- ಕಾಲ - March 25, 2013
- ಒಂದು ಮಳೆ, ಒಂದು ಕೊಡೆ - March 18, 2013
- ದೇವರು: ಜೀವನದ ಅನುಭವಂಗೊ - March 11, 2013
ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ!
ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ.
ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ!
ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು; ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ.
ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು.
ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ ಬೇಡುಗೊಳ್ಳುತ್ತೆ.
.ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ?
“ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುತ್ತು ಹಿಟ್ಟಿಗಾಗಿ’” ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ?
ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು.
ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ.
ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ.
ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ.
ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು.
ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು.
ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ.
ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ!
ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ.
ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ.
ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು.
ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ.
ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ!
ಹೀಂಗಾದರೆ ಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು “ಬೊಳ್ಳದ ಮನಂತಾನಿ ಬೊಟ್ಟೊ” ಹೇಳುವ ಗಾದೆ ಹುಟ್ಟಿದ್ದು.
ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ.
ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?
ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ.
“ಪರಸ್ಪರ ಹಂಚಿಗೊಳ್ಳಿ” ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು.
ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ.
ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು.
ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ?
ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ?
ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.
ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.
ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇ ಇದ್ದಡೋ.
ಒಂದು ಮಾತು ಕೇಳಿದ್ದೆ. ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ.
ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ?
ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ?
ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ!
ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ?
ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ?
ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ?
ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ.
ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು.
ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?”ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ” ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?
ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು.
ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ.
ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು.
ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ?
ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು.
ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ, ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.
ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು.
“ಲಂಘನಂ ಪರಮೌಷಧಂ” ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ.
ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ. ಚಾಂದ್ರಾಯಣ ವ್ರತ ಹೇಳಿ ಇದ್ದಡೊ.
ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ.
ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.
ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು.
ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು.
ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು.
ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ!
ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು!
ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.
ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ.
ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ?
ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..
ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ?
ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?
ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು.
ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ.
ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.
ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ.ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ!
ಈ ಹೊಟ್ಟೆ ಬಗ್ಗೆ ಬರದ ಲೇಖನವೂ ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!
ಮೂಲಾಧಾರ ಹೊಟ್ಟೆಯ ಹಿಂದೆ ಗುದ ಮತ್ತು ಜನನೇಂದ್ರಿಯ ಮಧ್ಯೆ.ಜನನೇಂದ್ರಿಯದ ಹತ್ತರೆ ಹೊಟ್ತೆಂದ ಕೆಳ ಸ್ವಾಧಿಷ್ಟಾನ. ಹೊಕ್ಕುಳ ಪ್ರದೇಶ;-ಮಣಿಪುರ ಎದೆಯಲ್ಲಿ- ಅನಾಹತ; ವಿಶುದ್ಧ- ಕಂಠ;ಹುಬ್ಬುಗಳ ಮಧ್ಯ್ರಲ್ಲಿ ಆಜ್ಞಾ, ನೆತ್ತಿಲ್ಲಿ ಸಹಸ್ರಾರ ಹೀಂಗೆ ಏಳು ಚಕ್ರಂಗೊ ಇಪ್ಪದು ಹೇಳುತ್ತವು.
ಬಾಳಿಕೆ ಮಾವನ ಬೈಲಿಲ್ಲಿ ಕಂಡು ಖುಷಿ ಆತು. ಲೇಖನ ಉತ್ತಮವಾಗಿ ಮೂಡಿ ಬಯಿಂದು ಹೇಳಿ ಒಂದೊಪ್ಪ.
ಹೊಟ್ಟೆ ಮತ್ತು ಗಣಪತಿಯ ಶುದ್ದಿ ಓದಿಯಪ್ಪಗ ಇನ್ನೊಂದು ವಿಚಾರ ನೆನಪಾತು. ಅದರ ಬೈಲಿನವರ ಜೊತೆ ಹಂಚಿಗೊಳ್ಳುತ್ತೆ. ಕೆಲವು ವಾಕ್ಯಗಳಲ್ಲಿ ಬರೆತ್ತೆ. ಗೊಂತಿಪ್ಪವು ವಿವರವಾಗಿ ತಿಳಿಸಿರೆ ಉತ್ತಮ.
