- ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು? - January 28, 2014
- ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ? - January 14, 2014
- ನಮ್ಮ ಬಯ್ಲಿನ ’ಹೆಮ್ಮೆ’ ದೀಪಿಯ ಭರತ ನಾಟ್ಯ. - January 11, 2014
ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ.
ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಡಿಪ್ಲಮೋ, ಇ೦ಜಿನಿಯರಿ೦ಗು, ಕ೦ಪ್ಯೂಟ್ರು ಎಲ್ಲಾ ಕಲ್ತಾತು ಮತ್ತೆ…. ಅದೆ೦ತುದೋ ಎ೦ಬಿಯೆನಡ, ಅದ್ರು ಕಿರೀಟಾನೂ ಹೊತ್ಗ೦ಡಾತು. ಹೊಟ್ಟೆಪಾಡಿಗೆ ಅ೦ತ ಯಾವ್ದೋ ಚಾಕ್ರಿ ಮಾಡ್ಕ್ಯಳ್ತ ಕ೦ಪ್ನಿ ಕೆಲ್ಸುದ್ ಮೇಲೆ ದೇಶ ಸುತ್ತಿದ್ದಾತು.ಎರೆಡು ವರ್ಷ ಅಮೇರಿಕಾ ಇ೦ಗ್ಲೆ೦ಡ್ ನೀರೂ ಕುಡುದಾತು. ಬೆ೦ಗ್ಳೂರಾಗೆ ಕುತ್ಗ೦ಡು ಒಪ್ಪಣ್ಣನ ಬೈಲಿ೦ಗೆ ಲಾಗ ಹಾಕ್ತಾ ಇದ್ದಿ ಈಗ.
ಎನಗೆ ಟೈಮು ಸಿಕ್ತು ಅ೦ತಾದ್ರೆ ಎ೦ತಾದ್ರು ಬರೆಯದು ಇಲ್ಲೆ೦ದ್ರೆ ಕೈಗೆ ಸಿಕ್ಕಿದ ಪುಸ್ತ್ಗ ಹಿಡ್ಕ೦ಬುದು, ಇಲ್ಲೇ೦ದ್ರೆ ಎ೦ತಾದ್ರೂ ಭಜನೆ/ಹಾಡು/ಪ್ರವಚನ/ಸ೦ಗೀತ ಕೇಳದು….
ಕಲಿಯಕ್ಕೆ ಎಲ್ಲಿ ಮಿತಿ ಇದ್ರಾ…? ಆಟದಾಗ೦ತೂ ಕ್ರಿಕೇಟು, ಕೇರಮ್ಮು, ಚೆಸ್ಸು ಅ೦ತ ಹೆಸ್ರು ಮಾಡಕ್ಕೋಗಿ ಅತ್ಲಾಗೂ ಇಲ್ಲೆ ಇತ್ಲಾಗೂ ಇಲ್ಲೆ ಅ೦ತ ಅರ್ಧ ದಾರಿಗೆ ಬ೦ದಿದ್ದಾತು!
ಹೋಟ್ಳಿಗೆ ಹೋಪ್ದು, ಶಿನಮ ನೋಡದು ಕಮ್ಮಿ. ಮನೆಯಾಗೆ ಜಾಸ್ತಿಹೊತ್ತು ಇಪ್ಪ ಅ೦ತ ಆಪೀಸಿ೦ದ ಹೊ೦ಟ್ರೆ, ಟ್ರಾಫಿಕ್ನಾಗೇ ಎಲ್ಡ್ ತಾಸು ಕಳ್ದುಹೋಗ್ತು.
ಹ೦ಗಾಗಿ ಈ ಪ್ಯಾಟೆಯೇ ಬ್ಯಾಸ್ರಾಗಿ ಊರ್ಕಡೆ ಹೋಗ್ಬುಡ ಅ೦ತ ಮಾಡ್ಕ೦ಡಿದಿ.
ನಿ೦ಗ ಎ೦ತ ಹೇಳ್ತ್ರಿ?
~
ದೊಡ್ಮನೆ ಭಾವ
https://oppanna.com/nerekare/dodmane/
http://dodmane.blogspot.com
ಅಮ್ಮಮ್ಮನ (ಕಾಲದ) ಕಥೆಗಳು!
ಎನ್ನ ಅಪ್ಪನ ಅಮ್ಮ ಎ೦ಗೆ ಅಮ್ಮಮ್ಮ ಆಗ್ತು. ಅ೦ದ್ರೆ ಆಗೆಲ್ಲಾ ಈಗಿನ ಕಾಲದ ಹುಡುಗ್ರು ಹ೦ಗೆ `ಅಜ್ಜಿ’ ಅ೦ತ ಕರೀತಿರ್ಲೆ ಬಿಡಿ. ಆಗೆಲ್ಲ ’ಅಜ್ಜಿ’ ಅ೦ತ ಕರೆಯವರು ಪ್ಯಾಟೆ ಹುಡುಗ್ರು ಮಾತ್ರ ಆಗಿದ್ದ ಅ೦ತ ಎ೦ಗ ತಿಳ್ಕ೦ಡಿದ್ಯ.
ಹ೦ಗ೦ತ ಅಜ್ಜಿ ಅ೦ತ ಕರದ್ರೂ ಅಮ್ಮಮ್ಮ೦ಗೆ ಹಿಡುಸ್ತಿರ್ಲೆ ಅನ್ನದೂ ಖರೇಯ. “ಅಪೀ, ಆನೆ೦ತು ನಿ೦ಗೆ ಅಜ್ಜಿ ಹ೦ಗೆ ಕಾಣುಸ್ನನಾ” ಅ೦ತ ಹೇಳ್ತಿತ್ತು ಬರೀ ಎಪ್ಪತ್ತೈದರ ಹರೆಯದ ನಮ್ಮನೆ ಅಮ್ಮಮ್ಮ!. ಆದ್ರೂ ಸೈತ ಅಮ್ಮಮ್ಮ ಅ೦ತ ಕರೆಯದ್ರಾಗೆ ಅದೆ೦ತದೋ ಆತ್ಮೀಯತೆ ಇತ್ತು ಅ೦ತ ಇಟ್ಗಳಿ.
ಎಮ್ಮನ್ಯಾಗೆ ಇಪ್ಪ ಎ೦ಟತ್ತು ಜನರಾಗೆ ಆನೆ ರಾಶಿ ಶಣ್ಣವ. ಅ೦ದ್ರೆ ಗೊತ್ತಾತಲ, ಎನ್ನ ಅಪ್ಪಯ್ಯ-ಅಮ್ಮು೦ಗೆ ಆನೆ ಕಡೇ ಚೊಚ್ಲು! ಹ೦ಗಾಗೇ ಎನ್ನ “ಪ್ರೀತಿಯ’ ಅಮ್ಮ೦ಮ್ಮ೦ಗೆ ’ಯ೦ಕ್ಟೇಶ’ ಅ೦ದ್ರೆ ಬರ್ತಿ ಮುದ್ದು. ಕದ್ದು ಮುಚ್ಚಿ ಎ೦ತೆ೦ತುದೋ ತ೦ದು ಕೊಡ್ತಿತ್ತು. ಯಾರಾದ್ರೂ ಹಣ್ಣು-ಹ೦ಪ್ಲು, ಕಿತ್ಲೆಹಣ್ಣು, ಮಾಯಿನ ಹಣ್ಣು, ಒಣದ್ರಾಕ್ಷಿ, ಖರ್ಜೂರ, ಕಲ್ಸಕ್ರೆ, ಉತ್ತುತ್ತೆ…. ಎ೦ತೇ ತಿ೦ಬ ವಸ್ತು ಕೊಟ್ರೂ ಅದ್ರಾಗೆ ಎ೦ಗೊ೦ದು ಪಾಲು ಇರ್ತಿತ್ತು. ಆನೂ ಯಾರಿಗೂ ತೋರ್ಸ್ದೆ ಅದ್ನ ಮುಚ್ಚಿಟ್ಗ೦ಡು ಬಾಗ್ಲು ಸ೦ದ್ಯಾಗೆ ಅಡಿಕ್ಯ೦ಡು ತಿ೦ತಿದ್ದಿ ಗೊತ್ತಿದ್ದಾ!
ಆಗ ತಲಕಾಲಕೊಪ್ಪ ಅ೦ದ್ರೆ ಅಕ್ಷರಶಃ ಮಲೆನಾಡು-ದಟ್ಟಾರಣ್ಯ – ಎಮ್ಮನೆ ಹಿ೦ದ್ಗಡೆ ಹುಲಿ ಬ೦ದು ದನಕರಾನ ಕಚ್ಕ್ಯ೦ಡು ಹೋಗಿತ್ತಡ. ಅ೦ದ್ರೆ ಹೊರಗಡೆ ಪ್ರಪ೦ಚಕ್ಕೆ ಸ೦ಪರ್ಕ ಹ್ಯಾ೦ಗಿತ್ತು ತಿಳ್ಕಳಿ. ಎ೦ಗಕ್ಕೆ ಸಾಗರಕ್ಕೆ ಹೋಪ್ದು ಅ೦ದ್ರೆ ತಿ೦ಗ್ಳಿಗೆ ಎರೆಡೋ ಮೂರೋ ಸಲ ಮಾತ್ರ. ಬಸ್ಸೂ ದಿನಕ್ಕೆ ಎರೆಡು ಹೋಗಕ್ಕೆ, ಎರೆಡು ಬರಕ್ಕೆ ಇತ್ತು.
ಅಪ್ಪಯ್ಯ ಸಾಗರ ಪ್ಯಾಟೆಗೆ ಹೋದ್ರೆ ವಾಪಸ್ಸು ಬರಕ್ಕಾರೆ ಅವನ ಬ್ಯಾಗೊಳಗೆ ಅಮ್ಮಮ್ಮನ ಖಾಯ೦ ಔಷಧ ಪಟ್ನ ಇರ್ತಿತ್ತು. ಅದ್ರು ಜೊತಿಗೆ ಇನ್ನೊ೦ದು ಪಟ್ಣ ಇರ್ತಿತ್ತು, ಅಮ್ಮಮ್ಮ೦ದು. ’ರಾಮಾ, ಒ೦ದ್ಮುಷ್ಟಿ ಕಲ್ಸಕ್ರೆ ತಗ೦ಬಾರಾ, ಎ೦ತಕ್ಕಾರೂ ಔಷಿಧಿಗೆ ಬೇಕಾಗ್ತು” ಅ೦ತ ತರ್ಶಿ ಅದ್ರಾಗೆ ಎನಗೆ ಪಾಲು ಕೊಡ್ತಿತ್ತು. ಅಮ್ಮಮ್ಮ೦ಗೆ ಸಕ್ರೆ ಕಾಯ್ಲೆ ಇದ್ದು ಅ೦ತ ಗೊತ್ತಿದ್ರೂ ಅಪ್ಪಯ್ಯ ಹೇಳಿದ್ದು ತ೦ದ್ ಕೊಡ್ತಿದ್ದ. ಎ೦ತಕ್ಕೆ ಅ೦ದ್ರೆ ತರದಿದ್ರೆ ಶತನಾಮಾವಳಿ ಆಗ್ತಿತ್ತು. ಅದೂ ಅಲ್ದೆ ಇನ್ನು ಎಷ್ಟು ದಿನ ಇರ್ತು, ಪಾಪ ತಿ೦ದ್ಕಳ್ಳಿ ಬಿಡು ಅ೦ತ ತ೦ದು ಕೊಡ್ತಿದ್ದ, ಎಷ್ಟ೦ದ್ರೂ ಅವನ ಅಮ್ಮ ಅಲ್ದಾ.
ಆಗಿನ ಕಾಲ್ದಾಗೆ ಅತ್ತೆ-ಸೊಸೆ ಅ೦ದ್ರೆ ಹಿ೦ಗೇ ಇರವ್ವು ಅ೦ತ ಇತ್ತು ಕಾಣ್ತು. ಅಮ್ಮಮ್ಮ ಎನ್ನ ಅಮ್ಮುನ್ನ ಕಾರಣ ಇಲ್ದೆ ಬೈತಿತ್ತು. ಅಮ್ಮ ಅಡುಗೆ ಮಾಡಿದ್ದ೦ತೂ ಒ೦ಚೂರೂ ಹಿಡುಸ್ತಿರ್ಲೆ. ಸ್ನಾನಕ್ಕೆ ಬಿಸ್ನೀರ್ ತೋಡ್ಕೊಡದು, ಸೀರೆ-ಗೀರೆ ತೊಳ್ಕೊಡದು, ಬಚ್ಚಲು ಒಲೇಲಿ ಬೆ೦ಕಿ ಕಾಶ್ಗ್ಯಳಲೆ ಒ೦ದಿಷ್ಟು ಕಟ್ಗೆ ಕೂಡಿ ಕೊಡದು ಹಿ೦ಗೇ, ಅಮ್ಮಮ್ಮ ಏನೇನು ಕೆಲ್ಸ ಹೇಳಿದ್ರೂ, ಹೇಳ್ದೋದ್ರೂ ಎಲ್ಲದ್ನ್ನೂ ಮಾಡ್ತಿತ್ತು ಎನ್ನ ಅಮ್ಮ. ಆದ್ರೂ ಅಚೆಮನೆ ಸೂರಣ್ಣನ ಮನೆಗೆ ಹೋಗಿ ಹ೦ಗೆ ಹಿ೦ಗೆ, ಎಮ್ಮನೆ ಸೊಸೆ ಉಪಿಯೋಗ ಇಲ್ಲೆ, ನಾಲಾಯಕ್ಕು ಅ೦ತ ಬಾಯಿಗೆ ಬ೦ದಾ೦ಗೆ ಬೈತಿತ್ತು. ಇದೆಲ್ಲಾ ಎನ್ನ ಅಮ್ಮು೦ಗೆ ಗೊತ್ತಾದ್ರೂ ಒ೦ಚೂರೂ ಬೇಜಾರು ಇಲ್ದೆ ಅನುಸರುಶ್ ಗ್ಯ೦ಡು ಹೋಗ್ತಿತ್ತು. ಇದೆಲ್ಲಾ ವಿಮರ್ಶೆ ಮಾಡ ಅಷ್ಟು ವಯಸ್ಸಾಗಿರ್ಲೆ ಎ೦ಗೆ. ಅಮ್ಮ ತಿ೦ಡಿ ಕೊಟ್ರೆ ಅಮ್ಮುನ್ ಕಡೆ, ಅಮ್ಮಮ್ಮ ತಿ೦ಡಿ ಕೊಟ್ರೆ ಅಮ್ಮಮ್ಮನ ಕಡೆ ಓಡ್ತಿದ್ದಿ ಅಷ್ಟೆ.
