Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
- ಈ ವಾರದ ಸಮಸ್ಯೆ :
“ ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?”
- ಈ ಸಮಸ್ಯೆ “ಕುಸುಮ ಷಟ್ಪದಿಲಿ” ಇದ್ದು.
ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:
- ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
- ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
- ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
- ಶರ: “ಆಟಿಯ ತಿಂಗಳ ಮಳೆಗಾಲ”
- ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
- ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
- ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
- ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
- ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
- ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
- ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
- ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
- ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”
- ಶರ : ” ಚಳಿಗಾಲಕ್ಕಿದು ಬೇಕಕ್ಕೊ”
ಎಲ್ಲ ಪೂರಣಂಗೊ ಲಾಯಿಕಿದ್ದು.
ವಾಹ್ ! ವಾಹ್ ! ಗಡಿಕಾಯ್ವ ಸೈನಿಕರ ನಾವು ದಿನ ನಿತ್ಯ ಮನಸ್ಸಿಲ್ಲಿ ನೆನಸೆಕು, ಇದು ಇಂದು ಗುರುಗೊ ರಾಮಕಥೆಲಿ ಹೇಳಿದ ಮಾತು. ಹೊಸಂಗಡಿ, ಮಾಂಸದಂಗಡಿಯು ಲಾಯಕಾಯಿದು.
ಜಡಿಮಳೆಯ ಚಳಿ ಬೆಶಿಲ
ಕಡೆಗಣಿಸಿಯುತ್ತರದ
ಕೊಡಿ ಕಾಯ್ವ ಸೈನಿಕರು ಕಿಚ್ಚ ಕಿಡಿಗೊ।
ಬಿಡಿಯೆರಡು ದಿನ ಸಾಕು
ಪೊಡಿ ವೈರಿಗಳ ಸೈನ್ಯ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗು।।
ಮುಡಿ ಕಟ್ಟಿ ಸರದಾರ°
ಬೆಡಿ ಬಿಡುವ ರಭಸಕ್ಕ
ರಡಿಯದ್ದ ಪಾತಕಿಗೊ ನ೦ಜು ಕಾರಿ।
ನಡುಗಿ ಗಡಗಡ ಬೀಳು
ಗಡಿತಪ್ಪಿ ನೆಲಸೇರೊ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।
ಮುಡಿಪಿ೦ದ ಹೆರಟಾತು
ಬುಡುಬುಡುನೆ ಕು೦ಬ್ಳೆ ಹೊಡೆ
ಬಿಡಿದಾರಿ ವಾಹನವು ಯಮದೂತನೇ।
ನೆಡು ಹೆಟ್ಟಿತೋ ಹನ್ನೆ
ರಡು ಪಡ್ಚವಡ ಹೊಸ೦
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।
ಮಡಿಕೇರಿ ಮಾರ್ಗಲ್ಲಿ
ಚಡವಿನಾ ಕರೆಲಿಬ್ರು
ದಡಿಯ೦ಗೊ ಹ೦ದಿಗಳ ಹಿಡುದು ಮಡಗಿ।
ಬಡುದು ಕತ್ತಿಯನೆತ್ತಿ
ಕಡಿವಗಾ ಮಾ೦ಸದ೦
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।
ಕಡುದವು ತಲೆಯೆರಡು ಬೆ-
ಗುಡುಗಾಳಿ ಲಕ್ಷ ತಲೆ
ಕೊಡುಗೊ ಹಡೆದಬ್ಬೆ ಸರಿ ನೋಡದ್ದೆಯೇ?
ಕಡೆಗೋಲು ಹಿಡಿಗೇನೊ,
ಗಡಿಗೆ ಬಕ್ಕೋ ಸುಧೆದು,
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?
