- ಭರಣಿ ಒಡದ ಮುದಿಯಜ್ಜ - June 21, 2013
- ಅಂತರಿಕ್ಷ -05: ಎರಡನೇ ಸುತ್ತಿನ ವಿಶ್ವ ಪರ್ಯಟನೆ - January 2, 2013
- ಅಂತರಿಕ್ಷ -04: ವಿಶ್ವ ಪರ್ಯಟನೆ - December 26, 2012
ಸುಹಾಸನೊಟ್ಟಿಂಗೆ ಆಡಿಕ್ಕಿ ಬಂದು ಕಾಪಿ ತಿಂಡಿ ಆಗಿಕ್ಕಿ ಎಂಗಳ ಮಾತುಕತೆ ಮುಂದುವರೆದತ್ತು
– ಉಪಗ್ರಹಂಗಳ ಎಂತಕೆ ಹಾರ್ಸೊದು?
ಉಪಗ್ರಹಂಗ ನವಗೆ ಆಕಾಶಲ್ಲಿಪ್ಪ ಸ್ಪೆಷಲ್ ಕಣ್ಣುಗಳ ಹಾಂಗೆ… ನಿನಗೆ ಆನು ‘ಪಕ್ಕಿಸಾಲೆ’ ಹೆಸರಿನ ಒಂದು ಜಾತಿಯ ಹದ್ದಿನ ತೋರ್ಸಿದ್ದೆ ಅಲ್ಲದ ಮೊನ್ನೆ? ಆಕಾಶಲ್ಲಿ ಹೆಲಿಕೋಪ್ಟರ್ ನ ಹಾಂಗೆ ನಿಂದಲ್ಲೇ ನಿಂದು ಕೆಳ ನೆಲಕ್ಕೆ ಹರಿದು ಹೋಪ ಹಾವುಗಳ ನೋಡಿ, ಸುಯ್ಯನೆ ಬಾಣದ ಹಾಂಗೆ ಬಂದು ಕಚ್ಚಿಗೊಂಡು ಹೋವ್ತು. ಹಾಂಗೇ, ಉಪಗ್ರಹವೂ ಕೂಡಾ. ಭೂಮಿಂದ ಸುಮಾರು 80 ರಿಂದ 100 ಕಿಲೋ ಮೀಟರ್ ದೂರಲ್ಲಿ ಸುತ್ತುವ ಉಪಗ್ರಹಂಗ ಗೂಢಚಾರ ಕೆಲಸಕ್ಕೆ ಉಪಯೋಗ ಆವ್ತು. ಅದು ಭೂಮಿಗೆ ಸುತ್ತು ಬಪ್ಪಗ ನವಗೆ ಯಾವ ದೇಶದ ಬಗ್ಗೆ ಮಾಹಿತಿ ಬೇಕು – ಆ ದೇಶದ ಮೇಲಂದ ಹಾದು ಹೋಪಗ ಫೊಟೋ ತೆಗದು ಅದರ ಮೆಮೊರಿಲಿ ರೆಕೋರ್ಡ್ ಮಾಡಿಗೊಳ್ಳುವ ಹಾಂಗೆ ಪ್ರೋಗ್ರಾಮ್ ಮಾಡುಲಾವ್ತು. ಆ ಮೇಲೆ ಅದು ನಮ್ಮ ಉಪಗ್ರಹ ನಿಯಂತ್ರಣ ಕೇಂದ್ರದ ಮೇಲೆ ಹಾರಿ ಹೋಪಗ ನವಗೆ ಕಳುಸುಲೆ ಅದಕ್ಕೆ ಸೂಚನೆ ಕೊಡುತ್ತವು. ಹೀಂಗಿಪ್ಪ ಉಪಗ್ರಹಂಗೊಕ್ಕೆ spy satellite ಅಥವಾ reconnaissance satellite ಹೇಳಿ ಹೆಸರು. ಪಕ್ಕಿಸಾಲೆಯ ಹಾಂಗೆ ನಮ್ಮ ವೈರಿಗಳ ಸದೆ ಬಡಿವಲೆ ಈ ರೀತಿಯ ಉಪಗ್ರಹಂಗಳ ಉಪಯೋಗಿಸುತ್ತವು. ಇದು ಒಂದು ರೀತಿಯ ಉಪಯೋಗ.
