ವಿಭಕ್ತಿ
ವಿಭಕ್ತಿ ಹೇಳಿ ಕೇಳಿದ್ದೀರಾ?
ಎಂತದದು ವಿಭಕ್ತಿ ಹೇಳಿರೆ ?
ವಾಕ್ಯರಚನೆ ಮಾಡ್ಳೆ ಶಬ್ದಂಗ ಬೇಕು, ಅಲ್ಲದ? ಶಬ್ದವ ಎಲ್ಲಿ ಹೇಂಗೆ ಬೇಕೊ ಹಾಂಗೆ ಉಪಯೋಗಿಸಿರೆ ಮಾಂತ್ರ ವಾಕ್ಯಕ್ಕೆ ಅರ್ಥ ಬಪ್ಪದು.
“ಕವಾಟಿಂದ ಪುಸ್ತಕ ತೆಗೆ” ಹೇಳಿರೆ ಅರ್ಥ ಅಕ್ಕು. ``ಕವಾಟಿಂಗೆ ಪುಸ್ತಕಲ್ಲಿ ತೆಗೆ ” ಹೇಳಿ ಎಂತೆಂತಾರು ಹೇಳಿರೆ ಅರ್ಥವೇ ಆಗ.
“ಅವ° ಶಾಲೆಲ್ಲಿ ಕಲಿತ್ತ°‘‘. ಈ ವಾಕ್ಯಲ್ಲಿ “ಶಾಲೆಲ್ಲಿ” ಹೇಳುವ ಬದಲು ಶಾಲೆಗೆ , ಶಾಲೆಂದ, ಶಾಲೆಯ ಹೇಳಿಯೋ ಹೇಳಿರೆ ಸರಿಯಕ್ಕೊ?
`ಶಾಲೆ’ ಶಬ್ದದ ಸರಿಯಾದ ರೂಪವ ಉಪಯೋಗುಸಿರೆ ಮಾಂತ್ರ ಅರ್ಥ ಅಕ್ಕಷ್ಟೇ.
ಹೀಂಗೆ ಒಂದೇ ಶಬ್ದಕ್ಕೆ ಹಲವು ರೂಪಂಗ ಇರ್ತು. ಉಪಯೋಗುಸಲೆ ಸುಲಭ ಅಪ್ಪಲೆ ಬೇಕಾಗಿ ಶಬ್ದರೂಪಂಗಳ ಏಳು ವಿಭಾಗ ಮಾಡಿ ಮಡುಗಿದ್ದವು. ಅದನ್ನೇ “ವಿಭಕ್ತಿ” ಹೇಳಿ ಹೇಳುವದು. ಒಟ್ಟು ಏಳು ವಿಭಕ್ತಿಗ ಇಪ್ಪದು.
ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ, ಸಪ್ತಮೀ ವಿಭಕ್ತಿ ಹೇಳಿ.
ಇದರ ಅರ್ಥ ಮೊದಲನೆಯ, ಎರಡನೆಯ…….ಏಳನೆಯ ವಿಭಕ್ತಿ ಹೇಳಿ.
ಪ್ರತಿಯೊಂದು ವಿಭಕ್ತಿಲ್ಲಿಯೂ ಏಕವಚನ, ದ್ವಿವಚನ, ಬಹುವಚನ ಹೇಳಿ ಮೂರು ವಚನಂಗ.
ಈಗ ನಾವು ಏಳೂ ವಿಭಕ್ತಿಲ್ಲಿ ಏಕವಚನದ ಬಗ್ಗೆ ತಿಳ್ಕೊಂಬ –
`ಜಲ’ ಶಬ್ದದ ಏಳೂ ವಿಭಕ್ತಿಗಳ ಏಕವಚನ ರೂಪಂಗ
ನೀರು, ನೀರಿನ(ನ್ನು), ನೀರಿಂದ (ನೀರಿನ ಉಪಯೋಗುಸಿ), ನೀರಿಂಗೆ, ನೀರಿಂದ, ನೀರಿನ, ನೀರಿಲ್ಲಿ.
