ಬೈಲಮೂಲೆ ಕುಂಞಿಬಾವ ಮದಲು ಬೆಂಗುಳೂರಿಲಿ ಇದ್ದರೂ ಈಗ ಅಲ್ಲಿಲ್ಲೆ!
ಈಗ ಅವನ ಕೆಲಸಲ್ಲಿ ಪ್ರೊಮೋಷನು ಸಿಕ್ಕಿದ ಲೆಕ್ಕಲ್ಲಿ ಆ ಕಂಪೆನಿಯ ತರವಾಡಿಂಗೆ (ಹೆಡ್ಡಾಪೀಸೀಂಗೆ) ಕಳುಸಿದ್ದವಡ – ಅದಿಪ್ಪದು ಇಂಗ್ಳೇಂಡಿಲಿ.
ದೊಡ್ಡ ಸಂಬಳ, ದೊಡ್ಡ ಕೆಲಸ, ದೊಡ್ಡ ಆಪೀಸು – ಹೋಗದ್ದೆ ನಿವುರ್ತಿ ಇದ್ದೋ – ಹೊಟ್ಟೆ ಹಶುವಿಂಗೆ ಹೋಪದಿದಾ!
ಅವಂಗೆ ಪ್ರೊಮೋಷನು ಸಿಕ್ಕಿಯೇ ಸಿಕ್ಕುಗು, ಬಯಂಕರ ಚುರುಕ್ಕಿನ ತಲೆ.
ಅವನ ಅಪ್ಪ ಬೇಂಕಿಲಿಪ್ಪದಿದಾ – ಕುಂಞಿಮಾವ. ಅಜ್ಜನಮನೆಯವುದೇ ಹಾಂಗೇ ಬಯಂಕರ ಉಶಾರಿ..
ಅದಿರಳಿ.
ಅವಂಗೆ ಮದುವೆ ಆದ್ದದು ಬೆಂಗುಳೂರಿಂದಲೇ- ಅವನದ್ದೇ ಆಪೀಸಿನ ಕೂಸಡ, ಒಳ್ಳೆ ಉಶಾರಿ ಅಡ..! ಕನ್ನಡ ಮಾತಾಡ್ತದು ಮನೆಲಿ.
ಹೆಂಡತ್ತಿಗೆ ನಮ್ಮಬಾಶೆ ಕಲಿಶಿದ್ದನಿಲ್ಲೆ, ಮಕ್ಕೊಗಾರೂ ಕಲಿಶುಗೋ ಏನೋ!
ಅದಿರಳಿ – ಬೇರೆವರ ಶುದ್ದಿ ನವಗೆಂತಕೆ, ಅಲ್ಲದೋ!? 😉
~
ಅವನ ಅಣ್ಣ, ಪುಟ್ಟಬಾವ ಊರಿಲೇ ಇಪ್ಪದು. ಅವಕ್ಕೆ ರಜ್ಜ ತೋಟ ಇದ್ದು, ಅದರ ನೋಡಿಗೊಂಡು – ಹಾಂಗೇ ವೈಯಗ್ತಿಕ ಸಂಪಾದನೆ ಹೇಳ್ತ ಲೆಕ್ಕಲ್ಲಿ ಮಾಷ್ಟ್ರತ್ತಿಗೆ ಇದ್ದು.
ಪುಟ್ಟಬಾವಂಗೆ ಮದುವೆ ಆಗಿ ಆರೊರಿಶ ಅಪ್ಪಲಾತು. ಇಬ್ರು ಮಕ್ಕೊ – ಒಂದಕ್ಕೆ ನಾಲ್ಕು, ಇನ್ನೊಬ್ಬ ಬರೇಸಣ್ಣ – ಕೈಹಿಳ್ಳೆ!
ಕುಂಞಿಬಾವ ಕಲಿವಲೆ ಸುರು ಮಾಡುವಗಳೇ ಪುಟ್ಟಬಾವಂಗೆ ಮಾಷ್ಟ್ರತ್ತಿಗೆ ಸುರು ಮಾಡಿ ಆಯಿದು – ಅಷ್ಟು ವಿತ್ಯಾಸ ಇತ್ತು ಅವರ ಪ್ರಾಯಲ್ಲಿ.
ಈ ಒರಿಶಾಂತರಂದಾಗಿ ಅವಕ್ಕೆ ಸುಮಾರು ಕ್ರಮ ವಿತ್ಯಾಸಂಗೊ ಬಂದು ಬಿಟ್ಟಿದು..
~
ಪುಟ್ಟಬಾವ ಒಳ್ಳೆ ಗಟ್ಟಿಮುಟ್ಟು ದೇಹ, ತುಂಡು ಜವ್ವನಿಗನ ಹಾಂಗೆ!
ಅಪ್ಪಲೆ ಮಾಷ್ಟ್ರಣ್ಣ ಆದರೂ, ಮನೆಲಿ ಮನೆಮಟ್ಟಿಂಗೇ ಇರ್ತವು.
ಕೃಷಿಯೂ ಇದ್ದ ಕಾರಣ ತೋಟಕ್ಕೆ ಹೋಗಿ, ಬಂಙದ ಕೆಲಸಂಗಳ ಮಾಡಿ ಅಭ್ಯಾಸ ಇದ್ದಿದಾ..
ಅಗತ್ಯ ಬಂದರೆ ಮಡುಮಸದು ಸೌದಿ ಒಡವಲೆ ಹಿಡುದು, ಅಡಕ್ಕೆಮರಕ್ಕೆ ಹತ್ತಿ ಸಿಂಗಾರ ತೆಗವಲ್ಲಿ ಒರೆಂಗೆ – ಸಾಮಾನ್ಯ ಬಚ್ಚಲಿನ ಎಲ್ಲ ಕೆಲಸವೂ ಅರಡಿಗು!
ಧಾರಾಳ ಕೆಲಸಮಾಡ್ತವು. ಹಾಂಗಾಗಿ ಒಳ್ಳೆತ ಹಶುದೇ ಆವುತ್ತು, ಊರ ಕುಚ್ಚಿಲುಅಕ್ಕಿಯ ಹೆಜ್ಜೆಗೆ ತುಪ್ಪ ಆತುಗೊಂಡು ಸಮಕ್ಕೆ ಉಣ್ತವು, ಉಪ್ಪಿನಕಾಯಿಯೂ, ಊರದನದ ಮೊಸರುದೇ ಕೂಡಿಯೊಂಡು ಧಾರಾಳ ಉಣ್ತವು.
ಶಾಲೆ ಇಪ್ಪ ದಿನ ಕಮ್ಮಿ ಆದರೂ, ರಜೆ ದಿನಂಗಳಲ್ಲಿ ಮನೆಲಿ ಕೆಲಸ ಇದ್ದಿದಾ – ಎಲ್ಲಿ ಕರಗುತ್ತು ಗೊಂತಾವುತ್ತಿಲ್ಲೆ!
ಆದರೆ ಕುಂಞಿಬಾವ ಹಾಂಗಲ್ಲ, ಸಪುರಸಪುರ ಆಗಿ ರಜ ಕೋಲುಕೋಲಾಗಿ ಇಕ್ಕು. ಸಣ್ಣದಿಪ್ಪಗಳೇ ಹಾಂಗೆ, ಓದುದೊಂದೇ ಇದ್ದದು ಆ ಮಾಣಿಗೆ.
ಓದುತ್ತಮಾಣಿ ಆದ ಕಾರಣ, ಮನೆಲಿ ಪುಟ್ಟಬಾವನೇ ಎಲ್ಲ ಕೆಲಸಂಗಳ ಮಾಡಿಗೊಂಡವು.
ಹಾಂಗಾಗಿ ಕಷ್ಟದ ಕೆಲಸಂಗ ಅಷ್ಟಕ್ಕಷ್ಟೇ! – ಅರಡಿತ್ತೂ ಇಲ್ಲೆ, ಅಷ್ಟು ಶೆಗ್ತಿಯೂ ಇಲ್ಲೆ!
ಓದಿ ಓದಿ ಅಪ್ಪಗಳೇ ಒಳ್ಳೆ ಕೆಲಸ ಸಿಕ್ಕಿತ್ತು, ಕೆಲಸ ಲೆಕ್ಕಲ್ಲಿ ಬರೇ ಆಪೀಸಿಂಗೆ ಹೋಪದು ಮಾಂತ್ರ ಇದಾ – ಬೇರೆಂತ ಕೆಲಸ ಇಲ್ಲೆನ್ನೆ!
ಉಂಡದು ಸರಿ ಕರಗುಲೂ ಪುರುಸೊತ್ತಿಲ್ಲೆ, ಮತ್ತಾಣ ಊಟ ತೆಯಾರಾಗಿರ್ತು!
ಬಚ್ಚದ್ದ ಕಾರಣ ಜಾಸ್ತಿ ಉಂಬಲೂ ಇಲ್ಲೆ ಇದಾ! ಹಾಂಗಾಗಿ ಆಹಾರದ ಬಗೆಗೆ ವಿಶೇಷ ಗಮನ ವಹಿಸಿತ್ತಿದ್ದವಿಲ್ಲೆ.
