- ಶೃ೦ಗಪುರಾಧೀಶ್ವರೀ ಶಾರದೆ - October 22, 2012
- ಕಮಲಭವನ ಪ್ರಿಯ ರಾಣಿ - October 20, 2012
- ಕಲ್ಯಾಣಿ ಗೀರ್ವಾಣಿ ವೀಣಾಪಾಣಿ - October 16, 2012
ಬೈಲಿನ ಸೊಸೆ ದೀಪಿಕಾ ಮಂಕುತಿಮ್ಮನ ಕಗ್ಗದ ಮೂರನೇ ಕಂತು ಕಳುಗಿ ಕೊಟ್ಟಿದು.
ಕಗ್ಗಂಗೊಕ್ಕೆ ಸರಳ ಹವ್ಯಕ ಅರ್ತವ ನಮ್ಮ ಶ್ರೀಅಕ್ಕ ಕಳುಸಿ ಕೊಟ್ಟವು.
ಗುಂಡಪ್ಪಜ್ಜ ಬರದ ನಾಲ್ಕು ಸಾಲುಗಳ ಅಮೂಲ್ಯ ಮಾತುಗೋ ಎಲ್ಲೋರ ಬದುಕಿಂಗೆ ಹೊಸ ದಾರಿ ತೋರ್ಸಲಿ..
ಬೈಲಿನ ಈ ಪ್ರಯತ್ನಕ್ಕೆ ಎಲ್ಲೋರ ಸಹಕಾರ ಇರಲಿ ಹೇಳಿ ಹಾರಯಿಕೆ.
~
ಬೈಲಿನ ಪರವಾಗಿ
ಮಂಕುತಿಮ್ಮನ ಕಗ್ಗ – ಎಸಳು – 03:
ಗುಂಡಜ್ಜನ ಕಗ್ಗದ ಭಂಡಾರಂದ ಆರು ಕಗ್ಗಂಗಳ ಒಂದು ಗುಚ್ಛ ಮಾಡಿ, ಹಾಡಿದ್ದೆ.
ಜೀವನದ ಸಾರವ ಅನುಭವಿಸಿಯೇ ಆಯೆಕ್ಕು. ಆದರೆ ಗುಂಡಜ್ಜ° ನವಗೆಲ್ಲ ಅನುಭವದ ದಾರಿಯ ಸುಲಬ ಮಾಡಿ ಕೊಟ್ಟಿದವು. ನಾವು ಅರ್ಥೈಸಿಗೊಂಡರೆ ನಮ್ಮ ಜೀವನವೇ ಬಂಗಾರ ಅಕ್ಕು.
ಸೊಗಸು ಬೇಡದ ನರ ಪ್ರಾಣಿ ಎಲ್ಲಿಹುದಯ್ಯ?
ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ ? ।
ಜಗದಕಣ್ಣಿಣಿಕದೆಡೆ ಮುಕುರದೆದುರೊಳು ನಿ೦ತು
ಮೊಗವ ತಿದ್ದುವರೆಲ್ಲ – ಮ೦ಕುತಿಮ್ಮ॥1||
ಚೆ೦ದ ಕಾಣೆಕ್ಕು ಹೇಳಿ ಆಶೆ ಇಲ್ಲದ್ದ ಮನುಶ್ಯರು ಈ ಲೋಕಲ್ಲಿಯೇ ಇಲ್ಲೆ.
ಸಣ್ಣ ಮಕ್ಕೊಆಗಿರಲಿ, ಪ್ರಾಯದವ್ವು ಆಗಿರಲಿ,ಲೆಕ್ಕಂಗಳ ಮಡಿಕ್ಕೊಂಬ ಪುರಾಣಿಕಂಗ ಆಗಿರಲಿ, ಪುರೋಹಿತರು ಆಗಿರಲಿ… ಎಲ್ಲೋರು ಚೆಂದವ, ಚೆಂದ ಕಾಂಬಲೆ ಇಷ್ಟ ಪಡುವೋರೇ!
ಲೋಕದ ಆರೂ ಕಣ್ಣು ಹಾಕದ್ದ ದಿಕ್ಕೆ ಕನ್ನಡಿಯೆದುರು ನಿ೦ದು ಮೋರೆಯ ತಿದ್ದಿಗೊಳ್ತವು.