ಆದರೆ ಈ ಉಪಗ್ರಹ ಭೂಮಿಗೆ ಹತ್ತರೆ ಇಪ್ಪ ಕಾರಣ ಅದರ ಚೂರು ಚೂರೇ ಹತ್ತರಂಗೆ ಭೂಮಿ ಕೆಳ ಎಳೆತ್ತಾ ಇರ್ತು. ಕ್ರಮೇಣ ಅದು ಭೂಮಿಯ ವಾತಾವರಣವ ಹೊಗುತ್ತು. ಆ ಹೊತ್ತಿಂಗೆ ಅದು ಗಾಳಿಯ ಕಣಂಗಳೊಟ್ಟೀಂಗೆ ತಿಕ್ಕಿ ಬೆಶಿ ಆವ್ತು. ಎಷ್ಟು ಬೆಶಿ ಹೇಳಿದರೆ ಭೂಮಿಗೆ ಮುಟ್ಟೆಕ್ಕಾದರೆ ಮದಲೇ ಹೊತ್ತಿ ಬೂದಿ ಆವ್ತು. ಈ ಉಪಗ್ರಹಂಗಳ ಆಯುಷ್ಯ 15 ರಿಂದ 30 ದಿನ ಅಷ್ಟೆ.
ಇನ್ನು ಸುಮಾರು ಮುನ್ನೂರು ಕಿಲೋಮೀಟರ್ ಎತ್ತರಲ್ಲಿ ಹಾರುವ ಉಪಗ್ರಹಂಗ ಭೂಮಿಯ ಅದರಲ್ಲೂ ನಮ್ಮ ದೇಶದ ಬೇರೆ ಬೇರೆ ಪ್ರದೇಶದ ಸರ್ವೆ ಮಾಡಿ ಎಲ್ಲಿ ನೆರೆ ಬಯಿಂದು, ಎಲ್ಲಿ ಎಷ್ಟು ಗೆದ್ದೆ ಕೃಷಿ ಮಾಡಿದ್ದವು, ಎಲ್ಲಿ ಎಷ್ಟು ಕಾಡು ನಾಶ ಅಥವಾ ವೃದ್ಧಿ ಆಯಿದು ಇತ್ಯಾದಿ ವಿವರಂಗಳ ನಿಯಂತ್ರಣ ಕೇಂದ್ರಕ್ಕೆ ಕಳಿಸಿ ಕೊಡ್ತವು. ಇವಕ್ಕೆ ‘ಭೂ ವೀಕ್ಷಣೆ ಉಪಗ್ರಹ’ ಹೇಳಿ ಹೆಸರು. ಇಂಗ್ಲಿಶಿಲಿ Earth Observation Satellite ಹೇಳಿ ಹೆಸರು.
ಇನ್ನೂ ಎತ್ತರಲ್ಲಿ ಸುಮಾರು 900 ಕಿಲೋ ಮೀಟರ್ ಎತ್ತರಲ್ಲಿ ಸುತ್ತುವ ಉಪಗ್ರಹಕ್ಕೆ ‘ದೂರ ಸಂವೇದಿ ಉಪಗ್ರಹ’ (Remote Sensing Satellite) ಹೇಳಿ ಹೆಸರು. ನಮ್ಮ ದೇಶಲ್ಲಿ ಉತ್ತರಂದ ದಕ್ಶಿಣಕ್ಕೆ ಚಲಿಸುತ್ತಾ, ದಿನಂದ ದಿನಕ್ಕೆ ಪಕ್ಕ ಪಕ್ಕಲ್ಲಿಪ್ಪ ಪ್ರದೇಶಂಗಳ ಫೊಟೋ ತೆಗೆತ್ತಾ ಒಂದು 15 ದಿನಲ್ಲಿ ಇಡೀ ದೇಶದ ಚಿತ್ರಣ ಸಿಕ್ಕುವ ಹಾಂಗೆ ಈ ಉಪಗ್ರಹಂಗಳ ಏರ್ಪಾಡು ಮಾಡ್ತವು. ಮೋಡ ಎಲ್ಲೆಲ್ಲಿ ಎಷ್ಟಿದ್ದು, ಕಾಡು ಹೇಂಗೆ ಬದಲಾವ್ತಾ ಇದ್ದು, ನಗರ ವಿಸ್ತರಣೆ, ಪ್ರವಾಹ, ನೆರೆ ನಿರ್ವಹಣೆ, ಭೂಮಿಯ ಒಳ ಎಲ್ಲಿ ಯಾವ ಅದಿರು ಸಿಕ್ಕುಗು – ಈ ಉದ್ದೇಶಕ್ಕೆ ಉಪಯೋಗ ಆವ್ತು ಈ ಉಪಗ್ರಹಂಗಳಿಂದ.