~
ಪುಟ್ಟಬಾವ ಅವರ ಚರ್ಯೆಯ ಬಗ್ಗೆ ದೊಡ್ಡ ಗುಮನ ಮಾಡಿದ್ದವಿಲ್ಲೆ.
ಶಾಲಗೆ ಹೋಪಗ ಒಂದು ಪೇಂಟು, ಒಂದು ಬನಿಯನಿನ ಮೇಲೆ ಅಂಗಿ!
ಪೇಂಟನ್ನುದೇ ಹಾಂಗೆ, ಹೊಕ್ಕುಳಿಂಗೇ ಸಿಕ್ಕುಸಿಗೊಂಗು, ವೇಷ್ಟಿ ಸುತ್ತುವಲ್ಲಿಗೆ.
ಪೇಂಟಿಂಗೆ ಇಸ್ತ್ರಿ ಇರ, ಆದರೆ ತೊಳದು ಶುಭ್ರವಾಗಿ ಇಕ್ಕು – ಮಣ್ಣೇ ಇಲ್ಲದ್ದೆ!
ಅಂಗಿಯುದೇ ಹಾಂಗೆ, ಒಂದು ಅಂಗಿಯ ಒಂದೇ ದಿನ ಹಾಕುದಿದಾ – ಅಷ್ಟಪ್ಪಗ ಬೆಗರಿನ ಪ್ರಶ್ನೆಯೇ ಇಲ್ಲೆ – ಸೆಂಟು ಬೇಕಾವುತ್ತೇ ಇಲ್ಲೆ!
ಜೆಂಬ್ರಕ್ಕೆ, ನಿತ್ಯಕ್ಕೆ ಎಲ್ಲ ವಸ್ತ್ರವೇ ಸುತ್ತುದು ಇದಾ – ಅದುದೇ ಹಾಂಗೇ; ಶುಭ್ರವಾಗಿ ಇಪ್ಪಂತಾದ್ದು!
ಕುಂಞಿಬಾವಂದು ಈ ವಿಶಯಲ್ಲಿ ರಜಾ ವಿತ್ಯಾಸ ಇದ್ದು!
ಪೇಂಟಂಗಿ ಇಂದ್ರಾಣದ್ದೇ ಆಯೆಕ್ಕು ಹೇಳಿ ಏನಿಲ್ಲೆ – ಆದರೆ ಇಸ್ತ್ರಿ ಬೇಕು.
ಒಳ್ಳೆ – ಕತ್ತಿ ಅಲಗಿನ ಹಾಂಗೆ ನಿಲ್ಲೆಕ್ಕು, ಅಂಗಿ ಕರೆ!
ಅಷ್ಟುದೂರಂದ ನಾತ ಬಪ್ಪ ಹಾಂಗಿಪ್ಪ ಬೆಗರಟೆ ಅಂಗಿ ಆದರೆ – ಗುಣಾಜೆಮಾಣಿಯ ಹಾಂಗೆ ಪುಸೂಲನೆ ಸೆಂಟು ಬಿಟ್ಟುಗೊಂಗು – ವಾಸನೆಯ ಪರಿಮ್ಮಳ ಮಾಡ್ಳೆ!
ಒಳ್ಳೆ ಇಸ್ತ್ರಿ ಅಂಗಿಗೆ ಇಸ್ತ್ರಿಇಪ್ಪ ಪೇಂಟಿನ ಸಿಕ್ಕುಸಿ, ಅದರ ಮೇಗಂದ ಅರೆ ಹೊಳೆತ್ತ ಒಂದು ಬೆಳ್ಟಿನ ಸಿಕ್ಕುಸಿ, ಕಾಲಿಂಗೆ ಒಂದು ಡಾಮರು ಬೂಟಿಸು ಹಾಕಿಯೊಂಡು ಹೋಕು – ಇದ್ದಲ್ಲಿಗೆಲ್ಲ!
ಮದಲು ಬೆಂಗುಳೂರು ಮಾಂತ್ರ, ಈಗ ಇಂಗ್ಳೇಂಡಿಂಗೂ ಸಾಕದು.
~
ಊರ ಜೆಂಬ್ರಂಗಳಲ್ಲಿ ಹೊಟ್ಟೆತುಂಬ ಬಳುಸುಗು. ಬೇಕಾದವ ಬೇಕಾದಷ್ಟು ಹಾಕಿಯೊಂಗೊ – ಮನಸೋ ಇಚ್ಛೆ ಉಂಗು.
ನಮ್ಮ ಊರಿನ ವಿಶೇಷಂಗೊ – ನಮ್ಮದೇ ಆಹಾರಂಗಳ ಮಾಡುಗು!
ಹಂತಿಮರಿಯಾದಿ ಹೇಳಿಗೊಂಡು ಕೂದೋರ ಒಳ್ಳೆತ ಚೆಂದಲ್ಲಿ ನೋಡಿಗೊಂಗು!
ಆರೋ ನಮ್ಮ ಭಾವಯ್ಯಂದ್ರು ಬಳುಸಿಗೊಂಡು ಬಕ್ಕು, ಒತ್ತಾಯ ಮಾಡಿ ಬಳುಸುಗು, ಕೂದವ° ಹಟಕಟ್ಟಿ ಉಂಗು!
ಹಶುವಿಲಿ ಕೂರುಗು, ಸಂತೋಷಲ್ಲಿ ಏಳುಗು!
ಇದೆಲ್ಲ ಎಂತಕೆ ನೆಂಪಾದ್ದು ಹೇಳಿರೆ,
ಪೇಟೆಗಳಲ್ಲಿ ’ಪಾರ್ಟಿ’ಗೊ ಹೇಳಿ ಮಾಡ್ತವಡ, ಜೆಂಬ್ರ ಕಳುದ ಲೆಕ್ಕಲ್ಲಿ.
ಉತ್ತರಭಾರತ ಹಸಿಗೋಧಿ ರೊಟ್ಟಿಯೂ, ಚೀನಾದವರ ಹಸಿಕರಂಚಿದ ತುಂಡುಗಳೂ ಇರ್ತ ನಮುನೆದು!
ಕುಂಞಿಬಾವನ ಪೈಕಿ ಸುಮಾರು ಆವುತ್ತಾ ಇರ್ತಡ!
ಪುರುಸೊತ್ತಾದರೆ ಹೋಪದಿದ್ದಡ, ಅಪುರೂಪಲ್ಲಿ.
ಹಂತಿಲಿ ಕೇಳಿಗೊಂಡು ಬಪ್ಪ ಹಾಂಗೆ ಕೇಳುದಲ್ಲ, ನಾವೇ ಹೋಗಿ ಬೇಕಾದ್ದರ ಬೇಕಾದಷ್ಟು ಹಾಕುಸಿಗೊಂಬದು, ಬಳುಸುತ್ತದು ಯೇವ ಮಾರಾಯ° ಹೇಳಿ ನವಗರಡಿಯ.
ನಮುನೆ ನಮುನೆ ಬಗೆಗೊ ಇಕ್ಕು – ಜಾಸ್ತಿ ಬಳುಸವು – ಸಣ್ಣ ಸೌಟಿಲಿ ರಜಾ ಬಳುಸುತ್ತದು.
ಹಶುಆವುತ್ತು ಹೇಳಿ ಒಂದೇ ಬಗೆಯ ಹೊಟ್ಟೆತುಂಬ ತಿಂಬಲಿಲ್ಲೆಡ – ಅಲ್ಲಿ ಎದುರಾಣವ ಎಷ್ಟು ತಿಂತನೋ – ಅದೇ ಪ್ರಮಾಣಲ್ಲಿ ತಿನ್ನೇಕು.
ಎದುರಾಣವ ರುಚಿ ಇಲ್ಲೆ ಹೇದರೆ ಅಪ್ಪಪ್ಪು ಹೇಳಿ ಅದರ ಬಿಡೆಕ್ಕು, ಎದುರಾಣವ ಹೆಚ್ಚು ಹಾಕಿಯೊಂಡ್ರೆ ಮೆಚ್ಚದ್ರೂ ಹಾಕಿಯೊಂಡು ತಿನ್ನೇಕು,
ಇವನ ಹಶು ಕರಿವ ಮದಲೇ ಎದುರಾಣವ ನಿಲ್ಲುಸಿರೆ ಇವನೂ ನಿಲ್ಲುಸುದು – ಪಾಪ!
ಅದು ಅಲ್ಯಾಣ ಹಂತಿಮರಿಯಾದ ಅಡ! (Table Manners ಹೇಳುಗು ಕುಂಞಿಬಾವ!)
~
ಬೇಕೋ!
ಅರ್ದಂಬರ್ದ ತಿಂದುಗೊಂಡು, ಬಿಕ್ಕಿಂಡು, ಬಣ್ಣಬಣ್ಣದ ಪೆಕೆಟುಗಳ ನಕ್ಕಿಂಡು ಪಾರ್ಟಿ ಗೀರ್ಟಿ ಹೇಳಿ ಮಾಡಿಗೊಂಡು..
