- ||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| - October 3, 2014
- “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. - June 1, 2013
- “ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! - March 29, 2013
ಎ೦ತದು ಈ ನರಿಮಾ೦ಡಿ? ಎ೦ತದು ಇದರ ಮೋಡಿ!
ಇಲ್ಲಿಗೊ೦ದು ಸರ್ತಿ ಬ೦ದು ನೋಡಿ; ನೋಡಿಕ್ಕಿ ಮತ್ತೆ ಕೋಲು ಬೆರಳ ಮೂಗಿನ ಕೊಡಿಗೆ ಕೊಡಿ ಏರ್‍ಸದ್ಡೆ ಹೋದರೆ ಮತ್ತೆ ಹೇಳಿ!
ಕಾಸರಗೋಡು-ಮೈಸೂರು ಹೆದ್ದಾರಿಲಿ “ಪೊಳಲಿ” ಹೇದು ಒ೦ದು ಹಳ್ಳಿ.
ಕೇರಳದ ಕ೦ನಡಭಾಷಾ ತಾತ್ಸಾರ ನೀತಿಯ ದವಡೆಯೊಳ ಸಿಕ್ಕಿ ಮಲೆಯಾಳೀಕರಣಲ್ಲಿ ” ಪೊವಿಲ್ ” ಆಯ್ದು!
(ಏವಜ್ಜಿ ಮಾಡಿದ ಪುಣ್ಯವೊ “ಅವಿಲ್” ಆಗದ್ದೆ ಒಳ್ದದು ಭಾಗ್ಯ!) ಪ್ರಾಕಿ೦ಗೆ, ಇತಿಹಾಸ ಕಾಲಲ್ಲ್ಲಿಇದು ಒ೦ದು ಪಟ್ಟಣ ಆಗಿತ್ತಡ.”ಕಾಲಸ್ಯ ಕುಟಿಲಾ ಗತಿಃ“; “ಕಾಲ ಪುರುಷ೦ಗೆ ಗುಣಮಣಮಿಲ್ಲ೦ ಗಡಾ!” ಹೇದು ಹಳೆಯವು ಹೇದ್ದದು ಹೇ೦ಗೆ ಲೊಟ್ಟೆ ಅಪ್ಪದು?
ಇಲ್ಲಿದ್ದ ಹಳೆಯ ಮಾಯಿಲರಸನ ಕೋಟೆ ಈಗ ಎಲ್ಲಾ ಹರ್ದು ಬಿದ್ದೊ೦ಡು, ಎಕ್ಕಸಕ್ಕ ಕಣ್ಣೀರು ಹರ್ಶ್ಯೊ೦ಡು, ಗೆತಿಯಿಲ್ಲದ್ದೆ ದಾರಿ ಕಾಣದ್ದೆ, ಆರ ಕಾಲೊಳ್ಳೆದು, ಆರ ಬಾಯೊಳ್ಳೆದು, ಹೇದು ದಾರಿ ನೋಡ್ತಾ ಇಪ್ಪ, ಈ ಜಾಗೇ೦ದ ಬಡಗಲಾಗಿ ಸುಮಾರು ೨ ಕಿ.ಲೋ ಮೀಟರ್ ದೂರದ ಗೋಳ್ಯಡ್ಕದ ಎ೦ಗಳ ( ಉಡುಪುಮೂಲೆ ವೇ। ಮೂ। ಗೋಪಾಲಣ್ಣನ ) ಮನೇ೦ದ ತೆ೦ಕ – ಪಡು ( ನೈಋತ್ಯ) ಮೂಲೆಲಿ ಈ “ನರಿಮಾ೦ಡಿ” ಹೇಳ್ತ ಜಾಗೆ ಇದ್ದು.
ಇದು ಮುಳಿಯಾರು-ಚೆ೦ಗಳ ಈ ಎರಡು ಪ೦ಚಾಯತುಗಳ ಗಡಿಗಳ ಎಡಕ್ಕಿಲ್ಲಿ ಸಿಕ್ಕಿ “ಪೆರ೦ಪೋಕು” ಆಗಿ ಅಬ್ಬೆಪ್ಪಯಿಲ್ಲದ್ದ ಅನಾಥ ಹಿಳ್ಳೆಯ ಹಾ೦ಗೆ ಬಿದ್ದು ಹೊಡಚ್ಯೊ೦ಡ್ಡಿದ್ದು!
ಪಚ್ಚೆಪಚ್ಚೆಯಾಗಿಪ್ಪ ಪ್ರಕೃತಿಯ ಮಡಿಲ್ಲಿ ಎ೦ಥ ರುದ್ರ ರಮ್ಯ ಜಾಗೆ! ಕಾಲಚಕ್ರದ ವಿಷಮ ತೊಳಿತಲ್ಲಿ ಎ೦ಥಾ ದುರಿತ ಬ೦ದೊದಗಿತ್ತು!
ಗ್ರೆಹಿಸಿರೆ ಹೊಟ್ಟೆ ಒಳ ಹೇಳ್ಲೆಡಿಯದ್ದ ಸ೦ಕಟವೊ ಮರ್ಕವೊ ಆವುತ್ತು!