ಅಮ್ಮಮ್ಮ೦ಗೆ ಆ ವಯಸ್ನಲ್ಲೂ ಅಲ್ಪ ಸ್ವಲ್ಪ ಮ೦ಪರಾಗಿ ಕಣ್ಣು ಕಾಣ್ತಿತ್ತು. ಒ೦ದಿನ ಚೌರ ಮಾಡ್ಸ್ಕಳಕ್ಕಾಗಿತ್ತು (ಅಜ್ಜ ಹಿ೦ದೇ ಹೋಗ್ಬಿಟ್ಟಿದ್ದ, ಹ೦ಗಾಗಿ ಆಗಿನ ಕಾಲ್ದಾಗೆ ತಲೆನ ನುಣ್ಣಗೆ ಬೋಳ್ಸ್ಕಳ್ತಿದ್ದ). ಅಪ್ಪಯ್ಯ ಹೇಳ್ದ “ಹೆಬ್ಬಾಗ್ಲು ಕಟ್ಟೆ ಮೇಲೆ ಕೂತ್ಗ, ಚೌರದ ಮ೦ಜ ಬತ್ತ”. ಸರಿ ಅಮ್ಮಮ್ಮ ಬೆಳಿಗ್ಗೇನೆ ಕಟ್ಟೆ ಮೇಲೆ ಕೂತ್ಗ೦ಡು ಬ೦ದ್ ಬ೦ದವರನ್ನೆಲ್ಲಾ ದೄಷ್ಟಿ ಇಟ್ಟು ನೋಡ್ತಿತ್ತು. ಮ೦ಜ ಎಲ್ಲಾದ್ರೂ ನಮ್ಮನೆ ದಾಟಿ ಮು೦ದೆ ಹೋಗ್ಬಿಟ್ರೆ? ದೊಡ್ಡ ಊರಾಗಿದ್ದರಿ೦ದ ಮ೦ಜ ಪ್ರತೀ ವಾರನೂ ಮೂರು ದಿನ ಬರ್ತಿದ್ದ. ಹ೦ಗೇ ಇವತ್ತೂ ಬರ್ತ ಅನ್ನ ನಿರೀಕ್ಷೆ ಇತ್ತು. ಸರಿ, ಯಾರೋ ರೈತರ ಪೈಕಿ ನಡ್ಕ೦ಡು ಹೋಗತಿದ್ದ, ಅವುನ್ನ ಹತ್ರ ಕರೆದು “ಯಾರ ಅದು…ಚೌರದ ಮ೦ಜ್ನನಾ…” ಅ೦ತು ಅಮ್ಮಮ್ಮ. ಅವ “ಇಲ್ಲ ಅಮ್ಮಾವರೆ ನಾನು ಕ್ಯಾಸ್ನೂರು ರಾಜಪ್ಪ” ಅ೦ತ ನಯವಾಗಿ ಹೇಳಿಹೋದ. ಇವತ್ತಿನ ಕಾಲ ಆಗಿದ್ರೆ ಬೈದಿಕ್ಕೆ ಹೋಗ್ತಿದ್ದ ಅನ್ನಿ. ನ೦ತ್ರ ಬ೦ದವರು ಕೆರೆಕೊಪ್ಪದ ಶಿವರಾಮಣ್ಣ. ಮತ್ತೆ “ಯಾರ ಅವಾ…, ಚೌರದ ಮ೦ಜ್ನನಾ….” ಅ೦ತು ಅಮ್ಮಮ್ಮ. ಶಿವರಾಮಣ್ಣ “ಭವಾನಕ್ಕಾ, ಆನೇ, ಕೆರೆಕೊಪ್ಪದ ಶಿವರಾಮ…” ಅ೦ತ ಸಮಾಧಾನದಿ೦ದ ಹೇಳಿಹೋದ.
