Oppanna.com

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1

ಬರದೋರು :   ಮಂಗ್ಳೂರ ಮಾಣಿ    on   17/05/2012    11 ಒಪ್ಪಂಗೊ

ಮಂಗ್ಳೂರ ಮಾಣಿ
ಬೈಲಿನ ಮಾಣಿ ಆಪೀಸಿಂಗೆ ಹೋಪಲೆ ಸುರು ಮಾಡಿದ್ದ° ಇದಾ. ಹೊಸ ಹೊಸ ವಿಷಯ ಕಲಿವ ಖುಶಿ ಅವಂಗೆ 🙂
ಸುಮಾರು ಸಣ್ಣೈವತ್ತು ಜೆನ ಇದ್ದವು ಆಪೀಸಿಲ್ಲಿ, ಉದಿಯಪ್ಪಗ ಒಂಭತ್ತೂವರೆಗೆ ಬಾಗಿಲು ತೆಗದರೆ ಹೊತ್ತೋಪಗ ಆರು ಘಂಟೆಯ ವರೆಗೆ ಅವ್ವೆಲ್ಲರೂ ಒಂದು ಕುಟುಂಬದ ಹಾಂಗೆ. ಒಬ್ಬನ ಕಾಲು ಇನ್ನೊಬ್ಬ° ಎಳಕ್ಕೊಂಡು, ತಮಾಷೆ ಮಾಡಿಂಡು, ಗೊಂತಿಲ್ಲದ್ದರ ಕೇಳಿ – ಗೊಂತಿಪ್ಪದರ ಹೇಳಿ, ಒಬ್ಬಂಗೊಬ್ಬ° ಆಗಿಂಡು ಬದ್ಕುತ್ತವು. 🙂
ಎಲ್ಲಿಯೂ ಎರಡು ಪಂಥ ಇಲ್ಲೆ.
.
ಇಲ್ಲೆಯೋ ಕೇಳಿರೆ? ಇದ್ದು – ಊಟಕ್ಕಪ್ಪಗ ಇದ್ದು.
ಒಂದು ಮಾಂಸಾಹಾರಿಗೊ – ಮತ್ತೊಂದು ಸಸ್ಯಾಹಾರಿ(ಗೊ)..!!
ಮಾಣಿ ಸೇರುವಂದ ಮದಲು ಸಸ್ಯಾಹಾರಿ ಹೇಳಿ ಒಬ್ಬ° ಇತ್ತಿದ್ದ° ಈಗ ಎರಡಾಯಿದವು. 😉
ಎಲ್ಲದರಲ್ಲೂ ಒಟ್ಟಿಂಗೇ… ಊಟಕ್ಕಪ್ಪಗ, ಅವು ಬೇರೆ – ಇವ್ವು ಬೇರೆ 🙁
.
ಊಟ ಆದ ಮೇಲೆ ಮತ್ತೆ ಎಲ್ಲೋರೂ ಒಟ್ತಿಂಗೇ ಕೂದು ಒಂದರ್ಧ ಘಂಟೆ ಪಟ್ಟಾಂಗ.
ಹಾಂಗೇ ಒಂದರಿ ಊಟ ಆದ ಮೇಲೆ ಒಂದು ಕೂಸು ಪ್ರಶ್ನೆ ಎತ್ತಿತ್ತು..
“ನೀನು ಮಾಂಸ ತಿಂತಿಲ್ಲೆಯೋ?” ಹೇದು.
“ಇಲ್ಲೆ” ಹೇಳಿದ° ಮಾಣಿ.
“ಮೀನು ಕೂಡಾ ತಿನ್ನುದಿಲ್ವಾ?”
“ಇಲ್ಲೆ” ಹೇಳಿದ° ಮಾಣಿ.
” ಮೊಟ್ಟೆ ಕೂಡಾ ತಿನ್ನುದಿಲ್ವಾ?”
ಈ ಮೂರಕ್ಕೆ ಎಂತ ವೆತ್ಯಾಸ ಹೇಳಿ ಕೇಳೆಕೂ ಹೇಳಿ ಆತು,  ಅದರೂ – “ಇಲ್ಲೆ” ಹೇಳಿದ° ಮಾಣಿ.
“ಎಂತಕೆ?” ಕೇಳಿತ್ತು.
“ಉಮ್ಮಪ್ಪ ಗೊಂತಿಲ್ಲೆ, ಆರೋಗ್ಯಕ್ಕೆ ಒಳ್ಳೇದಲ್ಲ ಹೇಳ್ತವು, ಸಣ್ಣಾಗಿಪ್ಪಗಿಂದಲೂ ತಿನ್ನದ್ದೇ ಇದ್ದ ಕಾರಣ ಅಭ್ಯಾಸ ಇಲ್ಲೆ. ಈಗ ಬೇಕೂ ಹೇಳಿ ಅನ್ಸುತ್ತೂ ಇಲ್ಲೆ” ಹೇಳಿ ಜಾರಿತ್ತು ನಾವು.
ಅಲ್ಲಿಗೆ ಪಟ್ಟಾಂಗದ ಸಮಯವೂ ಮುಗುದ ಕಾರಣ, “ನಾಳೆ ಮಾತಾಡುವ” ಹೇಳಿ ಎದ್ದತ್ತು ಕೂಸು.
ಕೆಲಸದ ನಡೂಕೆ ರಜಾ ಸಮಯ ಸಿಕ್ಕಿಯಪ್ಪಗ ಇಂಟರುನೆಟ್ಟಿಲ್ಲಿ ರಜ್ಜಾ ಹುಡ್ಕಿದೆ,