ಆ ಬೆಗುಡ೦ಗೊ ಎರಡು ತಲೆ ಕಡುದವು ಹೇಳಿ ಯುದ್ದ ಸಾರಿ ಲಕ್ಷ ತಲೆಗಳ ಕಳಕ್ಕೊಮ್ಬಲೆ ಭಾರತ ಮಾತೆ ಸಿದ್ದ ಇಕ್ಕೋ? ದೇಶವ ಮುನ್ನಡೆಸುವ ಸಮರ್ಥ ನಾಯಕ ಬಂದು ಹಿಂದೆ ಸಾಗರ ಮಥನ ಮಾಡಿ ಮೋಹಿನಿ ಅಮೃತವ ಹಂಚಿದಾಂಗೆ ಹಂಚಿ ಸಮಸ್ಯೆಯ ಬಗೆಹರಿಸುಗೋ ಹೇಳುವ ಆಶಾವಾದಲ್ಲಿ ಬರದ್ದದು…
ಅಸುರರಿಂಗೆ ಅಮೃತವೂ,ನೆತ್ತರೂ ಒಂದೇ ತರ ಆದ ಕಾರಣ ಅಮೃತದ ಹೊಳೆ ಹೇಳುವ ಅರ್ಥಲ್ಲಿ ‘ಕೆನ್ನೆತ್ತರಿನ ಹೊಳೆ’ ಉಪಯೋಗಿಸಿದ್ದೆ.
ಕಡುದು ತೆಗದರು ತಲೆಯ
ಜಡುದು ಬಾಯಿಗೆ ಬೀಗ
ಬಿಡವು’ಶಾಂತಿಯ ಜೆಪ’ದ ನೆವನ ಇದ್ದು/
ಬಡುದು ಮೋರಗೆ ಕೇಳ
ಲೆಡಿಯದೋ ನವಗಿಂದು
ಗಡಿಲಿ ಕೆನ್ನೆತ್ತರಿನ ಹೊಳೆ ಹರಿಯೆಕೋ?/
ಕಡಿಕಡಿದ ಹೆಮ್ಮರದ
ಕಾಡಿದಾ ಸವಿನೆಂಪು
ಹಿಡಿಸಸಿಯು ಮನಸ್ಸಿಲಿ ಅದೆಂತ ನೆನೆಗೋ?
ಕಡಿಬಡಿವ ಅಜನೆಯಲಿ
ಕುಡಿಯ ಮನಸಿದು ಖಿನ್ನ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೋ?
ಜಯಗೌರಿ ಅಕ್ಕಾ ,
ಬೈಲಿ೦ಗೆ ಸ್ವಾಗತ.
ಶುರುವಿ೦ಗೇ ಒಳ್ಳೆ ಪ್ರಯತ್ನ.ಹೊಸತನ ಇಪ್ಪ ಪೂರಣ.
“ಹಿಡಿಸಸಿಯು ಮನಸ್ಸಿಲಿ ಅದೆಂತ ನೆನೆಗೋ?” ಇದರ “ಹಿಡಿಸೆಸಿಯು ಮನಸಿಲಿಯದೆ೦ತ ನೆನಗೋ?”(ಮನಸಿಲಿಯೆ+ಅದೆ೦ತ) ಹೇಳಿ ಸರಿ ಮಾಡ್ಲಕ್ಕು.
ಮನಸ್ಸಿಲಿ -ಈ ಜಗಣ ತಪ್ಪುಸೆಕ್ಕು.ವಿಸ೦ಧಿ ದೋಷವೂ ತಪ್ಪಿತ್ತು.
ಬನ್ನಿ,ಬರವಣಿಗೆ ಮು೦ದುವರಿಸಿ.
ತಿದ್ದಿದ್ದಕ್ಕೆ ಧನ್ಯವಾದಂಗೋ ಅಣ್ಣ.
ಸರಿ ಮಾಡಿ ಬರದ ಪರಿಹಾರ ಇಲ್ಲಿದ್ದು .
ಕಡಿಕಡಿದ ಹೆಮ್ಮರದ
ಕಾಡಿದಾ ಸವಿನೆಂಪು
ಹಿಡಿಸಸಿಯು ಮನಸಿಲಿಯದೆಂತ ನೆನೆಗೋ?
ಕಡಿಬಡಿವ ಅಜನೆಯಲಿ
ಕುಡಿಯ ಮನಸಿದು ಖಿನ್ನ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೋ?
ಗುಡುಗುಡುಗಿ ಸುಮ್ಮನಿರೆ
ಹುಡುಗಿಯಾ ನಡೆಕಂಡು
ಹಡೆದ ಪಾಲಕರೆಂಥ ಕಡುಬಡವರು !
ಎಡೆಬಿಡದೆ ಗಡಿದಾಂಟೆ
ನಡೆನೋಡಿ ಅಬ್ಬೆಕಣ್
ಗಡಿಲಿ ಕೆನ್ನೆತ್ತರಿನ ಹೊಳೆಯ ಹರಿಗೋ ?