ನಮ್ಮ ಹೆರಾಣ ಚೆಂದವ ಕನ್ನಡಿಯೆದುರು ನಿಂದು ಸಮ ಮಾಡ್ಲಕ್ಕು, ಆದರೆ ನಮ್ಮೊಳಾಣ ಚೆಂದವ ಸರಿ ಮಾಡ್ಲೆ ಅರಡಿಯದ್ದವ ಹೆರಾಂದ ಎಷ್ಟು ಅಲಂಕಾರಂಗಳ ಮಾಡಿದರೂ ವ್ಯರ್ಥವೇ ಹೇಳುವ ಮಾತಿನ ಗುಂಡಜ್ಜ° ಹೇಳ್ತಾ ಇದ್ದವು.
~
ಇನ್ನೇನು ಮತ್ತೇನು ಗತಿಯೆ೦ದು ಬೆದರದಿರು
ನಿನ್ನ ಕೈಯ್ಯೊಳಗಿಹುದೆ ವಿಧಿಯ ಲೆಕ್ಕಣಿಕೆ ?।
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸ೦ಚು
ತಣ್ಣಗಿರಿಸಾತ್ಮವನು – ಮ೦ಕುತಿಮ್ಮ॥2||
ಬದುಕ್ಕಿಲಿ ಇನ್ನು ಎಂತ ಮಾಡುದು? ಮತ್ತೆ ಎಂತ ಗೆತಿ ಹೇಳಿ ಭವಿಷ್ಯವ ನೆನೆಸಿ ಹೆದರೆಕ್ಕಾದ ಅಗತ್ಯ ಇಲ್ಲೆ.
ಎಲ್ಲವೂ ನಮ್ಮ ಕಯ್ಯೊಳ ಇಲ್ಲೆ. ಎಂತಕ್ಕೆ ಹೇಳಿದರೆ, ನಮ್ಮ ವಿಧಿಯ ಬರವ ಲೇಖನಿ ನಮ್ಮ ಕೈಲಿಲ್ಲೆ. ನಮ್ಮ ಕಣ್ಣಿ೦ಗೆ ಗೋಚರಿಸದ್ದಾ೦ಗೆ ವಿಧಿಯ ಆಟ೦ಗ, ದೈವದ ಸಂಚು ನೆಡೆತ್ತು.
ನಮ್ಮ ಹಿಡಿತಂದ ಮೇಲೆ ಇಪ್ಪ ಈ ವಿಚಾರಂಗಳಲ್ಲಿ, ಜೀವನಲ್ಲಿ ಎಂತದೇ ಆದರೂ ಆತ್ಮವ ನೆಮ್ಮದಿಲಿಪ್ಪ ಹಾ೦ಗೆ ನೋಡಿಗೊ೦ಬದಷ್ಟೇ ನಮ್ಮ ಕೆಲಸ.
~
ಒಮ್ಮೆ ಹೂ ತೋಟದಲಿ, ಒಮ್ಮೆ ಕೆಳೆಕೂಟದಲಿ
ಒಮ್ಮೆ ಸ೦ಗೀತದಲಿ, ಒಮ್ಮೆ ಶಾಸ್ತ್ರದಲಿ।
ಒಮ್ಮೆ ಸ೦ಸಾರದಲಿ, ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗು – ಮ೦ಕುತಿಮ್ಮ॥3||
ಜಗತ್ತಿಲಿ ಕಣ್ಣಿಂಗೆ ಕಾಂಬ ಎಲ್ಲದರ ಆನಂದಿಸಿಗೊಂಡೇ ಬ್ರಹ್ಮಾನುಭವ ಅಥವಾ ಸಚ್ಚಿದಾನಂದ ಹೊಂದುದು ಹೇಂಗೆ ಹೇಳಿ ಗುಂಡಜ್ಜ° ಹೇಳ್ತವು.
ಈ ಲೋಕಲ್ಲಿ ಒಂದರಿ ಹೂಗಿನ ತೋಟಲ್ಲಿ ಇಪ್ಪಗ, ಒಂದರಿ ಆಪ್ತರ ಒಟ್ಟಿಂಗೆ ಇಪ್ಪಗ, ಒಂದೊಂದರಿ ಸಂಗೀತ ಕೇಳುವಾಗಲೂ, ಶಾಸ್ತ್ರದ ಚಿಂತನೆ ಮಾಡುವಲ್ಲಿಯೂ, ನಮ್ಮ ನಮ್ಮ ಸಂಸಾರಲ್ಲಿ, ನಮ್ಮ ಅಂತರಾತ್ಮದ ಒಟ್ಟಿಂಗೆ ಮೌನಲ್ಲಿ ಚಿಂತನೆಲಿ ಇಪ್ಪಗಳೂ, ಎಲ್ಲದರಲ್ಲಿಯೂ ಇಪ್ಪಗಳೂ “ಆತ್ಮವಿಸ್ತರಣೆ”ಯ ಹೊಂದುತ್ತಾ ಬ್ರಹ್ಮಾನುಭವಿ ಆಗು.