ಸಿಕ್ಕಿತ್ತು. ಎಂತಕೆ ಸಸ್ಯಾಹಾರ ಒಳ್ಳೆದು ಹೇಳಿ ಕಾರಣ ಸಿಕ್ಕಿತ್ತು.
.
***
.
ಇಲ್ಲಿ ಕೆಳ ಬರದ್ದೆ,
ನಿಂಗೊಗೂ ಬೇಕಾರೆ ಆತು ಹೇಳಿ. 🙂
ಮಾನವ ವಿಕಾಸದ ಅಧ್ಯಯನ ಮಾಡ್ತಾ ಇಪ್ಪವ್ವು ಹೇಳುವ ಪ್ರಕಾರ ನಮ್ಮ (ಮನುಷ್ಯರ) ಪೂರ್ವಜರು ಪ್ರಾಕೃತಿಕವಾಗಿಯೇ ಸಸ್ಯಾಹಾರಿಗೊ ಆಗಿತ್ತಿದ್ದವಡ. ಅವು ಹೇಳುವ ಪ್ರಕಾರ ಮನುಷ್ಯ ದೇಹ ಮಾಂಸವ ಆಹಾರವಾಗಿ ತೆಕ್ಕೊಂಬಲೆ  ಹೇಳಿ ಮಾಡಿಸಿದ್ದಲ್ಲ. ಕೊಲಂಬಿಯಾ ವಿಶ್ವವುದ್ಯಾನಿಲಯದ Dr. G S Huntingen ಹೇಳುವ ಒಂದು ಜೆನ ಈ ವಿಷಯಲ್ಲಿ ಒಂದು ‘ತುಲನಾತ್ಮಕ ಅಧ್ಯಯನ’ ಮಾಡಿತ್ತಡ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ದೇಹರಚನೆಯ ಮೇಲೆ ತಲೆ ಓಡುಸುಯೊಂಡಿಪ್ಪಗ ಆ ಮನುಷ್ಯಂಗೆ ಒಂದು ವಿಷೇಶ ಕಂಡತ್ತು ಅಲ್ಲಿ,
ಎಂತ ಹೇಳಿರೆ,
ನೈಸರ್ಗಿಕವಾಗಿ ಪ್ರಾಣಿಗಳಲ್ಲಿ ಎರಡು ವಿಧ, ಒಂದು ಸಸ್ಯಾಹಾರಿ ಪ್ರಾಣಿಗೊ – ಹಣ್ಣು, ಸೊಪ್ಪು ಎಲ್ಲ ತಿಂದು ಬದುಕುದು, ಮತ್ತೊಂದು ಮಾಂಸಾಹಾರಿ ಪ್ರಾಣಿಗೊ – ಇನ್ನೊಂದು ಸಸ್ಯಾಹಾರಿ ಪ್ರಾಣಿಗಳ ತಿಂದು ಬದುಕುವ ಪ್ರಾಣಿಗೊ. ಇದರಲ್ಲಿ ಸಸ್ಯಾಹಾರಿ ಪ್ರಾಣಿಗಳ ಕರುಳಿನ ಉದ್ದ ಮಾಂಸಾಹಾರಿ ಪ್ರಾಣಿಗಳ ಕರುಳಿನ ಉದ್ದಂದ ಹೆಚ್ಚಿಗೆ ಇರ್ತು. ಮಾಂಸಾಹಾರಿ ಪ್ರಾಣಿಗಳ ಆಹಾರಲ್ಲಿ ಕಡಮ್ಮೆ ನಾರಿನ ಅಂಶ ಮತ್ತೆ ಹೆಚ್ಚು ಪ್ರೋಟೀನು ಇಪ್ಪದಿದಾ? ಅದರ ಹೀರಿಗೊಂಬಲೆ ಅವರ ಕರುಳಿಂಗೆ ಹೆಚ್ಚು ಹೊತ್ತು ಬೇಕಾವುತ್ತಿಲ್ಲೆ. ಹಾಂಗಾಗಿ ಮಾಂಸಾಹಾರಿ ಪ್ರಾಣಿಗಳ ಕರುಳು ಸಸ್ಯಾಹಾರಿ ಪ್ರಾಣಿಗಳ ಕರುಳಿಂದ ಸಣ್ಣಕೇ ಇಪ್ಪದು. ಮನುಷ್ಯರಲ್ಲಿ, ನೈಸರ್ಗಿಕವಾಗಿ ಸಸ್ಯಾಹಾರಿಗಳಾದ ಪ್ರಾಣಿಗಳ ಹಾಂಗೇ ಉದ್ದುದ್ದದ ಕರುಳುಗೊ ಇರ್ತು. ನಮ್ಮ ಕರುಳಿನ ಒಟ್ಟು ಉದ್ದ ಇಪ್ಪತ್ತೆಂಟು ಫೀಟು ಅಡ, ಹೇಳಿರೆ, ಸುಮಾರು ಎಂಟೂವರೆ ಮೀಟ್ರು. ಸಣ್ಣ ಕರುಳು ಅದರ ಮೇಗೆಯೇ ಮಡಕ್ಕೆ ಮಡಕ್ಕೆ ಮಾಡಿ ಇರ್ತು ಇದರ ಗೋಡೆಯೂ ಗಟ್ಟಿ ಇರ್ತು. ಇದು ನಾರು ಪದಾರ್ಥಂಗಳ ಜೀರ್ಣ ಮಾಡ್ಲೆ ಹೇಳಿ ಇಪ್ಪ ನೈಸರ್ಗಿಕ ವೆವಸ್ಥೆ.
