Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಸಮಸ್ಯಾಪೂರಣ ರಜ್ಜ ಅಪುರೂಪ ಆತು- ಗ್ರೇಶಿದಿರೋ?
ಇದಾ, ಇಲ್ಲಿದ್ದು ಈ ವಾರದ್ದು!
ಒಂಭತ್ತನೇ ಕಂತು – ಭೋಗ ಷಟ್ಪದಿಲಿ.
ಈ ವಾರದ ಸಮಸ್ಯೆ:
ಯೋಗವೊಲುದು ಬಪ್ಪ ಹಾಂಗೆ ಬದುಕು ನೆಡೆಶುವೊ°
ಸಾರ್ಥಕವಾಗಿ ಬದ್ಕುತ್ತ ಯೋಗ ಎಲ್ಲೋರಿಂಗೂ ಸಿಕ್ಕಲಿ.
ಸೂ:
- ಈ ಸಮಸ್ಯೆ “ಭೋಗ ಷಟ್ಪದಿಲಿ” ಇದ್ದು.
- ಹೆಚ್ಚಿನ ಮಾಹಿತಿಗೆ:
https://oppanna.com/oppa/shara-kusuma-bhoga-bhamini-shatpadi
http://padyapaana.com
ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:
- ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
- ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
- ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
- ಶರ: “ಆಟಿಯ ತಿಂಗಳ ಮಳೆಗಾಲ”
- ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
- ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
- ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
- ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
“ಬೂಗಿವೂಗಿ” ಟೀವಿ ಬೇಡ
ಗೂಗುಲಲ್ಲಿ ಹೊಡಚ ಬೇಡ
ಬೇಗ ನಿಲ್ಸಿ ಮೋಬೈಲಿಲಿ ಕಾಟು ಮಾತುಗಳ ।
ಹೋಗಿ ನಿನ್ನ ಕೆಲಸ ಮಾಡು
ಬಾಗಿ ಬದುಕಿ ನೆಡವ ಒಳ್ಳೆ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||
ಗೋಪಾಲಣ್ನ ,ಲಾಯಕಾಯಿದು. “ಬೇಗ ನಿಲ್ಸಿ ಮೋಬೈಲ್ಲಿ ಕಾಟು ಮಾತಿನ ” ಮಾಡಿರೆ ಅಕ್ಕೊ?
ನೇಗಿಲಿಂದ ಹುಟ್ಟಿ ಬಂದು
ತ್ಯಾಗ ಪ್ರೀತಿಯೊಡನೆ ನಿಂದು
ನೀಗಿ ಜಗದ ಸಕಲ ಬವಣೆ ಪ್ರಾಣ ಕಳೆದೆ ನೀ|
ತೇಗಿ ನಲಿವ ಅಸುರರೆಡೆಲಿ
ಕೂಗಿ ಕೂಗಿ ‘ರಾಮ’ ಕರೆವ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||
ಭೋಗಭಾಗ್ಯ ತ್ಯಾಗ ಮಾಡಿ
ಯೋಗಿಯಾಗಿ ನಾರು ಮಡಿಲಿ
ಹೋಗಿ ದಿವ್ಯ ರಾಮ ಪಾದುಕೆಯನು ಪಡೆದೆ ನೀ|
ಬೇಗ ಹೋಗಿ ಚರಣಕೆರಗಿ
ಸಾಗಿ ದೂರ ಗುರುವಿನೊಡನೆ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||
ಬಾಗಿ ಶಿರವ ನಿತ್ಯ ನಮಿಸಿ
ಹೋಗಿ ಹಾರಿ ಸೀತೆ ಕಂಡು
ಹೇಂಗೆ ರಾಮನನ್ನೆ ಕೊಡುಗೆಯಾಗಿ ಪಡದೆ ನೀ?
ಆಗಿಯಾಳು ದುಡಿದರಿಂದು
ಬಾಗಿ ನಿಂಗು ಮೂರು ಲೋಕ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||
ಹೂಗಿನಂಥ ಮನಸು ಹೊಂದಿ
ಬೇಗೆಯಿಂದ ನೊಂದು ಬೆಂದು
ಬಾಗಿ ಶರಣು ಶರಣು ಬಂದೆ ನೀವಿಭೀಷಣ |
ಕಾಗೆ ಜನ್ಮವೇಯಿರಾಲಿ
ಹೋಗಿ ಶರಣು ಶರಣು ಹೇಳಿ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||
ರಾಮಾಯಣವ ಕಥೆಯ ಮೇಳೈಸಿ ಕಟ್ಟಿದ ಪದ್ಯ ಸೊಗಸಾಯಿದು. ಒಂದಲ್ಲ, ಎರಡಲ್ಲ, ನಾಲ್ಕು ವಾಹ್, ಲಾಯಕಾಯಿದು. ಅಭಿನಂದನೆಗೊ ಜಯಶ್ರೀಗೆ.
ಆಗ ಎನ್ನ ಕೆಲಸ ಬೇಗ
ಸಾಗ ಹೇಳಿ ಮನಸು ಮುರುಟಿ
-ರಾಗ ಗಟ್ಟಿಯಾಗಿ ನಿಂಬ ಛಲವು ಬೇಕದ
ನೀಗಲೆಲ್ಲ ಬೇಗೆ, ನಮ್ಮ
-ದಾಗಲೆಲ್ಲ ಎಂದು ಶುಭದ
-ಯೋಗ ಒಲುದು ಬಪ್ಪ ಹಾಂಗೆ ಬದುಕು ನೆಡಶುವೊ
ಸೋಗೆ ಮಾಡಿನಡಿಲಿ ಕೂದು
ಸಾಗುವಳಿಯ ಮಾಡಿಗೊಂಡು
ರೋಗರುಜಿನ ಬಾರದಾಂಗೆ ಗೇಯ್ಮೆ ಮಾಡುವೊ ।
ಜಾಗೆಲಿಪ್ಪ ಸಮಯವೆಲ್ಲ
ಭಾಗ್ಯವಕ್ಕು ಮುಂದೆ ನವಗೆ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ ॥
ಜಾಗೆ ಕಮ್ಮಿ ಇದ್ದರೂದೆ
ಬೇಗ ಬೇಗ ದುಡುದು ಬುವಿಲಿ
ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೋ ।
ಸೋಗು ಹಾಕಲಾಗ ನಾವು
ಹೂಗು ಕುಸುಮ ಸೇರಿದಾಂಗೆ
ಸಾಗುವಳಿಯ ಮಾಡಿಗೊಂಡು ರಥವ ನಡೆಶುವೊ॥
ಯೇನಾರು ತಪ್ಪಿದ್ದರೆ ನಿಂಗೊ ಟೀಕೆ ಮಾಡ್ಲಕ್ಕು.