ಹೀಂಗೆ ಎತ್ತರಕ್ಕೆ ಹೋದಷ್ಟೂ ಸೂಕ್ಷ್ಮವಾಗಿ ಗುರ್ತಿಸುಲೆ ಬೇಕಾದ ಲೆನ್ಸ್ ಮತ್ತೆ ಕೆಮರಾ ಬಹಳ ಬೆಲೆ ಬಾಳುವ ವಸ್ತುಗೊ. ಕೆಲವರ ನಾವು ಬೇರೆ ದೇಶಂದ ಆಮದು ಮಾಡಿ ತರ್ಸೆಕ್ಕಾವ್ತು. ಅವು ಕೆಲವು ಸರ್ತಿ ನಿಷ್ಠುರ ಕಂಡಿಶನ್ ಹಾಕುತ್ತವು. ಆ ವಸ್ತುಗಳ ನಮ್ಮ ದೇಶಲ್ಲೇ ತಯಾರು ಮಾಡುವ ಪ್ರಯತ್ನಂಗಳೂ ಆವ್ತಾ ಇದ್ದು.
ಈ ಉಪಗ್ರಹಂಗ ಭೂಮಿಗೆ ಸುತ್ತು ಹಾಕುತ್ತಾ ಇಪ್ಪ ಕಾರಣ ನಮ್ಮ ಪ್ರದೇಶದ ಮೇಲಂದ ಹಾದು ಹೋಪಗ ನವಗೆ ಸಂಕೇತ ಕಳುಸುತ್ತವು. ಅಷ್ಟೆಲ್ಲಾ ಖರ್ಚಿ ಮಾಡಿದ ಉಪಗ್ರಹಂಗಳ ಹೆಚ್ಚು ಹೆಚ್ಚು ಉಪಯೋಗ ಮಾಡಿಗೊಳ್ಳೆಕ್ಕು ಹೇಳುವ ಕಾರಣ ನವಗೆ ಎಲ್ಲೆಲ್ಲಿ ಸಂಕೇತ ತೆಕ್ಕೊಂಬ ಕೇಂದ್ರ ಸ್ಥಾಪಿಸುಲೆ ಸಾಧ್ಯ ಆವ್ತು ಅಲ್ಲೆಲ್ಲ ಒಂದೊಂದು ಉಪಗ್ರಹ ನಿಯಂತ್ರಣ ಕೇಂದ್ರ ಸ್ಥಾಪನೆ ಮಾಡಿರ್ತವು. ಅಂಡಮಾನದ ನಿಕೋಬಾರ್-ಲಿಯೂ ಒಂದು ಕೇಂದ್ರ ಇದ್ದು ನಮ್ಮದು. ಉಪಗ್ರಹ ಒಂದು ಕೇಂದ್ರಂದ ದೂರ ಹೋಪಲಪ್ಪಗ ಇನ್ನೊಂದು ಕೇಂದ್ರಕ್ಕೆ ಕಾಂಬ ಹಾಂಗೆ ಈ ಕೇಂದ್ರಂಗಳ ಆಯ್ಕೆ ಮಾಡ್ತವು. ನಮ್ಮ ಮಿತ್ರ ದೇಶಂಗ ಕೂಡಾ ಕೆಲವು ಸರ್ತಿ ನವಗೆ ಅವರ ದೇಶಲ್ಲಿ ಕೇಂದ್ರ ಸ್ಥಾಪಿಸುಲೆ ಅನುಮತಿ ಕೊಡುತ್ತವು. ಅವರದ್ದೇ ಕೇಂದ್ರಂಗಳ ವಿಶೇಷ ಸಂದರ್ಭಲ್ಲಿ ಕೆಲವು ಸಮಯಕ್ಕೆ ಬಾಡಿಗೆಗೆ ತೆಕ್ಕೊಂಡು ಉಪಯೋಗ ಮಾಡೊದೂ ಇದ್ದು.