ಹಾಂಗಾಗಿ ಮನುಷ್ಯ ಮಾಂಸ ತಿಂದರೆ ಎಂತಕ್ಕು ಹೇಳಿರೆ, ಪೋಶಕಾಂಶ ಹೀರಿಯೊಂಡ ಮೇಲೆಯುದೇ ಮಾಂಸ ದೇಹದ ಒಳವೇ ಕರುಳಿನ ಒಳಾದಿಕೆ ಒಳುದಿರ್ತು ಸುಮಾರು ಹೊತ್ತು. ಪರಿಣಾಮ ಎಂತ ಹೇಳಿರೆ, ಅದು ಅಲ್ಲೆ ಕೊಳದು, ಹೊಸ ಹೊಸ ಜೀವಾಣುಗೊ ಹುಟ್ಟುತ್ತು. ಈ ಜೀವಾಣುಗೊ ಕರುಳಿನ ಕ್ಯಾನ್ಸರ್  ಗೆ ಕಾರಣ ಅಪ್ಪದೂ ಅಲ್ಲದ್ದೆ, ಟೋಕ್ಸಿನ್ ಹೆರ ಹಾಕಲೆ ಹೇಳಿ ಇಪ್ಪ ಯಕೃತ್ತಿನ ಕೆಲಸ ಹೆಚ್ಚಿಗೆ ಮಾಡ್ತು. ಇದರಿಂದ ಯಕೃತ್ತಿನ ಕ್ಯಾನ್ಸರುದೇ ಬಪ್ಪ ಸಾಧ್ಯತೆ ಇದ್ದಡ. ಅಷ್ಟೇ ಅಲ್ಲ, ಮಾಂಸಲ್ಲಿ ಇಪ್ಪ urokinase ಪ್ರೊಟೀನು ಹೇಳ್ತದು ಯೂರಿಯಾದೊಟ್ಟಿಂಗೆ ಸೇರಿಯೊಂಡು ನಮ್ಮ ಮೂತ್ರಪಿಂಡದ ಕೆಲಸವ ಅದು ಮಾಡದ್ದ ಹಾಂಗೆ ಮಾಡ್ತಡ. ಒಂದು ಪೌಂಡು ಮಾಂಸಲ್ಲಿ ಹೀಗಿಪ್ಪ ಹದ್ನಾಲ್ಕು ಗ್ರಾಮು ಕೊಳಕ್ಕಟೆ ಪ್ರೋಟಿನು ಇರ್ತಡ. ಒಂದು ವೇಳೆ ಹೀಂಗಿಪ್ಪ ಕೊಳಕ್ಕಟೆ ಪ್ರೋಟೀನಿನ ದ್ರವರೂಪಕ್ಕೆ ತಂದು ಅದರಲ್ಲಿ ಮನುಷ್ಯ ಜೀವಕಣ ಮಡಗಿತ್ತು ಹೇಳಿ ಆದರೆ, ಅದರ ಪಚನಕ್ರಿಯೆ ಮಾಡುವ ಶಕ್ತಿ ನಿಂದೇ ಹೋವುತ್ತಡ. ಮತ್ತೆ ಮಾಂಸಲಿ ಸೆಲ್ಯುಲಾರು ಮತ್ತು ಫೈಬರಿನ ಅಂಶ ಇಲ್ಲದ್ದ ಕಾರಣ ಮಲ ವಿಸರ್ಜನೆ ಸರಿಯಾಗಿ ಆಗ. ಇದು ಗುದನಾಳದ ಕ್ಯಾನ್ಸರಿಂಗೆ ಕಾರಣ ಅಪ್ಪಲೂ ಸಾಕು. ಮಾಂಸಲ್ಲಿ ಇಪ್ಪ ಕೊಲೆಸ್ಟ್ರೋಲ್ ಅಂಶವುದೇ ಕೊಬ್ಬುದೇ ಸೇರಿಂಡು ಹೃದಯದ ರಕ್ತನಾಳಲ್ಲಿ ಬೇನೆ ಅಪ್ಪ ಹಾಂಗೆ ಮಾಡುಗು. ಇದು ಸಾವಿಂಗೆ ತುಂಬಾ ಹತ್ತರಾಣ ಕಾರಣ ಅಡ. ಮತ್ತೆ ಮಾಂಸವ ಹೊರುದು – ಸುಟ್ಟು ತಿಂಬದು ಎಲ್ಲ ಮಾಡುವಾಗ ಹೆರ ಬಪ್ಪ ರಾಸಾಯನಿಕ ಎಲುಬಿನ ಗೆಡ್ಡೆ ಎಲ್ಲ ಬೆಳವಲೆ ತುಂಬ ಸಹಾಯ ಮಾಡ್ತಡ.
ಅಂಬಗ ಮಾಂಸ ಸೇವನೆಂದ ಎಂತೆಲ್ಲ ಅಪ್ಪಲೆ ಅವಕಾಶ?
  • ಕರುಳಿನ ಕ್ಯಾನ್ಸರು
  • ಯಕೃತ್ತಿನ ಕ್ಯಾನ್ಸರು
  • ಮೂತ್ರಪಿಂಡ ವೈಫಲ್ಯ
  • ಆಹಾರ ಕರಗದ್ದೇ ಇಪ್ಪದು
  • ಗುದನಾಳದ ಕ್ಯಾನ್ಸರು
  • ಎದೆ ಬೇನೆ
  • ಎಲುಬಿನ ಟ್ಯೂಮರು
  • ನೆತ್ತರಿನ ಕ್ಯಾನ್ಸರು