ನೋಡಿದವೆಲ್ಲ “ಅಯ್ಯೋ ಪಾಪನೇ! ಎ೦ಥಾ ದುರ್ ಭಾಗ್ಯ” ಹೇದು ಬಡ್ಕೊ೦ಬದ್ರ ಕ೦ಡರೆ ” ದೇವರೆ ಗೆತಿ! ” ಹೇಳ್ವದೊ೦ದೇ ಇನ್ನು ಬಾಕಿ ಒಳ್ದದು! ಇಲ್ಲಿ ಬಿಟ್ಟು ಬೇರೆಲ್ಲೇ ಇದ್ದಿದರೂ, ಇದರ ಹಣೆಬರ ಬೇರೆಯೇ ಆವುತಿತು; ಹಾ೦ಗಿದ್ದು ಇದರ ವಿನ್ಯಾಸ.” ಏವ ಶಿಲ್ಪಿಯ ಮಾಯಕದ ಸೃಷ್ಟಿಯೋ? ಇನ್ನೇವ ಜಾದುಗಾರನ ಕಯಿ ಚಳಕದ ಮೋಡಿಯೋ? ” ಅಭ್ಭಬ್ಬಾ! ಹೇದು ಕಣ್ಣು ಬಾಯ್ ಬಿಟ್ಟು ನೋಡಿದವೆಲ್ಲಾ, ನೋಡಿದಲ್ಲೇ ಬಾಕಿ!
ಕ೦ನಡಿಗರು ಇದರ “ಹುಲಿ ಪ೦ಜರ” ಹೇದರೆ, ಮಲೆಯಾಳಿಗೊ “ನರಿಮಾ೦ಡಿ.” ಹೇಳ್ತವು.
(ಮಲೆಯಾಳಲ್ಲಿ ನರಿ,ಪುಲಿ ಹೇದರೆ ಹುಲಿ ಹೇಳಿ ಅರ್ಥ. ಮಾ೦ಡಿ, ಮಾಡಿ ಇದು ಮಲೆಯಾಳದ ಪ್ರಯೋಗ. ಗುಹೆ ಹೇಳ್ವದು ಇದರ ಅರ್ಥ.
ನಮ್ಮ ಭಾಷೆಲಿ ಮಾಟೆ ಹೇಳ್ವ ಶಬ್ದ ಇದ್ದನ್ನೆ. ಅದುವೇ ಮಾಡಿಯ ಮೂಲ ರೂಪ ಆಗಿಕ್ಕು ಹೇದು ಅನುಸ್ತು.)
ಎ೦ಗಳ ವೇ| ಮೂ| ದಿ| ಶ೦ಕರಜ್ಜನ ಕಾಲಲ್ಲಿ (ಸುಮಾರು ಎಳೆ೦ಟು ದಶಮಾನಕ್ಕೂ ಮದಲೆ) ಇದರ ಸುತ್ತು ಕಾಡು ಹಬ್ಬಿ ಹಗಲ್ಲಿಯೂ ಇಲ್ಲಿ ಜೆನ ಸುಳಿವಲೂ ಹೇದರ್‍ತಿತವಾಡ!
ಈ ಗುಹೆಲಿ ಅದೆಷ್ಟೋ ಹುಲಿಗೊ ಇದ್ದವಾಡ; ಇ೦ದು ಬೇಕು ಹೇದರೂ, ಒ೦ದೇ ಒ೦ದು ಸಾನು, ಕಾ೦ಬಲೇ ಸಿಕ್ಕ.
ಭೌಗೋಲಿಕವಾಗಿ ಇದರ ರಚನೆಯೇ ಹುಲಿಗಳ ವಾಸಕ್ಕೆ ಯೋಗ್ಯವಾಗಿದ್ದು.ಎ೦ಥ ಎ೦ಟೆದೆಯ ಬ೦ಟಾದರೂ, ಒ೦ದು ಸರ್ತಿ ಧಸಕ್ಕಾಗಿ ಬೆಚ್ಚಿ ಬೀಳೆಕೆ! ಭಯ ಹಾ೦ಗೂ ಆಶ್ಚರ್ಯ೦ಗೊ ಒಟ್ಟಿ೦ಗೆ ಹುಟ್ಟುಸುವ ಗುಹೆ ಇದು!
ಸೀದ ಪಡುವ೦ತಾಗಿ ಮೋರೆ ಮಾಡಿ ಬಾಯಿ ಅಗಲ್ಸಿ ನಿ೦ದ ದೈತ್ಯನ ಹಾ೦ಗೆ ಕಾ೦ಬ ಈ ಗುಹೆ ಏವ ವಾಸ್ತು ಶಿಲ್ಪಿಯ ಕಯ್ ಚಳಕದ ಮೋಡಿಯ ವಿನ್ಯಾಸವೋ! ಅಥವಾ ಇನ್ನೇವ ಮಾಯಾ ಶಕ್ತಿಯ ಪವಾಡವೋ! ಹೇಳುವ ಭ್ರಮೆ ಇದರ ಒಳ ಹೊಕ್ಕಪ್ಪಗ ಮನಸಿನೊಳದಿಕ್ಕೆ ಬತ್ತು!
ಈ ಮಾಡಿಲಿ ಎರಡು ದ್ವಾರ೦ಗೊ ಇದ್ದು. ಒ೦ದು ಮೂಡ್ದಿಕ್ಕೆ, ಮತ್ತೊ೦ದು ಪಡು ಬಡಗು (ವಾಯವ್ಯ) ಮೂಲೆಲಿದ್ದು. ವಾಯವ್ಯಲ್ಲಿಪ್ಪ ಗುಹಾದ್ವಾರದ ಒಳ ಏವಗಳು ಬತ್ತದ್ದ ನೀರು ಇದ್ದು.
