Oppanna.com

ನಮ್ಮ ಕರ್ತವ್ಯ

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   22/12/2012    1 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಆನು ಸಣ್ಣಾದಿಪ್ಪಗ ಅಲ್ಲಿ ಇಲ್ಲಿ ಹೋದರೂ ಯಾವದನ್ನಾದರೂ ಸೂಕ್ಷ್ಮವಾಗಿ ಗಮನುಸುವ ಕ್ರಮ ಇತ್ತಿಲ್ಲೆ. ದೊಡ್ಡಾದ ಮೇಲೂ, ಅದರಲ್ಲಿಯೂ ಅಬ್ಬೆ ಅಪ್ಪ ಎಲ್ಲ ತೀರಿ ಹೋದ ಮೇಲೆ ಮನೆ ಹತ್ತರಾಣ ಜವಾಬ್ದಾರಿಯೂ ಒಟ್ಟಿಂಗೆ ಶಾಲೆಯ ಜವಾಬ್ದಾರಿಯೂ ತಲೆ ಮೇಲೆ ಬಿದ್ದಮೇಲೆ ಎಲ್ಲವೂ ಯಾಂತ್ರಿಕವಾತು. ಮಕ್ಕೊ ರಜದೊಡ್ಡದಾದಮೇಲೆ ಮಕ್ಕಳ ಸಹಾಯ ಎಲ್ಲಿ ವರೆಗೆ ಹೇಳಿದರೆ ಮನೆ ಕಡೆಂಗೆ ಹೆಚ್ಚಿನ ಗಮನ ಬೇಕಾಗಿ ಬಯಿಂದಿಲ್ಲೆ. ಮತ್ತೆ ಅವು ಕಲ್ತಾಗಿ ಕೆಲಸಕ್ಕೆ ಹೋದ ಮೇಲೆ ಎನಗೆ ಎನ್ನ ಉದ್ಯೋಗಲ್ಲಿಯೂ ವಿರಾಮ ಸಿಕ್ಕಿತ್ತು. ಇತ್ತು ಹೇಳುವಷ್ಟು ಆಸ್ತಿ ಹೆಚ್ಚು ಇಲ್ಲದ್ದರೂ ಇದ್ದ ಆಸ್ತಿಯ ಕೊಟ್ಟಿಕ್ಕಿಮಂಗಳೂರಿಂಗೆ ಬಂದಮೇಲೆ ಮನಸ್ಸಿಂಗೂ ದೇಹಕ್ಕೂ ನೆಮ್ಮದಿಯೇ ಸಿಕ್ಕಿತ್ತು.

ಗುರುಗೊ ಯಾವಾಗಳೂ ಹೇಳುಗು ಆ ನೇ ಎರಡೂ ಇದ್ದರೆ ಸಾಕು ಜೀವನ ಕಷ್ಟ ಆಗ ಹೇಳುಗು. ಹೇಳಿದರೆ ಆರೋಗ್ಯ, ನೆ ಹೇಳಿದರೆ ನೆಮ್ಮದಿ ಎರಡಿದ್ದರೆ ಮತ್ತೇನೂ ಬೇಕಾಗ ಹೇಳಿ ಎನಗೂ ತೋರುತ್ತು. ದೇವರು ಆರೋಗ್ಯ ಕೊಟ್ಟದರಿಂದ ಮನಸ್ಸಿಂಗೂ ನೆಮ್ಮದಿ. ಈ ನೆಮ್ಮದಿ ನಾವು ತಂದುಗೊಳ್ಳೆಕ್ಕು. ಹೆಚ್ಚಿನ ಬೇಕು ಬಯಕೆಗೊ ಮನಸ್ಸಿನ ಹಿಂಡಿಗೊಂಡಿದ್ದರೆ ಅವೆಲ್ಲ ಸಿಕ್ಕದ್ದಪ್ಪಗ ಮನಸ್ಸಿನ ನೆಮ್ಮದಿ ಓಡಿಹೋವುತ್ತು. ಅದರಲ್ಲೂ ಪ್ರಾಯ ಆದಮೇಲೆ ಹೆಚ್ಚಿನ ನೆಮ್ಮದಿ ಸಿಕ್ಕೆಕ್ಕಾರೆ ಮಕ್ಕೊ ನಮ್ಮ ಸರಿಯಾಗಿ ನೋಡಿಗೊಳ್ಳೆಕ್ಕು. ಮಕ್ಕೊ ನಮ್ಮ ಬೇಕು ಬಯಕೆಗಳ ಅರ್ತುಗೊಂಡು ಮಾಡಿಗೊಂಡು ಪೂರೈಸಿಗೊಂಡಿ ಇದ್ದರೆ ತುಂಬಾ ನೆಮ್ಮದಿ. ಜೀವನ ಯಾತ್ರೆಯ ಕೊನೆ ಘಟ್ಟಕ್ಕೆತ್ತುವಗ ಹೀಂಗಿಪ್ಪ ನೆಮ್ಮದಿ ಸಿಕ್ಕಿರೆ ಜೀವನ ಸಾರ್ಥಕ. ಎಲ್ಲ ಅವವು ಪಡಕ್ಕೋಂಡು ಬಪ್ಪದಡೊ. ಯೋಗ ಯೋಗ್ಯತೆ ಎಲ್ಲ ಬೇಕಡೊ. ಸುತನ ಪಡವದು ಪಿತನ ಪುಣ್ಯ ಹೇಳಿ ಹಿಂದಾಣೋವು ಹೇಳುಗು. ಅಪುತ್ರಸ್ಯ ಗತಿರ್ನಾಸ್ತಿ ಹೇಳುವದು ಗಾದೆಯ ಮಾತು. ಆದರೆ ಪುತ್ರ ರತ್ನಂಗಳ ಪಡವಲೂ ನಮ್ಮ ಸಂಚಿತ ಪುಣ್ಯವೇ ಕಾರಣ. ಹಣ ಸಂಚಯ ಮಾಡಿದರೆ ಖರ್ಚುಮಾಡಿ ಅಪ್ಪಗ ಕೈಖಾಲಿ ಅಕ್ಕು. ಆದರೆ ಒಳ್ಳೆ ಕೆಲಸ ಮಾಡುವುದರಿಂದ ಸಂಚಯಿತ ಪುಣ್ಯ ನಮ್ಮ ಅಂತ್ಯ ಕಾಲಕ್ಕಾದರೂ ನೆಮ್ಮದಿಂದ ಇಪ್ಪಲೆ ಸಹಾಯ ಆವುತ್ತಡೊ.
ಒಬ್ಬ ಜೀವನಲ್ಲಿ ಪೈಸೆಯೇ ಹೆಚ್ಚು ಬೆಲೆ ಬಾಳುವದು ಹೇಳಿ ಹೆಚ್ಚು ದೊಡ್ಡ ಶ್ರೀಮಂತ ಅಪ್ಪ ಕನಸು ಕಂಡೊಂಡು ಧನ ಸಂಗ್ರಹವನ್ನೆ ಗುರಿ ಮಾಡ್ಯೊಂಡು ಅದೇ ಯೋಚನೆಲ್ಲಿ ಇತ್ತಿದ್ದಡೊ. ಮನೆಲ್ಲಿ ಪ್ರಾಯ ಆಗಿ ಹಾಸಿಗೆ ಹಿಡುದ ಅಬ್ಬೆ ಅಪ್ಪನ ದಿನಕ್ಕೊಂದರಿ ನೋಡಿ ಅವರ ಕ್ಷೇಮ ವಿಚಾರುಸುಲೂ ಪುರುಸೊತ್ತಿಲ್ಲದ್ದೆ ಮನೆಗೆ ತಡವಾಗಿ ಬಚ್ಯೊಂಡು ಬಂದರೆ ಸೀದಾ ಹೋಗಿ ಮನುಗಿ ಒರಗ್ಯೊಂಡು ಇತ್ತಿದ್ದಡೊ. ಅವನ ವ್ಯವಹಾರಲ್ಲಿ ಅವನ ಕಾಂಬಲೆ ಮನೆಗೆ ಬಂದರೆ ಏಳ್ಲೆಡಿಯದ್ದೆ ಮನುಕ್ಕೊಂಡಿದ್ದ ಅಬ್ಬೆಯ,ಅಪ್ಪನ ನೋಡಿದರೆ ತನಗೆ ಅಪಮಾನ ಅಲ್ಲದೋ ಹೇಳಿ ಒಂದು ಕೋಣೆಲ್ಲಿ ಅವಕ್ಕೆ ಮನುಗ್ಯೊಂಬಲೆ ವ್ಯವಸ್ಥೆ ಮಾಡಿತ್ತಿದ್ದಡೊ. ಮಲ ಮೂತ್ರ ವಿಸರ್ಜನೆಗೂ ಎದ್ದು ಹೋಪಲೆಡಿಯದ್ದೆ ಎಲ್ಲ ಹಾಸಿಗೆಲ್ಲೇ ಆಯಿಕ್ಕೊಂಡಿದ್ದಲ್ಲಿಗೆ ಒಳ ಹೋಪಲಾಗದ್ದೆ ಸೊಸೆರ್ಯೂ ಹೆರಂದಲೇ ಎರಡು ಬಟ್ಳಿಲ್ಲಿ ಅಶನ ಮೇಲಾರ ಹಾಕಿ ಒಳ ಮಾಡಿಗಿದರೆ ಹಶುವಪ್ಪಗ ಅವು ಹೇಂಗೋ ತಿಂದೊಂಡಿತ್ತಿದ್ದವಡ. ಪಾತ್ರೆಗಳ ತೊಳವದಾರು?ಅದಕ್ಕೆ ಒಂದು ಮರದ ದೊಡ್ಡ ಪ್ಲೇಟ್ ಮಾಡಿ ಅದಕ್ಕೇ ಎಲ್ಲ ಸೊರುಗಿಕ್ಕಿ ಹೋಯ್ಕೊಂಡಿತ್ತಡೊ ಸೊಸೆ. ಯಾವದರನ್ನು ನೋಡುಲೆ ಮಗಂಗೆ ಪುರುಸೊತ್ತಿಲ್ಲೆ. ಮತ್ತೆ ಮತ್ತೆ ಅದನ್ನೂ ನಿಂಗಳೇ ಮಡುಗಿಕ್ಕಿ ಹೋಗಿ ಎನಗೆ ವಾಸನೆ ಸಹಿಸುಲೆಡಿತ್ತಿಲ್ಲೆ ಹೇಳುಗಡೊ.

ಹೀಂಗೇ ಕಾಲ ಆರನ್ನೂಕಾಯುತ್ತಿಲ್ಲೆ ಅಲ್ಲದೋ? ಮಗ ದೊಡ್ಡ ಆದನಡೊ. ಒಂದು ದಿನ ಒಂದು ಮರದ ಹಲಗೆಯ ತಂದು ಉಳಿ ಸುತ್ತಿಗೆ ತೆಕ್ಕೊಂಡು ಮರದ ಮರಿಗೆ ಮಾಡುಲೆ ಹೆರಟಡೊ..