ಪ್ರಥಮಾ ವಿಭಕ್ತಿಃ
ನೀರು = ಜಲಮ್ [ಜಲಮ್ ಸರೋವರೇ ಅಸ್ತಿ] (ನೀರು ಕೆರೆಲ್ಲಿ ಇದ್ದು)
ದ್ವಿತೀಯಾ ವಿಭಕ್ತಿಃ
ನೀರಿನ = ಜಲಮ್ [ಜಲಂ ಪಿಬಾಮಿ] (ನೀರಿನ ಕುಡಿತ್ತೆ)
ತೃತೀಯಾ ವಿಭಕ್ತಿಃ
ನೀರಿಂದ = ಜಲೇನ [ಜಲೇನ ಸ್ನಾನಂ ಕರೋಮಿ] (ನೀರಿಂದ (ನೀರಿನ ಉಪಯೋಗುಸಿ) ಮೀತೆ)
ಚತುರ್ಥೀ ವಿಭಕ್ತಿಃ
ನೀರಿಂಗೆ = ಜಲಾಯ [ಜಲಾಯ ಯುದ್ಧಮ್ ಭವತಿ] (ನೀರಿಂಗಾಗಿ ಯುದ್ಧ ಆವುತ್ತು)
ಪಂಚಮೀ ವಿಭಕ್ತಿಃ
ನೀರಿಂದ = ಜಲಾತ್ [ಮೀನಃ ಜಲಾತ್ ಬಹಿಃ ನ ಜೀವತಿ] (ಮೀನು ನೀರಿಂದ ಹೆರ ಬದುಕುತ್ತಿಲ್ಲೆ)
ಷಷ್ಠೀ ವಿಭಕ್ತಿಃ
ನೀರಿನ =ಜಲಸ್ಯ [ಜಲಸ್ಯ ವರ್ಣಃ ಕಃ? ] (ನೀರಿನ ಬಣ್ಣ ಯಾವುದು? )
ಸಪ್ತಮೀ ವಿಭಕ್ತಿಃ
ನೀರಿಲ್ಲಿ = ಜಲೇ [ಜಲೇ ಮೀನಃ ಅಸ್ತಿ] (ನೀರಿಲ್ಲಿ ಮೀನು ಇದ್ದು)
——
ಈ ಶ್ಳೋಕ ಅರ್ಥ ಆವುತ್ತೋ ನೋಡಿ —
ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂಃ ರಾಮಾಯ ತಸ್ಮೈ ನಮಃ।
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಹೇ ರಾಮ ಮಾಮುದ್ಧರ ॥
ಅರ್ಥವ ನೋಡುವನಾ?
ರಾಮೋ ರಾಜಮಣಿಃ ಸದಾ ವಿಜಯತೇ
ರಾಮೋ ರಾಜಮಣಿಃ ಸದಾ ವಿಜಯತೇ = ರಾಮ° ಒಬ್ಬ ಶ್ರೇಷ್ಠ ರಾಜ. ಅವ° ಯಾವಾಗಳೂ ಜಯಿಸುತ್ತ.
ರಾಮಂ ರಮೇಶಂ ಭಜೇ
ರಾಮಂ ರಮೇಶಂ ಭಜೇ = ರಾಮನ, ರಮೇಶನ ಭಜಿಸುತ್ತೆ.
ರಾಮೇಣಾಭಿಹತಾ ನಿಶಾಚರಚಮೂಃ
ರಾಮೇಣಾಭಿಹತಾ = ರಾಮೇಣ + ಅಭಿಹತಾ = ರಾಮನಿಂದ ಕೊಲ್ಲಲ್ಪಟ್ಟತ್ತು. ಯಾವುದು?