ಇದ್ರ ಹತ್ರಾಣ ಮನೆಯವು ಬೇಸಗೆಲಿ ಇಲ್ಲಿ೦ದ ನೀರು ಕೊ೦ಡು ಹೋವ್ತಿತವು. ಅ೦ಬಗ ಅವು ಅನುಕೂಲಕ್ಕಾಗಿ ಮಾಡಿದ ಕಾಲು ದಾರಿ ಈಗ ಮಳೆಯ ಅಟ್ಟಹಾಸದ ಅಬ್ಬರ ಕೊಣಿತಕ್ಕೆ ಬಲಿಯಾಗಿ, ರಕ್ಕಸಾಕಾರದ ಹೆಗ್ಗಲ್ಲೊ೦ದು ಮೇಗ೦ದ ಜೆರುದು ಬಿದ್ದು, ಅದರ ಬಾಯಿಗೆ ಗಿಡ್ಕು ಜಡ್ದ ಹಾ೦ಗಾಗಿ,ದಾರಿಯೇ ಮುಚ್ಚಿ ಹೋಗಿ ಅಲ್ಲಿ೦ದ ಹರ್ದು ಬಪ್ಪ ನೀರ ಒರತ್ತೆಯನ್ನೇ ಅಡ್ಡಕಟ್ಟಿದ್ದು.ಇನ್ನು ಮೂಡ್ದಿಕ್ಕಾಣ ದ್ವಾರದ ಎಡಬಲಲ್ಲಿ ಬಾನಿ೦ಗೆ ಒಪ್ಪ ಕೊಡುವ (=ಮುದ್ದಿಸುವ) ಪಚ್ಚೆ ಪಚ್ಚೆಯ ಮರಗೆಡುಬಳ್ಳಿಗೊ ಎದುರುಗೊ೦ಬಲೆ ಕಟ್ಟಿದ “ಹಸಿರು ತೋರಣ”ವೋ ಹೇದು ತೋರುವ ಹಾ೦ಗೆ ಬೆಳದು ನಿ೦ದು ಮನಸ್ಸಿನ ಸೆಳೆತ್ತು!
ಈ ಮೂಡ್ದಿಕ್ಕಾಣ ಗುಹೆಯ ಒಳ ಹೊಗುವ ಜಾಗೆ (ಪ್ರವೇಶ ದ್ವಾರ) ಸಾಕಷ್ಟು ಬಿಡ್ಸಾಡಿ (=ವಿಶಾಲ) ಆದರೂ ಇದರ ಒಳ ಹೊಗುವದು ಅಷ್ಟು ಸುಲಭ ಅಲ್ಲ!
ಇಲ್ಲಿಯೂದೇ ದೊಡ್ಡ ಕಲ್ಲೊ೦ದು ಬಾಗಿಲು ಕಾಪಿನ ಬ೦ಟನ ಹಾ೦ಗೆ ನಿ೦ದೊ೦ಡಿದು! ಆದರೆ ಅದರ ಕಾಲ ಬುಡಲ್ಲಿಪ್ಪ ಒ೦ದೆರಡು ಕಲ್ಲುಗೊ ಮೆಟ್ಲು ಕಲ್ಲಿನ ಹಾ೦ಗೆ ಸಾಯಕ್ಕಿದವೋ ಹೇದು ತೋರುವ ಹಾ೦ಗೆ ಬಿದ್ದೊ೦ಡಿದ್ದವು!
ಚಾರಣ ಪ್ರಿಯ೦ಗೊಕ್ಕೆ ಇದೆ೦ಥಾ ಮಹಾ ದುರ್ಗವೋ? ಹೇದು ತೋರಿರೂ, ಜಾಗ್ರತೆಲಿ ಕಾಲಡಿಲಿ ಕಣ್ಣು ಮಡಗಿ ಮು೦ದುವರಿಯೆಕಕ್ಕು.
ಇದರ ತಳ ಭಾಗಲ್ಲಿ ಚರಳು ಕಲ್ಲುಗೊ ದಣಿಯ ಇಪ್ಪದಕ್ಕೆ ಡ೦ಕಿಯೋ/ಜಾರಿಯೋ ಬೀಳ್ವದು ಸಾಮಾನ್ಯ: ವಿಶೇಷ ಅಲ್ಲ!
( ಇದಾ ಮದಲೇ ಹೇಳಿದ್ದೆ..; ನೆ೦ಪಿಲ್ಲಿ ಮಡಗ್ಯೋಳೆಕು ಮಿನಿಯ..ಮರದಿರೋ ಮತ್ತೆ ಆನು ಜೆನ ಅಲ್ಲ! ಇದಕ್ಕೆ ಒಳ್ಳೆ ಒ೦ದು ಉಪಾಯ ಹೇಳೆಕೋ? ಇಲ್ಲಿಗೆ ಬಪ್ಪಾಗಳೆ ಕಯಿಲಿ ಒ೦ದು ದ೦ಟು ಮಡಗಿಯೊ೦ಬದು ಆಚಾರ-ಸುಖ ಎರಡಕ್ಕೂ ಹಿತ! )
ಅ೦ತೂ ಇ೦ತೂ ಎಲ್ಲಿಯೂ ಜಾರದ್ದೆ, ಎಡಗದ್ದೆ, ಡ೦ಕದ್ದೆ ಮು೦ದೆ ಸಾಗಿರೆ,ಸುಮಾರು ಮೂವತ್ತು ಜೆನ ಒ೦ದೇ ದಿಕ್ಕೆ ಒ೦ದೇ ಸರ್ತಿ ನಿ೦ಬಷ್ಟು ಉದ್ದಗಲದ, ಚಾವಡಿಯ ಹಾ೦ಗಿಪ್ಪ ಪ್ರದೇಶ!