ಕಾ೦ತಣ್ಣ,
ಎ೦ಥಾ ಕಲ್ಪನೆ!
ನಡೆನೋಡಿ ಅಬ್ಬೆಕಣ್ – ಈ ಸಾಲು “ನಡೆನೋಡಿದಬ್ಬೆ ಕಣ್” ಹೇಳಿ ಮಾಡಿರೆ ವಿಸ೦ಧಿದೋಷ ತಪ್ಪುತ್ತು.ಬರಲಿಹೊಸ ಪೂರಣ೦ಗೊ.
ಒಡಲಿನಾ ಕಡಲಿಲ್ಲಿ
ಹಿಡುದು ಮಡುಗಿದಯೆಲ್ಲ
ಹಡೆದ ಭಾವ೦ಗಳು ಸ್ಪೋಟಗೊಳುಗೊ?
ಹೆಡೆಯ ಪಡೆಯೇ ಬಂದು
ಬಡುದಾಕಿ ಪೀಡೆಗಳ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?”
ಚೂರು ತಪ್ಪಿದ್ದರ ಸರಿ ಮಾಡಿದ್ದೆ…
ಒಡಲಿನಾ ಕಡಲಿಲ್ಲಿ
ಹಿಡುದು ಮಡುಗಿದಯೆಲ್ಲ
ಹಡೆದ ಭಾವ೦ಗಳು ಸ್ಪೋಟಗೊಳುಗೊ?
ಹೆಡೆಯ ಪಡೆಯೇ ಹೋಗಿ
ಬಡುದಾಕಿ ಪೀಡೆಗಳ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?
ಹಿಡುದು ಮಡುಗಿದ ಕಪ್ಪು
ಗಿಡುಗನಾಂಗಿಪ್ಪೆರಡು
ಭಡಭಡಿವ ಮೋಡಂಗ ಎದ್ದದೆಂತ!
ಗುಡುಗುಡನೆ ಗುಡುಗಿತ್ತು
ದೊಡ್ಡ ಮಳೆ ಬಂದಿರಲ್
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ
ಕನ್ನಡ+ಹವ್ಯಕ ಸೇರಿ ಉಪ್ಪಿಟ್ಟಾಯ್ದು 🙂
ಎಲ್ಲರ ಎಲ್ಲಾ ಪದ್ಯಂಗಳುದೆ ರೈಸಿದ್ದು 🙂
ಎರಡೂ ಪರಿಹಾರ ಲಾಯಿಕ್ಕಾಯಿದು. ಎನಗೆ ಶುರುವಾಣ ಪದ್ಯ ತುಂಬಾ ಇಷ್ಟ ಆತು. ” ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು” ಹೇಳ್ತದು ನೆಂಪಾತಿದ.
ನೆಡುಗೆದ್ದೆಯಾ ಗಡಿಲಿ
ಬಡಿವೆ ಕಡುದಿಡ್ಕುವೇ
ಬಿಡೆ ಹೇಳಿ ಹೋರಿದವು ದಾಯಾದಿಗೋ ।
ಬಿಡುಸಿದಜ್ಜನ ತಲಗೆ
ಬಡುದವಿಬ್ರೂ ಸೇರಿ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ॥
ಗಡಿಜಾಗೆ ಕಾಯ್ವದೂ
ಕಡುಕಷ್ತ ಕೆಲಸವೂ
ಕೊಡಿಮೀಸೆ ತಿರ್ಪುತ್ತ ಹೋರಾಡಿರೆ
ಕಡುವೈರಿಗಳ ತಲೆಯ
ಬಡುದು ಚೆಂಡಾಡಿದರೆ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ॥
೧) ಬೆಡಿಗೆ ಹೋದವು ಮಾವ
ಕೊಡಿಹರಿತ್ತದ ಚೂರಿ
ಹಿಡಿಯದುದ್ದಕೆ ಕಂಡು ನೆಗೆಮಾಣಿ ನೆ
ಗಡಿಯೊರಸಿಗೊಂಡದರ
ಹಿಡುದ ಕೈ ಬೆರಳಿನಾ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ?
೨) ಗಡಿಬಿಡಿಲಿ ಗಂಗಮ್ಮ
ಕೊಡೆಹಿಡುದು ತೋಟಂದ
ಬಿಡಿಬಿಡಿಯ ಹಸಿಹಸಿರ ಬಾಳೆಲೆಯ ತಾ
ಕೊಡಿಕೊಡಿಯೆಲೆಯ ಹೆರ್ಕಿ
ಕಡಿದು ಮಡಗಿರೆ ಕೈಯ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ?