ನಿಶಾಚರಚಮೂಃ = ರಾಕ್ಷಸರ ಸೈನ್ಯ [ನಿಶಾಚರಾಃ = ರಾಕ್ಷಸರು ; ಚಮೂಃ = ಸೈನ್ಯ]
ರಾಮಾಯ ತಸ್ಮೈ ನಮಃ।
ತಸ್ಮೈ ರಾಮಾಯ ನಮಃ = ಆ ರಾಮಂಗೆ ನಮಸ್ಕಾರ ।
ರಾಮಾನ್ನಾಸ್ತಿ ಪರಾಯಣಂ ಪರತರಂ
ರಾಮಾತ್ + ನಾಸ್ತಿ = ರಾಮಾನ್ನಾಸ್ತಿ
ಪರಾಯಣಂ = ಪರಮ್ ಅಯನಮ್ = ಶ್ರೇಷ್ಠ ಮಾರ್ಗ / ಪರಮಗತಿ
ಪರತರಂ = ಮತ್ತೂ ಒಳ್ಳೆಯ
ರಾಮಾತ್ ಪರತರಂ ಪರಾಯಣಂ ನಾಸ್ತಿ = ರಾಮನಿಂದಲೂ ಮೇಲಾದ ಶ್ರೇಷ್ಠ ಗತಿ ಹೇಳಿ ಇಲ್ಲೆ.
ರಾಮಸ್ಯ ದಾಸೋಸ್ಮ್ಯಹಂ
ದಾಸಃ + ಅಸ್ಮಿ + ಅಹಂ = ದಾಸೋಸ್ಮ್ಯಹಂ
ರಾಮಸ್ಯ ದಾಸಃ ಅಸ್ಮಿ ಅಹಂ = ರಾಮನ ದಾಸ° ಆನು
ರಾಮೇ ಚಿತ್ತಲಯಃ ಸದಾ ಭವತು ಮೇ
ಸದಾ ರಾಮೇ ಮೇ ಚಿತ್ತಲಯಃ ಭವತು = ಯಾವಾಗಳೂ ರಾಮನಲ್ಲಿ ಎನ್ನ ಮನಸ್ಸು ವಿಲೀನವಾಗಲಿ.
ಹೇ ರಾಮ ಮಾಮುದ್ಧರ ॥
ಓ ರಾಮನೇ !
ಮಾಮ್ + ಉದ್ಧರ = ಎನ್ನ ಮೇಲೆತ್ತು.
ಅದಾ! ಹೇಳ್ಳೆ ಬಾಕಿ ಆದ್ದದು – ಹೇ ರಾಮ! ಹೇಳಿ ಇದ್ದಲ್ಲದೋ? ಇದಕ್ಕೆ ಸಂಬೋಧನಾ ಪ್ರಥಮಾ ವಿಭಕ್ತಿ ಹೇಳ್ತವು. ದೆನಿಗೊಂಬಲೆ ಉಪಯೋಗಿಸುವದು. ಅಂದೊಂದರಿ ನಾವು ಇದರ ಉಪಯೋಗುಸಿದ ಶ್ಳೋಕಂಗಳ ನೋಡಿದ್ದು , ನೆಂಪಿದ್ದಾ? ಇಲ್ಲಿದ್ದು.
ಮತ್ತೊಂದರಿ ಓದಲೆ (ಪುನಃ ಪಠನಾರ್ಥಂ)
ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂಃ ರಾಮಾಯ ತಸ್ಮೈ ನಮಃ।
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಹೇ ರಾಮ ಮಾಮುದ್ಧರ ॥
~~~~~~~~~~~~~~~~~~
ಈಗ ಈ ವಾಕ್ಯಂಗಳ ಸಂಸ್ಕೃತಲ್ಲಿ ಬರವಲೆ ಎಡಿಗೋ ನೋಡಿ —
ರಾಮ – ರಾಮ° ಒಬ್ಬ ಮಹಾಪುರುಷ
ರಾಮನನ್ನು – ರಾಮನ ನೋಡು.
ರಾಮನಲ್ಲಿ – ರಾಮನಲ್ಲಿ ತುಂಬಾ ಒಳ್ಳೆ ಗುಣಂಗ ಇದ್ದು.
ರಾಮಂದ – ರಾಮಂದ ದೊಡ್ಡ ವ್ಯಕ್ತಿ ಇಲ್ಲೆ.