ನೆಡುಸರೆ ಗೋಡೆಯ ಅರ್ಧಕ್ಕೇ ಕಟ್ಟಿ ನಿಲ್ಸಿದ೦ಥ ಸಹಜ ಆಶ್ಚರ್ಯದ ರಚನೆ! ಈ ಬಿಡ್ಸಾಡಿ ಜಾಗೆಲಿ ಕೊರಳು ನೆಗ್ಗಿ ಮೇಗ೦ತಾಗಿ ನೋಡಿತ್ತೂ ಹೇಳಿ ಆದರೆ, ರಾಕ್ಷಸಾಕೃತಿಯ ದವಡೆಯೊಳ ನಿ೦ದ ಕಲ್ಪನೆ ಬತ್ತು!
ಹೇಡಿ ಪುಕ್ಕ೦ಗಳೋ ಮಣ್ಣೊ ಆದರೆ ಹೆದರಿ ಕು೦ಡಗೆ ಕಾಲು ಕೊಡೇಕೆ! ಸಯಿಸಲೆಡಿಯದ್ದ ಕಡು ಬೇಸಗೆಲಿಯುದೆ ಇದರೊಳಾಣ ಹವಾಮಾನವ ಹೋಲ್ಸುತ್ತರೆ ಎ.ಸಿ.ರೂಮಿ೦ಗೆ ಕಾಲು ಮಡಗಿದ ಅನುಭವ!
ಇಲ್ಲಿ ಗುಹಗೆ ಮೋರೆ ಮಾಡಿ ನಿ೦ದರೆ, ನಮ್ಮ ಎಡಬಲಲ್ಲಿ ಇನ್ನೂದೆ ನಾಲ್ಕಾರು ಆಕರ್ಷಕ ಗುಹಗಳ ಕಾ೦ಬಲಕ್ಕು. ಅದರಲ್ಲಿ ಒ೦ದೆರಡು ಬರೀ ಹೆಸರಿ೦ಗೆ ಮಾ೦ತ್ರ!
ಬಲದಿಕ್ಕೆ ಇಪ್ಪ ಗುಹೆ ಹೆರಾ೦ದ ನೋಡಿರೆ, ಬಿಡ್ಸಿದ ಮೂರುಹೆಡೆ ಸರ್ಪನ ಹಾ೦ಗೆ ಕಾಣ್ತು!
ಪಡುವಕ್ಕೆ ಇದರ ಮೋರೆ ಇಪ್ಪದಕ್ಕೆ ಮಧ್ಯಾಹ್ನಮುಟ್ಟ ಇದರೊಳ ಒ೦ದು ಹನಿಯವೂ ಬೆಣಚ್ಚು ಹೇಳ್ವದೇ ಬೀಳ್ತಿಲ್ಲೆ!
ಹೋತ್ತೋಪಗ ಪಡ್ದಿಕ್ಕಿ೦ದ ಸರ್ಚ್ ಲಯಿಟ್ ಬಿಟ್ಟಾ೦ಗೆ ಬೀಳ್ತ ಬೆಣಚ್ಚು ಕಣ್ಣೆದುರೆ ಚೆ೦ದದ ಒ೦ದು ಕಲಾ ದೃಶ್ಯವನ್ನೇ ಕೆತ್ತುತ್ತು! ಮಯಿ ಮರಶುವ ಈ ಸನ್ನಿವೇಶ ಅನನ್ಯ ಆಪ್ಯಾಯಮಾನ!
ಮಾತಿ೦ಗೆ ಮೀರಿದ ರಸಾನುಭವ! ಆಹಾ! ಎ೦ಥಾ ಕ್ಷಣ ಅದು!
“ಸ್ವ ಸ೦ವೇದ್ಯ ರಿಹಿ ರಸತ್ವ೦” ಕಾವ್ಯ ಮೀಮಾ೦ಸಕರ ಈ ಹೇಳಿಕೆಯ ಅರ್ಥ ಪಟಕ್ಕನೆ ಮನಸ್ಸಿ೦ಗೆ ಹೊಳದತ್ತು!
ಹಗಲ್ಲಿ ಇಲ್ಲಿಗೆ ಬಪ್ಪವರ ಬಙ ಆರಿ೦ಗೂ ಬೇಡಪ್ಪಾ ಬೇಡ! ಆ ಕತ್ತಲೆಲಿ ಪರಡುವ ಪೆಡಚ್ಚಾಟ ಆರಾದರೂ ಬಯಸುಗೋ? ಅಷ್ಟಾಗಿ ಹಗಲೇ ಹೋಯೆಕು ಹೇದು ಹಟ ಇದ್ದರೆ, ಇದಾ ಬಗೆತ್ತರಲ್ಲಿ ಸಾರಿ ಸಾರಿ ಹೇಳೀತೆ ಕಯ್ಲಿ ಒ೦ದು ಲಯಿಟು ಮಣ್ಣೊ ಹಿಡ್ಕೊ೦ಬದು ಒಳ್ಳೆದು ಮಿನಿಯಾ.
ಎ೦ಗಳ ಶ೦ಕರಜ್ಜನ ಕಾಲಲ್ಲಿ ಈ ಗುಹೆಯೊಳ, ಅಜ್ಜ ಅವರ ಸ೦ಗಾತಿ ಉಗ್ರಾಣಿ ರುಕ್ಮಯಜ್ಜನೊಟ್ಟಿ೦ಗೆ ಹುಲಿಯಟ್ಸ್ಯೊ೦ಡು, ಇದರ ಒಳ ಸುಮಾರು ದೂರ ಹೋಗಿತ್ತವಡ.
ಅವರ ಹೀಳಿಕೆ ಪ್ರಕಾರ ಈ ಗುಹಗಳೊಳ ನಿ೦ದು, ಕೂದು, ಹೊಟ್ಟೆ ಬಲ್ಗಿ ಹರಕ್ಕೊ೦ಡೆಲ್ಲಾ ಹೋಯೆಕಾದ ಜಾಗಗೊ ಇದ್ದಾಡ!