ಬ್ರಹ್ಮ ಸೃಷ್ಟಿಯ ಎಲ್ಲದರಲ್ಲಿಯೂ ಪರಮಾತ್ಮನ ಸ್ವರೂಪ ಇಪ್ಪಗ ಎಲ್ಲವನ್ನೂ ಅನುಭವಿಸುದರ ಒಟ್ಟಿಂಗೆ ತನ್ನ ಆತ್ಮವ ಹೆರಂಗೂ ಪಸರಿಸು ಹೇಳುವ ಸೂಕ್ಷ್ಮ ತತ್ತ್ವವ ನಾಲ್ಕು ಸಾಲಿಲಿ ಎಷ್ಟು ಚೆಂದಕ್ಕೆ ಹೇಳ್ತವು.
~
ಮಾವು ಸಸಿಯನು ನೆಟ್ಟು ಬೇವುಣಲು ಸಿದ್ಧನಿರು
ಭೂವಿಷಯದಿ೦ದ ರಸ ಮಾರ್ಪಡುವದು೦ಟು।
ಆ ವಿವರ ನಿನಗೇಕೆ ? ತೋಟದೊಡೆಯನಿಗಿರಲಿ
ಸೇವಕನು ನೀನಲ್ತೆ – ಮ೦ಕುತಿಮ್ಮ॥4||
ಸೀವಾದ ಮಾವಿನ ಸೆಸಿಯ ನೆಟ್ಟು, ಕಹಿಬೇವಿನ ತಿ೦ಬಲೂ ಸಿದ್ಧ ಇರೆಕ್ಕು.
ಹೇಳಿದರೆ, ನಾವು ಮನಸ್ಸಿಲಿ ನೆನೆಸಿದ್ದದು ನಡೆಯದ್ದಿಪ್ಪಗ ನವಗೆ ತುಂಬಾ ಬೇಜಾರಾವುತ್ತು ಅಥವಾ ನಾವು ಒಂದು ಒಳ್ಳೆ ಕಾರ್ಯ ಮಾಡಿದ್ದದು ಎಲ್ಲೋರಿಂಗೂ ಸವಿಯ ಕೊಡೆಕ್ಕು ಹೇಳಿ ಇಲ್ಲೆ.
ನಾವು ಒಳ್ಳೆದು ಮಾಡಿದ್ದದಕ್ಕೆ ಇನ್ನೊಬ್ಬ ಕೇಡು ಮಾಡುಗು. ನಾವು ಚೆಂದಲ್ಲಿ ಮಾಡಿದ್ದಕ್ಕೆ ಇನ್ನೊಬ್ಬ ಹುಳ್ಕು ಹುಡುಕ್ಕುಗು, ಮಣ್ಣಿನ ಪ್ರಭಾವ೦ದ ಹಣ್ಣಿನ ರುಚಿ ಬದಲುದಿದ್ದು..
ಹಾಂಗೆಯೇ ಸಮಯದ ಪ್ರಭಾವಲ್ಲಿ ನಾವು ಮಾಡಿದ್ದದಕ್ಕೆ ಬೇರೆ ಬೇರೆ ಫಲ ಸಿಕ್ಕುಗು. ನಾವು ಮಕ್ಕಳ ಒಳ್ಳೆ ವಿಚಾರಂಗಳಲ್ಲಿ ಬೆಳೆಶಿಕ್ಕು, ಆದರೆ ಬೇರೆ ವಾತಾವರಣದ ಪ್ರಭಾವಂದ ಅವ್ವು ದಾರಿ ತಪ್ಪುಲೂ ಸಾಕು.
ನಮ್ಮ ಗಮನ ಬೆಳೆಶುದರ ಕಡೆಂಗೆ ಬೇಕು. ಫಲ ಎಂತ ಸಿಕ್ಕುತ್ತು ಹೇಳುವ ಈ ವಿವರಂಗ ನವಗೆ೦ತಕೆ?
ಅದು ತೋಟದ ಯಜಮಾನನಾದ ದೇವರಿ೦ಗೆ ಇರಲಿ. ಸೇವಕರಾದ ನವಗೆ೦ತಕ್ಕೆ?? ಈ ಜನ್ಮಲ್ಲಿ ನವಗೆ ಸಿಕ್ಕಿದ ಕೆಲಸವ ನಾವು ಮಾಡಿದರಾತು. ಅದರ ಫಲಾಫಲಂಗಳ ನಾವು ಅಪೇಕ್ಷೆ ಪಡುದು ಬೇಡ.