ನಮ್ಮ ಶರೀರಲ್ಲಿ ಏಳು ಪ್ರಧಾನವಾದ ಶಕ್ತಿ ಕೇಂದ್ರನ್ಗೋ ಇದ್ದು. ಮೂಲಾಧಾರ, ಸ್ವಾಧಿಷ್ಥಾನ,ಮಣಿಪೂರ,ಅನಾಹತ,ವಿಶುದ್ದಿ,ಆಜ್ಹಾ,ಸಹಸ್ರಾರ ಹೇಳಿ. ಇದರಲ್ಲಿ ನಮ್ಮ ಶರೀರಕ್ಕೆ ‘ಮೂಲ ಆಧಾರ ‘ ಆಗಿಪ್ಪಂತಹ ಮೂಲಾಧಾರ ಚಕ್ರ(ಹೊಟ್ಟೆ ಭಾಗಲ್ಲಿ ಇಪ್ಪದು)ದ ಒಡೆಯ ಗಣಪತಿ ಅಡ. ಹಾಂಗೆ ಶಕ್ತಿ ಪ್ರವಾಹವ ಸುಲಲಿತವಾಗಿ ಹರಿಸುವಲ್ಲಿ ಬಾಗಿಲಿಲ್ಲಿ ಇಪ್ಪದು ಗಣಪತಿ. ಹಾಂಗಾಗಿ ಪ್ರತಿಯೊಂದು ಕಾರ್ಯಕ್ಕೂ ಅವನ ಅನುಗ್ರಹ ಬೇಕು.
ಹೊಟ್ಟೆಪಕ್ಷದ ಏಕೈಕ ಸದಸ್ಯ ದಿ.ರ೦ಗಸ್ವಾಮಿ ಹೇಳ್ತ ಜೆನ.ವೋಟಿ೦ಗೆ ನಿ೦ಬ ಹವ್ಯಾಸ ಅವ೦ಗೆ.ಜೀವನ ಇಡೀಕ ಒ೦ದು ವೋಟಿಲಿಯೂ ಗೆದ್ದಿದಾ° ಇಲ್ಲೆ.
ಎರಡು ವರುಷದ ಹಿ೦ದೆ ನೆಗೆಗಾರ° ಬೈಲಿಲಿ ಹೊಟ್ಟೆಯ ಗುಣ-ಅವಗುಣದ ಪಟ್ಟಿ ಹಾಕಿತ್ತಿದ್ದ° ಹೇಳಿ ನೆ೦ಪು.
ಏನೇ ಆಗಲಿ ಶುದ್ದಿ ಓದಿ ಹೊಟ್ಟೆ ತು೦ಬಿತ್ತು.ಲಘುವಿನೊಟ್ಟಿ೦ಗೆ ಗುರುತರ ವಿಚಾರ೦ಗೊ.ಧನ್ಯವಾದ ಮಾವ.
ಜ೦ಕ್ ಫುಡ್ ಮುಕ್ಕುವ ಮಕ್ಕೊ/ ದೊಡ್ಡವೂ ಈ ಲೇಖನವ ಓದಿ ಇದರಲ್ಲಿಪ್ಪ ಸದ್ವಿಚಾರ೦ಗಳ ಅಳವಡಿಸಿಕೊ೦ಡರೆ ಎಷ್ಟು ಒಳ್ ಳೆದು!
“ಲಂಘನಂ ಪರಮೌಷಧಂ” ಹನಮಂತ ಹೇಳಿಕೊಟ್ನ ?
ಹಂಗೆಯ ಇಲ್ಲಿ ಯು ಆರ್ ಎಲ್ ಚೆಕ್ ಮಾಡಿ ಒಂದು ಹೊಟ್ಟೆ ಹಾಡೇ ಬರ್ದಿದೆ
🙂
http://kanasinakadalu.blogspot.in/2010/01/blog-post_30.html
ಹೊಟ್ಟೆ ಮುಖ್ಯ,ಕೆಲವರಿಂಗೆ ಬೆಳೆವ ಹೊಟ್ಟೆಯೇ ತಲೆಹರಟೆ…
ಮೊನ್ನೆ ಬೆರಳುಗೊ – ಇಂದು ಹೊಟ್ಟೆ – ನಾಳೆ?
ಈಗ ಎನಗೆ ದೊಡ್ಡ ಹೊಟ್ಟೆ ಇಲ್ಲೆ,ಹೊಗಳಿಯೇ ಹೊಟ್ತೆ ತುಂಬಿ ಇನ್ನೂ ಎನ್ನ ಹೊಟ್ಟೆ ದೊಡ್ಡ ಆಗನ್ನೆ!