ಹಶುಆಗದ್ರೂ ತಿಂದುಗೊಂಡು, ಹಶು ಆಗಿದ್ದರೂ ಅರೆಹೊಟ್ಟೆ ತಿಂದುಗೊಂಡು, ಆರಾರ ಅನುಕರಣೆ ಮಾಡಿಗೊಂಡು ಇಪ್ಪದು!!
ಊರಿನ ಕ್ರಮಲ್ಲಿ ಹೊಟ್ಟೆತುಂಬ ತಿಂದುಗೊಂಡು, ಬಚ್ಚುವನ್ನಾರ ಕೆಲಸಮಾಡಿ, ಗಟ್ಟಿಮುಟ್ಟಾಗಿ ಇಪ್ಪಲಾಗದೋ?
ಹೇಳಿ ಶರ್ಮಪ್ಪಚ್ಚಿ ಜೋರು ಪರಂಚುಗು, ಬೆಂಗುಳೂರಿಂದ ಬಂದ ದಿನ!!
ಪೇಟೆಂದಲೂ, ಅವಕ್ಕೆ ಮನೆಲಿ ಮಾಡಿದ ಕುಂಬ್ಳಕಾಯಿ ಕೊದಿಲೇ ಕೊಶಿ ಅಪ್ಪದಿದಾ!
ದೊಡ್ಡ ಪೇಟೆಲಿ ಕೆಲಾವು ಜೆನ ಇದ್ದವು.
ಅರ್ದಂಬರ್ದ ತಿಂದರೂ, ಅರೆಹೊಟ್ಟೆಲೇ ದಿನಕಳದರೂ ಸಾರ ಇಲ್ಲೆ, ಮೈ, ಮಂಡೆ ಮಾಂತ್ರ ಮನಾರ* ಮಡಿಕ್ಕೊಂಗು! – ಹೇಳುಗು ಮಾಷ್ಟ್ರಮನೆ ಅತ್ತೆ!
ವಾರಕ್ಕೊಂದರಿ ಹೇರು ಡೈ ಮಾಡಿಗೊಂಡು, ಮೋರೆಗೆ ಎಂತೆಲ್ಲ ಮೆತ್ತಿಗೊಂಡು, ಏನೇನೋ ಸುರ್ಪ ಕೆಡುಸಿಗೊಂಡು ಇದ್ದರೂ ಆತು!
ವಾರಕ್ಕೆರಡೇ ಮೀಯಾಣ ಆದರೂ ಆತು, ಕಾಂಬಗ ಮಾಂತ್ರ ಇನ್ನೊಬ್ಬಂಗೆ – ಈಗ ಮಿಂದಿಕ್ಕಿ ಬಂದದೋ – ಹೇಳಿ ಕಾಂಬಷ್ಟು ಚೆಂದ!
ಆರ ಕೊಶಿಗೆ ಈ ನಮುನೆ ಬದುಕ್ಕುದಪ್ಪಾ, ಈಗಾಣ ಮಕ್ಕೊ – ಹೇಳಿ ಬಂಡಾಡಿಅಜ್ಜಿ ಕಾಲುನೀಡಿ ಬೇಜಾರುಮಾಡ್ತು!
ಊರೋರು ಅಂತೂ – ಉದಿಯಪ್ಪಗ ಮಿಂದಿಕ್ಕಿ ತಲೆಬಾಚುಗು, ಮತ್ತೆ ಕೆಲಸಂಗಳೆಡಕ್ಕಿಲಿ ಅದು ಎಲ್ಲಿ ಹೋವುತ್ತೋ ಏನೋ –
ಹಶುಆದರೆ ಉಂಗು, ಹಶುಆಗದ್ರೆ ಉಣ್ಣವು! ದಿನಕ್ಕೆರಡು ಮೂರು ಮೀಯಾಣ ಇದ್ದೇ ಇಕ್ಕು!
ಕಾಂಬಲೆ ಅಷ್ಟು ಮನಾರ ಇರವು, ಆದರೆ ನಿತ್ಯಶುಚಿಯಾಗಿಕ್ಕು, ಆರೋಗ್ಯವಂತರಾಗಿಕ್ಕು!
ಅಲ್ಲದೋ?
ಊರಿಲಿಪ್ಪ ಪುಟ್ಟಬಾವ ಅವನ ತಮ್ಮ ಕುಂಞಿಬಾವ ನೋಡಿ ಬೇಜಾರು ಮಾಡಿಗೊಳ್ತ, ಉಣ್ತಯಿಲ್ಲೆ ಸರಿಗಟ್ಟು ಹೇಳಿ.
ಕುಂಞಿಬಾವಂಗೆ ಪುಟ್ಟಬಾವನ ಕಂಡು ಬೇಜಾರಾವುತ್ತು – ಅಯ್ಯೋ, ಮನಾರ ಇಲ್ಲೆನ್ನೆ! ಹೇಳಿಗೊಂಡು.
ಆಗಲಿ, ದೂರದ ಇಂಗ್ಳೇಂಡಿಲಿದ್ದರೂ – ಊರಿಂಗೆ ಬಂದಿಪ್ಪಗಾದರೂ ಹೊಟ್ಟೆತುಂಬ ಉಂಡು ಮನಾರ ಇರಳಿ ಕುಂಞತ್ತೆಗೆ ಕಾಣ್ತು!
ಚೆ ಚೆ! ಎಂತಾ ಅವಸ್ಥೆ ಅವ್ವೆವಸ್ತೆ! ಹೇಳಿ ಬೇಜಾರಪ್ಪದು ಒಪ್ಪಣ್ಣನ ಬೈಲಿಂಗೆ!!!
ಅಲ್ಲದೋ? ಏ°?
ಒಂದೊಪ್ಪ:ಮನಾರ ಇರೆಕ್ಕಾದ್ದು ಮನಸ್ಸಿಲಿ; ಮೈ -ಮಂಡೆಲಿ best replica rolex watches ಅಲ್ಲ!
*ಸೂ: ಮನಾರ = Neat / Clean
ಮದಲಿಂಗೆ ಈ ಶೆಬ್ದ ಒಳ್ಳೆತ ಉಪಯೋಗಲ್ಲಿದ್ದರೂ, ಈಗ ಎಲ್ಲೊರುದೇ ಅದರ ಇಂಗ್ಳೀಶು ಶೆಬ್ದವನ್ನೇ ಉಪಯೋಗುಸುತ್ತದು.
ನಿಜವಾಗಿ ಹೇಳ್ತರೆ ಇಂಗ್ಳೀಶಿನ ನೀಟು – ಹೇಳ್ತದರಿಂದ ಹೆಚ್ಚಿನ ವೈಶಾಲ್ಯ ಮನಾರ ಹೇಳ್ತ ಶೆಬ್ದಕ್ಕೆ ಇದ್ದು.
ಹೋಳಿಗೆ ಕೆರುಶಿ ಮನಾರ ಆತದಾ – ಮೊನ್ನೆ ಜೆಂಬ್ರಕಳುದಮತ್ತೆ ಮಾಷ್ಟ್ರುಮಾವನಲ್ಲಿ ಅಜ್ಜಕಾನಬಾವ ಹೇಳಿಗೊಂಡಿತ್ತಿದ್ದ!
ಅವ ನೋಡಿದ ಕೆರುಶಿಲಿ ಹೋಳಿಗೆ ಮುಗುದಿತ್ತಿದ್ದು!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
Nice article and it is real. We live for somebody now and not for ourselves. Days are gone when we used to live for ourselves. Now it is a sort of “maaya” loka ! People judhe people by their dress. Remember a old song by our annavaru ” naavu kallakke thakkanthe nadeyabeku naavu kaalakke thakkanthe kuniyabeku”. In short, it is a real fantastic article. Keep writing. Regret i cannot type in Kannada as i dont have the fonts on my machine.
ಭಾರೀ ಲಾಯ್ಕಾಯಿದು.
ಪೇಟೆಯವಕ್ಕೆ Ethnic Day ದಿನ ಮಾಂತ್ರ ನಮ್ಮ ವೇಷ್ಟಿ, ಮುಂಡು ಎಲ್ಲ ನೆಂಪಕ್ಕು. ಅದಕ್ಕುದೇ ಒಂದು ಮನಾರ ಇಕ್ಕಡ.
ಒಳುದ ದಿನ ಅದರ ಸುತ್ತುದು ಹೇಳಿರೆ ಅವಮಾನ!
ಹಳ್ಳಿಲಿಪ್ಪವು ಎಲ್ಲಿಗೆ ಹೋವುತ್ತರೂ ಮುಂಡನ್ನೇ ಸುತ್ತುಗು.