ಇನ್ನೂ ಸುಮಾರೆಲ್ಲ ಇದ್ದು. ಹೇಳ್ತಾ ಕೂದರೆ ಕತೆ ಆಗ. ಸುಲಭಲ್ಲಿ ಹೇಳ್ತರೆ ಮಾಂಸ ತಿಂಬದೂ ಹೇಳಿರೆ ಗೊಂತಿದ್ದೋಂಡು ವಿಷ ತಿಂದ ಹಾಂಗೆ. ಅಬ್ಬೆ ಎಲಿಗೊಕ್ಕೆ ಕ್ಯಾನ್ಸರ್ ಇಪ್ಪ ಪ್ರಾಣಿಯ ಮಾಂಸ ತಿನ್ಸಿಯರೆ ಅದರ ಮಕ್ಕೊಗೂ ಆ ರೋಗ ಬತ್ತಡಪ್ಪ, ಅಂಬಗ ಹೀಂಗೆಲ್ಲಾ ರೋಗ ಇಪ್ಪದರ ತಿಂದರೆ ಎಂತ ಅಕ್ಕಪ್ಪಾ ಗ್ರೇಶಿಯೊಂಡರೇ ಮೈ ನಡುಗುತ್ತು.

.

Professor Irving Fisher  ಹೇಳುವ Yale Universityಯವ° ಅಂಬಗ ಆರು ಹೆಚ್ಚು ಶಕ್ತಿವಂತರು, ಆರಿಂಗೆ ಹೆಚ್ಚು ಸೈರಣೆ- ಸಸ್ಯಾಹಾರಿಗೊಕ್ಕೋ? ಮಾಂಸಾಹಾರಿಗೊಕ್ಕೋ? ಹೇಳುವ ಪ್ರಷ್ನೆ ಮನಸ್ಸಿಂಗೆ ಬಂತಡ. ಒಂದು ಪ್ರಯೋಗ ಮಾಡಿದ ಅವ°. 32 ಸಸ್ಯಾಹಾರಿಗಳೂ 15 ಮಾಂಸಾಹಾರಿಗಳನ್ನೂ ತೆಕ್ಕೊಂಡ° ಅವ°. ಎಷ್ಟು ಹೊತ್ತು ಆವುತ್ತೋ ಅಷ್ಟು ಹೊತ್ತು ಕೈ ಎತ್ತಿ ನಿಂದುಗೊಳ್ಳಿ ಹೇಳಿದ°. ಎಲ್ಲೋರೂ ನಿಂದುಗೊಂಡವು.

