- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣು ಪೆರಟಿ
ಬೇಕಪ್ಪ ಸಾಮಾನುಗೊ:
- 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು
- 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ)
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಹಲಸಿನ ಹಣ್ಣಿನ ಒಂದು ಬಾಣಲೆ ಅಥವಾ ಉರುಳಿಲಿ ಹಾಕಿ ಬೇಶಿ. (ಬೇಕಾದರೆ ಹಲಸಿನ ಹಣ್ಣಿನ ಮಿಕ್ಸಿಲಿ ಹಾಕಿ ರೆಜ್ಜ ಕ್ರಶ್ ಮಾಡ್ಲೆ ಅಕ್ಕು).
ಇದರ ಹದ ಕಿಚ್ಚಿಲ್ಲಿ ಗಟ್ಟಿ ಅಪ್ಪನ್ನಾರ ಕಾಸಿ. (ತುಂಬ ಗಟ್ಟಿ ಮಾಡದ್ದರೆ ಇದರ ಪ್ರಿಜ್ ಲ್ಲಿ ಮಡುಗೆಕ್ಕು)
ತಣುದ ಮೇಲೆ ಇದಕ್ಕೆ 2-3 ಚಮ್ಚೆ ಸಕ್ಕರೆ ಉದುರ್ಸಿ, ಲಾಯಿಕಲಿ ತೊಳಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉಂಡೆ ಮಾಡಿ, ಒಂದು ಪ್ಲಾಸ್ಟೀಕು ಕರಡಿಗೆಲಿ ತೆಗದು ಮಡುಗಿ.
ಇದರ ಹಾಂಗೆ ತಿಂಬಲುದೇ ಆವುತ್ತು ಅಥವಾ ಪಾಯಸ ಮಾಡಿ ತಿಂಬಲುದೇ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
Tuluva hannina hannu thuppa madle avuthu heli kanuthu! Adara thumbaaa hothu sekeli (steam) madekku.
ತುಳುವನ ಹಣ್ಣು ಇಡ್ಳಿ ಮಾಡ್ಳಾವುತ್ತು.ಲಾಯಕಾವುತ್ತು.
ತುಳುವಂದು ಆವುತ್ತಿಲ್ಲೆಯೋ ಅಕ್ಕಾ°
ತುಳವಂದು ಪೆರಟಿ ಮಾಡುದು ಗೊಂತಿಲ್ಲೆ. ತುಳುವನ ಹಣ್ಣು ನೂಲು ನೂಲು(ಮಾಲೆ ಮಾಲೆ) ಅಪ್ಪ ಕಾರಣ ಆದಿಕ್ಕು ಎಲ್ಲರುದೆ ಬಕ್ಕೆ ಹಣ್ಣನ್ನೆ ಪೆರಟಿ ಮಾಡುದು.
ತಮಾಷೆ ಲಾಯಕಾಯಿದು.
ಆಯಿಕ್ಕು.ಎನ್ನ ಅಮ್ಮಂಗೆ ಅನುಭವ ಕಮ್ಮಿ ಆತೋ ಏನೋ.ಬರೀ ಅರುವತ್ತು ವರ್ಷದ ಅನುಭವ ಪೆರಟಿ ಮಾದ್ಳೆ ಸಾಲದೋ ಏನೋ?
Dear Mava,
Even Tendulkar gets out for a duck sometimes. That does not mean he lacks experience in batting 🙂 Just an off day!
ಕಳುದ ವರ್ಷ ಮಾಡಿದ್ದು ಬೂಸರು ಬಂದು ಎರಡು ವಾರಲ್ಲಿ ಹಾಳಾತನ್ನೇ!
ಮಾಡುವ ಹಾಂಗೆ ಮಾಡಿದರೆ ಬೂಸರು ಬತ್ತಿಲ್ಲೆ…!!!
ನೀರಿನಂಶ ಪೂರ ಹೋಗಿರ..ಎಳಮ್ಮೆ
ವಾ.. ಅದ್ಬುತ..ವೇಣಿಯಕ್ಕನ ಹಲಸಿ ಹಣ್ಣಿನ ಬಗೆ ಬಗೆಯ ತಿ೦ಡಿಗೋ…!!
ಇದರ ಪಾಯಸ ಭಾರಿ ಲಾಯಕೆ… ನಾಲ್ಕು ಲೋಟ ಕುಡುದ್ದೇ ಗೊ೦ತಾಗ… 🙂
ಗೊ೦ತಪ್ಪದು ಹೇ೦ಗೆ ಚುಬ್ಬಣ್ಣ? ಲೋಕಲ್ ಅನೆಸ್ತೇಶಿಯಾ ಕೊಟ್ಟ ಹಾ೦ಗಾಕ್ಕನ್ನೆ !
ಸ೦ಗ್ರಹಯೋಗ್ಯ ಅ೦ಕಣ,ವೇಣಿ ಅಕ್ಕ೦ಗೆ ಧನ್ಯವಾದ.
ಇದು…ಎನ ಪೆರಟಿ ಬೇಡ (ಹಲ್ಲಿಂಗೆ ಹಿಡಿತ್ತು), ಪೆರಟಿ ಪಾಚ ಅಕ್ಕು. ಇದು ಪೆರಟು ಹೇಳಿದ್ದಲ್ಲ, ಪೆರಟಿ ಸೀವು ಲಾಯಕ ಆವ್ತು ಹೇಳಿದ್ದು ಹೇದು.
ಎನಗೆ ಇದರ ಹಾಂಗೆ ಅಂತೆ ತಿಂಬಲೆ ಭಾರೀ ಪ್ರೀತಿ. ಪಾಯಸದೆ ಲಾಯಿಕ ಅವ್ತು.
ಹ್ಮ್! ಆಶೆ ಆವ್ತನ್ನೆ?