~
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲಿ, ಋತವ ಬಿಡದಿರಲಿ।
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ
ಅತಿ ಬೇಡವೆಲ್ಲಿಯು೦ – ಮ೦ಕುತಿಮ್ಮ॥5||
ಬದುಕ್ಕಿಲಿ ಯಾವುದೂ ಮಿತಿ ಮೀರಿ ಬೇಡ ಹೇಳುದರ ಗುಂಡಜ್ಜ ಈ ರೀತಿಲಿ ವಿವರ್ಸುತ್ತವು.
ಮೋರೆಲಿ ಯಾವತ್ತೂ ಸಮಾಧಾನದ ನೆಗೆ ಇರಲಿ, ನಾವು ಮಾತಾಡುದು, ನೆಗೆ ಮಾಡುದು ಇನ್ನೊಬ್ಬಂಗೆ ಕರ್ಕಶವಾಗಿ ಕೇಳದ್ದೆ ಇರಲಿ.
ನಾವು ಮಾತಾಡುವಾಗ ಮನಸ್ಸಿಲಿ ಯಾವುದೋ ವ್ರತವ ಮಾಡುದರ ಗ್ರೇಶಿದ ಹಾಂಗೆ ಪ್ರೀತಿಯ ಮಾತುಗಳ ಆಡೆಕ್ಕು.
ಮನಸ್ಸಿನ ಉದ್ವೇಗಕ್ಕೆ ಮಿತಿ ಇರಕ್ಕು. ಭೋಗ ಹೇಳಿದರೆ ನಾವು ಆಶಿಸುದು ಕೂಡಾ ಮಿತಿಲಿರಲಿ, ನಮ್ಮ ಜೀವನಕ್ಕೆ ಬೇಕಾದ ಯಾವುದೂ ಕೂಡಾ ಒಂದು ಹಂತವ ಮೀರುಲಾಗ. ಇದು ಗುಂಡಜ್ಜ° ನವಗೆ ಕೊಡುವ ಸುಲಬ ಮಂತ್ರ!
~
ಓಲೆಗಾರನಿಗೇಕೇ ಬರೆದ ಸುದ್ದಿಯ ಚಿ೦ತೆ ?
ಓಲೆಗಳನವರವರಿಗೈದಿಸಿರೆ ಸಾಕು।
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ !!
ಕಾಲೋಟವವನೂಟ – ಮ೦ಕುತಿಮ್ಮ॥6||
ಟಪಾಲು ತಪ್ಪ ಮನುಶ್ಯಂಗೆ ಕಾಗದಲ್ಲಿ ಬರದ ಸುದ್ದಿಯ ಚಿ೦ತೆ ಇಪ್ಪಲಾಗ. ಕಾಗದ೦ಗಳ ಆರಿಂಗೆ ಅಗತ್ಯವೋ ಹಾಂಗೆ ಮುಟ್ಟೆಕ್ಕಾದೋರಿ೦ಗೆ ಮುಟ್ಟುಸಿದರೆ ಸಾಕು.
ಆ ಕಾಗತಂಗಳಲ್ಲಿ ಹಲವು ಭಾವನೆಗಳೂ, ಸಾಲಂಗಳೋ, ವೇದನೆಯ ಶೂಲಂಗಳೋ, ಬೇಜಾರಂಗಳೋ, ಕೊಶಿಯ ವಿಷಯಂಗಳೋ ಇಕ್ಕು.
ಎಂತ ಇದ್ದರೂ ಅವಂಗೆ ಚಿ೦ತೆ ಎ೦ತಕ್ಕೆ? ಟಪ್ಪಾಲಿನ ಮನುಷ್ಯಂಗೆ ಕೆಲಸದ ಓಡಾಟವೇ ಅವನ ಊಟ ಆಗಿಪ್ಪದು.
ಹಾಂಗೆಯೇ ನಮ್ಮ ಬದುಕ್ಕಿಲಿಯೂ ಬಾಕಿದ್ದೋರ ಬದುಕ್ಕಿಲಿ ಎಂತ ಆವುತ್ತು, ಲೋಕಲ್ಲಿ ಆರಾರು ಎಂತೆಂತ ಮಾಡಿದವು ಹೇಳುದು ನವಗೆ ಗಮನ ಇಪ್ಪಲಾಗ.