  • ಹದಿನೈದು ಮಾಂಸಾಹಾರಿಗಳಲ್ಲಿ ಎರಡೇ ಜೆನಂಗೊಕ್ಕೆ  ಕಾಲರಿಂದ ಅರ್ಧಗಂಟೆ ಕೈ ಎತ್ತಿ ಹಿಡಿವಲೆ ಆದ್ದಡ. ಒಳುದೋರಲ್ಲೆ ಅಷ್ಟಕ್ಕೆ ಸೋತವು.
  • ಸಸ್ಯಾಹಾರಿಗಳಲ್ಲಿ 22 ಜೆನ ಅರ್ಧಗಂಟೆ ಹಿಡುದವಡ
  • ಅವರಲ್ಲಿ 15 ಜೆನ ಅರ್ಧ ಗಂಟೆಂದಲೂ ಹೆಚ್ಚಿಗೆ ಹಿಡುದವಡ
  • 9 ಜೆನಂಗೊ ಒಂದು ಗಂಟೆಗೂ ಹೆಚ್ಚು ಹೊತ್ತು ಹಿಡುದವಡ
  • 4 ಜೆನರು ಎರಡು ಗಂಟೆ ಹಿಡುದವಡ
  • ಒಬ್ಬ° ಪುಣ್ಯಾತ್ಮ ಮೂರು ಘಂಟೆಗೂ ಹೆಚ್ಚು ಹೊತ್ತು ಹಿಡುದಾ° ಅಡ..
ಅಂಬಗ ಸಸ್ಯಾಹಾರಿಗಳಲ್ಲಿ ಸೈರಣೆ ಹೆಚ್ಚು ಹೇಳಿ ಪ್ರಮಾಣ ಆತು ಅವಂಗೆ.
ಒಂದೇ ಮಾತಿಲ್ಲಿ ಹೇಳ್ತರೆ,
ಸಿಗರೇಟು ಎಳವದರಿಂದ ಅಪ್ಪಷ್ಟೇ ಅಥವಾ ಅದರಿಂದ ಅಪ್ಪದ್ದರಿಂದಲೂ ಹೆಚ್ಚು ಹಾನಿ ಮಾಂಸ ಸೇವನೆಂದ ಆವುತ್ತು.
.
.
.
ನವಗೆ ಸಿಕ್ಕುವ ಇತಿಹಾಸವ ನಾವು ಗಮನುಸಿಯರೆ, ತರಕಾರಿ ಮತ್ತೆ ಹಣ್ಣುಗಳೇ ಮನುಷ್ಯನ ಆಹಾರದ ಮುಖ್ಯ ಭಾಗ ಆಗಿತ್ತು. ಶುರೂಆಣ ಗ್ರೀಕ್ ಮತ್ತೆ ಹಿಬ್ರೂ ಪುರಾಣಾಂಗಳೂ ಇದನ್ನೇ ಹೇಳ್ತು. ಈಜಿಪ್ಟಿನ ಹಳೇ ಪಾದ್ರಿಗೊ ಎಂದೂ ಮಾಂಸ ತಿಂದೊಂಡು ಇತ್ತಿದ್ದವಿಲ್ಲೆ. ದೊಡ್ಡ ದೊಡ್ಡ ಗ್ರೀಕ್ ತತ್ತ್ವ ಜ್ಞಾನಿಗೊ –  ಪ್ಲೇಟೋ, ಡಯೋಜಿನ್ ಮತ್ತೆ ಸಾಕ್ರೆಟಿಸ್ ಹೇಳುವವ್ವೆಲ್ಲರೂ ಸಸ್ಯಾಹಾರಿಗಳೇ ಆಗಿತ್ತಿದ್ದವು ಹೇಳಿ ಇದ್ದು.
ಭಾರತಲ್ಲಿ ನೋಡಿರೆ, ಬುದ್ಧ° ಸಸ್ಯಾಹಾರವನ್ನೇ ಪ್ರತಿಪಾದಿಸಿದ°, ಅಷ್ಟೇ ಅಲ್ಲ, ಅವನ ಶಿಷ್ಯರಿಂಗೂ ಅದನ್ನೇ ಹೇಳಿದ°. ಅವ° ಹೇಳ್ತ°, ” ಮಾಂಸ ತಿಂಬ ಜೆನಂಗೊ ಒಬ್ಬರು ಇನ್ನೊಬ್ಬರ ಕೊಲ್ಲುತ್ತವು ಮತ್ತೆ ತಿಂತವು – ಈ ಜನ್ಮಲ್ಲಿ ಆನು ನಿನ್ನ ತಿಂತೆ, ಇನ್ನಾಣ ಜನ್ಮಲ್ಲಿ ನೀನು ಎನ್ನ ತಿಂತೆ. ಇದು ಹೀಂಗೇ ಮುಂದುವರೆತ್ತು. ಅಷ್ಟೇ ಅಲ್ಲ ಅದು ಮಾಯೆಯ ಮತ್ತೆ ಭ್ರಾಂತಿಯ ಬಲೆಲಿಯೂ ಬೀಳುಸುತ್ತು. ” ಹೇಳಿ.
ಮನುಷ್ಯರ ಸೃಷ್ಠಿ ಮಾಡಿದ ಮೇಲೆ ದೇವರು ಹೇಳಿದಾ°ಡ, “ಆನು ನಿಂಗೊಗೆ ಹೇಳಿ ಧಾನ್ಯಗಳನ್ನೂ ಹಣ್ಣುಗಳನ್ನೂ ಕೊಟ್ಟಿದೆ. ಇದರ ತಿನ್ನಿ ( Genesis 1:29). ನೆತ್ತರು ಇಪ್ಪ ಪ್ರಾಣಿಗಳ ನೀನು ತಿಂಬಲಾಗ, ಎಂತ ಹೇಳಿರೆ ಅದರಲ್ಲಿ ಜೀವ ಇರ್ತು. ( Genesis 9:4). ಈ ಪ್ರಾಣಿಗಳ ಕೊಲ್ಲುಲೆ ನಿಂಗೊಗೆ ಆರು ಹೇಳಿದ್ದು? ಮೊದಲು ನಿಂಗಳ ನೆತ್ತರು ತುಂಬಿದ ಕೈಗಳ ತೊಳಕ್ಕೊಳ್ಳಿ. ಇಲ್ಲದ್ದರೆ ನಿಂಗಳ ಪ್ರಾರ್ಥನೆ ಎನಗೆ ಕೇಳ – ಸಂತ ಪೌಲನ ಮಾತುಗೊ (Romans :14.21)”
ಚೀನಾದ ಒಬ್ಬ° ಜೆನ್ ಗುರು ಹೇಳ್ತ° ” ಎಂತಕೆ ಪ್ರಾಣಿಗಳ ಕೊಲ್ತಿ? ಹಿಂಸೆ ಮಾಡಿರೆ ನಿಂಗೊ ಸ್ವರ್ಗಕ್ಕೆ ಹೋಪಲೆ ಸಾಧ್ಯ ಇಲ್ಲೆ. ಸುಮ್ಮನೆ ನಿಂಗಳ ಸುಖಕ್ಕೆ ಆ ಪ್ರಾಣಿಗಳ ಜೀವ ಎಂತಕೆ ತೆಗೆತ್ತಿ. ನರಕಕ್ಕೆ ಬೀಳ್ತಿ ನೋಡಿ?” ಹೇಳಿ.
ಹೆಚ್ಚಿನ ಪ್ರಸಿದ್ಧ ಲೇಖಕರು, ಕಲಾವಿದರು, ವಿಜ್ಞಾನಿಗೊ, ತತ್ತ್ವ ಜ್ಞಾನಿಗೊ ಸಸ್ಯಾಹಾರಿಗಳೇ. ಬುದ್ಧ, ಏಸುಕ್ರಿಸ್ತ, ವರ್ಜಿಲ್, ಹೊರೇಸ್, ಪ್ಲೇಟೋ, ಓವಿಡ್, ಪೈಥಾಗೋರಸ್, ವಿಲಿಯಮ್ ಶೆಕ್ಸ್ಪಿಯರ್, ವಾಲ್ಟರ್, ಐಸಾಕ್ ನ್ಯೂಟನ್, ಲಿಯೋನಾರ್ಡೋಡ ವಿಂಚಿ, ಛಾರ್ಲ್ಸ್ ಡಾರ್ವಿನ್, ಬೆಂಜಮಿನ್ ಫ್ರಾಂನ್ಕ್ಲಿನ್, ರವೀಂದ್ರ ನಾಥ ಠಾಕೂರ್, ಜೋರ್ಜ್ ಬರ್ನಾರ್ಡ್ ಶಾಃ, ಮಹಾತ್ಮಾ ಗಾಂಧೀ… ಎಷ್ಟು ಜೆನ ಎಷ್ಟು ಜೆನ???
Albert Einstein ಹೇಳಿದ°, “I think the changes and purifying effects that a vegetarian diet have on a human being’s disposition are quite beneficial to mankind. Therefore, it is both auspicious and peaceful for people to choose vegetarianism.” ಹೇಳಿ.
.
***
.
ಓ ಅಂಬಗ ಎಲ್ಲ ಜಾತಿಲೂ ಮಾಂಸಾಹಾರ ಒಳ್ಳೆದಲ್ಲಾ ಹೇಳಿಯೇ ಇದ್ದಪ್ಪೋ?
ಹಾಂಗಾರೆ ತೊಂದರಿಲ್ಲೆ, “ನಾಳೆ ಕೇಳಲಿ – ಹೇಳುವೆ ಅದಕ್ಕೆ” ಹೇಳಿ ಖುಶಿ ಆತು.
ಅಷ್ಟೇ ಅಲ್ಲ – ಸಸ್ಯಾಹಾರಿ ಹೇಳುವ ವಿಷಯಲ್ಲಿ ಹೆಮ್ಮೆಯೂ ಆತು 🙂
ಗೊಂತಿದ್ದೋ ಗೊಂತಿಲ್ಲದ್ದೆಯೋ ಇಪ್ಪ ದಾರಿ ಸರಿ ಇದ್ದು ಹೇಳಿ ಆತು 🙂
.
.
.