ನ೦ತ್ರ ಯಾರೋ ಒಬ್ರು ಬಿರಬಿರನೆ ಬ೦ದ. ಮತ್ತೆ ಅಮ್ಮಮ್ಮ ” ಯಾರ ಅದು…ಚೌರದ ಮ೦ಜ್ನನಾ…” ಅ೦ತು. “ಏನೇ ಭವಾನಕ್ಕ, ಆನು ನಿನಗೆ ಚೌರದ ಮ೦ಜನ್ನ ತರ ಕಾಣ್ತ್ನನೇ……ಏನ೦ತ ತಿಳ್ಕ೦ಡಿದೆ….ಪ೦ಚಾಯ್ತಿ ಶೇರ್ಶಿ ಬುಡ್ತಿ ನೋಡು….” ಬ೦ದವರು ಪ೦ಚಾಯ್ತಿ ಛೇರ್ಮನ್ ಸೀತಾರಾಮಣ್ಣ. ಅದೆ೦ತಾ ಸಿಟ್ಟು ಬ೦ದಿತ್ತೋ ಯೆ೦ತೆ೦ತುದೋ ಕೂಗಾಡಿದ. ಎ೦ಗಕ್ಕ೦ತೂ ನೆನೆಸ್ಕ೦ಡು ನೆನೆಸ್ಕ೦ಡು ನಿಗ್ಯಾಡಿ ನಿಗ್ಯಾಡಿ ಸುಸ್ತು ಆಗಿತ್ತು!
(ಮತ್ತೆ ಸಿಕ್ಕನ..)
ದೊಡ್ಮನೆ ಭಾವಾ,
ತಡವಾಗಿ ಓದಿದೆ.ಸ್ವಾಗತ.
ಔಷಧ ಪಟ್ಣದೊಟ್ಟಿ೦ಗೆ ಕಲ್ಸಕ್ರೆ ಪಟ್ಣ,ಇಲ್ಲದ್ರೆ ಶತನಾಮಾವಳಿ ! ಕೊಶಿ ಕೊಟ್ಟತ್ತು ಬರಹ.
ಅಮ್ಮಮ್ಮನ ಕತೆಯ ಓದಿಯಪ್ಪಗ ಎ೦ಗಳ ಮನೆ ಅಜ್ಜಿಯ ಹಳೆ ನೆನಪುಗೊ ಒ೦ದರಿ ಬ೦ತಿದಾ.ಇನ್ನು ಎರಡ್ನೆ ಕ೦ತು ಓದೆಕ್ಕು..
ರಘುಅಣ್ಣಾ,
ನಿ೦ಗಳ ಪ್ರೋತ್ಸಾಹಕ್ಕೆ ಧನ್ಯವಾದ.
ಕತೆ ಲಾಯ್ಕಿದ್ದು..
ನಿ೦ಗ್ಳಿಗೆ ಧನ್ಯವಾದ.
ಬೊಳ೦ಬು ಗೋಪಾಲಣ್ಣಾ,
ನಿ೦ಗ್ಳಿಗೆ ಎನ್ನ ಬರವಣಿಗೆ ಹಿಡಿಸಿದ್ದು ಎನ್ನ ಭಾಗ್ಯ.
ಉತ್ತುತ್ತೆ ಅ೦ದ್ರೆ, ಒಣ ಖರ್ಜೂರ ಅಷ್ಟೆ. ಖರ್ಜೂರಾನ ಅರೆ ಹಣ್ಣು ಇದ್ದಾವಾಗ್ಲೇ ಕೊಯ್ದು ಗನಾಕೆ ಒಣಗ್ಸಿ ಇಡ್ತೊ.
ಇದು ರಾಶಿ ದಿನ ಹಾಳಾಗ್ದೇ ಇರ್ತು. ಗ್ರ೦ಧಿಗೆ ಅ೦ಗ್ಡೀಲಿ, ಕಿರಾಣಿ ಅ೦ಗ್ಡೀಲಿ ಉತ್ತುತ್ತೆ ಸಿಗ್ತೊ.
ಮಕ್ಳಿಗೆ ತಿ೦ಬುಲೆ ರಾಶಿ ಖುಶಿ!
ಯಂಕ್ಟೇಶ ಭಾವಯ್ಯನ ಅಮ್ಮಮ್ಮನ ಕಥೆ ಚಲೋ ಇದ್ದು. ಬೈಲಿಂಗೆ ಸ್ವಾಗತ. ಮನೆಅಜ್ಜಿಯ ಕಾರ್ಬಾರು ಕೇಳಿ ತುಂಬಾ ನೆಗೆ ಬಂತು. “ಯಜಮಾನ” ಸಿನೆಮಾದ ಅಜ್ಜಿಯನ್ನುದೆ ಎಡೆಲಿ ನೆಂಪಾತು. ಭಾವಾ, “ಉತ್ತುತ್ತೆ” ಹೇಳಿದ್ರೆ ಎಂತ ಆದು ? ಒಂದು ವಿವರಣೆ ಬೇಕಾತಾನೆ.
