦ದರಿ ಉ೦ಡಾ೦ಗಾತು.
    ನಿಜ,ಕಾಟು ಮಾವಿನಕಾಯಿಯ/ಹಣ್ಣಿನ ರುಚಿಯೇ ಬೇರೆ.
    ಆನು ಅಪ್ಪೆ ಮೆಡಿ ಸೆಸಿ ಸಿಕ್ಕುಗೋ ಹೇಳಿ ಹುಡುಕ್ಕುತ್ತಾ ಇದ್ದೆ.ಬೈಲಿಲಿ ಆರ ಹತ್ತರಾರು ಇದ್ದೊ?

  15. ಉಪ್ನಾನ ಮುಗುಶಿ ವಾಪಾಸು ಬಪ್ಪ ದಾರಿಲಿ ಮನ್ನೆ ಮಾಲತಿ ಅತ್ತಿಗೆ ಮನೆಗೆ ಒಂದಾರಿ ಹೊಕ್ಕು ಬಪ್ಪದು ಗ್ರೇಶ್ಯೊಂಡು ಹೋದ್ಸು. ಉಪ್ನಾನದ ಊಟ ಉಂಡು ಒಂದು ಗ್ಲಾಸು ನೀರು ಕುಡಿವಲೂ ಜಾಗೆ ಇತ್ತಿಲೆ ಹೊಟ್ಟೆಲಿ, ಗುಳ್ಳ ಬೋಳು ಕೊದಿಲುದೆ( ಕೊದಿ ತಡೆಯದ್ದೆ ಸಮಾ ಉಂಡದು), ಗುಜ್ಜೆ ಮೇಲಾರದೆ ಹೊಡದ್ದಿದ. ಅಕೆರಿಗೆ ಎರಡು ಕಾಟು ಮಾವಿನಣ್ಣು ತಿಂದು ನೋಡಿ ಹೇದು ಒತ್ತಾಯ ಅಣ್ನನದ್ದು. ಎರಡು ತಿಂದಪ್ಪದ್ದೆ ಮತ್ತೆರಡು ಬೇಕು ಹೇಳಿ ಆಗಿ ತಿಂದದೆ. ಅಷ್ಟು ರುಚಿ ! ಅಂಥಾ ಪರಿಮ್ಮಳ !! ಗೊರಟು ಇಡ್ಕುಲೂ ಮನಸ್ಸು ಬಾರ !!! ( ನೆಗೆಮಾಣಿಯ ನೆಂಪು ಮಾಡ್ಯೊಂದು ಅದರ ಅತ್ತೆ ಇಡ್ಕಿದೆ ಅಕೇರಿಗೆ, ಅದು ಬಿಡಿ)
    ಹಾಂ…ಊಟಕ್ಷಿಣೆ ನವಗೂ ಸಿಕ್ಕಿದ್ದು, ಆತೊ..!!!

  16. ಈ ಸರ್ತಿ ಒಪ್ಪಣ್ಣ ಆರ ಹಿಂದೆ ಕೂದೊಂಡು ಕಾಲೆಡೆಲಿ ಬೈಕಿನ ಮಡಿಕ್ಕೊಂಡು ಬಂದ್ಸಪ್ಪ ಕಾನಾವಿಂಗೆ?

    ಅಪ್ಪಪ್ಪು ಒಂದನೇ ಹಂತಿಗೇ ನಾವು ಊಟಕ್ಕೆ ಕೂಯ್ದು. ಕೂಪಗ ಬೇಗೂ ಹತ್ರವೇ ಮಡಿಕ್ಕೊಂಡಿದುದೇ. ಇಲ್ಲದ್ರೆ ಮತ್ತೆ ಊಟಕ್ಷಿಣೆ ಸಿಕ್ಕಿದ್ದರ ಕೈ ತೊಳವಲೆ ಹೋಪಗ ಹಿಡ್ಕೋ ಭಾವಾ ಹೇಳಿ ಇನ್ನೊಬ್ಬನತ್ರೆ ಕೊಡೆಕು. ಕೈತೊಳದಿಕ್ಕಿ ಮತ್ತೆ ಎನ್ನ ಐದ್ರುಪಾಯಿ ಕೊಂಡ ಹೇಳಿ ಕೇಳದ್ರೆ ಕೆಲವು ಜೆನ ಕೊಡ್ತವೂ ಇಲ್ಲೆ. ಹ್ಮ್ಮ್ ಅವರವರ ಜಾಗ್ರತೆ ಅವಕ್ಕವಕ್ಕೆ ..!

    ಮದಲಾಣೋರ ಉಪ್ಪಿನಕ್ಕಾಯಿ ಫಾಕ್ಟೋರಿ ಹೇಳಿರೆ ಒಂದು ಗೌಜಿಯೇ ಅಪ್ಪೋ! – ಈಗಾಣ ದೊಡ್ಡ ಫಾಕ್ಟೋರಿ ಒಳ ಹೋಯೇಕಾರೆ ಅನುಮತಿ ಮೇರೆಗೆ ಮತ್ತು ಕಾಲಿಂದ ಕಾಲುಗೋಣಿ ಸಹಿತ ಬೂಟೀಸು ಕಳಚಿ ಮಡುಗು ಅವ್ವು ಕೊಡ್ತ ಡ್ರೆಸ್ಸು ಸುರ್ಕೊಂಡು ಹೋಯೇಕ್ಕಾಡ..! ಹಾಂಗೇ !!