ನಿಂಗಳ
ಮಂಗ್ಳೂರ ಮಾಣಿ.

11 thoughts on “ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1

  1. ಉತ್ತಮ ಲೇಖನ. ತುಂಬಾ ಲಾಯ್ಕಕ್ಕೆ ವಿವರ್ಸಿದ್ದಿ.
    ನಾವು ಹೆಚ್ಚು ಹೆಚ್ಚು ’ಸಭ್ಯ’ರಾದ ಹಾಂಗೆ ಮಾನವೀಯತೆಂದ ದೂರ ಆವ್ತು.
    ನಾಗರಿಕತೆ ಹೇಳಿ ನಾವು ಅನಾಗರಿಕರಾವ್ತಾ ಹೋವ್ತು.
    ನಮ್ಮ ನಾಲಗೆ ರುಚಿಗೆ ನಾವು ಇನ್ನೊಂದು ಜೀವಿಯ ಕೊಲ್ಲುತ್ತು, ಅಲ್ಲದ್ದೇ ಅದಕ್ಕೆ ಸಮರ್ಥನೆಯನ್ನೂ ಕೊಡ್ತ್ತು. ಸಸ್ಯಾಹಾರ ಸೇವನೆ ಮಾಡುವವರ, ಪ್ರತಿಪಾದಿಸುವವರ ಮೂರ್ಖರು ಹೇಳುವ ಹಾಂಗೆ ಬಿಂಬಿಸುತ್ತು… ಇದು ನಾಗರಿಕತೆ..ಸಭ್ಯತೆಯ ಲಕ್ಷ್ನವಾ?!