ಯ್ಯಪ! ಅತ್ತೆ ಪದ್ಯ ರೈಸಿದ್ದೋ ರೈಸಿದ್ದು
ಅತ್ತೆ,
“ಹಿಡಿಯದುದ್ದಕೆ ಕಂಡು ನೆಗೆಮಾಣಿ ನೆ
ಗಡಿಯೊರಸಿಗೊಂಡದರ”
ಇಲ್ಲಿ ಮೂರು -ನಾಲ್ಕನೆ ಗೆರೆಗಳ ನೆಡೂಕೆ ಖ೦ಡಪ್ರಾಸ ಬಪ್ಪಲಾಗ ಹೇಳಿ ಕಾಣುತ್ತು.
ಎರಡ್ನೇ ಪರಿಹಾರಲ್ಲಿ ಗಡಿಬಿಡಿ/ಕೊಡಿಕೊಡಿ/ಬಿಡಿಬಿಡಿ ಶಬ್ದ೦ಗೊಒಟ್ಟು ಸೇರಿ ಭಾರೀ ಲಾಯ್ಕ ಆಯಿದು.
ಸಾರಾಯಿ ಮಾರ್ತ ಗಡ೦ಗಿಲ್ಲಿ ಜಗಳ, ಪೆಟ್ಟುಕುಟ್ಟು, ಕತ್ತಿಕುತ್ತು ಎಲ್ಲ ಸಾಮಾನ್ಯ ಅಲ್ಲದೊ, ಸರಿಯಾದ ಸಮಯಲ್ಲಿ ತಡವಲೆ ಆರಾರು ಇಲ್ಲದ್ದೆ ಹೋದರೆ ಎ೦ತಕ್ಕು ಅವಸ್ಥೆ!!?? ಆದ ಕಾರಣವೇ ಅಲ್ದೊ ನಮ್ಮ ಹಿರಿಯರು ಹೀ೦ಗಿರ್ತ ದುರಭ್ಯಾಸ ಕೆಟ್ಟದು ಹೇಳಿ ನವಗೆ ಕಲಿಶಿದ್ದದು…
ಕುಡುಕರೆಲ್ಲರು ಸೇರಿ
ಕುಡುದು ಜಗಳವ ಮಾಡಿ
ಬಡಿದಾಟ ಬಪ್ಪಲೇ ಸಮಯ ಬೇಕೋ?
ಹಿಡುದು ಕತ್ತಿಯ ಎಳದು
ಮಡುಗದ್ರೆ ಕಳ್ಳಿನ೦-
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?
ವಾಹ್..! ಅದ್ಭುತ ಪರಿಹಾರ. ತುಂಬಾ ಲಾಯಿಕದ ಪದ್ಯ, ಪೆರ್ವದಣ್ಣ.
ಕತ್ತಿಯ ಎಳೆದು -> ಇದರ ಕತ್ತಿಯನೆಳೆದು ಹೇಳಿ ತಿದ್ದುಲಕ್ಕು.
ಪೆರ್ವದಣ್ಣನ ಕಲ್ಪನೆಗೊ ಒ೦ದರಿ೦ದ ಒ೦ದು ಬಲ! ನಿ೦ಗೊ ಬೇಗಲ್ಲಿ ಯೇವದಾದರೂ ವಿಷಯ ತೆಕ್ಕೊ೦ಡು ಬರೆಯದ್ದರಾಗ ..ಬರೆಯಿ ಬೇಗ..
ಗುಡಿಬೇಡ ಅಂಬವರ
ತಡವಲೆಡಿಗೋ ಭಾವ
ಬೊಡುದು ಹೋಯಿದು ಅವರ ಕಾರ್ಬಾರಿಲೀ ।
ಬಡಿವೊ ಕಂಡರು ಎಡಿಯ
ಬಿಡ ಬೆಗುಡು ಸರಕಾರ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ?????
ಪ್ರಸ್ತುತ ಪರಿಸ್ಥಿತಿಲಿ ಸಾಮಾನ್ಯ ಜೆನರ ಅಸಹಾಯ ಸ್ಥಿತಿಯ ವರ್ಣಿಸಿ ಪರಿಹಾರ ಕೊಟ್ಟದು ಲಾಯಿಕಾಯಿದು.