ಉಂಬದು-ತಿಂಬದರಲ್ಲಿ ಏನೂ ದಾಕ್ಷಿಣ್ಯ ಮಾಡವು. ನಿಜವಾಗಿ ಹೇಳ್ತರೆ ಹೊಟ್ಟೆಗೆ ಬೇಕಪ್ಪಷ್ಟು ಆಹಾರವ ಮನಾರಲ್ಲಿ ತಿಂಬದು ಹಳ್ಳಿಯವ್ವೇ. ಅದಕ್ಕೆ ತಕ್ಕಿತ ಕೆಲಸವೂ ಮಾಡುಗು ಒಪ್ಪಣ್ಣ ಹೇಳಿದಾಂಗೆ.
sooperiddu oppanna…
monne padlagi ondu baddhakke hoide.ottinge oppanna bainda.alladre dari gontu bekanne.bhari gammattu ittu… oppanna choornike laiku helidda.. engo hattaratre umbale kooideyo, hange heli alla alladru laiku helutta.madmmayana hange kandattu kushi aatu.
innu sadyalle ondu maduve elusuva andajili idda kanuttu helike bandare hoyekku.alladre avangu bejaru navagu bejaru.
ellige heradtaru sentu iddare saku eegana makkoge.
meeyadru akku matte maimande manara appadu henge?modale udaseena, kala budakke varege ammandru kelasa madidaru saakavuttille.
matte hottu kalavale t.v internet iddanne hangagi manarakke time elliddu
ella manasiliddu heli samaadhana madire saka oppanno.
eradude bekallado…???????????
ಲಾಯ್ಕ ಆಯಿದು ಮಿನಿಯಾ°. ಒಂದೊಪ್ಪಕ್ಕೆ ಎನಂಗೊಂದು ಒಪ್ಪ ಕೊಡೆಕ್ಕೇಳಿ ಆವುತ್ತಾ ಇದ್ದು….
ನಿಂಗೊ ಬರದ್ದು ಲಾಯಿಕ್ಕಾಯಿದು… ಆ ಕುಂಞಬಾವ ಆದರೂ ಎಂತ ಮಾಡುದು… ಅವ ಕಲ್ತ ಮಾಣಿ ಆದ ಕಾರಣ ಮನೆ ಬಿಟ್ಟು ಹೋಯೆಕ್ಕಾವ್ತಿದ…ಮನೆಲಿದ್ದು ಎಂತ ಮಾಡುದು.., ಪೇಟೆಲಿಪ್ಪವಕ್ಕೆ ಅದೇ ಶಿಷ್ಟಾಚಾರ ಆದಿಕ್ಕು… ಆದರೆ ಕುಂಞಬಾವ ಕಲಿತ್ತ ಸಮಯಲ್ಲಿ ರಜ ತೋಟಕ್ಕೆಲ್ಲ ಹೋಗಿದ್ದರೆ ಅವಂಗೆ ಎಲ್ಲ ಕೆಲಸ ವುದೆ ಅಭ್ಯಾಸ ಆವ್ತಿತು ಅಲ್ಲದೋ…
ಒಪ್ಪಣ್ಣನ ಶುದ್ದಿ ಯೆವತ್ತಿನ ಹಾಂಗೆ ಒಪ್ಪ ಆಯಿದು… ಪುಟ್ಟು ಭಾವನ ಕಾಲಕ್ಕೂ ಕುಂಞಿ ಭಾವನ ಕಾಲಕ್ಕೂ ಅಪ್ಪಗ ವೆವಸ್ತೆ ಸುಮಾರು ಬದಲಿದ ಹಾಂಗಿದ್ದು… ಇಬ್ರು ಸಣ್ಣ ಇಪ್ಪಗ ಬೆಳದ ಪರಿಸರ ಒಂದೇ ಆದರೂ ಕೆಲಸ ಹಿಡುದ ಮೇಲೆ ಬದಲಾವಣೆ ಗಮನಿಸುವಂಥದ್ದೆ… ಪುಟ್ಟು ಭಾವ ಸಂಪ್ರದಾಯ ಒಳಿಶಿ ಗೊಂಡು ಬಂದ° ಸಾಮಾನ್ಯರೊಟ್ಟಿ ನ್ಗೆ ಸಾಮಾನ್ಯ° ಆದ°… ಕುಂಞಿ ಭಾವ°, ಅಸಾಮಾನ್ಯರೊಟ್ಟಿ ನ್ಗೆ ಸಾಮಾನ್ಯ ಅಪ್ಪಲೆ ಹೆಣಗಿದ°…. ಅದರಲ್ಲಿ ಅವರ ಮೆಚ್ಚುಸುಲೆ ಅವರ ಹಾಂಗೆ ವಸ್ತ್ರವುದೇ, ಅವರ ಕ್ರಮದ ಊಟವುದೇ, ಅವರ ಹಾಂಗೆ ಇಪ್ಪಲುದೆ ಪ್ರಯತ್ನ ಮಾಡಿ, ಬೇರೆ ಜಾತಿದೂ ಮದುವೆ ಆಗಿ ನಮ್ಮ ಭಾಷೆ ಅದಕ್ಕೆ ಕಲಿಶದ್ದೆ.. ಮಕ್ಕೊಗೆ ನಮ್ಮ ಭಾಷೆ, ಸಂಪ್ರದಾಯವೂ ಗೊಂತಾಗದ್ದೆ ತ್ರಿಶಂಕು ಸ್ಥಿತಿಗೆ ಮುಟ್ಟಿದ°… ಮಕ್ಕೋ ನಾಳೆ ಏವ ಸಂಪ್ರದಾಯ ಪಾಲಿಸುದು ಹೇಳಿ ಗೊಂತಾಗದ್ದೆ ಅವಕ್ಕೆ ಕೊಶಿ ಕಂಡದರ ಮಾಡಿಗೊಂದು ಹೋಕು… ಅಪ್ಪ° ಹಿರಿಯರ ಗೌರವಿಸುದು ಕಾಣದ್ದ ಮಕ್ಕೋ ನಾಳೆ ಅಪ್ಪನ ಗೌರವಿಸುಗೋ? ಊರಿಂಗೆ ಅಪರೂಪಕ್ಕೆ ಬಂದರೂ ಇಲ್ಲಿ ಇಪ್ಪ ಒಳ್ಳೆದರ ಹೇಳವು ಮಕ್ಕೊಗೆ.. ಮಾಂಬಳ ಜಾಲಿಲಿದ್ದರೆ ತಿಂಬಲೆ ಕೊಡವು… ಅದರಲ್ಲಿ ‘dust ಕೂದಿರ್ತು’ ಹೇಳಿ… ಪ್ರತಿಯೊಂದರಲ್ಲಿಯೂ ತಪ್ಪು ಹುಡುಕ್ಕಿ ತೋರ್ಸುಗು… ಅವಕ್ಕೆ ಎಲ್ಲವೂ ತಾರಣಿ ಹೇಳಿದ ಹಾಂಗೆ ಪೇಕು ಆಗಿ ಬಂದದೆ ನೋಡಿ ಗೊಂತಲ್ಲದಾ? ಅದೇ ಮೆಚ್ಚುದು.. ನಮ್ಮ ಅಡಿಗೆ ಉಂಡರೆ ಅರೋಗ್ಯ ಇಕ್ಕು ಅದೇ ಪೇಟೆ ಕ್ರಮದ್ದು ಆದರೆ ಊಟದ ಮೊದಲೊಂದು ಮಾತ್ರೆ, ಮತ್ತೆ ಒಂದು ಮಾತ್ರೆ ಒಟ್ಟಿ ನ್ಗೆ ಬೇಕು… ಶರ್ಮಪ್ಪಚ್ಚಿ ಹೇಳಿದ ಹಾಂಗೆ ನಮ್ಮ ಊಟದ ಕ್ರಮವೇ ಲಾಯಕ ಹೇಳಿ.. ನಮ್ಮದು ಕ್ರಮ ಬದ್ದ ಆಹಾರ ಕ್ರಮ.. ಬಾಳೆಲಿ ಖಾದ್ಯಂಗಳ ಬಳುಸುವ ಕ್ರಮ, ಅದರ ಉಂಬ ರೀತಿ, ಒಂದಾದ ಮೇಲೆ ಒಂದು ಬಗೆಗ ಬಪ್ಪ ಕ್ರಮ ಉಂಬಗ ದೇವರ ನಾಮ ಸ್ಮರಣೆ ಮಾಡ್ತಾ ಉಂಬ ದು ಇದೆಲ್ಲಾ ಹಿರಿಯೋರಿಂದ ನವಗೆ ಬಂದ ಬಳುವಳಿ… ಇದರ ಬಗ್ಗೆ ಹೆಚ್ಚು ನಮ್ಮ ಮಾಷ್ಟ್ರು ಮಾವ° ಹೇಳೆಕ್ಕಷ್ಟೇ… ಚೂರ್ಣಿಕೆ ಹೇಳುವಾಗ ನೆನಪ್ಪಾತು… ಮೊನ್ನೆ… ಎನ್ನ ತಮ್ಮನ ಬದ್ಧಕ್ಕೆ ಹೊದಿಪ್ಪಾಗ ಉಂಬಗ ಕೂಸಿನ ಕಡೆಯೋರದ್ದು ಮಾಣಿ ಚೂರ್ಣಿಕೆ ಹೇಳೆಕ್ಕು ಹೇಳಿ ಒತ್ತಾಯ!! ಎಂಗಳ ಮಾಣಿ ಬಿಡ್ತಾನಾ? ಒಂದು ಒಳ್ಳೆ ಚೂರ್ಣಿಕೆ ಬಿಗುದ್ದೆ!!!! ಎಲಾ ಮಾಣಿಯೇ!! ಹೇಳಿ ಎಲ್ಲೋರು ನೋಡಿಯೇ ಬಾಕಿ!!!!