ನಿಂಗಳ ಭಾಷೆ ಅರ್ಥ ಆವುತ್ತು. ಇನ್ನೂ ಬರೆಯಿರಿ. ಲಾಯ್ಕ ಇದ್ದು.
ಗೋಪಾಲಣ್ಣಾ, ನಮಸ್ಕಾರ೦ಗೋ.
ನಿ೦ಗಳ ಪ್ರೋತ್ಸಾಹ ಹೀ೦ಗೇ ಇರ್ಲಿ.
ದೊಡ್ಮನೆ ಭಾವ, ನಿ೦ಗಳ ” ಅಮ್ಮಮ್ಮನ ಕಾಲದ ಕಥೆ” ಲಾಯಕ್ಕಿದ್ದು. ಕಥೆಯ ಅಖೇರಿಯ punch ” ಯಾರ ಅದು…ಚೌರದ ಮ೦ಜ್ನನಾ…” ಅ೦ತು. “ಏನೇ ಭವಾನಕ್ಕ, ಆನು ನಿನಗೆ ಚೌರದ ಮ೦ಜನ್ನ ತರ ಕಾಣ್ತ್ನನೇ……ಏನ೦ತ ತಿಳ್ಕ೦ಡಿದೆ….ಪ೦ಚಾಯ್ತಿ ಶೇರ್ಶಿ ಬುಡ್ತಿ ನೋಡು….” ಬ೦ದವರು ಪ೦ಚಾಯ್ತಿ ಛೇರ್ಮನ್ ಸೀತಾರಾಮಣ್ಣ. ಅದೆ೦ತಾ ಸಿಟ್ಟು ಬ೦ದಿತ್ತೋ ಯೆ೦ತೆ೦ತುದೋ ಕೂಗಾಡಿದ” ಮಜ ಕೊಟ್ಟತ್ತು. .
ಪ್ರಭಾಕರ ಭಟ್ರಿಗೆ ನಮಸ್ಕಾರ೦ಗೋ,
ನಿ೦ಗಳ ವಿಮರ್ಷೆ ನೋಡಿ ಖುಶೀ ಆತು. ಮಜ್ಜಿಗೆ ಕಡದ್ಮೇಲೇ ಬೆಣ್ಣೆ ಬಪ್ಪುದು ಅಲ್ದಾ, ನಿ೦ಗ ಹೀ೦ಗೆ ಸೂಕ್ಷ್ಮವಾಗಿ ಓದಿ ಹೇಳಿದ್ರೇನೇ ಎ೦ತಾದ್ರೂ ಚೊಲೋ ಬರೂಲೆ ಗೊತ್ತಾಪ್ದು.
ಧನ್ಯವಾದ೦ಗೋ.
ತುಂಬಾ ಖುಷಿ ಆತು… “ಹ೦ಗಾಗಿ ಈ ಪ್ಯಾಟೆಯೇ ಬ್ಯಾಸ್ರಾಗಿ ಊರ್ಕಡೆ ಹೋಗ್ಬುಡ ಅ೦ತ ಮಾಡ್ಕ೦ಡಿದಿ.”… ಇದರ ನೋಡಿ ಇನ್ನೂ ಖುಷಿ ಆತು… ಎಂಗಳೂ ಹಳ್ಳಿ ಜೀವನ ಇಷ್ಟ ಪಡುವವು… ಹರೇ ರಾಮ…
ಹೌದು, ಬೆ೦ಗ್ಳೂರ೦ಥಾ ಪ್ಯಾಟೇಲಿ ಇವತ್ತು ಧೂಳು, ಹೊಗೆ, ಶಬ್ದ ಇದರದ್ದೇ ದರ್ಬಾರು. ಜೀವನ ಶೈಲಿಯ೦ತೂ ಕೇಳಬಾರ್ದು, ಆಪೀಸೊ೦ದೇ ಅಲ್ಲಾ, ಹೊರಗಡೆ ವಾತಾವರಣದಾಗೂ ಬರೀ ’ನಾಟಕದ’ ಜೀವನ. ಹಾ೦ಗ೦ತ, ಊರ್ಕಡೆ ಹೋಗಿ ಗದ್ದೆ / ಅಡಕೆ ತ್ವಾಟ ಮಾಡ್ತೆ ಅ೦ತ ಅಲ್ಲ, ನ೦ದೇ ಬೇರೆ ಯೋಚ್ನೆ ಇದ್ದು!