ಎರಡು ದಿಕ್ಕೆ ವಿಸಂಧಿ ಬಯಿಂದು, ಅದರ ಬಗ್ಗೆ ಗಮನ ಕೊಡಿ, ಭಾವ.( ಹೋಯಿದು +ಅವರ, ಕಂಡರು + ಎಡಿಯ)
ಹಿಡಿದು ಆ ಕಸ್ತಲೆಲಿ
ಬಡಿದು ಮೃಗಗೊ ಕೂಡಿ
ಹಿಂಡಿ ಕರುಳು ಬದುಕ ಮುಗಿಸಿದೆಂತಗೊ |
ಮಡಿದ ತನ್ನಾ ಕುಡಿಯ
ನೋಡಿದಂಬೆಯ ಕಣ್ಣ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ||
ಮಗನ ಕಳಕ್ಕೊಂಡ ಅಬ್ಬೆಯ ಕಣ್ಣೀರು,ಕೆನ್ನೆತ್ತರಿನ ಹಾಂಗೆ ವಿವರಿಸಿದ ಪರಿಹಾರ ಸೂಪರ್ ಆಯಿದು..
ನೋಡಿದಂಬೆಯ -> ಇದು ಬರವಗ ತಪ್ಪಿದ್ದದೋ ಏನೋ…ನೋಡಿದಬ್ಬೆಯ ಆಯೆಕ್ಕಾತು, ಅಲ್ಲದೋ..?
“ಹಿಡುದು ಆ ಕಸ್ತಲೆಲಿ” ಇಪ್ಪದರ ” ಹಿಡುದು ನಟ್ಟಿರುಳಿಲಿಯೆ” ಹೇಳಿ ಬರದು ವಿಸಂಧಿಯ ಸರಿ ಮಾಡ್ಲಕ್ಕು.
ಸಲಹೆಗೆ ಧನ್ಯವಾದಂಗೊ ಕುಮಾರ ಮಾವ.
ಮಕ್ಕಳ ಕಳಕ್ಕೊಂಡ ಯಾವುದೇ ಅಮ್ಮಂಗೆ ಇದು ಅನ್ವಯ ಆವುತ್ತು.
ಈ ಪದ್ಯ ಬರೆವಾಗ ದೆಹಲಿಯ ಅತ್ಯಾಚಾರದ ಘಟನೆ ಎನ್ನ ಮನಸಿಲಿತ್ತು.
ನಿಂಗೊ ಹೇಳಿದ ಹಾಂಗೆ ಸರಿ ಮಾಡಿ ಬರದ್ದೆ.
ಹಿಡುದು ನಟ್ಟಿರುಳಿಲಿಯೆ
ಬಡಿದು ಮೃಗಗೊ ಕೂಡಿ
ಹಿಂಡಿ ಕರುಳು ಬದುಕ ಮುಗಿಸಿದೆಂತಗೊ |
ಮಡಿದ ತನ್ನಾ ಕುಡಿಯ
ನೋಡಿದಬ್ಬೆಯ ಕಣ್ಣ
ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ ||
ಅಕ್ಕಾ,
ಒಳ್ಳೆ ಪೂರಣ.
ಹಿಂಡಿ ಕರು/ಳು ಬದುಕ ಮು/ಗಿಸಿದೆಂತ/ಗೊ
ಇಲ್ಲಿ ಮಾತ್ರೆಗೊ ಸರಿಯಾಗಿದ್ದರೂ ಹತ್ತು ಲಘು ಅಕ್ಷರ೦ಗೊ ಒಟ್ಟಿ೦ಗೆ +ಯತಿ ಬ೦ದ ಕಾರಣ, ಗಟ್ಟಿಯಾಗಿ ಓದೊಗ ರಜಾ ಡ೦ಕಿದ ಅನುಭವವಾತು.
” ಹಿ೦ಡಿ ಕರುಳಿನ ಜೀವ ತೆಗದವನ್ನೇ ” ಹೇಳಿ ಮಾಡ್ಲಕ್ಕು.
ಸಲಹೆಗೆ ಧನ್ಯವಾದ೦ಗೊ ಭಾವ, ಮು೦ದಣ ಸರ್ತಿಗಪ್ಪಗ ಜಾಗ್ರತೆ ಮಾಡ್ತೆ.