    [ಭರಣಿಯ ಹೊತ್ತರೆಂತ?] – ಹೊರ್ಲೆ ಅಜ್ಜಕಾನ ಭಾವ ಅಂತೂ ಬಾರವು ! ಹಾಂಗಾಗಿ ಶಿವರಾತ್ರಿಗೇ ಗಟ್ಟಿಮಾಡಿಯೊಂಡದೋ!!ಸಿಕ್ಕಿಬಿದ್ದರೂ ಕಡ್ಡಿದೂಮ° ಅಲ್ಲದೊ ಕೆಣಿತ್ಸು!

    ಕಾನಾವಣ್ಣನ ಉಪ್ನಾನವೂ ಮರದ್ದಿಲ್ಲೆ, ಗುಜ್ಜೆ ಮೇಲಾರವೂ ಮರದ್ದಿಲ್ಲೆ, ಮೆಡಿ ಉಪ್ಪಿನಕಾಯಿ ರುಚಿಯೂ ಮರದ್ದಿಲ್ಲೆ. ಬೆನ್ನಿಂಗೆ ಈ ಉಪ್ಪಿನಕ್ಕಾಯಿ ಏರ್ಪಾಡಿನ ಶುದ್ದಿ ಲಾಯಕ ವಿವರಣೆ ಆಯ್ದು.

    ಉಪ್ಪಿನಕ್ಕಾಯಿಗೆ , ಚಟ್ನಿಗೆ, ಗೊಜ್ಜಿಗೆ, ಸಾಸಮಗೆ, ರಸಾಯನಕ್ಕೆ, ಸಾರಿಂಗೆ , ಕೊದಿಲಿಂಗೆ, ಮೇಲಾರಕ್ಕೆ, ಮಾಂಬಳಕ್ಕೆ ಇತ್ಯಾದಿ ಬಹುಪಯೋಗಿ ಆಗಿಪ್ಪ ಮಹತ್ವ ಇಪ್ಪ ಈ ಮಹತ್ತರ ಮಾವಿನಕಾಯಿಗೆ ‘ಕಾಟು ಮಾವಿನಕ್ಕಾಯಿ’ ಹೇಳಿ ಹೆಸರು ಮಡಿಗಿದ್ದೆಂತಕಪ್ಪಾ ಹೇಳೀಗ -‘ಚೆನ್ನೈವಾಣಿ’

    1. ಭಾವಾ ಅದು “ಕಾಟು” ಅಲ್ಲದೋಳಿ. ಹೆಚ್ಚಿನಂಶ ಅದು ಮಲೆಯಾಳಿಗಳ “ಕಾಟ್” ಆಗಿರೇಕು

      1. ಒಪ್ಪಣ್ಣನ ಸುದ್ದಿ ಯಾವಗಾಣ ಹಾಂಗೆ ಲಾಯಿಕ್ಕಾಯಿದು…

        ಶೇಡಿಗುಮ್ಮೆ ಪುಳ್ಳಿ,ಅದು ಮಲೆಯಾಳಿಗಳ “ಕಾಟ್” ಆಗಿರ .ಕನ್ನಡದ “ಕಾಡು ಮಾವಿನಕಾಯಿ ” ಆಗಿಕ್ಕು ಎ೦ತ ಹೇಳ್ತಿ! ಎಂತಕೆ ಹೇಳಿರೆ ಇದು ಕಾಡಿಲಿ ಅದರಷ್ಟಕ್ಕೆ ಬೆಳವ ಜಾತಿದು ಅಲ್ಲದೋ?

        1. ಅಣ್ಣೋ, ನಿಂಗೊಗೆ ಮಲೆಯಾಳ ಹೇಳಿ ಕೊಡುವಷ್ಟು ನವಗೂ ಗೊಂತಿಲ್ಲೆ ಆದರೆ ಕನ್ನಡಲ್ಲಿ “ಕಾಡು” ಹೇಳ್ತದಕ್ಕೇ ಮಲೆಯಾಳಲ್ಲಿ “ಕಾಟು” ಹೇಳುದೂಳಿ ನವಗೆ ಯಾರೋ ಹೇಳುದು ಕೇಳಿ ಗೊಂತಿದ್ದು ಹಾಂಗಾಗಿ ಹೇಳಿದ್ದಷ್ಟೇ. ನಮ್ಮಭಾಶೆಲಿ ನಾವು ಹಲವಾರು “ಮಲೆಯಾಳೀ” ಪದಂಗಳ ಬಳಸುತ್ತಲ್ಲದೋ ಅದರೊಟ್ಟಿಂಗೇ ಈ “ಕಾಟು ಮಾವು” ಕೂಡಾ ಒಂದಾಗಿಕ್ಕು ಹೇಳುದು ನಮ್ಮ ಅಭಿಪ್ರಾಯ ಅಷ್ಟೇ…..

          1. ಎನಗೆ ಮಲಯಾಳ ಗೊ೦ತಿಲ್ಲೆ ಅಣ್ಣಾ !ಮಲಯಾಳದ “ಕಾಟ್ ” ಕನ್ನಡದ “ಕಾಡು” ಒಂದೇ ಆಗಿಕ್ಕು, ಆದರೆ ಈ ಕಾಟು ಕನ್ನಡದ್ದೇ(ನಮ್ಮದು ಹಳೆಗನ್ನಡದ ಹತ್ರಾಣದ್ದು ಅಲ್ಲದೋ ಅದಕ್ಕೆ ಹೇಳಿದ್ದು ಅಷ್ಟೇ) ಆದಿಕ್ಕು ಹೇಳಿ ಹೇಳಿದ್ದಷ್ಟೇ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×