ಉಪಗ್ರಹ ಕಳ್ಸುವ ಸಂಕೇತಕ್ಕೆ ಟೆಲಿಮೆಟ್ರಿ ಹೇಳಿಯೂ, ನಾವು ಕಳ್ಸುವ ಆಜ್ಞೆಗೊಕ್ಕೆ ಟೆಲಿಕಮಾಂಡ್ ಹೇಳಿಯೂ ಹೆಸರು. ‘ಟೆಲಿ’ ಹೇಳಿದರೆ ದೂರ, ‘ಮೆಟ್ರಿ’ – ಮೀಟರ್ ಹೇಳಿದರೆ ಅಳತೆ ಮಾಡೊದು. ಈ ಟೆಲಿಮೆಟ್ರಿಲಿ ಎರಡು ರೀತಿದು ಇದ್ದು. ಕಡಮ್ಮೆ ಪ್ರಮಾಣಲ್ಲಿಪ್ಪ ನಿಧಾನಕ್ಕೆ ಬಪ್ಪ ಟೆಲಿಮೆಟ್ರಿ ಉಪಗ್ರಹದ ಆರೋಗ್ಯ, ಸ್ಥಿತಿ-ಗತಿಯ ತಿಳಿವಲೆ ಉಪಯೋಗ ಆವ್ತು. ಹೆಚ್ಚಿನ ಸ್ಪೀಡ್ ಮತ್ತು ಪ್ರಮಾಣಲ್ಲಿಪ್ಪ ಟೆಲಿಮಟ್ರಿ ಕೃಷಿ ವಿಸ್ತಾರ, ಕಾಡು, ನೆರೆ, ಹವಾಮಾನಕ್ಕೆ ಸಂಬಂಧ ಪಟ್ಟ ಮಾಹಿತಿಯ ಸಂಗ್ರಹ ಮಾಡುಲೆ ಉಪಯೋಗ ಆವ್ತು.
ಈ ಎಲ್ಲಾ ಉಪಗ್ರಹಂಗೊಕ್ಕೂ ಬೇರೆ ಬೇರೆ ಅವಧಿಯ ಆಯುಷ್ಯ ಇದ್ದು. ಎತ್ತರ ಹೆಚ್ಚಾದಷ್ಟೂ ಆಯುಷ್ಯ ಹೆಚ್ಚು. ಆದರೆ ಬೇರೆ ಕೆಲವು ಕಾರಣಂಗಳಂದ ಅದಕ್ಕೂ ಮದಲೇ ಅವು ಕೆಲಸ ಮಾಡೊದು ನಿಲ್ಲಿಸುತ್ತವು. ಆ ವಿವರಂಗಳ ಇನ್ನೊಂದರಿ ನೋಡುವ.
– ಉಪಗ್ರಹಂಗಳಂದ ಎಂತದರೂ ಉಪಯೋಗ ಇದ್ದಾ?
ಇದ್ದನ್ನೆ, ಸಂಪರ್ಕ ಉಪಗ್ರಹ ನವಗೆ ಟೀವಿ, ಫೋನ್, ಮೊಬೈಲ್, ಈಗ ಬತ್ತಾ ಇಪ್ಪ ಡಿ.ಟಿ.ಎಚ್. ಹೇಳಿದರೆ Direct To Home – ಇದಕ್ಕೆ ಸೆಟಲೈಟ್ ಟೀವಿ ಹೇಳಿಯೂ ಹೆಸರಿದ್ದು. ಇನ್ನೂ ಕೆಲವು ಇದ್ದು. ಅದಕ್ಕೆ ನಮ್ಮ ಇನ್ಸಾಟ್ ಸರಣಿಯ ಅನೇಕ ಉಪಗ್ರಹಂಗ ಉದಾಹರಣೆ. ಈ ಇನ್ಸಾಟ್ ಗಳ ಎಲ್ಲವನ್ನೂ ಹಾಸನಂದ ಹಳೆಬೀಡಿಂಗೆ ಹೋಪ ಸಾಲಗಾಮೆ ರೋಡಿಲಿ ಇಪ್ಪ ಕೇಂದ್ರಂದ ನಿಯಂತ್ರಣ ಮಾಡೊದು. ಅದೆಲ್ಲಾ ನಾಳೆ ಹೇಳ್ತೆ.