ರಾಮನಿಂದ – ರಾಮನಿಂದ ರಾವಣ ಕೊಲ್ಲಲ್ಪಟ್ಟ.
ರಾಮಂಗೆ – ರಾಮಂಗೆ ನಮಸ್ಕಾರ
ರಾಮನ – ರಾಮನ ಅಪ್ಪ ದಶರಥ
ಶಂಕರಾಚಾರ್ಯ ಅದ್ವೈತ ಮತದ ಪ್ರತಿಪಾದಕ.
ಶಂಕರಾಚಾರ್ಯಂಗೆ ಸಮರ್ಪಣೆ ಮಾಡು.
ಧರ್ಮಲ್ಲಿ ಶ್ರದ್ಧೆ ಬೇಕು.
~~~~~~~
ಹೀಂಗೆ ವಿಭಕ್ತಿಗಳ ಪರಿಚಯ ಇದ್ದರೆ ಸುಭಾಷಿತಗಳ/ಚೂರ್ಣಿಕೆಗಳ ಅರ್ಥ ಸುಲಭಲ್ಲಿ ಗೊಂತಕ್ಕು !
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ಸರಳ ಶಬ್ದಂಗಳ ಉಪಯೋಗಿಸಿ ಅರ್ಥ ವಿವರಣೆ ಕೊಟ್ಟದು ಲಾಯಕಾಯಿದು.
ವಿಭಕ್ತಿಗಳೆಲ್ಲವನ್ನೂ ಉಪಯೋಗಿಸಿ ಭಕ್ತಿಲಿ ಶ್ರೀರಾಮನ ನೆನೆಸ್ಯೊಂಡದು ಒಳ್ಳೆದಾಯಿದು. ಚೆಂದಕೆ ಅರ್ಥವಿವರಣೆ ಕೊಟ್ಟ ಮಹೇಶಂಗೆ ಧನ್ಯವಾದ.
ಬಹು ಉತ್ತಮಮ್ । ಅವಗತವಾನ್ । ಧನ್ಯವಾದಃ ಶ್ರೀಮನ್ ॥
ಏತದೇವ ಕೃಷ್ಣಂ ಉದ್ದಿಶ್ಯ ಏಕಃ ಶ್ಲೋಕಃ ಅಸ್ತಿ ಕಿಲ – “ಕೃಷ್ಣೋರಕ್ಷತು ಮಾಂ ಚರಾಚರಗುರುಃ…..” ತಥಾ, ಸ್ತ್ರೀಲಿಂಗೇ ಅಂಬಿಕಾಂ ಉದ್ಧಿಶ್ಯ – “ಅಂಬಿಕಾ ಸದಾ ಜಯತಿ… “। ತೌ ಅಪಿ ಕೃಪಯಾ ಅತ್ರ ಲಿಖತಿ ವಾ ?
ಗೃಹಪಾಠ೦ ಸಮರ್ಪಯಾಮಿ|
—————————
ರಾಮ: ಏಕ: ಮಹಾಪುರುಷ:|
ರಾಮಂ ಪಶ್ಯ|
ರಾಮೆ ಅನೇಕಾ: ಉತ್ತಮಾ: ಗುಣಾ: ಸಂತಿ|
ರಾಮಾತ್ ಪರತರ: ಪುರುಷ: ನಾಸ್ತಿ|
ರಾಮೇಣ ರಾವಣ: ಅಭಿಹತ:|
ರಾಮಾಯ ನಮ:|
ರಾಮಸ್ಯ ಪಿತಾ ದಶರಥ:|
ಶಂಕರಾಚಾರ್ಯ: ಅದ್ವೈತಮತಸ್ಯ ಪ್ರತಿಪಾದಕ:|
ಶಂಕರಚಾರ್ಯಾಯ ಸಮರ್ಪಯ|
ಧರ್ಮೆ ಶ್ರದ್ದಾ ಅವಶ್ಯಂ|
ವಿಭಕ್ತಿಯ ನೆಂಪು ಮಡಿಕ್ಕೊಂಬಲೆ ಉತ್ತಮವಾದ ಸೂತ್ರ.