ಹೀಂಗೆ ಸುತ್ತಿಗೆಲ್ಲಿ ತಟ್ಟುವದು ಅಬ್ಬಗೆ ಕೇಳಿತ್ತು. ಬಂದುನೋಡಿದೋಳು ಮಗನತ್ರೆ ಕೇಳಿತ್ತು. ಎಂತ ಮಾಡುತ್ತಾ ಇದ್ದೆ ಮಗ ಹೇಳಿ? ಅದಕ್ಕೆ ಕಾಣುತ್ತಿಲ್ಲೆಯೋ? ಆನುಒಂದು ಮರಿಗೆ ಮಾಡುತ್ತಾ ಇದ್ದೆ. ಎಂತಗೆ ಮಗಾ ಮರಿಗೆ ಹೇಳಿ ಕೇಳಿದ್ದಕ್ಕೆ ಅಷ್ಟೂ ಗೊಂತಾವುತ್ತಿಲ್ಲೆಯೋ ಅಮ್ಮ? ನಾಳಂಗೆ ನಿಂಗಳೂ ನಡವಲೆಡಿಯದ್ದೆ ಕೂದಲ್ಲೇ ಆದರೆ ಪಾಯಿಖಾನಗೆ ಹೋಪಲೆಡಿಯನ್ನೆ.ಅಂಬಗ ನಿಂಗೊಗೂ ಹೀಂಗೆ ಎದ್ದು ಓಡಾಡುಲೆಡಿಯದ್ದಿಪ್ಪಗ ನಿಂಗಳೂ ಅಜ್ಜಿ, ಅಜ್ಜ ಅಪ್ಪಗ ನಿಂಗೊ ಆಹಾರ ಕೊಡುವ ಹಾಂಗಾದರೂ ಕೋಣೆಯೊಳದಿಕ್ಕೆ ಮಡಗೆಕ್ಕಾರೆ ಮರಿಗೆ ಬೇಕನ್ನೆ. ಹಾಂಗೆ ಒಂದು ಮರಿಗೆ ಮಾಡಿ ಈಗಳೇ ಮಡಗಿದರೆ ಮತ್ತೆ ಕಷ್ಟ ಇಲ್ಲೆನ್ನೆ.ಃಏಳಿ ಉತ್ತರ ಕೊಟ್ಟಡೊ. ಅಮ್ಮಂಗೆ ಮಗನ ಮಾತು ಕೇಳಿ ಹೇಂಗಾಗೆಡ?ಮಕ್ಕಳ ಮುಂದೆಯೇ ನಮ್ಮ ಸಣ್ಣತನವ ತೋರುಸಿದ ಹಾಂಗೆ ಆತಿಲ್ಲೆಯೋ?ಅಂಬಗ ತನ್ನ ತಪ್ಪಿನ ಅರಿವಾತು ಆ ಮಾಣಿಯ ಅಬ್ಬಗೆ. ಮುಂದೆ ನಾವುದೆ ಮುದುಕ್ಕರಪ್ಪಗ ಮಗ ಹೀಂಗೆ ಮಾಡಿದರೆ ಅಂದು ನಾವುದೆ ಕಷ್ಟ ಅನುಭವಿಸೆಕ್ಕಕ್ಕು. ಈ ಮಗ ಮತ್ತೆ ಇದೇ ನೆಂಪಿಲ್ಲಿಹೀಂಗೆ ಮಾಡಿದರೆ! ಹೇಳಿ ಅಂದಿಂದಲೇ ಅತ್ತೆ ಮಾವನ ಕೋಣೆಲ್ಲಿ ಕೂಡಹಾಕುವುದು, ಅವರ ಚಾಕರಿ ಮಾಡುಲೆ ಅಸಹ್ಯಪಡುವದು ತಪ್ಪು ಹೇಳಿ ಜ್ಞಾನೋದವಾಗಿ ಮರದಿನಂದಲೇ ಕೋಣೆಂದ ಬಿಡುಗಡೆ ಆತಡೊ, ಮತ್ತೆ ಹೊತ್ತು ಹೊತ್ತಿಂಗೆ ಅವರ ಆಹಾರ ಅನುಪಾನ ಸರಿಯಾಗಿ ನೋಡಿಗೊಂಡಿದ್ದ ಕಾರಣ ಅವರ ಆರೋಗ್ಯ ಸುಧಾರಣೆ ಆಗಿ ಜೀವನ ಪೂರ್ತಿ ಸುಖ ಸಂತೋಷಂದ ಇತ್ತಿದ್ದವಡೊ.

“ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಣವಕ್ಕು” ಹೇಳಿದ್ದಲ್ಲದೋ ಸರ್ವಜ್ಞ ಕವಿ. ಕಂಡು ಕಲಿವಲೆ ಆರಿಂಗೂ ಹೇಳಿಕೊಡೆಡಡೊ. ಅದರಲ್ಲೂ ಸಣ್ಣಾಗಿಪ್ಪಗ ನೋಡಿ ಕಲಿವದೇ ಹೆಚ್ಚು. ಮತ್ತೆ ಕಲಿಕೆಯೇ ಹಾಂಗೇ ಅಲ್ಲದೊ. ಮದಲು ಕಣ್ಣಿಂದ ನೋಡಿ ಅನುಸರಣೆಯೇ ಹೆಚ್ಚು. ಹಾಮ್ಗೆಯೇ ಅಲ್ಲದೋ/ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಹೇಳುವ ಗಾದೆ ಹುಟ್ಟಿದ್ದು. ಮನೆಲ್ಲಿ ಹೆರಿಯೋರು ಹೇಂಗೆ ಎಂತೆಲ್ಲ ಮಾಡುತ್ತವು ಅದರೆಲ್ಲ ಕಿರಿಯೋರು ನೋಡ್ಯೊಡು ಅನುಸರುಸುತ್ತವು. ನಮ್ಮಲ್ಲಿ ಏನಾದರೂ ಕುಂದುಕೊರತೆ ಇದ್ದರೆ ಜನಂಗೊ ಹೇಳುವದು ಮನೆಲ್ಲಿಪ್ಪ ಹೆರಿಯೋರ. ಕೂಸುಗಳೂ ತಪ್ಪಿ ನಡೆದರೆ ಹೇಳುವದು ಅಬ್ಬೆಕ್ಕಳ! ಗಿಡವಾಗಿಪ್ಪಗ ಬಗ್ಗದ್ದು ಮರ ಆದ ಮೇಲೆ ಬಗ್ಗುಗೋ! ಸಣ್ಣಾಗಿಪ್ಪಗಳೇ ಮಕ್ಕಳ ಲಾಲನೆ ಪಾಲನೆ ಅಬ್ಬೆಕ್ಕಳದ್ದೇ ಆಗಿಪ್ಪದಕ್ಕೆ ಜನಂಗೊ ನೇರವಾಗಿ ಕೇಳುವದೇ” ನಿನ್ನ ಅಬ್ಬೆ ಇದರನ್ನೋ ಹೇಳಿಕೊಟ್ಟದು ?”ಹೇಳಿ. ಮನುಷ್ಯನ ವ್ಯಕ್ತಿತ್ವವನ್ನೇ ಸಮಾಜ ನೋಡ್ಯೊಂಡು ಇರುತ್ತು. ಒಳ್ಳೆ ಗುಣ ನಡತೆ ಇದ್ದರೆ ಅವನ ಅಥವಾ ಕೂಸಿನ ಹೆರಿಯೋರಿಂಗೆ ಮುಖ್ಯವಾಗಿ ಅಬ್ಬಗೆ ಅದರ ಲಾಭ ನಷ್ಟಂಗೊ. ಅಪ್ಪ ಹೆಚ್ಚಾಗಿ ಹೆರ ವ್ಯವಹಾರಲ್ಲೆ ಇಪ್ಪ ಕಾರಣ, ಮನೆಲ್ಲೇ ಇಪ್ಪ ಅಬ್ಬಯೇ ಎಲ್ಲಕ್ಕೂ ಹೊಣೆ. ಗಂಡ _ ಹೆಂಡತಿ ಹೊಂದಾಣಿಕೆಲ್ಲಿ ಇದ್ದರೆ ಎಲ್ಲವೂ ಸರಿ ಹೋವುತ್ತು. ಒಬ್ಬ ಏರಿಂಗೆಳವಗ ಮತ್ತೊಬ್ಬ ನೀರಿಂಗೆಳೆದರೆ ಹೂಟೆ ಸರಿಯಕ್ಕೊ?