ಈಗ ನಾವು ಅಂದಾಜಿ ಮಾಡುಲಕ್ಕು – ಸುರುವಾಣ ಸರ್ತಿ ಚಂದ್ರನಲ್ಲಿಗೆ ಹೋದ ವ್ಯಕ್ತಿಗಳ ಧೈರ್ಯವ. ಒಂದು ವೇಳೆ ಎಲ್ಲಿಯೇ ಆದರೂ ಲೆಕ್ಕಾಚಾರ ಚೂರು ತಪ್ಪಿದರೂ ಅವು ಅಲ್ಲೇ ಉಪವಾಸ ಸಾಯೆಕ್ಕಷ್ಟೆ. ಗುರ್ತಾರ್ತ ಇಲ್ಲದ್ದಲ್ಲಿ ಸಿಕ್ಕಿ ಬಿದ್ದ ಹಾಂಗೆ. ಅದೇ ರೀತಿ ಹಾಂಗಿಪ್ಪದರ ಸಾಧಿಸಿದ ವಿಜ್ಞಾನಿಗಳ ತಂಡದ ಒಟ್ಟು ಸಹಕಾರೀ ಯೋಜನೆಯೂ ಅದ್ಭುತ! ಪರಸ್ಪರ ಎಷ್ಟು co-ordination ಇದ್ದಿರೆಕ್ಕು? ನೆನಸೊಗಳೇ ವಿನೀತ ಭಾವನೆ ಬತ್ತು ಮನಸ್ಸಿಲಿ.
ಅಪ್ಪಚ್ಚಿ,
ಧನ್ಯವಾದ.ನಿಜಕ್ಕೂ ತಿರುಗಿ ಬಪ್ಪಲೆ ಎಡಿಯದ್ದಲ್ಲಿಗೆ ಪಯಣ ಹೇಳಿ ಗ್ರೇಶಿಗೊ೦ಡೇ ಹೋಯೆಕ್ಕಟ್ಟೆ !ಅದ್ಭುತ ತ೦ತ್ರಜ್ಞಾನ.
ಅಪ್ಪಚ್ಚಿ,
ಎರಡು_ಮೂರನೆ ಕ೦ತು ಒಟ್ಟಿ೦ಗೆ ಓದಿದೆ.ಒಳ್ಳೆ ವಿವರಣೆ.
ಸುಮಾರು ಸಮಯ೦ದ ಒ೦ದು ಸ೦ಶಯ ಕೊರೆತ್ತಾ ಇತ್ತು.ನಿ೦ಗಳ ಹತ್ರೆ ಕೇಳಿರೆ ಉತ್ತರ ಸಿಕ್ಕುಗು.
ಅ೦ದು ಚ೦ದ್ರಲೋಕಕ್ಕೆ ಹೋದ ಉಪಗ್ರಹವ ವಾಪಾಸು ಅಲ್ಲಿ೦ದ ಭೂಮಿಗೆ ಹಾರ್ಸಿದ್ದು ಹೇ೦ಗೆ/ ಅಲ್ಲಿ ಹಾರ್ಸುಲೆ ರೋಕೆಟಿನ ವೆವಸ್ಥೆ ಹೇ೦ಗೆ ಮಾಡಿದವು?