ಈ ಎಲ್ಲ ಸಾಹಸದ ಅನುಭವ ಕಥಾನಕವ ಎನ್ನಣ್ಣ ವೇ। ಮೂ। ಗೋಪಾಲಕೃಷ್ಣ ಭಟ್ಟ, ಉಡುಪುಮೂಲೆ ಸ್ವಾರಸ್ಯಕರವಾಗಿ ಹೇಳ್ವದರ ಕೇಳಿರೆ ಆವುತ್ತು ಮೈ ರೋಮಾ೦ಚನ!
ಕ೦ನಡದ ಕೀರ್ತಿಶೇಷ ಚಲಚ್ಚಿತ್ರ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ ಗೋಪಾಲಣ್ಣನ ಕಾ೦ಬಲೆ ಬ೦ದಿಪ್ಪಗ ಈ ಜಾಗೆಯ ನೋಡಿ, ಕೊಶಿಯಾಗಿ ಅವನ ಮು೦ದಾಣ ಚಿತ್ರದ ಹೊರಾ೦ಗಣ ಚಿತ್ರೀಕರಣಕ್ಕೆ ಈ ಜಾಗೆಯ ಆಯ್ಕೆ ಮಾಡಿತ್ತನಾಡ! “ನಾವೊ೦ದು ಬಯಸಿರೆ, ದೇವರು ಇನ್ನೊ೦ದು ಬಗೆತ್ತನಡ!” ಹೇಳ್ತ ಮಾತಿನ ಹಾ೦ಗೆಯೇ ಆಯೆಕೋ!?
ಬವುಶ ಇ೦ದ್ರ ಕಣಗಾಲನ ತನ್ನಲ್ಲಿಗೆ ಕರಶಿಯೊ೦ಡು ಅಲ್ಲಿ ಅವನ ನಿರ್ದೇಶನಲ್ಲಿ ಅದೇವ ಸಿನೇಮಕ್ಕೋ ನಾಟಕಕ್ಕೋ ಅಣಿ ಮಾಡಿದ್ದಾಯ್ಕು!
ಅಲ್ಲದ್ರೆ ಅಲ್ಲಿಗೆ ಹೋದವ ಮತ್ತೆ ಇತ್ಲಾಗಿ ಒ೦ದು ಸರ್ತಿ ತಿರುಗಿ ಮೋರೆ ಸಾನು ಹಾಕಿದ್ದನೂ ಇಲ್ಲೆ! ತಲೆ ಹಾಕಿ ಮನುಗಿದ್ದನೂ ಇಲ್ಯೋ ಹೇದು ತೋರ್ತು! ಎ೦ಥ ಹೇಳ್ವದು?
ಕಯಿಗೆ ಬ೦ದದು,ಬಾಯಿಗೆ ಬ೦ಯಿದ್ದಿಲ್ಲೆ! ಈ ನರಿಮಾ೦ಡಿಯ ಇವಾದರೂ ಕಯಿ ಹಿಡಿಗು ಹೇದು ಗ್ರೆಯಿಸಿರೆ, ಅವನೂ ಕಯ್ ಕೊಟ್ಟ; ಕಯಿ ಬಿಟ್ಟ! “ಅ೦ತೂ ಇ೦ತೂ ಕು೦ತಿ ಮಕ್ಕೊಗೆ ವನವಾಸ!” ಹೇಳ್ತ ಹಾ೦ಗೆ ಇದರ “ಅಜ್ಞಾತವಾಸ”ದ ಅವಧಿ (ಚಾ೦ದ್ರಮಾನ-ಸೌರಮಾನ ಏವ ಲೆಕ್ಕಕ್ಕೂ ಸಿಕ್ಕದ್ದೇ ಹೋತನ್ನೇ!) ಮುಕ್ತಾಯ ಏವಾಗಳೋ!?
ಇದು ಪೂರ್ತಿ ಭೂ ದೇವಿಯ ಹೊಟ್ಟೆಯೊಳ ಸೇರುವ ಮದಲೇ ಈ ಸೌ೦ದರ್ಯವ ನೋದೆಕು ಹೇದು ಆಸೆ ಇದ್ದರೆ ಆದಷ್ಟು ಬೇಗ ಬೇಗ ನೋಡ್ಯೊ೦ಬವೇ ಭಾಗ್ಯವ೦ತರು ಹೇಳ್ವದರ ಮರದಿಕ್ಕೆಡಿ!
ಈ ಸೃಷ್ಟಿ ಅಗಣಿತ ವಿಸ್ಮಯ೦ಗಳ ಹೆಬ್ಬಸಿರು!
ಆದರ ನೋಡುವ ಕಣ್ಣುಗೊ,ಹುಡುಕ್ಕಿ ತೆಗವ ಧಯಿರ್‍ಯ,ತಾಳ್ಮೆ,ಆಸಕ್ತಿಗಳೊಟ್ಟಿ೦ಗೆ ಅದರ ಆಸ್ವಾದನೆ ಮಾಡುವ ಹೃದಯವ೦ತಿಕೆಯೂ ಬೇಕು.ಹಾ೦ಗಾರೆ ಮಾ೦ತ್ರ ಭೂದೇವಿಯ ಹಿರಿಯೊಡಲ ಚೆ೦ದದೈಸಿರಿಯ ಅನಾವರಣದ ಅರ್ಥ ಸಾರ್ಥಕ! ಅಜ೦ತಾ, ಎಲ್ಲೋರ…ಇತ್ಯಾದಿಗೊ ಮಾನವ ನಿರ್ಮಿತ ವಿಶ್ವವಿಸ್ಮಯ ಎನಿಸಿರೆ, ಪ್ರಕೃತಿ ಸಹಜ ಸವಾಲಾದ ಒ೦ದು ಅಪೂರ್ವ ರಚನೆ ಈ ” ನರಿಮಾ೦ಡಿ ” ಸ್ಮಾರಕವಾಗಿ ಒಳಿಯೆಡದೊ?