    ಎನ್ನ ಒಂದು ಅನುಭವ – ಒಂದರಿ ಆನು ಒಮ್ದು ಗುಂಪಿಂಗೆ ಆಹಾರದ ಬಗ್ಗೆ ಕ್ಲಾಸ್ ತೆಕ್ಕೊಂಬಗ ಸಸ್ಯಾಹಾರ ಮತ್ತೆ ಮಾಂಸಾಹಾರದ ಬಗ್ಗೆ ವಿಷಯ ಬಂತು. ಅಲ್ಲಿದ್ದವ್ವು ಹೆಚ್ಚಿನವ್ವು ಮಾಂಸಾಹಾರಿಗೊ, ಅವ್ವು ಎಷ್ಟು ಮೂರ್ಖತನಂದ ಮೊಂಡುವಾದ ಮಾಡಿದವ್ವು ಹೇಳಿರೆ ’ಗಿಡ ತಿಂಬದು ಪ್ರಾಣಿಗೊ, ಸಸ್ಯಾಹಾರ ತಿಂದರೆ ಪೋಷಕಾಂಶ ಸಿಕ್ಕುತ್ತಿಲ್ಲೆ, ಶಕ್ತಿ ಇರ್ತಿಲ್ಲೆ, ರೋಗ ಬತ್ತು, ಗಿಡಕ್ಕೂ ಬೇನೆ ಆವ್ತು’ ಇತ್ಯಾದಿ ಇತ್ಯಾದಿ ! ಜನರ ಮೂರ್ಖತನ ನೋಡಿ ನೆಗೆ ಮಾಡೆಕೋ ಅಥವ ಬೇಜಾರು ಮಾಡೆಕೋ ಅರ್ಥ ಆಯ್ದಿಲ್ಲೆ!

    1. ಒಪ್ಪಕ್ಕೆ ಧನ್ಯವಾದ ಸುವರ್ಣಿನಿ ಅಕ್ಕಾ 🙂
      ಹೇಂಗಿದ್ದಿ? ಆರಾಮವಾ?? 🙂 🙂

      ಅಪ್ಪೂಳಿ.. ಎನಗೂ ಸುಮಾರು ಸರ್ತಿ ಹಾಂಗೇ ಆಯಿದು.
      “ನೀವು ಮೀನು ಎಲ್ಲ ತಿನ್ನದಿದ್ರೆ ನಿಮಿಗೆ ಶಕ್ತಿ ಬರುದು ಎಲ್ಲಿಂದ? ನೀವು ಮೊಟ್ಟೆ ಎಲ್ಲ ತಿನ್ನದ ಕಾರಣ ನೀವು ಸಪೂರ ಇರುದು.. ಹುಂ°!!” ಹೇಳಿತ್ತು ಆಪೀಸಿಲ್ಲಿ ಒಂದು ಹೆಮ್ಮಕ್ಕೊ.
      ಹೆ ಹೆ ಹೆ.. ಇದಕ್ಕೆಂತ ಹೇಳುದು? 😉

      {ಸಸ್ಯಾಹಾರ ಸೇವನೆ ಮಾಡುವವರ, ಪ್ರತಿಪಾದಿಸುವವರ ಮೂರ್ಖರು ಹೇಳುವ ಹಾಂಗೆ ಬಿಂಬಿಸುತ್ತು} – ಅದೇ ಬೇಜಾರಪ್ಪದು. 🙁
      ಆರು ಎಂತ ಗ್ರೇಶಿರೂ ತೊಂದರಿಲ್ಲೆ. ಅವಕ್ಕೆ ಸರಿ ಕಂಡದರ ಅವು ಮಾಡುಗು – ನವಗೆ ತಪ್ಪು ಹೇಳಿ ಕಂಡದರ ನಾವು ಮಾಡ.. ಅಷ್ಟೇ 🙂
      ನಿಂಗಳ ಒಪ್ಪ ಖುಶಿ ಆತು ಆತೋ 🙂

  2. ಸಸ್ಯಾಹಾರ ಎಂತಕೆ ಹೇಳಿ ನಿರೂಪಣೆ ಲಾಯಿಕ ಆಯಿದು.
    ಹಲ್ಲುಗಳ ರಚನೆಲಿ ಕೂಡಾ ಮಾಂಸಾಹಾರಿಗಳ ಹಲ್ಲಿಂಗೂ ಸಸ್ಯಾಹಾರಿಗಳ ಹಲ್ಲಿಂಗೂ ವೆತ್ಯಾಸ ಇದ್ದು.
    ಮನುಷ್ಯರ ಹಲ್ಲುಗೊ ಸಸ್ಯಾಹಾರಕ್ಕೆ ಬೇಕಾಗಿ ಮಾತ್ರ ಇಪ್ಪದು.

  3. ಉಪಯುಕ್ತ ಮಾಹಿತಿ.

    ಸಸ್ಯಾಹಾರಿಗಳ ಕೆಣಕುಲೆ ಬೇಕಾಗಿ ಹೀಂಗೆಲ್ಲ ಅಸಂಬದ್ಧ ಕೇಳುದು. ಉದಾಸೀನವೇ ಮದ್ದು ಹೇಳಿ ಮಾಡೆಕ್ಕಷ್ಟೇ.

    ಸಸ್ಯಾಹಾರಿಗೋ ಮಾಂಸ ತಿಮ್ಬಲೆ ಸುರು ಮಾಡಿರೆ ಮಾಂಸಕ್ಕೆ ಕ್ರಯ ಜಾಸ್ತಿ ಆಕ್ಕು ಹೇಳಿ ಹೇಳೆಕ್ಕಾತು ನೀನು.