ನಿಂಗಳ ಪ್ರಶ್ನೆಗೆ ಧನ್ಯವಾದಂಗ. ಉತ್ತರ ಹೀಂಗಿದ್ದು –
ಸುರುವಿಂಗೆ ರೋಕೆಟ್ಟಿಂದ ಬೇರ್ಪಡೊಗ ಭೂಮಿಯ ಗುರುತ್ವಾಕರ್ಷಣೆಯ ಮೀರಿ ಹೋಪಲೆ ಬೇಕಾದಷ್ಟು ಹೆಚ್ಚಿನ ವೇಗವ ಪಡಕ್ಕೊಂಡ ಉಪಗ್ರಹ (ಇದಕ್ಕೆ ಆಕಾಶ ನೌಕೆ spacecraft ಹೇಳ್ತವು. ಭೂಮಿಗೆ ಸುತ್ತು ಹಾಕುವವಕ್ಕೆ satellite ಹೇಳಿ ತಾಂತ್ರಿಕ ಹೆಸರು) ಚಂದ್ರನ ದಿಕ್ಕಿಲಿ ಚಲಿಸುವ ಹಾಂಗೆ arrange ಮಾಡುತ್ತವು ರೋಕೆಟ್ಟಿನ ಉಡಾವಣೆಯ. ಹೀಂಗೆ ಭೂಮಿಯ ಗುರುತ್ವಾಕರ್ಷಣೆಂದ ತಪ್ಪಿಸಿಗೊಂಡ ಆ ಆಕಾಶ ನೌಕೆಯ guide ಮಾಡುಲೆ ಸೌರ್ಯ ವ್ಯೂಹದ ಇತರ ಗ್ರಹ, ಉಪಗ್ರಹಂಗಳ ಗುರುತ್ವಾಕರ್ಷಣೆಯನ್ನೂ ಲೆಕ್ಕಕ್ಕೆ ತೆಕ್ಕೊಳ್ತವು. ಆನು ತೆಕ್ಕುಂಜ ಕುಮಾರ ಮಾವಂಗೆ ಕೊಟ್ಟ ಉದಾಹರಣೆಯ ಹಾಂಗೇ ಈ ನೌಕೆಲಿಯೂ thrusters ಉಪಯೋಗ ಮಾಡುತ್ತವು ದಾರಿಲಿ ಸಣ್ಣ ಸಣ್ಣ direction correction ಮಾಡೆಕ್ಕಪ್ಪಗ. ಕೊನೆಗೆ ಚಂದ್ರನ ಗುರುತ್ವಾಕರ್ಷಣೆಯ ಗೋಲದ ಒಳ ಹೂಕ ಮೇಲೆ ಸಡನ್ನಾಗಿ ಬೀಳದ್ದ ಹಾಂಗೆ thruster ಗಳ ಉಪಯೋಗಿಸಿ control ಮಾಡೊದು. ನಾವು ಕಾರಿಂಗೆ ಬ್ರೇಕ್ ಹಾಕಿ slow ಮಾಡಿದ ಹಾಂಗೆ.
ಈ ನೌಕೆ ಒಂದು ನಿರ್ದಿಷ್ಟ ವೇಗಲ್ಲಿ ಚಂದ್ರಂಗೆ ಸುತ್ತು ಬತ್ತಾ ಇಪ್ಪಗ, ಈ ನೌಕೆಯ ಒಳ ಇಪ್ಪ ಒಂದು ಸಣ್ಣ ಭಾಗ ಮಾತ್ರ ನೌಕೆಂದ ಬೇರ್ಪಟ್ಟು ನಿಧಾನಕ್ಕೆ ಚಂದ್ರನಲ್ಲಿ ಇಳುದು (land ಆಗಿ) ತನ್ನ ವೈಜ್ಞಾನಿಕ ಪ್ರಯೋಗಂಗಳ ಮಾಡುತ್ತಾ ಇರ್ತು. ಮೇಲಂದ ಮಾತೃ ನೌಕೆ ಚಂದ್ರಂಗೆ ಸುತ್ತು ಬಪ್ಪಾ ಇರ್ತು. ಕೆಲಸ ಮುಗುದ ಮೇಲೆ ಪುನ: thruster (mini rockets) ಗಳ ಮೂಲಕ ಈ ಕುಂಞಿ ನೌಕೆ ಮೇಲೆದ್ದು ನಿಧಾನಕ್ಕೆ ತನ್ನ ಮಾತೃ ನೌಕೆಯ ಒಳ ಸೇರಿಗೊಳ್ತು. ಅಲ್ಲಿಂದ ಪುನ: ಚಂದ್ರನ ಗುರುತ್ವಾಕರ್ಷಣೆಯ ಮೀರಿ ಭೂಮಿಯ ಕಡೆಗೆ ಮಾತ್ರ್ ನೌಕೆ ಪ್ರಯಾಣ ಬೆಳೆಸುತ್ತು. ಇಲ್ಲೆಲ್ಲಾ ಒಂದೋ thrusters, ಅಥವಾ ಗ್ರಹ-ಉಪಗ್ರಹಂಗಳ ಗುರುತ್ವಾಕರ್ಷಣೆಯ ಸದುಪಯೋಗ ಮಾಡಿಗೊಳ್ತವು.