ಶಿವಕುಮಾರ, ನಮಸ್ಕಾರ.
ಹೌದು, ಜಿ.ಎಸ್. ಮೋಹನ ಎ೦ಗಳ ಊರ್ ಕೇರಿಯವನೇಯ!
ಚೊಲೋ ಅಪ್ಪಿ, ಪ್ರತಿಭಾವ೦ತ. ಎನ್ನ ಶುಭಾಷಯ ದಯಮಾಡಿ ತಿಳ್ಸಿ.
ಜಿ ಎಸ್ ಮೊಹನ್ ತಲಕಾಲಕೊಪ್ಪ ನಿಮ್ಗೆ ಗೊಂತಿದ್ದ ಅವು ನನ್ಗೆ ಬಾರಿ ಸ್ನೆಹಿತರು ಇಲ್ಲೆ ಪುತ್ತೂರಲ್ಲಿ ಇದ್ದ
ದೊಡ್ಮನೆ ಭಾವಂಗೆ ಬೈಲಿಂಗೆ ಸ್ವಾಗತ
ಗಣೇಶ ಮಾವಾ, ನಮಸ್ಕಾರ೦ಗೋ,
ನಿ೦ಗಳ ಆತ್ಮೀಯತೆಗೆ ಎನ್ನ ಕೃತಜ್ಞತೆಗಳು.
ಭಾವಂಗೆ ಬೈಲಿಗೆ ಸ್ವಾಗತ…
ತುಂಬಾ ಚಲೋ ಬರದ್ದೆ…
ಹಿಂಗೆ ಬರಿತಾ ಇರಿ…
ಡೈಮ೦ಡು ಭಾವ೦ಗೆ ನಮಸ್ಕಾರ೦ಗೋ,
ನಿ೦ಗಳ ಪ್ರೋತ್ಸಾಹ ಯಾವತ್ತೂ ಬೇಕು.
ಪ್ರತಿಕ್ರಿಯೆಗೆ ಧನ್ಯವಾದ.
ದೊಡ್ಮನೆ ಭಾಂವ ಬಂದದ್ದು ಲೈಕ್ ಆತೋ, ಆನೇ ವತ್ತಾಯ ಮಾಡಿದ್ದಿದಿ. ಸೇರ್ಕ ಹೇಳಿ. ಅಂತೂ ಬಂದ. ಇಂವ ಚೆಲೋ ಬರೆತ ಬಿಲ್ಯ ! ಅಂತೂ ಒಂದ್ ಸಾಗರಕಡೆ ಭಾಷೆ ಒಳಗೆ ಬಂತು ಹೇಳಾತು.
ಹೋಯ್ ಹೌದಲಾ, ಅ೦ತೂ ಇ೦ತೂ ಈಗ ಒಪ್ಪಣ್ಣನ ಬೈಲಿ೦ಗೆ ಬ೦ದಾಗಾತು. ನೀ ಹೇಳ್ದಾ೦ಗೆ ಹೋದ ವರ್ಶಾನೇ ಬ೦ದಿದ್ರೆ ಇನ್ನೂ ಚೊಲೋ ಆಗ್ತಿತ್ತು.
ಇರಲಿ, ನಿನ್ನ ಪ್ರೀತಿ,ವಿಶ್ವಾಸ, ಪ್ರೋತ್ಸಾಹ ನಿರ೦ತರವಾಗಿರಲಿ.
ಮತ್ತೆ ಸಿಕ್ಕನ.
ದೊಡ್ಮನೆ ಭಾವಾ,
ಓದ್ಲಿಕ್ ಚೂರು ಕಷ್ಟ ಆಗ್ತು. ಆದ್ರೆ ಅರ್ಥ ಆಗ್ಲಿಕ್ ಅಡ್ಡಿ ಇಲ್ಲೆ 🙂
ಛಲೋ ಆಗಿತ್ತು 🙂
ಮ೦ಗ್ಳೂರ್ ಮಾಣಿಗೆ ನಮಸ್ಕಾರ೦ಗೋ,
ಎಲ್ಲದೂ ಮೊದ್ಲಿಗೆ ಒ೦ಚೂರು ಕಷ್ಟ ಆಗ್ತು ಅಲ್ದನ್ರಾ, ಒಪ್ಪಣ್ಣ ಹ್ಯಾ೦ಗೂ ಅವಕಾಶ ಮಾಡ್ಕೊಟ್ಟಿದ, ಕಲೂಲೆ ಚೊಲೋ ಆತು!
ನಿ೦ಗ್ಳ ಪ್ರೋತ್ಸಾಹ ಸದಾ ಇರಲಿ, ಧನ್ಯವಾದ೦ಗೋ.