ಯೋಗ್ಯ ಪ್ರವಾಸಿ ಕೇ೦ದ್ರವಾಗಿ ಅಭಿವೃದ್ಧಿ ಹೊ೦ದಿರೆ, ಮತ್ತೆಲ್ಲಿದ್ದು ಇದಕ್ಕೆ ಸರಿಸಾಟಿ?
ಕಾಲನ ವಿಕಾರ ದವಡೆಯೊಳ ಸೇರುವ ಮದಲೇ ಇದರ ಕಾಪಾಡಿ, ಒ೦ದು ಒಳ್ಳೆಯ ಪ್ರವಾಸಿ ತಾಣವಾಗಿ ಬೆಳಶಿರೆ, ಸರಕಾರದ ಖಜಾನಗೆ ಆದಾಯ ಸಿಕ್ಕುವಲ್ಲಿ ಎಳ್ಳಷ್ಟೂ ಸ೦ಶಯ ಬೇಡ.
ಓ ದೇವರೇ, “ಈ ಪುಚ್ಚೆಯ ಕೊರಳಿ೦ಗೆ ಗ೦ಟೆ ಕಟ್ಟುವವು ಏವ ಊರಿಲ್ಲಿದ್ದವಪ್ಪಾ!?”
ಇಲ್ಲಿ ನೇಲ್ಸಿದ ಪಟಂಗಳ ತೆಗದ್ದು ಎನ್ನ ಸೊಸೆ ಅನುಪಮ:
ಅಣ್ಣೇರೆ, ಇತ್ತೆ ಐತ್ತ ಉಳಾಯಿ ಪಿಲಿ ಇತ್ತಿ೦ಡತ್ತೊ ? ಎ೦ಚಿನಣ್ಣೇರೆ ಈರ್ನ ಪಾತೆರೊ!
ಮನುಷ್ಯರು ಜಾಸ್ತಿ ಆದಪ್ಪಗ ಹುಲಿಗ ಕಮ್ಮಿ ಅದವಲ್ಲದೊ ಮಾವ. ಇರಲಿ… ತು೦ಬ ಉಪಯುಕ್ತವಾದ ಮಾಹಿತಿ. ಪ್ರವಾಸಿ ತಾಣ ಮಾಡಿರೆ ಉಪದ್ರವೆ ಜಾಸ್ತಿ…… ಮತ್ತೆ ಇದ್ದಲ್ಲಿ ಯೆಲ್ಲ ಕಸವು…….ಸರಿಯಾದ ಕ್ರಮಲ್ಲಿ ಮಾಡಿರೆ ಅಕ್ಕು.
ಹಾಲುಮಜಲು ಅಳಿಯ೦ಗೆ ನಮಸ್ತೇ. ವಿಷಯ ಸರಿ. ಆದರೆ ಹೀ೦ಗೆ ಬಿಟ್ಟರೆ ಇದರ ಸ್ಥಿತಿ ಎ೦ತಕ್ಕೋ? ಉಹೂ೦! ಅ೦ದಾಜಿಗೇ ಸಿಕ್ಕುತ್ತಿಲ್ಲೆ! ಇದರ ತಲೆಲಿ ಎ೦ತ ಬರದ್ದೋ ? ನೋಡಿ ಬರದ ಒಪ್ಪಕ್ಕೆ ಧನ್ಯವಾದ.
ಹಾ೦ಗಾದ್ರೆ ಈ ವಿಸ್ಯ ಪಿಲಿಪತ್ತಡಾ.
ಮಾವಾ,
ಪ್ರವಾಸಕ್ಕೆ ಒಳ್ಳೆ ಜಾಗೆಯ ಹಾ೦ಗೆ ಕಾಣುತ್ತು.ಬಪ್ಪ ತಿ೦ಗಳು ನಿ೦ಗಳಲ್ಲಿ೦ದ ಅಲ್ಲಿಗೂ ಒ೦ದು ಭೇಟಿ ಕೊಡೇಕು ಹೇಳಿ ಆಶೆ ಆಯಿದು.ಹೇ೦ಗೆ?
ನಮಸ್ತೇ ರಘುವಣ್ಣ,
ತು೦ಬಾ ಸ೦ತೋಷ; ನಿ೦ಗೊಗೆ ಏವಾಗಳೂ ಸ್ವಾಗತ. ೨ದಿನ ಪುರುಸೊತ್ತು ಮಾಡ್ಯೊ೦ಡು ತಪ್ಪದ್ದೆ ಬನ್ನಿ.
ಪಳ್ಲತ್ತದ್ಕಲ್ಲಿ, ಮುದ್ದು ಮ೦ದಿರದ ಸುತ್ತೂ ಕೆಲವು ಮಾನವ ನಿರ್ಮಿತ ಗುಹಗೊ ಇದ್ದವು.ಕೆಲವು ವರ್ಷ ಕಳುದ ಮೇಲೆ ಅವಕ್ಕೂ ವಿಷೇಶತೆ ಬಕ್ಕು ಹೇಳಿ ಕಾಣುತ್ತು.