ಮತ್ತೆ ಭೂಮಿಯ ಗುರುತ್ವಾಕರ್ಷಣೆಯ ವ್ಯಾಪ್ತಿಗೆ ಬಂದಪ್ಪಗ ಅದರ ಆಕರ್ಷಣೆಯ ಉಪಯೋಗ ಮಾಡಿಗೊಂಡು ಬಿದ್ದರೆ ಪೆಟ್ಟಾಗದ್ದ ಹಾಂಗಿಪ್ಪ ಜಾಗೆಲಿ (ಉದಾ: ಸಮುದ್ರಲ್ಲಿ) ಬೀಳುವ ಹಾಂಗೆ ಮಾಡಿ, ಅದರ ಸಮುದ್ರ ನೌಕೆಯ ಮೂಲಕ ನೆಲ ಭಾಗಕ್ಕೆ ತತ್ತವು. ಒಂದು ಚಂದ್ರ ಯಾನ ಹೇಳಿದರೆ ಅದು ಅತ್ಯಂತ ಕ್ಲಿಷ್ಟ ಎರ್ಪಾಡು. ಅದಲ್ಲೂ ಮಾನವ ಸಹಿತ ಹೇಳಿದರೆ ಎಶ್ಟು ಜಾಗ್ರತೆಯಾಗಿ program ಮಾಡಿದರೂ ಸಾಕಾವ್ತಿಲ್ಲೆ.
ಕೆಲವು ಉಪಯುಕ್ತ ಮಾಹಿತಿ ಮತ್ತು ಚಿತ್ರಂಗೊ ಈ URL – ಲಿ ಸಿಕ್ಕುತ್ತು –
http://www.ltas-vis.ulg.ac.be/cmsms/uploads/File/InterplanetaryMissionDesignHandbook.pdf
{ಈ ಎಲ್ಲಾ ಉಪಗ್ರಹಂಗೊಕ್ಕೂ ಬೇರೆ ಬೇರೆ ಅವಧಿಯ ಆಯುಷ್ಯ ಇದ್ದು. ಎತ್ತರ ಹೆಚ್ಚಾದಷ್ಟೂ ಆಯುಷ್ಯ ಹೆಚ್ಚು..}
ಇದರ ಬಗ್ಗೆ ಹೆಚ್ಚಿನ ವಿವರಣೆ ಇನ್ನಾಣ ಸರ್ತಿಲಿ ಸಿಗ್ಗುಗನ್ನೆ.