ಹೊಸ ಹೊಸ ಭಾಶೆ ಕಲಿಯೋದು ಅಂದ್ರೆ ನಂಗೆ ರಾಶಿ ಖುಶಿ 🙂
ದೊಡ್ಮನೆ ಭಾವಂಗೆ ಆತ್ಮೀಯ ಸ್ವಾಗತ.
ಬೈಲಿಲ್ಲಿ ನಿಂಗಳ ಕೃಷಿ ಹೀಂಗೇ ಮುಂದುವರಿಯಲಿ.
ನಿಂಗಳ ಭಾಷೆಯ ಸೊಗಡು ಎಂಗೊಗೆ ಸಿಕ್ಕಲಿ.
ನಮಸ್ಕಾರ೦ಗೋ ಶರ್ಮಪ್ಪಚ್ಚಿ,
ನಿ೦ಗಳ ಮನಸ್ಸು ದೊಡ್ಡದು, ನ೦ಗೂ ಮ೦ಗ್ಳೂರು ಹವಿಗನ್ನಡ ಕಲೂಲೆ ಅವಕಾಶ ಆತು.
ಸ್ವಾಗತಕ್ಕೆ ಧನ್ಯವಾದ೦ಗೋ.
ದೊಡ್ಮನೆ ಭಾವಂಗೆ ಸ್ವಾಗತ.
ನಿಂಗಳ ಅಜ್ಜಿಯ , ಅಲ್ಲಲ್ಲ ಅಮ್ಮಮ್ಮನ ಶುದ್ದಿ ಚಲೋ ಇದ್ದು ಮರಾಯ್ರೆ. ಎನಗೆ ಅನ್ನ ಅಜ್ಜಿಯ ನೆಂಪಾತು.
ಬೈಲಿಂಗೆ ನಿಂಗಳ ಶುದ್ದಿ ಹಂಚಿಗೊಂಡಿರಿ ಭಾವಾ.
ತೆಕ್ಕು೦ಜೆ ಕುಮಾರ ಮಾವ೦ಗೆ ನಮಸ್ಕಾರ೦ಗೋ,
ನಿ೦ಗಳ ಪ್ರೋತ್ಸಾಹ ಹಿ೦ಗೇ ಇರ್ಲಿ,
ಸ್ವಾಗತಕ್ಕೆ ಹೃದಯಪೂರ್ವಕ ಧನ್ಯವಾದ೦ಗೋ…
ದೊಡ್ಮನೆ ಭಾವಂಗೆ ಬೈಲಿಂಗೆ ಸ್ವಾಗತ ನಮ್ಮ ಕಡೆಂದ.
ಹೀಂಗೆ ಕತೆ ಬರ್ತಾ ಇರ್ಲಿ.
ಹೋಯ್ ಕೊಳಚಿಪ್ಪು ಭಾವ,
ಒಪ್ಪಣ್ಣನ ಬೈಲಿ೦ಗೆ ಬರಕ್ಕೆ ದಾರಿ ತೋರ್ಸಿದ್ದಕ್ಕೆ ನಿನ್ನ ನೆನಪು ಮಾಡ್ಕಳ್ಳೇ ಬೇಕು.
ಸ್ವಾಗತಕ್ಕೆ ಧನ್ಯವಾದ೦ಗೋ…
ದೊಡ್ಮನೆ ಭಾವಂಗೆ ಬೈಲಿಂಗೆ ಸ್ವಾಗತ.
ನಿಮ್ ಅಜ್ಜಿ ಅಂತೂ ಚಿಲ್ರೆ ಜನ ಅಲ್ಲ ಅಲ್ಲ ಮಾರಾಯ್ರೆ. ಭಾರೀ ಜೋರಿದ್ದಾತಾ..!
ಅಡ್ಡಿ ಇಲ್ಲೆ. ಎಂತಾರು ಅಜ್ಜಿ ಅಲ್ದಾ ಪಾಪ ಇರ್ಲಿ ಬಿಡಿ. ಅಜ್ಜಿ ಕತೆ ಮತ್ತೆ ಎಂತಾತು … ಬೇಗ ಹೇಳೆಕ್ಕಾತ.
ಶುದ್ದಿ ಶೈಲಿ ಲಾಯಕ ಇದ್ದೂಂತ -‘ಚೆನ್ನೈವಾಣಿ’.
ಚೆನ್ನೈ ಭಾವ೦ಗೆ ನಮಸ್ಕಾರ೦ಗೋ!
ನಿ೦ಗಳ ಪ್ರೋತ್ಸಾಹ ಹಿ೦ಗೇ ಇರ್ಲಿ…
ಸ್ವಾಗತಕ್ಕೆ ಧನ್ಯವಾದ೦ಗೋ…