ಹವ್ಯಕ ಭಾಷೆ ಸರಿಯಾಗಿ ಬಾರದ್ದರೆ ತಲೆ ಬೆಶಿ ಮಾಡಡಿ. ದಿನಾ oppanna.comಲಿ ಲೇಖನಂಗಳ ಓದುತ್ತಾ ಇರಿ. ಭಾಷೆ ಸುಲಭಲ್ಲಿ ಬಕ್ಕು.
ಒಪ್ಪಣ್ಣ ಲೇಖನ ಚೆನ್ನಗಿದೆ.. ನನಗೆ ಹವ್ಯಕ ಭಾಷೆ ಅಷ್ಟು ಸರಿಯಗಿ ಗೊತ್ತಿಲ್ಲ ಆದರೂ ಲೇಖನ ಓದಿ ಪ್ರತಿಕ್ರೆಯೆ ಕೊಡಲು ಪ್ರಯತ್ನಿಸಿದ್ದೇನೆ. ಲೇಖನಕ್ಕೆ ಸರಿ ಹೊಂದದಿದ್ದಲ್ಲಿ DELETE ಮಾಡುವಿರೆಂದು ಅಂದುಕೊಳ್ಳುತ್ತೇನೆ.
ಮನಾರ ಇರೆಕ್ಕಾದ್ದು ಮನಸ್ಸಿಲಿ; ಮೈ -ಮಂಡೆಲಿ ಅಲ್ಲ! —- ಈ ಲೇಖನದಲ್ಲಿ ಆಹಾರದ ವಿಷಯದಲ್ಲಿ ಹೇಳಿದ ಮಾತುಗಳು, ಹಾಗೆ ನಮ್ಮ ಉಡುಗೆ ತೋಡುಗೆಯ ವಿಷಯವಿರಬಹುದು ಇದೆನ್ನೆಲ್ಲ ನೋಡಿದರೆ ನಾವೆಲ್ಲ ಶ್ರಮವಿಲ್ಲದೆ ಕೆಲಸಗಳನ್ನು ಮಾಡುವತ್ತ ನಮ್ಮ ಮಾನಸಿಕತೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಹಾಗೆಯೇ ನಮ್ಮ ಆಹಾರದಲ್ಲೂ ಕೂಡ.ಇಂದು ‘ಅರ್ಧ ಅರಗಿದ(ಪ್ರಿಡೈಜಸ್ಟೆಡ್) ಸಿದ್ಧ ಆಹಾರವನ್ನು ದಿನದಿಂದ ದಿನಕ್ಕೆ ಸೇವಿಸುತ್ತಿದ್ದೇವೆ. ಮಕ್ಕಳಿಗಂತೂ ಅವುಗಳದ್ದೇ ಅಭ್ಯಾಸ. ಹಾಲು, ಹಣ್ಣು, ತರಕಾರಿಗಳಂತಹ ಸ್ವಾಭಾವಿಕ ಆಹಾರಗಳೆಲ್ಲ ಮರೆತು ಹೋಗುತ್ತಿವೆ. ಡಬ್ಬಗಳಲ್ಲಿ ಬರುವ ನಾನಾ ಹೆಸರಿನ ಆಹಾರು ಹುಡಿಗಳನ್ನು(ವಿದೇಶವಾಗಿದ್ದರೆ ಇನ್ನೂ ಪ್ರಶಸ್ತ) ನೀರಿನಲ್ಲಿ ಕದಡಿ ಮಕ್ಕಳಿಗೆ ಕುಡಿಸುತ್ತೇವೆ. ಏಕೆಂದರೆ ಅವು ಅರಗಲು ಸುಲಭವಂತೆ. ಮಕ್ಕಳ ಹೊಟ್ಟೆಗೆ ಅರಗಿಸುವ ಶ್ರಮ ತಪ್ಪಿಸಬೇಕಲ್ಲವೇ? ಅದಕ್ಕಾಗಿ ಇವುಗಳ ಬಳಕೆ. ನವಿರು ನವಿರಾದ ಬಟ್ಟೆ ಧರಿಸಿ ಉದ್ಯನವನಗಳಲ್ಲಿ ಗಾಳಿಸಂಚಾರ. ಮೈಯಿಂದ ಬೆವರಿಳಿಸುವ ಕಬಡ್ಡಿ, ಖೋ ಖೋ, ಕಾಲ್ಚೆಂಡು (Football) ಇವೆಲ್ಲವೂ ಶರೀರಕ್ಕೆ ಆಗದ ಆಟಗಳು. ಏಕೆಂದರೆ ಮೈಕೈಗೆ ಕಷ್ಟ ಕೊಡುವಂಥವು. ಇತ್ತಿಚೆಗೆ ನಮ್ಮ ಹಳ್ಳಿಯ ಜನರೂ ಕೂಡಾ ಅರ್ಧ ಘಂಟೆಯಲ್ಲಿ ನಡೆದು ಹೋಗುವ ದಾರಿಗೆ ಒಂದು ಘಂಟೆ ಕಾದು ಹಣ ಕೊಟ್ಟು ಬಸ್ಸುಗಳಲ್ಲಿ ಹೋಗುವುದನ್ನು ನೋಡುತ್ತಿದ್ದೇವೆ.
ಇನ್ನು ನಮ್ಮ ಸುಶಿಕ್ಷಿತ ಜನರು ಮೈಮುರಿದು ಕೆಲಸ ಮಾಡುವುದಂತೂ ಅವರ ಪ್ರತಿಷ್ಠೆಗೆ ಕುಂದು ಬಂದಂತೆ. ವಿದ್ಯೆ ಹೆಚ್ಚಿದಷ್ಟು ಪ್ರತಿಷ್ಠೆ ಕೂಡಾ ಹೆಚ್ಚು ಹೆಚ್ಚು. ಅಂದರೆ ಶರೀರ ಶ್ರಮ ಕಡಿಮೆ. ಒಂದು ಊರಿಗೆ ಹೊರಟಿದ್ದ ವಾಹನ (BUS) ರಸ್ತೆ ಮಧ್ಯೆ ಹಾಳಾಯಿತು. ಚಾಲಕನ ಮಾತಿನಂತೆ ಬಸ್ಸಿನಿಂದ ಜನರು ಕೆಳಗೆ ಇಳಿದು ತಳ್ಳಲಾರಂಭ್ಹಿಸಿದರು. 20-25 ಜನರಿದ್ದರು. ಆದರೆ ಪ್ರಯಾಣಿಕರ ಪೈಕಿ ಇಬ್ಬರು ಮಾತ್ರ ತಪ್ಪಿಯೂ ಬಸ್ ತಳ್ಳಲು ಮುಂದಾಗಲಿಲ್ಲ. ಆರಾಮವಾಗಿ ಕೈ ಬೀಸಿಕೊಂಡು ಬಂದರು. ಅವರಿಬ್ಬರೂ ಸಹ ಸೂಟು-ಬೂಟು ಧರಿಸಿದ್ದರು. ಉಳಿದ ಪ್ರಯಣಿಕರು ಹಳ್ಳಿಯ ಜನರಾಗಿದ್ದರಿಂದ ಸಾಧರಣ ಪಂಚೆ ತೊಟ್ಟ ವೇಷದಲ್ಲಿದ್ದರು. ಇನ್ನು ಇಬ್ಬರು ಪ್ರಯಾಣಿಕರು ಉಳಿದವರಂತೆ ಮೈ ಬಗ್ಗಿಸಿ ಬಸ್ ತಳ್ಳುವುದೆಂದರೆ ಅವರಿಗೆ ಅಲ್ಲ, ಅವರು ಧರಿಸಿರುವ ಬಟ್ಟೆಗೆ ಎಂಥಹ ಅಪ್ರತಿಷ್ಠೆ ಅಲ್ಲವೇ? ಈ ರೀತಿ ನಮಗೆ ಅನೇಕ ಸಂಗತಿಗಳು ನೋಡಲು ಸಿಗುತ್ತವೆ. ಸಾಮನ್ಯರು ತಳ್ಳುವುದು, ಪ್ರತಿಷ್ಥಿತರು ಸಿಗರೇಟ್ ಸೇದಿಕೊಂಡು ಹಿಂದಿನಿಂದ ಬರುವುದು. ಎಷ್ಟು ಸುಲಭ್ಹದಲ್ಲಿ ಅವರು ತಮ್ಮ ಪ್ರತಿಷ್ಠೆ ಕಾಪಡಿಕೊಳ್ಳುವರು ನೋಡಿ. ಉಳಿದ್ದೆಲ್ಲರಿಗಾಗಿ ಕಷ್ಟ ಪಡುವವರು ಸಾಮಾನ್ಯರು, ‘ಪ್ರತಿಷ್ಠೆ’ ಇಲ್ಲದವರು. ಆಲಸಿಗಳಾಗಿ ಉಳಿದವರಿಂದ ತಮ್ಮ ಸಲುವಾಗಿ ದುಡಿಸಿಕೊಳ್ಳುವವರು ‘ಪ್ರತಿಷ್ಠಾ’ವಂತರು. ಇಂದು ಸಮಾಜದಲ್ಲಿ ಶ್ರಮಕ್ಕಲ್ಲ, ಆಲಸ್ಯಕ್ಕೆ ‘ಪ್ರತಿಷ್ಠೆ’ಯ ಪಟ್ಟ.