ತಾಯ ತೊಡೆಯೆ ಮೊದಲ ಶಾಲೆ ಹೇಳುವದು ಬಲ್ಲೋರ ಮಾತು. ಹೊಣೆಗಾರಿಕೆ_ ಹೊಣೆಗೇಡಿತನ ಇಡೀ ಸಮಾಜವನ್ನೆ ಹಾಳು ಮಾಡುಗು. ಅವರವರ ಮಕ್ಕಳ ಒಳ್ಳೆ ಆದರ್ಶ ಸಂತಾನವಾಗಿ ಮಾಡ್ಯೊಂಡರೆ ಇಡೀ ಸಮಾಜವೇ ಸರ್ಯಾಯೆಕ್ಕು. ಅಂಬಗ ಈಗಾಣ ಭ್ರಷ್ಟಾಚಾರ ನಡೆಯ. ಮನೆಯೊಳದಿಕ್ಕೇ ಒಬ್ಬಂದ ಹೆಚ್ಚು ತಾನು ತಿಂದುಗೊಳ್ಲೆಕ್ಕು ಹೇಳಿ ತೋರುವದೇ ಮುಂದುವರುದು, ಅದಕ್ಕೆ ಹೆರಿಯೋರ ಬೂದಿ ಗೊಬ್ಬರ ಸೇರಿದರೆ ಮುಂದೆ ದೊಡ್ಡಾದ ಮೇಲೂ ಹೊಟ್ಟೆ ಬಾಕತನ ಮುಂದುವರುದು, ಸಮಾಜಲ್ಲಿ ಕೀಳರಿಮೆ ಹೆಚ್ಚಾಗಿ, ಮನಸ್ಸಿಲ್ಲೇ ಮಂಡಿಗೆ ತಿಂದೊಂಡು, ತನ್ನ ಬೇಳೆ ಬೇಶಿಗೊಂಬದನ್ನೇ ಜೀವನದ ಗುರಿಯಾಗಿ ಮಡಿಕ್ಕೊಂಡರೆ ಪರಂಪರೆ ಮುಂದರುದು ಈಗ ದೇಶ ಆಳುವೋರ ಹಾಂಗೆ ದೇಶ ದ್ರೋಹಿಗೊ ಆವುತ್ತವು. ಎಲ್ಲೋರು ಎಲ್ಲೋರಿಂಗಿಪ್ಪ ಈ ಪ್ರಪಂಚಲ್ಲಿ ಪ್ರಕೃತಿದತ್ತ ಸೌಲಭ್ಯ ಅನುಭವಿಸುವ ಹಕ್ಕಿದ್ದೋರು, ಜೀವ ಹೋದ ಮೇಲೆ ಎಲ್ಲೋರುದೇ ಹೆಣಂಗಳೇ ಆವುತ್ತವು. ಮತ್ತೆ ದಿವಂಗತ ಹೇಳಿಯೋ ಏನೋ ಹೇಳುತ್ತವು. ಇದ್ದಷ್ಟು ದಿನ ಹಂಚಿಗೊಂಡು ನಮ್ಮ ಹಾಂಗೆ ಅನುಭವಿಸೆಕ್ಕಾದೋರು. ಮತ್ತೆ ಆಯುಸ್ಸು ಮುಗುದ ಮೇಲೆ ನಮ್ಮ ಜೀವನ ಮುಗುದು,ಮುಂದಾಣೋರು ನಮ್ಮ ಆದರ್ಶ ಪಾಲಿಸಿಗೊಂಡು ಬಂದರೆ ಮುಂದಿನ ಸಮಾಜವೂ ಒಳ್ಳೆದಕ್ಕು, ಲೋಕಲ್ಲಿ ಜಗಳಂಗೊ ಇಲ್ಲದ್ದೆ ಸುಖಶಾಂತಿ ಒಳಿಗು ಹೇಳಿ ನಮ್ಮ ನೋಡಿ ಕಲಿವೋರುಇದ್ದವು ಹೇಳುವ ನೆಂಪಿಲ್ಲಿ ಲೋಕ ಶಾಂತಿಯನ್ನೇ ಗುರಿ ಮಾಡಿಗೊಂಡರೆ, ಅದಕ್ಕಾಗಿ ನಮ್ಮ ಅಳಿಲ ಸೇವೆ ಮಾಡ್ಯೊಡರೆ ಲೋಕ ಒಳ್ಳೆದಕ್ಕುಹೇಳಿ ಕಾಣುತ್ತು.

ಇನ್ನೊಬ್ಬರ ತಪ್ಪನ್ನೇ ತೋರುಸುತ್ತಾ ಇದ್ದರೆ ನಾವು ತಿದ್ದಿಗೊಂಬದು ಯಾವಾಗ? ನಾವು ತಿದ್ದಿ ಸರಿ ಆಗ್ಯೊಂಡು ಇನ್ನೊಬ್ಬರ ತಿದ್ದುಲೆ ಹೋಯೆಕ್ಕಾದ್ದು ನಮ್ಮ ಕರ್ತವ್ಯ_ ಧರ್ಮ.

One thought on “ನಮ್ಮ ಕರ್ತವ್ಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×