ನಿಂಗ ಹೇಳಿದ ಚಾಂದ್ರಾಯಣ ವ್ರತ ಎಂಗ ಯೋಗಲ್ಲಿ ಅಳವಡಿಸಿಕೊಂದಿದ್ಯ…ಎಂಗ ಬೊಜ್ಜು ಕರಗುಸುಲೆ ಅಲ್ಲದ್ದೆ ಇನ್ನಿತರ ಜೀವನಶೈಲಿ ವ್ಯತ್ಯಾಸಂದ ಬಪ್ಪ ಅನಾರೋಗ್ಯಕ್ಕೆ ಇದರ ಮಾಡಿರೆ ಉತ್ತಮ ಫಲಿತಾಂಶ ಇದ್ದು..
ಹೊಟ್ಟೆ ವಿಷಯಲ್ಲಿ ‘ಲೊಟ್ಟೆ’ ( ಕನ್ನಡಲ್ಲಿ ಹೇಳ್ತರೆ – ಹರಟೆ) ಶುದ್ದಿ ಬರದ್ದೋ ಹೇದು ಗ್ರೇಶಿದೆ.
ಶುದ್ದಿ ಪಷ್ಟಾಯಿದು ಮಾವ.
ಲೇಖನ ಓದಿ ಹೊಟ್ಟೆಯ ವಿಶ್ವರೂಪದರ್ಶನ ಆತು. ಮಧ್ಯ ಮಧ್ಯ ಗಾದೆ ಮಾತುಗಳುದೆ ಬಂದು ಶೋಕು ಆತು. ಬಾಳಿಕೆ ಮಾವನ ಲೇಖನಂಗೊ ಒಳ್ಳೆ ವಿಚಾರಪೂರ್ಣ ಆಗಿರುತ್ತು. ಅವರ ಬ್ಲಾಗಿನ ಒಳಾಂಗೆ ಹೋದರೆ ತುಂಬಾ ವಿಷಯಂಗೊ ಇದ್ದು ಅದರಲ್ಲಿ. ಮಾವನ ವಿಚಾರಸರಣಿ ಬೈಲಿಂಗೆ ಬತ್ತಾ ಇರಳಿ.
ಉದರ ನಿಮಿತ್ತಂ ಬಹುಕೃತ ವೇಷಂ ಹೇಳಿ ಮಾತೇ ಇದ್ದು.
ಅದು ಅಷ್ಟಕ್ಕೆ ಸೀಮಿತ ಆದರೆ ತೊಂದರೆ ಇಲ್ಲೆ.
ತಾನು ಹೊಟ್ಟೆ ತುಂಬಿಸಿರೆ ಸಾಲ, ಎನ್ನ ಮುಂದಾಣ ಮೂರು ತಲೆಮಾರು ಕೂದು ತಿಂದರೂ ಮುಗಿಯದ್ದಷ್ಟು ಮಾಡೆಕ್ಕು ಹೇಳಿ ಹೆರಟಪ್ಪಗಳೇ ತೊಂದರೆಗೊ ಸುರು ಅಪ್ಪದು.
ಯಾವದೇ ಅಡ್ಡ ದಾರಿಲಿ ಆದರೂ ಸಮ, ಸಂಪಾದಿಸಿ ಕಟ್ಟಿ ಮಡುಗುವ ಹಟ ಸುರು ಆವ್ತು.
ಬಹಳ ಬಹಳ ಲಾಯ್ಕ ಆಯಿದು ಲೇಖನ. ಲಘುವಾಗಿ ಸುರು ಮಾಡಿದರುದೆ ಬಹಳ ತೂಕದ ಹಲವು ಚಿ೦ತನೀಯ ವಿಷಯ೦ಗಳ ಪ್ರಸ್ತಾಪಿಸಿದ್ದು ಬಹಳ ಒಳ್ಳೇದಾಯಿದು. ಎನಗೆ ತು೦ಬ ಇಷ್ಟ ಆತು.
ಅಬ್ಬಾ ನಿಂಗಳ ಹೊಟ್ಟೆಯೇ ..! , ಮಾವ°, ವಿಷಯ ಲಾಯಕೆಯೂ ಚಂದಕ್ಕೂ ಬರದ್ದಿ. ಕೊಶಿ ಆತಿದಾ ಎಂಬುದೀಗ -‘ಚೆನ್ನೈವಾಣಿ’
ಇನ್ನಾಣದ್ದೂ ತಯಾರು ಮಾಡಿ ಮಡುಗಿ. ಎಂತರ ತಲೆಯೋ ?!