ನಮ್ಮ ಜೀವನ ಈ ರೀತಿಯ ಅಗ್ಗದ ಬದುಕಿನತ್ತ ನಮಗೆ ಗೊತ್ತಿಲ್ಲದೇ ಸಾಗುತ್ತಿದೆ. ಒಪ್ಪಣ್ಣನ ಲೇಖನವನ್ನು ಓದಿದನಂತರವದರೂ ಯಾರೋ ಮಾಡಿದ ಆಚರಣೆಗಳನ್ನು ಅನುಕರಣೆ ಮಾಡದೆ, ಹೊಟ್ಟೆ ಹಸಿದಷ್ಟು ಊಟ ಮಾಡಿ, ಮೈ ಮುರಿದು ಬೆವರು ಸುರಿಸಿ ಕಾರ್ಯಪ್ರವರ್ತರಾಗುವುದರಲ್ಲಿಯೇ ಸಾರ್ಥಕತೆ ಇದೆ. ಅಲ್ಲವೇ?
ಹಳೇ ಜೆಡ್ದು ತುಪ್ಪಕ್ಕೆ ಆಯುರ್ವೇದಲ್ಲಿ ತುಂಬಾ ಮಹತ್ವ ಇದ್ದು.
ತಲೆಬೆಳಿ ಅಪ್ಪದಕ್ಕೂ, ಮರತ್ತು ಹೋಪದಕ್ಕೂ ಸಮ್ಮಂದ ಇಲ್ಲೆ.
TARANI ನಮಸ್ಕಾರ… ನಿಂಗೊ ಬೈಲಿಂಗೆ ಬಂದು ಶುದ್ದಿಗೆ ಒಪ್ಪ ಬರೆತ್ತಾ ಇಪ್ಪದು ಲಾಯ್ಕಕವುತ್ತಿದಾ… ಯಾವ ಭಾಷೆಲಿ ಬರದರೂ ಒಪ್ಪ ಒಪ್ಪವೇ!!! ನಿಂಗೊ ಎಂಗಳ ಬೈಲಿಂಗೆ ಬಪ್ಪದೆ ಎಂಗೊಗೆ ಕೊಶಿ.. ಅದರಲ್ಲೂ ಓದಿ ಒಪ್ಪ ಕೊಡುದು ಇನ್ನೂ ಕೊಶಿ… ಎಂಗಳ ಭಾಷೆ, ವೆವಸ್ತೆಯ ಅರ್ಥ ಮಾಡಿಗೊಂದು ಮುತ್ತಿನ ಹಾಂಗಿಪ್ಪ ಒಪ್ಪ ಕೊಡ್ತಿ ಹೇಳಿ ಮೊನ್ನೆ ಒಪ್ಪಣ್ಣ ಸಿಕ್ಕಿದವ° ಉಬ್ಬಿ ಉಬ್ಬಿ ಹೇಳಿದ°… ನಾವು ಯೆವುದೇ ಭಾಷೆ ಮಾತಾಡಿರೂ ನಮ್ಮ ಸಂಸ್ಕಾರಂಗ ಒಂದೇ ಅಲ್ಲದಾ? ಅನುಭವಿಸುವ ಸಂಸ್ಕಾರ ನಷ್ಟ ನ್ಗಳೂ ಒಂದೇ ಅಲ್ಲದಾ? ಹಾಂಗಪ್ಪಗ ಭಾವನೆಯೇ ಮುಖ್ಯ ಆವುತ್ತು… ಧನ್ಯವಾದನ್ಗೋ ಎಂಗಳ ಒಟ್ಟಿನ್ಗೆ ಇಪ್ಪದಕ್ಕೆ… ನಿಂಗೊಗೆ ಇನ್ನೊಂದು ಗೊಂತಿದ್ದಾ? ಮಲಯಾಳಿಗಳಲ್ಲಿ, ಮಲಯಾಳ ಮಾತಾಡಲೇ ಅಥವಾ ಮಾತಾಡುದು ಅರ್ಥ ಆದರೆ ಅವು ಮಲಯಾಳಿಗ ಹೇಳಿ ಲೆಕ್ಕ ಇದ್ದು.. ಹಾಂಗೆ ಎಂಗೊಗೂ…. ನಿಂಗೊ ಎಂಗಳವ್ವೆ…. ಮೊನ್ನೆ ಮಾಷ್ಟ್ರು ಮಾವನ ಕುಂಞಿ ಮಗನ ಬದ್ಧಕ್ಕೆ ಬೈಲಿನವು ಸುಮಾರು ಜೆನಂಗ ಸೇರಿದ್ದವಿದಾ.. ಅಲ್ಲಿ ಮಾಷ್ಟ್ರು ಮಾವ ನಿಂಗೊ ಒಪ್ಪ ಬರವದು ಭಾರೀ ಲಾಯಕ ಆವುತ್ತು ಹೇಳಿ ಹೇಳಿದವು ನಮ್ಮ ಬೈಲಿನ ಸುನಿಲಣ್ಣನೂ ಇತ್ತಿದ್ದವು.. ಕೇಳಿ ನೋಡಿ.. ನಿಂಗೊ ಒಪ್ಪ ಬರೆಯದ್ದರೆ ನಮ್ಮ ಒಪ್ಪಣ್ಣನ್ಗೆ ಬೇಜಾರಾಗಿ ಕಾಂಞಂಗಾಡಿನ ಆನಂದಾಶ್ರಮ ದ ಹತ್ತರೆಯೋ.., ಕುಂಬ್ಳೆ ದೇವಸ್ಥಾನದ ಹತ್ತರೆಯೋ ಹೋತಿಕ್ಕುಗು… ಮತ್ತೆ ಸಿಕ್ಕುಲೇ ಕಷ್ಟ ಇದಾ….
ಬೈಪ್ಪಣೆ ಹೇಳುವ ಹೆಸರು ಡೈನಿಂಗ್ ಟೇಬಲಿಂಗುದೆ ಆವುತ್ತು!! 🙂
ಭಫಗೆ ಒಂದು ಹೊಸ(ಹಳೆ) ಹೆಸರು ನಿಂಗೊಗೆ ಗೊಂತಿದ್ದ???
“ಬೈಪ್ಪಣೆ”
ಅಪ್ಪುಬಾವ, ಈಗಾಣ ಕಾಲಲ್ಲಿ ಎಲ್ಲೋರಿಂಗು ಬೇಗ ತಲೆ ಬೆಳಿ ಆವುತ್ತು, ಬೋಳಾವುತ್ತು. ಇದಕ್ಕೆ ಕಾರಣ— ಸಾಬೂನಿನ ಉಪಯೋಗ.ತಲಗೆ ಎಣ್ಣೆ ಹಾಕದ್ದೇ ಇಪ್ಪದೇ ಒಂದು ಫೇಶನು ಆಗಿ ಹೋಯಿದು ಹೇಳಿ. ದಿನಾ ತಲಗೆ ತೆಂಗಿನ ಎಣ್ಣೆಯೋ ಕಾಸಿದ ಎಣ್ಣೆಯೋ ಹಾಕಿ, ಸೀಗೆ/ಬಾಗೆ ಹೊಡಿ ಹಾಕಿ ತಲಗೆ ಮೀಯಿರಿ- ನೋಡಿ ಹೇಂಗಾವುತ್ತು ಹೇಳಿ.
ಓ! ಜೆಡ್ಡು ಡಾಗುಟ್ರು ಬಂದವಿದಾ! ಕೊಶಿ ಆತು.
ಬೆಶಿನೀರಿಲಿ ಮೀವ ಮೊದಲು ಜೆಡ್ಡುತುಪ್ಪವ ಕಿಟ್ಟೆಕ್ಕೋ ತೋರುತ್ತು, ಅಲ್ಲದೋ?