ನಮ್ಮ ನಿತ್ಯದ ಜೀವನಕ್ಕೆ ಎಂತ ಆಯೆಕ್ಕೋ, ನಮ್ಮ ಜೀವನ ಸಾರ್ಥಕತೆಗೆ ಎಂತೆಲ್ಲ ಆಯೆಕ್ಕು ಅದೆಲ್ಲಾ ಮಾಡೆಕ್ಕು. ನಮ್ಮ ಊಟಕ್ಕೆ ನಾವೇ ದುಡಿಯೆಕ್ಕು ಹೇಳ್ತ ವಿಷಯವ ಗುಂಡಜ್ಜ° ಲಾಯ್ಕಲ್ಲಿ ವಿವರಣೆ ಕೊಡ್ತವು.
~
ಕಗ್ಗವ ಸುಶ್ರಾವ್ಯವಾಗಿ ದೀಪಿಅಕ್ಕ ಹಾಡಿದ್ದರ ಕೇಳುಲೆ ಇಲ್ಲಿದ್ದು:
ದೀಪಿಕಾ, ಚೊಲೋ ಬೈ೦ದು. ಹೀ೦ಗೇ ಮುದುವರೆಯಲಿ.
ಅರ್ಥ ವಿವರಣೆ ಮತ್ತೆ ಹಾಡುಗಾರಿಕೆ ಎರಡು ತುಂಬಾ ಲಾಯಿಕ ಆಯಿದು.
ಮುಂದಿನ ಕಂತಿನ ನಿರೀಕ್ಷೆಲಿ
ಧನ್ಯವಾದ ಅಪ್ಪಚ್ಚಿ
ದೀಪಿಕಾ …..ಸೂಪರ್ ….ನಿನಿಗೆ ಹೀಗೆ ಭಾವನೆ ಕೊಡಲು ಹೇಗಾಯಿತು ……ತುಂಬಾ ಚೆನ್ನಾಗಿ ಹಾಡಿದ್ದಿಯ ……ನಾಲ್ಕು ಸಾರಿ ಕೇಳಿ ಆಯಿತು …..ಹೀಗೆ ಹಾಡ್ತಾ ಇರು ….ದೇವರು ನಿನಗೆ ಒಳ್ಳೆಯದು ಮಾಡಲಿ .
ಧನ್ಯವಾದ ಪ್ರತಿಭಾ ಅತ್ತೆ..ತು೦ಬಾ ಖುಶಿ ಆಯ್ತು ನಿಮ್ಮ ಒಪ್ಪವ(comment) ನೋಡಿ 🙂
ದೀಪಿಕಾ ಅಕ್ಕೋ,ಸುಶ್ರಾವ್ಯವಾಗಿ ಚೆಂದಕೆ ಕಗ್ಗವ ಕೇಳ್ಸಿದ್ದಕ್ಕೆ ಧನ್ಯವಾದಂಗೋ,
ಧನ್ಯವಾದ೦ಗೊ.
very good Deepika…..
ಧನ್ಯವಾದ ಅತ್ತೆ 🙂
ಚೆಂದಕ್ಕೆ ಹಾಡಿದ್ದಕ್ಕೆ ದೀಪಿಕಂಗೆ ಅಭಿನಂದನೆಗೊ. ಶ್ರೀ ಅಕ್ಕನ ವಿವರಣೆ ಕೊಶಿ ಆತು.
ಧನ್ಯವಾದ.
ಧನ್ಯವಾದ ಮಾವ..
ದೀಪಿಕಾಕ್ಕೋ …. ಈ ಸರ್ತಿಯಾಣದ್ದು ಎಷ್ಟು ಲಾಯಕ ಆಯ್ದು ಹೇಳಿರೆ…. ಅಷ್ಟೂ ಚೊಕ್ಕ ಆಯ್ದು. ಶುದ್ದಿಗೂ, ಧ್ವನಿಗೂ, ಶ್ರೀ ಅಕ್ಕನ ಸರಳ ಸುಂದರ ವಿವರಣೆಗೂ ಪೆಸ್ಸಲು ಅಭಿನಂದನೆ.
ಧನ್ಯವಾದ ಮಾವ.ನಿ೦ಗೊಳ ಪ್ರೋತ್ಸಾಹದ ಒಪ್ಪವ ನೋಡಿ ಖುಶಿ ಆತು.
ದೀಪಿಕ, ಶ್ರೀಅಕ್ಕ ಸೇರಿ ಬಾರಿ ಚೆ೦ದ ಹಾಡಿ, ಬರದು ವಿವರಿಸಿದ್ದವು. ಅಭಿನ೦ದನೆಗೊ.
ಧನ್ಯವಾದ ಮಾವ.