ನಿಂಗಳ ಪ್ರಶ್ನೆಗೆ ಧನ್ಯವಾದಂಗ. ಉತ್ತರ ಹೀಂಗಿದ್ದು –
ಭೂಮಿಯ ಗುರುತ್ವಾಕರ್ಷಣಂದಾಗಿ ಉಪಗ್ರಹದ ಎತ್ತರ ಚೂರು ಚೂರೇ ಕಡಮ್ಮೆ ಆವ್ತಾ ಹೋವ್ತು. ಇದಕ್ಕೆ orbital decay ಹೇಳ್ತವು. ಭೂಮಿಗೆ ಹತ್ತರೆ ಬಂದಷ್ಟೂ ಈ decay ಕೂಡಾ ಹೆಚ್ಚೆಚ್ಚು ಬೇಗ ಆಗಿ, ಕೊನೆಗೆ ವಾಯು ಗೋಲವ ಪ್ರವೇಶ ಮಾಡುತ್ತು. ಅಷ್ಟಪ್ಪಗ ಹೊತ್ತಿ ನಾಶ ಆವ್ತು. ಹೆಚ್ಚು ಎತ್ತರಲ್ಲಿ ಇದ್ದರೆ ನಾಶ ಅಪ್ಪಲೆ ಹೆಚ್ಚು ಅವಧಿ ಬೇಕಾವ್ತು. ಇನ್ನು ಬೇರೆ ಕಾರಣಂಗಳಂದ ಉಪಗ್ರಹ ಕೆಲಸ ಮಾಡೊದರ ನಿಲ್ಲಿಸುತ್ತು. ಆಗ ಸಾಯದ್ದರೂ ಆ ಉಪಗ್ರಹ ನಿಷ್ಪ್ರಯೋಜಕ ಆದ ಕಾರಣ ನಮ್ಮ ಪಾಲಿಂಗೆ ಸತ್ತ ಹಾಂಗೇ. orbital decay ಯ ಆದಷ್ಟೂ ಮುಂದೆ ಹಾಕುಲೆ, orbit correction ಮಾಡುಲೆ ಆವ್ತು – ಉಪಗ್ರಹಲ್ಲಿಪ್ಪ ಸಣ್ಣ ಸಣ್ಣ ರೋಕೆಟ್ ಗಳ (thrusters) fire ಮಾಡುವ ಮೂಲಕ. ಅದರ ಇಂಧನ ಮುಗುದ ಮೇಲೆ ಮತ್ತೆ ನಿಧಾನಕ್ಕೆ decay ಆಗಿಯೇ ಆವ್ತು.
ಹೆಚ್ಚಿನ ವಿವರ ಇನ್ನೊಂದು ಸರ್ತಿ ಕೊಡುತ್ತೆ.
ನಾಳಂಗೆ ಕಾಯ್ತಾ ಇದ್ದೆ.. 🙂
ಅ೦ದು,ಸ್ಕೈಲಾಬ್ ”ಮ೦ಡೆಗೆ ಬೀಳುಗು, ಹೇಳೀ.. ಊರಿಲಿ ಕಟ್ಟಪುಣಿಲಿ ಇದ್ದ ,ಬೊ೦ಡ೦ಗ ಎಲ್ಲಾ ಖಾಲಿ ಆದ್ದು ,,ನೆ೦ಪಾತದ.
ಬೇರೆ ಬೇರೆ ಉಪಯೋಗಕ್ಕೆ ಆವ್ತ ಹಾಂಗಿಪ್ಪ ಉಪಗ್ರಹಂಗಳ ಬಗ್ಗೆ ಒಳ್ಳೆ ಮಾಹಿತಿ.
ಧನ್ಯವಾದಂಗೊ
ಹಾ° ಸಮ. ಲಾಯಕ ಆವ್ತಾ ಇದ್ದು ಶುದ್ದಿ ಅಪ್ಪಚ್ಹಿ.
(ಭೂಮಿಗೆ ಮುಟ್ಟೆಕ್ಕಾದರೆ ಮದಲೇ ಹೊತ್ತಿ ಬೂದಿ ಆವ್ತು.) – ಛೇ!! ಅಷ್ಟು ಖರ್ಚಿ ಮಾಡಿಕ್ಕಿ ವಾಪಾಸು ಬರೇಕಾರೆ ಮದಲೇ ಬೂದಿ ಆವ್ತೋ! ವಾಪಾಸು ಬತ್ತಾಂಗಿದ್ದಿದ್ದರೆ ಗುಜರಿಗೆ ಮಾರಿ ನಾಕು ರುಪಾಯಿ ತೆಕ್ಕೊಂಬಲಾವ್ತಿತ್ತೋದು. ಆರಾರ ಮಂಡಗೆ ಬೀಳದ್ರೆ ಸರಿ.
ಅಕ್ಕು.. ಅಪ್ಪಚ್ಹಿ ನಾಳಂಗೆ ಎಂತ ಹೇಳ್ತವು ನೋಡ್ವೊ°.