ಹೇಳಿದಾಂಗೆ,
ತಲೆಬೆಳಿ ಅಪ್ಪದಕ್ಕೂ, ಮರತ್ತು ಹೋಪದಕ್ಕೂ ಸಂಬಂಧ ಇದ್ದೋ ಡಾಗುಟ್ರೇ? 😉
ಊಟದ ಕ್ರಮ ಬಗ್ಗೆ ಹೇಳುದಾದರೆ, ನೆಲ ಉಡುಗಿ, ಬಾಳೆ ಮಡುಗುದರಿಂದ ಸುರು ಆದ್ದು, ಊಟ ಆಗಿ ಏಳುವಲ್ಲಿಗೆ ವರೆಗೆ ನಮ್ಮ ಹವ್ಯಕದವರ ಕ್ರಮವ ಮೀರುಸಲೆ ಆರಿಂಗೂ ಎಡಿಯ. ಅಷ್ಟು ಶಿಸ್ತು ಇರ್ತು ಅಲ್ಲಿ.
ಪೇಟೆ ಬಫೆ ಕ್ರಮ ನೋಡಿದರೆ, ಹಳಬರು “ಮೂಗು ಬಾಯಿಲಿ” ತುರ್ಕುಸುವದು ಹೇಳುಗು.ನೀರು ಆದರೂ ಕೂದೊಂಡು ಕುಡಿಯೆಕ್ಕು ಹೇಳುವದು ನಮ್ಮ ಕ್ರಮ. ಮಧ್ಯಾನ್ಹ ಅಂಬ್ರೆಪ್ಪಿಂಗೆ ಆಫೀಸಿಂದ ಹೋಗಿ ಬಫೆಲಿ ಮುಕ್ಕಿಕ್ಕಿ ಬಪಲೆ ಆವುತ್ತು. ಜಂಬ್ರಕ್ಕೆ ಹಾಜರಿ ಹಾಕಿದ ಹಾಂಗೂ ಆತು, ಊಟ ಮಾಡಿದ ಹಾಂಗೂ ಆತು. ಹೆಚ್ಚು ಹೊತ್ತು ಜಂಬ್ರದ ಹಾಲಿಲ್ಲಿ ನಿಂಬಲೆ ಪುರುಸೊತ್ತು ಇರ್ತಿಲ್ಲೆ. ಇದು ಒಂದು ಪ್ರಯೋಜನ ಆನು ಕಂಡದು.
ಊಟದ ಏರ್ಪಾಡು ಹೇಳಿರೆ ,ಈಗ ಎಲ್ಲ ಕೇಟರರ್ಸ್ ಹೇಳಿ ಕಾಂಟ್ರಾಕ್ಟ್ ಕೊಡುವದೇ ಹೆಚ್ಚು. ಅವು ಎಷ್ಟು ನಿರ್ಮಲಕೆ ತಯಾರಿ ಮಾಡ್ತವು ಹೇಳಿ ಕೇಳಿದರೆ, ಉಮ್ಮ ಉಪ್ಪ ಹೇಳಿಯೇ ಹೇಳೆಕ್ಕಷ್ಟೆ. ಇತ್ತೀಚೆಗೆ ಒಂದು ಜಂಬ್ರಕ್ಕೆ ಹೋದಲ್ಲಿ, ಮೆಲಮೈನ್ ತಟ್ಟೆಯ ಅವು ಕೊಟ್ಟ ಟಿಶ್ಯೂ ಪೇಪರಿಲ್ಲಿ ಉದ್ದಿದರೆ, ಪೇಪರ್ ನ ಬಣ್ಣ ಅರಸಿನ ಆತು. ಇನ್ನು ಅದರಲ್ಲಿ ಉಂಬದು ಹೇಂಗೆ?
ಪೇಟೆಯ ಪಾರ್ಟಿ ಹೇಳುವದು “ಪ್ರತಿಷ್ಠೆ” ಗೆ ಬೇಕಾಗಿ ಮಾಡುವದು. ಅಲ್ಲಿ ಉಂಬದು ತಿಂಬದಕ್ಕೆ ಪ್ರಾಮುಖ್ಯ ಇಲ್ಲೆ. ಎಷ್ಟು ಜೆನ ಆಯಿದು, ಎಂತೆಲ್ಲಾ ಇತ್ತಿದ್ದು ಹೇಳುವದೇ ಮುಖ್ಯ.
ಮನಾರ ಶಬ್ದ ಮೊದಲಾಣವು ಹೆಚ್ಚು ಉಪಯೋಗಿಸಿಂಡು ಇತ್ತಿದ್ದವು. ಸಣ್ಣ ಮಕ್ಕೊಗೆ “ಮನಾರಕೆ ಉಂಬಲೆ ಆಗದೋ, ಎಲ್ಲಾ ಬಿಕ್ಕಿ ತೋಕಿಂಡು ಎಂತರ ಉಂಬದು” ಹೇಳುಗು.
ಮೆಲಮೈನ್ ಜೀವಿಗಳ ಶರೀರಕ್ಕೆ ಅತ್ಯಂತ ವಿಷಕಾರಿ ಅಂಶ ಅಲ್ಲದಾ ಶರ್ಮಣ್ಣ? ಇದು ಕ್ಯಾನ್ಸರ್ ಉಂಟು ಮಾಡ್ತು, ಬೇರೆಂತೆಲ್ಲ ತೊಂದರೆಗೊ ಬತ್ತು ಹೇಳಿ ಹೇಳ್ತವು ಅಲ್ಲದಾ? ಆಸಕ್ತಿ ಇಪ್ಪವು ಒಂದಾರಿ ಅಂತರ್ಜಾಲಲ್ಲಿ ಕೂದೊಂಡು ಹುಡ್ಕಿ ನೋಡಿ. ತೈವಾನ್ ದೇಶ ಈ ವಸ್ತುವಿನ ಬಳಕೆಗೆ ನಿಷೇಧ ಹಾಕಿದ್ದು. ಸಣ್ಣ ಸಣ್ಣ ಮಕ್ಕಳ ಶರೀರಲ್ಲಿಯೇ ಕ್ಯಾನ್ಸರ್ ಅಪ್ಪಲೆ ಇದು ಕಾರಣ ಆವುತ್ತಡ…
ಅಪ್ಪು ಹರೀಶ.
ಮೆಲಮೈನ್ ಮಾತ್ರ ಅಲ್ಲ. ಈಗ ಹೆಚ್ಚಾಗಿ ಉಪಯೋಗ ಅಪ್ಪ ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಬಿಸಿ ಬಿಸಿ ಕಾಫಿ, ಚಾ ಕುಡಿವದು ಕೂಡಾ ಅರೋಗ್ಯಕ್ಕೆ ಅಷ್ಟೇ ಹಾಳು. ಆದರೆ “ಉಪಯೋಗಿಸು, ಬಿಸಾಡು” ಸಂಸ್ಕೃತಿಂದಾಗಿ ಇದುವೇ ನಡೆತ್ತ ಇಪ್ಪದು. ಕೇಟರರ್ಸ್ ಗೊಕ್ಕೆ ಸುಲಭವು ಆವುತ್ತು. ತೊಳೆತ್ತ ಕೆಲಸ ಇಲ್ಲೆ. ಒಂದು ಜೆಂಬಾರ ಕಳುದ ಹಾಲ್ ನ ಹೆರ ಎಷ್ಟು ಪ್ಲಾಸ್ಟಿಕ್ ಗ್ಲಾಸ್ ಗೊ, ತಟ್ಟೆಗೊ ಇಡ್ಕಿಂಡು ಇರ್ತು. ಅದರ ಬದಲು ಹಾಳೆ ತಟ್ಟೆ, ಪೇಪರ್ ತಟ್ಟೆ, ಪೇಪರ್ ಲೋಟೆ (ರೈಲ್ವೇಲಿ ಕೊಡುವ ಹಾಂಗಿಪ್ಪದು) ಉಪಯೋಗಿಸಿದರೆ ರಜ ಆದರೂ ಉಪಕಾರ ಅಕ್ಕು. ಜೆನಂಗೊಕ್ಕೆ ಈ ವಿಷಯಲ್ಲಿ ಜಾಗೃತಿ ಅಗತ್ಯ.
ಬೈಲಿನ ಶೇಡಿಯಮ್ಮೆ ಬಾವ° (ನಿಂಗಳ ಬಾವಯ್ಯರು ಅಲ್ಲ, ಆತೋ?) ಈಗಳೂ ಬಿಕ್ಕಿ ತೋಕಿಂಡು ಉಂಬದಡ!
ಅಜ್ಜಕಾನಭಾವ° ಈಗೀಗ ಜೆಂಬ್ರಂಗಳಲ್ಲಿ ಅವನೊಟ್ಟಿಂಗೆ ಉಂಬಲೆ ಕೂಪಲಿಲ್ಲೆ, ಉಂಡಿಕ್ಕಿ ಮೀವದಾರು – ಹೇಳಿಗೊಂಡು! 😉
ajjakana bhavange shedigumme bhavanda doora hogi umbale ondu nevana bekittada hange heengella lotte heludada
ಅಪ್ಪು ತುಂಬಾ ಸತ್ಯ. ಎನಗೂ ಇಲ್ಲಿ ಹೆರದಿಕ್ಕೆ ತಿಂಬಗ ಮನೆ ನೆಂಪಾವುತ್ತು.