    1. ಅಪ್ಪು ಚೆನ್ನಬೆಟ್ಟದಣ್ಣ 🙂 ಒಪ್ಪ 🙂
      {ಮಾಂಸಕ್ಕೆ ಕ್ರಯ ಜಾಸ್ತಿ ಆಕ್ಕು} – ಅಂಬಗ ತರಕಾರಿ ಕ್ರಯ ಹೆಚ್ಚಾದ್ದು ನಮ್ಮಿಂದಾಗಿ ಹೇಳಿರೆಂತ ಮಾಡ್ತ್ಸು 😉

  4. ನಿ೦ಗೊ ಹೇಳಿದ್ದು ಸತ್ಯವೇ ಮ೦ಗ್ಳೂರಣ್ಣಾ…
    ಎನ್ನ ಜೀವನಲ್ಲಿ ಆನು ಎಷ್ಟು ಸರ್ತಿ ನಿ೦ಗೊ ಆಫೀಸಿಲ್ಲಿ ಕೇಳಿದ ನಮುನೆಯ ಪ್ರಶ್ನೆಗಳ ಎದುರೆಸೆಕಾಗಿ ಬಯಿ೦ದೊ, ‘ಮಾ೦ಸಾಹಾರ ತಿನ್ನು’ ‘ಮೊಟ್ಟೆ ಮಾ೦ಸಾಹಾರ ಅಲ್ಲ, ಮೀನು ಬ೦ಗಾಳಿ ಬ್ರಾಹ್ಮರು ತಿ೦ತವು, ಹಾ೦ಗಾಗಿ ಅದು ಮಾ೦ಸಾಹಾರ ಅಲ್ಲ’ ಹೇಳ್ತ ಹಾ೦ಗಿರ್ತ ಉಪದೇಶ೦ಗಳ ಕೇಳಿಕಾಗಿ ಬಯಿ೦ದೋ ಎನಗೇ ನೆ೦ಪಿಲ್ಲೆ. ಸುರು ಸುರುವಿ೦ಗೆ ಆನುದೆ ನಿ೦ಗೊ ಕೊಟ್ಟ ಹಾ೦ಗಿಪ್ಪ ಉತ್ತರ೦ಗಳ ಕೊಟ್ಟು ಜಾರಿ೦ಡಿತ್ತಿದ್ದೆ. ಈಗ ಕೆಲವು ಸರ್ತಿ ಮನಸ್ಸಾದರೆ (ವಿಪರೀತ ಹಶು ಆವ್ತಾ ಇಲ್ಲದ್ರೆ) ನಿ೦ಗೊ ಅದರಿ೦ದ ಕೆಳ ಬರದ ವಿಷಯ೦ಗಳ ಅವರ ಹತ್ರೆ ವಿವರುಸುತ್ತ ಕ್ರಮ ಇದ್ದು.. 😉

    1. ಧನ್ಯವಾದ ಗಣೇಶಣ್ಣಾ 🙂
      {ಮೊಟ್ಟೆ ಮಾ೦ಸಾಹಾರ ಅಲ್ಲ, ಮೀನು ಬ೦ಗಾಳಿ ಬ್ರಾಹ್ಮರು ತಿ೦ತವು, ಹಾ೦ಗಾಗಿ ಅದು ಮಾ೦ಸಾಹಾರ ಅಲ್ಲ} – ಅಪ್ಪಪ್ಪು ಹೀಂಗಿಪ್ಪದರ ಸುಮಾರು ಕೇಳಿ ಬೊಡುದ್ದು. 🙁

      {ವಿಪರೀತ ಹಶು ಆವ್ತಾ ಇಲ್ಲದ್ರೆ} – ಅದು ಶೆರಿ. ಊಟ ಹೊತ್ತು ಹೊತ್ತಿಂಗೆ ಸರಿಯಾಗಿ ಮಾಡೆಕಿದಾ? ಮಾತಾಡಿಯೊಂಡು ಇದ್ದರೆ ಉಂಬದು ಹೇಂಗೆ 😉

      ಇನ್ನೂ ರಜ್ಜ ಪ್ರಶ್ನೋತ್ತರ ಸರಣಿ ಇದ್ದು.
      ಎನಗೆ ಉಪಯೋಗ ಆಯಿದು ನಿಂಗೊಗೂ ಅಪ್ಪಲೂ ಸಾಕು.. 🙂

  5. ಈತನೂ ಮಾಣಿಯು., ಆದರೂ, ಬರೇ ಗೋಣಿ ಹೊರ್ತವನಂತಲ್ಲದವನು. ಅನೇಕ ಸದ್ವಿಷಯಂಗಳ ಸಂಪಾದಿಸಿಪ್ಪವನು.

    ಓಹೊ… ಮಾಣಿ ಆಪೀಸಿಂಗೆ ಹೋಪಲೆ ಸುರುಮಾಡಿದ್ದನೋ…. ಸುಮಾರು ಸಣ್ಣೈವತ್ತು ಜನರೊಟ್ಟಿಂಗೆ ಮೀಸುತ್ತಿದ್ದನೋ.. – ಸಂತೋಷ.

    ಬೈಲಿಂಗೆ ಇಳುದರೆ ಶುದ್ದಿ ಸುಮಾರು ಬಿಕ್ಕುತ್ತಿ ನೋಡಿ. ಕೊಶಿ ಆವ್ತು. ಉತ್ತಮ ಮಾಹಿತಿ. ಒಳ್ಳೆ ಶುದ್ದಿ ಹೇಳಿ ಹೇಳಿತ್ತು -‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×