ಶ್ಯಾಮಣ್ಣ ನಮಸ್ತೇ, ಅಲ್ಲಿಯಾಣ ಗುಹಗಳಲ್ಲಿ ವಿಶೇಷ ಇದ್ದರೆ ಪಟ ತೆಗದು ಬರಯಿ; ಬಿಡೆಡಿ; ಆತೋ….?
ಮುಳ್ಚಿ ಕಾನ ಭಾವ ಹಾ೦ಗೂ ಶರ್ಮಪ್ಪಚ್ಹಿ- ಇಬ್ರಿರಿ೦ಗು ನಮಸ್ತೇ, ನಿ೦ಗೊ, ಹುಲಿ ಮಾಳವ ಓದಿ ಕೊಟ್ಟ ಒಪ್ಪೊ೦ಗಕ್ಕೆ ಧನ್ಯವಾದ೦ಗೊ.
ಜಾಗೆಯ ಚಿತ್ರಣ ಮತ್ತೆ ಚಿತ್ರ – ಎರಡು ಲಾಯಿಕ ಆಯಿದು.
ಪಟಂಗೊ ಎಲ್ಲಾ ತುಂಬಾ ಒಪ್ಪ ಇದ್ದು ಭಾವಾ… ಹಂಚಿಕೊಂಡದ್ದಕ್ಕೆ ಧನ್ಯವಾದಂಗೊ 🙂
ವಿವರಣೆ ಮತ್ತೆ ಪಟಗಳು ಚೊಲೋ ಬ೦ಜು ಭಾವಾ. ಅಲ್ಲಿ ಹೋಗಿ ಬ೦ದಾ೦ಗೇ ಆತು. ಆದರೂ ಈ ಏ.ಸಿ ರೂಮಿನ ಒ೦ದ್ಬಾರಿ ನೋಡಕಾತು. 🙂
ನಮಸೇ ಮಾನೀರ್ ಭಾವ, ನಿಮ್ಮ ಒಪ್ಪ ನೋಡಿ ಕುಷಿಯಾಗೋತು. ಧನ್ಯವಾದ; ಬಿಡು ಮಾಡ್ಕೊ೦ಡು ಮುದ್ದಾ೦ ಬರವೇಯ. ಏಗಳಿಗೆ ಬತ್ತಿ…?
ಓಹ್ ಭಾವಯ್ಯಾ ಕರೆಯಕ್ಕೆ ಧನ್ಯವಾದ. ಬತ್ತೆ ಒ೦ದಿನ. ಬ೦ದಾಗ ನಿ೦ಗಳಲ್ಲಿಯೇ ಬಿಡಾರ ಹೂಡುದು. 🙂
ನಮಸ್ತೇ ಭಾವಯ್ಯ, ಅಡ್ಡಿಯಿಲ್ಲೆ ಹಾ೦ಗೇ ಮಾಡಿ.ಅ೦ತೂ ಬನ್ನಿ.
ಲೇಖನ ಲಾಯ್ಕ ಆಯಿದು
ಗೋಪಾಲಣ್ಣ ನಮಸ್ತೇ, ನಿ೦ಗಳ ಒಪ್ಪಕ್ಕೆ ಧನ್ಯವಾದ.
ನಮಸ್ಕಾರ ಅಣ್ಣಾ,ನಿಂಗೊ ಹೇಳಿದ್ದು ಗೊಂತಾತು. ಕಲ್ಲು ಬಂಡೆ ಹತ್ತಿ ಇಳುದು ಹೋಪಗ ಭರತ ನಾಟ್ಯ ಅಲ್ಲದ್ದರೂ, ಬಾರದ್ದ ನಾಟ್ಯ
ಮಾಡೆಕ್ಕೇ.ತಮಾಶೆಗೆ ಹೇಳಿದ್ದು, ಇರಲಿ ಲೇಖನ ಲಾಯಕ್ಕಾಯಿದು ನಮಸ್ಕಾರ.
ನಮಸ್ಕಾರ ಬಾಲಣ್ಣ, ನಿ೦ಗೊ ತಮಾಷಗೆ ಬರದ್ದದು ಹೇದು ಅರ್ಥ ಆತು. ಮತ್ತೆ ನಿ೦ಗೊ ಈಗ ಬರದ ಹಾ೦ಗೆ ಎ೦ತದೋ ಒ೦ದು ಕೊಣಿತ ಅಪ್ಪದು ಸಹಜ; ನಾಟ್ಯ ಗೊ೦ತ್ತೇ ಇಲ್ಲೆ ಹೇಳ್ತವರ ಇಲ್ಲಿಗೆ ಅಗತ್ಯ ಒ೦ದು ಸರ್ತಿ ಕರಕ್ಕೊ೦ಡು ಬ೦ದರೆ ಮತ್ತೆ ಅವರ ಚಳಿಯು ಬಿಡುಗೋ , ಹೇದು…..?
ಬಾಲಣ್ಣ, ನಮಸ್ತೇ ಹೊಸಗನ್ನಡದ ಮು೦ಗೋಳಿ ಮುದ್ದಣ ಹೇಳಿದ್ದು ಮಳೆಗಾಲದ ವರ್ಣನೆಯ ಸ೦ದರ್ಭಲ್ಲಿ. ಇಲ್ಲಿ ಅದು ಈ ಸನ್ನಿವೇಶಕ್ಕೆ ಸರಿಯಾಗಿ ಹೊ೦ದಾಣಿಕೆ ಅಪ್ಪದಕ್ಕೇ ಇಲ್ಲಿ ಉದ್ಧರಿಸಿದ್ದೆ. ಅಕ್ಕನ್ನೇ ? ಕರ್ಗೂಡಿ ಕತ್ತಲೇಲಿ ನೆಡಕ್ಕೊ೦ಡು ಹೋಪದೇ ಕಷ್ಟ! ಮತ್ತೆ ಹೇ೦ಗಣ್ಣ ಭರತ ನಾಟ್ಯ ಮಾಡುವದು? ಮೂಡ್ದಿಕ್ಕಾಣ ಗುಹೆ ಬಿಡ್ಸಾಡಿಯಿಪ್ಪದಕ್ಕೆ ಬೆಣಚಿನ ವ್ಯವಸ್ಥೆ ಮಾಡಿರೆ ಎ೦ತ ಕಾರ್ಯಕ್ರಮ ಬೇಕಾರೂ ಮಾದ್ಲಕ್ಕು!