ಖಾರ ಆದರೆ ಕೂಗುಲೂ ಬತ್ತೋ? ;-(
ಚಲನಶೀಲವಾಗಿಪ್ಪ ಪ್ರಪ೦ಚಲ್ಲಿ ಪರಿವರ್ತನೆ ಜಗದ ನಿಯಮ ಹೇಳಿ ಗ್ರೇಶಿದರೆ,ಈ ವಿಷಯ೦ಗಳ ನೋಡಿ ಮರೆತು ಬಿಡುದೋ…,ಅಲ್ಲ ನಮ್ಮ ಮೂಲವ ತಿರುಗಿ ನೋಡಿ ಚಿ೦ತಿಸುವುದೋ..?
ಒಪ್ಪಣ್ಣನ ಬೈಲಿಲಿಯೇ ಮಾತಾಡೆಕ್ಕಷ್ಟೆ.
ಒಪ್ಪಣ್ಣಾ ನಿನ್ನ ಲೇಖನದ ತಲೆ ಬರಹ, ಹಾಸ್ಯ ಶೈಲಿ ಯಾವತ್ರಾಣ ಹಾಂಗೆ ಬಾರಿ ಲಾಯಕ್ ಆಯಿದು, ಗೊಂತಾತಿಲ್ಲಿಯೊ ?
ಈ ಬಫೆ ಹೇಳುವಗ ದನದ ಹಟ್ಟಿಯ ಬೈಪಣೆ ಎಂತಕೋ ನೆಂಪಾವುತ್ತು. ನಿಂದೊಂಡು ಉಣುತ್ತವು ಮನುಷ್ಯರಲ್ಲ , ಪ್ರಾಣಿಗೊ ಹೇಳಿ ಎಲ್ಲೋ ಕೇಳಿದ ನೆಂಪು. ಮನ್ನೆ ದೊಡ್ಡವರ ಒಂದು ಜೆಂಬಾರಕ್ಕೆ ಹೋಗಿದ್ದಿದ್ದೆ. ಬಫೆಲಿ ಎಂತೆಂತಾ ತಿಂಬಲೆ ಇತ್ತು ಗೊಂತಿದ್ದೊ. ಉದ್ದಿನ ಕೊಟ್ಟಿಗೆ, ಸೇಮಗೆ ರಸಾಯನ, ಮಸಾಲೆ ದೋಸೆ, ಬೇಲು ಪುರಿ, ಮಸಾಲೆ ಪುರಿ, ಮುಂಡಾಸು ರೊಟ್ಟಿ, ಚಪಾತಿ, ಉತ್ತರ ಭಾರತದ ಕೂರ್ಮ (ಹತ್ತು ಅವತಾರಂಗಳಲ್ಲಿ ಎರಡ್ನೆದು ಅಲ್ಲ) ಕಡಾಯಿ, ಗೋಬಿ ಮಂಚೂರಿ, ರಸಗುಲ್ಲ, ಹೋಳಿಗೆ, ಜಿಲೇಬಿ ಇನ್ನೂ ಹೆಸರು ಗೊಂತಿಲ್ಲದ್ದ ಸುಮಾರು ತಿಂಬಲೆಡಿತ್ತ್ತ /ತಿಂಬಲೆಡಿಯದ್ದ ಹಾಂಗ್ರುತ್ತ ತಿನುಸುಗೊ. ನಮ್ಮ ಹವ್ಯಕ ಕೊದಿಲು, ಮೇಲಾರ, ಸಾರು ಪಲ್ಯ ಎಲ್ಲವುದೆ ಇದ್ದು. ಕಡೆಂಗೆ ಐಸು ಕ್ರೀಮು ಬೇರೆ. ಇಷ್ಟೆಲ್ಲಾ ಬೇಕೋ ಒಪ್ಪಣ್ಣ ? ನವಗೆ ಒಬ್ಬಂಗೆ ಎಷ್ಟು ತಿಂಬಲೆ ಎಡಿಗು ? ಪೇಕು ಮಾಡಿ ಕೊಟ್ಟಿದ್ದರೆ ಒಂದು ವಾರ ತಿಂಬಲೆ ಆವುತ್ತಿತು !
ಮತ್ತೆ ನೀನು ಹೇಳಿದ ಮೇಜಿನ ಮೇಲಿನ ಕ್ರಮದ ಬಗ್ಗೆ ಹೇಳುತ್ತರೆ ಸುಮಾರಿದ್ದು. ಸರಿಯಾಗಿ ಕೈತೊಳೆತ್ತದು ಮರ್ಯಾದಿಗೆ ಕಡಮ್ಮೆ, ಮೇಜಿ ಮೇಗೆ ಮಡಗಿದ ಪಾತ್ರಲ್ಲಿ ಬೆಶಿನೀರಿಂಗೆ ನಿಂಬೆಹಣ್ಣು ಹಿಂಡಿ ಅದಕ್ಕೆ ಕೈ ಅದ್ದಿ ತೊಳದು ಕಾಗದಲ್ಲಿ ಒರಸೆಕು. ಎಂಜಲು ಕೈಲಿ ನೀರಿನ ಗ್ಲಾಸು ತೆಗದು ಕುಡುದರೂ ತೊಂದರೆ ಇಲ್ಲೆ. ಎರಡು ಕೈಲಿ ತಿಂದರೂ ತೊಂದರೆ ಇಲ್ಲೆ, ಚಮಚ ಇಸುಮುಳ್ಳು ಸರಿಯಾಗಿ ಹಿಡಿಯಲೆ ಗೊಂತಿರೆಕು. ಹಿಂಗೆಲ್ಲ ಕತೆ ಒಪ್ಪಣ್ಣ.
ನಮ್ಮ ಹಂತಿಲಿ ಕೂದು ಉಣುತ್ತ ಕೊಶಿ ಬೇರೆ ಎಲ್ಲಿಯೂ ಸಿಕ್ಕ, ಎಂತ ಹೇಳ್ತೆ ?
ಬೊಳುಂಬು ಮಾವ ಹೇಳುವಾಗ ನೆಂಪಾತು ಒಂದರಿ ಒಬ್ಬ ಬೆಶಿನೀರಿಂಗೆ ನಿಂಬೆಹಣ್ಣು ಹಿಂಡಿ ಸಕ್ಕರೆ ಹಾಕಿ ಕುಡುದ್ದನಡ ಶೇಡಿಗುಮ್ಮೆ ಬಾವ ಹೇಳಿ ನೆಗೆ ಮಾಡುಗು.. ಅದೆಲ್ಲ ನವಗರಡಿಯ..
appu……suruvinge dodda hotelinge hodavara nege madude haange allada……..
ಹೀಂಗೆ ತೊಳೆಯದ್ದೆ ಉಪಯೋಗಿಸುತ್ತ ಡ್ರೆಸ್ಸುಗೊ ಬಾಡಿಗೆಗೆ ಸಿಕ್ಕುತ್ತು ಒಪ್ಪಣ್ಣ… ಕೊಡೆಯಾಲಲ್ಲಿ ಬಂಟ್ರುಗಳ, ಪೂಜಾರಿಗಳ ಮದುವೆ, ರಿಸೆಪ್ಷನ್‌ಗೆ ಹೋದರೆ ಅವರ ಗತ್ತು ನೋಡೆಕ್ಕು. ಹೀಂಗಿಪ್ಪ ಸೂಟ್, ಬೂಟ್ ಹಾಕ್ಯೊಂಡು ರೈಸುದು ನೋಡೆಕ್ಕು. ಬೇಸಗೆ ಕಾಲಲ್ಲಿಯೂ ಅವು ಇದರ ಹಾಕ್ಯೊಂಡು ನಿಲ್ಲುತ್ತ ಸ್ಟೈಲ್ ಭಾರೀ ಲಾಯ್ಕ ಕಾಣ್ತು. ನವಗೆ ಬೆಗರಿ ಸಾಕಾಗಿ ಹೋಗಿರ್ತು. ಅವು ಡ್ರೆಸ್ಸಿನ ವಾಸನೆ ಗೊಂತಪ್ಪಲಾಗದ್ದ ಹಾಂಗೆ ಫಾರೀನ್ ಸೆಂಟು ಹಾಕ್ಯೊಂಗು. ನವಗೆ ಒಟ್ಟಾರೆ ಸಾಕಾಗಿ ಹೋವುತ್ತು. ಮತ್ತೆ ಅವರ ಮಾಂಸದ ಪೊಡಸು ವಾಸನೆ ಹೇಂಗೂ ಇರ್ತನ್ನೆ? ಏಕ್ ದಿನ್ ಕಾ ಸುಲ್ತಾನ್ ಆಗಿರ್ತು ಮದಿಮ್ಮಾಯ ಆ ದಿನ. ಅದರ ಮನೆ ನೋಡಿದರೆ…