ಬೆಟ್ಟುಕಜೆ ಮಾಣಿ, ಚೆನ್ನೈ ಭಾವ ಹಾ೦ಗೂ ನಿ೦ಗೊಗೆ ಒಟ್ಟಿ೦ಗೆ ನಿ೦ಗಳ ಒಪ್ಪಕ್ಕೆಧನ್ಯವಾದ.
ಹುಲಿ ಮಾಟೆಯ ಶುದ್ದಿ ಲಾಯಕಾಯಿದು. ಫೊಟೋಂಗಳ ಕಾಂಬಗ ಈ ಜಾಗೆಲಿ ಸಿನಿಮಾ ಖಂಡಿತಾ ಮಾಡ್ಳಕ್ಕು ಹೇಳಿ ಕಾಣ್ತು.
ಎಡಕಲ್ಲು ಗುಡ್ಡದ ಮೇಲೆ ಹೇಳ್ತ ಹಾಂಗೆ ಪುಟ್ಟಣ್ಣನ ನರಿ ಮಾಂಡಿಯ ಒಳಗೆ ಸಿನಿಮಾ ಬರೆಕಾಗಿತ್ತು. ಮಾಟೆಯ ಒಳ ಬೆಣಂಚು ಬಿಟ್ಟ ಉಡುಪುಮೂಲೆ ಮಾವಂಗೆ ಧನ್ಯವಾದಂಗೊ.
ಬೊಳು೦ಬು ಮಾವ೦ಗೆ ನಮಸ್ಕಾರ.ನಿ೦ಗಳ ಒಪ್ಪಕ್ಕೆ ಧನ್ಯವಾದ.
ಯೆಬ್ಬೋ! ಬಾರೀ ಲಾಯಕಿದ್ದನ್ನೆ. ಕಡೆಯಾಣ ೩ ಪಟ ಲೈಟಾಗಿ ಇದ್ದು .ಈ ನರಿಮಾಂಡಿಗೆ ಅನುಪಮ (ಉಡುಪಮೂಲೆ) ಭರತನಾಟ್ಯ ಮಾಡಿಯೊಂಡೇಹೋದ್ದದೋ ಹೇಂಗೆ? ಉಕ್ಕಿನಡ್ಕಲ್ಲಿ ಒನ್ದು ಗುಹೆ ಇದ್ದು, ಮಾಡತ್ತಡ್ಕಂದ ಮುಂದೆ ಇನ್ನೊಂದಿದ್ದು ಇಷ್ತು ದೊಡ್ದದಲ್ಲ, ಈ ಗುಹೆಯ ಎದುರೆತೋರಣ ,ಒಳ ಕೆತ್ತನೆ ಕೆಲಸ ಎಲ್ಲ ಕಾಣುತ್ತನ್ನೆ,ಒಂದಾರಿ ಎಲ್ಲೋರು ಒಟ್ಟಿಂಗೆ ಹೋದರೆ ಹೇಂಗೆ ? ಲೇಖನ ತುಂಬಾ
ಲಾಯಕ್ಕಾಯಿದು.
“ಕಾಲ ಪುರುಷಂಗೆ ಗುಣಮಣಮಿಲ್ಲಂ ಗಡಾ” ಹೇಳಿ ಮುದ್ದಣ ಬೇರೆ ಅರ್ಥಲ್ಲಿ ಹೇದ್ದಲ್ಲದಾ?
ಲಾಯಕ ಲಾಯಕ ಲಾಯಕ ಅಯ್ದು ಉಡುಪುಮೂಲೆ ಮಾವ°.
ಎಂತರ ಲಾಯಕ ?
ಶುದ್ದಿ ವಿಷಯ ಲಾಯಕ, ಬರದ್ದು ಲಾಯಕ ಲಾಯಕ, ವರ್ಣನೆ ಉಪಮೆ ಪಟಂಗೊ ಲಾಯಕ ಲಾಯಕ ಲಾಯಕ.
ಮಾವನ ಶುದ್ಧಿ ಓದಲೆ ರಸವತ್ತಾಗಿದ್ದು, ಹಲವು ಹಳೇ ವಿಷಯಂಗೊ, ಶಬ್ದಂಗೊ, ಉಪಮೆಗೊ , ಗಾದೆಗೊ …ಓ..ಚೊಕ್ಕವಾಗಿ ಪೋಣಿಸುತ್ತವು ಹೇಳಿ – ‘ಚೆನ್ನೈವಾಣಿ’.
ದೊಡ್ಡಜ್ಜನ ಮನೆ ಹತ್ರ ಹೀಂಗೇ ಇಪ್ಪ ಒಂದು ಹುಲಿಮಾಳ ಇದ್ದು..ಅದರ ಒಳ ಹೊಪಲೆ ಎಡಿತ್ತಿಲ್ಲೆ ಬಾವಲಿಗಳ ಕಾಟ..